ತಾಯಿ ಕನಸು ಚಲನಚಿತ್ರದ ಹಾಡುಗಳು
- ಹೇ.. ಯೌವ್ವನ ಬಂದಾಗ ಹೆಣ್ಣನು ಕಂಡಾಗ
- ಹೂವು ಎಂದು ನಂಬಿದ ಸತಿಗೆ ಮುಳ್ಳಾದೆನು
- ದೇವರು ಎಲ್ಲೋ ದೂರದಲ್ಲಿಲ್ಲ
- ಇದು ತಾಯಿಯ ಕನಸು
- ಹೆಣ್ಣಾಗಿ ಹುಟ್ಟುವುದೇ ಪಾಪವೇನೂ..
ತಾಯಿ ಕನಸು (೧೯೮೫) - ಹೇ.. ಯೌವ್ವನ ಬಂದಾಗ ಹೆಣ್ಣನು ಕಂಡಾಗ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ, ರಾಜಾಸೀತಾರಾಮ
ಎಸ್ಪಿ : ಹೇಹೇ ... ರಾಜಾ : ಆಹ್ಹಹ್ಹಾ... ಎಸ್ಪಿ : ಆಹ್ಹಹ್ಹಾ...
ಎಸ್ಪಿ : ಹೇ ಯೌವ್ವನ ಬಂದಾಗ ಹೆಣ್ಣನು ಕಂಡಾಗ ಎಲ್ಲರೂ ಹೀಗೆಯೇ ಗೆಳೆಯ ಎಲ್ಲರೂ ಹೀಗೆಯೇ..
ರಾಜ : ಹೇ ಯೌವ್ವನ ಬಂದಾಗ ಹೆಣ್ಣನು ಕಂಡಾಗ ಎಲ್ಲರೂ ಹೀಗೆಯೇ ಗೆಳೆಯ ಎಲ್ಲರೂ ಹೀಗೆಯೇ..
ರಾಜ : ಸೆರಗೊಂದ ಕಂಡರಾಯ್ತು ಜಡೆಯೊಂದ ಕಂಡರಾಯ್ತು ಅವನಾಟ ಅಲ್ಲೇನೇ ಮುಗಿದೇ ಹೋಯ್ತು
ಎಸ್ಪಿ : ಬಳೆಸದ್ದು ಆದಾರಾಯ್ತು ನಗೆಯೊಂದ ಕಂಡರಾಯ್ತು ಹುಲಿಯಂಥ ಗಂಡು ಕೂಡ ಸುಸ್ತೋ ಸುಸ್ತೋ ..
ರಾಜ : ಆ.. ಸೆರಗೊಂದ ಕಂಡರಾಯ್ತು ಜಡೆಯೊಂದ ಕಂಡರಾಯ್ತು ಅವನಾಟ ಅಲ್ಲೇನೇ ಮುಗಿದೇ ಹೋಯ್ತು
ಎಸ್ಪಿ : ಪಪಪಪಪ.. ಬಳೆಸದ್ದು ಆದಾರಾಯ್ತು ನಗೆವೊಂದ ಕಂಡರಾಯ್ತು ಹುಲಿಯಂಥ ಗಂಡು ಕೂಡ ಸುಸ್ತೋ ಸುಸ್ತೋ ..
ಇಬ್ಬರು : ಬಿಸಿಲೆ ಬೆಳದಿಂಗಳಾಗಿ ಮಾತೆಲ್ಲ ಕವಿತೆಯಾಗಿ ಅವನಾಟ ಏನೆಂದು ನಿನಗೆ ಗೊತ್ತು
ಎಸ್ಪಿ : ಹೇ ಯೌವ್ವನ ಬಂದಾಗ ಹೆಣ್ಣನು ಕಂಡಾಗ ಎಲ್ಲರೂ ಹೀಗೆಯೇ ಗೆಳೆಯ ಎಲ್ಲರೂ ಹೀಗೆಯೇ..ಹೇ...
ಎಸ್ಪಿ : ಅಮ್ಮನು ಬೇಕಾಗಿಲ್ಲ ಅಪ್ಪನು ಬೇಕಾಗಿಲ್ಲಾ ಮನದಲ್ಲಿ ತನ್ನೋರ ನೆನಪೇ ಇಲ್ಲ
ರಾಜ : ಹಗಲಲ್ಲಿ ಶಾಂತಿ ಇಲ್ಲ ರಾತ್ರೀಲಿ ನಿದ್ದೆ ಇಲ್ಲ ಬಾಳಲ್ಲಿ ನೆಮ್ಮದಿ ಎಂದು ಇಲ್ಲ
ಎಸ್ಪಿ : ಹೇ.. ಅಮ್ಮನು ಬೇಕಾಗಿಲ್ಲ ಅಪ್ಪನು ಬೇಕಾಗಿಲ್ಲಾ ಮನದಲ್ಲಿ ತನ್ನೋರ ನೆನಪೇ ಇಲ್ಲ
ರಾಜ : ಪಪಪಪ .. ಹಗಲಲ್ಲಿ ಶಾಂತಿ ಇಲ್ಲ ರಾತ್ರೀಲಿ ನಿದ್ದೆ ಇಲ್ಲ ಬಾಳಲ್ಲಿ ನೆಮ್ಮದಿ ಎಂದು ಇಲ್ಲ
ಇಬ್ಬರು : ಮನಸೂ ಉಯ್ಯಾಲೆಯಾಗಿ ದಿನವೆಲ್ಲ ತೂಗಿ ತೂಗಿ ಅವನಾಡೋ ಒದ್ದಾಟ ಶಿವನೇ ಬಲ್ಲ
ರಾಜ : ಹೇ ಯೌವ್ವನ ಬಂದಾಗ ಹೆಣ್ಣನು ಕಂಡಾಗ ಎಲ್ಲರೂ ಹೀಗೆಯೇ ಗೆಳೆಯ ಎಲ್ಲರೂ ಹೀಗೆಯೇ..ರಪ್ಪಪಪಪ...

ಇಬ್ಬರು : ಲಾಲಾಲಲ ಲ್ಲಲ್ಲಲ್ಲಲಾ ಅಹ್ಹಹ್ಹಾ ಒಹೋ.. ಹ್ಹೂಹ್ಹೂ.. ಲಾಲಾಲಲ ಲ್ಲಲ್ಲಲ್ಲಲಾ ಅಹ್ಹಹ್ಹಾ
ಪಾಪಯ್ ಪಾಪಯ್ ಪಾಪಯ್ ಪಾಪಯ್
------------------------------------------------------------------------------------------------------------------------
ತಾಯಿ ಕನಸು (೧೯೮೫) - ಹೂವು ಎಂದು ನಂಬಿದ ಸತಿಗೆ ಮುಳ್ಳಾದೆನು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ,
ಹೂವು ಎಂದು ನಂಬಿದ ಸತಿಗೆ ಮುಳ್ಳಾದೆನು ನಾನೂ ಕಲ್ಲಾದೇನೂ

ಪ್ರೀತಿಯ ತೋರಿದ ಗೆಳೆಯನ ಪಾಲಿಗೆ ಸಿಡಿಲಂತಾದೇನೂ ..

ಬದುಕಲಿ ಪಾಪವ ಮಾಡಿದೆನಯ್ಯ ಸುಖವನು ಕಾಲಲಿ ನೂಕಿದೆನಯ್ಯಾ..
ಕಂಗಳು ಕಾಣದ ಅಂಧನ ಹಾಗೆ ಎಲ್ಲರ ಬಾಳಲಿ ತುಂಬಿದೆ ಬೇಗೆ...
ಕಾಲವು ಕಳೆಯಿತು ಕಂಗಳು ಹೋಯಿತು ತಪ್ಪಿಗೆ ದಂಡನೇ ಆಯ್ತು
ಹೂವು ಎಂದು ನಂಬಿದ ಸತಿಗೆ ಮುಳ್ಳಾದೆನು ನಾನೂ ಕಲ್ಲಾದೇನೂ
ಪ್ರೀತಿಯ ತೋರಿದ ಗೆಳೆಯನ ಪಾಲಿಗೆ ಸಿಡಿಲಂತಾದೇನೂ ..
ಪ್ರೀತಿಯ ತೋರಿದ ಗೆಳೆಯನ ಪಾಲಿಗೆ ಸಿಡಿಲಂತಾದೇನೂ ..
ಹೂವು ಎಂದು ನಂಬಿದ ಸತಿಗೆ ಮುಳ್ಳಾದೆನು ನಾನೂ ಕಲ್ಲಾದೇನೂ
ಯಾರನೋ ನಂಬಿದೇ ಮೂಢನ ಹಾಗೆ ಯಾರನೋ ಸೇರಿದೇ ಮಂಕನ ಹಾಗೇ
ಹಾವನೂ ನೋಡುತ ಹೂವಿದು ಎಂದು ನಂಬಿದ ಮೂಢನ ಕಂಡಿರ ಇಂದು
ಹೆಣ್ಣಿನ ಶಾಪಕೆ ಗೆಳೆಯನ ಕೋಪಕೆ ಬದುಕೇ ಕಂಬನಿ ಆಯ್ತು
ಹೂವು ಎಂದು ನಂಬಿದ ಸತಿಗೆ ಮುಳ್ಳಾದೆನು ನಾನೂ ಕಲ್ಲಾದೇನೂ
ಪ್ರೀತಿಯ ತೋರಿದ ಗೆಳೆಯನ ಪಾಲಿಗೆ ಸಿಡಿಲಂತಾದೇನೂ ..
ಪ್ರೀತಿಯ ತೋರಿದ ಗೆಳೆಯನ ಪಾಲಿಗೆ ಸಿಡಿಲಂತಾದೇನೂ ..
ಹೂವು ಎಂದು ನಂಬಿದ ಸತಿಗೆ ಮುಳ್ಳಾದೆನು ನಾನೂ ಕಲ್ಲಾದೇನೂ
------------------------------------------------------------------------------------------------------------------------
ತಾಯಿ ಕನಸು (೧೯೮೫) - ದೇವರು ಎಲ್ಲೋ ದೂರದಲ್ಲಿಲ್ಲ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ: ಪಿ.ಸುಶೀಲಾ, ಜಯದೇವಿ
ದೇವರು ಎಲ್ಲೋ ದೂರದಲ್ಲಿಲ್ಲ ಎದುರಲ್ಲೇ ಇರುವ
ಜನರ ಮನದಲ್ಲೇ ಇರುವ... ಜನರ ಮನದಲ್ಲೇ ಇರುವ
ಗುಡಿಯಲೀ ಅವನು ಕಲ್ಲಾಗಿಲ್ಲ ಕಣ್ಣೆದುರೇ ಇರುವ ನಮ್ಮ ಜೊತೆಯಲ್ಲೇ ಇರುವಾ ...
ಓಹೋಹೊಹೋ...ಓಹೋಹೊಹೋ...ಓಓಓಓಓ
ಜನುಮವ ನೀಡಿದ ಅಮ್ಮನ ಮನದಲಿ ಎಂದಿಗೂ ಮಾಸದ ಮಮತೆಯ ರೂಪದಿ
ಬಡವರ ಕಾಣುವ ಕಂಗಳ ಮರೆಯಲಿ ಮಾತಿಗೆ ಸಿಲುಕುದ ಕರುಣೆಯ ರೂಪದಿ
ಸ್ನೇಹದ ರೂಪದಿ ಪ್ರೀತಿಯ ರೂಪದಿ ಎಲ್ಲೆಡೆ ಅವನೇ ತುಂಬಿರುವ...
ಜಗದಲಿ ಯಾರು ತಬ್ಬಲಿಯಲ್ಲ ರಕ್ಷಿಸುವಾತನು ಜೊತೆಯಾನೇ ಇರುವ
ಕಷ್ಟವೇ ಬಂದರು ಹೆದರಿಕೆ ಇಲ್ಲ ನಂಬಿದ ದೇವರು ಸುಖವನೇ ತರುವ
ದ್ವೇಷವ ಮರೆತರೇ .. ದೋಷವ ತೊರೆದರೇ.. ನಿನ್ನಲೇ ಅವನು ಕಾಣಿಸುವ
ಜನುಮವ ನೀಡಿದ ಅಮ್ಮನ ಮನದಲಿ ಎಂದಿಗೂ ಮಾಸದ ಮಮತೆಯ ರೂಪದಿ
ಬಡವರ ಕಾಣುವ ಕಂಗಳ ಮರೆಯಲಿ ಮಾತಿಗೆ ಸಿಲುಕುದ ಕರುಣೆಯ ರೂಪದಿ
ಸ್ನೇಹದ ರೂಪದಿ ಪ್ರೀತಿಯ ರೂಪದಿ ಎಲ್ಲೆಡೆ ಅವನೇ ತುಂಬಿರುವ...
ದೇವರು ಎಲ್ಲೋ ದೂರದಲ್ಲಿಲ್ಲ ಎದುರಲ್ಲೇ ಇರುವ
ಜನರ ಮನದಲ್ಲೇ ಇರುವ... ಜನರ ಮನದಲ್ಲೇ ಇರುವ
ಕಷ್ಟವೇ ಬಂದರು ಹೆದರಿಕೆ ಇಲ್ಲ ನಂಬಿದ ದೇವರು ಸುಖವನೇ ತರುವ
ದ್ವೇಷವ ಮರೆತರೇ .. ದೋಷವ ತೊರೆದರೇ.. ನಿನ್ನಲೇ ಅವನು ಕಾಣಿಸುವ
ದೇವರು ಎಲ್ಲೋ ದೂರದಲ್ಲಿಲ್ಲ ಎದುರಲ್ಲೇ ಇರುವ ಜನರ ಮನದಲ್ಲೇ ಇರುವ...
ಗುಡಿಯಲೀ ಅವನು ಕಲ್ಲಾಗಿಲ್ಲ ಕಣ್ಣೆದುರೇ ಇರುವ ನಮ್ಮ ಜೊತೆಯಲ್ಲೇ ಇರುವಾ ...
ನಮ್ಮ ಜೊತೆಯಲ್ಲೇ ಇರುವಾ ... ------------------------------------------------------------------------------------------------------------------------
ತಾಯಿ ಕನಸು (೧೯೮೫) - ಇದು ತಾಯಿಯ ಕನಸು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ, ಪಿ.ಸುಶೀಲಾ
ಹೆಣ್ಣು : ಇದು ತಾಯಿಯ ಕನಸು ನಿಜವಾದರೇ ಎಂಥ ಸೊಗಸು
ಇದು ತಾಯಿಯ ಕನಸು ನಿಜವಾದರೇ ಎಂಥ ಸೊಗಸು
ಗಂಡು : ವಂಶಕೆ ಒಬ್ಬ ಮಗನಿರಬೇಕು
ಹೆಣ್ಣು : ಕನ್ಯಾದಾನಕೆ ಮಗಳಿರಬೇಕು
ಇಬ್ಬರು : ಸುಖ ಸಂತೋಷವ ಬಾಳಲಿ ತುಂಬಲು ಇಬ್ಬರು ಮಕ್ಕಳೇ ಸಾಕೂ
ಹೆಣ್ಣು : ಇದು ತಾಯಿಯ ಕನಸು
ಹೆಣ್ಣು : ಇದು ತಾಯಿಯ ಕನಸು
ಇಬ್ಬರು : ನಿಜವಾದರೇ ಎಂಥ ಸೊಗಸು
ಹೆಣ್ಣು : ಮುದ್ದಿನ ಮಕ್ಕಳು ನಗುತಿರಬೇಕು
ಹೆಣ್ಣು : ಮುದ್ದಿನ ಮಕ್ಕಳು ನಗುತಿರಬೇಕು
ಗಂಡು : ಈ ಮನೆ ಗೋಕುಲದಂತಿರಬೇಕು..
ಮುದ್ದಿನ ಮಕ್ಕಳು ನಗುತಿರಬೇಕು
ಹೆಣ್ಣು : ಈ ಮನೆ ಗೋಕುಲದಂತಿರಬೇಕು..
ಗಂಡು : ಸಂಭ್ರಮ ಸಡಗರ ತುಂಬಿರಬೇಕು....
ಗಂಡು : ಸಂಭ್ರಮ ಸಡಗರ ತುಂಬಿರಬೇಕು....
ಸಂಭ್ರಮ ಸಡಗರ ತುಂಬಿರಬೇಕು
ಇಬ್ಬರು : ಬದುಕಲಿ ನೆಮ್ಮದಿ ಇರಬೇಕು
ಹೆಣ್ಣು : ಇದು ತಾಯಿಯ ಕನಸು ನಿಜವಾದರೇ ಎಂಥ ಸೊಗಸು
ಗಂಡು : ಹೀಗೆಯೇ ಎಂದು ನೀವಿರಬೇಕು ಶಿವಪಾರ್ವತಿಯರ ಹಾಗೀರಬೇಕು
ಹೀಗೆಯೇ ಎಂದು ನೀವಿರಬೇಕು ಶಿವಪಾರ್ವತಿಯರ ಹಾಗೀರಬೇಕು

ಈ ಸಂಸಾರದ ಸುಖವನು ಕಂಡೂ...
ಈ ಸಂಸಾರದ ಸುಖವನು ಕಂಡು ಸ್ವರ್ಗವೇ ನಾಚಬೇಕು
ಇದು ಸ್ನೇಹಿತನ ಕನಸು ನಿಜವಾದರೆ ಎಂಥ ಸೊಗಸು
ಇದು ಸ್ನೇಹಿತನ ಕನಸು ನಿಜವಾದರೆ ಎಂಥ ಸೊಗಸು
------------------------------------------------------------------------------------------------------------------------
ಇದು ಸ್ನೇಹಿತನ ಕನಸು ನಿಜವಾದರೆ ಎಂಥ ಸೊಗಸು
------------------------------------------------------------------------------------------------------------------------
ತಾಯಿ ಕನಸು (೧೯೮೫) - ಹೆಣ್ಣಾಗಿ ಹುಟ್ಟುವುದೇ ಪಾಪವೇನೋ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ,
ಕೋರಸ್ : ಆಆಆ... ಆಆಆ .... ಆಆಆ .... ಆಆಆ
ಗಂಡು : ಹೆಣ್ಣಾಗಿ ಹುಟ್ಟುವುದೇ ಪಾಪವೇನೋ ಆ ವಿಧಿಗೇ ಇವಳಲ್ಲಿ ಕೋಪವೇನೋ.. ಕೋಪವೇನೋ
ಹೆಣ್ಣಾಗಿ ಹುಟ್ಟುವುದೇ ಪಾಪವೇನೋ ಆ ವಿಧಿಗೇ ಇವಳಲ್ಲಿ ಕೋಪವೇನೋ.. ಕೋಪವೇನೋ
ಕೋರಸ್ : ಆಆಆ... ಆಆಆ .... ಆಆಆ .... ಆಆಆ
ಗಂಡು : ಸೊಗಸಾದ ಸಂಸಾರ ಅನುರಾಗ ಆಧಾರ ಸಂತೋಷ ಸಾಗರದೀ.. ತೇಲಾಡಿದರೂ ..
ಸೊಗಸಾದ ಸಂಸಾರ ಅನುರಾಗ ಆಧಾರ ಸಂತೋಷ ಸಾಗರದೀ.. ತೇಲಾಡಿದರೂ ..
ಸಂಶಯದ ಸಿಡಿಲೊಂದು ಬಡಿದಾಗ ಬಲುನೊಂದೂ ಕಣ್ಣೀರ ಕಡಲಲ್ಲೀ ನೀರಾದಳೂ .. ನೀರಾದಳೂ ..
ಹೆಣ್ಣಾಗಿ ಹುಟ್ಟುವುದೇ ಪಾಪವೇನೋ ಆ ವಿಧಿಗೇ ಇವಳಲ್ಲಿ ಕೋಪವೇನೋ.. ಕೋಪವೇನೋ
ಕೋರಸ್ : ಆಆಆ... ಆಆಆ .... ಆಆಆ .... ಆಆಆ
ಗಂಡು : ಯಾರಿಲ್ಲ ಎಂದಾಗ ನಾನಿರುವೇ ಅನ್ನುತಲೀ ಈ ಅಣ್ಣ ನೆರಳಾಗಿ ಬಳಿ ನಿಲ್ಲಲ್ಲೂ ..
ಯಾರಿಲ್ಲ ಎಂದಾಗ ನಾನಿರುವೇ ಅನ್ನುತಲೀ ಈ ಅಣ್ಣ ನೆರಳಾಗಿ ಬಳಿ ನಿಲ್ಲಲ್ಲೂ ..
ಇರುಳಲ್ಲಿ ಬೆಳಕಾಗಿ ನೋವಲ್ಲಿ ಜೊತೆಯಾಗಿ ಆನಂದ ನೀಡಿದರೂ ಎರಡೂ ಮಕ್ಕಳೂ.. ಎರಡೂ ಮಕ್ಕಳೂ..
ಹೆಣ್ಣಾಗಿ ಹುಟ್ಟುವುದೇ ಪಾಪವೇನೋ ಆ ವಿಧಿಗೇ ಇವಳಲ್ಲಿ ಕೋಪವೇನೋ.. ಕೋಪವೇನೋ
------------------------------------------------------------------------------------------------------------------------
No comments:
Post a Comment