ತಾಯಿಗೊಬ್ಬ ಕರ್ಣ ಚಲನಚಿತ್ರದ ಹಾಡುಗಳು
- ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
- ಅಂದ ಚೆಂದ ತಂದ ಕಲ್ಪನಾ ಹೇಳು ನೀನು ಯಾವ ಶಿಲ್ಪಿ ಕಲ್ಪನಾ
- ಚಿನ್ನದ ಗುಣದ ಅಣ್ಣಯ್ಯ ನೀನೇ ಬಾಳಿನ ಕಣ್ಣಯ್ಯ
- ಮುದ್ದು ಮಾವಯ್ಯ ನೀ ಹೋಗಬೇಡಯ್ಯಾ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಏಳೇಳು ಜನ್ಮ ಬಂದರು ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು ಉಸಿರಲ್ಲಿ ಉಸಿರಾದೇ ನಾನೇ
ಹೆಣ್ಣು : ಏಳೇಳು ಜನ್ಮ ಬಂದರು ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು ಉಸಿರಲ್ಲಿ ಉಸಿರಾದೇ ನಾನೇ
ಹೆಣ್ಣು : ಕ್ಷಣ ಕ್ಷಣದಲೂ ಕಣ ಕಣದಲು ಜೊತೆಗೆ ನಿಲ್ಲುವೆ
ಪ್ರತಿ ನಿಮಿಷವು ಹೊಸ ಹರುಷವ ಮಧುವ ಚೆಲ್ಲುವೆ
ಗಂಡು : ಸವಿ ನುಡಿಗಳ ರಸ ಹೊಳೆಯಲಿ ಸುಖದಿ ತೇಲುವೆ
ನಗೆ ಸ್ವರಗಳ ಹೂ ಮಳೆಯಲಿ ನೆನೆದು ಹಾಡುವೇ ..
ಹೆಣ್ಣು : ನೀನತೈ ಬಂಧ ಮಧುರ ಗಂಡು : ಪ್ರಿಯ ಇಸೆಯೈ ಪ್ರೀತಿ ಅಮರ
ಹೆಣ್ಣು : ಒಲವಿನಾ ನೆನಪಿದು ಗಂಡು : ಈ ಸಿಹಿ ಸವಿ ಸವಿ
ಹೆಣ್ಣು : ಏಳೇಳು ಜನ್ಮ ಬಂದರು ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು ಉಸಿರಲ್ಲಿ ಉಸಿರಾದೇ ನಾನೇ
ಗಂಡು : ಶ್ರುತಿ ಲಯಗಳು ಕಲೆತಂತೆ ಬೆರೆತು ಹೋದೆವೂ
ಪ್ರತಿ ಅನುಭವ ಹೊಸ ಸೊಗಸಿನ ಚಿಲುಮೆ ಆದವೂ
ಹೆಣ್ಣು : ಹೊಂಗನಸಿನ ಬಿಡಿ ಸುಮಗಳು ಅರಳಿ ನಿಂತವೂ
ಚಿರ ನಲಿವಿನ ಹೊಸ ಒಲವಿನ ಕವಿತೆ ಆದೆವು
ಗಂಡು : ಇನ್ನೆಂದು ನೋವನು ತಾಳೆ ನಾ
ಹೆಣ್ಣು : ಪ್ರಿಯ ನಿನ್ನಿಂದ ದೂರಾಗಿ ಇರೇನಾ
ಗಂಡು : ವಚನದೆ ಹಿತವಿದೆ ಹೆಣ್ಣು : ಮಿಲನದೇ ಸುಖವಿದೇ
ಹೆಣ್ಣು : ಏಳೇಳು ಜನ್ಮ ಬಂದರು ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು ಉಸಿರಲ್ಲಿ ಉಸಿರಾದೇ ನಾನೇ
ಗಂಡು : ಏಳೇಳು ಜನ್ಮ ಬಂದರು ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು ಉಸಿರಲ್ಲಿ ಉಸಿರಾದೇ ನಾನೇ
-------------------------------------------------------------------------------------------------
ತಾಯಿಗೊಬ್ಬ ಕರ್ಣ (೧೯೮೮) - ಅಂದ ಚೆಂದ ತಂದ ಕಲ್ಪನಾ ಹೇಳು ನೀನು ಯಾವ ಶಿಲ್ಪಿ ಕಲ್ಪನಾ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಅಂದ ಚಂದ ತಂದ ಕಲ್ಪನ ಹೇಳು ನೀನು ಯಾವ ಶಿಲ್ಪಿ ಕಲ್ಪನಾ
ನನ್ನ ಬಾಳ ಬಾನಿನಲ್ಲಿ ಬಂದೇ ನೀನು ಪ್ರೀತಿ ಚೆಲ್ಲಿ ಒಂದೇ ಒಂದೇ ನಾವೂ ಈ ದಿನ
ಹೆಣ್ಣು : ನಾನೇ ನಾನೇ ನಿಮ್ಮ ಕಲ್ಪನಾ ನಿಮ್ಮ ಪಾದಕ್ಕೆಂದೂ ಪೂಜೆ ತಂದೆ ನಾ
ಬಾಳಿದಂತ ಮೂಡಿದಂಥ ಮೊಡವೆಲ್ಲ ದೂಡಿದಂತ ಸೂರ್ಯನನ್ನೂ ಕಂಡೇ ಈ ದಿನ
ಗಂಡು : ನುಡಿದಾಗ ಜಾಣೆ ಹಿತವಾದ ವೀಣೆ ಇಂಪಾಗಿ ಮೀಟಿದಂತೇ ..
ಕಣ್ಣ ಮಿಂಚು ಮುನ್ನೂರು ದೀಪ ಒಂದಾಗಿ ಬೆಳಗಿದಂತೇ ..
ಹೆಣ್ಣು : ದಾನದಲೀ ಕರ್ಣ ಧ್ಯೇಯದಲಿ ರಾಮ ಮನ ನೋಡು ಹಾಲಿನಂತೇ ..
ನೀ ನನ್ನ ಗುಡಿಯ ದೀಪ ಈ ಜನ್ಮ ಧನ್ಯವಂತೇ ..
ಗಂಡು : ಕನಸಿನಲಿ ನೀನು ನನಸಿನಲೂ ನೀನೂ ಉಸಿಉಸಿರು ನಿನ್ನ ಹೆಸರೂ ..
ನಿನ್ನನೂ ಅಗಲಿ ನಾ ಇರೆನು ಕ್ಷಣವೂ
ನನ್ನ ಬಲ ಶ್ರುತಿಯಾದೇ ನೀ ಇಂದೂ
ಹೆಣ್ಣು : ಜೀವ ಸೇರಿ ಹೋಯ್ತು ಇನ್ನೆಂದೂ ..
ಗಂಡು : ಅಂದ ಚಂದ ತಂದ ಕಲ್ಪನ ಹೇಳು ನೀನು ಯಾವ ಶಿಲ್ಪಿ ಕಲ್ಪನಾ
ನನ್ನ ಬಾಳ ಬಾನಿನಲ್ಲಿ ಬಂದೇ ನೀನು ಪ್ರೀತಿ ಚೆಲ್ಲಿ ಒಂದೇ ಒಂದೇ ನಾವೂ ಈ ದಿನ
ಹೆಣ್ಣು : ನಾನೇ ನಾನೇ ನಿಮ್ಮ ಕಲ್ಪನಾ ನಿಮ್ಮ ಪಾದಕ್ಕೆಂದೂ ಪೂಜೆ ತಂದೆ ನಾ
ಹೆಣ್ಣು : ಕನಸಿನಲಿ ನೀನು ನನಸಿನಲಿ ನೀನೂ ಉಸಿಉಸಿರು ನಿನ್ನ ಹೆಸರು
ನಿನ್ನನೂ ಅಗಲಿ ನಾ ಇರೆನು ಕ್ಷಣವೂ ನಿನ್ನೊಲವೇ ಬಾಳ ಹಸಿರೂ ..
ಗಂಡು : ಮನೆ ದೀಪವಾಗಿ ಕುಲದೇವಿಯಾಗಿ ನೀ ಬೆಳಗು ಬಾಳ ಹಣತೆ
ನೀನಿರಲೂ ಜೊತೆಗೆ ಹೊಸ ಸ್ಫೂರ್ತಿ ನನಗೇ ನೀ ಬರೆದೆ ಒಲವ ಕವಿತೇ
ಹೆಣ್ಣು : ನಿನ್ನ ಪ್ರೀತಿ ಬಂಧಿ ಆದೇ ನಾನಿಂದೂ
ಗಂಡು : ನನ್ನ ಆಸೆ ಜ್ಯೋತಿ ಆದೆ ನೀನಿಂದೂ
ಅಂದ ಚಂದ ತಂದ ಕಲ್ಪನ ಹೇಳು ನೀನು ಯಾವ ಶಿಲ್ಪಿ ಕಲ್ಪನಾ
ನನ್ನ ಬಾಳ ಬಾನಿನಲ್ಲಿ ಬಂದೇ ನೀನು ಪ್ರೀತಿ ಚೆಲ್ಲಿ ಒಂದೇ ಒಂದೇ ನಾವೂ ಈ ದಿನ
ಹೆಣ್ಣು : ನಾನೇ ನಾನೇ ನಿಮ್ಮ ಕಲ್ಪನಾ ನಿಮ್ಮ ಪಾದಕ್ಕೆಂದೂ ಪೂಜೆ ತಂದೆ ನಾ
ಬಾಳಿದಂತ ಮೂಡಿದಂಥ ಮೊಡವೆಲ್ಲ ದೂಡಿದಂತ ಸೂರ್ಯನನ್ನೂ ಕಂಡೇ ಈ ದಿನ
--------------------------------------------------------------------------------------------------

ತಾಯಿಗೊಬ್ಬ ಕರ್ಣ (೧೯೮೮) - ಚಿನ್ನದ ಗುಣದ ಅಣ್ಣಯ್ಯ ನೀನೇ ಬಾಳಿನ ಕಣ್ಣಯ್ಯ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಮಂಜುಳಾ, ಕೋರಸ್
ಮಕ್ಕಳು : ಚಿನ್ನದ ಗುಣದ ಅಣ್ಣಯ್ಯ ನೀನೇ ಬಾಳಿನ ಕಣ್ಣಯ್ಯ
ನೀನು ತೋರುವ ಈ ಪ್ರೀತಿ ನಮ್ಮಯ ಬಾಳಿಗೆ ಹೊಸ ಜ್ಯೋತಿ
ಹೆಣ್ಣು : ಬಡವರ ಕಂಬನಿ ಒರೆಸುವ ಕರುಣೆಯ ಮೂರುತಿ ನೀವೇ
ಬಡವರ ಕಂಬನಿ ಒರೆಸುವ ಕರುಣೆಯ ಮೂರುತಿ ನೀವೇ
ಅನಾಥ ಮಕ್ಕಳ ನೋವುಗಳ ಮರೆಸುವ ಪ್ರೇಮದ ಹೂವೇ ..
ಕೊಡುಗೈ ಎನಿಸಿದ ಕಲಿಯುಗ ಕರ್ಣ ಉದಾರ ಹೃದಯದ ಅಭಿನವ ಕರ್ಣ
ಇರಬೇಕು ಈ ನಾಡಿಗೆ ತಾಯಿಗೊಬ್ಬ ಕರ್ಣ
ಮಕ್ಕಳು : ಚಿನ್ನದ ಗುಣದ ಅಣ್ಣಯ್ಯ ನೀನೇ ಬಾಳಿನ ಕಣ್ಣಯ್ಯ
ನೀನು ತೋರುವ ಈ ಪ್ರೀತಿ ನಮ್ಮಯ ಬಾಳಿಗೆ ಹೊಸ ಜ್ಯೋತಿ
ಗಂಡು : ಮಮತೆಯ ತೋಟದ ಹೂವುಗಳೇ ನೀವೇ ನನ್ನಯ ಜೀವಾ
ಹೆಣ್ಣು : ಎಂದಿಗೂ ಹೀಗೆ ನಗುತಿರಿ ಸೇರುತ ಆಡಿ ನಲಿವ
ಗಂಡು : ನಾಳೆಯ ಭಾರತ ಪ್ರಜೆಗಳು ನೀವೇ ನಾಡನು ಕಾಯುವ ಕಲಿಗಳು ನೀವೇ
ಹೆಣ್ಣು : ಸತ್ಯಧರ್ಮ ನ್ಯಾಯವಾ ಬೆಳಗೋ ದೀಪ ನೀವೇ
ಮಕ್ಕಳು : ಚಿನ್ನದ ಗುಣದ ಅಣ್ಣಯ್ಯ ನೀನೇ ಬಾಳಿನ ಕಣ್ಣಯ್ಯ
ನೀನು ತೋರುವ ಈ ಪ್ರೀತಿ ನಮ್ಮಯ ಬಾಳಿಗೆ ಹೊಸ ಜ್ಯೋತಿ
ಹೆಣ್ಣು : ಶಾಂತಿಯಾ ಸೌರಭ ಸೂಸುತ ಸಯನ್ ಮಳೆಯೂ ಚೆಲ್ಲಿ
ಶಾಂತಿಯಾ ಸೌರಭ ಸೂಸುತ ಸಯನ್ ಮಳೆಯೂ ಚೆಲ್ಲಿ
ಗಂಡು : ಸುಳ್ಳು ಮೋಸ ಕಪಟವ ಎದುರಿಸಿ ಧೈರ್ಯದೇ ನಿಲ್ಲಿ
ಆಗಿರಿ ನಾಳಿನ ಮಹಾತ್ಮ ಗಾಂಧೀ ನೆಹರು ತಿಲಕ ಸುಭಾಷ ಚಂದ್ರ ಭೋಸ
ನವಭಾರತ ಶಿಲ್ಪಿ ವಿಶ್ವೇಶ್ವರಯ್ಯ ಆದರ್ಶ ಪಾಲಿಸಿ
ಚಿನ್ನದ ಗುಣದ ಮಕ್ಕಳೇ ನನ್ನಯ ಬಾಳಿನ ಕಂಗಳೇ
ನೀವು ತೋರುವ ಈ ಪ್ರೀತಿ ಅಣ್ಣನ ಬಾಳಿಗೆ ಹೊಸ ಜ್ಯೋತಿ
-------------------------------------------------------------------------------------------------
ತಾಯಿಗೊಬ್ಬ ಕರ್ಣ (೧೯೮೮) - ಮುದ್ದು ಮಾವಯ್ಯ ನೀ ಹೋಗಬೇಡಯ್ಯಾ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯ
ಮಗು : ಮುದ್ದು ಮಾವಯ್ಯ ನೀ ಹೋಗಬೇಡಯ್ಯ ಪಪ್ಪೀ ಕೊಟ್ಟೆ ನೀ ಈ ಕೋಪ ಬಿಡಯ್ಯ
ಕೂಸುಮರಿ ಕಳ್ಳ ಪೊಲೀಸ್ ಆಡೋಣ ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ
ಮುದ್ದು ಮಾವಯ್ಯ ನೀ ಹೋಗಬೇಡಯ್ಯ ಪಪ್ಪೀ ಕೊಟ್ಟೆ ನೀ ಈ ಕೋಪ ಬಿಡಯ್ಯ
ಗಂಡು : ಇಂದು ಸಂಗಾತಿ ಮೊಗದಲಿ ಹೊಸ ಕಳೆ ತುಂಬಿ ಬಂದಾಗ ಈ ಮಡಿಲು
ಹೆಣ್ಣು : ನಿಮ್ಮ ಆ ಕಣ್ಣ ಚೆಲುವಳಿ ನಗುತಿರೆ ಬಾಳೇ ಆನಂದ ರಸ ಕಡಲು
ಗಂಡು : ನಿನ್ನಾ ಮಡಿಲಲಿ ನಾನೇ ಪುಟ್ಟ ಮಗು
ಹೆಣ್ಣು : ನಿನ್ನಾ ತೂಗಿ ಲಾಲಿ ನಾನು ಹಾಡುವೇನೂ
ಗಂಡು : ಪುಟ್ಟ ಪಾಪಚ್ಚಿ ಅವನು ನಕ್ಕಾಗ ಅಂಬೆಗಾಲನು ಇಟ್ಟು ಬಂದಾಗ
ಹೆಣ್ಣು : ಮನೆ ಎಲ್ಲ ಹಾಲಾ ಹೊಳೆ ಹರಿದಂತೆ ಪ್ರೀತಿ ಎಂಬ ಜೇನ ಮಳೆ ಸುರಿದಂತೇ
ಮನೆ ಎಲ್ಲ ಹಾಲಾ ಹೊಳೆ ಹರಿದಂತೆ ಪ್ರೀತಿ ಎಂಬ ಜೇನ ಮಳೆ ಸುರಿದಂತೇ
ಹೆಣ್ಣು : ನಾಳೇ ಆ ಕಂದ ಬೆಳೆಯುತ ತಂದೆಗೆ ಕೀರ್ತಿ ತಂದಾಗ ಸಂತೋಷ
ಗಂಡು : ತಾಯಿ ಕಣ್ಣಲ್ಲಿ ಹೆಮ್ಮೆಯ ಹೊಳಪದು ಮಿಂಚು ತಂದಾಗ ಹೊಸ ಹರುಷ
ಹೆಣ್ಣು : ಬಾಳೆ ಸೊಗಸಿನ ನಗುವ ಹೂ ಬನ
ಗಂಡು : ಕಾಣೋ ಆಸೆಯಿದೆ ಅನುದಿನ
ಹೆಣ್ಣು : ಪುಟ್ಟ ಪಾಪಚ್ಚಿ ಅವ್ ನಕ್ಕಾಗ ಅಂಬೆಗಾಲನ್ನು ಇಟ್ಟು ಬಂದಾಗ
ಗಂಡು : ಕೂಸುಮರಿ ಕಳ್ಳ ಪೊಲೀಸ್ ಆಡೋಣ ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ
ಮುದ್ದು ಮಾವಯ್ಯ ನೀ ಹೋಗಬೇಡಯ್ಯ ಪಪ್ಪೀ ಕೊಟ್ಟೆ ನೀ ಈ ಕೋಪ ಬಿಡಯ್ಯ
-----------------------------------------------------------------------------------------------------
No comments:
Post a Comment