1290. ಸೂರ್ಯೋದಯ (೧೯೯೩)

ಸೂರ್ಯೋದಯ ಚಲನಚಿತ್ರದ ಹಾಡುಗಳು 
  1. ಇದು ಮನ್ಮಥ ರಾಜ್ಯವು ಚೈತ್ರದ ಮಾಸವು 
  2. ಮುತ್ತಿದ ಕತ್ತಲೆ ದೂಡಿ ನೆತ್ತರ ನೇಸರನು ಮೂಡಿ 
  3. ಕಾಲೇಜು ಹ್ಯಾಪೀ .. ಲೈಫೇ 
  4. ಸೂರ್ಯೋದಯ ಇದು ಸೂರ್ಯೋದಯ 
  5. ಡಮ್ಮರ್ ದಮ್ಮ ಡ್ರಮ್ಮಿನ ಬೀಟು 
ಸೂರ್ಯೋದಯ (೧೯೯೩) - ಇದು ಮನ್ಮಥ ರಾಜ್ಯವು ಚೈತ್ರದ ಮಾಸವು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ., ಚಿತ್ರ

ಗಂಡು : ಇದು ಮನ್ಮಥ ರಾಜ್ಯವು ಚೈತ್ರದ ಮಾಸವು ಪ್ರೇಮದಾ ಕಾಲವು
            ಸಿಹಿ ಮುತ್ತಿನ ಮತ್ತನು ಮೆತ್ತಗೆ ನೀಡುವ ಮೋಹದ ಜಾಲವು
            ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ
ಹೆಣ್ಣು : ನಾ ತಾಳಲಾರೆ ನೀ ಕೇಳು ನನ್ನ ಹೃದಯದಾ ವಿರಹದ ಕಥೆಯನು
ಗಂಡು : ಇದು ಮನ್ಮಥ ರಾಜ್ಯವು ಚೈತ್ರದ ಮಾಸವು ಪ್ರೇಮದಾ ಕಾಲವು

ಗಂಡು : ಇಲ್ಲಿ ಏಕಾಂತ ಕೈಲಿ ವೇದಾಂತ ಬೇಡಾ ಈ ತೊಂದರೇ ..
            ಇಲ್ಲಿ ಏಕಾಂತ ಕೈಲಿ ವೇದಾಂತ ಬೇಡಾ ಈ ತೊಂದರೇ ..
             ಒಮ್ಮೆ ನೀ ಬಂದರೆ ಸಂಗಾ ನೀ ತಂದರೇ ಸ್ವರ್ಗವು ತೋಳಿನ ಬಂಧನಾ..
ಹೆಣ್ಣು : ಕಣ್ಣ ಕಣ್ಣಲ್ಲಿ ಆಡೋ ಮಾತಲ್ಲಿ ಏನೋ ನೂರಾರ್ಥವೂ
          ಸ್ಪರ್ಶ ರೋಮಾಂಚನ ಪ್ರೇಮ ಆರಾಧನಾ ತಂದಿದೆ ಸಂಗಮ ಸಂಭ್ರಮ
ಗಂಡು : ನೀ ಜೊತೆ ಇದ್ದಾಗಲೇ ಜೀವನ ಜೇನಲ್ಲವೇ
            ಇದು ಮನ್ಮಥ ರಾಜ್ಯವು ಚೈತ್ರದ ಮಾಸವು ಪ್ರೇಮದಾ ಕಾಲವು
            ಸಿಹಿ ಮುತ್ತಿನ ಮತ್ತನು ಮೆತ್ತಗೆ ನೀಡುವ ಮೋಹದ ಜಾಲವು
            ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ

ಗಂಡು : ಲಾ ಲಾ ಲಾ ಲಾ ಲಾ ಲಾ    ಹೆಣ್ಣು : ಲಾ ಲಾ ಲಾ ಲಾ ಲಾ ಲಾ
ಗಂಡು : ಲಾ ಲಾ ಲಾ ಲಾ ಲಾ ಲಾ    ಹೆಣ್ಣು : ಲಾ ಲಾ ಲಾ ಲಾ ಲಾ ಲಾ
ಗಂಡು : ಲಾ ಲಾ ಲಾ ಲಾ ಲಾ ಲಾ 
ಇಬ್ಬರು : ಲಾ ಲಾ ಲಾ ಲಾ ಲಾ ಲಾ
ಹೆಣ್ಣು : ರಂಗು ರಂಗಾದ ಹೂವ ಶೃಂಗಾರ ಎಲ್ಲಾ ನಿನಗಾಗಿಯೇ ..
          ರಂಗು ರಂಗಾದ ಹೂವ ಶೃಂಗಾರ ಎಲ್ಲಾ ನಿನಗಾಗಿಯೇ ..
          ನಲ್ಲಾ ನೀನಿಲ್ಲದೇ ಕಾಡಿ ತಾ ನಿಂತಿದೇ ಈಗಲೇ ಸೌರಭ ಸವಿಯೇ ಬಾ
ಗಂಡು : ಹೂವ ರಾಶಿಲಿ ನೋಡು ನಾನಿಲ್ಲಿ ನಿಂತೇ ನಿನಗಾಗಿಯೇ
            ಪ್ರೇಮ ಪೂಜಾರಿಯ ಪೂಜೆಯೇ ಆಲಿಂಗನಾ ಮಂತ್ರವೇ ಈ ನನ್ನ ಚುಂಬನಾ
ಹೆಣ್ಣು : ನೀನಿಲ್ಲಿ ಪ್ರೇಮೋದಯ ನಿನ್ನಿಂದ ಭಾಗ್ಯೋದಯ
ಗಂಡು : ಇದು ಮನ್ಮಥ ರಾಜ್ಯವು ಚೈತ್ರದ ಮಾಸವು ಪ್ರೇಮದಾ ಕಾಲವು
            ಸಿಹಿ ಮುತ್ತಿನ ಮತ್ತನು ಮೆತ್ತಗೆ ನೀಡುವ ಮೋಹದ ಜಾಲವು
            ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ
ಹೆಣ್ಣು : ನಾ ತಾಳಲಾರೆ ನೀ ಕೇಳು ನನ್ನ ಹೃದಯದಾ ವಿರಹದ ಕಥೆಯನು
ಗಂಡು : ಇದು ಮನ್ಮಥ ರಾಜ್ಯವು ಚೈತ್ರದ ಮಾಸವು ಪ್ರೇಮದಾ ಕಾಲವು
----------------------------------------------------------------------------------------------------

ಸೂರ್ಯೋದಯ (೧೯೯೩) - ಮುತ್ತಿದ ಕತ್ತಲೆ ದೂಡಿ ನೆತ್ತರ ನೇಸರನು ಮೂಡಿ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.,

ಗಂಡು : ಮುತ್ತಿದ ಕತ್ತಲೆ ದೂಡಿ ನೆತ್ತರ ನೇಸರು ಮೂಡಿ
            ಎಂದಿಗೇ ಬರುವುದೂ ಬೆಳಕು ಅಂದೇ ಸೂರ್ಯೋದಯ
            ಮುತ್ತಿದ ಕತ್ತಲೆ ದೂಡಿ ನೆತ್ತರ ನೇಸರು ಮೂಡಿ
            ಎಂದಿಗೇ ಬರುವುದೂ ಬೆಳಕು ಅಂದೇ ಸೂರ್ಯೋದಯ
ಹೆಣ್ಣು : ಲಾ ಲಾ ಲಾ ಲಾ ಲಾ ಲಾ ಲಾ ಲಾ  ಲಾ             

ಗಂಡು : ನಲ್ಲೇ .. ಜೊತೆ ನಿನ್ನ ಲಲ್ಲೆಯಲ್ಲಿ ಕಳೆದ ಶೃಂಗಾರ ಘಳಿಗೆ 
            ನಲ್ಲೇ .. ಜೊತೆ ನಿನ್ನ ಲಲ್ಲೆಯಲ್ಲಿ ಕಳೆದ ಶೃಂಗಾರ ಘಳಿಗೆ 
            ಎಡೆಬಿಡದೇ ನೆನಪಾಗುತಲಿ ರೋಮಾಂಚ ಜೀವಕೇ 
            ತಣ್ಣನೆಯ ಸಿರಿ ಹುಣ್ಣಿಮೆ ಪ್ರೀತಿ ಕಣ್ಣ ತುಂಬಿ ಒಸಗೇ 
            ಬೆಸುಗೆಯಲಿ ಸವಿ ಹೀರುತಲಿ ಸಂತೋಷ ಬಾಳಿಗೇ 
            ಬೆಂಕಿ ಬುಗಿಲು ಹೊತ್ತಿ ಉರಿಯೋ ಬೇಟೆಯಾ ಆಡುವೇ 
            ಮುತ್ತಿದ ಕತ್ತಲೆ ದೂಡಿ ನೆತ್ತರ ನೇಸರು ಮೂಡಿ
            ಎಂದಿಗೇ ಬರುವುದೂ ಬೆಳಕು ಅಂದೇ ಸೂರ್ಯೋದಯ

ಗಂಡು : ಮದುವೆಯಂಬ ಶುಭ ಕನಸಿನಲಿ ತೇಲಿ ಓಲಾಡೋ ಬಾಲೇ .. 
            ಮದುವೆಯಂಬ ಶುಭ ಕನಸಿನಲಿ ತೇಲಿ ಓಲಾಡೋ ಬಾಲೇ .. 
            ಹಗೆಯ ಹೊಗೆ ನಗೆ ಕೊಲ್ಲುತಲಿ ನೂರು ಆಂತಕ ಜ್ವಾಲೇ 
            ಮತ್ಸರದ ವಿಷ ಚಕ್ರದಲಿ ತಿರುಗೆ ತಿರುಗುತ್ತ ನಂಜು 
            ಯಾತನೆಯ ಮನ ಕುದಿಯುತಲಿ ಆಯಿತೇ ಉರಿವ ಪಂಜು 
             ಎಂದು ಗುರಿಯನು ಮುಟ್ಟಿ ನಗುವೆನು ಅಂದೇನೇ ಶಾಂತಿಯು 
            ಮುತ್ತಿದ ಕತ್ತಲೆ ದೂಡಿ ನೆತ್ತರ ನೇಸರು ಮೂಡಿ
            ಎಂದಿಗೇ ಬರುವುದೂ ಬೆಳಕು ಅಂದೇ ಸೂರ್ಯೋದಯ
ಹೆಣ್ಣು : ಲಾ ಲಾ ಲಾ ಲಾ ಲಾ ಲಾ ಲಾ ಲಾ  ಲಾ             
----------------------------------------------------------------------------------------------------

ಸೂರ್ಯೋದಯ (೧೯೯೩) - ಕಾಲೇಜು ಹ್ಯಾಪೀ .. ಲೈಫೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ರಾಜೇಶ,ಉಷಾಗಣೇಶ, ಕೋರಸ್

ಕೋರಸ್ : ಲಾಲಾ ಲಾಲಾಲಾ ಲ ಲ ಲಾಲಾ ಲಾಲಾಲಾ ಲಾಲಾ
ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೋ
            ಟೀನೇಜು ಮತ್ತು ತರೋ ವೈನೋ ವೈನೋ
ಹೆಣ್ಣು : ತಾಳಕ್ಕೆ ನಾವಾಡುವಾ              ಕೋರಸ್ : ಲಾ ಲಾ ಲಾ
ಗಂಡು : ರಾಗಕ್ಕೆ ಕೂಗಾಡುವಾ             ಕೋರಸ್ : ಲಾ ಲಾ ಲಾ
ಹೆಣ್ಣು : ತಾಳಕ್ಕೇ ಸೈಯ್ಯ್ ಎನ್ನುವಾ..     ಕೋರಸ್ : ಲಾ ಲಾ ಲಾ
ಗಂಡು : ಸ್ನೇಹಕ್ಕೆ ಕೈಯ್ಯ್ ನೀಡುವಾ      ಕೋರಸ್ : ಲಾ ಲಾ ಲಾ
ಕೋರಸ್ : ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ 
ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೋ
            ಟೀನೇಜು ಮತ್ತು ತರೋ ವೈನೋ ವೈನೋ 

ಗಂಡು : ನಾವು ಇಲ್ಲಿ ಸೇರಿರೋದೇ ಜಾಲಿ ಮಾಡೋಕೆ ಚಿಂತೆ ಗಿಂತೆ ಎಲ್ಲ ಬಿಟ್ಟು ಕೂಡಿ ಆಡೋಕೆ 
            ಬನ್ನೀರಿ ಕೈ ಸೇರಿಸಿ  
ಹೆಣ್ಣು : ಎಲ್ಲೆಲ್ಲೂ ನಾವು ನಾಳೆ ಪರೀಕ್ಷೆ ಆದಮೇಲೆ ನಾವಿಂದು ಒಂದಾಗುವಾ
ಗಂಡು : ನಮ್ಮ ನಿಮ್ಮ ಕಣ್ಣಿನಲ್ಲಿ ಆಸೆ ತುಂಬೋಣ ನಮ್ಮ ನಮ್ಮ ಹಾರ್ಟಿನಲ್ಲಿ
            ಪ್ರೀತಿ ತುಂಬೋಣ ದ್ವೇಷವ ನಿವಾರಿಸಿ
ಹೆಣ್ಣು : ಎಲ್ಲಿದ್ದರೇನು ನಾವು ಈ ಸ್ನೇಹವೆಂಬ ಹೂವು ನಗಲಿ ಎಂದೆಂದಿಗೂ
ಗಂಡು : ಅಲ್ಲಿ ಇಪ್ಪತ್ತು ಇಲ್ಲಿ ಐವತ್ತು ನಾವು ಆಡೋಣ ಬಾ
            ರಾಕೇನ್ ಡ್ರೋ .. ಸೆಕಿನ್ ಡ್ರೀ ತಮಗೂ ಗೊತ್ತಿಲ್ಲಾ
             ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೋ
            ಟೀನೇಜು ಮತ್ತು ತರೋ ವೈನೋ ವೈನೋ 
ಕೋರಸ್ : ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ 

ಹೆಣ್ಣು : ಬಾಟ್ಲಿ ಫಿಜಿಕ್ಸು ಮ್ಯಾಕ್ಸು ಓದು ಗೋಜು ಇಲ್ಲಿಲ್ಲ 
           ಲವ್ವು ಪಾಠ ನಮಗೆ ಕಲಿಸೋ ಮೇಷ್ಟ್ರು ಬೇಕಿಲ್ಲಾ 
            ಕಲಿಸುತ್ತೆ ಪ್ರಾಯ ಎಲ್ಲಾ 
ಕೋರಸ್ : ಕಾಲೇಜು ಕಿಂಗು ಕ್ವೀನ್ ಮ್ಯಾರೇಜು ಆದರೇನು ಹನಿಮೂನು ಇಲ್ಲೇ ಏನೂ .. 
ಗಂಡು : ಲಕ್ಕು ಬೇಕು ಹಕ್ಕು ಬೇಕು ಪ್ರೀತಿ ಮಾಡೋಕೆ 
            ಕೆಲವರ ಲಕ್ಕು ಜೊಲ್ಲು ಸುರಿಸಿ ಸುಮ್ಮನೆ ನೋಡೋಕೆ 
            ಆಸೆಗೆ ವಯಸ್ಸೇನಿಲ್ಲಾ ರೋಮ್ಯಾನ್ಸೂ ಒಂದು ಹಾಡು 
ಹೆಣ್ಣು : ಸಿಕ್ಕಾಗ ಛಾನ್ಸು ಮಾಡು 
ಇಬ್ಬರು : ಬಿಟ್ಟರೇ ಸಿಕ್ಕೋದಿಲ್ಲಾ 
ಗಂಡು : ಇವುರದ್ದೇ ಪಿಕನಿಕ್ ಹ್ಯಾಪಿ ಮ್ಯೂಜಿಕ್ ಬನ್ನಿ ಸಂತೋಷವೇ 
ಹೆಣ್ಣು : ಸೇರುವಾ ಹಾಡುವಾ ಎಂಜಾಯ್ ಮಾಡುವಾ 
ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೋ
            ಟೀನೇಜು ಮತ್ತು ತರೋ ವೈನೋ ವೈನೋ
ಹೆಣ್ಣು : ತಾಳಕ್ಕೆ ನಾವಾಡುವಾ              ಕೋರಸ್ : ಲಾ ಲಾ ಲಾ
ಗಂಡು : ರಾಗಕ್ಕೆ ಕೂಗಾಡುವಾ             ಕೋರಸ್ : ಲಾ ಲಾ ಲಾ
ಹೆಣ್ಣು : ತಾಳಕ್ಕೇ ಸೈಯ್ಯ್ ಎನ್ನುವಾ..     ಕೋರಸ್ : ಲಾ ಲಾ ಲಾ
ಗಂಡು : ಸ್ನೇಹಕ್ಕೆ ಕೈಯ್ಯ್ ನೀಡುವಾ      ಕೋರಸ್ : ಲಾ ಲಾ ಲಾ
ಕೋರಸ್ : ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ 
ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೋ
            ಟೀನೇಜು ಮತ್ತು ತರೋ ವೈನೋ ವೈನೋ 
----------------------------------------------------------------------------------------------------

ಸೂರ್ಯೋದಯ (೧೯೯೩) - ಸೂರ್ಯೋದಯ ಇದು ಸೂರ್ಯೋದಯ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ., ಕೋರಸ್

ಕೋರಸ್ : ಓಂ ಅಸತೋಮಾ ಸದ್ ಗಮಯಾ ತಮಸೋಮ ಜ್ಯೋತಿರ್ಗಮಯ
               ಮೃತ್ಯೋಮಹ್ ಅಮೃತಂಗಮಯ ಓಂ ಶಾಂತಿ.. ಶಾಂತಿ ಶಾಂತಿಹೀ ..
                ಆಹ್ ಆಹ್ ಆಹ್ ಆಹ್ ....  ಆಹ್ ಆಹ್ ಆಹ್ ಆಹ್ ....
ಗಂಡು : ಸೂರ್ಯೋದಯ ಇಂದು ಸೂರ್ಯೋದಯ
            ಸೂರ್ಯೋದಯ ಇಂದು ಸೂರ್ಯೋದಯ
            ಹೃದಯಾಂತಕಾರ ನಿರ್ಗಮಿಸೇ ಆತ್ಮ ಶಾಂತಿಯ  ಅರುಣೋದಯ
            ಸೂರ್ಯೋದಯ ಇಂದು ಸೂರ್ಯೋದಯ

ಗಂಡು : ಕಂಬನಿಯಿಂದು ಅಕ್ಷರವಾದರೇ ಬರೆವುದ ಶೋಕದ ಕಾಲ 
            ಒಂದೊಂದು ಹನಿಯು ನೆನಪಿನಂಗಳದೇ ನಿರ್ಮಲ 
            ಪ್ರೇಮದ ಸಾಕ್ಷಿಗಳು ಕೈ ಹಿಡಿದವಳು ಆಕಿಲದ ಬೆರೆಯೇ 
            ಬಾಷ್ಪಂಜಲಿಯ ಭಾವೋದಯ ಸೇಡಿನ ದಾಹಕೆ ರಕ್ತ ತರ್ಪಣದ ಶೃದ್ದಾಂಜಲಿಯ ನವೋದಯ 
ಕೋರಸ್: ಆಹ್ ಆಹ್ ಆಹ್ ಆಹ್ ....  ಆಹ್ ಆಹ್ ಆಹ್ ಆಹ್ ....
ಗಂಡು : ಒಲವಿನ ಅಧ್ಯಾಯ ಆರಂಭದಲ್ಲಿ ಆಸೆಯ ಆಂಕುರ ಮನದಲ್ಲಿ ನೀಡಿದ ವಚನವ ಪೂರ್ಣಗೊಳಿಸಲು 
            ತವಕಿಸೋ ಹೃದಯಾ ನೋಡಿಲ್ಲಿ ಭವಿಷ್ಯದೆಡೆಗೆ ದಾರಿ ತುಳಿದಿದೆ 
             ಸಪ್ತಪದಿಗಳಲಿ ಈ ಹೆಜ್ಜೆ ಅಂತ್ಯವ ಹರಿಸಿ ತೂರಾಡುತಿದೆ ಕರ್ತವ್ಯ ಮುಗಿಸಿದ ಹೆಜ್ಜೇ             
ಕೋರಸ್ : ಮಾಂಗಲ್ಯಮ್ ತಂತು ನಾನೇನಾ ಕಂಠೇ ಭದ್ರಾಮಿ ಶುಭಕೆ ಸಂಜೀವ ಸ್ಥಿರ ದರ್ಶಕಂ 
ಗಂಡು : ಸೂರ್ಯೋದಯ ಇಂದು ಸೂರ್ಯೋದಯ
            ಹೃದಯಾಂತಕಾರ ನಿರ್ಗಮಿಸೇ ಆತ್ಮ ಶಾಂತಿಯ  ಅರುಣೋದಯ
            ಸೂರ್ಯೋದಯ ಇಂದು ಸೂರ್ಯೋದಯ
---------------------------------------------------------------------------------------------------

ಸೂರ್ಯೋದಯ (೧೯೯೩) - ಡಮ್ಮರ್ ದಮ್ಮ ಡ್ರಮ್ಮಿನ ಬೀಟು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., ಚಿತ್ರ

ಹೆಣ್ಣು : ದಮ್ಮರೇ ದಮ್ಮ ಡ್ರಮ್ಮಿನ ಬೀಟು ಜುಮ್ಮರೇ ಜುಮ್ಮಾ ಹಾಡಿದೇ ಹಾರ್ಟು ..
          ಹಾಡಿದೇ ಹಾರ್ಟು .. ನನ್ನ ಬೀಟು ನನ್ನ ಹಾರ್ಟ್ ಒನ್ ಬೈಟೂ ..
ಗಂಡು : ದಮ್ಮರೇ ದಮ್ಮ ಡ್ರಮ್ಮಿನ ಬೀಟು ಜುಮ್ಮರೇ ಜುಮ್ಮಾ ಹಾಡಿದೇ ಹಾರ್ಟು ..
          ಹಾಡಿದೇ ಹಾರ್ಟು .. ನನ್ನ ಬೀಟು ನಿನ್ನ ಹಾರ್ಟ್ ಒನ್ ಬೈಟೂ ..
ಹೆಣ್ಣು : ದಮ್ಮರೇ ದಮ್ಮ ಡ್ರಮ್ಮಿನ ಬೀಟು ಜುಮ್ಮರೇ ಜುಮ್ಮಾ ಹಾಡಿದೇ ಹಾರ್ಟು .. 

ಹೆಣ್ಣು : ರಂಗಿನ ಈ ದಿನಾ ನನ್ನ ಮೈ ಮೀಟಿದೆ ಒಳಗಿನ ಆಸೆಯೂ ಗರಿ ತಾ ಬಿಚ್ಚಿದೇ 
           ತಾಳ ತಟ್ಟುತ್ತ ಗೆಲ್ಲು ಜಾಲಿ ಲೈಫಲೀ ಥ್ರಿಲ್ ನಿನ್ನೀ ಚೆಲ್ಲಾಟದಲ್ಲೂ ಛಲವಿದೆ 
ಗಂಡು : ಮದುವೆಯ ಮದ್ದಿದೆ ನಿನ್ನ ಕಣ್ಣ ಅಂದದಿ ಕೆಣಕುವ ಗುದ್ದಿದೆ 
            ನಿನ್ನ ಮೈಮಾಟದಿ ಆಟ ಅನ್ನೋದೇ ಜೂಜು ನೋಟ ಗೆದ್ದಾಗ ಮೋಜು 
            ಸೋಲೇ ನಂಗೆಲ್ಲೂ ಇಲ್ಲ ನಿನ್ನನ್ನೇ ಗೆಲ್ಲುವೇ 
ಹೆಣ್ಣು : ದಮ್ಮರೇ ದಮ್ಮ ಡ್ರಮ್ಮಿನ ಬೀಟು ಜುಮ್ಮರೇ ಜುಮ್ಮಾ ಹಾಡಿದೇ ಹಾರ್ಟು ..
          ಹಾಡಿದೇ ಹಾರ್ಟು .. ನನ್ನ ಬೀಟು ನನ್ನ ಹಾರ್ಟ್ ಒನ್ ಬೈಟೂ ..

ಗಂಡು : ವಯಸ್ಸಿಗೆ ಬೇಕಿದೆ ನವಸಂಗೀತವೂ ಮನಸ್ಸಿಗೇ ಬೇಕೀದೆ  ಸುಖ ಸಂತೋಷವೂ 
            ಕಂಡು ಹೇಳೋದೇ ಒಂದು ಮನಸು ಬಯಸೋದೆ ಒಂದು 
            ಸಿಕ್ಕಿ ನೀ ಬಿದ್ದೇ ಇಂದು ಗಾಳಕೆ 
ಹೆಣ್ಣು : ಬೆಡಗಿನ ಬಂಧನಾ ಬಲು ಬೊಂಬಾಟಾವು      ಗಂಡು : ಆಹ್ .. 
ಹೆಣ್ಣು : ಸಡಗರ ತಂದಿದೆ ನಿನ್ನ ತುಂಟಾಟವೂ           ಗಂಡು : ಆಅಹ್ 
ಹೆಣ್ಣು : ನನ್ನ ಮೈಯ್ಯಲ್ಲಿ ಮಿಂಚು ಇಂಚು ಇಂಚಲ್ಲು ಸಂಚೂ 
          ಪ್ರೀತಿ ವಾತ್ಸಲ್ಯ ಅಂಚು ರಸಿಕನೇ ಗೆಳೆಯನೇ ಧಮ್ಮರೆ ದಮ್ಮ .. 
ಗಂಡು : ದಮ್ಮರೇ ದಮ್ಮ ಡ್ರಮ್ಮಿನ ಬೀಟು ಜುಮ್ಮರೇ ಜುಮ್ಮಾ ಹಾಡಿದೇ ಹಾರ್ಟು ..
          ಹಾಡಿದೇ ಹಾರ್ಟು .. ನನ್ನ ಬೀಟು ನಿನ್ನ ಹಾರ್ಟ್ ಒನ್ ಬೈಟೂ ..
ಹೆಣ್ಣು : ದಮ್ಮರೇ ದಮ್ಮ ಡ್ರಮ್ಮಿನ ಬೀಟು ಜುಮ್ಮರೇ ಜುಮ್ಮಾ ಹಾಡಿದೇ ಹಾರ್ಟು .. 
----------------------------------------------------------------------------------------------------

No comments:

Post a Comment