1120. ಸಿಂಗಾರಿ ಬಂಗಾರಿ (೧೯೮೯)

ಸಿಂಗಾರಿ ಬಂಗಾರಿ ಚಿತ್ರದ ಹಾಡುಗಳು
  1. ಸಿಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ 
  2. ವಡೇಯ ಶಶಿಯ ತಿಳಿ ಕಿರಣ ನೀ 
  3. ಶುಭ ನುಡಿಯೇ ಶುಭನುಡಿಯೇ ಶಕುನದ ಹಕ್ಕಿ 
  4. ಚಪಲ ಚಪಲ ಚಂಚಲ ಈ ವಯಸು 
  5. ಗಂಗೆ ಗಂಗೆ ಅಂತರಗಂಗೆ ನೀ ಹೊರ ಬಾರದೇ 
  6. ಅತ್ತ ಇತ್ತ ಬತ್ತದಾ ತುಂಬು ತುಂಬು ತೆನೆ ಇದೆ 
  7. ಶುಭ ನುಡಿಯೇ ಶುಭನುಡಿಯೇ ಶಕುನದ ಹಕ್ಕಿ (ದುಃಖ )
ಸಿಂಗಾರಿ ಬಂಗಾರಿ (೧೯೮೯)  ಸಿಂಗಾರಿ ನನ್ನ ಮರೆಯಬೇಡ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಶಿವರಾಜ

ಸಿಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
ಬಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು ಮರೆತು ಹೋಗನೆಂದು ಈ ಜೋತೆಯ ಬಿಡೇನು ಎಂದು
ಬಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
ಸಿಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ

ಕಂಗಳು ಎರಡಿವೆ ದೃಷ್ಟಿ ಒಂದು ತಾನೇ
ಇಬ್ಬರಾ ದೇಹಕು ಉಸಿರು ಒಂದು ತಾನೇ
ಆಕಾಶ ಬಿದ್ದರೂ ಹಾಡೋಣ ನಾವಿಬ್ಬರೂ
ಆ ಶಿವನೇ ಕರೆದರೂ ಹೋಗೋಣ ನಾವಿಬ್ಬರೂ
ನಮಗೆ ಸಾವು ಬರಬಹುದೋ ಸ್ನೇಹ ಸಾಯದೋ
ಸಿಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
ಬಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ

ತಬ್ಬಲಿ ಆದರೂ ನನಗೆ ನೀನೇ ಎಲ್ಲ
ಅಂಬಲಿ ಕುಡಿದರು ನಮಗೆ ಚಿಂತೆ ಇಲ್ಲ
ಬಾಳೊಂದು ಯುದ್ಧವೋ ಹೋರಾಡೋಕೇ ಸಿದ್ದವೋ
ಬೇರೆಲ್ಲ ಮಿಥ್ಯವೋ ಬಾ ಈ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದ ಹಾಡು ನಿಲ್ಲದೋ
ಸಿಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
ಬಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು ಮರೆತು ಹೋಗನೆಂದು ಈ ಜೋತೆಯ ಬಿಡೇನು ಎಂದು
ಬಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
ಸಿಂಗಾರಿ ನನ್ನ ಮರೆಯಬೇಡ ಬಾ ದೂರ ಹೋಗಬೇಡ
--------------------------------------------------------------------------------------------------------------------------

ಸಿಂಗಾರಿ ಬಂಗಾರಿ (೧೯೮೯) - ಉದಯ ಶಶಿಯ ತಿಳಿ ಕಿರಣ ನೀ 
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಂದ್ರಿಕಾ ಗುರುರಾಜ 

ಗಂಡು : ಉದಯ ಶಶಿಯ ತಿಳಿ ಕಿರಣ ನೀ ಮುಗುಳು ನಗುವಿನ ಭರಣಿ ನೀ
           ಶ್ವೇತಾ ... ತಾರಾಮಣಿಯೇ ನೀ ಬಾರೆ ಬಾರೆ ಚಕೋರಿ ನೀ ಶಶಿ .. ಬಾ
           ಕ್ಷೀರಸಾಗರದಲೆಯೇ ನೀ ಪ್ರೇಮ ಕುಸುಮ ಒಲಿಯೇ ನೀ
           ಬಾಳದಾರಿಯ ಗುರಿಯೇ ನೀ ಬೇಗನೇ ಮುಖ ತೋರು ನೀ
           ದಾವಾಗ್ನಿಯಾಗಿದೆ ನೋಡು ನೀ ನೀ ಬಾರದೇ ಹೋದರೆ ನಾ
           ಉಳಿಯಲಾರೆ ನೀ ಸೇರದೆ ಹೋದರೆ ನಾ ಬದುಕಲಾರೆ
           ಬೆಳದಿಂಗಳ ಚೆಲ್ಲುತ ಬಾರೆ ಮನದಂಗಳ ಬೆಳಗುತ ಬಾರೆ

ಹೆಣ್ಣು : ರವಿ... ಬಾ...   ರವಿ... ಬಾ...   ಮೇಘರಾಜನೇ ಹೋಗಿ ಬಾ ನನ್ನ ರಾಜನ ಕೂಗಿ ಬಾ
          ಶೋಕದಾ ಸಂದೇಶವಾ ಮರೆಯದೆ ನೀ ನೀಡಿ ಬಾ
          ಚೂರಾಗಿ ಹೋಯಿತು ಹೇಳಿ ಬಾ ಬಾ ಎಂದರೇ ಬಂದಾನೇ ನನ್ನರಸ
          ತಾ ಎಂದರೆ ತಂದಾನೆ ತನ್ನ ಮನಸ ಹೊಂಗಿರಣವ ಚೆಲ್ಲುತ ಬಾರೋ
         ನೀ ಬರದೇ ಉಳಿಯೇನು ಬಾರೋ
ಗಂಡು : ಉದಯ ಶಶಿಯ ತಿಳಿ ಕಿರಣ ನೀ ಮುಗುಳು ನಗುವಿನ ಭರಣಿ ನೀ
           ಶ್ವೇತಾ ... ತಾರಾಮಣಿಯೇ ನೀ ಬಾರೆ ಬಾರೆ ಚಕೋರಿ ನೀ ಶಶಿ .. ಬಾ

ಗಂಡು : ಉದಯ ಶಶಿಯ ತಿಳಿಯ ಕಿರಣ ನೀ
ಹೆಣ್ಣು : ಭುವನ ಬೆಳಗುತಿಹ ಜ್ಯೋತಿ ನೀ
ಗಂಡು : ಮುಗುಳು ನಗುವಿನ ಭರಣಿ ನೀ
ಹೆಣ್ಣು : ಮುಗುದೇ ಮನದ ಕಲ್ಪತರು ನೀ
ಗಂಡು : ಶ್ವೇತ ತಾರಾ ಮಣಿಯೆ ನೀ
ಹೆಣ್ಣು : ಬಾರೋ ಬಾರೋ ಚಕೋರ ನೀ
--------------------------------------------------------------------------------------------------------------------------

ಸಿಂಗಾರಿ ಬಂಗಾರಿ (೧೯೮೯) -  ಶುಭ ನುಡಿಯೇ ಶಕುನದ ಹಕ್ಕಿ 
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಹಂಸಲೇಖ, ಲತಾ ಹಂಸಲೇಖ

ಹೆಣ್ಣು : ಶುಭ ನುಡಿಯೇ ... ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ
ಗಂಡು : ಎಚ್ಚರಾದ ಪೆಚ್ಚು ಮನವು ಹುಚ್ಚೆದ್ದು ಹರಿಯುತಲಿರಲು
            ನಿದ್ದೆ ಇಲ್ಲ ತಣಿಸಿದರು ಹಲ್ಲಿಯೊಂದು ಲೊಚಗೊಟ್ಟುತ್ತಿತ್ತ
ಹೆಣ್ಣು : ಶುಭ ನುಡಿಯೇ ... ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ

ಗಂಡು : ಬೆಳಗಿನ ತಂಗಾಳಿ ಬಂದು  ಮುಸುಕು ಮೂಡುತಲಿರಲು 
            ಚಿಲಿಪಿಲಿ ಚಿಲಿಪಿಲಿ ಎಂದು ಹಾಲಕ್ಕಿ ಉಲಿಯುತ್ತಲಿತ್ತ 
ಹೆಣ್ಣು : ಶುಭ ನುಡಿಯೇ ... ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ
--------------------------------------------------------------------------------------------------------------------------

ಸಿಂಗಾರಿ ಬಂಗಾರಿ (೧೯೮೯) - ಚಪಲ ಚಪಲ ಚಪಲ  ವಯಸು
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಗುರುರಾಜ,  ಶಿವರಾಜ, ಕೋರಸ್

ಹೆಣ್ಣು : ಚಪಲ ಚಪಲ ಚಂಚಲ ಈ ವಯಸು ಈ ಸೊಗಸು ಹೈಸ್ಕೂಲು ದಾಟಿತು
          ಈ ಮನಸು ಯೌವ್ವನ ಕಾಲೇಜು ಸೇರಿತು
         ಚಪಲ ಚಪಲ ಚಂಚಲ ಈ ವಯಸು ಈ ಸೊಗಸು ಹೈಸ್ಕೂಲು ದಾಟಿತು

ಹೆಣ್ಣು : ಹರೆಯವೆಂಬ ಶಾಲೆಯ ಮೊದಲ ಪಾಠ ಯಾವುದು ಹೇಳು
          ತುಂಟತನದ ಪಾಠವೂ ಕಲಿಯದೇನೆ ಬರುವುದು ಕೇಳು
ಕೋರಸ್ : ಕಮಾನ್ ಕಮಾನ್ ವಿಲೇಜು ವೀರಣ್ಣ
               ಕಮಾನ್ ಕಮಾನ್ ಕಾಲೇಜು ಬೋರಣ್ಣ
ಗಂಡು : ಕುಂಟು ಕಾಲ ನವಿಲಂತೆ ಕುಣಿಯಬೇಡವೇ
          ಕುದುರೇ ಬಾಲ ತಲೆಯಲಿಟ್ಟು ನೀ ಕುಲಕ ಬೇಡವೇ
         ಈ ವಯಸು ಈ ಸೊಗಸು ಹೈಸ್ಕೂಲು ದಾಟಿತು
        ಚಪಲ ಚಪಲ ಚಂಚಲ ಈ ವಯಸು ಈ ಸೊಗಸು ಹೈಸ್ಕೂಲು ದಾಟಿತು

ಹೆಣ್ಣು : ಬೆಂಗಳೂರು ಪ್ಯಾಟಿಗೇ ಬಂದ ಯಾಕೋ ಮುರಳಿ ಲೋಲ ಮ್ಯಾಲೆ 
         ಕೆಳಗೆ ನೋಡುತ್ತಿರುವ ಕೈಯಲೇನು ಬಿದಿರಿನ ಕೋಲು 
ಕೋರಸ್ : ನಡಿ ಬುತ್ತಿ ಪುಡಿ ರೊಟ್ಟಿ ರೊಟ್ಟಿ ಚಟ್ನಿಯಲ್ಲಿ ಯಾತಕೋ  ಟಿಕೇಟು ತೇಗಿ ಇಲ್ಲಿ 
ಗಂಡು : ಚಾಟಿ ಇರದೇ ಬುಗುರಿಯಂತೇ ತಿರುಗ ಬೇಡವೇ 
           ತಿರುಗಿ ಒಮ್ಮೆ ಬೀಳಬೇಕು ನೀ ಮರೆಯ ಬೇಡವೇ 
         ಈ ವಯಸು ಈ ಸೊಗಸು ಹೈಸ್ಕೂಲು ದಾಟಿತು
        ಚಪಲ ಚಪಲ ಚಂಚಲ ಈ ವಯಸು ಈ ಸೊಗಸು ಹೈಸ್ಕೂಲು ದಾಟಿತು
--------------------------------------------------------------------------------------------------------------------------

ಸಿಂಗಾರಿ ಬಂಗಾರಿ (೧೯೮೯) - ಗಂಗೆ ಗಂಗೆ ಅಂತರಗಂಗೆ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.

ಗಂಗೇ .. ಗಂಗೇ .. ಅಂತರಗಂಗೇ ನೀ ಹೊರ ಬರದೇ ಗಂಗೇ  ಬಾರೇ ..
ತುಂಗೆಯ ತೀರದಲಿ ನಡು ನೀರಿನ ಆಳದಲಿ ದಾವಣಿ ನೆನಸದೇ ತಂದಾನ ಹಾಡುತ್ತ
ಬಿಂದಿಗೆ ಮುಳುಗಿಸಿದೆ ಬಾಗಿದ ನಿನ್ನೊಡಲು ಆ ರಂಗಿನ ಮಳೆಬಿಲ್ಲು
ನೋಡಿದ ಮನಸನು ತಂದಾನ ಆಡಿಸಿ ಕನಸಲಿ ಮುಳುಗಿಸಿದೆ
ನೀರಿನಿಂದ ನೀ ಬಂದೆ ನಾನು ಬೆವರಿ ನೀರಾದೇ
ನಿನ್ನ ನೋಡಿ ಸ್ಥಿರವಾದೆ ಆಗ ನೀನು ಮರೆಯಾದೇ
ಗಂಗೇ .. ಗಂಗೇ .. ಅಂತರಗಂಗೇ ನೀ ಹೊರ ಬರದೇ ಗಂಗೇ  ಬಾರೇ ..

ತೇರಿನ ಬೀದಿಯಲಿ ಈ ವಿರಹದ ರಾಗದಲಿ ನಿನ್ನಯ ರೂಪದ ಪಲ್ಲವಿ
ಗುನುಗುನುತ ನಡೆಯುತ ಸಾಗಿರಲು ಕೇಳಿತು ಕಿವಿಗಳಿಗೆ ಕಾಲ್ಗೆಜ್ಜೆಯ ಕಹಳೆ ಧ್ವನಿ
ಪಲ್ಲವಿ ಮರೆತು ಎದುರಿಗೆ ನೋಡಲು ನಿನ್ನಯ ಉತ್ಸವವೇ
ನಿನ್ನ ನೋಡಿ ಹೂವಾದೆ ನೀನು ದೇವ ಶಿಲೆಯಾದೆ
ನಾನು ಹೂ ಮಳೆಗರೆದೆ ನೀನು ವರವ ಕೊಡದಾದೆ
ಗಂಗೇ .. ಗಂಗೇ .. ಅಂತರಗಂಗೇ ನೀ ಹೊರ ಬರದೇ ಗಂಗೇ  ಬಾರೇ ..
--------------------------------------------------------------------------------------------------------------------------

ಸಿಂಗಾರಿ ಬಂಗಾರಿ (೧೯೮೯) - ಅತ್ತ ಇತ್ತ ಬತ್ತದಾ ತುಂಬುದಾ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಬಿ.ಆರ್.ಛಾಯ  ಶಿವರಾಜ

ಹೆಣ್ಣು : ಅತ್ತ ಇತ್ತ ಬತ್ತದಾ ತುಂಬು ತುಂಬು ತೆನೆ ಇದೆ
          ಕುಕ್ಕಿ ಕುಕ್ಕಿ ತಿನ್ನುವಾ ಹಕ್ಕಿ ಮೇಲೆ ಕುಂತಿದೆ
ಗಂಡು : ತಾರೆ ತಾರೆ ತಾರೆ ಕವಣೆ ಕಲ್ಲ ನೀಗಲೇ ಬೀಸುವೆ ಬೀಸುವೆ

ಗಂಡು : ಏರಿಯ ನೀರೇ ತೋಯುತ ಈ ಗದ್ದೆಯ ಒದ್ದೆಯಲಿ
            ಕಾಲಿಗೆ ಚುಚ್ಚುವ ಮುಳ್ಳುಗಿದ್ದರೇ ಕೂಗೆಲೆ ಸದ್ದಿನಲಿ
ಹೆಣ್ಣು : ಸೀರೆಯ ಅಂಚಿಗೆ ಹಾರುವ ಈ ಕೆಸರಿನ ಹಾವಳಿಗೆ
          ಮೊಣಕಾಲು ತೋರುತ ನಡೆಯುತಲಿದ್ದರೆ ಕಣ್ಣೆತ್ತ ನಿನ್ನಲ್ಲಿಗೇ
          ಕಣ್ಣ ತನ್ನ ಬೀಸಬೇಡ ಹೆಣ್ಣಿಗೆ ಹೊಯ್ ಹೋಗಯ್ಯಾ ಹೋಗಯ್ಯಾ ಹಕ್ಕಿ ಬಂತಯ್ಯ
ಗಂಡು : ಬೀಸುವೇ ಬೀಸುವೇ
ಹೆಣ್ಣು : ಅತ್ತ ಇತ್ತ ಬತ್ತದಾ ತುಂಬು ತುಂಬು ತೆನೆ ಇದೆ
          ಕುಕ್ಕಿ ಕುಕ್ಕಿ ತಿನ್ನುವಾ ಹಕ್ಕಿ ಮೇಲೆ ಕುಂತಿದೆ

ಗಂಡು : ರಾತ್ರೀಲಿ ಗದ್ದೆಯ ಕಾಯಲು ಆಹ್ ಬುತ್ತಿಯ ನೀ ತಂದರೆ 
            ಇಂದ್ರನ ಲೋಕದ ಬೇಸಾಯ ತೋರುವೆ ಮಂಚಿಗೆ ನೀ ಬಂದರೇ 
ಹೆಣ್ಣು : ಕಪ್ಪನೆ ಬಾನಿನ ಮಣ್ಣಲಿ ಆಹ್ ಬೆಳ್ಳಿಯ ಜ್ವಾಳಗಳು 
          ಜ್ವಾಳದ ಪೈರಿಗೇ ಸುಣ್ಣಾದ ಗಡಿಗೆಯ ಚಂದ್ರನ ಕಾವಲು 
           ಕಣ್ಣು ಕಟ್ಟು ಮಾಡಬೇಡ ಹೆಣ್ಣಿಗೇ ಹೊಯ್ ಹೋಗಯ್ಯಾ ಹೋಗಯ್ಯಾ ಹಕ್ಕಿ ಬಂತಯ್ಯಾ 
ಗಂಡು : ಬೆಸುವೇ ಬೀಸುವೆ 
ಹೆಣ್ಣು : ಅತ್ತ ಇತ್ತ ಬತ್ತದಾ ತುಂಬು ತುಂಬು ತೆನೆ ಇದೆ
          ಕುಕ್ಕಿ ಕುಕ್ಕಿ ತಿನ್ನುವಾ ಹಕ್ಕಿ ಮೇಲೆ ಕುಂತಿದೆ
ಗಂಡು : ತಾರೆ ತಾರೆ ತಾರೆ ಕವಣೆ ಕಲ್ಲ ನೀಗಲೇ ಬೀಸುವೆ ಬೀಸುವೆ
--------------------------------------------------------------------------------------------------------------------------

ಸಿಂಗಾರಿ ಬಂಗಾರಿ (೧೯೮೯) - ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಹಂಸಲೇಖ , ಲತಾ ಹಂಸಲೇಖ

ಹೆಣ್ಣು : ಶುಭ ನಡಿಯೇ ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ
          ಶುಭ ನಡಿಯೇ ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ
ಗಂಡು : ಉಸಿರಾ ತೂಗು ತೊಟ್ಟಿಲಲ್ಲಿ ಜೀವ ಮೈಯ್ಯಿ ಮರೆತಿರಲಾಗಿ
           ಒಳಗಿನಾವ ಚಿಂತೆಯ ಎಸರೋ ತಂತಾನ ಕನವರಿಸುತ್ತಿತ್ತ
ಹೆಣ್ಣು : ಶುಭ ನಡಿಯೇ ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ

ಗಂಡು : ನಟ್ಟಿರುಳಿನಾ ನೆರಳಿನಲ್ಲಿ ನೊಂದ ಜೀವ ಮಲಗಿರಲಾಗಿ
           ಸವಿಗನಸನು ಕಾಣುವಾಗ ಗೂಗೆಯೊಂದು ಗುಕ್ಕೆನುತ್ತಿತ್ತ
ಹೆಣ್ಣು : ಶುಭ ನಡಿಯೇ ಶುಭ ನುಡಿಯೇ ಶುಭ ನುಡಿಯೇ ಶಕುನದ ಹಕ್ಕಿ
--------------------------------------------------------------------------------------------------------------------------

No comments:

Post a Comment