1118. ಸ್ವರ್ಗದಲ್ಲಿ ಮದುವೆ (೧೯೮೩)

ಸ್ವರ್ಗದಲ್ಲಿ ಮದುವೆ ಚಿತ್ರದ ಹಾಡುಗಳು 
  1. ನೀ ನುಡಿದರೇ  ನಡೆದರೇ ತಾಳ ನೀನೇ ನನ್ನ ಸಂಗೀತ 
  2. ಆಸೆ ನೂರೆಂಟೂ ತಂದಿರುವೇ 
  3. ಅಲ್ಲಾ ಎಂದನು ಅವನು ನೀ ಕಲ್ಲಾಗಿ ನಿಂತೇ ಏಕೆ 
  4. ಲವ್ ಲವ್ ಲವ್ ಎಂದು ಹಾಡುತಿದೆ ಮನಸು 

ಸ್ವರ್ಗದಲ್ಲಿ ಮದುವೆ (೧೯೮೩) - ನೀ ನುಡಿದರೇ ನಡೆದರೇ ತಾಳ ನೀನೇ ನನ್ನ ಸಂಗೀತ
ಸಂಗೀತ : ಎಂ.ರಂಗರಾವ ಗಾಯನ :ಎಸ್.ಪಿ.ಬಿ., ವಾಣಿಜಯರಾಂ

ಗಂಡು : ನೀ ನುಡಿದರೇ ರಾಗ ನೀ ನಡೆದರೇ ತಾಳ ನೀನೇ ಸಂಗೀತ
ಹೆಣ್ಣು : ಈ ಕಂಗಳ ಮಾತೇ ಹೊಸ ಪ್ರೇಮದ ಗೀತೆ ನೀನೇ ಸುಖದ ಸಂಕೇತ
ಗಂಡು : ನೀ ನುಡಿದರೇ ರಾಗ ನೀ ನಡೆದರೇ ತಾಳ ನೀನೇ ಸಂಗೀತ
ಹೆಣ್ಣು : ಈ ಕಂಗಳ ಮಾತೇ ಹೊಸ ಪ್ರೇಮದ ಗೀತೆ ನೀನೇ ಸುಖದ ಸಂಕೇತ

ಹೆಣ್ಣು : ಬರೆದೆ ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ
ಗಂಡು : ಮೂಡಿದ ಹೂವು ನಲುಗೋ ಮುನ್ನ ಬೇರೆಯೇ ಬಾ ತೊಳಲಿ
ಹೆಣ್ಣು : ಸಂಗಾತಿ ಬಾಳಿಗೆ ಕಣ್ಣಾದೆ ಈ ಹೆಣ್ಣಿಗೇ
ಗಂಡು : ಓ.. ಪ್ರೀತಿ ಮಲ್ಲಿಗೆ ಸೌಗಂಧ ಬೀಸೋ ರಾಸಗೇ
ಹೆಣ್ಣು : ಪ್ರೇಮ ಪೂಜೆ ಮಾಡಲೆಂದು ಬಂದೆಯಾ ಇಲ್ಲಿಗೆ
ಗಂಡು : ವರ ಕೊಡು ದೇವಿಯೇ
ಹೆಣ್ಣು : ಈ ಕಂಗಳ ಮಾತೇ ಹೊಸ ಪ್ರೇಮದ ಗೀತೆ ನೀನೇ ಸುಖದ ಸಂಕೇತ
ಗಂಡು : ನೀ ನುಡಿದರೇ ರಾಗ ನೀ ನಡೆದರೇ ತಾಳ ನೀನೇ ಸಂಗೀತ 

ಗಂಡು : ನನ್ನಾ ನಿನ್ನಾ ನಡುವೆ ಎಂಥ ಹೊಂದಾಣಿಕೆ
ಹೆಣ್ಣು : ಬಲ್ಲೆ ನಿನ್ನ ನಾನು ಚೆನ್ನ ಏಕೆ ಪೀಠಿಕೆ
ಗಂಡು : ಗೊತ್ತೇ ನಮ್ಮ ನಂಟು ಆ ಬ್ರಹ್ಮ ಹಾಕಿದ ಗಂಟು
ಹೆಣ್ಣು : ಆಯಿತು ನಮ್ಮ ನಡುವೆ ಆ ಸ್ವರ್ಗದಲ್ಲಿ ಮದುವೇ
ಗಂಡು : ಪ್ರೀತಿಗಿನ್ನೂ ಭೀತಿ ಏಕೇ ನೀಡೆಯಾ ಕೋರಿಕೆ
ಹೆಣ್ಣು : ತರುವೆ ನಾ ಬೇಡಿಕೆ
ಗಂಡು : ನೀ ನುಡಿದರೇ ರಾಗ ನೀ ನಡೆದರೇ ತಾಳ ನೀನೇ ಸಂಗೀತ 
ಹೆಣ್ಣು : ಈ ಕಂಗಳ ಮಾತೇ ಹೊಸ ಪ್ರೇಮದ ಗೀತೆ ನೀನೇ ಸುಖದ ಸಂಕೇತ
--------------------------------------------------------------------------------------------------------------------------

ಸ್ವರ್ಗದಲ್ಲಿ ಮದುವೆ (೧೯೮೩) - ಆಸೆ ನೂರೆಂಟೂ ತಂದಿರುವೇ 
ಸಂಗೀತ : ಎಂ.ರಂಗರಾವ ಗಾಯನ : ಎಸ್.ಪಿ.ಬಿ.  ಎಸ್.ಜಾನಕೀ

ಗಂಡು : ಆಸೆ ನೂರೆಂಟು ತಂದಿರುವೇ                ಹೆಣ್ಣು : ಈ ಕಣ್ಣ ತುಂಬೆಲ್ಲ ತುಂಬಿರುವೇ
ಗಂಡು : ಕಂಡು ನಾನಲ್ಲಿ ಮರೆತೇ                      ಹೆಣ್ಣು : ಇಂದು ನಾ ನಿನ್ನ ಅರಿತೇ
ಇಬ್ಬರು : ಏಕೋ ಏನೋ ನಾನು ನೀನು ಸೇರುವಾಗ ಮೇರೇ ಮಿರಿದೇ
ಗಂಡು : ಆಸೆ ನೂರೆಂಟು ತಂದಿರುವೇ                ಹೆಣ್ಣು : ಈ ಕಣ್ಣ ತುಂಬೆಲ್ಲ ತುಂಬಿರುವೇ

ಗಂಡು : ಯೌವ್ವನ ಮುಂಜಾನೆಯಲ್ಲಿ ಹೂ ನಗೆಯ ರಂಗೋಲಿ ಚೆಲ್ಲಿ ಲಜ್ಜೆಯ ಮೊಗದ ಹತ್ತಿರ ಸೆಳೆದೆ 
            ಸ್ನೇಹವನು ತೋರಿ ಬಾ ಎನಲು ಸೇರುವೇ 
ಹೆಣ್ಣು : ಕನಸಲಿ ಮನಸಲಿ ಧ್ಯಾನ ಎದುರಲಿ ಬಂದಾಗ ಮೌನ ಕಣ್ಣಲ್ಲಿ ಆಸೇ ಚಿಮ್ಮುವ ಭಾಷೆ 
          ನೀ ಅರಿತು ಸೇರೆಯ ಪ್ರೀತಿಯ ತೋರೆಯ 
ಗಂಡು : ಆಸೆ ನೂರೆಂಟು ತಂದಿರುವೇ                ಹೆಣ್ಣು : ಈ ಕಣ್ಣ ತುಂಬೆಲ್ಲ ತುಂಬಿರುವೇ

ಗಂಡು : ಬೆಟ್ಟಕ್ಕೂ ಕಾರಂಜಿ ನಾನು ಲಾವಣ್ಯ ಸವಿಯಾದ ಜೇನು 
           ಚೆಲುವಿನ ಗೊನೆಯ ಒಲವಿನ ಸಿಹಿಯ ಹಂಬಲಿಸಿ ಬಂದಿಹೆ ಸಂಯಮ ತಂದಿಹೇ 
ಹೆಣ್ಣು : ಬಾನಲ್ಲಿ ಹಾರಾಡೋ ಆಸೆ ನೀರಲ್ಲಿ ತೇಲಾಡೋ ಆಸೆ 
          ಪ್ರಣಯ ವೀಣೆ ಮೀಟುವ ಆಸೆ ಪ್ರೇಮರುಚಿ ಬಂದಿದೆ ಮೈ ಮರೆವ ಎಂದಿದೆ 
ಗಂಡು : ಆಸೆ ನೂರೆಂಟು ತಂದಿರುವೇ                ಹೆಣ್ಣು : ಈ ಕಣ್ಣ ತುಂಬೆಲ್ಲ ತುಂಬಿರುವೇ
ಗಂಡು : ಕಂಡು ನಾನಲ್ಲಿ ಮರೆತೇ                      ಹೆಣ್ಣು : ಇಂದು ನಾ ನಿನ್ನ ಅರಿತೇ
ಇಬ್ಬರು : ಏಕೋ ಏನೋ ನಾನು ನೀನು ಸೇರುವಾಗ ಮೇರೇ ಮಿರಿದೇ
ಗಂಡು : ಆಸೆ ನೂರೆಂಟು ತಂದಿರುವೇ                ಹೆಣ್ಣು : ಈ ಕಣ್ಣ ತುಂಬೆಲ್ಲ ತುಂಬಿರುವೇ
--------------------------------------------------------------------------------------------------------------------------

ಸ್ವರ್ಗದಲ್ಲಿ ಮದುವೆ (೧೯೮೩) - ಅಲ್ಲಾ ಎಂದನು ಅವನು ನೀ ಕಲ್ಲಾಗಿ ನಿಂತೇ ಏಕೆ  
ಸಂಗೀತ : ಎಂ.ರಂಗರಾವ ಗಾಯನ : ಎಸ್.ಪಿ.ಬಿ.

ಅಲ್ಲಾ... ಕೃಷ್ಣಾ...
ಅಲ್ಲಾ ಎಂದನು ಅವನು ನೀ ಕಲ್ಲಾಗಿ ನಿಂತೇ ಏಕೇ  ಕೃಷ್ಣ ಎಂದನು ಇವನು ನೀ ಕಣ್ಣೀರ ತಂದೆ ಏಕೆ
ಅಲ್ಲಾ ಎಂದನು ಅವನು ನೀ ಕಲ್ಲಾಗಿ ನಿಂತೇ ಏಕೇ  ಕೃಷ್ಣ ಎಂದನು ಇವನು ನೀ ಕಣ್ಣೀರ ತಂದೆ ಏಕೆ
ಸ್ನೇಹದ ಹೂವೂ ಅರಳಿತು ಇಲ್ಲಿ ಬಡತನವೆಂಬ ಮಣ್ಣಲ್ಲಿ
ಈ ಹೂವುದೂ ನಗಲು ಸೌರಭ ಚೆಲ್ಲಿ ಸಹಿಸದೇ ಹೋಯಿತೇ ನಿನಗಲ್ಲಿ ಅಲ್ಲಾ... ಆಆಆ... ಹೋ ....
ಸ್ನೇಹದ ಹೂವೂ ಅರಳಿತು ಇಲ್ಲಿ ಬಡತನವೆಂಬ ಮಣ್ಣಲ್ಲಿ
ಅವರನ್ನು ಅಗಲಿಸಿ ನೀ ನಲಿದೆ ಕಂಬನಿ ಕಥೆಯನ್ನು ನೀ ಬರೆದೇ
ಅಲ್ಲಾ ಎಂದನು ಅವನು ನೀ ಕಲ್ಲಾಗಿ ನಿಂತೇ ಏಕೇ  ಕೃಷ್ಣ ಎಂದನು ಇವನು ನೀ ಕಣ್ಣೀರ ತಂದೆ ಏಕೆ

ಬೆವರನು ಸುರಿಸಿದ ಸ್ನೇಹಕೆ ಒಬ್ಬ ಫಲವನು ಪಡೆದ ಬೇರೊಬ್ಬ 
ರಕ್ತದ ಬಂಧಕ್ಕೂ ಮೀರಿದ ಪ್ರೀತಿ ತೋರುವ ನೆಂಟ ಇಲ್ಲೊಬ್ಬ 
ನಿನ್ನಲ್ಲಿ ಮೂವರ ಜೀವನ ಸೂತ್ರ ಮುಗಿಸಿದೇ ಏತಕೋ ಒಬ್ಬನ ಪಾತ್ರ 
ಅಲ್ಲಾ ಎಂದನು ಅವನು ನೀ ಕಲ್ಲಾಗಿ ನಿಂತೇ ಏಕೇ  ಕೃಷ್ಣ ಎಂದನು ಇವನು ನೀ ಕಣ್ಣೀರ ತಂದೆ ಏಕೆ 
--------------------------------------------------------------------------------------------------------------------------

ಸ್ವರ್ಗದಲ್ಲಿ ಮದುವೆ (೧೯೮೩) - ಲವ್ ಲವ್ ಲವ್ ಎಂದು ಹಾಡುತಿದೆ ಮನಸು 
ಸಂಗೀತ : ಎಂ.ರಂಗರಾವ ಗಾಯನ : ವಾಣಿಜಯರಾಂ

ಲವ್ ಲವ್ ಲವ್ ಎಂದು ಹಾಡುತಿದೆ ಮನಸು
ಲವ್ ಲವ್ ಲವ್ ಎಂದು ಹೇಳುತಿದೆ ವಯಸು
ನಾ ನಿನ್ನ ಕಂಡಾಗ ನೂರಾಸೇ ಬಂದಾಗ
ಡಬ್ ಡಬ್ ಡಬ್ ಎದೆಯಲಿ ಆವೇಗ ಇದುವೇ ನೋಡು ಅನುರಾಗ ... ಅನುರಾಗ...ಆಆಆ..

ಯೌವ್ವನ ಹೂಬನದಲ್ಲಿ ಪ್ರೀತಿಯು ನಗುತಿರುವಲ್ಲಿ
ಈ ತೋಳಿನ ಬಂಧನದಲ್ಲಿ ಮೈ ಮರೆತಿಹೆ ಆ ಕ್ಷಣದಲ್ಲಿ
ಮಿಂಚೊಂದು ಸುಳಿಯಿತು ಮೈಯಲ್ಲಿ ರೋಮಾಂಚನದ ಗೊಂಚಲೂ ಒಡಲೆಲ್ಲಾ ಆಆಆ...
ಲವ್ ಲವ್ ಲವ್ ಎಂದು ಹಾಡುತಿದೆ ಮನಸು
ಲವ್ ಲವ್ ಲವ್ ಎಂದು ಹೇಳುತಿದೆ ವಯಸು

ಒಲವಿನ ಹನಿ ಹನಿಯಲ್ಲಿ ಸಿಹಿ ಮುತ್ತಿನ ಮಳೆಯಲ್ಲಿ
ಸಿಹಿ ಹೀರುವೇ ತುಟಿಯಲ್ಲಿ ನನಗಾಸೆಗೇ ತೃಪ್ತಿಯೇ ಇಲ್ಲ
ಸಂಭ್ರಮ ತುಂಬಿದೆ ನೋಡಿಲ್ಲಿ ಸಂಗಮ ಬೇಡಿದೆ ನೋಡಿಲ್ಲಿ
ಇದು ನೀನು ತಂದ ದಾಹ ಜೋಡಿ ಬೇಡಿ ಬಂದ ಮೋಹ
ಲವ್ ಲವ್ ಲವ್ ಎಂದು ಹಾಡುತಿದೆ ಮನಸು
ಲವ್ ಲವ್ ಲವ್ ಎಂದು ಹೇಳುತಿದೆ ವಯಸು
ನಾ ನಿನ್ನ ಕಂಡಾಗ ನೂರಾಸೇ ಬಂದಾಗ
ಡಬ್ ಡಬ್ ಡಬ್ ಎದೆಯಲಿ ಆವೇಗ ಇದುವೇ ನೋಡು ಅನುರಾಗ ... ಅನುರಾಗ...ಆಆಆ..
--------------------------------------------------------------------------------------------------------------------------

No comments:

Post a Comment