- ಓಲಾಡುವಾ ಮನಸು ನಿನದಾಗಿದೆ
- ಶ್ರೀ ಮಂಜುನಾಥೇಶ್ವರ
- ಥಳುಕು ಪುಲುಕು ನಿನಗಾಗಿ
- ಮಲ್ಲಿಗೆ ಹೂವೊಂದು
ಸಿಗ್ನಲ್ ಮ್ಯಾನ್ ಸಿದ್ದಪ್ಪ (೧೯೭೧) - ಓಲಾಡುವಾ ಮನಸು ನಿನದಾಗಿದೆ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ತೆಕ್ಕೆಟೆ ನಾಗರಾಜ, ಗಾಯನ : ಪಿ.ಬಿ.ಎಸ್. ಬಿ.ಕೆ.ಸುಮಿತ್ರಾ
ಗಂಡು : ಓಲಾಡುವ ಮನಸೂ ನಿನದಾಗಿದೇ ನೀನೀರಲೂ ಜೊತೆಗೆ ಹಾಯಾಗಿದೇ
ಹೆಣ್ಣು : ಓಲಾಡುವ ಮನಸೂ ನಿಮದಾಗಿದೇ ನೀವಿರಲೂ ಜೊತೆಗೆ ಹಾಯಾಗಿದೇ
ಗಂಡು : ಬಳುಕಿ ನಡೆವಾ ಬಳ್ಳಿ ನಡುವಾ ಬಳಸಲೇನೂ ತೋಳಲಿ
ಬಳುಕಿ ನಡೆವಾ ಬಳ್ಳಿ ನಡುವಾ ಬಳಸಲೇನೂ ತೋಳಲಿ
ಮರೆಯದಂಥ ಕೊಡುಗೆಯೊಂದ ನೀಡಲೇನೂ ತುಟಿಯಲಿ
ಹೆಣ್ಣು : ಓಲಾಡುವ ಮನಸೂ ನಿಮದಾಗಿದೇ
ಗಂಡು : ನೀನೀರಲೂ ಜೊತೆಗೆ ಹಾಯಾಗಿದೇ
ಹೆಣ್ಣು : ನಿಮ್ಮ ನಗೆಯ ಹೂವ ಮೂಡಿದು ಹರುಷದಿಂದ ನಲಿಯುವೇ ..
ನಿಮ್ಮ ನಗೆಯ ಹೂವ ಮೂಡಿದು ಹರುಷದಿಂದ ನಲಿಯುವೇ ..
ನೀವೂ ನಡೆವಾ ಹಾದಿಯಲ್ಲಿ ನೆರೆಳಿನಂತೆ ಬಾಳುವೇ ..
ಗಂಡು : ಓಲಾಡುವ ಮನಸೂ ನಿನದಾಗಿದೇ
ಹೆಣ್ಣು : ನೀವಿರಲೂ ಜೊತೆಗೆ ಹಾಯಾಗಿದೇ
ಗಂಡು : ನೂರು ಮಾತು ಕಣ್ಣಿನಲ್ಲಿ ಹೇಗೆ ನಾನು ತಡೆಯಲಿ
ನೂರು ಮಾತು ಕಣ್ಣಿನಲ್ಲಿ ಹೇಗೆ ನಾನು ತಡೆಯಲಿ
ಹೆಣ್ಣು : ನಾನೇ ನಿಮ್ಮವಳೆಂದ ಮೇಲೆ ಬೇರೆ ಏನೂ ಹೇಳಲೀ ..
ಗಂಡು : ಓಲಾಡುವ ಮನಸೂ ನಿನದಾಗಿದೇ
ಹೆಣ್ಣು : ನೀವಿರಲೂ ಜೊತೆಗೆ ಹಾಯಾಗಿದೇ
ಇಬ್ಬರು : ಓಲಾಡುವ ಮನಸೂ ನಿನದಾಗಿದೇ ನೀನೀರಲೂ ಜೊತೆಗೆ ಹಾಯಾಗಿದೇ
--------------------------------------------------------------------------------------------------------------------------------------------------------------------------------------
ಸಿಗ್ನಲ್ ಮ್ಯಾನ್ ಸಿದ್ದಪ್ಪ (೧೯೭೧) - ಶ್ರೀ ಮಂಜುನಾಥೇಶ್ವರ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಬಿ.ಕೆ.ಸುಮಿತ್ರಾ
ಶ್ರೀ ಮಂಜುನಾಥೇಶ್ವರ ವರ ಧರ್ಮಸ್ಥಳ ವಾಸ ಈಶ ಜಗದೀಶ ಪರಿಪಾಲಿಸು ಸರ್ವೇಶಾ
ಶ್ರೀ ಮಂಜುನಾಥೇಶ್ವರ ವರ ಧರ್ಮಸ್ಥಳ ವಾಸ ಈಶ ಜಗದೀಶ ಪರಿಪಾಲಿಸು ಸರ್ವೇಶಾ
ಶ್ರೀ ಮಂಜುನಾಥೇಶ್ವರ
ಶರಣರ ಕರುಣಿಪ ಕರುಣಾನಿಧಿಯೇ ವರಗುರು ಪೂಜಿತ ಶಂಕರ ವಿಭೂವೇ
ಶರಣರ ಕರುಣಿಪ ಕರುಣಾನಿಧಿಯೇ ವರಗುರು ಪೂಜಿತ ಶಂಕರ ವಿಭೂವೇ
ಮರೆಯದೇ ಮನದಲಿ ಸ್ವಾಮಿ ಕೂರುವ ಗಿರಿಜಾರಮಣನೇ ಪರಶಿವ ಪ್ರಭುವೇ
ಶ್ರೀ ಮಂಜುನಾಥೇಶ್ವರ
ನಂಬಿಹೇ ನಾ ನಿನ್ನ ತುಂಬಿದ ಮನದಿ ತುಂಬು ಭಾಗ್ಯವನು ಬೇಡೇನು ದೇವಾ
ನಂಬಿಹೇ ನಾ ನಿನ್ನ ತುಂಬಿದ ಮನದಿ ತುಂಬು ಭಾಗ್ಯವನು ಬೇಡೇನು ದೇವಾ
ತುಂಬಿದ ಜೀವನ ನದಿಗೋರಿ ಭಾಗ್ಯದಿ ತುಂಬಿರಲೆಂದಿಗೂ ಕರುಣಿಸೂ ದೇವಾ
ಶ್ರೀ ಮಂಜುನಾಥೇಶ್ವರ
ಸಿರಿತನ ಸಂಪದ ಆರಿಸಲಿಲ್ಲಾ ಪರನುಡಿ ನಿಂದೆಯ ಪರಿಹರಿಸಯ್ಯಾ
ಸಿರಿತನ ಸಂಪದ ಆರಿಸಲಿಲ್ಲಾ ಪರನುಡಿ ನಿಂದೆಯ ಪರಿಹರಿಸಯ್ಯಾ
ಸದಾ ಸುಮಂಗಲೀ ನೀನಾಗೆಂದೂ ಹರಿಸಿ ಎನ್ನನೂ ಪ್ರಭೋ ಮಹೇಶಾ
ಶ್ರೀ ಮಂಜುನಾಥೇಶ್ವರ ವರ ಧರ್ಮಸ್ಥಳ ವಾಸ ಈಶ ಜಗದೀಶ ಪರಿಪಾಲಿಸು ಸರ್ವೇಶಾ
ಶ್ರೀ ಮಂಜುನಾಥೇಶ್ವರ
--------------------------------------------------------------------------------------------------------------------------------------------------------------------------------------
ಸಿಗ್ನಲ್ ಮ್ಯಾನ್ ಸಿದ್ದಪ್ಪ (೧೯೭೧) - ಥಳುಕು ಪುಲುಕು ನಿನಗಾಗಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಟೆಕ್ಕೆಟ್ ನಾಗರಾಜ, ಗಾಯನ : ಎಲ್.ಆರ್.ಈಶ್ವರಿ
ಥಳಕು ಪುಲುಕು ನಿನಗಾಗಿ ರಸಿಕ ನೋಡೂ.. ಓ
ಸೊಬಗು ಬೆಡಗು ನಿನಗಾಗೇ ಬಂದು ಕೂಡು
ಥಳಕು ಪುಲುಕು ನಿನಗಾಗಿ ರಸಿಕ ನೋಡೂ.. ಓ
ಸೊಬಗು ಬೆಡಗು ನಿನಗಾಗೇ ಬಂದು ಕೂಡು
ಆಆಆ.. ಆಆಆ.. ಆಆಆ
ನೋಟದಲ್ಲಿ ಮೋಡಿ ಮಾಡಿ ಆಡಿಸುವೇ ನಿನ್ನ
ಮಾತಿನಲ್ಲೇ ಸ್ನೇಹ ತೋರಿ ನೀಡುವೆನೂ ನನ್ನಾ
ನೋಟದಲ್ಲಿ ಮೋಡಿ ಮಾಡಿ ಆಡಿಸುವೇ ನಿನ್ನ
ಮಾತಿನಲ್ಲೇ ಸ್ನೇಹ ತೋರಿ ನೀಡುವೆನೂ ನನ್ನಾ
ಲಲ್ಲೆಯಲ್ಲೇ ಮತ್ತನಿಲ್ಲೇ ಭರಿಸಲೂ ನಾ ಬಲ್ಲೇ ..
ಥಳಕು ಪುಲುಕು ನಿನಗಾಗಿ ರಸಿಕ ನೋಡೂ.. ಓ
ಸೊಬಗು ಬೆಡಗು ನಿನಗಾಗೇ ಬಂದು ಕೂಡು
ನಿನಗಾಗೇ ಬಂದು ಕೂಡು....
ಆಆಆ.. ಆಆಆ.. ಆಆಆ
ಆಸೆಯಿಂದ ಓಡಿ ಬಂದೇ ಸೇರಲೆಂದೇ ನಿನ್ನಾ
ಪ್ರೇಮದಿಂದಾ ನಿನಗೆ ತಂದೇ ಹೀರೊ ಈ ಮಧುವನ್ನಾ...
ಆಸೆಯಿಂದ ಓಡಿ ಬಂದೇ ಸೇರಲೆಂದೇ ನಿನ್ನಾ
ಪ್ರೇಮದಿಂದಾ ನಿನಗೆ ತಂದೇ ಹೀರೊ ಈ ಮಧುವನ್ನ
ಮುತ್ತಿನಲ್ಲೇ ಮತ್ತೇನಲ್ಲೇ ತರಿಸಲೂ ನಾ ಬಲ್ಲೇ..
ಥಳಕು ಪುಲುಕು ನಿನಗಾಗಿ ರಸಿಕ ನೋಡೂ.. ಓ
ಸೊಬಗು ಬೆಡಗು ನಿನಗಾಗೇ ಬಂದು ಕೂಡು
ನಿನಗಾಗೇ ಬಂದು ಕೂಡು.... ನಿನಗಾಗೇ ಬಂದು ಕೂಡು....
-------------------------------------------------------------------------------------------------------------------------------------------------------------------------------------
ಸಿಗ್ನಲ್ ಮ್ಯಾನ್ ಸಿದ್ದಪ್ಪ (೧೯೭೧) - ಮಲ್ಲಿಗೆ ಹೂವೊಂದು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಟೆಕ್ಕೆಟ್ ನಾಗರಾಜ, ಗಾಯನ : ಪಿ.ಬಿ.ಎಸ್. ಬಿ.ಕೆ.ಸುಮಿತ್ರಾ
ಗಂಡು : ಲಾ..ಲಲಲ ಲಾ ಓಹೋಹೊಹೋ (ಹೂಂಹೂಂ )
ಮಲ್ಲಿಗೇ ಹೂವೊಂದೂ (ಹೂಂಹೂಂಹೂಂ) ಮೋದದೇ ಅರಳಿತ್ತು (ಹೂಂಹೂಂಹೂಂ)
ಮಧುಕಡಲಾಗಮನ (ಹೂಂಹೂಂ) ಕಾದಿತ್ತು
ಮದುವೇ ಸುಗಂಧದ ಪ್ರಣಯದ ಓಲೆಗೆ ಭೃಮರವ ತಾ ನೋಡಿ ಬಂದಿತ್ತು
ಮಲ್ಲಿಗೇ ಹೂವೊಂದೂ ಮೋದದೇ ಅರಳಿತ್ತು ಮಧುಕಡಲಾಗಮನ ಕಾದಿತ್ತು
ಗಂಡು : ಅರೇ ತೆರೆದಾ ಕೆಂದುಟಿಗಳ ನಡುವೇ ಮುಗುಳುನಗೇ ನಾಟ್ಯವೇ ನಡೆದಿತ್ತೂ
ಆಸೇ ತುಂಬಿದಾ ಕಣ್ಗಳಲೇಕೋ ನಾಚುಗೇ ತಾನದು ನೆಲೆಸಿತ್ತೂ
ಬಯಕೆಯೂ ಅರಳಿತ್ತೂ (ಹೂಂಹೂಂಹೂಂ) ಮನವೂ ಹಸಿದಿತ್ತೂ (ಹೂಂಹೂಂ)
ಭೃಮರವೂ ತಾನದ ಕಂಡಿತ್ತೂ ಆ ತುಟಿಗಳ ಮೆಲ್ಲನೇ ಹೊಚ್ಚಿಟ್ಟಿತ್ತೂ.. ಮುದ್ದಿಸಿತೂ .. (ಅಹ್ಹಹ್ಹಹಹ)
ಮಲ್ಲಿಗೇ ಹೂವೊಂದೂ ಮೋದದೇ ಅರಳಿತ್ತು ಮಧುಕಡಲಾಗಮನ ಕಾದಿತ್ತು
ಗಂಡು : ಬಯಕೆಯ ಲತೆಯಲಿ ಹೂವರಳಿತ್ತೂ ವರುಷಗಳಾಸೆಯೂ ನೆನಪಾಗಿತ್ತೂ
ಆದರೂ ಏಕೋ ಈ ಬಿಗುಮಾನ ಆಸೆಗೇ ನಾಚುಗೇ ಸನ್ಮಾನ
ನಾಯಕ ನೀನೆಂದೂ (ಹೂಂಹೂಂಹೂಂ) ನಾಯಕಿ ತಾನೆಂದೂ (ಹೂಂಹೂಂಹೂಂ)
ಕನಸಿನ ಮಡಿಲಲಿ ಮಲಗಿತ್ತೂ ತನ್ನನು ತಾನೇ ಮರೆಸಿತ್ತೂ.. ಮರೆಸಿತ್ತೂ.. (ಹ್ಹೂಹ್ಹೂಹೂಂಹೂಂ)
ಮಲ್ಲಿಗೇ ಹೂವೊಂದೂ ಮೋದದೇ ಅರಳಿತ್ತು ಮಧುಕಡಲಾಗಮನ ಕಾದಿತ್ತು
ಮಲ್ಲಿಗೇ ಹೂವೊಂದೂ ಮೋದದೇ ಅರಳಿತ್ತು ಮಧುಕಡಲಾಗಮನ ಕಾದಿತ್ತು
ಅಹ್ಹಹ್ಹಹ್ಹಹ್ಹಾ.. ಓಹೋಹೊಹೋ.. ಲಾಲಲಲಲ್ಲಲ್ಲಲ್ಲಾ
--------------------------------------------------------------------------------------------------------------------------------------------------------------------------------------
No comments:
Post a Comment