1177. ತಾಳಿಗಾಗಿ (೧೯೮೯)

ತಾಳಿಗಾಗಿ ಚಲನಚಿತ್ರದ ಹಾಡುಗಳು 
  1. ಲೋಕವಾ ಗೆಲ್ಲುವಾ ಹರೆಯದ ಹಮ್ಮಿರನೇ 
  2. ಹಾಳೆ ಹಾಳೆಯಲ್ಲೂ ನಿನ್ನ ಹೆಸರೇ ಬರೆದಿದೇ 
  3. ನಂಗು ಇದ್ದಾನೆ ಗಂಡ ನಂಗು ಇದ್ದಾನೇ 
  4. ಸರಿಯಾದ ಜೋಡಿ ಎಂದರೇ ನೀನೇ ನೀನೇ 
  5. ಬಿಡುವೆನೇ ನಿನ್ನ ಬಿಡುವೇನೇ ಚಿನ್ನ 
ತಾಳಿಗಾಗಿ (೧೯೮೯) - ಲೋಕವಾ ಗೆಲ್ಲುವಾ ಹರೆಯದ ಹಮ್ಮಿರನೇ 
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಹೆಣ್ಣು : ಲೋಕವಾ ಗೆಲ್ಲುವಾ ಹರೆಯದ ಹಮ್ಮಿರನೇ ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಗಂಡು : ಪ್ರೀತಿಯಾ ಬಾಳಿಗೆ ಅಡೇ ತಡೆ ಇರದೆಂದು ಯಾರಿಗೂ ಅಂಜದೆ ಬದುಕುವ ಎಂದೆಂದೂ

ಹೆಣ್ಣು : ದಿನ ದಿನ ಅರಿಯುತ ಕೂಡಿ ಕಲೆತು ಇನಿಯನ ಬಯಸುತ ಹೊತ್ತು ಮರೆತು
ಗಂಡು : ತನುಮನ ಒಲಿಯುತ ರಂಗುಪಡೆದು ಕಣಕಣ ಮಿಡಿಯುತ ಸಂಗ ಸೆಳೆದು
ಹೆಣ್ಣು : ಜೀವ ಜೀವದಲಿ                 ಗಂಡು : ಭಾವ ಭಾವದಲಿ
ಇಬ್ಬರು : ಸಮರಸ ಸುಖದಲಿ ನಕ್ಕೂ ನಲಿವ 
ಹೆಣ್ಣು : ಲೋಕವಾ ಗೆಲ್ಲುವಾ ಹರೆಯದ ಹಮ್ಮಿರನೇ ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಗಂಡು : ಪ್ರೀತಿಯಾ ಬಾಳಿಗೆ ಅಡೇ ತಡೆ ಇರದೆಂದು ಯಾರಿಗೂ ಅಂಜದೆ ಬದುಕುವ ಎಂದೆಂದೂ

ಹೆಣ್ಣು : ಹೊಸ ಹೊಸ ಕನಸಲ್ಲಿ ತೇಲುತಲಿ ಹನಿ ಹನಿ ಮಧುವನು ಹೀರುತಲಿ
ಗಂಡು : ಬಳುಕುವ ನಡುವನೇ ಸುತ್ತಿ ಸುಳಿದು ತಳಿರು ತುಟಿಯನು ಮುತ್ತಿ  ಸವಿದು
ಹೆಣ್ಣು : ರಾಗ ತಾನದಲಿ ರಾಸ ಲೀಲೆಯಲಿ ಹರುಷದ ಹೊನಲಲಿ ಹಿಗ್ಗಿ ಕುಣಿವ
ಗಂಡು : ಪ್ರೀತಿಯಾ ಬಾಳಿಗೆ ಅಡೇ ತಡೆ ಇರದೆಂದು ಯಾರಿಗೂ ಅಂಜದೆ ಬದುಕುವ ಎಂದೆಂದೂ
ಹೆಣ್ಣು : ಲೋಕವಾ ಗೆಲ್ಲುವಾ ಹರೆಯದ ಹಮ್ಮಿರನೇ ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
-------------------------------------------------------------------------------------------------------------------------

ತಾಳಿಗಾಗಿ (೧೯೮೯) - ಹಾಳೆ ಹಾಳೆಯಲ್ಲೂ ನಿನ್ನ ಹೆಸರೇ ಬರೆದಿದೇ 
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ 

ಹೆಣ್ಣು : ಹಾಳೆ ಹಾಳೆಯಲ್ಲೂ ನಿನ್ನ ಹೆಸರೇ ಬರಿದಿದೆ ನಿನ್ನೆ ನಾಳೆಯಲ್ಲೂ ನಿನ್ನ ಉಸಿರೇ ತುಂಬಿದೆ
          ಹಾಳೆ ಹಾಳೆಯಲ್ಲೂ ನಿನ್ನ ಹೆಸರೇ ಬರಿದಿದೆ ನಿನ್ನೆ ನಾಳೆಯಲ್ಲೂ ನಿನ್ನ ಉಸಿರೇ ತುಂಬಿದೆ

ಇಬ್ಬರು : ಜೊತೆಯಾಗಿ ಕಳೆದ ಕಾಲ ನೆನಪಾಗಿ ಕಾಡಿ ನಡೆದಾಡಿ ನಲಿವಾ ತಾಣ ಹಸಿರಾಗಿ ಮೂಡಿ
             ಜೊತೆಯಾಗಿ ಕಳೆದ ಕಾಲ ನೆನಪಾಗಿ ಕಾಡಿ ನಡೆದಾಡಿ ನಲಿವಾ ತಾಣ ಹಸಿರಾಗಿ ಮೂಡಿ
ಹೆಣ್ಣು : ಸಂಪ್ರೀತಿ ಸಂಗಾತಿ ಸಿಗದೇ ಮಿಡುಕಾಟ ಸಾಗಿ ಇಂದೆಲ್ಲ ಸ್ಮರಣೆಯಾಗಿ ವಿರಹಾಗ್ನಿ ಕಂಡೆ
          ಸಂಪ್ರೀತಿ ಸಂಗಾತಿ ಸಿಗದೇ ಮಿಡುಕಾಟ ಸಾಗಿ ಇಂದೆಲ್ಲ ಸ್ಮರಣೆಯಾಗಿ ವಿರಹಾಗ್ನಿ ಕಂಡೆ 
          ಹಾಳೆ ಹಾಳೆಯಲ್ಲೂ ನಿನ್ನ ಹೆಸರೇ ಬರಿದಿದೆ ನಿನ್ನೆ ನಾಳೆಯಲ್ಲೂ ನಿನ್ನ ಉಸಿರೇ ತುಂಬಿದೆ

ಇಬ್ಬರು : ನಮ್ಮೆಲ್ಲ ಆಟಪಾಠ ಕಣ್ಮುಂದೇ ಬಂದಾಗ ಇನ್ನೆಲ್ಲ ಆಸೆ ನೋಟ ನನ್ನಾ ಕೆಣಕಿ ನಿಂತಾಗ
             ನಮ್ಮೆಲ್ಲ ಆಟಪಾಠ ಕಣ್ಮುಂದೇ ಬಂದಾಗ ಇನ್ನೆಲ್ಲ ಆಸೆ ನೋಟ ನನ್ನಾ ಕೆಣಕಿ ನಿಂತಾಗ
ಹೆಣ್ಣು : ಮೊಗ್ಗಾದ ಒಲವು ಅರಳಿ ಹೂವಾಗಿ ತೂಗಿ ಇಂದೆಲ್ಲ ಸ್ಮರಣೆಯಾಗಿ ವಿರಹಾಗ್ನಿ ಕಂಡೆ
          ಹಾಳೆ ಹಾಳೆಯಲ್ಲೂ ನಿನ್ನ ಹೆಸರೇ ಬರಿದಿದೆ ನಿನ್ನೆ ನಾಳೆಯಲ್ಲೂ ನಿನ್ನ ಉಸಿರೇ ತುಂಬಿದೆ
-------------------------------------------------------------------------------------------------------------------------

ತಾಳಿಗಾಗಿ (೧೯೮೯) - ನಂಗು ಇದ್ದಾನೆ ಗಂಡ ನಂಗು ಇದ್ದಾನೇ 
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಬಿ.ಆರ್.ಛಾಯ 

ನಂಗು ಇದ್ದಾನೆ ಗಂಡು ನಂಗು ಇದ್ದಾನೆ ತಟ್ಟೆ ತುಂಬಾ ತಿಂತಾನೆ ಮಂಚದ ಮೇಲೆ ಮಲಗ್ತಾನೇ
ಮುದ್ದು ಮಾಡೋ ಬಾರೋ ಅಂದ್ರೇ ನಿದ್ರೇ ಬಂತು ಅಂತಾನೆ .. ನಿದ್ರೇ ಬಂತು ಅಂತಾನೆ ..
ನಂಗು ಇದ್ದಾನೆ ಗಂಡು ನಂಗು ಇದ್ದಾನೆ

ದಂಡೇ ದಂಡೇ ಅಂತಾನೆ ಎದ್ದು ಎದ್ದು ಬೀಳ್ತಾನೆ
ಹೆಂಡ್ತಿ ಹತ್ರ ಇದ್ರೂ ಕೂಡ ನೆಲವನು ನೋಡ್ತಾ ಇರ್ತಾನೆ
ಬದುಕೇ ದಂಡ ಮಾಡ್ತಾನೆ .. ಬದುಕೇ ದಂಡ ಮಾಡ್ತಾನೆ ..
ನಂಗು ಇದ್ದಾನೆ ಗಂಡು ನಂಗು ಇದ್ದಾನೆ

ಹಂಡೆ ಹಾಲು ಹೀರ್ತಾನೇ ತೊಂಡೆ ಹಾಗೆ ಇರ್ತಾನೆ
ಅಪ್ಪ ಆಗು ಬಾರೋ ಅಂದ್ರೆ ತೆಪ್ಪರನ ಹಾಗೆ ಆಗ್ತಾನೇ
ದೊಪ್ಪನೇ ಮಂಚದಿ ಬೀಳ್ತಾನೇ ...  ದೊಪ್ಪನೇ ಮಂಚದಿ ಬೀಳ್ತಾನೇ ...
ನಂಗು ಇದ್ದಾನೆ ಗಂಡು ನಂಗು ಇದ್ದಾನೆ

ವಯಸ್ಸು ಇನ್ನೂ ಜಾರಿಲ್ಲ ಅಂದ ಇನ್ನೂ ಬಾಡಿಲ್ಲ
ಆಸೆ ನೂರು ಇದ್ದಾರೆ ಏನು ಗಂಡನ ಪ್ರೇಮ ನಂಗಿಲ್ಲ
ಮಕ್ಕಳ ಭಾಗ್ಯ ಮನೆಗಿಲ್ಲಾ..  ಮಕ್ಕಳ ಭಾಗ್ಯ ಮನೆಗಿಲ್ಲಾ..
ನಂಗು ಇದ್ದಾನೆ ಗಂಡು ನಂಗು ಇದ್ದಾನೆ ತಟ್ಟೆ ತುಂಬಾ ತಿಂತಾನೆ ಮಂಚದ ಮೇಲೆ ಮಲಗ್ತಾನೇ
ಮುದ್ದು ಮಾಡೋ ಬಾರೋ ಅಂದ್ರೇ ನಿದ್ರೇ ಬಂತು ಅಂತಾನೆ .. ನಿದ್ರೇ ಬಂತು ಅಂತಾನೆ ..
ನಂಗು ಇದ್ದಾನೆ ಗಂಡು ನಂಗು ಇದ್ದಾನೆ
-------------------------------------------------------------------------------------------------------------------------

ತಾಳಿಗಾಗಿ (೧೯೮೯) - ಸರಿಯಾದ ಜೋಡಿ ಎಂದರೇ ನೀನೇ ನೀನೇ 
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಗಂಡು : ಸರಿಯಾದ ಜೋಡಿ ಎಂದರೆ ನೀನೇ ನೀನೇ
           ನೀರಲ್ಲಿ ಈಜೋ ರೀತಿ ಲತೆಯಂತೇ ನಡೆಯೋ ರೀತಿ
           ತುಂಟಾಟ ಆಡೋ ರೀತಿ ಕಣ್ಣಿಂದ ಸೆಳೆವಾ ರೀತಿ
           ನೋಡಿ ನೋಡಿ ನಿನ್ನಲ್ಲೇ ಪ್ರೀತಿ ಓ ಜಾಣೆ ...

ಗಂಡು : ಬಂಗಾರದಂಥ ಹೆಣ್ಣು ಬೇಡ ಓ ನಲ್ಲೇ ಸಿಂಗಾರಿ ಸ್ನೇಹ ಕೂಡ ಬೇಡ ನನ್ನಾಣೆ
            ಸಂಗಾತಿ ನೀನೇ ಸಾಕು ಈ ಅಂದ ನನಗೆ ಸಾಕು ಈ ಕೆಂಪು ಕನ್ನೇ ಸಾಕು
            ನೀ ಕೊಡುವ ಮುತ್ತೇ ಸಾಕೂ ..
ಹೆಣ್ಣು : ಬಂಗಾರದಂಥ ಗಂಡು ಬೇಡ ಓ ನಲ್ಲ ಬಲು ಮಾತುಗಾರ ಕೂಡ ಬೇಡ ನನ್ನಾಣೆ
          ಈ ನಿನ್ನ ಸ್ನೇಹ ಸಾಕು ಈ ನಿನ್ನ ಮೋಹ ಸಾಕು
          ನೀನೊಬ್ಬ ನನಗೆ ಸಾಕು ನಿನ್ನಂದ ಚೆಂದ ಸಾಕು ಅಂದ ಸಾಕು ಚೆಂದ ಸಾಕು
ಗಂಡು : ಸರಿಯಾದ ಜೋಡಿ ಎಂದರೆ ನೀನೇ ನೀನೇ

ಹೆಣ್ಣು : ನನಗಾಗಿ ಬಂದ ಗಂಡು ನೀನು ಓ ನಲ್ಲ ನನ ಬಾಳಿನಲ್ಲಿ ನೀನೇ ಭಾನು ಓ ನಲ್ಲ 
          ಕಣ್ಣಲ್ಲೇ ನೀನೇ ತುಂಬಿ ಮನದಲ್ಲಿ ನೀನೇ ತುಂಬಿ 
          ಎದೆಯಲ್ಲಿ ನೀನೇ ತುಂಬಿ ಬದುಕೆಲ್ಲ ನೀನೇ ತುಂಬಿ 
          ಎದೆಯಲ್ಲಿ ನೀನೇ ತುಂಬಿ ಬದುಕೆಲ್ಲ ನೀನೇ ತುಂಬಿ 
ಗಂಡು : ನನಗಾಗಿ ಬಂದೆ ನೀನು ಓ ನಲ್ಲೆ ನನಗಾಗಿ ತಂದೆ ಹಾಲು ಜೇನು ಓ ನಲ್ಲೆ 
           ನಮಗ್ಯಾರ ಭಯವು ಇಲ್ಲ ಬೇರೇನೂ ಚಿಂತೆ ಇಲ್ಲಾ 
           ಹೀಗೇಕೆ ಅನ್ನೋರಿಲ್ಲ ಸಂತೋಷ ಬಾಳಲೆಲ್ಲಾ 
          ಸರಿಯಾದ ಜೋಡಿ ಎಂದರೆ ನೀನೇ ನೀನೇ
           ನೀರಲ್ಲಿ ಈಜೋ ರೀತಿ ಲತೆಯಂತೇ ನಡೆಯೋ ರೀತಿ
           ತುಂಟಾಟ ಆಡೋ ರೀತಿ ಕಣ್ಣಿಂದ ಸೆಳೆವಾ ರೀತಿ
           ನೋಡಿ ನೋಡಿ ನಿನ್ನಲ್ಲೇ ಪ್ರೀತಿ ಓ ಜಾಣೆ ...
-------------------------------------------------------------------------------------------------------------------------

ತಾಳಿಗಾಗಿ (೧೯೮೯) - ಬಿಡುವೆನೇ ನಿನ್ನ ಬಿಡುವೇನೇ ಚಿನ್ನ 
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಗಂಡು : ಬಿಡುವೆನೇ ನಿನ್ನ ಬಿಡುವೆನೇ ಚಿನ್ನ ಮುಗಿಲಿಗೆ ಜಿಗಿದರೂ ಎಳೆತರುವೇ
ಹೆಣ್ಣು : ಮರೆವೆನೇ ನಿನ್ನ ಚೆಲುವನೇ ನನ್ನ ಮನದಲಿ ನೀನೇ ತುಂಬಿರುವೇ

ಹೆಣ್ಣು : ಪ್ರೀತಿ ಮಾತಿನ ಜೇನ ಸುರಿಸುತ ಎಲ್ಲೋ ನೋಡುವೇ ಏನೋ ಮಾಡುವೇ
          ಪ್ರೀತಿ ಮಾತಿನ ಜೇನ ಸುರಿಸುತ ಎಲ್ಲೋ ನೋಡುವೇ ಏನೋ ಮಾಡುವೇ
ಗಂಡು : ರಸಿಕನಂತೆ ಮಾತಾಡಿದರೇ ಪ್ರಣಯದಾಟವ ಆಡಿದರೇ
            ಇನ್ನೂ ಹೀಗೆ ಆಡು ಎನದೆ ಏಣಿ ತೊಂದರೇ
            ರಸಿಕನಂತೆ ಮಾತಾಡಿದರೇ ಪ್ರಣಯದಾಟವ ಆಡಿದರೇ
            ಇನ್ನೂ ಹೀಗೆ ಆಡು ಎನದೆ ಏಣಿ ತೊಂದರೇ
ಹೆಣ್ಣು : ಮರೆವೆನೇ ನಿನ್ನ ಚೆಲುವನೇ ನನ್ನ ಮನದಲಿ ನೀನೇ ತುಂಬಿರುವೇ

ಗಂಡು : ತುಂಬಿ ತಳುಕುವ ಇಂಥ ಪ್ರಾಯದಿ ಜಂಟಿಯ ಇರುವುದು ಸರಿಯೇ ತರುಣಿಯೇ
           ಮನದ ಆಸೆಯ ನೀ ಬಲ್ಲೆ ಎದೆಯ ಬಯಕೆಯ ನೀ ಬಲ್ಲೆ
           ಇನ್ನೂ ನೂರು ಬಾರಿ ಕೇಳು ಪ್ರಾಣ ನಿನ್ನಲ್ಲೇ
          ಬಿಡುವೆನೇ ನಿನ್ನ ಬಿಡುವೆನೇ ಚಿನ್ನ ಮುಗಿಲಿಗೆ ಜಿಗಿದರೂ ಎಳೆತರುವೇ

ಹೆಣ್ಣು : ಎಂಥ ಸಂಜೆಯ ಎಂಥಾ ಗಾಳಿಯು ಎಂಥ ತರುಣನೂ ಎಂಥ ಚೆಲುವನು 
ಗಂಡು : ಮಾತು ಏತಕೆ ಸಾಕಿನ್ನೂ ಹಸಿರು ಹಾಸಿಗೇ ನಮ್ಮನ್ನೂ 
            ಕಾಯಲಾರೆ ಬನ್ನೀ ಬನ್ನೀ ಎಂದೂ ಕೂಗಿದೇ .. 
           ಬಿಡುವೆನೇ ನಿನ್ನ ಬಿಡುವೆನೇ ಚಿನ್ನ ಮುಗಿಲಿಗೆ ಜಿಗಿದರೂ ಎಳೆತರುವೇ
ಹೆಣ್ಣು : ಮರೆವೆನೇ ನಿನ್ನ ಚೆಲುವನೇ ನನ್ನ ಮನದಲಿ ನೀನೇ ತುಂಬಿರುವೇ
-------------------------------------------------------------------------------------------------------------------------

No comments:

Post a Comment