1191. ತಾಳಿಯ ಭಾಗ್ಯ (೧೯೮೪)

ತಾಳಿಯ ಭಾಗ್ಯ ಚಲನಚಿತ್ರದ ಹಾಡುಗಳು 
  1. ಕಾಕಾ ಏನುವೇ ಏಕೇ 
  2. ಕುಂಕುಮ ಶುಭವ 
  3. ಕಾಣದಿ ಲೋಕದಿ ನೀನು
  4. ಸಾವಿರ ಮಾತುಗಳೇತಕೆ  
ತಾಳಿಯ ಭಾಗ್ಯ (೧೯೮೪) - ಕಾಕಾ ಏನುವೇ ಏಕೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಕಾ.. ಕಾ.. ಕಾ... ಕಾಕಾ ಎನ್ನವೇ ಏಕೆ ಇದು ಕಲಿಗಾಲ
ಎಲ್ಲಿ ಹಿಡಿಯುವುದೊಂದೇ ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ... ಕಾ ಕಾ  ಇದು ಕಲಿಗಾಲ
ಕಾ.. ಕಾ.. ಕಾ... ಕಾಕಾ ಎನ್ನವೇ ಏಕೆ ಇದು ಕಲಿಗಾಲ

ಹೆಣ್ಣು ಹೊನ್ನಿಗಾಗಿ ಬದುಕೆಲ್ಲ ಮೀಸಲಿಡುವ ತನ್ನ ಆಸೆಗಾಗಿ ನೂರಾರು ಜೀವ ಕೊಲುವ
ಮಾಡಬಾರದನ್ನೂ ನೋಡಿ ಬಿಡುತ್ತಾನೇ ಹೇಳಬಾರದನ್ನು ಹೇಳಿಬಿಡುತ್ತಾನೆ
ನೋಡಬಾರದನ್ನೂ ನೋಡಿ ಬಿಡುತ್ತಾನೆ ಕಾ ಕಾ
ಕಾ.. ಕಾ.. ಕಾ... ಕಾಕಾ ಎನ್ನವೇ ಏಕೆ ಇದು ಕಲಿಗಾಲ
ಎಲ್ಲಿ ಹಿಡಿಯುವುದೊಂದೇ ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ... ಕಾ ಕಾ  ಇದು ಕಲಿಗಾಲ
ಕಾ.. ಕಾ.. ಕಾ... ಕಾಕಾ ಎನ್ನವೇ ಏಕೆ ಇದು ಕಲಿಗಾಲ

ತಪ್ಪು ಲೆಕ್ಕ ಬರೆದು ಸರಿ ಎಂದು ಹೇಳಿಬಿಡುವ 
ಲಂಚ ಕೊಟ್ಟು ಜನರ ಬಾಯನ್ನೂ ಮುಚ್ಚಿ ಬಿಡುವ 
ಕಷ್ಟ ಪಡದೇನೆ ಹಣ ದೋಚುತ್ತಾನೆ ಇಷ್ಟ ಬಂದ ಹಾಗೆ ಕಷ್ಟ ಕೊಡುತಾನೆ 
ನಷ್ಟ ಮಾಡಿ ಭ್ರಷ್ಟನಾಗಿ ಅಲೀತಾನೆ ಕಾ.. ಕಾ.. 
ಕಾ.. ಕಾ.. ಕಾ... ಕಾಕಾ ಎನ್ನವೇ ಏಕೆ ಇದು ಕಲಿಗಾಲ
ಎಲ್ಲಿ ಹಿಡಿಯುವುದೊಂದೇ ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ... ಕಾ ಕಾ  ಇದು ಕಲಿಗಾಲ
ಕಾ.. ಕಾ.. ಕಾ... ಕಾಕಾ ಎನ್ನವೇ ಏಕೆ ಇದು ಕಲಿಗಾಲ
--------------------------------------------------------------------------------------------------------------------------

ತಾಳಿಯ ಭಾಗ್ಯ (೧೯೮೪) - ಕುಂಕುಮ ಶುಭವ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಸುಶೀಲಾ

ಕುಂಕುಮ ಶುಭವ ಹಾಡುವ ಕುಂಕುಮ
ನಾರಿ ಸೌಭಾಗ್ಯ ನಾರಿ ಸೌಂದರ್ಯ ತೋರೊ ಅರಿಷಿನ ಕುಂಕುಮ
ತೋರೊ ಅರಿಷಿನ ಕುಂಕುಮ

ಸರ್ವ ಮಂಗಳೆಯ ಪಾದ ಪೂಜಿಸಿದ ಕುಂಕುಮ
ನಿನ್ನ ಬಾಳ ಕಾರಿರುಳ ನುಂಗಿದ ಚಂದ್ರಮ
ಸರ್ವ ಮಂಗಳೆಯ ಪಾದ ಪೂಜಿಸಿದ ಕುಂಕುಮ
ನಿನ್ನ ಬಾಳ ಕಾರಿರುಳ ನುಂಗಿದ ಚಂದ್ರಮ
ಮೂಡಿ ಬಂದಿತು ಜೀವನದಲ್ಲಿ ಪೂರ್ಣಿಮಾ
ಬದುಕಿನಲ್ಲಿ ಸುಖ ಸಂತೋಷಗಳ ಸಂಗಮ
ಕುಂಕುಮ ಶುಭವ ಹಾಡುವ ಕುಂಕುಮ
ನಾರಿ ಸೌಭಾಗ್ಯ ನಾರಿ ಸೌಂದರ್ಯ ತೋರೊ ಅರಿಷಿನ ಕುಂಕುಮ
ತೋರೊ ಅರಿಷಿನ ಕುಂಕುಮ

ಮಹಾಲಕ್ಷ್ಮಿಯ ಮಹಾಪ್ರಸಾದದ ಕುಂಕುಮ
ಶಾರದಾಂಬೆಯ ಹಣೆಯ ಬೆಳಗಿದ ಕುಂಕುಮ
ಹೆಣ್ಣಿನಾ ಬಾಳಿನ ಈ ಐಶ್ವರ್ಯದ ಅನುಪಮ
ಮುತ್ತೈದೆಯರ ಆನಂದದ ಸಿರಿ ಸಂಭ್ರಮ
ಕುಂಕುಮ ಶುಭವ ಹಾಡುವ ಕುಂಕುಮ
ನಾರಿ ಸೌಭಾಗ್ಯ ನಾರಿ ಸೌಂದರ್ಯ ತೋರೊ ಅರಿಷಿನ ಕುಂಕುಮ
ತೋರೊ ಅರಿಷಿನ ಕುಂಕುಮ
--------------------------------------------------------------------------------------------------------------------------

ತಾಳಿಯ ಭಾಗ್ಯ (೧೯೮೪) - ಕಾಣದಿ ಲೋಕದಿ ನೀನು
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಕಾಣದಿ ಲೋಕದಿ ನೀನು ಮೌನದಿ ಕುಳಿತಿಹೆ ಏನು ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇ.. ಓಹೋಹೊಹೋ..

ಬಳಲಿದೆ ಜೀವವಿಲ್ಲಿ ದುರುಳರ ಜಾಲದಲ್ಲಿ
ಸೆರೆಯಲಿ ತಾನಿಂದು ಬದುಕಿದೆ ದೂರದಲ್ಲಿ
ಮಮತೆಯ ಬಯಸಿದ ಶಾಲೆಯ ಮಕ್ಕಳು ಸಹಿಸವು ಈ ನೋವ
ಬಾಳನು ಕಂಡ ಬಡಜನರೆಲ್ಲರ ಕಲಕಿತು ಈ ಜೀವ
ಕಾಣದಿ ಲೋಕದಿ ನೀನು ಮೌನದಿ ಕುಳಿತಿಹೆ ಏನು ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇ.. ಓಹೋಹೊಹೋ..

ಒಡೆಯನ ಸೇವೆಯಲ್ಲಿ ಮೊದಲಿಗೆ ತಾನಾಗಿ
ಋಣದಲ್ಲಿ ಪಾಲಾಗಿ ಮರುಗಿದೆ ಈ ಜೀವ
ಎಲ್ಲಿದೆ ನ್ಯಾಯವು ನಿನ್ನಯ ಲೋಕದಿ ತಿಳಿಯೆನು ನಾನ್ನಿಂದು
ಎಲ್ಲರ ವಂಚಿಸಿ ಮೆರೆಯುವ ಪತಿತರ ಬಾಳಿಗೆ ಕೊನೆ ಎಂದೂ
ಕಾಣದಿ ಲೋಕದಿ ನೀನು ಮೌನದಿ ಕುಳಿತಿಹೆ ಏನು ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇ.. ಓಹೋಹೊಹೋ..
-------------------------------------------------------------------------------------------------------------------------

ತಾಳಿಯ ಭಾಗ್ಯ (೧೯೮೪) - ಸಾವಿರ ಮಾತುಗಳೇತಕೆ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.

ಗಂಡು : ಸಾವಿರ ಮಾತುಗಳೇತಕೆ ಹೇಳು ನೀನೇ ನನ್ನಾ ಬಾಳಿನ ಉಸಿರು .. ಬಾಳಿನ ಹಸಿರು
ಹೆಣ್ಣು : ಆಹಾಹಾ...  ಆಆಆ... ಆಹಾಹಾ...  ಆಆಆ... ಓಹೋಹೋ
          ಸಾವಿರ ಮಾತುಗಳೇತಕೆ ಹೇಳು ನೀನೇ ನನ್ನಾ ಬಾಳಿನ ಉಸಿರು .. ಬಾಳಿನ ಹಸಿರು

ಗಂಡು : ಆ ದಿನ ಎದುರಲಿ ನೀ ಬಂದಾಗ ಹಾಡಲು ಕಣ್ಣಲೇ ಪ್ರೇಮದರಾಗ
ಹೆಣ್ಣು : ಮೂಡಿತು ನನ್ನಲ್ಲಿ ಈ ಅನುರಾಗ ಕಂಡೆನು ಗೆಳೆಯನೇ ನಾ ಶುಭಯೋಗ
ಗಂಡು : ಸರಸದ ಮಾತಿಂದ ಹರುಷವ ತಂದಾಗ
ಹೆಣ್ಣು : ಒಲವಿನ ಆನಂದ ಅನುಕ್ಷಣ ಕಂಡಾಗ ಹೊಸತನ ನೋಡಿದೆ ಇನಿಯ ನೀನೂ ..
ಗಂಡು : ಸಾವಿರ ಮಾತುಗಳೇತಕೆ ಹೇಳು ನೀನೇ ನನ್ನಾ ಬಾಳಿನ ಉಸಿರು .. ಬಾಳಿನ ಹಸಿರು

ಹೆಣ್ಣು : ಯೌವ್ವನ ಅರಳಿದೆ ನೋಡಿದೆಯೇನು ಸ್ನೇಹವ ಬಯಸಿದೆ ನೀಡುವೆಯೇನೂ 
ಗಂಡು : ಮಲ್ಲಿಗೆ ಮಂಚದಿ ಮಲಗಿಸಲೇನು ಪರಿಮಳದಲ್ಲಿ ತೇಲುವೆಯೇನು 
ಹೆಣ್ಣು : ಸನಿಹ ಬಾ ಚೆನ್ನ ಬಿಡದಿರು ನೀ ನನ್ನ 
ಗಂಡು : ಏತಕೆ ಅನುಮಾನ ಭಯವನು ಬಿಡು ಚಿನ್ನ ಅರೆಕ್ಷಣವಾದರೂ ನಾ ಬಿಡೆ ನಿನ್ನ 
ಹೆಣ್ಣು : ಸಾವಿರ ಮಾತುಗಳೇತಕೆ ಹೇಳು ನೀನೇ ನನ್ನಾ ಬಾಳಿನ ಉಸಿರು .. ಬಾಳಿನ ಹಸಿರು 
ಗಂಡು : ಸಾವಿರ ಮಾತುಗಳೇತಕೆ ಹೇಳು ನೀನೇ ನನ್ನಾ ಬಾಳಿನ ಉಸಿರು .. ಬಾಳಿನ ಹಸಿರು
          ಆಹಾಹಾ...  ಆಆಆ... ಆಹಾಹಾ...  ಆಆಆ... ಓಹೋಹೋ 
--------------------------------------------------------------------------------------------------------------------------

No comments:

Post a Comment