1283. ಸೂಪರ ನೋವಾ ೪೫೯(೧೯೯೪)

ಸೂಪರ ನೋವಾ ೪೫೯ ಚಲನ ಚಿತ್ರದ ಹಾಡುಗಳು 
  1. ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ 
  2. ಆಡುವ ನಾವಾಡುವ ಮದುವೆ ಆಟ ಆಡುವ 
  3. ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ 
  4. ತಪ್ಪಲ್ಲ ತಪ್ಪಲ್ಲ ಬಯಕೆಯ ತಾಣ ಬಯಸಿದರೇನು 
ಸೂಪರ ನೋವಾ ೪೫೯(೧೯೯೪) - ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದ.ರಾ.ಬೇಂದ್ರೆ ಗಾಯನ : ರಾಜೇಶ

ಏಯ್... ಪಾತರಗಿತ್ತಿ..
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ  ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ ಸುತ್ತು ಕುಂಕುಮದಳಿ ಎಳೆದು
ಕಾಡಿಗೇ ಸುಳಿ ಗಾಳಿ ಕೇನೇನೆನಾ ಮಾಡಿನ ತಾರಕಾನ್
ಕಾಡಿಗೇ ಸುಳಿ ಗಾಳಿ ಕೇನೇನೆನಾ ಮಾಡಿನ ತಾರಕಾನ್

ಏನು ಬಣ್ಣ ಬಣ್ಣ ನಡುವೆ ನವಿಲಿನಗಣ್ಣ
ರೇಷಿಮೆ ಪಕ್ಕ ನಯ ಮುಟ್ಟಲಾರೆ ಭಯ
ಹೂವಿನ ಪಕಳಿಗಿಂತ ತಿಳಿವು ತಿಳಿದ ಅಂತ
ಹೂವಿನ ಪಕಳಿಗಿಂತ ತಿಳಿವು ತಿಳಿದ ಅಂತ
ಹೂವಿಗೇ ಹೂವಿಟ್ಟಾವ ಗಂಧ ತಿರಿಗ್ತಾವ
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ  ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ

ತೂಗಿ ತೂಗಿ ದಣಿದಾಂಗ ಆಗಿ ತಾಳತವ್ವ ಚಕ್ಕ ಕುಣಿತಗ ತಕ್ಕ ತಕ್ಕ
ಆಸೆ ಹೆಚ್ಚಿ ಹಾಂಗ್ ಕಂಡು ಸಿಕ್ಕದ ಹಾಂಗ್
ಸಿಕ್ಕಿಲ್ಲೋಡ್ ಕಾವ್ ಅಲ್ಲೂ ಇಲ್ಲೂ ಆವ್
ಕಾಣದೆಲ್ಲೋ ಮಂದಿ ಬಂದು ಗಾಳಿ ಗೂಡಿ
ಕಾಣದೆಲ್ಲೋ ಮಂದಿ ಬಂದು ಗಾಳಿ ಗೂಡಿ
ಇನ್ನೂ ಎಲ್ಲಿಗೋಟ ನಂದನದ ತೋಟ
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ
ಹಸಿರು ಹಚ್ಚ ಚುಚ್ಚಿ ನಿಲಕರಷಿಣ ಹಚ್ಚಿ  ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ
ಹೊನ್ನ ಚಿಕ್ಕಿ ಇಕ್ಕಿ ಇಟ್ಟು ಬೆಳ್ಳಿ ಅಕ್ಕಿ ಸುತ್ತು ಕುಂಕುಮದಳಿ ಎಳೆದು
ಕಾಡಿಗೇ ಸುಳಿ ಗಾಳಿ ಕೇನೇನೆನಾ ಮಾಡಿನ ತಾರಕಾನ್
ಕಾಡಿಗೇ ಸುಳಿ ಗಾಳಿ ಕೇನೇನೆನಾ ಮಾಡಿನ ತಾರಕಾನ್
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ 
ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ 
--------------------------------------------------------------------------------------------

ಸೂಪರ ನೋವಾ ೪೫೯(೧೯೯೪) - ಆಡುವ ನಾವಾಡುವ ಮದುವೆ ಆಟ ಆಡುವ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಕರೀಂಖಾನ  ಗಾಯನ : ರಾಜೇಶ, ಮಂಜುಳ, ಬಿ.ಆರ್.ಛಾಯ

ಹೆಣ್ಣು : ತಂದಾನಾನಾನ ತಾನಾನಾನಾ ತಂದನನನಾ
           ಆಡುವ ನಾವಾಡುವಾ ಮದುವೇ ಆಟ ಆಡುವ ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ
           ಎಂಥ ಆಟ ಎಂಥ ನೋಟ ಗಂಡು ಹೆಣ್ಣು ಒಬ್ರೂ ಇಲ್ದೇ ಜೋಯಿಸ್ ಅಂದ್ರೇ ಯಾರ್ ಕಾಣೇ
           ಇನ್ನೂ ಅವನು ಬಂದೆ ಇಲ್ವೇ ..
ಗಂಡು : ನಮ್ಮ ಕೇರಿ ಹುಡುಗರೆಲ್ಲ ನಮ್ಮ ಮದುವೇ ಮಾಡಲಿಲ್ವೆ
ಹೆಣ್ಣು : ಅಂದು ನಾನೇ ಜೋಯಿಸಳಾಗಿ ಮದುವೇ ಕಾರ್ಯ ನಡೆಸಲಿಲ್ವೆ ..
           ಆಡುವ ನಾವಾಡುವಾ ಮದುವೇ ಆಟ ಆಡುವ ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ

ಹೆಣ್ಣು : ಬಂಧು ಇಲ್ಲ ಬಳಗವಿಲ್ಲ ತಂದೆ ತಾಯಿ ಯಾರು ಇಲ್ಲ 
          ಒಡವೆ ಇಲ್ಲ ವಸ್ತ್ರವಿಲ್ಲ ಬಯಸಿ ಬರುವ ಭಾಗ್ಯವಿಲ್ಲ 
          ಬಂಧು ಇಲ್ಲ ಬಳಗವಿಲ್ಲ ತಂದೆ ತಾಯಿ ಯಾರು ಇಲ್ಲ 
          ಒಡವೆ ಇಲ್ಲ ವಸ್ತ್ರವಿಲ್ಲ ಬಯಸಿ ಬರುವ ಭಾಗ್ಯವಿಲ್ಲ 
ಗಂಡು : ಡೋಲು ವಾದ್ಯ ನುಡಿಸೋರಿಲ್ಲ ಮದುವೇ ಮಂತ್ರ ಪಠಿಸೋರಿಲ್ಲ 
            ಡೋಲು ವಾದ್ಯ ನುಡಿಸೋರಿಲ್ಲ ಮದುವೇ ಮಂತ್ರ ಪಠಿಸೋರಿಲ್ಲ
ಹೆಣ್ಣು : ಬಂಧು ನಾನೇ ಬಳಗ ನಾನೇ ತಂದೆ ತಾಯಿ ಎಲ್ಲಾ ನಾನೇ 
          ಬಂಧು ನಾನೇ ಬಳಗ ನಾನೇ ತಂದೆ ತಾಯಿ ಎಲ್ಲಾ ನಾನೇ     
          ಆಡುವ ನಾವಾಡುವಾ ಮದುವೇ ಆಟ ಆಡುವ ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ

ಗಂಡು : ಒಡವೆ ನಾನೇ ವಸ್ತ್ರ ನಾನೇ ಬಯಸಿ ಬಂದ ಭಾಗ್ಯ ನಾನೇ
            ನಿನಗೆ ಗೆಳತೀ ಎನಲು ಎಲ್ಲ ಮನವೂ ಮೋದಗೋಳುವುದೂ  
            ಒಡವೆ ನಾನೇ ವಸ್ತ್ರ ನಾನೇ ಬಯಸಿ ಬಂದ ಭಾಗ್ಯ ನಾನೇ
            ನಿನಗೆ ಗೆಳತೀ ಎನಲು ಎಲ್ಲ ಮನವೂ ಮೋದಗೋಳುವುದೂ  
ಹೆಣ್ಣು : ನಿನ್ನ ಸ್ನೇಹಕ್ಕಾಗಿ ನನ್ನ ಮನವು ತುಂಬಿ ಬರುವುದು
          ನಿನ್ನ ಸ್ನೇಹಕ್ಕಾಗಿ ನನ್ನ ಮನವು ತುಂಬಿ ಬರುವುದು
          ನಾನೇ ಡೋಲು ನುಡಿಸುವೇ .. ಮದುವೇ ಮಂತ್ರ ಪಠಿಸುವೇ
          ಸುಲಗ್ನಾ ಸಾವಾಧಾನ ಸುಮುಹೂರ್ತ ಸಾವಾಧಾನ
          ಸುಲಗ್ನಾ ಸಾವಾಧಾನ ಸುಮುಹೂರ್ತ ಸಾವಾಧಾನ
           ಆಡುವ ನಾವಾಡುವಾ ಮದುವೇ ಆಟ ಆಡುವ ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ
           ಎಂಥ ಆಟ ಎಂಥ ನೋಟ ಗಂಡು ಹೆಣ್ಣು ಒಬ್ರೂ ಇಲ್ದೇ ಜೋಯಿಸ್ ಅಂದ್ರೇ ಯಾರ್ ಕಾಣೇ
           ಇನ್ನೂ ಅವನು ಬಂದೆ ಇಲ್ವೇ ..
ಗಂಡು : ನಮ್ಮ ಕೇರಿ ಹುಡುಗರೆಲ್ಲ ನಮ್ಮ ಮದುವೇ ಮಾಡಲಿಲ್ವೆ
ಹೆಣ್ಣು : ಅಂದು ನಾನೇ ಜೋಯಿಸಳಾಗಿ ಮದುವೇ ಕಾರ್ಯ ನಡೆಸಲಿಲ್ವೆ ..
           ಆಡುವ ನಾವಾಡುವಾ ಮದುವೇ ಆಟ ಆಡುವ ನಮ್ಮ ಕಷ್ಟ ಕಳೆಯಿತಿಂದು ಕುಣಿದಾಡುವ
----------------------------------------------------------------------------------------------
 
ಸೂಪರ ನೋವಾ ೪೫೯(೧೯೯೪) - ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಕರೀಂಖಾನ  ಗಾಯನ : ರಾಜಕುಮಾರ ಭಾರತಿ

ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ
ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ

ನಿಸನೀಸ ಗಸ ಮದಮದನಿದ ದಮದಮದ ಗನಿಸನಿಸಾ ನಿದಗಮ ಮಗನಿಸ
ಗಾಗಗಾಗ ಗಗ ಗಮದಮ ಗಮ ನಿದ ಸಾಸಸಾ ಸಸಸ ಸನೀಸನಿ ಸನಿದ
ಸಾಸಸಾಸಸ ಗಮಗಮ ಗಮದ ಸಾಸಸಾಸಸ ಸನಿಸ ನಿದನಿ ಗಮದ
ಜಯದೇವ ಮಹಾದೇವ ಜಗದೇಕ ಸಂಜೀವ ಚಾತುರ್ಯದಿಂದ ರೂಪಿಸಿದ ಭೂಗ್ರಹವ
ಜಯದೇವ ಮಹಾದೇವ ಜಗದೇಕ ಸಂಜೀವ ಚಾತುರ್ಯದಿಂದ ರೂಪಿಸಿದ ಭೂಗ್ರಹವ
ಮೂಲಧಾತುಗಳ ಭಂಡಾರ ಭೂರಂಗ ಜನಕೋಟಿ ಪಡೆಯುವ ಸೌಭಾಗ್ಯ ಸಂಪದವ
ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ

ಸನಿಸಗ ಸನಿದನಿ ಮದನಿದಮಸ ಗಮ ಗಮ ದನಿ ಸಗ ಸಗ ಸನಿದಮ ಸಗಮಾ
ಸಾಸಾ ಗಗ ಸಸಸ ಸನಿದ ಮಾಮಾಮಮ ಮಗಮಗ ಮಗಮ
ದಾದಾ ದದದದ ನಿನಿನಿ ನಿನಿನಿ ಮಗಮಗಮ ಗಮಗಮ ಸಾ ಸಸಸ ಸಮಗಮ ಗಮಗ
ನಿನಿನಿ ಗಮಗಮ ಮಗಸ
ಛಲಗಾರ ಧ್ರುವರಾಜ ಗಗನತಾರೇ ತಾನಾದ ಬಾಯಲ್ಲೇ ಶ್ರೀಕೃಷ್ಣ ಬ್ರಹ್ಮಾಂಡ ತೋರಿಸಿದ
ಛಲಗಾರ ಧ್ರುವರಾಜ ಗಗನತಾರೇ ತಾನಾದ ಬಾಯಲ್ಲೇ ಶ್ರೀಕೃಷ್ಣ ಬ್ರಹ್ಮಾಂಡ ತೋರಿಸಿದ
ಗುರುವು ಗ್ರಹದ ಕೂಟ ತರೀತಿದೆ ಮಹಯೋಗ ಧಾತುಗಳ ಸಮ್ಮಿಲನ ಪಡೆಯೋಣ ನವರುತನ
ಗುರಿಬೇಕು ನಡೆಯಲ್ಲಿ ನಿಜಬೇಕು ನುಡಿಯಲ್ಲಿ
ಛಲಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ
---------------------------------------------------------------------------------------------
 
ಸೂಪರ ನೋವಾ ೪೫೯(೧೯೯೪) - ತಪ್ಪಲ್ಲ ತಪ್ಪಲ್ಲ ಬಯಕೆಯ ತಾಣ ಬಯಸಿದರೇನು
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಕರೀಂಖಾನ  ಗಾಯನ : ಮಂಜುಳ,

ತಪ್ಪಲ.. ತಪ್ಪಲ್ಲ ಬಯಕೆಯ ತಾಣ ಬಯಸಿದರೇನೂ ತಪ್ಪಲ.. ತಪ್ಪಲ್ಲ ತಪ್ಪಲ.. ತಪ್ಪಲ್ಲ
ತಪ್ಪಲ.. ತಪ್ಪಲ್ಲ ಬಯಕೆಯ ತಾಣ ಬಯಸಿದರೇನೂ ತಪ್ಪಲ.. ತಪ್ಪಲ್ಲ ತಪ್ಪಲ.. ತಪ್ಪಲ್ಲ

ಚಂದ್ರನ ಕಂಡು ನೈದಿಲೆ ನಕ್ಕರೆ ತಪ್ಪಲ್ಲ ಕಮಲವ ಕಂಡು ದುಂಬಿಯು ಬಂದರೆ ತಪ್ಪಲ್ಲ
ಚಂದ್ರನ ಕಂಡು ನೈದಿಲೆ ನಕ್ಕರೆ ತಪ್ಪಲ್ಲ ಕಮಲವ ಕಂಡು ದುಂಬಿಯು ಬಂದರೆ ತಪ್ಪಲ್ಲ
ಹಣ್ಣನ್ನೂ ಕಂಡು ಹಕ್ಕಿಯು ಉಲಿದರೇ ತಪ್ಪಲ್ಲ ತಾಯೆದೆ ಹಾಲು ಮಗು ಬಯಸಿದರೇ ತಪ್ಪಲ್ಲ
ತಪ್ಪಲ.. ತಪ್ಪಲ್ಲ ಬಯಕೆಯ ತಾಣ ಬಯಸಿದರೇನೂ ತಪ್ಪಲ.. ತಪ್ಪಲ್ಲ ತಪ್ಪಲ.. ತಪ್ಪಲ್ಲ

ಈ ತಪ್ಪಿಗೆ ಶಿಕ್ಷೇ ವಿಧಿಸದೇ ಇದ್ದರೂ ತಪ್ಪಲ್ಲ ಪ್ರೀತಿ ದಯಾಗುಣ ತೋರಿದರೀಗ ತಪ್ಪಲ್ಲ
ಈ ತಪ್ಪಿಗೆ ಶಿಕ್ಷೇ ವಿಧಿಸದೇ ಇದ್ದರೂ ತಪ್ಪಲ್ಲ ಪ್ರೀತಿ ದಯಾಗುಣ ತೋರಿದರೀಗ ತಪ್ಪಲ್ಲ
ಕೋಪ ತಾಪವ ಮರೆತರೇ ಕೇಳಿ ತಪ್ಪಲ್ಲ .. ನಾವೇ ವಿಶ್ವದ ಮಾನವರಾದರೇ ತಪ್ಪಲ್ಲಾ..
ತಪ್ಪಲ.. ತಪ್ಪಲ್ಲ ಬಯಕೆಯ ತಾಣ ಬಯಸಿದರೇನೂ ತಪ್ಪಲ.. ತಪ್ಪಲ್ಲ ತಪ್ಪಲ.. ತಪ್ಪಲ್ಲ
ತಪ್ಪಲ.. ತಪ್ಪಲ್ಲ ಬಯಕೆಯ ತಾಣ ಬಯಸಿದರೇನೂ ತಪ್ಪಲ.. ತಪ್ಪಲ್ಲ ತಪ್ಪಲ.. ತಪ್ಪಲ್ಲ
---------------------------------------------------------------------------------------------

No comments:

Post a Comment