1236. ತ್ರಿವೇಣಿ (೧೯೭೩)


ತ್ರಿವೇಣಿ ಚಲನಚಿತ್ರದ ಹಾಡುಗಳು 
  1. ಮನೆ ಮಂದಿಗೆಲ್ಲಾ ಸುಖ ನೀಡಬಲ್ಲ 
  2. ಮನಸೂ ನವೀರೂ ಒಡಲು ನಿಮಿರೂ 
  3. ಸವಿಗೆ ಬಿಸಿ ಬಿಸಿ 
  4. ಕವಿಯ ಮಧುರ ಕಲ್ಪನ 
  5. ನೀನಾ ಭಗವಂತ 
ತ್ರಿವೇಣಿ (೧೯೭೩) - ಮನೆ ಮಂದಿಗೆಲ್ಲಾ ಸುಖ ನೀಡಬಲ್ಲ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಕು.ರಾ.ಸೀ , ಗಾಯನ : ಕೆ.ಜೆ.ಏಸುದಾಸ್ 

ಗಂಡು : ಮನೆ ಮಂದಿಗೆಲ್ಲಾ ಸುಖ ನೀಡಬಲ್ಲ
            ಮನೆ ಮಂದಿಗೆಲ್ಲಾ ಸುಖ ನೀಡಬಲ್ಲ ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
           ಮನೆ ಮಂದಿಗೆಲ್ಲಾ ಸುಖ ನೀಡಬಲ್ಲ ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
           ಮನೆ ಮಂದಿಗೆಲ್ಲಾ

ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಮನೆ ತುಂಬಿ ಬಂದಂತ ಬಂಗಾರ ಹೆಣ್ಣೇ .. ಸವಿ ಬಾಳ ಸಂಗೀತ ಉಲಿವಂತ ವೀಣೆ... ಓ... ಜಾಣೆ..
            ಬಂದವರ ಉಪಚಾರ ಬಲ್ಲಂತ ಬಾಯಿ ಆರೈಕೆ ಔದಾರ್ಯ ಅರಿತಂಥ ತಾಯೀ .. ಅರಿತಂಥ ತಾಯೀ ..
            ಅರಿತಂಥ ತಾಯೀ .. ...    ಮನೆ ಮಂದಿಗೆಲ್ಲಾ

ಹೆಣ್ಣು : ಆಆಆ... ಆಆಆ... ಆಆಆ... ಉಂ ...
ಗಂಡು : ಕಖಿಯಾಗಿ ಅಂದೂ .. ಸತಿಯಾದೆ ಇಂದೂ .. ಋತುವಾಗಿ ಬಂದೇ ತಾಯಾಗಿ ನಿಂದೇ ..
            ಋತುವಾಗಿ ಬಂದೇ ತಾಯಾಗಿ ನಿಂದೇ .. ತೌರಿಂದ ದೂರಾದೇ ಹೊಸ ಮರಕೆ ಬೇರಾದೇ ..
            ತೌರಿಂದ ದೂರಾದೇ ಹೊಸ ಮರಕೆ ಬೇರಾದೇ .. ಸಂತೋಷ ಸಾಮ್ರಾಜ್ಯ ಸಂಪನ್ನೆಯಾದೇ ..
            ಸಂತೋಷ ಸಾಮ್ರಾಜ್ಯ ಸಂಪನ್ನೆಯಾದೇ .. ಸಂಪನ್ನೆಯಾದೇ ..
           ಮನೆ ಮಂದಿಗೆಲ್ಲಾ ಸುಖ ನೀಡಬಲ್ಲ ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
           ಮನೆ ಮಂದಿಗೆಲ್ಲಾ
----------------------------------------------------------------------------------------------------------------

ತ್ರಿವೇಣಿ (೧೯೭೩) - ಮನಸೂ ನವೀರೂ ಒಡಲು ನಿಮಿರೂ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಕು.ರಾ.ಸೀ , ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ  

ಹೆಣ್ಣು: ಮನಸು ನವೀರೂ... (ಆಹಾ... ಆಹಾ)  ಒಡಲು ನಿಮಿರೂ (ಒಹೋ ...ಒಹೋ)
         ನರನಾಡಿ ಏರು ಪೇರು ಬಳಿಗೆ ಬರದಿರೂ ...
ಗಂಡು : ಮೊದಲ ಬೆಗರೂ ಬಿಸಿ ಬಿಸಿ ಬಳಿಕ ಒಗರು ಹುಸಿ ಹುಸಿ
            ಇರುವಲ್ಲಿ ಹೇಗೋ ಹಾಗೇ ಮುದುರಿ ಅಣಗಿರು... ಹೊಯ್

ಹೆಣ್ಣು : ಎದೆಯ... ಮಿಡಿವ ಬಡಿತ ಜೋರಾಗಿರೇ..   ಗೆಳೆಯ ಹೃದಯ ಕರಗಿ ನೀರಾಗಿದೆ
ಗಂಡು : ಇನ್ನೇನಾದರೇನೋ.. ಎಲ್ಲಾ ಜೇನೂ ಜೇನು ತೊರೆ ನೀ ಭಯವನೂ ..

ಗಂಡು : ಒಲವೂ ಮೊಳೆತು ಅರಳಿ ಹೂವಾಗಿದೇ ... ಚೆಲುವೂ ಕಲೆತು ಕಳಿತ ಹಣ್ಣಾಗಿದೇ ..
ಹೆಣ್ಣು :  ಮನವೂ ಮಾಗಬೇಕು ಇನಿಸೂ ಮೂಡಬೇಕು ಎಲ್ಲಾ ಕಾಲಕೂ .. (ಕರೆಕ್ಟ್ ಪರ್ಫೆಕ್ಟಲೀ ಕರೆಕ್ಟ್ )
           ಒಲಿಯಬಲ್ಲೇ ... (ಹಿಯರ್ ಹಿಯರ್ ) ಒಲಿಸ ಬಲ್ಲೇ .. (ಹುರ್ರೇ... ಹುರ್ರೇ...)
           ನೀ ನನ್ನ ಜೀವಾಧಾರ ಮದುವೇ ನಂತರ..
           ಒಲವೂ ಮೊಳೆತು ಅರಳಿ ಹೂವಾಗಿದೇ ... ಚೆಲುವೂ ಕಲೆತು ಕಳಿತ ಹಣ್ಣಾಗಿದೇ ..
ಗಂಡು  :  ಮನವೂ ಮಾಗಬೇಕು ಇನಿಸೂ ಮೂಡಬೇಕು ಎಲ್ಲಾ ಕಾಲಕೂ .. (ಕರೆಕ್ಟ್ ಪರ್ಫೆಕ್ಟಲೀ ಕರೆಕ್ಟ್ )
             ಮನಸು ನವೀರೂ..
             ಮನಸು ನವೀರೂ... (ಆಹಾ... ಆಹಾ)  ಒಡಲು ನಿಮಿರೂ (ಒಹೋ ...ಒಹೋ)
             ನರನಾಡಿ ಏರು ಪೇರೂ ... ನರನಾಡಿ ಏರು ಪೇರೂ ...  ಬಳಿಗೆ ಬರದಿರೂ ...  
ಹೆಣ್ಣು  : ಮೊದಲ ಬೆಗರೂ ಬಿಸಿ ಬಿಸಿ ಬಳಿಕ ಒಗರು ಹುಸಿ ಹುಸಿ
            ಇರುವಲ್ಲಿ ಹೇಗೋ ಹಾಗೇ... ಇರುವಲ್ಲಿ ಹೇಗೋ ಹಾಗೇ  ಮುದುರಿ ಅಣಗಿರು...
----------------------------------------------------------------------------------------------------------------

ತ್ರಿವೇಣಿ (೧೯೭೩) - ಸವಿಗೆ ಬಿಸಿ ಬಿಸಿ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಹಂಸಲೇಖ, ಗಾಯನ : ಎಲ್.ಆರ್.ಈಶ್ವರಿ 

ಸವಿಗೆ ಬಿಸಿ ಬಿಸಿ ಹನಿ ಬೇಕೇ  ಬಾ..  ಬಾ.. ಬಾ..ಬಾ...ಬಾ..ಬಾ... ಬಾ.. ಬಾ...
ಸವಿಗೆ ಬಿಸಿ ಬಿಸಿ ಹನಿ ಬೇಕೇ  ಬಾ..  ಸುಖಕೆ ಹಸಿ ಹಸಿ ಹೆಣ್ಣು ಸಾಕೆ ನಾನೇ ಬೇಕೇ ನಾನೇ ಸಾಕೇ
ಮೈಯ್ಯಿಗೇ ಕಣ್ಣಿಗೆ ಹಲ್ಲಿಗೆ ಕಾವು ಬೇಕೇ  ಬಾ..ಬಾ..ಬಾ..ಬಾ....
ಸವಿಗೆ ಬಿಸಿ ಬಿಸಿ ಹನಿ ಬೇಕೇ..........

ಈ ತುಟಿಯ ಕೆಂಪು ರಂಗು ರಂಪು ಸ್ಪರ್ಶ ತಂಪು ಜೇನು ಹೀರು ಬಾರಾ
ಬಾ ಮೈಯ್ಯ ಕೆಂಡ ಅಂಗ ಅಂಗ ಒಸಡು ಕುಂಡ ಮಿಂದು ಸವಿಯೇ ಬಾರಾ 
ಈ ತುಟಿಯ ಕೆಂಪು ರಂಗು ರಂಪು ಸ್ಪರ್ಶ ತಂಪು ಜೇನು ಹೀರು ಬಾರಾ
ಬಾ ಮೈಯ್ಯ ಕೆಂಡ ಅಂಗ ಅಂಗ ಒಸಡು ಕುಂಡ ಮಿಂದು ಸವಿಯೇ ಬಾರಾ 
ಮಿಲಮಿಲ ಗಲಗಲ  ಕಲಕಲ ಬಲಬಲ ಜಿಗಿತ ಜಿಗಿತ ಸಂಕೀತ ಈ ತಾರಾ.. ಬಾ.. ಬಾ...ಬಾ..ಬಾ...  
ಸವಿಗೆ ಬಿಸಿ ಬಿಸಿ ಹನಿ ಬೇಕೇ ....

ಏ.. ನವಿರು ನವಿರು ಕಸರು ಕಸರು ಒಗರು ಒಗರು ಮುಟ್ಟೆ ನೀನು ನನ್ನಾ
ಹಾ.. ಜೋರು ಬೇಡ ಹ್ಹಾ.. ನಿಲ್ಲಬೇಡ ತಡೆಯಬೇಡ .. ಒತ್ತು ಅತ್ತಾಗೆ ಚಿನ್ನ 
ಮಿಲ ಮಿಲ ಗಲ ಗಲ ಕಲ ಕಲ ಬಲ ಬಲ ನಿಲ್ಲಿಸು ನಿಲ್ಲಿಸು ನಿಲ್ಲಿಸು ಇನ್ನೂ ಸಾಕೂ ಬಾ.. ಬಾ..ಬಾ..ಬಾ..
ಸವಿಗೆ ಬಿಸಿ ಬಿಸಿ ಹನಿ ಬೇಕೇ  ಬಾ..  ಬಾ... ಬಾ..  ಬಾ...  ಬಾ..  ಬಾ...  ಬಾ..  ಬಾ...
ಸುಖಕೆ ಹಸಿ ಹಸಿ ಹೆಣ್ಣು ಸಾಕೆ ನಾನೇ ಬೇಕೇ ನಾನೇ ಬೇಕೇ
ಮೈಯ್ಯಿಗೇ ಕಣ್ಣಿಗೆ ಹಲ್ಲಿಗೆ ಕಾವು ಬೇಕೇ  ಬಾ..ಬಾ..ಬಾ..ಬಾ..ಬಾ..
ಸವಿಗೆ ಬಿಸಿ ಬಿಸಿ ಹನಿ ಬೇಕೇ.....
----------------------------------------------------------------------------------------------------------------

ತ್ರಿವೇಣಿ (೧೯೭೩) - ಕವಿಯ ಮಧುರ ಕಲ್ಪನ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಗೀತಪ್ರಿಯ, ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ  

ಗಂಡು : ಊಹೂಂಹೂಂ ಹೂಂ...   (ಊಹೂಂಹೂಂ ಹೂಂ...)
            ಕವಿಯ ಮಧುರ ಕಲ್ಪನ..
            ಕವಿಯ ಮಧುರ ಕಲ್ಪನ.. ಸುರಮ್ಯ ಸ್ತ್ರಿಯಾಗಿ ಸಜೀವವಾಗಿ ಬಂದು ನಿಂತ ಭಾವನ... 
ಹೆಣ್ಣು : ಕವಿಯ ಮಧುರ ಭಾವನ ಸಂದೇಶ ಸಾರಿ ಸುಪ್ರೇಮ ತೋರಿ ನೀಡಿ ತುಂಬೂ ಚೇತನ..
ಇಬ್ಬರು : ಕವಿಯ ಮಧುರ.. ಹೂಂ ಹೂಂ .....

ಗಂಡು : ನಿನ್ನಯ ರೂಪ ಪ್ರೀತಿಯ ದೀಪ ನಿನ್ನ ಸುಹಾಸ ಭಾವವೇಷ .. (ಆಆಆಅ) 
ಹೆಣ್ಣು : ನಿನ್ನಯ ಪ್ರೀತಿ ನನಗೆ ಜ್ಯೋತಿ ನಿನ್ನಯ ಆಟ ನನಗೆ ಪ್ರಕಾಶ (ಉಂಉಂಉಂಉಂ) ಉಂಉಂಉಂ
ಗಂಡು : ನೀನೇ ನನ್ನಯ ಜೀವನ  
            ಕವಿಯ ಮಧುರ ಕಲ್ಪನ.. (ಆಆಆ) ಸುರಮ್ಯ ಸ್ತ್ರಿಯಾಗಿ ಸಜೀವವಾಗಿ ಬಂದು ನಿಂತ ಭಾವನ...  (ಆಆಆ)
            ಕವಿಯ ಮಧುರ ಕಲ್ಪನ.. 

ಹೆಣ್ಣು : ಉಂಉಂಉಂ...  ಉಂ.. ಉಂ.. 
ಗಂಡು : ಶ್ಯಾಮಲಕೇಶ ಶೋಭೆಯ ಕೋಶ ಲಜ್ಜಾಭೀಶೇಷ ಸಂಕೇತ ಪಾಶ (ಆಆಆ.. ಹೂಂಹೂಂಹೂಂ.. ) 
ಹೆಣ್ಣು : ಪಾವನರಾಗ ಈ ಅನುರಾಗ ಬಾಳಿಗೆ ಅಂದ ಈ ಅನುಬಂಧ (ಹೂಂಹೂಂಹೂಂ.. ) ಹೂಂಹೂಂಹೂಂ.. 
ಇಬ್ಬರು : ಇದುವೇ ಸೌಖ್ಯದ ಸಾಧನ.. 
ಗಂಡು : ಕವಿಯ ಮಧುರ ಕಲ್ಪನ.. (ಆಆಆ) ಸುರಮ್ಯ ಸ್ತ್ರಿಯಾಗಿ ಸಜೀವವಾಗಿ ಬಂದು ನಿಂತ ಭಾವನ...  (ಆಆಆ)   
ಇಬ್ಬರು : ಕವಿಯ ಮಧುರ ಹೂಂಹೂಂಹೂಂಹೂಂ....... 
----------------------------------------------------------------------------------------------------------------

ತ್ರಿವೇಣಿ (೧೯೭೩) - ನೀನಾ ಭಗವಂತ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಹಂಸಲೇಖ, ನಾಗರಾಜರಾವ, ಗಾಯನ:ಜಿ.ಬಾಲಕೃಷ್ಣ , ಗೀತಾ.ಎಚ್.ಪಿ 

ಗಂಡು : ಭಗವಂತಾ.. ಭಗವಂತಾ... ಅಹ್ಹಹ್ಹಹ್ಹಹ್ಹಾ...
            ಜಗತ್ತಿನಲ್ಲಿ ನಡಿತಾಯಿರೋ ಅನ್ಯಾಯಗಳನ್ನೂ ನೋಡುತಾ
           ಕುಳಿತಕೊಂಡಿರೋ ಕಲ್ಲು ಮೂರ್ತಿಗಳೆಲ್ಲಾ ಭಗವಂತ ನಾ
           ಹೇ.. ಭಗವಂತಾ.. ಅಹ್ಹಹ್ಹಹ್ಹಹ್ಹಾ... ನೀನಾ ಭಗವಂತಾ... ಅಹ್ಹಾ...

ಗಂಡು : ನೀನಾ ಭಗವಂತಾ.... 
            ನೀನಾ ಭಗವಂತಾ ಜಗಕುಪಕರಿಸಿ ನನಗಪಕರಿಸೋ ಜಗದ್ದೋದ್ದಾರಕ ನೀನೇನಾ... ನೀನೇನಾ...
            ನೀನಾ ಭಗವಂತಾ.... 

ಗಂಡು : ಗೋರ್ಕಲ್ಲಿಗೇ ಗುಡಿ ಮಂದಿರ ನೂರು
            ಗೋರ್ಕಲ್ಲಿಗೇ ಗುಡಿ ಮಂದಿರ ನೂರು ಮಾಡಿದ ನರನಿಗೇ ನೆಲೆಯಿಲ್ಲಾ 
            ಹೂ ಸೌಗಂಧವ ಲೇಪಿಸಿ ಹಾಡಿ, ಕರೆದರೂ ಕರುಣಿಸೇ ಕೃಪೆಯಿಲ್ಲಾ 
            ನೀನಾ ಭಗವಂತಾ.... ಅಹ್ಹಹ್ಹ...
            ಗಂಡನ ಬದುಕು ನರಕ ಮಾಡಿದರೂ ಸ್ವರ್ಗಕ್ಕೆ ಒಯ್ಯುವ ಮನಸ್ಸಿಲ್ಲಾ..
            ಹಾಲಾಹಲದವಾನಲದೂಡಿ ನಶಿಸಿದರೂ ನೀ ಕಂಡಿಲ್ಲಾ.. ನೀನಾ ಭಗವಂತಾ....

ಗಂಡು : ನಶ್ವರ ಭೋಗದ ಆಸೆ ಕಡಲಲಿ ತೇಲಿಸಿ ಮುಳಗಿಸಲೇಕಯ್ಯಾ...  
            ಅಂತರ ತಿಳಿಯದೇ ಪಾಲಿಸುವವಗೇ ದೈವೋತ್ತಮ ಬಿರುದೇಕಯ್ಯಾ..  ದೈವೋತ್ತಮ ಬಿರುದೇಕಯ್ಯಾ..  
            ನೀನಾ ಭಗವಂತಾ ಜಗಕುಪಕರಿಸಿ ನನಗಪಕರಿಸೋ ಜಗದ್ದೋದ್ದಾರಕ ನೀನೇನಾ...
            ನೀನೇನಾ... ನೀನೇನಾ...
ಹೆಣ್ಣು : ಸಿರಿ ನಂದನ.. ಸಿರಿ ನಂದನ ಏನ್ ಕೇಳಲೇ ನಾ
          ಓ ದಯಾಳು ಬರಿದು ಬಾಳು ಕರುಣಿಸೋ ಏನಗು ಜೀವನ...   
          ಸಿರಿ ನಂದನ.. ಏನ್ ಕೇಳಲೇ ನಾ
          ಓ ದಯಾಳು ಬರಿದು ಬಾಳು ಕರುಣಿಸೋ ಏನಗು ಜೀವನ...   

ಹೆಣ್ಣು : ಜನನ ಮರಣ ಬಾಳ ಪಥದಿ ಹರಿಸಿ ಸಾಗುವೇವೀನಾ 
          ಜನನ ಮರಣ ಬಾಳ ಪಥದಿ ಹರಿಸಿ ಸಾಗುವೇವೀನಾ
          ಕರುಣೆ ಮಮತೆ ತೋರಿ ಇಹದೇ ಸಲಹಿ ಕದಡುವೆ ಮನಾ...  
          ಇರುವೆ ಎಲ್ಲಿ ಶೂನ್ಯ ಜಗದಿ ಇರುವೆ ಎಲ್ಲಿ ಶೂನ್ಯ ಜಗದಿ
          ಪ್ರಸರಿಸೋ  ಶಾಂತನ .. ಸಿರಿ ನಂದನ..
          ಸಿರಿ ನಂದನ ಏನ್ ಕೇಳಲೇ ನಾ 
          ಓ ದಯಾಳು ಬರಿದು ಬಾಳು ಕರುಣಿಸೋ ಏನಗು ಜೀವನ   
----------------------------------------------------------------------------------------------------------------

No comments:

Post a Comment