1330. ಸಿರಿವಂತ (2006)


ಸಿರಿವಂತ ಚಲನಚಿತ್ರದ ಹಾಡುಗಳು
  1. ಮೇಘ ಮೇಘ
  2. ಯಾರೋ ಯಾರೋ 
  3. ಕೂಸುಮರಿ ಕೂಸುಮರಿ
  4. ಎದೆಗೆ ಸಿಡಿಲು
  5. ಹ್ಯಾಪೀ ಡೇ.. ಹ್ಯಾಪಿ ಡೇ
ಸಿರಿವಂತ (2006) - ಮೇಘ ಮೇಘ
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಹರಿಹರನ, ಚಿತ್ರಾ

ಕೋರಸ್ : ಸಾನನನನ ಸಾನನನನನ  ಸಾನನನನ ಗಗರೇ...
                ಸಾನನನನ ಸಾನನನನನ  ಸಾನನನನ ಗಗರೇ...  ಸಾಸನನ
ಗಂಡು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
           ಶ್ರಾವಣ ಸಂಜೆಯ ಚುಂಬಿಸುವ ಚೆಲುವಿನ ಚಿನ್ನದ ಮೇಘಾ
           ಚೈತ್ರದ ಎದೆಯಲ್ಲಿ ಉದಯಿಸಿದ ಮಿನುಗುವ ಬೆಳ್ಳಿಯ ಮೇಘಾ
ಹೆಣ್ಣು : ಹುಣ್ಣಿಮೆ ಹೊಳೆಯಲ್ಲಿ ತೇಲಿರುವ ಅಮೃತಧಾರೆಯ ಮೇಘಾ
          ಮೂಡಣದಗಲಲಿ ಕಂಪಿಸುವ ಸಂದ್ಯಾ ಸಮಯದಿ ಮೇಘಾ ಮೇಘಾ
ಗಂಡು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
ಹೆಣ್ಣು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
ಗಂಡು : ಶ್ರಾವಣ ಸಂಜೆಯ ಚುಂಬಿಸುವ ಚೆಲುವಿನ ಚಿನ್ನದ ಮೇಘಾ
ಹೆಣ್ಣು : ಚೈತ್ರದ ಎದೆಯಲ್ಲಿ ಉದಯಿಸಿದ ಮಿನುಗುವ ಬೆಳ್ಳಿಯ ಮೇಘಾ

ಕೋರಸ್ : ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್
               ಚುಮ್  ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್
ಗಂಡು : ನೀಲಿಯ ಗಗನಕೆ ಮುತ್ತುಗಳಂತೆ ಕಂಗಳಿಸುವ ಮೇಘಾ
ಹೆಣ್ಣು   : ಸೂರ್ಯನ ನಡಿಗೆಗೆ ನಾಚುತ ನಾಚುತ ಬಿಂಕದಿ ಸರೆಯುವ  ಮೇಘಾ
ಗಂಡು   : ಸಾಗರದಲೆಗಳ ರಮಿಸಿ ನಲಿಯುವ ಚೆಲುವಿನ ಮೇಘಾ
ಹೆಣ್ಣು  : ಸಿಡಿಲಿಗೆ ನಡಗುತಾ ಕರಗಿ ಹನಿ ಹನಿಯಾಗುವ ಮೇಘಾ
ಗಂಡು : ಭೂರಮೆಗೆ ತಂಪೆರೆದು ಹಸಿರಹಸಿರಾ ಫಲ ಪಡೆದು
           ಬಿಸಿಲಿನ ನೆರವಲಿ ಕುಣಿಯುತ ತವರಿಗೆ ಮರಳುವ ಮೇಘಾ ಮೇಘಾ
ಹೆಣ್ಣು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
ಗಂಡು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ

ಕೋರಸ್ : ಧನನ ಧನನ ಧನೀ .. ಧನನ ಧನನ ಧನೀ .. ಧನನ ಧನನ ಧನೀ .. ಧನನ ಧನನ ಧನೀ ..
                ಧನನ ಧನನ ಧನೀ .. ಧನನ ಧನನ ಧನೀ .. ಧನನ ಧನನ ಧನೀ .. ಧನನ ಧನನ ಧನೀ ..
ಹೆಣ್ಣು : ಚಿಲಿಪಿಲಿ ನೀಲಿ ಮುತ್ತಿನ ಮಣಿಯ ಪಸರಿಸೋ ಇಬ್ಬನಿ ಮೇಘಾ 
ಗಂಡು : ಋತುಗಳ ಜೊತೆಗೆ ಸರಸವನಿರಿಸಿ ತಂಬಲೆರೆಯುವ ಮೇಘಾ 
ಹೆಣ್ಣು : ಕಾಮನ ಬಿಲ್ಲಿನು ಬಳಸಿ ಶೋಭಿಸು ಬಣ್ಣದ ಮೇಘಾ 
ಗಂಡು : ಬರುವುಗಳ ಎದೆಯನು ಕುಣಿಸಿ ಮಳೆಹನಿಯಾಗುವ ಮೇಘಾ 
ಹೆಣ್ಣು : ಕವಿಗಳಿಗೆ ಸ್ಫೂರ್ತಿಯುನೀ  ಕವನಗಳಾ ಕೀರ್ತಿಯುನೀ   
          ಲೋಕದ ಕಂಗಳ ಮೆಚ್ಚಿಸೋ ನಿತ್ಯ ಸುಂದರಿ ಮೇಘಾ ಮೇಘಾ 
ಗಂಡು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
ಹೆಣ್ಣು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
ಗಂಡು : ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
           ಮೇಘಾ ಮೇಘಾ ಮೇಘಾ ಮೇಘಾ ಮೇಘಾ ಮೇಘಾ
           ಶ್ರಾವಣ ಸಂಜೆಯ ಚುಂಬಿಸುವ ಚೆಲುವಿನ ಚಿನ್ನದ ಮೇಘಾ
           ಚೈತ್ರದ ಎದೆಯಲ್ಲಿ ಉದಯಿಸಿದ ಮಿನುಗುವ ಪ್ರೇಮಿಯ ಮೇಘಾ
ಹೆಣ್ಣು : ಹುಣ್ಣಿಮೆ ಹೊಳೆಯಲ್ಲಿ ತೇಲಿರುವ ಅಮೃತಧಾರೆಯ ಮೇಘಾ
          ಮೂಡಣದಗಲಲಿ ಕಂಪಿಸುವ ಸಂದ್ಯಾ ಸಮಯದ ಮೇಘಾ ಮೇಘಾ
ಗಂಡು : ಮೇಘಾ ಮೇಘಾ ಮೇಘಾ
ಹೆಣ್ಣು : ಮೇಘಾ ಮೇಘಾ ಮೇಘಾ
ಗಂಡು : ಮೇಘಾ ಮೇಘಾ ಮೇಘಾ
ಹೆಣ್ಣು : ಮೇಘಾ ಮೇಘಾ ಮೇಘಾ
ಗಂಡು : ಶ್ರಾವಣ ಸಂಜೆಯ ಚುಂಬಿಸುವ ಚೆಲುವಿನ ಚಿನ್ನದ ಮೇಘಾ
ಹೆಣ್ಣು :  ಚೈತ್ರದ ಎದೆಯಲ್ಲಿ ಉದಯಿಸಿದ ಮಿನುಗುವ ಬೆಳ್ಳಿಯ ಮೇಘಾ
---------------------------------------------------------------------------------------------- 

ಸಿರಿವಂತ (2006) - ಯಾರೋ ಯಾರೋ  
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ 

ಕೋರಸ್ : ಓಓಓಓಓಓಓ... ಓಓಓಓಓ
ಗಂಡು : ಯಾರೋ ಯಾರೋ ನೀನಾ ಇವರೂ
            ನನ್ನಾ ಹೊತ್ತು ನಡೆವಾ ಈ ಗುಣವಂತರೂ
            ಬಂಧು ಬಳಗ ಅಲ್ಲಾ.. ಈ ಹೃದಯವಂತರೂ ..
            ಬಂದು ಹೋಗೋ ನಡುವೇ ಸಂಬಂಧ ತಂದರೂ
            ನಾಲ್ಕು ಹೆಗಲ ಮೇಲೆ ಈ ಬದುಕಿನ ಕೊನೆ ಯಾತ್ರೇ
            ಮುಷ್ಠಿ ಮಣ್ಣಿನಲ್ಲಿ ಮುಗಿಯುವ ಈ ಜಾತ್ರೇ ..
            ಯಾರೋ...  ಯಾರೋ..  ಯಾರೋ...  ಯಾರೋ..
ಕೋರಸ್ : ಆಆಆಅ ಆಆಆಅ ಆಆಆಅ

ಗಂಡು : ಮದುವೇ ಎಂಬ ಹಬ್ಬದಲಿ ಸಪ್ತಪದಿಯ ತುಳಿಯುವಲಿ
            ಕಡೆಯವರೆಗೂ ಇರುವೇನೆಂದೂ ಮಾತು ಕೊಟ್ಟೇನು ..
            ನಂಬಿ ನನ್ನ ಬಾ ಎಂದೂ ಕೈಯ್ಯ ಹಿಡಿದೇನೂ
            ಕೊಟ್ಟ ಮಾತೂ ನಡೆಸಲಿಲ್ಲಾ ನಿನ್ನ ನಂಬಿಕೆ ಈ ಉಳಿಸಲಿಲ್ಲಾ
            ಅರ್ಧದಲ್ಲಿ ಕೈಯ್ಯ್ ಕೊಟ್ಟೂ ಹೊರಟು ಬಿಟ್ಟೇನೂ
            ನಡು ನೀರಿನಲ್ಲಿ ನಿನ್ನ ನಾನೂ ಬಿಟ್ಟು ಬಂದೇನೂ
            ಕ್ಷಮಿಸು ಬಿಡು ನನ್ನಾ.. (ಆಆಆ) ಮರಳಿ ಬರುವೇ ಚಿನ್ನಾ  (ಆಆಆ)
            ಕ್ಷಮಿಸು ಬಿಡು ನನ್ನಾ.. ಮರಳಿ ಬರುವೇ ಚಿನ್ನಾ
            ನಿನ್ನ ಮಡಿಲ ಕಂದನಾಗಿ ಜನಿಸಿ ಬರುವೇನೂ
            ಆ ಜನ್ಮ ಪೂರ್ತಿ ನಿನ್ನ ಪ್ರೀತಿ ಅಲ್ಲೇ ಕಳೆವೆನೂ
            ಯಾರೋ ಯಾರೋ ಈ ನಾಲ್ವರೂ
            ನನ್ನಾ ಹೊತ್ತು ನಡೆವಾ ಈ ಗುಣವಂತರೂ 

ಕೋರಸ್ : ಆಆಆಅ ಆಆಆಅ ಆಆಆಅ
ಗಂಡು : ಒಡವೇ ಇಂದು ದೇವರಂತೇ ಜಗವೇ ಹಣದ ಮುಷ್ಟಿಯಲ್ಲಂತೇ
           ಹಣದ ಮುಂದೆ ತಂದೆ ತಾಯಿ ಲೆಕ್ಕಕಿಲ್ಲವೋ..
           ಜನ್ಮ ಕೊಟ್ಟ ಜೀವಕ್ಕಿಲ್ಲಿ ಬೆಲೆಯೇ ಇಲ್ಲವೋ
           ನೀತಿಗೆಟ್ಟ ಮಕ್ಕಳಿಗೇ .. ಪ್ರೀತಿ ಕೊಟ್ಟು ಬೆಳೆಸಿದೇನೂ
           ಕೊಳ್ಳಿ ಇಡುವ ಬದಲೂ ಅವರೂ ಕೊಳ್ಳೇ ಹೊಡೆದರೂ
           ನನ್ನ ಶವವ ಅನಾಥ ಮಾಡಿ ಓಡಿ ಹೋದರೂ ..
           ನಾನು ಪ್ರೀತಿಸಿದಾ.. (ಆಆಆಅ ) ಸಮಾಜ ನನ್ನಡೋನೇ (ಆಆಅಅ )
           ನಾನು ಪ್ರೀತಿಸಿದಾ.. ಸಮಾಜ ನನ್ನಡೋನೇ
           ಹರಿದು ಬಂದು ಸಾಗರವಾಗಿ ಕಂಬನಿಯಲ್ಲಿ
           ನನ್ನ ಜನ್ಮ ಸ್ವಾರ್ಥಕವಾಯಿತು ಕಲಿಯುಗದಲ್ಲಿ
            ಯಾರೋ ಯಾರೋ ಈ ನಾಲ್ವರೂ
            ನನ್ನಾ ಹೊತ್ತು ನಡೆವಾ ಈ ಗುಣವಂತರೂ 
            ಬಂಧು ಬಳಗ ಅಲ್ಲಾ.. ಈ ಹೃದಯವಂತರೂ ..
            ಬಂದು ಹೋಗೋ ನಡುವೇ ಸಂಬಂಧ ತಂದರೂ
            ನಾಲ್ಕು ಹೆಗಲ ಮೇಲೆ ಈ ಬದುಕಿನ ಕೊನೆ ಯಾತ್ರೇ
            ಮುಷ್ಠಿ ಮಣ್ಣಿನಲ್ಲಿ ಮುಗಿಯುವ ಈ ಜಾತ್ರೇ ..
            ಯಾರೋ...  ಯಾರೋ..  ಯಾರೋ...  ಯಾರೋ..
----------------------------------------------------------------------------------------------   

ಸಿರಿವಂತ (2006) - ಕೂಸುಮರಿ 
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ಕೂಸುಮರಿ ಕೂಸುಮರಿ ನನ್ನಾ ಮುದ್ದು ಕಂದ ಮರಿ
            ಕೂಸುಮರಿ ಕೂಸುಮರಿ ನನ್ನಾ ಮುದ್ದು ಕಂದ ಮರಿ
            ಲಾಲಿ ಹಾಡು ಹಾಡಿದೆನು ಲಾಲಿ ಪಪ್ಪು ನೀಡಿದೆನು
            ಅಪ್ಪಿ ಕೊಟ್ಟ ಪಪ್ಪೀ ಇಂದು ನಿನಗೆ ಮದುವೇನಾ. ಅಹ್ಹಹ್ಹಾ..
            ನನ್ನ ಕಣ್ಣೇ ನಂಬೋದಿಲ್ಲಾ ಮಗಳೇ ನಿಜವೇನಾ
ಕೋರಸ್ : ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್.... ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್  
ಗಂಡು : ಅಲೇಅಲೇಅಲೇಅಲೇ ಕೂಸುಮರಿ ಕೂಸುಮರಿ ನನ್ನಾ ಮುದ್ದು ಕಂದ ಮರಿ

ಗಂಡು : ಹತ್ತು ಮಕ್ಕಳ ಹೆತ್ತು ಮುತೈದೆಯಾಗಿ ಬಾಳು 
           ಗಂಡು ಮಕ್ಕಳಾದ್ರೆ ವರದಕ್ಷಿಣೆ ಜಾಸ್ತಿ ಕೇಳು.. ಹ್ಹಾಂ  
ಹೆಣ್ಣು : ಹೆಣ್ಣಾಗಲಿ ಗಂಡಾಗಲಿ ಒಂದೇ ಮಗು ಸಾಕು 
          ಅಂಥಾ ಮಗು ದೇಶಕೊಳ್ಳೇ ಪ್ರಜೆಯಾಗಿರಬೇಕು 
ಗಂಡು : ಗಾಂಧೀ ನೆಹರು ಅಬ್ದುಲ ಕಲಾಂ ಸಿ.ವಿ.ರಾಮನ್ ವಿಶ್ವೇಶ್ವರಯ್ಯ
           ದೇಶದ ಕನ್ನಡಿ ಅವರಮ್ಮ ಆ ಕನ್ನಡಿ ಮಗುವಿಗೆ ಹಿಡಿಯಮ್ಮಾ
           ಮುತ್ತಿನಂಥ ಮಾತೆ ಎಂದು ಮರೆಯಬೇಡಮ್ಮಾ 
ಹೆಣ್ಣು : ಕೂಸುಮರಿ ಕೂಸುಮರಿ ನನ್ನಾ ಮುದ್ದು ಕಂದ ಮರಿ
         ಕೂಸುಮರಿ ಕೂಸುಮರಿ ನನ್ನಾ ಮುದ್ದು ಕಂದ ಮರಿ

ಹೆಣ್ಣು : ಆದರ್ಶ ದಂಪತಿಗಳು ಲಕ್ಷ್ಮಿ ನಾರಾಯಣ ಜೋಡಿ
          ನಿಮ್ಮ ಸ್ಫೂರ್ತಿಯಿಂದಾ ನಾವು ಬಾಳುವೆವೂ ಕೂಡಿ 
ಗಂಡು : ಕಹಿಯಾಗಲಿ ಸಿಹಿಯಾಗಲಿ ಸಮನಾಗಿರಬೇಕು 
ಹೆಣ್ಣು : ನೋವಲ್ಲಿಯೂ ಸಂತೋಷದ ಗೆಳೆತನವಿರಬೇಕು 
ಗಂಡು : ಅಮ್ಮನ ಹಾಗೆ ನೀ ಬಾಳಮ್ಮಾ ಅವಳ ನಗುವೀನ ನೆರಳಾಗಮ್ಮಾ
            ಮನದ ಮಲ್ಲಿಗೆ ನೀನಾಗಮ್ಮಾ  ಮನೆಯ ಬೆಳಕು ನೀನೇನಮ್ಮಾ
ಹೆಣ್ಣು : ಯಾವ ಜನ್ಮದ ಪುಣ್ಯದ ಫಲವೋ ನಿಮ್ಮ ಮಗಳಾದೇ .. 
ಇಬ್ಬರು: ಕೂಸುಮರಿ ಕೂಸುಮರಿ ನನ್ನಾ ಮುದ್ದು ಕಂದ ಮರಿ
            ಲಾಲಿ ಹಾಡು ಹಾಡಿದೆನು ಲಾಲಿ ಪಪ್ಪು ನೀಡಿದೆನು
            ಅಪ್ಪಿ ಕೊಟ್ಟ ಪಪ್ಪೀ ಇಂದು ನಿನಗೆ  ಮದುವೇನಾ
            ನನ್ನ ಕಣ್ಣೇ ನಂಬೋದಿಲ್ಲಾ ಮಗಳೇ ನಿಜವೇನಾ
ಕೋರಸ್ : ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್.... ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್  
---------------------------------------------------------------------------------------------

ಸಿರಿವಂತ (2006) - ಎದೆಗೆ ಸಿಡಿಲು
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ, 

ಬಡಿಯಿತೇ ಸಿಡಿಲು ನಡುಗಿತೇ ಮುಗಿಲು ಎದೆಗೆ ಸಿಡಿಲು ಬಡಿಯಿತೇ....
(ಆಆಆ... ಆಆಆ... ಆಆಆ... ಆಆಆ... ಆಆಆ... )
ಎದೆಗೆ ಸಿಡಿಲು ಬಡಿಯಿತೇ ಮನದ ಮುಗಿಲು ನಡುಗಿತೇ
ಮಮತೆ ಪ್ರೀತಿ ತುಂಬಿದಾ ಮೋಡವು ಚೂರಾಯಿತೇ
ಹರಿಯಿತೇ ಕಂಬನಿ ಹರಿಯಿತೇ ತಿಳಿಯದೆ ಏಕೋ ತಿಳಿಯದೇ
ಎದೆಗೆ ಸಿಡಿಲು ಬಡಿಯಿತೇ ಮನದ ಮುಗಿಲು ನಡುಗಿತೇ
ಮಮತೆ ಪ್ರೀತಿ ತುಂಬಿದಾ ಮೋಡವು ಚೂರಾಯಿತೇ

(ಆಆಆ... ಆಆಆ... ಆಆಆ... ಆಆಆ... ಆಆಆ... )
ಹರಿದ ಬಟ್ಟೆ ಮಾನವನ್ನು ಮುಚ್ಚಲಾರದು ಹಳಸಿದೂಟ ಹಸಿವೆಯನ್ನೂ ನೀಗಲಾರದು
ಕೊಚ್ಚೇ ನೀರ ಶುದ್ಧ ಮಾಡಿ ಕುಡಿಯಲಾಗದು ವೆಚ್ಚ ಮಾಡಿದ ಹಣವು ಎಂದು ತಿರುಗಿ ಬಾರದು
ಮನೆಯ ಹತ್ತಿ ಉರಿಯುವಾಗ ಬೆಳಕು ಏತಕೇ ...
ಮನೆಯ ಹತ್ತಿ ಉರಿಯುವಾಗ ಬೆಳಕು ಏತಕೇ
ಆ ಬೆಂಕಿಯಲ್ಲಿ ಬೆಂದ ಮನಕೆ ಬದುಕು ಏತಕೆ.. ಬದುಕು ಏತಕೆ
ಎದೆಗೆ ಸಿಡಿಲು ಬಡಿಯಿತೇ ಮನದ ಮುಗಿಲು ನಡುಗಿತೇ
ಮಮತೆ ಪ್ರೀತಿ ತುಂಬಿದಾ ಮೋಡವು ಚೂರಾಯಿತೇ

ಮರಳು ಗಾಡಿನಲ್ಲಿ ಮಲ್ಲೇ ಹೂವು ಬೆಳೆವುದೇ ಮಮತೆ ಇರದ ಮಕ್ಕಳಿಂದ ಪ್ರೀತಿ ಸಿಗುವುದೇ
ಹಸಿದ ಹುಲಿಯು ಸಾವಿಗಂಜಿ ಹುಲ್ಲು ತಿನ್ನುವುದೇ
ನೀತಿ ನಂಬಿ ಬದುಕಿದೇನಾ ನಿನಗೆ ತಿಳಿಯದೇ
ಸತ್ಯ ಧರ್ಮ ಮರೆತರೆ ಈ ಜೀವ ಉಳಿವುದೇ.... ಏಏಏ ಲಕ್ಷ್ಮೀ ..
ಸತ್ಯ ಧರ್ಮ ಮರೆತರೆ ಈ ಜೀವ ಉಳಿವುದೇ
ನಾ ತಪ್ಪು ಹೆಜ್ಜೆ ಇತ್ತ ಕ್ಷಣವೇ ಮರಣ ಬಾರದೇ.. ನನಗೇ ಮರಣ ಬಾರದೇ ..
ಎದೆಗೆ ಸಿಡಿಲು ಬಡಿಯಿತೇ ಮನದ ಮುಗಿಲು ನಡುಗಿತೇ
ಮಮತೆ ಪ್ರೀತಿ ತುಂಬಿದಾ ಮೋಡವು ಚೂರಾಯಿತೇ
ಹರಿಯಿತೇ ಕಂಬನಿ ಹರಿಯಿತೇ ತಿಳಿಯದೆ ಏಕೋ ತಿಳಿಯದೇ
ಎದೆಗೆ ಸಿಡಿಲು ಬಡಿಯಿತೇ ಮನದ ಮುಗಿಲು ನಡುಗಿತೇ
ಮಮತೆ ಪ್ರೀತಿ ತುಂಬಿದಾ ಮೋಡವು ಚೂರಾಯಿತೇ
---------------------------------------------------------------------------------------------

ಸಿರಿವಂತ (2006) - ಹ್ಯಾಪಿ ಹ್ಯಾಪಿ ಡೇ
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಟಿಪ್ಪು, ಕೋರಸ್ 

ಹ್ಯಾಪಿ ಡೇ.. ಹ್ಯಾಪಿ ಡೇ... ಎವ್ರಿ ಡೇ...   ನಮ್ಮದೇ ನಮ್ಮದೇ ಈ ಗೋಲ್ಡನ್ ಡೇ
ಹ್ಯಾಪಿ ಡೇ.. ಹ್ಯಾಪಿ ಡೇ... ಎವ್ರಿ ಡೇ...   ನಮ್ಮದೇ ನಮ್ಮದೇ ಈ ಗೋಲ್ಡನ್ ಡೇ
ಈ ಜನ್ಮ ಪುಣ್ಯದ ಜನ್ಮ ಮರೀಬೇಡ ನೀನೆಂದೂ
ಈ ಲೋಕ ನಮ್ಮದೇ ಎಂದೂ ಎಂಜಾಯ್ ಮಾಡೆಂದೆಂದೂ
ಎಲ್ಲರ ಪ್ರಿತಿಸೂ ಸುಂದರ ಲೋಕ ಸೃಷ್ಟಿಸೂ
ಹ್ಯಾಪಿ ಡೇ.. ಏಏಏ ..
ಹ್ಯಾಪಿ ಡೇ.. ಹ್ಯಾಪಿ ಡೇ... ಎವ್ರಿ ಡೇ...   ನಮ್ಮದೇ ನಮ್ಮದೇ ಈ ಗೋಲ್ಡನ್ ಡೇ
(ಶನನ್ ಶನನ್ ಶನನ್ ನನನ ಶನನ್ ಶನನ್ ಶನನ್ ನನನ )

ಹುಚ್ಚಾನೇ ನೀನಲ್ಲಾ ಬಚ್ಚಾನೇ ನೀನಿನಲ್ಲಾ ನಿನಗಿಂತ ಜ್ಞಾನಿ ಯಾರು ಇಲ್ಲಾ
ಎಂಥಂಥ ಹುಚ್ಚರೂ ಊರೂ ತುಂಬಾ ಇದ್ದಾರೇ ಅವರೆಗೆಲ್ಲಿ ಯಾವ ಮೆಡಿಸಿನ್ ಇಲ್ಲಾ
ದೇವರ ಸೃಷ್ಟಿಯ ನಾಟಕದಲ್ಲಿ ಪಾತ್ರ ನಮ್ಮದೂ (ಓ.. ಯಾ)
ನಟಿಸಿ ನುಡಿಸಿ ಹೋಗೋದ ಒಂದೇ ಕಾಯಕ ನಮ್ಮದೂ
ನಮ್ಮ ಡೇ ನಮ್ಮ ಡೇ ಇನ್ಮೇಲೆ ಎಂಥಾ ಮಾಡುವುದೊಂದೇ
ಹ್ಯಾಪಿ ಡೇ.. ಓಓಓಓ  ..
ಹ್ಯಾಪಿ ಡೇ.. ಹ್ಯಾಪಿ ಡೇ... ಎವ್ರಿ ಡೇ...   (ಓ ಬ್ಯೂಟಿ) ನಮ್ಮದೇ ನಮ್ಮದೇ ಈ ಗೋಲ್ಡನ್ ಡೇ

(ಯಾಯಾಯಾ ಓಯಾಯಾಯಾ ಯಾಯಾಯಾ ಓ ಲಾಹಿ ಲಾಹಿ ಲಾಹಿ ಯಾಯಾಯಾ
ಯಾಯಾಯಾ ಓ ಲಾಹಿ ಲಾಹಿ ಲಾಹಿ ಯಾಯಾಯಾ  )
ಲೋಕದಲ್ಯಾರೂ ಅನಾಥರಿಲ್ಲಾ ನಂಬಿಕೆ ನಿನ್ನಾ ತಂದೆ ಕಣೋ
ನಾಳೆಯ ನಂಬೀ ಹೆಜ್ಜೆಯ ಇಟ್ರೇ ನಿನಗೆಂದೂ ನೀನೇ ಶಿಲ್ಪಿ ಕಣೋ
ಆಸೆಯೂ ಇಲ್ಲದ ಮನುಜನು ಎಂದೂ ಆಸ್ತಿ ಹೊಂದನೂ
ಚಿಂತೆಯ ಮಾಡದ ಹೃದಯವು ಇದ್ದರೇ ಸಿರಿವಂತನೂ
ನಮ್ಮ ಡೇ ನಮ್ಮ ಡೇ ಇನ್ಮೇಲೆ ಎಂಥಾ ಬಾಳು ಬಂದಮೇಲೇ
ಹ್ಯಾಪಿ ಡೇ.. ಓಓಓಓ  ..
ಹ್ಯಾಪಿ ಡೇ.. ಹ್ಯಾಪಿ ಡೇ... ಎವ್ರಿ ಡೇ...  (ಜೂಜೂಜೂ) ನಮ್ಮದೇ ನಮ್ಮದೇ ಈ ಗೋಲ್ಡನ್ ಡೇ
ಹ್ಯಾಪಿ ಡೇ.. ಹ್ಯಾಪಿ ಡೇ... ಎವ್ರಿ ಡೇ...  (ಎವ್ರಿ ಡೇ ) ನಮ್ಮದೇ ನಮ್ಮದೇ ಈ ಗೋಲ್ಡನ್ ಡೇ
ಈ ಜನ್ಮ ಪುಣ್ಯದ ಜನ್ಮ ಮರೀಬೇಡ ನೀನೆಂದೂ
ಈ ಲೋಕ ನಮ್ಮದೇ ಎಂದೂ ಎಂಜಾಯ್ ಮಾಡೆಂದೆಂದೂ
ಎಲ್ಲರ ಪ್ರಿತಿಸೂ ಸುಂದರ ಲೋಕ ಸೃಷ್ಟಿಸೂ 
ಹ್ಯಾಪಿ ಡೇ.. ಏಏಏ .. ಓಓಓಓಓ
----------------------------------------------------------------------------------------------   

No comments:

Post a Comment