ತಾಯಿ ಚಲನಚಿತ್ರದ ಹಾಡುಗಳು
- ಅರಿಷಿಣ ಕುಂಕುಮ
- ನೀ ಒಂದು ಕೇಳಿದೇ
- ಜೋ ಅಚ್ಚುತ್ತನಂದ
- ಅಮ್ಮಾ ನನ್ನ ಆರಾಧನೇ
ತಾಯಿ (೧೯೮೭) - ಅರಿಷಿಣ ಕುಂಕುಮ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ, ವಾಣಿಜಯರಾಂ
ಹೆಣ್ಣು : ಅರಿಷಿಣ ಕುಂಕುಮ ಹೂವನು ಮೂಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯೂ ಒಲಿದೋವಳ ಸೀಮಂತ ಇಂದಮ್ಮಾ
ಗರ್ಭದೇ ನೆಲಿಸಿರುವ ವಂಶದ ಕುಡಿಯನ್ನೂ
ನೂರೊಂದು ವರುಷ ಬಾಳು ನೀನೆಂದೂ ಆರ್ಶಿವದಿಸಮ್ಮಾ.. ಆಆಆ...
ಕೋರಸ್ : ಅರಿಷಿಣ ಕುಂಕುಮ ಹೂವನು ಮೂಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯೂ ಒಲಿದೋವಳ ಸೀಮಂತ ಇಂದಮ್ಮಾ
ಹೆಣ್ಣು : ಬಿಂದುವಿನಿಂದ ಆರಂಭವಾಗಿ ಬರಿ ಮುದ್ದೆಯ ಆಕಾರವೂ ಮೊದಲನೇ ಮಾಸ
ತಲೆ ಕೈ ಕಾಲೂ ಎರಡಲಿ ಉದಟ ಜಠರಾಂಗವು ಮೈದೋರಿತೂ ಮೂರನೇ ಮಾಸ
ನಾಲ್ಕನೇ ಮಾಸಹ ಬಂದಿತು ಭುಜವೂ ಐದನೇ ಮಾಸ ಮೂಡಿತು ಬೆರಳೂ
ಆರನೇ ಮಾಸ ಕಣ್ಣು ಮೂಗು ಕಿವಿಗಳ ಉದಯ
ಕೋರಸ್ : ಅರಿಷಿಣ ಕುಂಕುಮ ಹೂವನು ಮೂಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯೂ ಒಲಿದೋವಳ ಸೀಮಂತ ಇಂದಮ್ಮಾ
ಹೆಣ್ಣು : ಆಆಆ... ಆಆಆ.. ಆಆಆ... ಆಆಆ..
ಹೆಣ್ಣು : ಏಳಲೀ .. ಪ್ರಾಣ ತಳೆವುದು ಭ್ರೂಣ ಆ ತಾಯಿಯ ಹೀತವಾಗಿ ಒದೇಯುವನು ಜಾಣ
ಎಂಟಲೀ .. ನಾಡಿ ಮಿಡಿದಿರೇ ನೋಡೀ ... ಆ ಮಾತೆಯ ಮನದಲ್ಲಿದೇ ನೂತನ ಮೋಡಿ
ಕೋರಸ್ : ಆಆಆ... ಆಆಆ.. ಆಆಆ... ಆಆಆ..
ಹೆಣ್ಣು : ಒಂಬತ್ತರಲ್ಲೀ.. ಹಿಂದಿನ ಜ್ಞಾನ ಪೂರ್ವದ ಪುಣ್ಯ ತಂದಿಹ ಜ್ಞಾನ
ಹತ್ತನೇ ಮಾಸ ಪರಿಪೂರ್ಣವಾಗಿ ಕಂದನ ಜನನ..
ಕೋರಸ್ : ಅರಿಷಿಣ ಕುಂಕುಮ ಹೂವನು ಮೂಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯೂ ಒಲಿದೋವಳ ಸೀಮಂತ ಇಂದಮ್ಮಾ
ಹೆಣ್ಣು : ಗರ್ಭದೇ ನೆಲಿಸಿರುವ ವಂಶದ ಕುಡಿಯನ್ನೂ
ನೂರೊಂದು ವರುಷ ಬಾಳು ನೀನೆಂದೂ ಆರ್ಶಿವದಿಸಮ್ಮಾ.. ಆಆಆ...
ಅರಿಷಿಣ ಕುಂಕುಮ ಹೂವನು ಮೂಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯೂ ಒಲಿದೋವಳ ಸೀಮಂತ ಇಂದಮ್ಮಾ
--------------------------------------------------------------------------------------------------------
ತಾಯಿ (೧೯೮೭) - ನೀ ಒಂದು ಕೇಳಿದೇ
ತಾಯಿ (೧೯೮೭) - ಜೋ ಅಚ್ಚುತ್ತನಂದ
ತಾಯಿ (೧೯೮೭) - ಅಮ್ಮಾ ನನ್ನ ಆರಾಧನೇ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು : ನೀ ಒಂದು ಕೇಳಿದೇ ನಾ ಒಂದು ಕೊಡುವೇ ..
ನೀ ಒಂದು ಕೇಳಿದೇ ನಾ ಒಂದು ಕೊಡುವೇ ..
ಒಗಟನು ಒಡೆಯಲೂ ನಾ ಬರುವೇ .. ಒಲವಿನ ಉಡುಗೋರೆ ನೀ ತರುವೇ
ಶ್ರೀ ರಸ್ತು ಶುಭಮಸ್ತೂ .. ಶ್ರೀ ರಸ್ತು ಶುಭಮಸ್ತೂ ..
ಗಂಡು : ನಾ ಒಂದು ಕೇಳಿದೇ ನೀ ಒಂದು ಕೊಡುವೇ ..
ಒಲವಿನ ಒಗಟನು ನೀ ಒಡೆವೇ .. ಒಲವಿನ ಉಡುಗೋರೆ ನಾ ತರುವೇ
ಶ್ರೀ ರಸ್ತು (ಆಆ ) ಶುಭಮಸ್ತೂ .. (ಆಆ ) ಶ್ರೀ ರಸ್ತು ಶುಭಮಸ್ತೂ ..
ಕೋರಸ್ : ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ
ಗಂಡು : ಹಕ್ಕಿ ಹಾಡಲೀ ಕೇಳಿ ಬರುತಿದೇ ಮದುವೆಯ ಓಲಗ ನಾದ
ಹೆಣ್ಣು : ಹೂವ ಅರುಸುವ ದುಂಬಿ ಮೊರೆತದೇ ಕೇಳಿದೇ ಮಂತ್ರ ವೇದ..
ಗಂಡು : ಸಂಜೆಯು ಚೆಲ್ಲುತಿದೇ.. ಓಕುಳಿ ನೀರನ್ನೂ ..
ಹೆಣ್ಣು : ಭೂಮಿಯೂ ಹಾಡುತಿದೇ .. ಮದುವೆಯ ಹಾಡನ್ನೂ ...
ಗಂಡು : ಶ್ರೀ ರಸ್ತು (ಆಆ ) ಶುಭಮಸ್ತೂ .. (ಆಆ )
ಹೆಣ್ಣು : ಶ್ರೀ ರಸ್ತು ಶುಭಮಸ್ತೂ ..
ಗಂಡು : ನಾ ಒಂದು ಕೇಳಿದೇ ನೀ ಒಂದು ಕೊಡುವೇ ..
ಹೆಣ್ಣು : ಒಗಟನು ಒಡೆಯಲೂ ನಾ ಬರುವೇ ..
ಗಂಡು : ಒಲವಿನ ಉಡುಗೋರೆ ನಾ ತರುವೇ
ಹೆಣ್ಣು : ಶ್ರೀ ರಸ್ತು (ಆಆ ) ಶುಭಮಸ್ತೂ .. (ಆಆ )
ಗಂಡು : ಶ್ರೀ ರಸ್ತು ಶುಭಮಸ್ತೂ ..
ಗಂಡು : ಭೂಮಿ ಹೀಗೆಯೇ ನಿಂತೂ ಹೋದರೇ .. ಕಾಲವೂ ಕೇಳುವುದೇ ಇಲ್ಲಾ
ಹೆಣ್ಣು : ಮದುವೆಯ ದಿನವೂ ಮುಂದೇ ಉಳಿವುದೂ ನಮ್ಮನ್ನೂ ಬೆಸೆಯುವುದಿಲ್ಲಾ..
ಗಂಡು : ತಾಳದೂ ನನ್ನ ಮನ.. ಅಗಲಿರೇ ಒಂದೂ ಕ್ಷಣ..
ಹೆಣ್ಣು : ತಾಳಿಯೂ ಬಿದ್ದ ದಿನ.. ನಾ ನಿದಿರೇ ಇಲ್ಲ ಕಣೋ
ಹೆಣ್ಣು : ಶ್ರೀ ರಸ್ತು (ಆಆ ) ಶುಭಮಸ್ತೂ .. (ಆಆ )
ಗಂಡು : ಶ್ರೀ ರಸ್ತು ಶುಭಮಸ್ತೂ ..
ಹೆಣ್ಣು : ನೀ ಒಂದು ಕೇಳಿದೇ ನಾ ಒಂದು ಕೊಡುವೇ ..
ಗಂಡು : ಒಲವಿನ ಒಗಟನು ನೀ ಒಡೆವೇ ..
ಹೆಣ್ಣು : ಒಲವಿನ ಉಡುಗೋರೆ ನೀ ತರುವೇ
ಇಬ್ಬರು : ಶ್ರೀ ರಸ್ತು (ಆಆ ) ಶುಭಮಸ್ತೂ .. (ಆಆ ) ಶ್ರೀ ರಸ್ತು ಶುಭಮಸ್ತೂ ..
--------------------------------------------------------------------------------------------------------
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ, ವಾಣಿಜಯರಾಂ
ಹೆಣ್ಣು : ಆಆಆ... ಆಆಆಆಅ... ಆಆಆಅ.... ಆಆಆಅ
ಜೋ ಜೊಚ್ಯುತಾನಂದ ಜೋ ಜೋ ಮುಕುಂದಾ..
ಲಾಲಿಪರಮಾನಂದ ಲಾಲಿ ಗೋವಿಂದ.. ಜೋ... ಜೋ..
ಜೋ... ಜೋ.. ಜೋ... ಜೋ..
ಜೋ ಜೊಚ್ಯುತಾನಂದ ಜೋ ಜೋ ಮುಕುಂದಾ..
ಲಾಲಿಪರಮಾನಂದ ಲಾಲಿ ಗೋವಿಂದ.. ಜೋ... ಜೋ..
ಜೋ... ಜೋ.. ಜೋ... ಜೋ..
ಹೆಣ್ಣು : ಆಹ್ಹಾ.. ಬಿಡುಬಿಡು ತುಂಟಾಟ ಸಾಕಾಗಲಿಲ್ಲವೇ..
ನಿದಿರೆಯೂ ಈ ಕಣ್ಣ ಇನ್ನೂ ತುಂಬಿಲ್ಲವೇ..
ಬೀಸಿದ ತಂಗಾಳಿ ಹಿತವಾಗಲಿಲ್ಲವೇ
ಪಕ್ಕದೇ ನಾಶಿಗೇ ಇರಬೇಕು ಎನ್ನವೇ ..
ಕರುಣೆ ಇಡು ಸರಜ ಬಿಡು ಹೀಗೇಕೆ ಕಾಡುವೇ ..
ಜೋ ಜೊಚ್ಯುತಾನಂದ ಜೋ ಜೋ ಮುಕುಂದಾ..
ಲಾಲಿಪರಮಾನಂದ ಲಾಲಿ ಗೋವಿಂದ.. ಜೋ... ಜೋ..
ಇಬ್ಬರು : ಜೋ... ಜೋ.. ಜೋ... ಜೋ..
ಹೆಣ್ಣು : ಗಗನದಿ ಚಂದಿರನೂ ಅದೋ ಜಾರಿ ಹೋದಾ
ಕಣ್ಣಲ್ಲಿ ಹುಣ್ಣಿಮೆಯ ಬದಲಾಗಿ ತಂದಾ
ಮಡಿಲಲಿ ನೀನಿರಲೂ ಸುಖದಲ್ಲಿ ತೇಲುವೆ ..
ಕಿವಿಯಲೀ ಜೋಗುಳವ ಹಿತವಾಗಿ ಹಾಡುವೇ ..
ಪ್ರತಿನಿಮಿಷ ಹರುಷದಲಿ ನಿನಗಾಗಿ ಬಾಳುವೇ ..
ಜೋ ಜೊಚ್ಯುತಾನಂದ ಜೋ ಜೋ ಮುಕುಂದಾ..
ಲಾಲಿಪರಮಾನಂದ ಲಾಲಿ ಗೋವಿಂದ.. ಜೋ... ಜೋ..
ಜೋ ಜೊಚ್ಯುತಾನಂದ ಜೋ ಜೋ ಮುಕುಂದಾ..
ಲಾಲಿಪರಮಾನಂದ ಲಾಲಿ ಗೋವಿಂದ.. ಜೋ... ಜೋ..
ಜೋ... ಜೋ.. ಜೋ... ಜೋ.. ಜೋ... ಜೋ.. ಜೋ... ಜೋ..
-------------------------------------------------------------------------------------------------------
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು : ಅಮ್ಮಾ .. ನನ್ನ ಆರಾಧನೇ ನೀ ಬಾರೇಯಾ ಮೊರೆ ಕೇಳೆಯಾ ..
ಏಕಮ್ಮಾ ಈ ಶೋಧನೇ .. ಕಾಪಾಡು ಹಸು ಕಂದನಾ..
ಗಂಡು : ಅಮ್ಮಾ .. ನನ್ನ ಆರಾಧನೇ ನೀ ಬಾರೇಯಾ ಮೊರೆ ಕೇಳೆಯಾ ..
ಏಕಮ್ಮಾ ಈ ಶೋಧನೇ .. ಕಾಪಾಡು ಹಸು ಕಂದನಾ..
ಹೆಣ್ಣು : ಬಂಜೆಯೂ ನಾನೂ ಅಂದಾಗ ಸಹಿಸದೇ ಅಂದೂ ನೊಂದಾಗ
ತಾಯಿಯ ಭಾಗ್ಯವ ನೀ ತಂದೇ .. ಕಂದನ ಅವರಿಗೇ ನಾ ತಂದೇ ..
ಗಂಡು : ತಾಯಿಯ ಪ್ರೀತಿಯೇ ಶಾಪವೇ ಆ ಮಾತೆಯ ಹಾಲದು ವಿಷವೇ..
ನಿಜ ಮಮತೆಯ ಮಾತಿನ ಅರ್ಥವೇ.. ನೀ ಹೇಳಮ್ಮಾ..
ಹೆಣ್ಣು : ಅಮ್ಮಾ .. ನನ್ನ ಆರಾಧನೇ ನೀ ಬಾರೇಯಾ ಮೊರೆ ಕೇಳೆಯಾ ..
ಏಕಮ್ಮಾ ಈ ಶೋಧನೇ .. ಕಾಪಾಡು ಹಸು ಕಂದನಾ..
ಗಂಡು : ಆರದೇ ಇರಲೀ ಆ ದೀಪ.. ಕಂದಗೆ ತೋರಿಸೂ ಅನುತಾಪ
ಹೆಣ್ಣು : ಜೀವನ ದಾನ ನೀಡಮ್ಮಾ.. ವಂಶದ ಕುಡಿಯ ಉಳಿಸಮ್ಮಾ
ಗಂಡು : ಈ ಹೃದಯದ ವೇದನೇ ನೋಡಿಕೋ..
ಹೆಣ್ಣು : ಈ ಪ್ರಾಣವೇ ಬೇಕೇ ತೆಗೆದುಕೋ
ಗಂಡು : ಕರುಣಾಮಯೀ ಹೆಸರನು ಉಳಿಸಿಕೋ... ದಯತೋರಿಸು ..
ಹೆಣ್ಣು : ಅಮ್ಮಾ... ಗಂಡು : ಅಮ್ಮಾ...
ಹೆಣ್ಣು : ಅಮ್ಮಾ... ಗಂಡು : ಅಮ್ಮಾ...
ಹೆಣ್ಣು : ಅಮ್ಮಾ...
-------------------------------------------------------------------------------------------------------
No comments:
Post a Comment