ತವರು ಮನೆ ಚಲನ ಚಿತ್ರದ ಹಾಡುಗಳು
- ನಿನ್ನನ್ನೇ ನಂಬಿರುವೇ ಗಣಪತಿಯೇ
- ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು
- ಮಾವಿನ ಮರದಲಿ ನಲಿಯುವ ಕೋಗಿಲೆ ಹಾಡಿದೆ ಪ್ರೇಮಾ..
- ಏಕೇ ಅಳುವೇ ನಗುವನೇತಕೆ ಮರೆತಿರುವೇ
- ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
- ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ರಮೇಶ, ಕೋರಸ್
ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿಮೆಟ್ಲು ಮುತ್ತಿನುಂಡೆ ಒಪ್ಪುವಂಥ ವರಸಿದ್ಧಿ ವಿನಾಯಕ ನಿನಗೇ
ಇಪ್ಪತ್ತೊಂದು ನಮಸ್ಕಾರಗಳೂ ...
ನಿನ್ನನ್ನೇ ನಂಬಿರುವೆ ಗಣಪತಿಯೇ ಕೈ ಹಿಡಿದು ಕಾಪಾಡು ಗಣಪತಿಯೇ
ಕಣ್ಣೀರ ಕಥೆಯ ಕೇಳು ಗಣಪತಿಯೇ ನನ್ನಾಸೆ ಪೂರೈಸು ಗಣಪತಿಯೇ

ಯೌವ್ವನವು ಬಂದಿದ್ದು ತಪ್ಪೇನು ಸಂಗಾತಿಯ ಬಯಸಿದ್ದೂ ತಪ್ಪೇನು

ಹೆಣ್ಣೊಂದ ಕಂಡಿದ್ದು ತಪ್ಪೇನು ಆ ಹುಡುಗಿ ಒಲಿದದ್ದು ತಪ್ಪೇನು
ನಿನ್ನನ್ನೇ ನಂಬಿರುವೆ ಗಣಪತಿಯೇ ಕೈ ಹಿಡಿದು ಕಾಪಾಡು ಗಣಪತಿಯೇ
ಹೆಣ್ಣಿಗೊಬ್ಬ ತಂದೆಯೆಂದು ಇರಬೇಕೆ ಪ್ರೀತಿಗವನು ಯಮನಂತೆ ಬರಬೇಕೆ
ಜೋಡಿ ಹಕ್ಕಿ ದೂರವಾಗಿ ಅಳಬೇಕೆ ಇವನಲ್ಲಿ ಈ ಕೋಪ ನಿನಗೇಕೆ
ನಿನ್ನನ್ನೇ ನಂಬಿರುವೆ ಗಣಪತಿಯೇ ಕೈ ಹಿಡಿದು ಕಾಪಾಡು ಗಣಪತಿಯೇ
ಗಣಪತಿಯ ವರವನ್ನು ತಂದಾಯ್ತು ಅತ್ತಿಗೆ ಸೆರೆವಾಸ ಮುಗಿದಾಯ್ತು
ಆ ಶಕುನಿ ಸಂಚೆಲ್ಲ ಮಣ್ಣಾಗಿ ಒಂದಾಗೋ ಹೊಸಕಾಲ ಬಂದಾಯ್ತು
ಇನ್ನೆಂದು ಬಾಳಲ್ಲಿ ಭಯವಿಲ್ಲ ನೀ ನನ್ನ ಶ್ರೀಮತಿಯು ಸುಳ್ಳಲ್ಲ
ಈ ಮದುವೆ ತಡೆಯೋರು ಹುಟ್ಟಿಲ್ಲ ತಡೆಯೋಕೇ ಬಂದೋರು ಉಳಿಯೋದಿಲ್ಲ
ನಿನ್ನನ್ನೇ ನಂಬಿರುವೆ ಗಣಪತಿಯೇ ಕೈ ಹಿಡಿದು ಕಾಪಾಡು ಗಣಪತಿಯೇ
ಕಣ್ಣೀರ ಕಥೆಯ ಕೇಳು ಗಣಪತಿಯೇ ನನ್ನಾಸೆ ಪೂರೈಸು ಗಣಪತಿಯೇ
ನಿನ್ನನ್ನೇ ನಂಬಿರುವೆ ಗಣಪತಿಯೇ ಕೈ ಹಿಡಿದು ಕಾಪಾಡು ಗಣಪತಿಯೇ
ನಿನ್ನನ್ನೇ ನಂಬಿರುವೆ ಗಣಪತಿಯೇ ಕೈ ಹಿಡಿದು ಕಾಪಾಡು ಗಣಪತಿಯೇ
-------------------------------------------------------------------------------------------------------------------------
ತವರು ಮನೆ (೧೯೮೬) - ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು
ಸಂಗೀತ:ವಿಜಯಭಾಸ್ಕರ, ಸಾಹಿತ್ಯ:ಚಿ.ಉದಯಶಂಕರ, ಗಾಯನ:ಎಸ್.ಪಿ.ಬಿ, ರಾಜಕುಮಾರಭಾರತಿ, ಜಾನಕೀ, ಛಾಯ
ಗಂಡು : ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು ನನ್ನ ಬೀಗರಾಗಲು...
ಒಪ್ಪಿಗೆಯೇ .. ಒಪ್ಪಿಗೆಯೇ..
ಹೆಣ್ಣು : ಮುತ್ತಿನಂಥ ಹುಡುಗನಿಗೆ ಚಿನ್ನದಂಥ ಹುಡುಗಿಬೇಕು ನಮ್ಮ ಬೀಗರಾಗಲು ..
ಒಪ್ಪಿಗೆಯೇ .. ಒಪ್ಪಿಗೆಯೇ..
ಗಂಡು : ಸಕ್ಕರೆ ಸಿಹಿಯು ಬೆಲ್ಲದ ಸವಿಯು ಸೇರಿದ ಹಾಗೆ ಈ ಸಂಬಂಧ
ಎಂದೂ ಯಾರು ಬಿಡಿಸಲಾಗದ ಬ್ರಹ್ಮನ ಗಂಟು ಈ ಅನುಬಂಧ
ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು ನನ್ನ ಬೀಗರಾಗಲು...
ಒಪ್ಪಿಗೆಯೇ .. ಒಪ್ಪಿಗೆಯೇ..
ಗಂಡು : ಹುಡುಗಿಯೇನೋ ಒಪ್ಪಿಗೆ ಬಣ್ಣ ಬೆಳ್ಳಿ ಮಲ್ಲಿಗೆ ಬಂಗಾರ ಎಷ್ಟು ತರುವಳು ಹೇಳಿ ಅತ್ತೆ ಮನೆಗೇ ..
ಗಂಡು : ಬೀಗದ ಕೈಯೇ ಕೊಟ್ಟಿದೆ ಎಲ್ಲಾ ನಿನ್ನ ಕೈಲಿದೇ ಇನ್ನೆಕೋ ಆಸೆಯೂ ಕಾಣೆ ನನ್ನಾ ತಂಗಿಗೇಹೆಣ್ಣು : ಬ್ಯಾಂಕಿನಲ್ಲಿ ಕೋಟಿ ಕೋಟಿ ರಾಶಿ ನೋಟು ಇದ್ದರೇನು
ತನ್ನದೆಂದರೇ ಆ ಖಜಾಂಚಿ ಕಂಬಿ ಎಣಿಸದೇ ಇರುವನೇನು
ಗಂಡು : ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು ನನ್ನ ಬೀಗರಾಗಲು...
ಒಪ್ಪಿಗೆಯೇ .. ಒಪ್ಪಿಗೆಯೇ..
ಗಂಡು : ಅತ್ತೆ ಮಾವ ಸೇವೆಯೇ ತನ್ನ ಪತಿ ಹಾರೈಕೆಯೇ ಎಂದೆಂದೂ ಪ್ರಾಣದಂತೆ ಗೊತ್ತೇ ನಮ್ಮ ಹೆಣ್ಣಿಗೆ
ಹೆಣ್ಣು : ಕೃಷ್ಣನ ಮಾತೆ ಗೀತಾ ಅಕ್ಕನ ನುಡಿಯೇ ವೇದ ನನ್ನಾಣೆ ಲಕ್ಷ್ಮಿಯಂತೆ ಇವಳು ನಮ್ಮ ಮನೆಗೆ
ಗಂಡು : ಸತಿಯ ಆಣತಿ ಮೀರುವಂಥ ಧೈರ್ಯ ನನ್ನಲ್ಲಿ ಇಲ್ಲ ಭಾವ ನಂಬು ನನ್ನ
ನಾಳೆಯಿಂದ ನಾನೇ ನಿನ್ನ ಮಗಳ ಮಾವ ಮುತ್ತಿನಂಥ ಹುಡುಗನಿಗೇ ..
ಗಂಡು : ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು ನನ್ನ ಬೀಗರಾಗಲು...
ಒಪ್ಪಿಗೆಯೇ .. ಒಪ್ಪಿಗೆಯೇ..
ಹೆಣ್ಣು : ಮುತ್ತಿನಂಥ ಹುಡುಗನಿಗೆ ಚಿನ್ನದಂಥ ಹುಡುಗಿಬೇಕು ನಮ್ಮ ಬೀಗರಾಗಲು ..
ಒಪ್ಪಿಗೆಯೇ .. ಒಪ್ಪಿಗೆಯೇ..
ಗಂಡು : ಸಕ್ಕರೆ ಸಿಹಿಯು ಬೆಲ್ಲದ ಸವಿಯು ಸೇರಿದ ಹಾಗೆ ಈ ಸಂಬಂಧ
ಎಂದೂ ಯಾರು ಬಿಡಿಸಲಾಗದ ಬ್ರಹ್ಮನ ಗಂಟು ಈ ಅನುಬಂಧ
ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು ನನ್ನ ಬೀಗರಾಗಲು...
ಒಪ್ಪಿಗೆಯೇ .. ಒಪ್ಪಿಗೆಯೇ..
-------------------------------------------------------------------------------------------------------------------------
ತವರು ಮನೆ (೧೯೮೬) - ಮಾವಿನ ಮರದಲಿ ನಲಿಯುವ ಕೋಗಿಲೆ ಹಾಡಿದೆ ಪ್ರೇಮಾ..
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಾಜಕುಮಾರ ಭಾರತಿ, ಬಿ.ಆರ್. ಛಾಯ
ಹೆಣ್ಣು : ಮಾವಿನ ಮರದಲಿ ನಲಿಯುವ ಕೋಗಿಲೆ ಹಾಡಿದೆ ಪ್ರೇಮ.. ಪ್ರೇಮ..
ಹಾರುವ ಅರಗಿಣಿ ಮುದ್ದು ಮಾತಿನಲಿ ಹೇಳಿದೆ ಪ್ರೇಮ.. ಪ್ರೇಮ
ಗಂಡು : ಮಂಜಿನ ಮಣಿಗಳು ಹೂವನು ಮುದ್ದಿಸಿ ನುಡಿದಿದೆ ಪ್ರೇಮ... ಪ್ರೇಮ..
ಹೆಣ್ಣು : ಹೂವಿನ ಎದೆಯಲಿ ನಲಿಯುವ ದುಂಬಿಯು ಹಾಡಿದೆ.. ಪ್ರೇಮ.. ಪ್ರೇಮ..
ಗಂಡು : ಕಂಪನು ಚೆಲ್ಲುವ ಸಂಪಿನ ಗಾಳಿಯು ಹೇಳಿದೆ ಪ್ರೇಮ.. ಪ್ರೇಮ..
ಹೆಣ್ಣು : ಸಾಗರ ಸೇರಲು ಓಡುವ ನದಿಯು ಕೂಗಿದೆ ಪ್ರೇಮ.. ಪ್ರೇಮ..
ಮಾವಿನ ಮರದಲಿ ನಲಿಯುವ ಕೋಗಿಲೆ ಹಾಡಿದೆ ಪ್ರೇಮ.. ಪ್ರೇಮ..
ಹೆಣ್ಣು : ಬಯಕೆಯ ತುಂಬಿದ ಕಂಗಳು ಹಾಡುವ ಪಲ್ಲವಿ ಪ್ರೇಮ .. ಪ್ರೇಮ..
ಗಂಡು : ಸನಿಹಕೆ ಸೆಳೆಯುವ ಹವಳದ ತುಟಿಗಳ ಧ್ಯಾನವೇ ಪ್ರೇಮ.. ಪ್ರೇಮ..
ಹೆಣ್ಣು : ಯೌವ್ವನ ತುಂಬಿದ ಹೃದಯದ ವೀಣೆಯ ಗಾನವೇ ಪ್ರೇಮ..ಪ್ರೇಮ
ಗಂಡು : ಕಬ್ಬಿಣ ಬಿಲ್ಲಿನ ಕಾಮನ ಪೂಜೆಯ ಮಂತ್ರವೇ ಪ್ರೇಮ.. ಪ್ರೇಮ
ಹೆಣ್ಣು : ಮಾವಿನ ಮರದಲಿ ನಲಿಯುವ ಕೋಗಿಲೆ ಹಾಡಿದೆ ಪ್ರೇಮ.. ಪ್ರೇಮ..
ಹಾರುವ ಅರಗಿಣಿ ಮುದ್ದು ಮಾತಿನಲಿ ಹೇಳಿದೆ ಪ್ರೇಮ.. ಪ್ರೇಮ
ಗಂಡು : ಮಂಜಿನ ಮಣಿಗಳು ಹೂವನು ಮುದ್ದಿಸಿ ನುಡಿದಿದೆ ಪ್ರೇಮ... ಪ್ರೇಮ..
-------------------------------------------------------------------------------------------------------------------------
ತವರು ಮನೆ (೧೯೮೬) - ಏಕೇ ಅಳುವೇ ನಗುವನೇತಕೆ ಮರೆತಿರುವೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಏಕಳುವೇ.. ಏಕಳುವೇ.. ನಗುವನೇತಕೆ ಮರೆತಿರುವೆ ಸುಮ್ಮನೇತಕೆ ಕೊರಗುವೆ

ನಿನ್ನೊಡನೆ ಹುಟ್ಟಿರುವ ಸೋದರನೆ ತಾನೇ ಅವನು
ನಿಜವೇನೋ ತಿಳಿದಾಗ ಎಂದಿಗೂ ನಿನ್ನನ್ನೂ ಬಿಡನು
ಏಕಳುವೇ.. ಏಕಳುವೇ.. ನಗುವನೇತಕೆ ಮರೆತಿರುವೆ ಸುಮ್ಮನೇತಕೆ ಕೊರಗುವೆ
ತವರುಮನೆ ನಿನ್ನ ಮನೆ ವಿರಸವು ಹೀಗೆ ಇರದೂ
ನಸುನಗುತ ನೀ ಹರಿಸಿದರೆ ಆ ಮನೆ ಬೆಳಕಾಗೋದು
ಏಕಳುವೇ.. ಏಕಳುವೇ.. ನಗುವನೇತಕೆ ಮರೆತಿರುವೆ ಸುಮ್ಮನೇತಕೆ ಕೊರಗುವೆ
ಈ ದುಃಖ ಈ ನೋವು ಎಂದೂ ಹೀಗೆ ಇರದೂ
ಬಿಸುತಿಹ ಬಿರುಗಾಳಿ ಮುಗಿಯದೇ ಶಾಂತಿ ಬರದು
ಏಕಳುವೇ.. ಏಕಳುವೇ.. ನಗುವನೇತಕೆ ಮರೆತಿರುವೆ ಸುಮ್ಮನೇತಕೆ ಕೊರಗುವೆ
-------------------------------------------------------------------------------------------------------------------------
ತವರು ಮನೆ (೧೯೮೬) - ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಾಜಕುಮಾರ ಭಾರತಿ,
ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ಬದುಕ ಮರೆಸಿ ಬಾಳಿದೆ ತ್ಯಾಗಜೀವಿ ಎನಿಸಿದೆ
ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ಬದುಕ ಮರೆಸಿ ಬಾಳಿದೆ ತ್ಯಾಗಜೀವಿ ಎನಿಸಿದೆ
ತಾಯಿತನದ ಕೀರ್ತಿ ಹೊತ್ತ ಹಿರಿಯ ಜೀವಿ ಹೆಣ್ಣಿದು
ಪಾಪಿ ಜನರ ಕ್ರೂರತನದ ದ್ರೋಹದಿಂದ ನಂದಿತು
ಬೆಳೆದ ಮನೆಯ ಹೆಸರ ಬೆಳೆಸಿ ಕಷ್ಟವನ್ನು ಸಹಿಸಿದೆ

ರಕುತ ನೀಡಿ ಸೋದರನಿಗೆ ಜೀವದಾನ ನೀಡಿದೆ
ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ಬದುಕ ಮರೆಸಿ ಬಾಳಿದೆ ತ್ಯಾಗಜೀವಿ ಎನಿಸಿದೆ
ಪ್ರೀತಿ ಸ್ನೇಹದ ಹೂವ ಚೆಲ್ಲಿದ ಹೃದಯದಲ್ಲಿ ಮರುಗಿದೆ
ಕೂಡಿ ಬಾಳಿದ ಪುಣ್ಯ ಜೀವಿ ಯಾರ ಶಾಪವೋ ಕ್ರೂರ ವಿಧಿಯು ಸಾದ್ವಿ ಇವಳೇ ಸೆಳೆದನು
ಹೆತ್ತಕರಳಿನ ಋಣವ ತೀರಿಸೇ ಬಂದ ಮಗನು ಮಸಣಕೆ
ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ಬದುಕ ಮರೆಸಿ ಬಾಳಿದೆ ತ್ಯಾಗಜೀವಿ ಎನಿಸಿದೆ
ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
-------------------------------------------------------------------------------------------------------------------------
ತವರು ಮನೆ (೧೯೮೬) - ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು ನಮ್ಮ ಬೀಗರಾಗಲು
ಒಪ್ಪಿಗೆಯೇ... ಒಪ್ಪಿಗೆಯೇ
ಹೆಣ್ಣು : ಕೃಷ್ಣನ ಮಾತೆ ಗೀತ ಅಣ್ಣನ ನುಡಿಯೇ ವೇದ ನನ್ನಾಣೆ ಲಕ್ಷ್ಮಿಯಂತೆ ಇವಳ ನನ್ನಾ ಮನೆಗೆ
ಮುತ್ತಿನಂಥ ಹುಡುಗನಿಗೆ ಚಿನ್ನದಂತ ಚಿನ್ನದಂಥ ಹುಡುಗಿ ಬೇಕು ನಮ್ಮ ಬೀಗರಾಗಲು
ಒಪ್ಪಿಗೆಯೇ.. ಒಪ್ಪಿಗೆಯೇ
-------------------------------------------------------------------------------------------------------------------------
ಗಂಡು : ಚಿನ್ನದಂಥ ಹುಡುಗಿಗೆ ಮುತ್ತಿನಂಥ ಹುಡುಗ ಬೇಕು ನಮ್ಮ ಬೀಗರಾಗಲು
ಒಪ್ಪಿಗೆಯೇ... ಒಪ್ಪಿಗೆಯೇ
ಹೆಣ್ಣು : ಕೃಷ್ಣನ ಮಾತೆ ಗೀತ ಅಣ್ಣನ ನುಡಿಯೇ ವೇದ ನನ್ನಾಣೆ ಲಕ್ಷ್ಮಿಯಂತೆ ಇವಳ ನನ್ನಾ ಮನೆಗೆ
ಮುತ್ತಿನಂಥ ಹುಡುಗನಿಗೆ ಚಿನ್ನದಂತ ಚಿನ್ನದಂಥ ಹುಡುಗಿ ಬೇಕು ನಮ್ಮ ಬೀಗರಾಗಲು
ಒಪ್ಪಿಗೆಯೇ.. ಒಪ್ಪಿಗೆಯೇ
-------------------------------------------------------------------------------------------------------------------------
No comments:
Post a Comment