1175. ಶುಭ ಮುಹೂರ್ತ (೧೯೮೪)

ಶುಭ ಮುಹೂರ್ತ ಚಲನಚಿತ್ರದ ಹಾಡುಗಳು 
  1. ತಿರುಗುವ ತನಕ ಚಕ್ರ ಇದುವೇ ಜೀವನ ಚಕ್ರ 
  2. ಪ್ರೀತಿ ನಮಗೇ ಆಧಾರ ಪ್ರೀತಿ  ಸಿಂಗಾರ 
  3. ಇರುವುದೊಂದು ಹೃದಯ ಯಾರಿಗಂತ ಕೊಡಲೀ 
  4. ನಾಜೋಕು ನಾರೀ ಬಿನ್ನಾಣ ತೋರಿ 
  5. ನಕ್ಕರೇ ನಾಕ ಈ ಲೋಕ ಅತ್ತರೇ ನರಕ ಈ ಲೋಕ ಭೂಲೋಕ 
ಶುಭ ಮುಹೂರ್ತ (೧೯೮೪) - ತಿರುಗುವ ತನಕ ಚಕ್ರ ಇದುವೇ ಜೀವನ ಚಕ್ರ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ

ತಿರುಗುವ ತನಕ ಚಕ್ರ ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ ಇದುವೇ ಜೀವನ ಚಿತ್ರ
ನೋಡಿದಿರಿಹಿಲ್ಲಿ ನೀ ಜಗದಲ್ಲಿ ಎಲ್ಲವು ಚಿತ್ರ ವಿಚಿತ್ರ
ತಿರುಗುವ ತನಕ ಚಕ್ರ ಇದುವೇ ಜೀವನ ಚಿತ್ರ... ತಿರುಗುವ ತನಕ ಚಕ್ರ

ಏರುವ ತನಕ ಏಣಿ ದಾಟುವ ತನಕ ದೋಣಿ
ಏರುವ ತನಕ ಹ್ಹ ಏಣಿ ದಾಟುವ ತನಕ ದೋಣಿ ಏರಿದ ನಂತರ ದಾಟಿದ ನಂತರ
ಏಣಿಯ ದೋಣಿಯ ನೆನೆಯುವರಾರಿಲ್ಲಿ .. ನೆನೆಯುವರಾರಿಲ್ಲೀ .. ಅಹ್ಹಹ್ಹಹ್ಹಹ್ಹಾ..
ತಿರುಗುವ ತನಕ ಚಕ್ರ ಇದುವೇ ಜೀವನ ಚಿತ್ರ... ತಿರುಗುವ ತನಕ ಚಕ್ರ

ಮೇಲಿರೋತನಕ ಸ್ಥಾನ ಇಳಿಯುವತನಕ ಮಾನ
ಮೇಲಿರೋತನಕ ಸ್ಥಾನ ಇಳಿಯುವತನಕ ಮಾನ ಸ್ಥಾನವೂ ಹೋದರೇ ಮಾನವೂ ಹೋದರೇ
ಸ್ಥಾನಕೂ ಮಾನಕೂ ಸ್ಥಾನವು ಇನ್ನೇಲ್ಲಿ .. ಮಾನವೂ ಇನ್ನೆಲ್ಲಿ.. ಹ್ಹಾ...
ತಿರುಗುವ ತನಕ ಚಕ್ರ ಇದುವೇ ಜೀವನ ಚಿತ್ರ... ತಿರುಗುವ ತನಕ ಚಕ್ರ

ಉರಿಯುವ ತನಕ ದೀಪ ಬಾಡುವ ತನಕ ರೂಪ
ಉರಿಯುವ ತನಕ ದೀಪ ಬಾಡುವ ತನಕ ರೂಪ ಆರಲು ದೀಪ ಬಾಡಲು ರೂಪ
ದೀಪದ ರೂಪವ ಕೇಳುವರಾರಿಲ್ಲೀ ... ಕೇಳುವರಾರಿಲ್ಲಿ .. ಹ್ಹಹ್ಹಹ್ಹ...
ತಿರುಗುವ ತನಕ ಚಕ್ರ ಇದುವೇ ಜೀವನ ಚಿತ್ರ
ನೋಡಿದಿರಿಹಲ್ಲಿ ನೀ ಜಗದಲ್ಲಿ ಎಲ್ಲವು ಚಿತ್ರ ವಿಚಿತ್ರ
ತಿರುಗುವ ತನಕ ಚಕ್ರ ಇದುವೇ ಜೀವನ ಚಿತ್ರ... ತಿರುಗುವ ತನಕ ಚಕ್ರ
--------------------------------------------------------------------------------------------------------------------------

ಶುಭ ಮುಹೂರ್ತ (೧೯೮೪) - ಪ್ರೀತಿ ನಮಗೇ ಆಧಾರ ಪ್ರೀತಿ  ಸಿಂಗಾರ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಜಯಚಂದ್ರನ್, ವಾಣಿಜಯರಾಂ

ಗಂಡು : ಪ್ರೀತಿ ನಮಗೇ ಆಧಾರ         ಹೆಣ್ಣು : ಪ್ರೀತಿ ನಮ್ಮ ಸಿಂಗಾರ
ಗಂಡು : ಪ್ರೀತಿ ನಮಗೇ ಆಧಾರ         ಹೆಣ್ಣು : ಪ್ರೀತಿ ನಮ್ಮ ಸಿಂಗಾರ
ಇಬ್ಬರು : ಪ್ರೀತಿ ಪ್ರೇಮ ಸೇರಿ ಹಣೆವ ಹಾರ ಸಂಸಾರ ಸುಖ ಸಾರ ಸಂಸಾರ 
ಕೋರಸ್ : ಲಾಲಲ್ಲಾಲಲಲ್ಲಲ  ಲಲಾಲಾಲ ... ಲಾಲಲ್ಲಾಲಲಲ್ಲಲ  ಲಲಾಲಾಲ ...
             ಪ್ರೀತಿ ನಮಗೇ ಆಧಾರ ಪ್ರೀತಿ ನಮ್ಮ ಸಿಂಗಾರ

ಗಂಡು : ನನ್ನ ನಿನ್ನ ಬಾಳ ಬಂಧ ಜನ್ಮ ಜನ್ಮದ ಋಣಾನುಬಂಧ 
ಹೆಣ್ಣು : ನನ್ನ ನಿನ್ನ ಬಾಳ ಬಂಧ ಜನ್ಮ ಜನ್ಮದ ಋಣಾನುಬಂಧ 
ಗಂಡು : ನಮ್ಮ ಸ್ನೇಹ ಚಿಗುರಿ ತಂದ 
ಹೆಣ್ಣು : ಮಕ್ಕಳೊಡನೆ ಪ್ರೀತಿ ಬಂಧ 
ಗಂಡು : ಈ ಬಂಧ ಸಂಬಂಧ ಎಂದೆಂದೂ ನಮದು 
ಕೋರಸ್ : ಲಲ್ಲಾಲಲ  ಲಲ್ಲಾಲಲ ಲಲ್ಲಾಲಲ ಲಲ್ಲಾಲಲ ಲಲ್ಲಾಲಲ
ಇಬ್ಬರು : ಪ್ರೀತಿ ನಮಗೇ ಆಧಾರ ಪ್ರೀತಿ ನಮಗೇ ಸಿಂಗಾರ 

ಗಂಡು : ಅರಿತು ನಡೆದ ಪತಿಯು ಇರಲೂ    ಹೆಣ್ಣು : ಸತಿಗೆ ಪತಿಯ ಒಲವು ಇರಲೂ 
ಗಂಡು : ಅರಿತು ನಡೆದ ಪತಿಯು ಇರಲೂ    ಹೆಣ್ಣು : ಸತಿಗೆ ಪತಿಯ ಒಲವು ಇರಲೂ 
ಗಂಡು : ಮುತ್ತಿನಂಥ ಮಕ್ಕಳೊಡನೆ            ಹೆಣ್ಣು : ನಕ್ಕು ನಲಿವ ಭಾಗ್ಯವಿರಲೂ 
ಇಬ್ಬರು : ಬೇರೇನೂ ಬೇಕಿಲ್ಲ ಬಾಳಲ್ಲಿ ನಮಗೇ .. 
ಕೋರಸ್ : ಲಲ್ಲಾಲಲ  ಲಲ್ಲಾಲಲ ಲಲ್ಲಾಲಲ ಲಲ್ಲಾಲಲ ಲಲ್ಲಾಲಲ
ಇಬ್ಬರು : ಪ್ರೀತಿ ನಮಗೇ ಆಧಾರ ಪ್ರೀತಿ ನಮಗೇ ಸಿಂಗಾರ 
             
ಕೋರಸ್ : ಲಲ್ಲಾಲಲ  ಲಲ್ಲಾಲಲ ಲಲ್ಲಾಲಲ ಲಲ್ಲಾಲಲ ಲಲ್ಲಾಲಲ
ಹೆಣ್ಣು : ಶಾಂತಿಯಿಂದ ಮನೆಯಲಿರಲು   ಗಂಡು : ಪ್ರೀತಿ ತೋರೋ ಮನಗಳಿರಲೂ 
ಹೆಣ್ಣು : ಶಾಂತಿಯಿಂದ ಮನೆಯಲಿರಲು   ಗಂಡು : ಪ್ರೀತಿ ತೋರೋ ಮನಗಳಿರಲೂ 
ಹೆಣ್ಣು : ವರುಷ ಕೂಡ ನಿಮಿಷದಂತೇ      ಗಂಡು : ಹರುಷದಿಂದ ಕಳೆವುದಂತೇ 
ಇಬ್ಬರು : ಈ ಹರ್ಷ ಸಾಮ್ರಾಜ್ಯ ಎಂದೆಂದೂ ನಮದೇ 
ಕೋರಸ್ : ಲಲ್ಲಾಲಲ  ಲಲ್ಲಾಲಲ ಲಲ್ಲಾಲಲ ಲಲ್ಲಾಲಲ ಲಲ್ಲಾಲಲ
ಇಬ್ಬರು : ಪ್ರೀತಿ ನಮಗೇ ಆಧಾರ ಪ್ರೀತಿ ನಮಗೇ ಸಿಂಗಾರ 
             ಪ್ರೀತಿ ಪ್ರೇಮ ಸೇರಿ ಹಣೆವ ಹಾರ ಸಂಸಾರ ಸುಖ ಸಾರ ಸಂಸಾರ
ಕೋರಸ್ : ಲಲ್ಲಾಲಲ  ಲಲ್ಲಾಲಲ ಲಲ್ಲಾಲಲ ಲಲ್ಲಾಲಲ ಲಲ್ಲಾಲಲ
-------------------------------------------------------------------------------------------------------------------------

ಶುಭ ಮುಹೂರ್ತ (೧೯೮೪) - ಇರುವುದೊಂದು ಹೃದಯ ಯಾರಿಗಂತ ಕೊಡಲೀ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ವಾಣಿಜಯರಾಂ

ಇರುವುದೊಂದೂ...  ಇರುವುದೊಂದೂ...
ಇರುವುದೊಂದೂ ಹೃದಯ ಯಾರಿಗಂತ ಕೊಡಲಿ ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ಇರುವುದೊಂದೂ ಹೃದಯ ಯಾರಿಗಂತ ಕೊಡಲಿ ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ

ಚಿಗುರು ಮೀಸೆ ತೀಡಿ ಇವನು ನೋಡುತ್ತಾನೆ ಮೀಸೆಯಲ್ಲ ಜೋತು ನಗೆದು ನೋಡುತಾನೇ
ಇವನು ಹೋದ ವಯಸ್ಸ ಹಿಂದೇ ಕರೆಯುತಾನೇ ಹಿಂದಿನಾಟವೆಲ್ಲ ಇಂದು ನೆನೆಯುತಾನೇ
ಅವನ ಕಣ್ಣೂ ಚೂರಿ ಇವನ ಕಣ್ಣ ಕತ್ತಿ ಅವನ ನೋಟ ನೋಡು ಅದು ಬಿಚ್ಚು ಗತ್ತಿ
ನನ್ನ ನೋಟವನ್ನೂ ಯಾರಿಗಂತ ನೇಡಲಿ ..
ನನ್ನ ನೋಟವನ್ನೂ ಯಾರಿಗಂತ ನೇಡಲಿ ..
ಇರುವುದೊಂದೂ ಹೃದಯ ಯಾರಿಗಂತ ಕೊಡಲಿ ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ

ನೋಡಿ ಹೋದ ಮೊನ್ನೇ ಮತ್ತೇ ಬಂದ ನಿನ್ನೇ ಮೋಡಿ ಮಾಡಿ ಏನೋ ನನ್ನ ಕಣ್ಣ ಸನ್ನೇ
ಬಿಂಕ ನೋಡಿ ನನ್ನ ಸುಂಕ ಕಟ್ಟುತಾನೇ ಕೊಂಕು ನೋಟದಿಂದ ಏನೂ ಮುಟ್ಟುತ್ತಾನೇ
ನಾನು ತುಟಿಯ ಕಚ್ಚಿ ನೋಡಿದೇಕೆ ಮೆಚ್ಚಿ  ಎದೆಯ ಬಡಿತ ಹೆಚ್ಚಿ ಬಿಳುತ್ತಾನೇ ಬೆಚ್ಚಿ
ನೋಡೋ ನೋಟವೆಲ್ಲಾ ಇಲ್ಲಿ ಮಚ್ಚು ಕೊಡಲಿ
ನೋಡೋ ನೋಟವೆಲ್ಲಾ ಇಲ್ಲಿ ಮಚ್ಚು ಕೊಡಲಿ
ಇರುವುದೊಂದೂ ಹೃದಯ ಯಾರಿಗಂತ ಕೊಡಲಿ ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ.. ಹ್ಹ..

ಕಳ್ಳರಂಗೇ ಬಂದು ಇಣುಕಿ ನೋಡುತ್ತಾರೇ ಮಳ್ಳಿ ಹಂಗೇ ನೋಡಿ ಕೆಣಕಿ ಕಾಡುತಾರೆ
ಸೇರಿ ಇಲ್ಲಿ ಸಂತೇ ಚಿಂತೆ ದೂಡುತ್ತಾರೇ ಇದುವೇ ಸ್ವರ್ಗವೆಂದೂ ಬಿಡದಿ  ಹೂಡುತ್ತಾರೇ
ಲೋಕ ಮರೆತೂ ಬಿಟ್ಟು ಮನಸ್ಸೂ ನನಗೇ ಕೊಟ್ಟೂ
ಆಡುತ್ತಾರೇ ಇಲ್ಲಿ ಏನೂ ಇದರ ಗುಟ್ಟೂ ಇಂಥ ರಸಿಕರನ್ನೂ ಬಿಟ್ಟು ಹೇಗೆ ಇರಲೀ
ಇಂಥ ರಸಿಕರನ್ನೂ ಬಿಟ್ಟು ಹೇಗೆ ಇರಲೀ
ಇರುವುದೊಂದೂ ಹೃದಯ ಯಾರಿಗಂತ ಕೊಡಲಿ ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ..
ಇರುವುದೊಂದೂ ಹೃದಯ ನಾ ಯಾರಿಗಂತ ಕೊಡಲಿ....
-------------------------------------------------------------------------------------------------------------------------

ಶುಭ ಮುಹೂರ್ತ (೧೯೮೪) - ನಾಜೋಕು ನಾರೀ ಬಿನ್ನಾಣ ತೋರಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ ವಾಣಿಜಯರಾಂ

ಗಂಡು : ಹೊಯ್  ನಾಜೋಕು ನಾರಿ ಬಿನ್ನಾಣ ತೋರಿ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ..
           ನೀ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ.
ಹೆಣ್ಣು : ಹೇ.. ನನ್ನ ಜೋಕು ನಡೆಗೆ ಮೋಡಿ ಅಡಿಗಡಿಗೆ ದಾರಿಯಾಗೆ ಹಾರಿ ಬಂದು ನಿಂತ್ಯಾಕ
          ನೀ ದಾರಿಯಾಗೆ ಹಾರಿ ಬಂದು ನಿಂತ್ಯಾಕ
ಗಂಡು : ಹೊಯ್  ನಾಜೋಕು ನಾರಿ ಬಿನ್ನಾಣ ತೋರಿ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ..
           ನೀ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ.

ಗಂಡು : ನನ್ನ ಕಣ್ಣೀಗೇ ನೀನೊಬ್ಬ ರೂಪಸಿ ಆ ಲೋಕದಿಂದ ಇಳಿದು ಬಂದ ಊರ್ವಶಿ
ಹೆಣ್ಣು : ನಿನ್ನಾಸೆ ಎಲ್ಲ ಬಲ್ಲೆ ನಿನ್ನ ಕಣ್ಣೀಗೇ ನಾ ಕಬ್ಬಿನ ಜಲ್ಲೇ
ಗಂಡು : ಹೆಣ್ಣೇ ನೀನೋಡು ಧಾಟಿಯು ನನ್ನಾಡಸೋ ಚಾಟಿಯೂ ಬುಗರಿಯ ಮಾಡ್ಕೊಂಡೇ ನನ್ಯಾಕ
            ಹೆಣ್ಣೇ ನೀನೋಡು ಧಾಟಿಯು ನನ್ನಾಡಸೋ ಚಾಟಿಯೂ ಬುಗರಿಯ ಮಾಡ್ಕೊಂಡೇ ನನ್ಯಾಕ
ಹೆಣ್ಣು : ಹೇ.. ನನ್ನ ಜೋಕು ನಡೆಗೆ ಮೋಡಿ ಅಡಿಗಡಿಗೆ ದಾರಿಯಾಗೆ ಹಾರಿ ಬಂದು ನಿಂತ್ಯಾಕ
          ನೀ ದಾರಿಯಾಗೆ ಹಾರಿ ಬಂದು ನಿಂತ್ಯಾಕ
ಗಂಡು : ಅರೆರೇ  ನಾಜೋಕು ನಾರಿ ಬಿನ್ನಾಣ ತೋರಿ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ..
           ನೀ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ.

 ಗಂಡು : ಅಂದು ಹೆಣ್ಣಿಗಾಗಿ ಆಯ್ತು ಎಷ್ಟೋ ಯುದ್ಧ ಈ ಹೆಣ್ಣಿನಾಸೇ ಹೊತ್ಕೊಂಡೇ ಜಾರಿ ಬಿದ್ದ
ಹೆಣ್ಣು : ನೀನು ಮೊದ್ಲಿಗೇ ಮರ್ಯಾದೇ ಮೂರ್ತಿ ಪೂರ್ತಿ ಊರಿಗೆ ಗೊತ್ತವ್ರ ಕೀರ್ತಿ
ಗಂಡು : ಹೆಣ್ಣು ಮಾನಕೆ ಮೆರಗು ಮೈ ಮುಚ್ಚೋ ಸೆರಗು ಅದ್ನ ಜಾರಿಸೀ ಈಗ ಹೀಗೆ ನಿಂತ್ಯಾಕ
           ಹೆಣ್ಣು ಮಾನಕೆ ಮೆರಗು ಮೈ ಮುಚ್ಚೋ ಸೆರಗು ಅದ್ನ ಜಾರಿಸೀ ಈಗ ಹೀಗೆ ನಿಂತ್ಯಾಕ
ಹೆಣ್ಣು : ಹೇ.. ನನ್ನ ಜೋಕು ನಡೆಗೆ ಮೋಡಿ ಅಡಿಗಡಿಗೆ ದಾರಿಯಾಗೆ ಹಾರಿ ಬಂದು ನಿಂತ್ಯಾಕ
          ನೀ ದಾರಿಯಾಗೆ ಹಾರಿ ಬಂದು ನಿಂತ್ಯಾಕ
ಗಂಡು : ಹೇಯ್  ನಾಜೋಕು ನಾರಿ ಬಿನ್ನಾಣ ತೋರಿ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ..
           ನೀ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ.

ಗಂಡು : ಇಲ್ಲಿ ನೀನಿದ್ರೇ ನನ್ನ ನಿಯರೂ ಯಾಕೋ ನನ್ನಲ್ಲಿ ಏನೋ ಫಿವರ
ಹೆಣ್ಣು : ನಿನ್ನ ಜೊತೆಯಲ್ಲೇ ನಾನೀದ್ರೇ ಡಿಯರ್ ದೂರ ಓಡುತ್ತೇ ನಿಂದೆಲ್ಲ ಫಿವರ್
ಗಂಡು : ಅರೇ .. ನೀ ನನ್ನ ಹಾರ್ಟ ಬೀಟ
ಹೆಣ್ಣು : ನನ್ನಿಂದ ಸ್ವೀಟ್ ಹಾರ್ಟ
ಗಂಡು : ಹಾರ್ಟನ ಮೀಟಿದ ಮೇಲೆ ಗುಡನೈಟ  .. ಅಹ್ಹಹ್ಹ
ಗಂಡು : ಅರೇ .. ನೀ ನನ್ನ ಹಾರ್ಟ ಬೀಟ
ಹೆಣ್ಣು : ನನ್ನಿಂದ ಸ್ವೀಟ್ ಹಾರ್ಟ
ಗಂಡು : ಹಾರ್ಟನ ಮೀಟಿದ ಮೇಲೆ ಗುಡನೈಟು  ..
ಹೆಣ್ಣು : ಹೇ.. ನನ್ನ ಜೋಕು ನಡೆಗೆ ಮೋಡಿ ಅಡಿಗಡಿಗೆ ದಾರಿಯಾಗೆ ಹಾರಿ ಬಂದು ನಿಂತ್ಯಾಕ
          ನೀ ದಾರಿಯಾಗೆ ಹಾರಿ ಬಂದು ನಿಂತ್ಯಾಕ
ಗಂಡು : ಹೇಯ್  ನಾಜೋಕು ನಾರಿ ಬಿನ್ನಾಣ ತೋರಿ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ..
           ನೀ ಸದ್ದು ಮಾಡದೇ  ಹದ್ದು ಮೀರಿ ಬಂದ್ಯಾಕ.
-------------------------------------------------------------------------------------------------------------------------

ಶುಭ ಮುಹೂರ್ತ (೧೯೮೪) - ನಕ್ಕರೇ ನಾಕ ಈ ಲೋಕ ಅತ್ತರೇ ನರಕ ಈ ಲೋಕ ಭೂಲೋಕ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ  ವಾಣಿಜಯರಾಂ

ಕೋರಸ್ : ಹೇಹೇ .. ಹೇಹೇ .. ಹೇಹೇ .. ಹೇಹೇ .. ಅಹ್ಹಹ್ಹಹ್ಹ..
ಗಂಡು : ನಕ್ಕರೇ ನಾಕ ಈ ಲೋಕ               ಹೆಣ್ಣು : ಅತ್ತರೇ ನರಕ ಈ ಲೋಕ ಭೂಲೋಕ
ಗಂಡು : ಅದಕೇ ನಗುವಾ ನಗುನಗುನಗುನಗುತಿರುವ
ಕೋರಸ್ : ಅದಕೇ ನಗುವಾ ನಗುನಗುನಗುನಗುತಿರುವ

ಕೋರಸ್ : ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
ಹೆಣ್ಣು : ಮೊನ್ನೆ ಇದ್ದುದ ನೆನ್ನೆ ಇಲ್ಲ ನೆನ್ನೆ ಇದ್ದುದ ಇವತ್ತ ಇಲ್ಲ
ಗಂಡು : ಈವತ್ ಇರೋದೂ ನಾಳೇ ಇರೋಲ್ಲ ನಾಳೆ ಎಂದು ಕೈಗೇಟಿಕೊಲ್ಲ
ಹೆಣ್ಣು : ಅದಕ್ಕೆ ಇಂದೇ ನಕ್ಕು ನಲಿದು ಕುಣಿದು ತಣಿಯೋಣ
ಗಂಡು : ಅತ್ತು ಕರೆದು ಕುಗ್ಗೋದ ಯಾಕೆ ಹಿಗ್ಗಿ ಆಡೋಣ
ಹೆಣ್ಣು : ನಕ್ಕರೇ ನಾಕ ಈ ಲೋಕ                ಗಂಡು : ಅತ್ತರೇ ನರಕ ಈ ಲೋಕ ಭೂಲೋಕ

ಕೋರಸ್ : ರೂರುರುರೂ ರೂರುರುರೂ ರೂರುರುರೂ ರೂರುರುರೂ     
ಗಂಡು : ಅಂದ ಚಂದ ಇದ್ರೇ ಮುಂದೇ ರಾತ್ರಿ ಹಗಲು ಎಲ್ಲ ಒಂದೇ
ಹೆಣ್ಣು : ಹೊತ್ತು ಹೋಗೋದ ಗೊತ್ತಾಗೊಲ್ಲ ಹೋದಾ ಹೊತ್ತೂ ಬೇಕೆ ಇಲ್ಲಾ
ಗಂಡು : ಏನೇ ಬರಲೀ ಏನೇ ಹೋಗಲೀ ಎಲ್ಲಾ ಮರೆಯೋಣ
ಹೆಣ್ಣು : ಜೋಡಿಯಾಗಿ ಕಾಮನ ಬಿಲ್ಲ ಏರಿ ನೋಡೋಣ
ಗಂಡು : ನಕ್ಕರೇ ನಾಕ ಈ ಲೋಕ               ಹೆಣ್ಣು : ಅತ್ತರೇ ನರಕ ಈ ಲೋಕ ಭೂಲೋಕ

ಕೋರಸ್ : ಶಬರಬ.. ಶಬರಬ.. ಶಬರಬ.. ಶಬರಬ.. ಶಬರಬ.. ಶಬರಬ.. ಶಬರಬ.. ಶಬರಬ.. 
ಹೆಣ್ಣು : ನಕ್ಕು ನಗಿಸೋ ಒಲುಮೆ ಚೆಂದ ಉಕ್ಕಿ ಹರಿಯೋ ಚಿಲುಮೆ ಚಂದ 
ಗಂಡು : ಕಣ್ಣೀರಾದ್ರೂ ಪನ್ನಿರೆಂದೂ ಪನ್ನಿರಲ್ಲೇ ಮಿಂದು ಇಂದೂ 
ಹೆಣ್ಣು : ಸಿಹಿ ತಿನ್ನಲ್ ಕಹಿರುಚಿ ಏಕೆ ಆಮೇಲೇ  
ಗಂಡು : ಅಂತ ಕುಣಿದು ಕುಪ್ಪಳಿಸೋಣ ತಟ್ಟಿ ಚಪ್ಪಾಳೆ 
ಹೆಣ್ಣು : ನಕ್ಕರೇ ನಾಕ ಈ ಲೋಕ                ಗಂಡು : ಅತ್ತರೇ ನರಕ ಈ ಲೋಕ ಭೂಲೋಕ
ಕೋರಸ್ : ಅದಕೇ ನಗುವಾ ನಗುನಗುನಗುನಗುತಿರುವ
ಗಂಡು : ಅದಕೇ ನಗುವಾ ನಗುನಗುನಗುನಗುತಿರುವ 
-------------------------------------------------------------------------------------------------------------------------

No comments:

Post a Comment