1343. ಸಿಂಪಲಾಗಿ ಒಂದ್ ಲವ್ ಸ್ಟೋರಿ (೨೦೧೩)


ಸಿಂಪಲಾಗಿ ಒಂದ್ ಲವ್ ಸ್ಟೋರಿ ಚಲನಚಿತ್ರದ ಹಾಡುಗಳು
  1. ಬಾನಲಿ ಬದಲಾಗೋ ಬಣ್ಣವೇ.. ಭಾವನೆ..
  2. ಬೆಳಿಗ್ಗೆ ಜಿಮ್ಮೂ ಮಧ್ಯಾನ್ಹ ಕೇರಂ ಸಂಜೇ 
  3. ಕರಗಿದ ಬಾನಿನಲ್ಲಿ 
  4. ಸ್ಮೈಲೂ ಇರುವಂತೇ ಸರಾಸರಿ
  5. ನನ್ನ ಪ್ರೀತಿ ಕುಸರಿ
ಸಿಂಪಲಾಗಿ ಒಂದ್ ಲವ್ ಸ್ಟೋರಿ (೨೦೧೩) - ಬಾನಲಿ ಬದಲಾಗೋ ಬಣ್ಣವೇ..
ಸಂಗೀತ : ಬಿ.ಜೆ.ಭರತ್ ಸಾಹಿತ್ಯ : ಗಾಯನ : ಸೋನು ನಿಗಮ್

ಬಾನಲಿ ಬದಲಾಗೋ ಬಣ್ಣವೇ.. ಭಾವನೆ...
ಹೃದಯವು ಹಗುರಾಗಿ.. ಹಾರುವಾ ಸೂಚನೆ...
ಮನದಾ ಹೂ ಬನದೀ.. ನೆನಪೇ ಹೂವಾಯ್ತು...
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...

ಮನದಿ ಏನೋ.. ಹೊಸ ಗಲಭೆ ಶುರುವಾಗಿದೆ...
ಮರೆತೆ ಏಕೆ.. ಬಳಿ ಬಂದು ಸರಿ ಮಾಡದೆ...
ಗೆಳತೀ, ನನ್ನ ಗೆಳತಿ.. ತೆರೆದೆ ಮನದ ಕಿಟಕಿ...
ಕರುಣಿಸು ಪ್ರೇಮಧಾರೆ.. ಬಯಕೆಯ ತೋರದೆ...

ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...

ಸರದಿಯಲ್ಲಿ.. ಹೊಸ ಬಯಕೆ ಸರಿದಾಡಿದೆ...
ಹರಸಿ ಬೇಗ.. ಕರೆ ಮಾಡು ತಡ ಮಾಡದೆ...
ಹುಡುಕೀ, ನನ್ನ ಹುಡುಕಿ.. ನಟಿಸು ಕಣ್ಣ ಮಿಟುಕಿ...
ಗಮನಿಸು ಪ್ರೇಮ ಭಾಷೆ.. ಪದಗಳ ನೋಡದೆ...

ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...

ಬಾನಲಿ ಬದಲಾಗೋ ಬಣ್ಣವೇ.. ಭಾವನೆ...
ಹೃದಯವು ಹಗುರಾಗಿ.. ಹಾರುವಾ ಸೂಚನೆ...
ಮನದಾ ಹೂ ಬನದೀ.. ನೆನಪೇ ಹೂವಾಯ್ತು...
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...
------------------------------------------------------------------------------------------------------------------------

ಸಿಂಪಲಾಗಿ ಒಂದ್ ಲವ್ ಸ್ಟೋರಿ (೨೦೧೩) - ಬೆಳಿಗ್ಗೆ ಜಿಮ್ಮೂ ಮಧ್ಯಾನ್ಹ ಕೇರಂ 
ಸಂಗೀತ : ಬಿ.ಜೆ.ಭರತ್ ಸಾಹಿತ್ಯ : ಗಾಯನ : ಸೋನು ನಿಗಮ್

ಬೆಳಿಗ್ಗೆ ಜಿಮ್ಮೂ ಮಧ್ಯಾನ್ಹ ಕೇರಂ ಸಂಜೇ
ರಮ್ಮೂ ಮುಗಿತು ನಮ್ಮ ಟೈಮೂ..
ನಾವೂ ಹಾಡೋದೆ ಹಾಡು ಕೇಳೊದು ನಾಯಿಪಾಡು
ಬೇಕಾದ್ರೇ ನೀವ ಕೇಳಿ ಇಲ್ಲ ಕಿವಿಗೇ ಹತ್ತಿ ಇಟ್ಟಕೊಳ್ಳಿ
ಚೆಲ್ ಚೆಲ್ಲೂ ಹುಡುಗಿರು ನಗೋದೆ ಯಾಕೆ ಗುರೂ
ಮೆಸ್ಸೇಜು ಕಾಲ್ ಮಾಡಿದರೇ ನಾಟ ರೀಚಬಲ್ಲೂ...
ನಾನಂತೂ ಫುಲ್ ಚಂದು ಬಳಕಂತು ಫೂಲ್ ತಂದಳು
ಸಿಹಿನೋ ಖಾರನೋ ಲೈಫೂ ಫೂಲ್ಲು ಮಿಕ್ಸನೋ
ನನ್ನ ಹಾರ್ಟು ಸಿಂಪಲು ಇದು ಖಾಲಿ ಮಾಡೆಲ್ಲೂ
ಹುಡುಗಿರಿಗೇ ಕಾಳ ಹಾಕ್ಕೊಕ್ಕೇ ಇದೇ ಇದೇ ಟೆಂಪಲ್ಲೂ
-----------------------------------------------------------------

ಸಿಂಪಲಾಗಿ ಒಂದ್ ಲವ್ ಸ್ಟೋರಿ (೨೦೧೩) - ಬೆಳಿಗ್ಗೆ ಜಿಮ್ಮೂ ಮಧ್ಯಾನ್ಹ ಕೇರಂ 
ಸಂಗೀತ : ಬಿ.ಜೆ.ಭರತ್ ಸಾಹಿತ್ಯ : ಗಾಯನ : ಸೋನು ನಿಗಮ್

ಕರಗಿದ ಬಾನಿನಲ್ಲಿ ಹುಣ್ಣಿಮೆಯಂದು ಚಂದ್ರ ಕಂಡಿದ್ದಾನೇ ಶುಭವೋ ಅಶುಭವೋ ತಿಳಿಯದು
ಹುಣ್ಣಿಮೆಯಂದು ಈತ ಜೊತೆಗಿದ್ದನೇ ಪ್ರೀತಿಯ ಉಪಶಮನದ ಮಜಲಿದು 

ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲೀ ನಿನ್ನ ನಿನಪೇ ಸುಂದರ

ಬಾಡಿದ ಈ ಮನ ಬಯಸುವ ಹುಡುಗನೂ ನೀನಾ
ಅರಳುವ ಈ ಮನ ಮೊಗ್ಗಾದೆ ನಾ
ಕಾಡು ಮಳೆಯನು ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು ಒಲವ ಕನಸನು
ಕನಸ ಉಡುಪನು ತೊಡೆಸು ಬಾ
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲೀ ನಿನ್ನ ನಿನಪೇ ಸುಂದರ

ನೆರಳಿನ ನೆನಪಲಿ ಹೋಲುವ ಗೆಳೆಯನೇ
ಬೆಳಗಿದೆ ಬದುಕನೇ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ ಹನಿಯ ಒರಸು ಬೆರಳು ನೀನೇನಾ
ನಲುಗಿ ಬಾಡೋ ಹೂವು ನಾನಾದೇ
ಮೆಲ್ಲ ಒಳಗೆ ನುಸುಳಿ ನೀ ಬಂದೆ
ಹಗಲ ಶಶಿಯು ನೀನಾದೆಯಾ
ಕಾಡು ಮಳೆಯನು ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು ಒಲವ ಕನಸನು
ಕನಸ ಉಡಪನೂ ತೊಡೆಸು ಬಾ 
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲೀ ನಿನ್ನ ನಿನಪೇ ಸುಂದರ
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲೀ ನಿನ್ನ ನಿನಪೇ ಸುಂದರ

ಚದುರಿದ ಮೊಡವ ಕೂಡಿಸೋ ಬಿಂದುವೇ
ನನ್ನಯ ನೀರವ ತೊರೆಯಲು ಸಾಧ್ಯವೇ
ಸುರಿವ ಮಳೆಯ ಪ್ರಾಯವೇ ನನಗಿಲ್ಲಾ
ನಿನ್ನ ಹೊರತು ಬೇರೆ ಸೊಗಸಿಲ್ಲಾ
ಸರಿದ ಸೂರ್ಯ ಕಿರಣ ಬೀರೋಲ್ಲ
ನಿನ್ನ ಹೊಳಪೇ ಮೀರೋ ಮಿನುಗಿಲ್ಲಾ
ಇರುಳ ದೀಪ ನೀನಾದೇಯಾ
ಕಳೆದ ದಿನವನೂ ಪಡೆದ ನೋವನೂ
ಕಾಡು ಮಳೆಯನು ಮರೆಸು ಬಾ
ಸಿಗುವ ನಗುವನು ನಾಳೆ ಕನಸನು
ಒಲವ ಉಡಪನೂ ತೊಡೆಸು ಬಾ 
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲೀ ನಿನ್ನ ನಿನಪೇ ಸುಂದರ
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲೀ ನಿನ್ನ ನಿನಪೇ ಸುಂದರ
-------------------------------------------------------------

ಸಿಂಪಲಾಗಿ ಒಂದ್ ಲವ್ ಸ್ಟೋರಿ (೨೦೧೩) - ಸ್ಮೈಲ್ ಇರುವಂತೇ ಸರಾಸರಿ
ಸಂಗೀತ : ಬಿ.ಜೆ.ಭರತ್ ಸಾಹಿತ್ಯ : ಗಾಯನ : ಸೋನು ನಿಗಮ್

ಸ್ಮೈಲ್ ಇರುವಂತೇ ಸರಾಸರಿ .. 
ಸ್ಮೈಲ್ ಇರುವಂತೆ ಸರಸಾರಿ ಲೀಕಾದಂತೆ ತುರಾತುರಿ
ಡ್ರೀಮಸಲಿ ಏನೋ ಹೆಚ್ಚುವರಿ ಮೆಮೋರಿಸಲ್ಲೂ ವಿಲೇವಾರಿ
ಹಾರ್ಟು ಹಠಮಾಡಿ ನಿನ್ನನೇ ರಮಿಸುತಿದೆ
ಫೀಲಿಂಗ್ಸ್ ಎದೆ ಬಂಧಿ
ಹೂವೊಂದು ಅರಳುತಿದೆ
ವಿಥೌಟ್ ರೀಸನ್ ಸುಮ್ಮನೇ
ಡಕ್ ಔಟಾದೇನಾ ಬೇಗನೆ 
ಸ್ಮೈಲ್ ಇರುವಂತೆ ಸರಸಾರಿ ಲೀಕಾದಂತೆ ತುರಾತುರಿ
ಡ್ರೀಮಸಲಿ ಏನೋ ಹೆಚ್ಚುವರಿ ಮೆಮೋರಿಸಲ್ಲೂ ವಿಲೇವಾರಿ
ಹಾರ್ಟು ಹಠಮಾಡಿ ನಿನ್ನನೇ ರಮಿಸುತಿದೆ
ಫೀಲಿಂಗ್ಸ್ ಎದೆ ಬಂಧಿ
ಹೂವೊಂದು ಅರಳುತಿದೆ
ವಿಥೌಟ್ ರೀಸನ್ ಸುಮ್ಮನೇ
ಡಕ್ ಔಟಾದೇನಾ ಬೇಗನೆ 
----------------------------------------------------------------------------------------------------------------------

ಸಿಂಪಲಾಗಿ ಒಂದ್ ಲವ್ ಸ್ಟೋರಿ (೨೦೧೩)-  ನನ್ನ ಪ್ರೀತಿ ಕುಸುರಿ 
ಸಂಗೀತ : ಬಿ.ಜೆ.ಭರತ್ ಸಾಹಿತ್ಯ : ಗಾಯನ : ಸೋನು ನಿಗಮ್

ನನ್ನ ಪ್ರೀತಿ ಕುಸುರಿ 
ನನ್ನ ಪ್ರೀತಿ ಕುಸುರಿ ಚೂರಾಯ್ತು ಚೂರಾದ ವರದಿ ಬಯಲಾಯ್ತು 
ಬಯಲಾದ ಕಣ್ಣ ಹನಿ ಕೂಡಿ ಎದ್ದಳೇ ಕೂಡಿಟ್ಟ ಕನಸು ಕರಗೋಯ್ತು 
ಕರಗೋದ ಹೃದಯ ಸಾವಾಯ್ತು ಸಾವಲ್ಲೂ ಸುಖವೊಂದನೂ ನಾ ಹೊಸೆಯಲೇ 
ಹೊಸೆದಂತ ಭೂಮಿ ಹದವಾಯ್ತು ಹದವಾದ ಬೆಳೆಯೂ ಬೆಳೆದಹೋಯ್ತು 
ಬೆಳೆದ ಹೋದ ಪ್ರೀತಿತಾನೇ ಬರಿದಾಯಿತು 
ಬರಿ ಭಾವನೆ ಹಳೆ ಪ್ರಾರ್ಥನೆ ಸುರೀ ಮಳೆಯನೇ ಸಂಪಾದನೇ 
ಸಂಪಾದನೇ ಸಂವೇದನೇ ಕಣ್ಣೀರಿನ ಸಂಭಾವನೆ 
ಸವಿಭಾವವ ಚೆಲುವೆಯೇ ಅವಳು ಅವಳನ್ನೇ ಕಳೆದೋದರೂ 
ನನ್ನ ಪ್ರೀತಿ ಕುಸುರಿ ಚೂರಾಯ್ತು ಚೂರಾದ ವರದಿ ಬಯಲಾಯ್ತು 
ಬಯಲಾದ ಕಣ್ಣ ಹನಿ ಕುಡಿ ಎದ್ದಳೇ ಕೂಡಿಟ್ಟ ಕನಸು ಕರಗೋಯ್ತು 
-------------------------------------------------------------

ಸಿಂಪಲಾಗಿ ಒಂದ್ ಲವ್ ಸ್ಟೋರಿ (೨೦೧೩) - ಸೆರೆಯಾದಂತೇ ಸರಾಸರಿ 
ಸಂಗೀತ : ಬಿ.ಜೆ.ಭರತ್ ಸಾಹಿತ್ಯ : ಗಾಯನ : ಸೋನು ನಿಗಮ್

ಸೆರೆಯಾದಂತೇ ಸರಾಸರಿ 
ಸೆರೆಯಾದಂತೇ ಸರಾಸರಿ  ಕರೆ ಬಂದಂತೆ ತುರಾತುರಿ 
ಮನಸೆಲ್ಲಾ ಹೆಚ್ಚುವರಿ ಕನಸೆಲ್ಲಾ ವಿಲೇವಾರಿ 
ನಾಳೇ ಅನ್ನೋದು ಇಂದೇಕೇ ಬರದಾಗಿದೆ 
ಹಾಳೆ ನಿನ್ನ ಹೆಸರ ಬರವಣಿಗೆ ಬಯಸುತಿದೆ 
ವಿನಾಕಾರಣ ಸುಮ್ಮನೇ ನವೀಕರಿಸಿದೇ ನನ್ನನ್ನೇ 
-------------------------------------------------------------

No comments:

Post a Comment