ಕರ್ನಾಟಕ ಸುಪುತ್ರ ಚಲನಚಿತ್ರದ ಹಾಡುಗಳು
- ಪಂಚರಂಗಿ ಪಂಚರಂಗಿ ಯಾವ ಊರ ಪಂಚರಂಗಿ
- ನಗುತ ನೋವನು ಮರೆಯುತ ಉಳಿದು ಬಾಳಲೇ ಬೇಕು
- ಉದಯವಾಯಿತು ಪ್ರೇಮ ಕವನ
- ಆ ವಿಧಿ ತಂದ ಸಂಬಂಧ ಏನೇನೋ ಬಾಂಧವ್ಯ
- ಕನ್ನಡವ ಮರೆಯದಿರು ಕನ್ನಡದ ಓ ಕಂದ
- ಕರುನಾಡ ಸುಪುತ್ರ ಓ ಧೀರ
- ಮದುವೇ ಎಂಬ ಬಾಳ ಬಂಧ
- ಹೂಬನದಾ ಸಿಹಿ ಜೇನು ಇದು
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಪಂಚರಂಗಿ ಪಂಚರಂಗಿ ಯಾವ ಊರ ಪಂಚರಂಗಿ
ಹಾಯ್ ರೇ ಹಾಯ್ ಹಾಯ್ ರೇ ಹಾಯ್
ಮುಟ್ಟಿದಾಗ ಪಂಚರಾಗೋ ಹೂವಿನಂಥ ಕೋಮಲಾಂಗಿ
ಹಾಯ್ ರೇ ಹಾಯ್ ಹಾಯ್ ರೇ ಹಾಯ್
ಜಾಲಿ ಹೂವು ಜಾನೇಮನ್ ಹಾಯ್ ರೇ ಹಾಯ್
ನಾನು ನೋಡು ಜಾಲಿ ಮ್ಯಾನ್ ಹಾಯ್ ರೇ ಹಾಯ್
ಕಂಡ ಕೂಡಲೇ ನಿನ್ನ ಫ್ಯಾನ್ ಆದೇ ನಾನು ಕೇಳೇ ಓ...
ನಿನ್ನ ಹಿಂದೆ ಬಂದೆ ನಾನು ಪ್ರೇಮ ಭಿಕ್ಷೆ ಹಾಕು ನೀನು
ಹುಡುಗಿ ನಿನ್ನ ಸೇವೆಗಾಗಿ ಇರುವೆ ನಾನು ಪ್ರೇಮ ಜೋಗಿ
ಒಲವೇ ನನ್ನ ಜಿಂದಗೀ ...
ಪಂಚರಂಗಿ ಪಂಚರಂಗಿ ಯಾವ ಊರ ಪಂಚರಂಗಿಹಾಯ್ ರೇ ಹಾಯ್ ಹಾಯ್ ರೇ ಹಾಯ್
ಮುಟ್ಟಿದಾಗ ಪಂಚರಾಗೋ ಹೂವಿನಂಥ ಕೋಮಲಾಂಗಿ
ಹಾಯ್ ರೇ ಹಾಯ್ ಹಾಯ್ ರೇ ಹಾಯ್
ಗಂಡು : ಜಂಬೂ ಸವಾರಿ ಹೋಗಿ ಲದ್ದಿಯಲ್ಲಿ ಬಿದ್ದೆ ದೇವಿ ಹಾಯ್ ರೇ ಹಾಯ್
ಹೆಣ್ಣು : ಅಲ್ಲಿ ಮೈಸೂರ ಜೂನ ಬೋನಿನಿಂದ ಓಡಿ ಬಂದ ಬಾಬು ನೀ .. ಹಾಯ್ ರೇ ಹಾಯ್
ಗಂಡು : ಕೋಪವೇತಕೆ ಬಂದು ಕೊಡು ಇದನು
ಹೆಣ್ಣು : ಇದ ಕೊಟ್ಟರೇ ನಾನು ಮೈಕುಟೈಕನು
ಗಂಡು : ಹೆವಿ ವೈಟು ಚಾಂಪಿಯನ್ ನಿನ್ನ ವೈಟು ನನ್ನದಿನ್ನೂ ಹೊರುವೆ ಲೈಫ್ ಎಲ್ಲವು
ಹುಡುಗಿ ನಿನ್ನ ಸೇವೆಗಾಗಿ ಇರುವೆ ನಾನು ಪ್ರೇಮಜೋಗಿ ಒಲವೇ ನನ್ನ ಜಿಂದಗೀ ..
ಪಂಚರಂಗಿ ಪಂಚರಂಗಿ ಯಾವ ಊರ ಪಂಚರಂಗಿಹಾಯ್ ರೇ ಹಾಯ್ ಹಾಯ್ ರೇ ಹಾಯ್
ಮುಟ್ಟಿದಾಗ ಪಂಚರಾಗೋ ಹೂವಿನಂಥ ಕೋಮಲಾಂಗಿ
ಹಾಯ್ ರೇ ಹಾಯ್ ಹಾಯ್ ರೇ ಹಾಯ್
ಗಂಡು : ಕೋಲು ಕೋಲೆನ್ನ ಕೋಲೆ ಮುತ್ತಿನ ಓಲೆ ಓದು ಬಾರೆ ಹೂಮಾಲೆ
ಹೇ.. ತಕಧಿನ ಹಾಯ್ ರೇ ಹಾಯ್
ಹೆಣ್ಣು : ಅಯ್ಯೋ ಅಯ್ಯಯ್ಯೋ ರಾಮ ಪ್ರೇಮರೋಗಿಯಿಂದ ಗೋಳೇ ಈ ವೇಳೆ
ಹಾಯ್ ರೇ ಹಾಯ್ ಹಾಯ್ ಹಾಯ್
ಗಂಡು : ಹಾರ್ಟ್ ದೊಡ್ಡದು ನನ್ನ ಪ್ರೇಮ ದೊಡ್ಡದು
ಹೆಣ್ಣು : ರೋಮ ರೋಮವೂ ಎಲ್ಲ ಡ್ರಾಮ್ ನಿನ್ನದು
ಗಂಡು : ಹಾರ್ಟ್ ಬಿಚ್ಚಿ ತೋರಲೇನೆ ಅಲ್ಲಿ ನಿಂದೆ ಬಿಂಬ ತಾನೇ ಅದುವೇ ಲವ್ ಚಾನಲು
ಹುಡುಗಿ ನಿನ್ನ ಸೇವೆಗಾಗಿ ಬಂದೆ ನಾನು ಪ್ರೇಮಜೋಗಿ.. ಒಲವೇ ನನ್ನ ಜಿಂದಗೀ ..
ಪಂಚರಂಗಿ ಪಂಚರಂಗಿ ಯಾವ ಊರ ಪಂಚರಂಗಿಹಾಯ್ ರೇ ಹಾಯ್ ಹಾಯ್ ರೇ ಹಾಯ್
ಮುಟ್ಟಿದಾಗ ಪಂಚರಾಗೋ ಹೂವಿನಂಥ ಕೋಮಲಾಂಗಿ
ಹಾಯ್ ರೇ ಹಾಯ್ ಹಾಯ್ ರೇ ಹಾಯ್
ಜಾಲಿ ಹೂವು ಜಾನೇಮನ್ ಹಾಯ್ ರೇ ಹಾಯ್
ನಾನು ನೋಡು ಜಾಲಿ ಮ್ಯಾನ್ ಹಾಯ್ ರೇ ಹಾಯ್
-------------------------------------------------------------------------------------------------------------------------
ಕರ್ನಾಟಕ ಸುಪುತ್ರ ( ೧೯೯೬) - ನಗುತ ನೋವನು ಮರೆಯುತ ಉಳಿದು ಬಾಳಲೇ ಬೇಕು
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ವಿಷ್ಣುವರ್ಧನ, ಎಂ.ಕೀರವಾಣಿ
ಆಹಾ.. ಆಹಾ.. ಆಆಆ
ನಗುತ ನೋವನು ಮರೆಯುತ ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ ಮುಂದೆ ಸಾಗಲೇ ಬೇಕು
ಜಗದ ನೋವ ಸಹಿಸಿ ಜೀವ ಜಯವ ಸಾಧಿಸಬೇಕು
ನಗುತ ನೋವನು ಮರೆಯುತ ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ ಮುಂದೆ ಸಾಗಲೇ ಬೇಕು
ನಗುವಿನಲೇ ಜೀವನ ಹೊಸ ಚೇತನ ನೀ ಕಾಣುವೆ ಬಾಳಲ್ಲಿ
ಪರಿಪರಿಯ ರಾಗದ ಹೊಸ ತಾಳವು ಬದುಕೆನ್ನುವ ಹಾಡಲ್ಲಿ
ಕೊರಗಿದರೆ ಲಾಭವೇನಮ್ಮಾ ನಲಿಯುತಲಿ ಬಾಳು ನೀ ತಮ್ಮ
ನಗುತ ನಗಿಸಿ ಜಗವಾ ಬೇವು ಬೆಲ್ಲ ಸುಮವು ಎಂದು ಸವಿದು ಜೀವಿಸಬೇಕು
ನಗುತ ನೋವನು ಮರೆಯುತ ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ ಮುಂದೆ ಸಾಗಲೇ ಬೇಕು
ಏನೇ ಬಂದರೂ ಬದುಕಲಿ ಮುಂದೆ ಸಾಗಲೇ ಬೇಕು
ಚಿಗುರೊಡೆವ ಆಸೆಯ ಹೊಸ ಪಲ್ಲವಿ ಶೃತಿ ಸೇರಲಿ ಹಾಡಾಗಿ
ದುಗುಡಗಳ ದೂಡುತ ನಡೆದಾಗಲೇ ಗುರಿ ಸೇರುವೆ ಮುಂದಾಗಿ
ಎದುರಿಸುತ ಎಲ್ಲವನ್ನು ನೀ ಎದೆಗೆಡದೇ ಮುಂದೆ ಸಾಗು ನೀ ಅದುವೇ ಬದುಕು ಜಗದೇ
ಮುಳ್ಳಿನೋಡನೆ ಇರುವ ಹೂವೂ ನಗುತ ಬಾಳುವ ಹಾಗೇ ..
ನಗುತ ನೋವನು ಮರೆಯುತ ಉಳಿದು ಬಾಳಲೇ ಬೇಕುಏನೇ ಬಂದರೂ ಬದುಕಲಿ ಮುಂದೆ ಸಾಗಲೇ ಬೇಕು
ಜಗದ ನೋವ ಸಹಿಸಿ ಜೀವ ಜಯವ ಸಾಧಿಸಬೇಕು
ನಗುತ ನೋವನು ಮರೆಯುತ ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ ಮುಂದೆ ಸಾಗಲೇ ಬೇಕು
-------------------------------------------------------------------------------------------------------------------------
ಕರ್ನಾಟಕ ಸುಪುತ್ರ ( ೧೯೯೬) - ಉದಯವಾಯಿತು ಪ್ರೇಮ ಕವನ
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ಉದಯವಾಯಿತು ಪ್ರೇಮ ಕವನ ಪ್ರಣಯ ಕಾವ್ಯ ವಚನ
ಕವಿಯಾಗಿ ನೀನು ಹಾಡುವಾಗ ಶಿಲೆಯಾದೆನು ನಾ
ಜೊತೆಯಾಗಿ ನನ್ನ ಕೊಡುವಾಗ ಬಲವಾದೆನು ನಾ
ಗಂಡು : ಉದಯವಾಯಿತು ಪ್ರೇಮ ಕವನ ಕೀರವಾಣಿಯ ರಾಗ ಮಿಲನ
ಶಿಲೆಯಾಗಿ ನೀನು ಮೂಡುವಾಗ ಕವಿಯಾದೆನು ನಾ
ಒಲವೆಂಬ ಗೀತೆ ಹಾಡುವಾಗ ಶೃತಿಯಾದೆನು ನಾ
ಗಂಡು : ರವಿವರ್ಮನ ಚಿತ್ತಾರವೋ... ಅಡಿಯಿಂದ ಮುಡಿವರೆಗೂ ಶೃಂಗಾರವೇ...
ಹೆಣ್ಣು : ಶೃಂಗಾರದ ಕವಿರಾಜನೇ ಕರುನಾಡ ಕಣ್ಮಣಿಗೆ ಆರಾಧನೆ
ಗಂಡು : ಈ ತಾರೆ ನಿನ್ನ ಸೆರೆಯಿಂದ ರವಾನೆ ಮಾಡು ಹೂಗಂಧ
ಹೆಣ್ಣು : ಕುಮಾರ ನಿನ್ನ ಧನಿಯಿಂದ ಈ ತಾರೆಯ ಈ ಸೌಗಂಧ
ಗಂಡು : ಸ್ವರ ತುಂಬಿದೆ ನನ್ನ ಎದೆಯಲ್ಲಿ ನೀ
ಹೆಣ್ಣು : ಉದಯವಾಯಿತು ಪ್ರೇಮ ಕವನ ಪ್ರಣಯ ಕಾವ್ಯ ವಚನ
ಗಂಡು : ಶಿಲೆಯಾಗಿ ನೀನು ಮೂಡುವಾಗ ಕವಿಯಾದೆನು ನಾ
ಹೆಣ್ಣು : ಜೊತೆಯಾಗಿ ನನ್ನ ಕೊಡುವಾಗ ಬಲವಾದೆನು ನಾ
ಗಂಡು : ಬಹುದೂರದ ಬಾನಾಗುವೇ ಬಾಳನ್ನು ರಮಿಸುವ ಕಡಲಾಗುವೆ
ಹೆಣ್ಣು : ಕಡಲಾದರೇ ಅಲೆಯಾಗುವೆ ಅಲೆ ಮೇಲೆ ನಲಿದಾಡೋ ಮೀನಾಗುವೇ
ಗಂಡು : ಮೀನಮ್ಮ ಕೇಳೇ ಗುಟ್ಟೊಂದು ಚಪ್ಪಲಿ ಐತೆ ಮುತ್ತೊಂದು
ಹೆಣ್ಣು : ಮುತ್ತಿನ ಆಸೆ ನೂರೊಂದು ಆಸೆಗೆ ಮೀಸೆ ಗುತ್ತೊಂದು
ಗಂಡು : ಸಂಕೋಚವೇ ಹೇಳೇ ಸಲ್ಲಾಪಕೆ
ಹೆಣ್ಣು : ಉದಯವಾಯಿತು ಪ್ರೇಮ ಕವನ ಪ್ರಣಯ ಕಾವ್ಯ ವಚನ
ಕವಿಯಾಗಿ ನೀನು ಹಾಡುವಾಗ ಶಿಲೆಯಾದೆನು ನಾ
ಜೊತೆಯಾಗಿ ನನ್ನ ಕೊಡುವಾಗ ಬಲವಾದೆನು ನಾ
ಗಂಡು : ಉದಯವಾಯಿತು ಪ್ರೇಮ ಕವನ ಕೀರವಾಣಿಯ ರಾಗ ಮಿಲನ
ಶಿಲೆಯಾಗಿ ನೀನು ಮೂಡುವಾಗ ಕವಿಯಾದೆನು ನಾ
ಒಲವೆಂಬ ಗೀತೆ ಹಾಡುವಾಗ ಶೃತಿಯಾದೆನು ನಾ
-------------------------------------------------------------------------------------------------------------------------
ಕರ್ನಾಟಕ ಸುಪುತ್ರ ( ೧೯೯೬) - ಆ ವಿಧಿ ತಂದ ಸಂಬಂಧ ಏನೇನೋ ಬಾಂಧವ್ಯ
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಡಾ||ರಾಜಕುಮಾರ
ಆ ವಿಧಿ ತಂದ ಸಂಬಂಧ ಏನೇನೋ ಬಾಂಧವ್ಯ ಬಾಳ ಹಾಡಾಗುದೇ ದಿನ ಪಾಡಾಗಲು
ಆ ವಿಧಿ ತಂದ ಸಂಬಂಧ ಏನೇನೋ ಬಾಂಧವ್ಯ ಬಾಳ ಹಾಡಾಗುದೇ ದಿನ ಪಾಡಾಗಲು
ಆ ತಾಯಿ ತಾನು ಕಂದನೊಡನೆ ಮಾತಾಡಲಾಗದೇ
ಕಂಡಂಥ ಕನಸು ಇಂಗಿ ಹೋಗಿ ನೋವೇನೆ ಕಂಡಿದೆ
ವಾತ್ಸಲ್ಯ ಬಂಧ ಏನೆಂದು ಹೇಳದೇ ನೂರಾರು ವೇದನೆ
ತಾಯಿ ಕಂಡು ತಾ ನೊಂದಳೋ ..
ಆ ವಿಧಿ ತಂದ ಸಂಬಂಧ ಏನೇನೋ ಬಾಂಧವ್ಯ ಬಾಳ ಹಾಡಾಗುದೇ ದಿನ ಪಾಡಾಗಲು
ದೂರಾದ ಮಗನು ಒಂದಾಗಿ ಸೇರಲು ಆನಂದ ಕಾಣುತ
ನೋವಲ್ಲು ನಗುತ ಪ್ರೀತಿ ಸಂತೋಷ ತೋರುತ
ನೂರುಕಾಲ ನೀನು ಬಾಳೆಂದು ಹೇಳುತ ಕಂದನ ಮಡಿಲಲ್ಲಿ
ಶಾಂತಿಯನ್ನು ತಾ ಕಂಡಳೋ
ಆ ವಿಧಿ ತಂದ ಸಂಬಂಧ ಏನೇನೋ ಬಾಂಧವ್ಯ ಬಾಳ ಹಾಡಾಗುದೇ ದಿನ ಪಾಡಾಗಲು
-------------------------------------------------------------------------------------------------------------------------
ಕರ್ನಾಟಕ ಸುಪುತ್ರ ( ೧೯೯೬) - ಕನ್ನಡವ ಮರೆಯದಿರು ಕನ್ನಡದ ಓ ಕಂದ
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಗೀತಪ್ರಿಯ ಗಾಯನ : ಎಂ.ಕೀರವಾಣಿ
ಕನ್ನಡವ ಮರೆಯದಿರು ಕನ್ನಡದ ಓ ಕಂದ ಕನ್ನಡವ ನೆನೆಯುತಿರೇ ಮಹದಾನಂದ ..
ಕನ್ನಡವ ಮರೆಯದಿರು ಕನ್ನಡದ ಓ ಕಂದ ಕನ್ನಡವ ನೆನೆಯುತಿರೇ ಮಹದಾನಂದ ..
ಕನ್ನಡದಾ ನಾಡಿದು ನೋಡಲು ಚೆಂದ ಕನ್ನಡ ಸಿರಿ ನಾಡಿನ ಮರಗಳು ಶ್ರೀಗಂಧ
ಕನ್ನಡದಾ ನಾಡಿದು ನೋಡಲು ಚೆಂದ ಕನ್ನಡ ಸಿರಿ ನಾಡಿನ ಮರಗಳು ಶ್ರೀಗಂಧ
ಕನ್ನಡದ ಜೊತೆ ನಮ್ಮ ಆ ಜನ್ಮ ಬಂಧ
ಕನ್ನಡವ ಮರೆಯದಿರು ಕನ್ನಡದ ಓ ಕಂದ ಕನ್ನಡವ ನೆನೆಯುತಿರೇ ಮಹದಾನಂದ ..
ಕನ್ನಡ ಮಣ್ಣಿನ ಕಣ ಕಣವು ಚಿನ್ನ ಕನ್ನಡದ ಬಾಷೆಯ ಇನಿ ದನಿಯ ಚೆನ್ನ
ಕನ್ನಡ ಮಣ್ಣಿನ ಕಣ ಕಣವು ಚಿನ್ನ ಕನ್ನಡದ ಬಾಷೆಯ ಇನಿ ದನಿಯ ಚೆನ್ನ
ಹೆಮ್ಮೆಯಿಂದ ಬಣ್ಣಿಸಿದರು ಪಂಪ ರನ್ನ ಜನ್ನ
ಕನ್ನಡವ ಮರೆಯದಿರು ಕನ್ನಡದ ಓ ಕಂದ ಕನ್ನಡವ ನೆನೆಯುತಿರೇ ಮಹದಾನಂದ ..
ಭಾರತದ ಮುಕಟಮಣಿ ಕನ್ನಡ ನಾಡು ಸಂಗೀತದ ತವರೂರು ಕಲೆಗಳ ಬೀಡು
ಭಾರತದ ಮುಕಟಮಣಿ ಕನ್ನಡ ನಾಡು ಸಂಗೀತದ ತವರೂರು ಕಲೆಗಳ ಬೀಡು
ಕನ್ನಡದ ನುಡಿಯಲ್ಲಿಯೇ ಇರುವುದು ಹಾಡು
ಕನ್ನಡವ ಮರೆಯದಿರು ಕನ್ನಡದ ಓ ಕಂದ ಕನ್ನಡವ ನೆನೆಯುತಿರೇ ಮಹದಾನಂದ ..
-------------------------------------------------------------------------------------------------------------------------
ಕರ್ನಾಟಕ ಸುಪುತ್ರ ( ೧೯೯೬) - ಕರುನಾಡ ಸುಪುತ್ರ ಓ ಧೀರ
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಶ್ರೀ ಚಂದ್ರ ಗಾಯನ : ರಾಜೇಶ
ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ.. ಧೀರ ... ಕನ್ನಡಿಗರ ಪ್ರಿಯ ಸರದಾರ
ನಿದ್ರಿಸೋ ಜನರ ಎಚ್ಚರ ಮಾಡಿ ಜಾಗೃತಿ ಬೆಳೆಸೋ ಬಾ ಶೂರ
ಕರುನಾಡ ಸುಪುತ್ರ ಓ.. ಧೀರ ...
ಹನಿ ಹನಿ ನೀರು ಪರ ನಾಡ ಸೇರುವ ಮುನ್ನ ತಡಿ ಬಾರಾ
ಹನಿ ಹನಿ ನೀರು ಪರ ನಾಡ ಸೇರುವ ಮುನ್ನ ತಡಿ ಬಾರಾ
ಕನ್ನಡ ನಾಡಿನ ಜೀವ ನದಿಯು ನಮ್ಮದು ಎಂದು ಸಾರಲು ಬಾರಾ
ಸಾಹಸಸಿಂಹ ನೀ ಬಾರಾ ಜಗದೇಕ ವೀರ ನೀ ಬಾರಾ
ಕನ್ನಡ ಕಣ್ಮಣಿ ನೀ ಬಾರಾ
ಕರುನಾಡ ಸುಪುತ್ರ ಓ.. ಧೀರ ...
ಹೊತ್ತ ಭೂಮಿಯ ಋಣವಾ ತೀರಿಸೋ ಗುಣವಾ ಜನರಿಗೆ ಕಲಿಸಲು ಬಾ
ಹೊತ್ತ ಭೂಮಿಯ ಋಣವಾ ತೀರಿಸೋ ಗುಣವಾ ಜನರಿಗೆ ಕಲಿಸಲು ಬಾ
ಹೆತ್ತ ತಾಯಿಯ ಮಾನವ ಕಳೆಯುವ ದುರುಳರ ಎದೆಯನು ಬಗಿಯಲು ಬಾ
ಕನ್ನಡ ನುಡಿಯ ಉಳಿಸಲು ಬಾ ಕನ್ನಡತನವ ಬೆಳೆಸಲು ಬಾ
ಕನ್ನಡ ನುಡಿಯ ಉಳಿಸಲು ಬಾ ಕನ್ನಡತನವ ಬೆಳೆಸಲು ಬಾ
ಇತರೆ ಬಾಷೆಯ ಮೋಹಕೆ ಸಿಲುಕಿದ ಮನುಜನ ಬುದ್ದಿಯ ತಿದ್ದಲು ಬಾ
ಇತರೆ ಬಾಷೆಯ ಮೋಹಕೆ ಸಿಲುಕಿದ ಮನುಜನ ಬುದ್ದಿಯ ತಿದ್ದಲು ಬಾ
ಗೆದ್ದಲು ಹಿಡಿದ ಮನಗಳ ಒಳಗೆ ಚೇತನ ಚಿಲುಮೆಯ ಚಿಮ್ಮಿಸು ಬಾ
ಕಲೆಯ ದೇವಿಯ ಕಂದನೇ ಬಾ ಭುವನೇಶ್ವರಿಯ ಕುವರನೇ ಬಾ
ಕನ್ನಡ ಧ್ವಜವ ಹಾರಿಸು ಬಾ
ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ.. ಧೀರ ... ಕನ್ನಡಿಗರ ಪ್ರಿಯ ಸರದಾರ
ನಿದ್ರಿಸೋ ಜನರ ಎಚ್ಚರ ಮಾಡಿ ಜಾಗೃತಿ ಬೆಳೆಸೋ ಬಾ ಶೂರ
ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ.. ಧೀರ ... ಕನ್ನಡಿಗರ ಪ್ರಿಯ ಸರದಾರ
ನಿದ್ರಿಸೋ ಜನರ ಎಚ್ಚರ ಮಾಡಿ ಜಾಗೃತಿ ಬೆಳೆಸೋ ಬಾ ಶೂರ
ಕರುನಾಡ ಸುಪುತ್ರ ಓ.. ಧೀರ ...
-------------------------------------------------------------------------------------------------------------------------
ಕರ್ನಾಟಕ ಸುಪುತ್ರ ( ೧೯೯೬) - ಮದುವೇ ಎಂಬ ಬಾಳ ಬಂಧ
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ,
ಶುಭಾಷಯ.. ಶುಭಾಷಯ ... ಶುಭಾಷಯ ..
ಮದುವೆ ಎಂಬ ಬಾಳ ಬಂಧ ಮಧುರವಾದ ಸ್ನೇಹ ಬಂಧ
ಈ ಬಂಧ ಎಂದೆಂದೂ ಪ್ರೇಮ ಸಂಬಂಧ ಬಾಳಲ್ಲಿ ಹೂವಾಗಿ ನೀಡೋ ಆನಂದ
ಶುಭವನೇ ಕೋರುತ ನಾನು ಹಾಡುವೇ ಜೊತೆಯಲೇ ಸಾಗುವ ನಮ್ಮ ಜೋಡಿಗೇ
ಮದುವೆ ಎಂಬ ಬಾಳ ಬಂಧ ಮಧುರವಾದ ಸ್ನೇಹ ಬಂಧ
ಕಣ್ಣಿಂದ ಕಂಡರೂ ಎಲ್ಲ ನಮ್ಮದೇ ಒಬ್ಬರಲ್ಲಿ ಒಬ್ಬರು ಇರಿಸಿ ನಂಬಿಕೆ
ಪ್ರೇಮವೆಂದೂ ಪ್ರೇಮದಾ ಪಾಠವೆನ್ನಿರಿ ಒಲವಿಂದ ಸೋತು ಗೆಲ್ಲುವ ಆಟವೆನ್ನಿರಿ
ಶುಭಾಷಯ.. ಶುಭಾಷಯ ... ಶುಭಾಷಯ ..
ಮದುವೆ ಎಂಬ ಬಾಳ ಬಂಧ ಮಧುರವಾದ ಸ್ನೇಹ ಬಂಧ
ಮನವೇ ಒಂದು ಮಂದಿರ ಸಹಜ ಸುಂದರ ಬೆಳಗುತಿರಲೂ ಎಂದಿಗೂ ಪೂರ್ಣ ಚಂದಿರ
ಒಲುಮೆ ಎಂಬ ನೌಕೆಗೆ ಒಲವೇ ಆಶ್ರಯ ಜನುಮ ಜನುಮ ಜೊತೆಗೆ ಇರುವ ಆಶಯ
ಶುಭಾಷಯ.. ಶುಭಾಷಯ ... ಶುಭಾಷಯ ..
ಮದುವೆ ಎಂಬ ಬಾಳ ಬಂಧ ಮಧುರವಾದ ಸ್ನೇಹ ಬಂಧ
-------------------------------------------------------------------------------------------------------------------------
ಕರ್ನಾಟಕ ಸುಪುತ್ರ ( ೧೯೯೬) - ಹೂಬನದಾ ಸಿಹಿ ಜೇನು ಇದು
ಸಂಗೀತ : ಎಂ.ಕೀರವಾಣಿ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಮಾಲ್ಗುಡಿ ಶುಭ
ಹೆಣ್ಣು : ಹೂ ಬನದಾ ಸಿಹಿ ಜೇನು ಇದು ಮದವೇರಿಸುವ ಮಧುಪಾನವಿದು
ಮರಿ ದುಂಬಿಗಳ ಸವಿ ಚುಂಬನದಾ ಮಕರಂದವು ಈ ಅಧರ.... ಏ ..ಓಓ ... ಏ ... ಓಓ
ಮತ್ತು ಕೊಡೊ ಶರಬತ್ತು ಕಣೋ ಮೋಹತ್ತು ಕಣೋ ನಿನ ಸೊತ್ತು ಕಣೋ
ಛಳಿ ಹೊತ್ತಿನಲಿ ಬಿಸಿ ಮುತ್ತಿದೆ ಈ ಗಮ್ಮತ್ತು ಸದಾ ಮಧುರ.. ಏ ..ಓಓ ... ಏ ... ಓಓ
ಅಕ್ಕರೆಯೋ ಕಲ್ಲಸಕ್ಕರೆಯೂ ಜನ ಕಿಕ್ಕಿರಿದೂ ಬಿಸಿ ಉಕ್ಕಿರುವ ಮೈ ಸೊಕ್ಕಿರುವ
ಮನ ಲುಕ್ಕಿಗೇ ಸೆರೆ ಸಿಕ್ಕಿದೆಯೋ ಚತುರ... ಏ ..ಓಓ ... ಏ ... ಓಓ
ಹೂ ಬನದಾ ಸಿಹಿ ಜೇನು ಇದು ಮದವೇರಿಸುವ ಮಧುಪಾನವಿದು
ಮರಿ ದುಂಬಿಗಳ ಸವಿ ಚುಂಬನದಾ ಮಕರಂದವು ಈ ಅಧರ.... ಏ ..ಓಓ ... ಏ ... ಓಓ
ಹೋ .. ಮೈಸೂರ ಸಿಲ್ಕು ಬಾಡಿ ಬಳುಕು ನಿನ್ನ ನಾನು ನೋಡಿ ಬೆರಗಾದೆ
ಕೋಲ್ಮಿಂಚು ಬೆಳಕು ಕಣ್ಣ ಚುರುಕು ಕಂಡು ನಾವೀಗ ಶರಣಾದೇ... ಹಾ.. ಆಆಆ..
ಸ್ವೀಟಾದ ಕೆನ್ನೆ ಲೂಟಿ ಖಜಾನೆ ನೈಟಲ್ಲಿ ನೀನೇ ಹಸಿರು ನಿಶಾನೇ
ಚಲುವಾದ ಈ ಸ್ಟೈಲು ಈ ಸ್ಟೈಲು ನಾ ಕಂಡು ಸೋತು ಹೋದೆನೇ
ಹೂ ಬನದಾ ಸಿಹಿ ಜೇನು ಇದು ಮದವೇರಿಸುವ ಮಧುಪಾನವಿದು
ಮರಿ ದುಂಬಿಗಳ ಸವಿ ಚುಂಬನದಾ ಮಕರಂದವು ಈ ಅಧರ.... ಏ ..ಓಓ ... ಏ ... ಓಓ
ಹೆಣ್ಣು : ವೀರಾಧಿವೀರ ಬಾ ನೀ ನನ್ನ ಸಾಮ್ರಾಟ ರಂಗಾದ ಈ ರಾತ್ರಿ ಬೊಂಬಾಟು ಚೆಲ್ಲಾಟ
ಕುಡಿಮೀಸೆ ಗಂಡು ನಿನ್ನ ಕಂಡು ನನ್ನ ಮೈಯ್ಯೆಲ್ಲ ಬಿಸಿಯಾಯ್ತು
ಮುದ್ದಾದ ರೋಜಾ ನಾನು ತಾಜಾ ಇಂದು ನಿನ್ನಲ್ಲೇ ಮನಸಾಯ್ತು
ಗಂಡು : ಹಾ... ಆಆಆ.. ಈ ಮೋಹ ಜಾಲ ಭೇಷೋ ವಿಶಾಲ ಮೈ ಸೋಕಿದಾಗ ಮಿರ್ಚಿ ಮಸಾಲ
ಹೊತ್ತಾಯ್ತು ಬಾ ಬೇಗ ನಾನೀಗ ಒಂದಾಗಿ ಮೋಜು ಮಾಡುವ
ಹೆಣ್ಣು : ಹೂ ಬನದಾ ಸಿಹಿ ಜೇನು ಇದು ಮದವೇರಿಸುವ ಮಧುಪಾನವಿದುಮರಿ ದುಂಬಿಗಳ ಸವಿ ಚುಂಬನದಾ ಮಕರಂದವು ಈ ಅಧರ.... ಏ ..ಓಓ ... ಏ ... ಓಓ
ಮತ್ತು ಕೊಡೊ ಶರಬತ್ತು ಕಣೋ ಮೋಹತ್ತು ಕಣೋ ನಿನ ಸೊತ್ತು ಕಣೋ
ಛಳಿ ಹೊತ್ತಿನಲಿ ಬಿಸಿ ಮುತ್ತಿದೆ ಈ ಗಮ್ಮತ್ತು ಸದಾ ಮಧುರ.. ಏ ..ಓಓ ... ಏ ... ಓಓ
ಅಕ್ಕರೆಯೋ ಕಲ್ಲಸಕ್ಕರೆಯೂ ಜನ ಕಿಕ್ಕಿರಿದೂ ಬಿಸಿ ಉಕ್ಕಿರುವ ಮೈ ಸೊಕ್ಕಿರುವ
ಮನ ಲುಕ್ಕಿಗೇ ಸೆರೆ ಸಿಕ್ಕಿದೆಯೋ ಚತುರ... ಏ ..ಓಓ ... ಏ ... ಓಓ
ಹೂ ಬನದಾ ಸಿಹಿ ಜೇನು ಇದು ಮದವೇರಿಸುವ ಮಧುಪಾನವಿದು
ಮರಿ ದುಂಬಿಗಳ ಸವಿ ಚುಂಬನದಾ ಮಕರಂದವು ಈ ಅಧರ.... ಏ ..ಓಓ ... ಏ ... ಓಓ
-------------------------------------------------------------------------------------------------------------------------
No comments:
Post a Comment