1280. ಸೂರಪ್ಪ (೨೦೦೦)

ಸೂರಪ್ಪ ಚಲನಚಿತ್ರದ ಹಾಡುಗಳು 
  1. ಈ ಮಣ್ಣಿಗೆ ನಾ ಚಿರಋಣಿ 
  2. ಓ.. ಮಂಗಳದ ರಾಗ ಸ್ವರವೇ 
  3. ಮೋಡ ನೇಸರನಾ ನುಂಗಿತಂತೆ 
  4. ಬಡವನ ಮನೆ ಊಟ ರುಚಿಯಮ್ಮಿ 
  5. ಯಾರು ಕಾಣದ ಸಪ್ತಸಾಗರದ ಗೊತ್ತ ಚೆಲುವೇ 
ಸೂರಪ್ಪ (೨೦೦೦) - ಈ ಮಣ್ಣಿಗೆ ನಾ ಚಿರಋಣಿ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ, ಕೋರಸ್

ಗಂಡು : ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ...
            ಅಮ್ಮಣ್ಣಿಗೇ ನಾ ಚಿರಋಣಿ...  ಅಮ್ಮಣ್ಣಿಗೇ ನಾ ಚಿರಋಣಿ...
            ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ನಮಸ್ತೇ .. ನಮಸ್ತೇ .. ನಮಸ್ತೇ .. ನಮಸ್ತೇ ..
            ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ...
            ಅಮ್ಮಣ್ಣಿಗೇ ನಾ ಚಿರಋಣಿ...  ಅಮ್ಮಣ್ಣಿಗೇ ನಾ ಚಿರಋಣಿ...

ಗಂಡು : ಅಯ್ಯ ಅಂದರೇ .. ಸ್ವರ್ಗ.. ಸ್ವರ್ಗ..  ಎಲವೋ ಎಂದರೇ ನರಕ.. ನರಕ
            ನಾನಲ್ಲ ನೀನೆನುವುದೇ ನಮಸ್ತೇ .. ನಮಸ್ತೇ ..
            ಈ ನಮಸ್ಕಾರ ಸಂಸ್ಕೃತಿಗೇ ನಮಸ್ತೇ .. ನಮಸ್ತೇ ..
ಕೋರಸ್ : ರೈತ ರಾಜ ರೈತ ರಾಜ ಬಾರೋ ಬಾರೋ ಒಂದು ಘಳಿಗೆ
                ಬೆಲ್ಲ ಗಂಗೆ ನೀಡುತೀವಿ ಕುಂತು ಹೋಗೋ ಒಂದು ಘಳಿಗೇ ..
ಗಂಡು : ಕುಂತೋನು ಒಕ್ಕಲೆದ್ದು ಹೋಗುತಾನೇ ಕೂತುಣ್ಣೋನುಮಣ್ಣು ಮಣ್ಣು ಮುಕ್ಕುತ್ತಾನೇ ..
            ಕುಂತೋನು ಒಕ್ಕಲೆದ್ದು ಹೋಗುತಾನೇ ಕೂತುಣ್ಣೋನುಮಣ್ಣು ಮಣ್ಣು ಮುಕ್ಕುತ್ತಾನೇ ..    
            ಉಳೋನು ಒಪ್ಪೋತ್ತೂಣ್ಣುತ್ತಾನೆ ಉತ್ತೂ ಬಿತ್ತೋನು ಉರಿಗಣ್ಣನಿಕ್ಕುತ್ತಾನೆ
            ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ತನುವೇ ಮನವೇ ಧನವೇ ಕೊಡುವೇ
            ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ...
            ಅಮ್ಮಣ್ಣಿಗೇ ನಾ ಚಿರಋಣಿ...  ಅಮ್ಮಣ್ಣಿಗೇ ನಾ ಚಿರಋಣಿ...

ಕೋರಸ್ : ಮುತ್ತಿನಾರತಿ ಎತ್ತೀ ಬಾಲೆರೇ ದ್ಯಾವರಿಗೆ ಮಾತಾಡೋ ದ್ಯಾವರಿಗೇ ಬನ್ನಿ
                ದೃಷ್ಟಿ ತೆಗೆಯಿರವನೀವಳೆಸಿ ದ್ಯಾವರಿಗೇ .. ಈ ಊರಿನ ದ್ಯಾವರಿಗೇ
                ಓ ನಮ್ಮ ಊರಿನ ದ್ಯಾವರಿಗೇ ನಿಮ್ಮ ಪಾದದ ಪುಣ್ಯದಿಂದ ಕಾಲ ಕಾಲಕೆ ಮಳೆಬೆಳೆ
                ಓ ನಮ್ಮ ಊರಿನ ದ್ಯಾವರೇ ನಿಮ್ಮ ತ್ಯಾಗ ಧರ್ಮದಿಂದ ಮನಸಿನೆಲ್ಲರ ಭಾರ ಹೊರೆ.. ಓ..
ಗಂಡು :    ತಂದೆ ಮಾತೆ ವೇದಾಂತ ಶ್ರೀರಾಮಚಂದ್ರ ನಡೆದ
                ತಂದೆ ಮಾತೆ ಕೊನೆಯಂತ ಪರುಶುರಾಮ ತಾಯಿಯ ಕಡೆದ
                ಅಮ್ಮನಾ ಆಸೆಯನ್ನ ಆಜ್ಞೆ ಎಂದವನೇ ಮಹದಾಜ್ಞೆ ಎಂದವನೇ
                ತಾಯಿಯೇ ದೇವರೆಂದು ನಡೆದುಕೊಂಡವನೇ ಮುಡಿಪಿಟ್ಟು ಕೊಂಡವನೇ
         
ಗಂಡು : ಓ.. ಕದ್ದು ದೋಚಿದ ಬೇಡನಿಂದಲೇ ರಾಮಾಯಣ ಬರೆಸೋ ಗುಣ ಈ ಮಣ್ಣಿನಲ್ಲಿದೇ ..
            ಕುರಿಯ ಕಾಯುವ ಕುರುಬನೊಬ್ಬನ ಕವಿರಾಜನೆನಿಸಿದ ಗುಣ ಈ ಮಣ್ಣಿನಲ್ಲಿದೇ .. ಓಓಓಓಓ
             ಜ್ಞಾನಪೀಠದ..  ಜ್ಞಾನಪೀಠದ.. ಶೃಂಗೇರಿ ಎನಿಸಿದ ರನ್ನ ಪಂಪರ ಕೈಲಾಸವೆನಿಸಿದ
             ಪುಣ್ಯಭೂಮಿಯಲ್ಲಿ ಮಗನು ತಾಯ್ ಮರೆವನೇ...
             ಈ  ಮಾತೃ ಭೂಮಿಗೇ ಈ ಸ್ವರ್ಗ ಸೀಮೆಗೆ ನಮಸ್ತೇ .. ನಮಸ್ತೇ .. ನಮಸ್ತೇ ..
             ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ...
             ಅಮ್ಮಣ್ಣಿಗೇ ನಾ ಚಿರಋಣಿ...  ಅಮ್ಮಣ್ಣಿಗೇ ನಾ ಚಿರಋಣಿ...
             ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ನಮಸ್ತೇ .. ನಮಸ್ತೇ .. ನಮಸ್ತೇ .. ನಮಸ್ತೇ ..
             ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ...
             ಅಮ್ಮಣ್ಣಿಗೇ ನಾ ಚಿರಋಣಿ...  ಅಮ್ಮಣ್ಣಿಗೇ ನಾ ಚಿರಋಣಿ...
ಕೋರಸ್ : ಕೋಲ್ ಕೋಲ್ ಬಣ್ಣದ ಕೋಲ್ ಚಿನ್ನಕೋಲ್ ಸೂರಪ್ಪ ಕಾಲ್ ಗೆಜ್ಜೆ ಘಲ್ ಘಲ್ ಅನ್ಸಪ್ಪ..    
                ಕೋಲ್ ಕೋಲ್ ರನ್ನದ ಕೋಲ್ ನೂಕಿ ಕೋಲ್ ಸೂರಪ್ಪ .. ಕಾಲ್ ಗೆಜ್ಜೆ ಘಲ್ ಘಲ್ ಅನ್ಸಪ್ಪ..
 --------------------------------------------------------------------------------------------------

ಸೂರಪ್ಪ (೨೦೦೦) - ಓ.. ಮಂಗಳದ ರಾಗ ಸ್ವರವೇ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ, ಚಿತ್ರಾ

ಹೆಣ್ಣು : ಓ.. ಮಂಗಳದ ರಾಗ ಸ್ವರವೇ.. ಸ್ವರವೇ.. ಸ್ವರವೇ..
          ನೀನೇ ಪ್ರೀತಿಗೇ ಕಾರಣ ನಿನಗೆ ಮೊದಲನೇ ಬಾಗಿನ
          ಓಓಓ .. ದನಿದ ನಿದಸ ರಿಗಪಮಗಸ
ಗಂಡು : ಓ.. ಮಂಗಳದ ರಾಗ ಸ್ವರವೇ.. ಸ್ವರವೇ.. ಸ್ವರವೇ..
          ನೀನೇ ಪ್ರೀತಿಗೇ ಕಾರಣ ನಿನಗೆ ಮೊದಲನೇ ಬಾಗಿನ
          ಓಓಓ .. ದನಿದ ನಿದಸ ರಿಗಪಮಗಸ       

ಹೆಣ್ಣು : ತಾಳೆಯಲೀ ನೋಡಿದ ರಾಗದಕ್ಷರ ಓದಲು ತಿಳಿಯದೆ ಸವಿಯಲ್ಲಿ ನಾ
            ನೀವಿಂದೂ ಓದಿರಿ ನನ್ನ ಎದೆಯಲಿ ಪ್ರೀತಿಯೇ ಕೇಳಿಸಿ ಕಳೆದು ಹೋದೆ ನಾ
ಗಂಡು : ಹೃದಯದ ದೇವಾಲಯಕೆ ಸರಿಗಮಗಳ ಬಾಗಿಲಿಗೆ
            ಕಾಯದೇ ದರುಶನ ದೊರೆಯದು ಅನುರಾಗ ಹಾಡಿದೆ ಸೋಲದೆ ಕೂರದು
ಹೆಣ್ಣು :   ತಂಗಾಳಿಗೆ ತನುವಿಲ್ಲ..         ಗಂಡು : ಅನುಭವಕೆ ರೂಪಿಲ್ಲ
ಹೆಣ್ಣು : ಅನುಮಾನಕೆ ತಳವಿಲ್ಲ           ಗಂಡು : ಅತಿ ಪ್ರೀತಿಗೆ ತಪ್ಪಿಲ್ಲ
ಹೆಣ್ಣು : ಓಓಓ .. ದನಿದ ನಿದಸ ರಿಗಪಮಗಸ
ಗಂಡು : ಓ.. ಮಂಗಳದ ರಾಗ ಸ್ವರವೇ.. ಸ್ವರವೇ.. ಸ್ವರವೇ..
          ನೀನೇ ಪ್ರೀತಿಗೇ ಕಾರಣ ನಿನಗೆ ಮೊದಲನೇ ಬಾಗಿನ
          ಓಓಓ .. ದನಿದ ನಿದಸ ರಿಗಪಮಗಸ       

ಗಂಡು :ಈ ನನ್ನ ಉಸಿರಿನ ಅಳತೆಗೋಲಲಿ ಅಳೆದೆ ನಾ ಹೆಣ್ಣಿನ ಅಂತರಾಳವ
           ಅವಳೆದೆಯಾ ಶ್ವಾಸದ ಉಯ್ಯಾಲೆಯಲ್ಲಿ ಕಂಡೆ ನಾ ಕಂಡೆ ನಾ ನನ್ನ ರೂಪವ
ಹೆಣ್ಣು : ಪದನಿಸಗಳ ಕಲರವವೇ ಏರಿಳಿಯುವಾ ಗಮಕಗಳೇ ಬಾಳಿನಾ ಓಡುವ ನದಿಯಲ್ಲಿ
           ಓ.. ರಾಗ ದೋಣಿಯು ಕಾಲದಾ ಕಡಲಲಿ
ಗಂಡು : ಕಲ್ಲೊಳಗೂ ಗಂಗೆ ಇದೆ                 ಹೆಣ್ಣು : ಮೈಯ್ಯೊಳಗೂ ಹೂವು ಇದೇ
ಗಂಡು : ಇರುಳಲ್ಲೂ ಬೆಳಕು ಇದೆ                 ಹೆಣ್ಣು : ಬೀಜಗಳ ವೃಕ್ಷವಿದೆ
ಗಂಡು : ಓಓಓ .. ದನಿದ ನಿದಸ ರಿಗಪಮಗಸ       
ಹೆಣ್ಣು : ಓ.. ಮಂಗಳದ ರಾಗ ಸ್ವರವೇ.. ಸ್ವರವೇ.. ಸ್ವರವೇ..
ಇಬ್ಬರು : ನೀನೇ ಪ್ರೀತಿಗೇ ಕಾರಣ ನಿನಗೆ ಮೊದಲನೇ ಬಾಗಿನ
              ಓಓಓ .. ದನಿದ ನಿದಸ ರಿಗಪಮಗಸ
---------------------------------------------------------------------------------------------------

ಸೂರಪ್ಪ (೨೦೦೦) - ಮೋಡ ನೇಸರನಾ ನುಂಗಿತಂತೆ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ,

ಮೋಡ ನೇಸರನಾ ನುಂಗಿತಂತೆ ನೋಡಾ ..
ಸೂರ್ಯನೊಬ್ಬನೇ ಚಂದ್ರ ನೊಬ್ಬನೇ ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ ನ್ಯಾಯವೆಂದರೇ ಸೂರಪ್ಪನೊಬ್ಬನೇ ..
ನಿಂದೆಯಾಗಲೀ .. ದೋಷಿ ಎನ್ನಲ್ಲಿ ಸತ್ಯವಂತ.. ಸತ್ಯವಂತ
ಎಂದಿಗೂ ಹೆದರನೂ .. ಕಂಬನಿ ಮಿಡಿಯನೂ
ಸೂರ್ಯನೊಬ್ಬನೇ ಚಂದ್ರ ನೊಬ್ಬನೇ ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ ನ್ಯಾಯವೆಂದರೇ ಸೂರಪ್ಪನೊಬ್ಬನೇ .. 

ನಿಂತ ಭೂಮಿ ಬಿರಿದರೇ ವೃಕ್ಷ ದೋಷವೇನಿದೆ
ಆಣೆ ಮೀರಿ ಹೋದರೇ ಲಕ್ಷ್ಮಣ ರೇಖೆಯದೇನಿದೇ
ಬೇಸಿಗೆ ಬಂದರೆ ಬಿಸಿಲಿನ ಝಳ ಝಳ
ಸಹಿಸಲವೂ ಬೆಟ್ಟಕೂ ಚೈತ್ರದ ತಳಮಳ
ಕಣ್ಣೇ .. ಕನಸಲ್ಲೇ ಕಸಿಯಿತಂತೆ ಕೇಳಾ ..
ಸೂರ್ಯನೊಬ್ಬನೇ ಚಂದ್ರ ನೊಬ್ಬನೇ ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ ನ್ಯಾಯವೆಂದರೇ ಸೂರಪ್ಪನೊಬ್ಬನೇ ..

ತಾನೊಂದು ನೆನೆದರೇ ದೈವ ಒಂದು ಬಗೆವುದೂ
ಬಾಣಲೆಯಿಂದ ರಕ್ಷಿಸಿ ಉರಿವ ಬೆಂಕಿಗೆಸೆವುದೂ
ಕಷ್ಟಗಳ ಕಜ್ಜಾಯ ದೇವರಿಗೆ ಬಲುಪ್ರಿಯ
ನಾವೇ ತಿನಿಸಲಿ ಅನ್ನೋದವನುಪಾಯ
ತಾಳ ಅದು ಯಾಕೋ ತಪ್ಪಿತಂತೆ ತಾಳಾ ..
ಸೂರ್ಯನೊಬ್ಬನೇ ಚಂದ್ರ ನೊಬ್ಬನೇ ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ ನ್ಯಾಯವೆಂದರೇ ಸೂರಪ್ಪನೊಬ್ಬನೇ ..
ನಿಂದೆಯಾಗಲೀ .. ದೋಷಿ ಎನ್ನಲ್ಲಿ ಸತ್ಯವಂತ.. ಸತ್ಯವಂತ
ಎಂದಿಗೂ ಹೆದರನೂ .. ಕಂಬನಿ ಮಿಡಿಯನೂ
ಸೂರ್ಯನೊಬ್ಬನೇ ಚಂದ್ರ ನೊಬ್ಬನೇ ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ ನ್ಯಾಯವೆಂದರೇ ಸೂರಪ್ಪನೊಬ್ಬನೇ .. 
---------------------------------------------------------------------------------------------------

ಸೂರಪ್ಪ (೨೦೦೦) - ಬಡವನ ಮನೆ ಊಟ ರುಚಿಯಮ್ಮಿ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ

ಹೆಣ್ಣು : ಆ ಆ ಆ... ಆ ಆ ಆ...
ಗಂಡು : ಬಡವನ ಮನೆ ಊಟ ರುಚಿಯಮ್ಮಿ
            ರಂಗ ರಂಗ ನಂದ (ಆ ಆ ಆ) ಬಿಳಿ ಗಿರಿ ರಂಗ ನಂದ
            ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ
            ರಂಗ ರಂಗ ನಂದ (ಆ ಆ ಆ) ಬಿಳಿ ಗಿರಿ ರಂಗ ನಂದ
            ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮಿ ಈ ಈ ಈ
            ಬಡವನ ಮನೆ ಊಟ ರುಚಿಯಮ್ಮಿ
            ರಂಗ ರಂಗ ನಂದ(ಆ ಆ ಆ)  ಬಿಳಿ ಗಿರಿ ರಂಗ ನಂದ
            ರಂಗ ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ

ಗಂಡು : ತತ್ತಾರಮ್ಮಿ ಮಜ್ಜಿಗೆ ರಾಗಿ ಅಮ್ಲಿ ಮನಸೋ ಹಿಗ್ಗಿ
            ಹುಟ್ಟುವೆ ಅಂಬಲಿಯಾ ಹೆಸರೇಳೋ ನಿನ್ನಯ ಮಗನಾಗಿ
            ತತ್ತಾರಮ್ಮಿ ಬಾಯಿಗೆರಡು ಉಪ್ಪಿನ ಕಾಳು ಬಾಯ್ ಚಪ್ಪರಿಸಿ
            ದುಡಿಯುವೆ ಏಳೇಳು ಜನುಮದಲು ಉಪ್ಪಿನ ಋಣಕಾಗಿ
ಹೆಣ್ಣು :    ಆ ಆ ಆ ಅಂಬಲಿಗೆ ಹರಿಕಥೆಯೇ ಉಪ್ಪಿಗೆ ಉಪಕಥೆಯೇ
ಗಂಡು : ಎತ್ತಿಗೆ ಎಡ ಬಲವೇ ತುತ್ತಿಗೆ ಕುಲ ಜನವೇ ಹೇ ಹೇ ಹೇ
            ಹೇಳೇ ಅಮ್ಮಿ ಸಾಕಿ ಸಲಹುವ ತಾಯಿ ಚಂದವೋ
            ಧರಣಿ ಚಂದವೋ ಧರಣಿಯಂಥ ಈ ಸಾಕು ತಾಯಿಯ ಸಲಿಗೆ ಚಂದವೋ
            ಬಡವನ ಮನೆ ಊಟ ರುಚಿಯಮ್ಮಿ
            ರಂಗ ರಂಗ ನಂದ(ಆ ಆ ಆ)  ಬಿಳಿ ಗಿರಿ ರಂಗ ನಂದ
            ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ

ಗಂಡು : ಆ ತಾಯಿ ಶಬರಿ ತಿನಿಸಿದಳು ಎಂಜೆಲ ಹಣ್ಣು
            ಹೇಳೇ ಅಮ್ಮಿ ರಾಮನಿಗೆ ಕುಲ ಹೊಯ್ತ ಛಲ ಹೊಯ್ತ ಬಿಲ್ಲಿನ ಬಲ ಹೊಯ್ತ
            ಆ ಧ್ರೌಪದಮ್ಮ ಬಡಿಸಿದಳು ಒಂದೇ ಅಗಳು ಹೇಳೇ ಅಮ್ಮಿ
            ಕೃಷ್ಣನಿಗೆ ಹಸಿವಿತ್ತ ಅಗಳಿಂದ ಹೊಟ್ಟೆ ತುಂಬೋಯ್ತಾ
ಹೆಣ್ಣು :   ಆ ಆ ಆ ಮಾತಿನಲಿ ಬಲು ಮಳ್ಳ ರಾಗಿ ಮುದ್ದೆ ಕದ್ ಕಳ್ಳ
ಗಂಡು : ನಾನು ಕದ್ರೆ ಕಳ್ಳಾನಾ ದೇವ್ರು ಕದ್ರೆ ಇಲ್ಲೇನಾ ಹೇಳೇ ಅಮ್ಮಿ
            ಕದ್ದು ನೋಡುವ ಹೆಣ್ಣು ಚಂದವೇ ತೆನೆಯು ಚಂದವೇ
            ಮೋಡ ಚಂದವೇ ಮೋಡ ಬೆಳಗಿನ ಚಂದ್ರ ಚಂದವೇ ಹೇ ಹೇ ಹೇ
            ಬಡವನ ಮನೆ ಊಟ ರುಚಿಯಮ್ಮಿ
            ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ
            ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ
            ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ
            ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮೀ ಈ ಈ ಈ
            ಬಡವನ ಮನೆ ಊಟ ರುಚಿಯಮ್ಮಿ
            ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ
            ರಂಗ ರಂಗ ನಂದ(ಆ ಆ ಆ) ಬಿಳಿ ಗಿರಿ ರಂಗ ನಂದ
---------------------------------------------------------------------------------------------------

ಸೂರಪ್ಪ (೨೦೦೦) - ಯಾರು ಕಾಣದ ಸಪ್ತಸಾಗರದ ಗೊತ್ತ ಚೆಲುವೇ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ರಾಜೇಶ, ಚಿತ್ರಾ

ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ..
ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ
ಗಂಡು : ಹೇಳಿ ಬಿಟ್ಟರೆ ಕೇಳ ಬರಲೇ
ಹೆಣ್ಣು : ಮನಸು ಕೊಟ್ಟರೇ ಕೇಳಬಲ್ಲೆ
ಗಂಡು : ರತ್ತೋ ರತ್ತೋ                     ಹೆಣ್ಣು : ಬಿತ್ತೋ.. ಬಿತ್ತೋ
ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ..
ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ

ಗಂಡು : ಹೂವೇ ಹೆಣ್ಣು ಆ ಹೂವೂ ನೀನೂ .. 
ಹೆಣ್ಣು : ಹೆಣ್ಣಾ ಮನಸೇ ಕಡಲಲ್ಲವೇನು 
ಗಂಡು : ರತ್ತೋ ರತ್ತೋ                     ಹೆಣ್ಣು : ಬಿತ್ತೋ.. ಬಿತ್ತೋ
ಗಂಡು : ಮೊದಲೆರಡಾಗಿ ಅದರೊಳಗೊಂದಾಗಿ ಮತ್ತೊಂದಾಗುವ 
            ಮುತ್ತಿಂದಾಗುವ ಒಡವೆ ಯಾವುದೂ.. 
ಹೆಣ್ಣು : ಮೊಗದಲಿ ಇರುವ ಕೂಗಿ ಕೊಡುವ ಸಂತೆಲಿಲ್ಲದ ಕಡಲು ಕಾಣದ ಒಡವೆ ಯಾವುದೂ 
ಗಂಡು : ಕೂಗಿ ಕೊಡುವುದೂ ಮುತ್ತೇನು.. 
ಹೆಣ್ಣು : ಮುತ್ತಿನಿಂದ ಮುದ್ದು ಮಗುವೇನೂ .. 
ಗಂಡು : ರತ್ತೋ ರತ್ತೋ                     ಹೆಣ್ಣು : ಬಿತ್ತೋ.. ಬಿತ್ತೋ
ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ..
ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ

ಹೆಣ್ಣು : ಕಣ ಕಣದಲ್ಲೂ ಕೊನೆ ಕ್ಷಣದಲ್ಲೂ ಗಂಡ ಅನ್ನುವ ಅಳಿದು ಉಳಿಯುವ ಒಡವೆ ಯಾವುದೂ .. 
ಗಂಡು : ಹೆಣ್ಣಿನ ಮನಸೇ ಕಡಲಾಗಿರಲು ಅಲ್ಲೇ ತೇಲುವ ತೇಲಿ ಸಾಗುವ ಬೆಂಡೋಲೆ ಯಾವುದೂ 
ಹೆಣ್ಣು : ದೋಣಿ ಒಲವಿನ ದೋಣಿಯಿದು 
ಗಂಡು : ಕುಂಕುಮವೇ ಅಳಿದುಳಿಯುವುದೂ 
ಗಂಡು : ರತ್ತೋ ರತ್ತೋ                     ಹೆಣ್ಣು : ಬಿತ್ತೋ.. ಬಿತ್ತೋ
ಗಂಡು : ಕೋಟಿ ಚಿನ್ನ ತೂಗದ ಕೊಂಬು ಗೊತ್ತ ಚೆಲುವೇ .. 
ಹೆಣ್ಣು : ಕೊಂಬು ಊದದೆ ಕಾಯೋ ಸೈನ್ಯ ಗೊತ್ತ ಚೆಲುವಾ... 
ಗಂಡು : ಕಪ್ಪು ಸೈನ್ಯ ಕರಿಮಣಿ ಏನೂ 
ಹೆಣ್ಣು : ಕೊಂಬು ಅರಿಷಿಣದ ಕೊಂಬೆನೂ 
ಗಂಡು : ರತ್ತೋ ರತ್ತೋ                     ಹೆಣ್ಣು : ಬಿತ್ತೋ.. ಬಿತ್ತೋ
ಗಂಡು : ಯಾರು ಕಾಣದ ಸಪ್ತಸಾಗರ ಗೊತ್ತ ಚೆಲುವೆ..
ಹೆಣ್ಣು : ಆರು ಕಾಲ ಅರಳೋ ಹೂವು ಗೊತ್ತ ಚೆಲುವಾ
ಗಂಡು : ಹೇಳಿ ಬಿಟ್ಟರೆ ಕೇಳ ಬರಲೇ
ಹೆಣ್ಣು : ಮನಸು ಕೊಟ್ಟರೇ ಕೇಳಬಲ್ಲೆ
ಗಂಡು : ರತ್ತೋ ರತ್ತೋ                     ಹೆಣ್ಣು : ಬಿತ್ತೋ.. ಬಿತ್ತೋ
--------------------------------------------------------------------------------------------------

No comments:

Post a Comment