1342. ಸಿಡಿಲ ಮರಿ (೧೯೭೧)

ಸಿಡಿಲು ಮರಿ ಚಲನಚಿತ್ರದ ಹಾಡುಗಳು
  1. ಅಮ್ಮನಿಗಾಗಿ ಕೂಗದಿರೂ
  2. ಅಮ್ಮಾ ಅಮ್ಮಾ ನಮ್ಮಮ್ಮಾ
  3. ಹೇ ಮ್ಯಾನೇಜರ್
  4. ಕಣ್ಣ ಬಲೆ ಬೀಸಿ ನೀನೂ
  5. ಆನೆ ಬಂತೊಂದ ಆನೆ
  6. ಆನೆ ಬಂತೊಂದ ಆನೆ (ಪಿ.ಬಿ.ಎಸ್)
  7. ಅತ್ತೇಯ ಮಗಳೇ..
  8. ಎಲ್ಲಾ ಹೆಣ್ಣಂತಲ್ಲಾ ಇವಳೂ 
ಸಿಡಿಲು ಮರಿ (೧೯೭೧) -  ಅಮ್ಮನಿಗಾಗಿ ಕೂಗದಿರೂ
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ ಪಿ.ಬಿ.ಎಸ್

ಅಮ್ಮನಿಗಾಗಿ ಕೂಗದಿರೂ ನೀ ಕಾಣದ ತಾಯಿಯ ಹುಡುಕದಿರೂ 
ಅಮ್ಮನಿಗಾಗಿ ಕೂಗದಿರೂ ನೀ ಕಾಣದ ತಾಯಿಯ ಹುಡುಕದಿರೂ 
ಹೆತ್ತವಳಂತೆ ಕಾಪಾಡುವೇ ನನ್ನ ಮುತ್ತೇ .. 
ನನ್ನ ಮುತ್ತೇ .. ಎಂದೆಂದೂ ನಗುತಲಿರು 
ಅಮ್ಮನಿಗಾಗಿ ಕೂಗದಿರೂ ನೀ ಕಾಣದ ತಾಯಿಯ ಹುಡುಕದಿರೂ 
ಹೆತ್ತವಳಂತೆ ಕಾಪಾಡುವೇ ನನ್ನ ಮುತ್ತೇ ಎಂದೆಂದೂ ನಗುತಲಿರು 

ಮಮತೆಯ ಕೋಟೆಯಲಿಡುವೆ ನಾ ಮೋಹದ ಸುಧೆಯಾ ಕೊಡುವೆ 
ನಾನೇ ತಂದೆ ನಾನೇ ತಾಯಿ ಎಲ್ಲಾ 
ನಾನೇ ತಂದೆ ನಾನೇ ತಾಯಿ ಎಲ್ಲಾ ನಾನಾಗಿರುವೆ 
ನನ್ನ ಜೀವವೇ ಮುಡುಪಾಗಿಡುವೆ 
ಅಮ್ಮನಿಗಾಗಿ ಕೂಗದಿರೂ ನೀ ಕಾಣದ ತಾಯಿಯ ಹುಡುಕದಿರೂ 
ಹೆತ್ತವಳಂತೆ ಕಾಪಾಡುವೇ ನನ್ನ ಮುತ್ತೇ ಎಂದೆಂದೂ ನಗುತಲಿರು 

ಬಿಸಿಲಿಗೆ ನೆರಳಾಗಿರುವೆ ಮಳೆ ಗಾಳಿಗೆ ತಡೆಯಾಗಿರುವೆ 
ಕಣ್ಣನು ರೆಪ್ಪೆ ರಕ್ಷಿಸುವಂತೆ ಎದೆಯಲಿ ನಾ ಬಚ್ಚಿಡುವೆ 
ನಾ ನಿನ್ನನ್ನು ಹಾಯಾಗಿಡುವೇ... ನಾ ನಿನ್ನನ್ನು ಹಾಯಾಗಿಡುವೇ 
ಅಮ್ಮನಿಗಾಗಿ ಕೂಗದಿರೂ ನೀ ಕಾಣದ ತಾಯಿಯ ಹುಡುಕದಿರೂ 

ಕಂದ ನಿನ್ನನು ಸುಖವಾಗಿಡುವೆ ನಿನ್ನನು ಸುಖವಾಗಿಡುವೆ 
ನಗುವಲೇ ಮನ ಹೂವಾಯ್ತು ನಿನ್ನ ಮಾತಲೇ ಮನೆ ಬೆಳಕಾಯ್ತು 
ದೇವರ ಕಂದ ಈ ಆನಂದ ನಿನ್ನಾ ಉಡುಗೊರೆಯಾಯ್ತು ನನ್ನ ಬಾಳೆ ಬಂಗಾರವಾಯ್ತು 
ಅಮ್ಮನಿಗಾಗಿ ಕೂಗದಿರೂ ನೀ ಕಾಣದ ತಾಯಿಯ ಹುಡುಕದಿರೂ 
ಹೆತ್ತವಳಂತೆ ಕಾಪಾಡುವೇ ನನ್ನ ಮುತ್ತೇ ಎಂದೆಂದೂ ನಗುತಲಿರು 
----------------------------------------------------------------------------------

ಸಿಡಿಲು ಮರಿ (೧೯೭೧) -  ಅಮ್ಮಾ ಅಮ್ಮಾ ನಮ್ಮಮ್ಮಾ
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ :ಎಸ್.ಜಾನಕೀ, ಬೆಂಗಳೂರ ಲತಾ

ಅಮ್ಮಾ.. ಅಮ್ಮಾ... ಅಮ್ಮಾ... 
ಅಮ್ಮಾ ಅಮ್ಮಾ ನನ್ನಮ್ಮಾ  ಕಂದನ ಮರೆಯುವುದೇನಮ್ಮಾ 
ಅಮ್ಮಾ ಅಮ್ಮಾ ನನ್ನಮ್ಮಾ  ಕಂದನ ಮರೆಯುವುದೇನಮ್ಮಾ 
ನನ್ನೀ ಮೊರೆಯ ಆಲಿಸೆಯಾ ನನ್ನ ಆಸೆಯಾ ತೀರಿಸೆಯಾ
ನನ್ನೀ ಮೊರೆಯ ಆಲಿಸೆಯಾ ನನ್ನ ಆಸೆಯಾ ತೀರಿಸೆಯಾ
ಎಲ್ಲಿರುವೇ ... ಎಲ್ಲಿರುವೇ ... ಎಲ್ಲಿರುವೇ ... ನೀ ಬಾರಮ್ಮಾ.. 
ಅಮ್ಮಾ ಅಮ್ಮಾ ನನ್ನಮ್ಮಾ  ಕಂದನ ಮರೆಯುವುದೇನಮ್ಮಾ 
ಅಮ್ಮಾ ಅಮ್ಮಾ ನನ್ನಮ್ಮಾ  

ಅಂಬಾ ಎಂದ ಕರುವನ್ನು ಮುದ್ದಿಸೋ ಹಸುವನು ನೋಡಮ್ಮಾ 
ಹಕ್ಕಿಯು ಹಸಿದ ಮರಿಗಳಿಗೆ ಗುಟುಕನು ಕೊಡುತಿದೆ ಕಾಣಮ್ಮಾ 
ಮಂಗನ ಮರಿಗೆ ತಾಯ್ ಒಡಲೇ ಮನೆಯಾಗಿಲ್ಲವೇ ಹೇಳಮ್ಮಾ 
ತಬ್ಬಲಿಯಾಗಿ ಅಲೆಯಲು ನಾ ಮಾಡಿದ ಪಾಪವು ಏನಮ್ಮಾ... 
ಅಮ್ಮಾ... ಅಮ್ಮಾ... ಅಮ್ಮಾ... 
ಅಮ್ಮಾ ಅಮ್ಮಾ ನನ್ನಮ್ಮಾ  ಕಂದನ ಮರೆಯುವುದೇನಮ್ಮಾ 
ಅಮ್ಮಾ ಅಮ್ಮಾ ನನ್ನಮ್ಮಾ  

ಆಸರೆ ಇಲ್ಲದೇ ಬಳ್ಳಿಗಳೂ ನಿಲ್ಲುವುದೆಂತು ಹೇಳಮ್ಮಾ 
ನೀರೇ ಇಲ್ಲದೇ ಮೀನುಗಳು ಉಸಿರಾಡುವುದು ಹೇಗಮ್ಮಾ 
ತಾಯ್ ಬೇರಿಲ್ಲದೇ ಗಿಡದಲ್ಲಿ ಹೂಗಳೂ ಅರಳುವುದೇನಮ್ಮಾ 
ಮಮತೆಯ ಸವಿಯನು ಕಾಣದೆಲೇ ಹೇಗಿರಲಲೀ ಬಾರಮ್ಮಾ 
ಅಮ್ಮಾ... ಅಮ್ಮಾ... ಅಮ್ಮಾ... 
ನನ್ನೀ ಮೊರೆಯ ಆಲಿಸೆಯಾ ನನ್ನ ಆಸೆಯಾ ತೀರಿಸೆಯಾ
ಎಲ್ಲಿರುವೇ ... ಎಲ್ಲಿರುವೇ ... ಎಲ್ಲಿರುವೇ ... ನೀ ಬಾರಮ್ಮಾ.. 
ಅಮ್ಮಾ ಅಮ್ಮಾ ನನ್ನಮ್ಮಾ  ಕಂದನ ಮರೆಯುವುದೇನಮ್ಮಾ 
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ 
---------------------------------------------------------------------------------

ಸಿಡಿಲು ಮರಿ (೧೯೭೧) -  ಹೇ ಮ್ಯಾನೇಜರ್
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ ಪಿ.ಬಿ.ಎಸ್, ಎಲ್.ಆರ್.ಈಶ್ವರೀ

ಹೆಣ್ಣು : ಹೇಯ್ ಮ್ಯಾನೇಜರ್ 
              ಹೇಯ್ ಮ್ಯಾನೇಜರ್ ಇಲ್ಲಿದೆ ಡೇಂಜರ್ 
              ಮೂರೂ ಊರು ಕೆರೆ ನೀರು ಆರು ನೂರು ಭಾವಿ ನೀರು 
              ಕುಡಿಸುವೆನೋ ಹುಷಾರ್..!
ಗಂಡು : ಲೇಯ್.. ಗಂಡುಭೀರಿ 
              ಲೇಯ್.. ಗಂಡುಭೀರಿ ಸಿಡುಕಿನ ಸಿಂಗಾರಿ 
               ಮಣ್ಣು ಮಣ್ಣು ಮುಕ್ಕಿಸುವೇ ಕಣ್ಣು ಕಣ್ಣು ಬಿಡುಸುವೆ ಕೇಳಲೇ ಪ್ಯಾರೀ .. 

ಹೆಣ್ಣು : ಯಾರೇ ಬರಲಿ ಮನೆಗೆ ಮೂರೇ ದಿವಸ ಅವಗೆ 
              ಹರಹರ ಎನ್ನುವ ಕೊನೆಗೆ ಆ ಗತಿಯೇ ನಿನಗೆ.. ಆಹಹ್... ಅಹ್ಹಹ್ಹಹ್ಹಹ್ಹಹ್ಹಹಾ 
ಗಂಡು : ಭೂಪತಿ ಬಂದಿಹ ಮನೆಗೆ ಹೆದರುವನಲ್ಲ ನಿನಗೆ 
               ಮೂರೇ ದಿವಸ ನಿನ್ನಾ ತರಿಸುವೆನೇ ದಾರಿಗೆ... ಹಾಯ್...ಹಾಯ್...ಹಾಯ್...ಹಾಯ್...
ಹೆಣ್ಣು : ಹೇಯ್ ಮ್ಯಾನೇಜರ್ ಇಲ್ಲಿದೆ ಡೇಂಜರ್ 
              ಮೂರೂ ಊರು ಕೆರೆ ನೀರು ಆರು ನೂರು ಭಾವಿ ನೀರು 
              ಕುಡಿಸುವೆನೋ ಹುಷಾರ್..!

ಹೆಣ್ಣು : ಕೆಣಕಲು ಸಿಂಹಿಣಿ ಇವಳು ಲೇಯ್.. 
               ಉರಿಯುವ ಬೆಂಕಿಯ ಮಗಳು 
               ಹತ್ತಿರ ಬಂದರೇ ನಿನ್ನ ಬೂದಿಯ ಮಾಡುವಳೂ.. ಲಲಲಲ್ಲಾ...ಲಲ್ಲಾ..ಲಲ್ಲಾ..    
ಗಂಡು : ಸಿಂಹಿಣಿ ಜೊತೆಯಾಗುವೆನು ಆ ಗಂಗೆಯ ಮಗನೆ ನಾನು 
              ಹತ್ತಿರ ಬಂದು ನಿನ್ನ ಬೇಗೆಯ ನಿಗುವೇನೂ   

ಹೆಣ್ಣು : ಕಣ್ಣಿಗೆ ಮುಳ್ಳಾಗುವೆನು ಕೈಯ್ಯಿಗೆ ಹಾವಾಗುವೆನು 
               ತಂಟೆಗೆ ಬಂದರೆ ನಿನ್ನಾ ಕಥೆಯನು ಮುಗಿಸುವೆನು 
ಗಂಡು : ನೋ..ನೋ..ನೋ..ನೋ.. ನೋ..ಡಿಯರ್.. 
              ನಡೆಯಲಿ ವಿನಯವು ಬೇಕೂ 
              ನುಡಿಯಲಿ ನಯವಿರಬೇಕು.. 
              ಒಳ್ಳೆಯ ಹೆಣ್ಣಿವಳೆಂದೂ ನಿನ್ನೆಲ್ಲರೂ ಅನಬೇಕು... 
---------------------------------------------------------------------------------

ಸಿಡಿಲು ಮರಿ (೧೯೭೧) -  ಕಣ್ಣ ಬಲೆ ಬೀಸಿ ನೀನೂ 
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ ಎಸ್.ಜಾನಕೀ

ಝಲ್ಲ ಝಲ್ಲ ಎನ್ನುವ ಗೆಜ್ಜೆಯ ಮಾಡಿ ಕಾಲಿಗೆ ಕಟ್ಟುವೇನೂ 
ಘಲ್ ಘಲ್ ಬಳೆಯಾ ತಾಳದ ಸದ್ದಿಗೆ ನಿನ್ನಾ ಕುಣಿಸುವೆನೂ 
ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ 
ಮಾತಲ್ಲೇ ಮರಳು ಮಾಡಿ ಮೋಡಿಯ ಮಾಡುವೇಯಾ 
(ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ 
ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ) 

ಜಡೆಯಲ್ಲಿ ಕಟ್ಟಿ ನಾ ಎಳೆದಾಡಲೇನು 
ಸೆರಗಲ್ಲೇ ನಿನ್ನ ನಾ ಮರೆ ಮಾಡಲೇನೂ .. 
ನಗುವಲ್ಲೇ ನಿನ್ನಾ (ಹ್ಹಾ ಹ್ಹಾಹ್ಹಾ ) ಸೆಳೆಯಲು ಚನ್ನಾ... (ಓಓಓ)
ನಗುವಲ್ಲೇ ನಿನ್ನಾ ಸೆಳೆಯಲು ಚನ್ನಾ... 
ಹಗಲು ಇರುಳಲ್ಲಿಯೂ (ಆಹಾ ಆಹಾ ಆಹಾ ) 
ಕನಸು ಮನಸ್ಸಲ್ಲಿಯೂ (ಓಹೋ ಓಹೋ)
ಕಾಣುವೇ ... ಕಾಡುವೇ ... 
ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ
(ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ) 

ಕುರುಳಾಗಿ ನಿನ್ನ ಆ ಮೊಗದಲ್ಲಿ ನಲಿವೆ   
ಕೊಳಲಾಗಿ ತುಟಿಮೇಲೆ ನಾ ಮುದ್ಧ ನೀಡುವೆ 
ಜೇನಿನ ಸವಿಯ (ಹ್ಹಾ ಹ್ಹಾಹ್ಹಾ ) ಸೇವಿಸು ಇನಿಯಾ (ಓಓಓ)
ಜೇನಿನ ಸವಿಯ ಸೇವಿಸು ಇನಿಯಾ 
ಬದುಕು ಹಗುರಾಗಿಸಿ (ಆಹಾ ಆಹಾ ಆಹಾ ) 
ಬಯಕೆ ಈಡೇರಿಸಿ (ಓಹೋ ಓಹೋ)
ಹಾಡುವೇ ... ಆಡುವೇ... 
ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ
(ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ) 

ನೆರಳಾಗಿ ಹಿಂದೆ ನೀ ಹೋದಲ್ಲಿ ಬರುವೇ 
ನೆನಪಾಗಿ ಎಂದೆಂದೂ ಎದೆಯಲ್ಲಿ ಇರುವೇ 
ಕೆಣಕುತ ನಗುವೇ (ಹ್ಹಾ ಹ್ಹಾಹ್ಹಾ ) ನಗಿಸುತ ನಲಿವೆ (ಓಓಓ)
ಕೆಣಕುತ ನಗುವೇ ನಗಿಸುತ ನಲಿವೆ 
ಹಿಂದೆ ನೀ ಕಾಣದಾ (ಆಹಾ ಆಹಾ ಆಹಾ ) 
ಮುಂದೆ ನೀ ನೋಡದಾ (ಓಹೋ ಓಹೋ)
ಸೌಖ್ಯವ ನೀಡುವೇ ... 
ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ
(ಕಣ್ ಬಲೆ ಬೀಸಿ ನೀನು ಹೆಣ್ಣ್ ಸೆರೆ ಹಾಕುವೇಯಾ) 
--------------------------------------------------------------------------------

ಸಿಡಿಲು ಮರಿ (೧೯೭೧) -  ಆನೆ ಬಂತೊಂದಾನೆ ಬಂತೊಂದಾನೆ
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ ಪಿ.ಬಿ.ಎಸ್.

ಆನೆ ಬಂತೊಂದಾನೆ ಬಂತೊಂದಾನೆ ಬಂತೊಂದಾನೆ ಓಡಿ ಬಂತೊಂದಾನೆ 
ನಿನ್ನಾ ಮೇಲಾಸೆಯಿಂದ ಬಂತು ನನ್ನಾನೇ ಹೋಯ್ ... ಲಲ್ಲಾಳ ಲಾಲಲಲ್ಲ ಬಂತೂ ನನ್ನಾನೆ  

ಹೆಣ್ಣೇ ನಿನ್ನ ಸಿಡುಕೆಲ್ಲಿ ನನ್ನ ಹಳಿಯೋ ಮಾತೆಲ್ಲಿ 
ಜಂಭದ ಕೋಳಿ ಗತಿಯಾ ನೀನು 
ಕಂಡಿದ್ದೀಯಾ ಕಡೆಯಲ್ಲಿ ಏನಂತೀಯಾ ಈಗಿಲ್ಲಿ.. 
ನಿನ್ನ ಬಿಟ್ಟೋಡಲಾರೆ ನನ್ನಾಸೆ ಹೇಳಲಾರೇ 
ಸುಮ್ಮನೆ ನಿಲ್ಲಲಾರೆ ನೋಡು ನನ್ನಿಲ್ಲಿ ಅರೇ ಭಪ್ಪರೇ ಬಲು ಬೆಪ್ಪಿ... 

ಬಳ್ಳಿಗೊಂದು ಮರಬೇಕು ಕಳ್ಳಿಗೊಂದು ನೆಪಬೇಕು 
ಚಿನ್ನ ನಿನಗಾಸರೆಯಾಗಿ ನಾನು ಜೊತೆಯಲ್ಲಿರಬೇಕು 
ಸ್ನೇಹದ ಕಾಣಿಕೆ ಕೊಡಬೇಕು 
ಇಲ್ಲೀ ಇನ್ನಾರು ಇಲ್ಲ ನನ್ನ ನೀ ಬಲ್ಲೆಯಲ್ಲಾ 
ಬಿಟ್ಟರೇ ಸಿಕ್ಕೋದಿಲ್ಲಾ ಹತ್ತಿರ ಬಾ ಇಲ್ಲಿ.. ಅರೇ ಭಪ್ಪರೇ ಬಲು ಬೆಪ್ಪಿ..  
--------------------------------------------------------------------------------

ಸಿಡಿಲು ಮರಿ (೧೯೭೧) -  ಆನೆ ಬಂತೊಂದ ಆನೆ
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ ಎಸ್.ಜಾನಕೀ

ಹೇ.. ಆನೆ ಬಂತೊಂದಾನೆ ಬಂತೊಂದಾನೆ ಬಂತೊಂದಾನೆ ಓಡಿ ಬಂತೊಂದಾನೆ 
ನಿನ್ನಾ ಮೇಲಾಸೆಯಿಂದ ಬಂತು ನನ್ನಾನೇ ಹೋಯ್ ... ಲಲ್ಲಾಳ ಲಾಲಲಲ್ಲ ಬಂತೂ ನನ್ನಾನೆ  
ಹೇ.. ಆನೆ ಬಂತೊಂದಾನೆ ಬಂತೊಂದಾನೆ ಬಂತೊಂದಾನೆ ಓಡಿ ಬಂತೊಂದಾನೆ 
ನಿನ್ನಾ ಮೇಲಾಸೆಯಿಂದ ಬಂತು ನನ್ನಾನೇ ಹೋಯ್ ... ಲಲ್ಲಾಳ ಲಾಲಲಲ್ಲ ಬಂತೂ ನನ್ನಾನೆ  

ಭೂಪ ನಿನ್ನ ಸೊಕ್ಕೆಲ್ಲಿ ಗಂಡು ಅನ್ನೋ ಕೊಬ್ಬೇಲ್ಲಿ 
ಭೂಪ ನಿನ್ನ ಸೊಕ್ಕೆಲ್ಲಿ ಗಂಡು ಅನ್ನೋ ಕೊಬ್ಬೇಲ್ಲಿ 
ಆನೆ ಕಂಡೂ ಹೆದರೋ ನಿಂಗೆ ಮೀಸೆ ಏಕೇ ಮೊಗದಲ್ಲಿ 
ಆಸೆ ಯಾಕೇ ನನ್ನಲ್ಲಿ.. 
ಇನ್ನೂ ನಾ ನೋಡಲಾರೆ ನಿನ್ನಾ ಕಾಪಾಡಲಾರೇ 
ಇಲ್ಲೀ ನೀ ಬಾಳಲಾರೇ ಓಡು ಬಿಟ್ಟೋಡು .. 
ಹೋಯ್  ಇನ್ನೂ ನಾ ನೋಡಲಾರೆ ನಿನ್ನಾ ಕಾಪಾಡಲಾರೇ 
ಇಲ್ಲೀ ನೀ ಬಾಳಲಾರೇ ಓಡು ಬಿಟ್ಟೋಡು .. ಅಹ್ಹಹ್ಹ ಭಪ್ಪರೇ ಬಲು ಬೆಪ್ಪಾ 
ಹೇ.. ಆನೆ ಬಂತೊಂದಾನೆ ಬಂತೊಂದಾನೆ ಬಂತೊಂದಾನೆ ಓಡಿ ಬಂತೊಂದಾನೆ 
ನಿನ್ನಾ ಮೇಲಾಸೆಯಿಂದ ಬಂತು ನನ್ನಾನೇ ಹೋಯ್ ... ಲಲ್ಲಾಲ ಲಾಲಲಲ್ಲ ಬಂತೂ ನನ್ನಾನೆ  

ಹಿಂದೆ ಹಿಂದೆ ಬರುತ್ತೀಯಾ ನೋಡಿ ನೋಡಿ ನಗುತ್ತೀಯಾ 
ಹಿಂದೆ ಹಿಂದೆ ಬರುತ್ತೀಯಾ ನೋಡಿ ನೋಡಿ ನಗುತ್ತೀಯಾ 
ಮಾತು ಮಾತು ಬೆಳೆಸಿ ನನ್ನ ಕಾಡೋ ಬಯಕೆ ಏನಯ್ಯಾ.. 
ನೋಡೋ ಚಪಲ ಯಾಕಯ್ಯಾ.. 
ಹೆಣ್ಣೆಂದು ಹಿಗ್ಗಬೇಡ ಕಣ್ಮುಚ್ಚಿ ನುಗ್ಗಬೇಡಾ 
ಕಲ್ಗೆ ತಲೆ ಚಚ್ಚಬೇಡ ಓಡು ಬದುಕೋಡು   
ಹೇಯ್ ..  ಹೆಣ್ಣೆಂದು ಹಿಗ್ಗಬೇಡ ಕಣ್ಮುಚ್ಚಿ ನುಗ್ಗಬೇಡಾ 
ಕಲ್ಗೆ ತಲೆ ಚಚ್ಚಬೇಡ ಓಡು ಬದುಕೋಡು ಅಹ್ಹಹ್ಹ ಭಪ್ಪರೇ ಬಲು ಬೆಪ್ಪಾ 
ಆನೆ ಬಂತೊಂದಾನೆ ಬಂತೊಂದಾನೆ ಬಂತೊಂದಾನೆ ಓಡಿ ಬಂತೊಂದಾನೆ 
ನಿನ್ನಾ ಮೇಲಾಸೆಯಿಂದ ಬಂತು ನನ್ನಾನೇ.. ಅಹ್ಹಹ್ಹ... ಅಹ್ಹಹ್ಹ... 
---------------------------------------------------------------------------------

ಸಿಡಿಲು ಮರಿ (೧೯೭೧) - ಅತ್ತೇಯ ಮಗಳೇ..
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ ಪಿ.ಬಿ.ಎಸ್, ಎಸ್.ಜಾನಕೀ

ಗಂಡು : ಅತ್ತೆಯ ಮಗಳೇ... (ಅಹ್ಹಹ್ಹ) 
               ಅತ್ತೆಯ ಮಗಳೇ... ಎತ್ತ ಹೋಗುವೆ ನಿಲ್ಲೆ ಅತ್ತಲೆ ಬರುವೆ ನಾನಲ್ಲೇ.. 
               ಅತ್ತೆಯ ಮಗಳೇ... ಎತ್ತ ಹೋಗುವೆ ನಿಲ್ಲೆ ಅತ್ತಲೆ ಬರುವೆ ನಾನಲ್ಲೇ.. 
               ಅತ್ತಲೇ ಬಂದು ನಾ ಮೆತ್ತನೆ ಮೈಯ್ಯನ್ನ ಒತ್ತಿ ಹಿಡುವೇ ಚೆಲುವೆ ನಿಲ್ಲಲ್ಲೇ... 
               ಒತ್ತಿ ಹಿಡುವೇ ಚೆಲುವೆ ನಿಲ್ಲಲ್ಲೇ... ಒತ್ತಿ ಹಿಡುವೇ ಚೆಲುವೆ ನಿಲ್ಲಲ್ಲೇ... 
ಹೆಣ್ಣು : ಅಬ್ಬಬ್ಬಾ...  
              ಅಬ್ಬಬ್ಬಾ ಬಿಡೂ ಬಿಡೂ ಇಬ್ಬರೇ ಬರುವಾಗ ತಬ್ಬಿಕೊಂಡಿದ್ದಿನ್ನೂ ಮೈಯ್ಯ ನೋವು 
              ಅಬ್ಬಬ್ಬಾ ಬಿಡೂ ಬಿಡೂ ಇಬ್ಬರೇ ಬರುವಾಗ ತಬ್ಬಿಕೊಂಡಿದ್ದಿನ್ನೂ ಮೈಯ್ಯ ನೋವು 
              ತಬ್ಬಿಕೊಂಡಾ ನೋವೇ ಹೋಗಿಲ್ಲ ನೀ ನನ್ನ ಕಬ್ಬ ಜಲ್ಲೆಯೆಂದು ತಿಳಿದೆಯಾ... 
              ಕಬ್ಬ ಜಲ್ಲೆಯೆಂದು ತಿಳಿದೆಯಾ... ಕಬ್ಬ ಜಲ್ಲೆಯೆಂದು ತಿಳಿದೆಯಾ... 
ಗಂಡು : ಅತ್ತೆಯ ಮಗಳೇ... ಎತ್ತ ಹೋಗುವೆ ನಿಲ್ಲೆ ಅತ್ತಲೆ ಬರುವೆ ನಾನಲ್ಲೇ.. 

ಗಂಡು : (ಆಆಆ...) ಮಲ್ಲಿಗೆ ಅರಳೆ ನನ್ನೊಳೆ ಕೋಗಿಲೆ ದನಿಯಾ ಮಾತೋಳೆ 
               ಮಲ್ಲಿಗೆ ಅರಳೆ ನನ್ನೊಳೆ ಕೋಗಿಲೆ ದನಿಯಾ ಮಾತೋಳೆ 
               ಏನಿದು ನಿನ್ನೀ ಮೈಮ್ಯಾಲೇ ನಿಂತಿವೆ ತಾವರೆ ಮೊಗ್ಗುಗಳೇ 
ಹೆಣ್ಣು : ಮಾತಿನ ಮಲ್ಲ ಮರುಳಾಗೋಲ್ಲ ನಿನ್ನಾಟವೆಲ್ಲಾ ನಾ ಬಲ್ಲೆ ನಲ್ಲ  
              ಮಾತಿನ ಮಲ್ಲ ಮರುಳಾಗೋಲ್ಲ ನಿನ್ನಾಟವೆಲ್ಲಾ ನಾ ಬಲ್ಲೆ ನಲ್ಲ   
              ಹೆಣ್ಣಿನ ಮ್ಯಾಲೇ ಕಣ್ಣು ಸರಿಯಲ್ಲಾ.. 
ಗಂಡು : ಅತ್ತೆಯ ಮಗಳೇ... ಎತ್ತ ಹೋಗುವೆ ನಿಲ್ಲೆ ಅತ್ತಲೆ ಬರುವೆ ನಾನಲ್ಲೇ.. 

ಗಂಡು : (ಆಆಆ) ರೇಷಿಮೆಯಂಥ ಮೈನೋಳೇ ಮುಟ್ಟಲು ಒರಗಿದೆ ನೀ ಮ್ಯಾಲೇ... ಹ್ಹಾ  
               ರೇಷಿಮೆಯಂಥ ಮೈನೋಳೇ ಮುಟ್ಟಲು ಒರಗಿದೆ ನೀ ಮ್ಯಾಲೇ 
               ಸಾವಿರ ಆಸೆ ಬಂತಲ್ಲೇ ಬಯಕೆಯ ತೀರಿಸೇ ನಿಂತಲ್ಲೇ...  
ಹೆಣ್ಣು : ಬಿಟ್ಟೋಡಲಾರೆ ಓ ನಿಲ್ಲಲಾರೆ ನಾ ತಾಳಲಾರೆ ಕಣ್ ಬಿಡಲಾರೇ 
              ಬಿಟ್ಟೋಡಲಾರೆ ಓ ನಿಲ್ಲಲಾರೆ ನಾ ತಾಳಲಾರೆ ಕಣ್ ಬಿಡಲಾರೇ 
              ಮೈ ಮೈ ಮಸೆಯಲು ನಿನ್ನವಳಾಗದಲೇ...       
ಗಂಡು :  ಅತ್ತೆಯ ಮಗಳೇ... ಎತ್ತ ಹೋಗುವೆ ನಿಲ್ಲೆ ಅತ್ತಲೆ ಬರುವೆ ನಾನಲ್ಲೇ.. 
               ಅತ್ತಲೇ ಬಂದು ನಾ ಮೆತ್ತನೆ ಮೈಯ್ಯನ್ನ ಒತ್ತಿ ಹಿಡುವೇ ಚೆಲುವೆ ನಿಲ್ಲಲ್ಲೇ... 
               ಒತ್ತಿ ಹಿಡುವೇ ಚೆಲುವೆ ನಿಲ್ಲಲ್ಲೇ... 
---------------------------------------------------------------------------------

ಸಿಡಿಲು ಮರಿ (೧೯೭೧) - ಎಲ್ಲಾ ಹೆಣ್ಣಂತಲ್ಲಾ ಇವಳು 
ಸಂಗೀತ: ಎಸ್.ರಾಜೇಶ್ವರರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನಃ ಎಲ್.ಆರ್.ಈಶ್ವರೀ 

ಎಲ್ಲಾ ಹೆಣ್ಣಂತಲ್ಲಾ ಇವಳು ನೋಡಿದೋ ಹೂವಿನ ಮೈಯ್ಯವಳು 
ಕಪ್ಪನೆ ಕಾಡಿಗೆ ಕಣ್ಣವಳು ಎಲ್ಲಾ ಹೆಣ್ಣಂತಲ್ಲಾ ಇವಳೂ ... 
ಎಲ್ಲಾ ಹೆಣ್ಣಂತಲ್ಲಾ ಇವಳೂ ... 

ಒಲಿದು ಬಾ ಸೇರುವಳೂ ಬಯಸಿ ಬಾ ನೀಡುವಳೂ 
ಕೈಯ್ಯ ಹಿಡಿದರೇ ಇವಳೂ ನಿನ್ನವಳು ನಿನ್ನವಳು ನಿನ್ನವಳು 
ಎಲ್ಲಾ ಹೆಣ್ಣಂತಲ್ಲಾ ಇವಳೂ ... 

ಫಳ ಫಳ ಎನ್ನುತ ಹೊಳೆಯುವುದೆಲ್ಲಾ ಚಿನ್ನವೇನಲ್ಲಾ 
ಪಿಳಿ ಪಿಳಿ ಎನ್ನುವ ಕಣ್ಣಲಿ ಕೂಡಾ ಮಿಂಚಿದೇನಲ್ಲಾ 
ನೋಡಲ್ಲಿ ಸುಖವಿಲ್ಲಾ.. ಸ್ನೇಹಕ್ಕೆ ಮಿಗಿಲಿಲ್ಲ 
ನಾಳೆ ಎಂದರೆ ದಕ್ಕಲ್ಲಾ.. ಇಂಥಾ ಹೆಣ್ಣು ಸಿಕ್ಕಲ್ಲಾ 
ಎಲ್ಲಾ ಹೆಣ್ಣಂತಲ್ಲಾ ಇವಳೂ ... 

ಹಣ್ಣಿನ ರುಚಿಯನು ತಿನ್ನದೇ ಯಾರು ಹೇಳಲು ಬರದಲ್ಲಾ 
ಹೆಣ್ಣನು ಕುಡಿದ ಆನಂದವನೂ ಬಲ್ಲವನೇ ಬಲ್ಲ 
ಮುಟ್ಟ ಸುಖವಿಲ್ಲ ಬಿಟ್ಟರೆ ನಿನಗಿಲ್ಲಾ 
ಗುಟ್ಟಾಗಿಡುವೆನು ಬಾ ನಲ್ಲ ಎಂದಿಗೂ ಯಾರಿಗೂ ಹೇಳಲ್ಲ 
ಎಲ್ಲಾ ಹೆಣ್ಣಂತಲ್ಲಾ ಇವಳೂ ... 
--------------------------------------------------------------------------------

No comments:

Post a Comment