1186. ತಾಯಿನಾಡು ( ೧೯೮೪)

ತಾಯಿನಾಡು ಚಲನಚಿತ್ರದ ಹಾಡುಗಳು
  1. ಮನದ ಮಾತ ಹೇಳಲೇನು ಗೆಳೆಯನೇ
  2. ಕಂಗಳ ನೋಡೇ ಮತ್ತು ಬರುವುದು
  3. ದೇವಾನು ಎಲ್ಲಿದ್ದಾನಮ್ಮಾ ಅವನು ಎಲ್ಲಿದ್ದಾನೆ
  4. ಇದು ದೇವ ಮಂದಿರವೋ
ತಾಯಿನಾಡು ( ೧೯೮೪) - ಮನದ ಮಾತ ಹೇಳಲೇನು ಗೆಳೆಯನೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಮನವ ಮಾತ ಹೇಳಲೇನು ಗೆಳೆಯನೆ
ಕಿವಿಯಲ್ಲಿ ಕಿವಿಯಲ್ಲಿ ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ನಮ್ಮ ಒಲವ ಮರೆತು ಬಿಟ್ಟೇನೂ ನಾ ನಿನ್ನ ವೈರಿ ಆಗಿ ಬಿಟ್ಟೇನೂ
ನಾ ದೂರ ಮಾಡಿಕೊಂಡು ನೊಂದೆನು ನನ್ನ ತಪ್ಪನ್ನು ಇಂದು ಅರಿತೆನು
ಅನ್ನವ ಕೊಡುವ ಕೆಲಸ ಬಿಟ್ಟೆನೋ
ಮನವ ಮಾತ ಹೇಳಲೇನು ಗೆಳೆಯನೆ
ಕಿವಿಯಲ್ಲಿ ಕಿವಿಯಲ್ಲಿ ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ಪ್ರೇಮವೆಂಬ ಬಲೆಯ ಬೀಸುವೆ ನಾ ಈಗ ನಿನ್ನ ಸೆರೆಯ ಹಾಕುವೆ 
ನಲ್ಲ ನನ್ನ ಬಂಧಿಯಾಗುವೆ ನೀ ಎಲ್ಲ ಸುಖವ ಅಲ್ಲಿ ಕಾಣುವೆ 
ನಿನ್ನ ಜೊತೆಯಲಿ ನಾನು ನಿಲ್ಲುವೇ ನನ್ನ ಪ್ರೇಮವಾ ಆಗ ಅರಿಯುವೇ 
ಮನವ ಮಾತ ಹೇಳಲೇನು ಗೆಳೆಯನೆ
ಕಿವಿಯಲ್ಲಿ ಕಿವಿಯಲ್ಲಿ ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ
-------------------------------------------------------------------------------------------------------------------------

ತಾಯಿನಾಡು ( ೧೯೮೪) - ಕಂಗಳ ನೋಡೇ ಮತ್ತು ಬರುವುದು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಕಣ್ಗಳ ನೋಡೇ ಮತ್ತು ಬರುವುದು ಮೊಗವನು ನೋಡೇ ಮುದ್ದು ಬರುವುದು
ಅದಕೆ ಕದವನು ತೆರೆದೇ ನಿನ್ನಾ ಸನಿಹಕೆ ಬಂದೆ

ಯಾವ ಮರವೇ ಆದರೇನು ಹಸಿರೇ ಎಳೆಗಳು ಯಾವ ಬಳ್ಳಿ ಆದರೇನು ಸೊಗಸೇ ಹೂವುಗಳೂ
ಏನೇ ಉಡುಪಿರಲಿ ಎಲ್ಲೇ ನಿಂತಿರಲಿ ಏನೇ ನುಡಿಯುತಲಿ ದರ್ಪ ತೋರಿಸಲಿ
ಅರೆರೆರೇ..  ಅಯ್ಯೋ ಹೆಣ್ಣು ಗಂಡಾಗದು ನಿನ್ನ ಮನಸು ಕಲ್ಲಾಗದು
ಯಾರು ಇರದ ತಾಣವೆಂದು ಇಲ್ಲಿ ಬಂದೆನು
ಕಣ್ಗಳ ನೋಡೇ ಮತ್ತು ಬರುವುದು ಮೊಗವನು ನೋಡೇ ಮುದ್ದು ಬರುವುದು
ಅದಕೆ ಕದವನು ತೆರೆದೇ ನಿನ್ನಾ ಸನಿಹಕೆ ಬಂದೆ

ಪ್ರೇಯಸಿ ಸೇರಲೆಂದು ಮತ್ತೆ ಹಾಸಿ ನಿಂತೆನು ಎಂಥಾ ಚೆಲುವೆಯನು ಎಂಥಾ ರಸಿಕಳನು
ಎಂಥಾ ಜಾಣೆಯನು ನಾನು ವರಿಸಿದೆನು ಅರೆರೆರೆರೇ.. ಎಂದು ನಿನ್ನ ಸೆರೆಯಲ್ಲಿಯೇ
ನಾನು ಇರುವೆ ಕೇಳೇ ಪ್ರಿಯೆ
ಕಣ್ಗಳ ನೋಡೇ ಮತ್ತು ಬರುವುದು ಮೊಗವನು ನೋಡೇ ಮುದ್ದು ಬರುವುದು
ಅದಕೆ ಕದವನು ತೆರೆದೇ ನಿನ್ನಾ ಸನಿಹಕೆ ಬಂದೆ
-------------------------------------------------------------------------------------------------------------------------

ತಾಯಿನಾಡು ( ೧೯೮೪) - ದೇವಾನು ಎಲ್ಲಿದ್ದಾನಮ್ಮಾ ಅವನು ಎಲ್ಲಿದ್ದಾನೆ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ದೇವನು ಎಲ್ಲಿದ್ದಾನಮ್ಮ ಅವನು ಎಲ್ಲಿದ್ದಾನೆ
ಆ ದೇವನು ಎಲ್ಲಿರುವ ನೀ ಬಲ್ಲೆಯ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ ಶಿಲೆಯಾಗಿರುವನು ಮಗುವೇ ಶಿಲೆಯಾಗಿರುವನು
ದೇವನು ಎಲ್ಲಿದ್ದಾನಮ್ಮ ಅವನು ಎಲ್ಲಿದ್ದಾನೆ
ಆ ದೇವನು ಎಲ್ಲಿರುವ ನೀ ಬಲ್ಲೆಯ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ ಶಿಲೆಯಾಗಿರುವನು ಮಗುವೇ ಶಿಲೆಯಾಗಿರುವನು

ತೇತ್ರಾಯುಗದಲ್ಲಿ ರಾಮನಾಗಿ ಆ ರಾವಣನನು ಎದುರಿಸಿದ
ದ್ವಾಪರದಲಿ ಕೃಷ್ಣನಾಗಿ  ಭಕ್ತರನ್ನೆಲ್ಲ ರಕ್ಷಿಸಿದ
ಈ ಕಲಿಯುಗದಾ ಜನರಾ ಕಂಡು ಆ ದೇವರಿಗೆ ಭಯವು ಬಂದು
ಕಲ್ಲು ಮನದ ಮಾನವರೆದುರೂ ಕಲ್ಲಾಗೆ ಕುಳಿತ ಪಾಪ ಕಲ್ಲಾಗೆ ಕುಳಿತ
ದೇವನು ಎಲ್ಲಿದ್ದಾನಮ್ಮ ಅವನು ಎಲ್ಲಿದ್ದಾನೆ
ಆ ದೇವನು ಎಲ್ಲಿರುವ ನೀ ಬಲ್ಲೆಯ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ ಶಿಲೆಯಾಗಿರುವನು ಮಗುವೇ ಶಿಲೆಯಾಗಿರುವನು

ಈ ಕಾಲದಲಿ ದೇವರ ಗುಡಿಗೆ  ಜನಗಳು ಕನ್ನವ ಹಾಕಿರಲು
ಹಣವನು ದೋಚಲು ದೇವನ ಮೂರ್ತಿಯಹೊರದೇಶಗಳಿಗೆ ಮಾರಿರಲು
ಹೊನ್ನ ಕಿರೀಟವ ಧರಿಸಿ ಬಂದರೆ ಇಂಥಾ ಮರುಳರು ಸುಮ್ಮನಿರುವರೇ
ಎನ್ನುತ ಭಯದಿ ಕಾಣದೆ ಕಣ್ಣಿಗೆ    ಕಲ್ಲಾಗಿ ಕುಳಿತ ದೇವನು ಕಲ್ಲಾಗಿ ಕುಳಿತ
ದೇವನು ಎಲ್ಲಿದ್ದಾನಮ್ಮ ಅವನು ಎಲ್ಲಿದ್ದಾನೆ
ಆ ದೇವನು ಎಲ್ಲಿರುವ ನೀ ಬಲ್ಲೆಯ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ ಶಿಲೆಯಾಗಿರುವನು ಮಗುವೇ ಶಿಲೆಯಾಗಿರುವನು
-------------------------------------------------------------------------------------------------------------------------

ತಾಯಿನಾಡು ( ೧೯೮೪) - ಇದು ದೇವ ಮಂದಿರವೋ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಇದು ದೇವಮಂದಿರವೋ ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ ನೀನು ನೆನಪಾಲಿದು ತಿಳಿದಿಕೋ ಮೂಢಾ ತಿಳಿದುಕೋ
ಇದು ದೇವಮಂದಿರವೋ ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ ನೀನು ನೆನಪಾಲಿದು ತಿಳಿದಿಕೋ ಮೂಢಾ ತಿಳಿದುಕೋ

ಓಟನು ಕೊಟ್ಟು ನಂಬಿ ನಿನ್ನನ್ನು ಇಲ್ಲಿ ಕಳಿಸಿದ ಜನರು
ಏನನು ಸಾಧಿಸಿ ಬರುವೆ ಎಂಬುದ ನೋಡುತಲಿಹರು
ನಿರಾಸೆಯಿಂದ ನೊಂದರೆ ಅವರು ನಿನ್ನನ್ನು ಬಿಡದು ಆ ನಿಟ್ಟುಸಿರೂ
ಬೆಂಕಿಯ ಹಾಗೆ ಸುಡುವುದು ನಿನ್ನ ಬಡವನ ಕಣ್ಣೀರೂ
ಸೇವೆಯೇ ಉಸಿರು ಎಂಬುದ ನೀನು ನೆನಪಾಲಿದು ತಿಳಿದಿಕೋ ಮೂಢಾ ತಿಳಿದುಕೋ
ಇದು ದೇವಮಂದಿರವೋ ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ ನೀನು ನೆನಪಾಲಿದು ತಿಳಿದಿಕೋ ಮೂಢಾ ತಿಳಿದುಕೋ

ತುತ್ತು ಅನ್ನವ ಕಾಣದೆ ಇದ್ದರೇ ಬಡವರು ಎಲ್ಲರು ಸೇರಿ ಲಕ್ಷ ಲಕ್ಷ ದೋಚುವ ಇವನಿಗೆ
ಕೈಗಳ ಮುಗಿವರು ನೋಡಿ ನ್ಯಾಯವು ಮಸಣದ ಪಾಲಾಗಿ ಧರ್ಮ ದೇವತೆ ಮರೆಯಾದಾಗ
ತಾಯಿನಾಡನು ಉಳಿಸುವರಾರು ಹೇಳಿ ನೀನೀಗ
ಸೇವೆಯೇ ಉಸಿರು ಎಂಬುದ ನೀನು ನೆನಪಾಲಿದು ತಿಳಿದಿಕೋ ಮೂಢಾ ತಿಳಿದುಕೋ
ಇದು ದೇವಮಂದಿರವೋ ಇದು ಪುಣ್ಯ ಮಂದಿರವೋ
ಕಾಲಿಡುವ ಮೊದಲೇ ನಿನ್ನ ಸ್ವಾರ್ಥವ ಇಲ್ಲೇ ಬಿಡು
ಸೇವೆಯೇ ಉಸಿರು ಎಂಬುದ ನೀನು ನೆನಪಾಲಿದು ತಿಳಿದಿಕೋ ಮೂಢಾ ತಿಳಿದುಕೋ
-------------------------------------------------------------------------------------------------------------------------

No comments:

Post a Comment