ಸ್ನೇಹಿತರ ಸವಾಲ್ ಚಲನಚಿತ್ರದ ಹಾಡುಗಳು
- ಸಂಜೆಯ ಮೋಹನ ಕೆಂಪಿದೂ ಮೋಹನ
- ಧಾರವಾಡ ಕಾರವಾರ ಸುತ್ತಿ ಬಂದನೋ
- ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯಾ
- ಅಮ್ಮಮ್ಮಾ ಈ ಹೆಣ್ಣು
- ನೀ ನಗುನಗುತಾ
- ಅಲ್ಲಾ ನೀನು ಇಲ್ಲಿ ಬಾರಾಯ್ಯಾ
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್. ಪಿ.ಬಿ, ಎಸ್.ಜಾನಕೀ
ಗಂಡು : ಸಂಜೆಯ ಮೋಹನ ಕೆಂಪಿದೂ ಮೋಹನ ಹರಿಯುವ ನದಿಯ ಕಲರವ ಮೋಹನ
ಹೃದಯವು ಮಿಡಿದ ರಾಗವೇ ಮೋಹನ ...
ಹೆಣ್ಣು : ಸಂಜೆಯ ಮೋಹನ ಕೆಂಪಿದೂ ಮೋಹನ ಹರಿಯುವ ನದಿಯ ಕಲರವ ಮೋಹನ
ಹೃದಯವು ಮಿಡಿದ ರಾಗವೇ ಮೋಹನ ...
ಗಂಡು : ಸಂಜೆಯ ಮೋಹನ ಕೆಂಪಿದೂ ಮೋಹನ
ಹೆಣ್ಣು : ಹರಿಯುವ ನದಿಯ ಕಲರವ ಮೋಹನ
ಕೋರಸ್ : ಸರಿಗಪ ರಿಗಸದ ಗಮಗದ ಗಗರಿಸ
ಗಂಡು : ಹೊನ್ನಾರೇ ಆ ಮಿಂಚೂ ಬಾನಿನ ನಯನ ಈ ಕಣ್ಣ ಕನಸಲ್ಲಿ ಒಲವಿನ ಗಾನ
ಕೋರಸ್ : ಆ ಆ ಆ ಅ ಅ ಅ ಆ ಆ ಆ ಆ ಆ ಆ
ಹೆಣ್ಣು : ಆಕಾಶ ಭೂಮಿಯ ದೂರದ ಮಿಲನ ನನ್ನಲ್ಲೂ ನಿನ್ನಲ್ಲೂ ಮಿಂಚಿನ ಚಲನ
ಗಂಡು : ರಸಮಯ ಕಾವ್ಯದೂ ಪ್ರೀತಿಯ ಮೌನ ..
ರಸಮಯ ಕಾವ್ಯದೂ ಪ್ರೀತಿಯ ಮೌನ ..
ಹೆಣ್ಣು : ಪ್ರೇಮವೂ ತಂದ ಸಂಭ್ರಮದಿಂದ ಸಂತಸ ಪೂರ್ಣ ಜೀವನ
ಗಂಡು : ಸಂಜೆಯ ಮೋಹನ ಕೆಂಪಿದೂ ಮೋಹನ
ಹೆಣ್ಣು : ಹರಿಯುವ ನದಿಯ ಕಲರವ ಮೋಹನ
ಹೆಣ್ಣು : ಹೊಸ ರಾಗ ಈ ಸ್ಪರ್ಷ ಹರುಷದ ಕಂಪನ ಇನಿದಾದ ಈ ಸ್ನೇಹ ಚಂದ್ರಿಕೇ ತಲ್ಲಣ
ಕೋರಸ್ : ಆ ಆ ಆ ಅ ಅ ಅ ಆ ಆ ಆ ಆ ಆ ಆ
ಗಂಡು : ಕರೆಯೋಲೆ ತಂದಂಥ ಹೊಸನದ ಚುಂಬನ ಎದೆಯಲ್ಲಿ ಅನುರಾಗ ಪಲ್ಲವಿ ಲೇಖನ
ಹೆಣ್ಣು : ತೋಳಿನ ಸೆರೆಯಲ್ಲಿ ಭಾವನೇ ಲೋಕದ
ತೋಳಿನ ಸೆರೆಯಲ್ಲಿ ಭಾವನೇ ಲೋಕದ
ಗಂಡು : ಜೀವನ ಎರಡ ಸಂಗಮ ತಂದ ಈ ಅನುಬಂಧ ಮೋಹನ
ಹೆಣ್ಣು : ಸಂಜೆಯ ಮೋಹನ ಕೆಂಪಿದೂ ಮೋಹನ ಹರಿಯುವ ನದಿಯ ಕಲರವ ಮೋಹನ
ಗಂಡು : ಹೃದಯವು ಮಿಡಿದ ರಾಗವೇ ಮೋಹನ ...
ಗಂಡು : ಹೃದಯವು ಮಿಡಿದ ರಾಗವೇ ಮೋಹನ ...
ಇಬ್ಬರು : ಸಂಜೆಯ ಮೋಹನ ಕೆಂಪಿದೂ ಮೋಹನ ಹರಿಯುವ ನದಿಯ ಕಲರವ ಮೋಹನ
----------------------------------------------------------------------------------------------------------------------
ಸ್ನೇಹಿತರ ಸವಾಲ್ (೧೯೮೧) - ಧಾರವಾಡ ಕಾರವಾರ ಸುತ್ತಿ ಬಂದನೋ
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಪಿ.ಬಿ.ಎಸ್, ಎಸ್.ಜಾನಕೀ, ಭೋಜರಾವ್
ಗಂಡು : ಧಾರವಾಡ ಕಾರವಾರ ಸುತ್ತಿ ಬಂದನೋ ದರ್ಭಿ ಕಪ್ ಟೆಂಗಿನ ಚಿಪ್ಪ್ ಎರಡೂ ಕಂಡೋನು
ಹೇಯ್ ಧಾರವಾಡ ಕಾರವಾರ ಸುತ್ತಿ ಬಂದನೋ ದರ್ಭಿ ಕಪ್ ಟೆಂಗಿನ ಚಿಪ್ಪ್ ಎರಡೂ ಕಂಡೋನು
ಬಾ ಬಾರೇ ಮೈ ತೇರಿ ಲೇಡೀ ನೀನೇನೇ ಈ ನನ್ನ ಜೋಡಿ
ಬಾ ಬಾರೇ ಮೈ ತೇರಿ ಲೇಡೀ ನೀನೇನೇ ಈ ನನ್ನ ಜೋಡಿ
ಪಿಬಿಎಸ್ : ಓ ನನ್ನ ಬಿರಿಯಾನಿ ಪಲ್ಲವಾನ ಕುರ್ಮಾಣಿ
ಬಾ ಬಾರೇ ಕೊತಂಬರಿ ಚಟ್ನಿ ನೀನೇನೇ ಈ ನನ್ನ ರಾಣಿ ...
ಬಾ ಬಾರೇ ಕೊತಂಬರಿ ಚಟ್ನಿ ನೀನೇನೇ ಈ ನನ್ನ ರಾಣಿ ...
ಹೆಣ್ಣು : ಯಾವೋನ್ನಯ್ಯಾ .. ನೀ ಯಾವೋನಯ್ಯಾ ಹೀಗ್ ನನ್ನ ಕಾಡ್ತಿಯಲ್ಲೋ ಯಾವೋನ್ನಯ್ಯಾ
ಹೋಯ್ ನೀ ಯಾವೋನಯ್ಯಾ ಹೀಗ್ ನನ್ನ ಕಾಡ್ತಿಯಲ್ಲೋ
ಗಂಡು : ಈ ನಿನ್ನ ಪೋರ್ನಿ ಸ್ಟೈಲ್ ಕಂಡಾಗ ಅನಾರ್ಕಲಿ ಕುದುರೆ ಬಾಲ ನೆಪ್ಪು ಬರತೈತೇ
ಈ ನಿನ್ನ ಬಳಸೋ ಸೊಂಟ ಕಂಡಾಗ ಹೇಮಮಾಲಿನಿ ಕುದುರೆ ಅಂದ ನೋಡದಂಗ ಐತೇ
ಈ ನಿನ್ನ ಜಾಕೀ ನಾನೇನೇ ಜಾಕಪಾಟ ಫೇವರೇಟೂ ನೀನೇನೇ
ಪಾಲೀಷು ಹಾಕ್ತಿನೀ ಮಾಲೀಷು ಮಾಡ್ತೀನಿ
ಬಾ ಬಾರೇ ಓ ನನ್ನ ಪೋನಿ ಕೊಡಗಿನ ಬೆಡಗಿನ ಚೆನ್ನೀ
ಬಾ ಬಾರೇ ಓ ನನ್ನ ಪೋನಿ ಕೊಡಗಿನ ಬೆಡಗಿನ ಚೆನ್ನೀ
ಪಿಬಿಎಸ್ : ಮೈಸೂರು ಪಾಕೂ ಕ್ಯಾರೆಟ್ ಹಲ್ವಾ ತಿಂದಂಗೇ ನೀ ಹತ್ರ ಬಂದಾಗ
ಸಕ್ರೇ ಹಾಲೂ ಇಲ್ಲದ ಕಾಫಿ ಕುಡದಂಗೇ ನೀ ದೂರ ಹೋದಾಗ
ಅಡುಗೆಗೆ ಇಂಗೂ ತೆಂಗು ಇದ್ದಂತೇ ಬಾಳನಾಗೇ ನಾನೂ ನೀನೂ ನೋಡಂತೇ
ಮೂರೂ ಹೊತ್ತು ಅಡುಗೇ ಮಾಡಹಾಕ್ತಿನಿ ರಾಣಿಯ ಹಾಂಗೇ ನೋಡ್ಕೋತೀನಿ
ಬಾ ಬಾರೇ ಕೊತಂಬರಿ ಚಟ್ನಿ ನೀನೇನೇ ಈ ನನ್ನ ರಾಣಿ ...
ಬಾ ಬಾರೇ ಕೊತಂಬರಿ ಚಟ್ನಿ ನೀನೇನೇ ಈ ನನ್ನ ರಾಣಿ ...
ಹೆಣ್ಣು : ಸಾಕಪ್ಪಾ ಸಾಕಪ್ಪಾ ಈ ನಿಮ್ಮಕಾಟ ನಿಮ್ಮನ್ ಕಟ್ಟಕೊಂಡ್ರೇ ತಿಗಣೆಯ ಕಾಟ
ಸಾಕಪ್ಪಾ ಸಾಕಪ್ಪಾ ಈ ನಿಮ್ಮಕಾಟ ನಿಮ್ಮನ್ ಕಟ್ಟಕೊಂಡ್ರೇ ತಿಗಣೆಯ ಕಾಟ
ನೋಡೋಕೆ ನೀವಿಬ್ರು ಖೂಜಾ ಲೋಟ ಹಿಂಗ್ಯಾಕೋ ಹುಡುಗಿನ ಜರತಾರಿ ಪೇಟಾ
ನನ್ನ ಗಂಡ ಆಗೋನೂ ಹೀಗಿರಬೇಕೂ ಕೈತುಂಬಾ ಸಂಪಾದನೆ ಮಾಡತಿರಬೇಕು
ಬಂಗಲೇನೂ ಕಾರನ್ನೂ ಇಟ್ಟಿರಬೇಕೂ ಇಂಗ್ಲಿಷ್ ಟಸ್ಸುಪುಸ್ಸೂ ಮಾತಾಡಬೇಕೂ
ಯಾವೋನ್ನಯ್ಯಾ .. ನೀ ಯಾವೋನಯ್ಯಾ ಹೀಗ್ ನನ್ನ ಕಾಡ್ತಿಯಲ್ಲೋ
------------------------------------------------------------------------------------------------------------------------
ಸ್ನೇಹಿತರ ಸವಾಲ್ (೧೯೮೧) - ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯಾ
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್.ಜಾನಕೀ
ನನ್ನ ಮಾತ ಕೇಳ್ತಿರಾ, ನನ್ನ ಕಷ್ಟ ತಿಳುಕೊತೀರಾ,
ನಂಗೇ ಸಹಾಯ ಮಾಡ್ತೀರಾ.. ನಂಗೇ ಸಹಾಯ ಮಾಡ್ತೀರಾ
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ, ಕಟ್ಟಿ ಕೊಂಡೋನು ಕೊಟ್ಟನೋ ಕೈಯ್ಯಾ
ಅಬ್ಬಬ್ಬಾ ಎಂದರೇನೇ ನಂಗೇ ಹದಿನೆಂಟೂ
ಯಾರೂ ಮಾವಯ್ಯಾ ಬಾಳನಂಟೂ ಇನ್ಯಾರ ಮಾವಯ್ಯಾ ಬಾಳ ನಂಟೂ
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ, ಕಟ್ಟಿ ಕೊಂಡೋನು ಕೊಟ್ಟನೋ ಕೈಯ್ಯಾ
ಅಬ್ಬಬ್ಬಾ ಎಂದರೇನೇ ನಂಗೇ ಹದಿನೆಂಟೂ
ಯಾರೂ ಮಾವಯ್ಯಾ ಬಾಳನಂಟೂ ಇನ್ಯಾರ ಮಾವಯ್ಯಾ ಬಾಳ ನಂಟೂ
ಓ ಗಜಪತಿ ಓ ಭೂಪತಿ ಓ.. ಗಂಗಾರಾಮ.. ಆಹ್ಹಾ..
ನಮ್ಮ ಮೊದಲನೇ ರಾತ್ರೀ ಏನಾಯ್ತು ಗೋತ್ತಾ ..
ತಲೆಗೆ ಸ್ನಾನ ಮಾಡಿ ನಿಂತಿದ್ದೇ .. ತೆಳ್ಳನೇ ಸೀರೆ ಉಟ್ಟಿಕೊಂಡಿದ್ದೇ
ಮಲ್ಲಿಗೇ ಹೂವ ಮುಡುಕೊಂಡಿದ್ದೇ.. ಮೈ ತುಂಬಾ ಗಂಧವ ಹಾಕಿಕೊಂಡಿದ್ದೇ
ಹಾಸಿಗೆ ಹಾಸಿ ಕಾದಕೊಂಡಿದ್ದೇ.. ಏನೇನೇನೋ ಆಸೇ ಇಟ್ಟಕೊಂಡಿದ್ದೇ
ಗೊರಕೆಯ ಶಬ್ದ ಕೇಳಿ, ನಾ ಎದ್ದೇ, ನನ್ನ ನೋಡಿದಾಗಲೇ ಭಾರಿ ನಿದ್ದೇ ..
ಎಬ್ಬಿಸಿ ನೋಡದೇ, ಅವರಿಗೇ ಕೋಪ, ಎರಡೇಟ ಹಾಕಿ, ಹೋದರೂ ಭೂಪ..
ನನ್ನ ತಪ್ಪಾ... ನನ್ನ ತಪ್ಪಾ... ನನ್ನ ತಪ್ಪಾ
ಪೂಜೆಗೇ ಆಗದ ಹೂವಾದೇ ನಾನೂ, ಮೋಡವೇ ಇಲ್ಲದ ನೀಲಿಯ ಬಾನೂ
ಪೂಜೆಗೇ ಆಗದ ಹೂವಾದೇ ನಾನೂ, ಮೋಡವೇ ಇಲ್ಲದ ನೀಲಿಯ ಬಾನೂ
ನೀನಾಗೂ ಬಾರೋ ಈ ನನ್ನ ನಂಟೂ
ನೀನಾಗೂ ಬಾರೋ ಈ ನನ್ನ ನಂಟೂ ಈ ಥರ ಅಂದವು ಇನ್ನೇಲ್ಲಿ ಉಂಟೂ ..
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ, ಕಟ್ಟಿ ಕೊಂಡೋನು ಕೊಟ್ಟನೋ ಕೈಯ್ಯಾ
ಅಬ್ಬಬ್ಬಾ ಎಂದರೇನೇ ನಂಗೇ ಹದಿನೆಂಟೂ
ಯಾರೂ ಮಾವಯ್ಯಾ ಬಾಳನಂಟೂ ಇನ್ಯಾರ ಮಾವಯ್ಯಾ ಬಾಳ ನಂಟೂ
ಓ ಗಜಪತಿ ಓ ಭೂಪತಿ ಓ.. ಗಂಗಾರಾಮ
ಓ ಗಜಪತಿ ಓ ಭೂಪತಿ ಓ.. ಗಂಗಾರಾಮ
ಗಂಡ ಬಿಟ್ಟ ಅಂತಾ ತವರೀಗೇ ಹೋದೇ, ಅಲ್ಲೇನಾಯ್ತು ಗೋತ್ತಾ..
ಒಂದ ದಿನ ಪಕ್ಕದಮನೆಯಾತ ಸಿಕ್ಕಾ.. ನನ್ನ ಕಡೇ ನೋಡಿ ಮೆಲ್ಲಗೇ ನಕ್ಕಾ
ಮರುದಿನ ಧೈರ್ಯದೀ ಕಣ್ಣನ್ನೂ ಹೊಡೆದಾ, ಮ್ಯಾಟ್ನಿ ಸಿನಿಮಾಗೇ ನನ್ನನ್ನೂ ಕರೆದಾ
ಗುಸುಗುಸು ಮಾತಾಡಿ ಹ್ಹ.. ಕುಚುಗುಳಿ ಕೊಟ್ಟಾ, ಪಾರ್ಕಲ್ಲಿ ಐಸ್ ಕ್ಯಾಂಡಿ ಬಾಯಲ್ಲಿ ಇಟ್ಟಾ
ಇರುಳಲ್ಲಿ ನನ್ನಾ ಬಿಗಿದಪ್ಪಿಕೊಂಡ ಏನಾಯ್ತು ಗೊತ್ತಿಲ್ಲಾ ಮೈಯೆಲ್ಲಾ ಕೆಂಡಾ
ಅಷ್ಟೊತ್ತಿಗೇ ನಮ್ಮಪ್ಪಾ ಅಮ್ಮಂಗೇ ಕೋಪಾ ನನ್ನನ್ನೂ ಹೊರಗಟ್ಟೀ ಹಾಕಿದ್ರೂ ಶಾಪಾ
ನನ್ನ ತಪ್ಪಾ.. ನನ್ನ ತಪ್ಪಾ.. ನನ್ನ ತಪ್ಪಾ..
ಹೃದಯದ ಪುಸ್ತಕ ಇನ್ನೂ ಖಾಲೀ ಬರೆಯುವ ಕವಿಯೂ ಯಾವನೂ ಇಲ್ಲೀ ..
ಹೃದಯದ ಪುಸ್ತಕ ಇನ್ನೂ ಖಾಲೀ ಬರೆಯುವ ಕವಿಯೂ ಯಾವನೂ ಇಲ್ಲೀ ..
ಆಧಾರವಿಲ್ಲಾ.. ಈ ಹೂವಿನ ಬಳ್ಳಿ,
ಆಧಾರವಿಲ್ಲಾ.. ಈ ಹೂವಿನ ಬಳ್ಳಿ ನೀ ತೋಳಿ ನಾ ತೋರ ನೀಡಲೂ ಬಾರಾ
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ, ಕಟ್ಟಿ ಕೊಂಡೋನು ಕೊಟ್ಟನೋ ಕೈಯ್ಯಾ
ಅಬ್ಬಬ್ಬಾ ಎಂದರೇನೇ ನಂಗೇ ಹದಿನೆಂಟೂ
ಯಾರೂ ಮಾವಯ್ಯಾ ಬಾಳನಂಟೂ ಇನ್ಯಾರ ಮಾವಯ್ಯಾ ಬಾಳ ನಂಟೂ
ಓ ಗಜಪತಿ ಓ ಭೂಪತಿ ಓ.. ಗಂಗಾರಾಮ
ಓ ಗಜಪತಿ ಓ ಭೂಪತಿ ಓ.. ಗಂಗಾರಾಮ
-----------------------------------------------------------------------------------------------------------------------
ಸ್ನೇಹಿತರ ಸವಾಲ್ (೧೯೮೧) - ಅಮ್ಮಮ್ಮಾ ಈ ಹೆಣ್ಣು
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್. ಪಿ.ಬಿ, ಎಸ್.ಪಿ.ಶೈಲಜಾ
ಗಂಡು : ಅಮ್ಮಮ್ಮಾ ಈ ಹೆಣ್ಣೂ ಇದು ಯಾವೂರ ತೋಟದ ಹಣ್ಣೂ
ಅಪ್ಪಪ್ಪಾ ಈ ನಡಿಗೆ ಇಂಥ ಹೆಣ್ಣನ್ನೂ ಕಂಡಿಲ್ಲ ಕಣ್ಣೂ..
ಹೇಹೇ .. (ಹೇಹೇಹೇಹೇ) ಹೇಹೇಹೇಹೇ (ಓಓಓಓಓಓ )
ಹೆಣ್ಣು : ಅಮ್ಮಮ್ಮಾ ಈ ಗಂಡೂ ಇದು ಯಾರಪ್ಪಾ ರೋಮಿಯೋ ತುಂಡೂ
ಅಪ್ಪಪ್ಪಾ ಈ ಕಾಟ ಈ ಬೆಂಗಳೂರು ಹಣ್ಣನ್ನೂ ಕಂಡು
ಹೇಹೇ .. (ಹೇಹೇಹೇಹೇ) ಓಓ (ಹೇಹೇಹೇ ಅಹ್ಹಾಹ್ಹಾಹ್ಹಾಹ್ಹಾ )
ಗಂಡು : ಕೋಮಲ ಇದು ಕೋಮಲ.. ಈ ಪಾದವು ಒಣಗಿತು ಪಾಪ
ಸುಮ್ಮನೇ ಏಕೆ ಸುಮ್ಮನೇ ಈ ಮೋಜಿನ ಕೆಳಗಿನ ಕೋಪ
ಹೆಣ್ಣು : ಬಿಡು ನೀ (ಆಹ್ಹಾ) ದಾರಿ ಬಿಡು ನೀ (ಹುಹ್ಹೂ)
ನೀ ಮಾಮೂಲು ಕೇರಿಯ ದಾದಾ (ಹೋಯ್ ಹೋಯ್ )
ಕಳಿಸಿ ನಾ ಕೊಡುವೇ ನಿನ್ನ ಮಾವನ ಮನೆಗೇ ಸೀದಾ..
ಗಂಡು: ಹುಸಿ ಕೋಪವಿದೋ ಬಿಸಿ ತಾಪವಿದೋ ಬಿಡು ದ್ವೇಷವನೂ ತೊರೆ ರೋಷವನೂ
ಹೆಣ್ಣು : ಕಲಿ ಕಲಿ ನಡತೆಯ ಪಾಠವನೂ
ಗಂಡು : ಹೋಯ್ .. ಅಮ್ಮಮ್ಮಾ ಈ ಹೆಣ್ಣೂ ಇದು ಯಾವೂರ ತೋಟದ ಹಣ್ಣೂ
ಹೆಣ್ಣು : ಅಪ್ಪಪ್ಪಾ ಈ ಕಾಟ ಈ ಬೆಂಗಳೂರು ಹಣ್ಣನ್ನೂ ಕಂಡು
ಗಂಡು : ನನಗೇ ಕೊಡಬಯಸೀ ಹ್ಹಾ.. ಬೃಹ್ಮ ಸೃಷ್ಟಿಯ ಮಾಡಿದ ನಿನ್ನ
ಜೊತೆಯ ಕೊಡಬರಲೇ ನೀ ಹೋಗೆಂದೂ ಒಪ್ಪಿಕೋ ಚಿನ್ನಾ
ಹೆಣ್ಣು : ಬಂದರೇ .. (ಹ್ಹಾ) ಬಳಿ ಬಂದರೇ (ಹ್ಹಾಹ್ಹಾ ) ನಾ ಜಿಟಿಜಿಟಿ ಕೊಡುವೇನೂ ಬೇಕೇ (ಬಾಪರೇ )
ಕೊಟ್ಟರೇ ಒಂದು ಕೊಟ್ಟರೇ ಗಟ್ಟಿ ಹಲ್ಲೆಲ್ಲಾ ಉದುರಿತು ಜೋಕೇ
ಗಂಡು : ಒಣ ಜಂಭವಿದೋ ಬರೀ ಡಂಭವಿದೋ ನಮ್ಮ ಪ್ರೇಮಕಥೆ ಆರಂಭವಿದೋ
ಹೆಣ್ಣು : ಹಗಲಲಿ ಕನಸನೂ ಕಾಣುವೇನೇ..
ಗಂಡು : ಓಯ್... ಅಮ್ಮಮ್ಮಾ ಈ ಹೆಣ್ಣೂ (ಹ್ಹಾ) ಇದು ಯಾವೂರ ತೋಟದ ಹಣ್ಣೂ (ಅಹ್ಹಹ)
ಅಪ್ಪಪ್ಪಾ ಈ ನಡಿಗೆ ಇಂಥ ಹೆಣ್ಣನ್ನೂ ಕಂಡಿಲ್ಲ ಕಣ್ಣೂ..ಹೆಣ್ಣು : ಅಮ್ಮಮ್ಮಾ ಈ ಗಂಡೂ (ಓಓ) ಇದು ಯಾರಪ್ಪಾ ರೋಮಿಯೋ ತುಂಡೂ
ಅಪ್ಪಪ್ಪಾ ಈ ಕಾಟ ಈ ಬೆಂಗಳೂರು ಹಣ್ಣನ್ನೂ ಕಂಡು
ಗಂಡು : ಹೇಹೇಹೇಹೇ .. (ಹೇಹೇಹೇಹೇ) ಓಓಓಓ (ಓಓಓಓಓಓಓ )
ಲಾಲ್ಲಲಾಲ .. (ಲಾಲಾಲಾಳ) ರೂರೂರೂರೂ (ರೂರೂರೂರೂ )
------------------------------------------------------------------------------------------------------------------
ಸ್ನೇಹಿತರ ಸವಾಲ್ (೧೯೮೧) - ನೀ ನಗುನಗುತಾ
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್. ಪಿ.ಬಿ, ಎಸ್. ಜಾನಕೀ
ಗಂಡು : ನೀ ನಗು ನಗುತಾ ಬರುತಿರಲೂ ಎದೆಯಾ ಒಳಗೇ ಹೊಸದು ಸಂತೋಷ.. ಅಹ್ಹಹ್ಹಹ್ಹಹ್ಹಾ..
ಹೆಣ್ಣು : ನೀ ಒಲವಿನಲೀ ಕರೆದಿರಲೂ ಜೊತೆಗೆ ಎಲ್ಲೂ ಸುಖದ ಸಂಗೀತ.. ನೀ ಒಲವಿನಲೀ ...
ಹೆಣ್ಣು : ನೀ ಬಾಳಲಿ ಬಂದೆ ನನ್ನಾ ಮನದಲಿ ನಿಂದೇ
ಗಂಡು : ನೀ ಕಣ್ಣಲ್ಲಿ ಕೊಂದೆ ನಾನು ಹೃದಯವ ತಂದೇ ..
ಹೆಣ್ಣು : ನೀ ಮಿಡಿದಂಥ ರಾಗ ನವ ಪ್ರೇಮಾನುರಾಗ
ಗಂಡು : ಈ ಸಿಹಿಯಾದ ಮಾತೆ ಅದು ಹೊಸ ಭಾವಗೀತೇ
ಹೆಣ್ಣು : ಕನಸಿನಲೂ ಮನಸಿನಲೂ ತುಂಬಿರುವೇ ಪ್ರತಿ ಕ್ಷಣ ಕ್ಷಣ ಅನುದಿನ ದಿನ.. ಅಹ್ಹಹ್ಹಹ್ಹಹ್ಹ..
ಗಂಡು : ನೀ ನಗು ನಗುತಾ ಬರುತಿರಲೂ
ಹೆಣ್ಣು : ಜೊತೆಗೆ ಎಲ್ಲೂ ಸುಖದ ಸಂಗೀತ..
ಗಂಡು : ನೀ ನಗು ನಗುತಾ
ಹೆಣ್ಣು : ಅಹ್ಹಹ್ಹಹ್ಹಹ್ಹ
ಗಂಡು : ನೀ ನಕ್ಕರೇ ಸ್ವರ್ಗ ದೂರ ಹೋದರೇ ನರಕ
ಹೆಣ್ಣು : ಈ ಹೊಗಳಿಕೆ ಎಲ್ಲಾ.. ಹ್ಹಹ್ಹಹ್ಹ.. ನಾನೂ ಜೊತೆಯಿರೋ ತನಕ
ಗಂಡು : ನನ್ನ ನೆನಪಾಗಿ ನಾನೂ ಹೊಸ ಕಾಣಿಕೆ ಕೊಡಲೇ
ಹೆಣ್ಣು : ನಾಚಿ ನೀರಾಗಿ ನಾನು ಈ ಆತುರತೇ ಬಿಡಲೇ
ಗಂಡು : ಭಯವ ಬಿಡೂ ಬಯಕೆ ಕೊಡು ಸುಖವ ಪಡು
ಸರಿ ಸರಿ ಸರಿ ಎನೂ ಎನೂ ಎನೂ ಆಹ್ಹಹ್ಹಹ್ಹಹ..
ಹೆಣ್ಣು : ನೀ ಒಲವಿನಲೀ ಕರೆದಿರಲೂ ಜಗದ ಎಲ್ಲೂ ಸುಖದ ಸಂಗೀತ..
ಗಂಡು : ನೀ ನಗು ನಗುತಾ (ನಗುನಗುತಾ) ಬರುತಿರಲೂ (ಬರುತಿರಲೂ )
ಎದೆಯಾ ಒಳಗೇ ಹೊಸದು ಸಂತೋಷ.....ಆಆಆ
ಹೆಣ್ಣು : ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ
ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ
---------------------------------------------------------------------------------------------------------------------
ಸ್ನೇಹಿತರ ಸವಾಲ್ (೧೯೮೧) - ಅಲ್ಲಾ ನೀನು ಇಲ್ಲಿ ಬಾರಾಯ್ಯಾ
ಸಂಗೀತ: ಸತ್ಯಂ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ: ಎಸ್. ಪಿ.ಬಿ, ಎಸ್.ಪಿ. ಶೈಲಾಜಾ, ಪಿ.ಸುಶೀಲಾ
ಗಂಡು : ಅಲ್ಲಾ..... ಓ ಅಕ್ಬರ್... ಅಲ್ಲಾ..... ಓ ಅಕ್ಬರ್...
ತಂಗಿ : ರಾಮಾ...
ತಾಯಿ : ಏಸು ನಾಥನೇ ತೋರೂ ಕರುಣೇ ಮಗನ ಕಾಪಾಡಯ್ಯಾ
ಗಂಡು : ಅಲ್ಲಾ ನೀ ಇಲ್ಲಿ ಬಾರಯ್ಯಾ
ತಂಗಿ : ರಾಮಾ ನೀ ಮೋರೆಯಾ ಕೇಳಯ್ಯಾ
ತಾಯಿ : ಏಸು ನಾಥನೇ ತೋರೂ ಕರುಣೇ ಮಗನ ಕಾಪಾಡಯ್ಯಾ
ಗಂಡು : ನಿನ್ನನ್ನೂ ಎದುರಲೀ ಕಂಡವನಲ್ಲಾ ಆದರೂ ತುಂಬಿಹೇ ಜಗವೆಲ್ಲಾ
ಬೇಡಿದ ವರವ ನೀ ನೀಡುವೇ ಅಲ್ಲಾ ಆದರೂ ಏನೂ ಬೇಡಿಲ್ಲಾ
ಪರರ ಹಿತವಾ ಬಯಸುವ ಮಗುವಾ ಇತರರ ಸೇವೆಗೆ ಪ್ರಾಣವ ಕೊಡುವಾ
ನಿನ್ನ ಮಗನಾ ಬೇಗನೀವನಾ ಬಂದು ಕಾಪಾಡಾಯ್ಯಾ
ತಾಯಿ : ಮೇರಿಯ ಮಡಿಲಾ ತುಂಬಿದೆ ನೀನೂ ಹಡೆದಾ ಮಗನೂ ನನಗವನೂ
ನಿನ್ನಯ ಸಹನೇ ನಿನ್ನಯ ಕರುಣೇ ಅವನಲೀ ಕಂಡೆ ಇಮಾನೂ
ದೀನರ ಕಂಬನಿ ಒರೆಸುವ ಬಂಧೂ ಪ್ರಾಣವ ಪಣವ ಮಾಡಿಹನಿಂದು
ದೇವದೇವನೇ ಲೋಕಪಾಲನೇ ಕಂದನ ಕಾಪಾಡಯ್ಯಾ ..
ತಂಗಿ : ಸೋದರರೈವರು ನಿನಗೇ ರಾಮ ನನಗಿರುವವನೂ ಒಬ್ಬನೇ
ಒಡಹುಟ್ಟಿದವ ಕೊಲ್ಲದೇ ಹೋದರೂ ತಂಗಿಗೇ ಅವನೂ ಅಣ್ಣನೇ
ದೀನ ರಕ್ಷಕ ಭಕ್ತವತ್ಸಲ ನಿಲ್ಲುವರಯ್ಯಾ
ರಾಮನಾಮವೇ ರಕ್ಷೇ ಎನ್ನುತ್ತ ಹೇಳುವರಯ್ಯಾ
ನಂಬಿ ನಿನ್ನನ್ನೂ ಬೇಡುವೆನಯ್ಯಾ ನನ್ನ ಅಣ್ಣನ ಕಾಪಾಡಯ್ಯಾ
ರಾಮಯ್ಯಾ ಬಾರಯ್ಯಾ... ರಾಮಯ್ಯಾ ಬಾರಯ್ಯಾ
-----------------------------------------------------------------------------------------------------------------------
No comments:
Post a Comment