23. ಉಪಾಸನೆ (1974)

ಉಪಾಸನೆ ಚಿತ್ರದ ಹಾಡುಗಳು
  1. ಕರಾಗ್ರಯೇ ವಸತೇ ಲಕ್ಷ್ಮಿ 
  2. ಸಂಪಿಗೆ ಮರದ ಹಸಿರಲೇ ನಡುವೆ 
  3. ಭಾವವೆಂಬ ಹೂವು ಅರಳಿ 
  4. ಭಾವಯ್ಯ ಭಾವಯ್ಯ ಇಲ್ಲೇ ನಿಂತೇ 
  5. ಆಚಾರವಿಲ್ಲದ ನಾಲಿಗೆ 
  6. ಭಾವಯ್ಯ ಭಾವಯ್ಯಾ 
  7. ಭಾರತ ಭೂಷಿರ ಮಂದಿರ ಸುಂದರಿ 
ಉಪಾಸನೆ (1974) 
ಸಾಹಿತ್ಯ : ಪುರಂದರದಾಸರು ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್. ಜಾನಕಿ

ಹೆಣ್ಣು : ಕರಾಗ್ರಯೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ 
          ಕರ ಮೂಲೆ ಸ್ಥಿತೇ ಗೌರಿ  ಪ್ರಭಾತೇ ಕರದರ್ಶನಂ 
ಗಂಡು : ಯಾಕುಂದೇ ನೂತು ಶಾರ ಹಾರದವಳಾ 
            ಯಾವ್ ಶುಭ್ರ ವಸ್ತ್ರಾಂಬಿತಾ ಯಾ ವೀಣಾ..  
ಹೆಣ್ಣು : ಯಾ ವೀಣಾ ವರದಂಡ ಮಂಡತಿಕರಾ ಯಾವ ಶ್ವೇತ ಪದ್ಮಾಸನ  
          ಯಾ ಬ್ರಹ್ಮ ಅಚ್ಚುತ ಶಂಕರ ಪ್ರಭುತಿಹಿ ದೈವೀಸದಾ ಪೂಜಿತಾ 
           ಸಮಾಂ ಪಾತು ಸರಸ್ವತಿ ಭಗವತಿ ನಿಶೇಷ ಧಾಡ್ಯಾಪಹಾ .. ಆಆಆ... 
--------------------------------------------------------------------------------------------------------------------------

ಉಪಾಸನೆ (1974) - ಸಂಪಿಗೆ ಮರದ ಹಸಿರೆಲೆ ನಡುವೆ ...
ಸಾಹಿತ್ಯ : ಆರ್.ಎನ್. ಜಯಗೋಪಾಲ್  ಸಂಗೀತ : ವಿಜಯಭಾಸ್ಕರ್  ಗಾಯನ : ಬಿ.ಕೆ. ಸುಮಿತ್ರ

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ....ಚಿಕ್ಕವ್ವ.....ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್......ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ......ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
------------------------------------------------------------------------------------------------------------------------

ಉಪಾಸನೆ (1974) - ಭಾವವೆಂಬ ಹೂವು ಅರಳಿ ......
ಸಾಹಿತ್ಯ : ಚಿ. ಉದಯಶಂಕರ್    ಸಂಗೀತ : ವಿಜಯಭಾಸ್ಕರ್  ಗಾಯನ : ವಾಣಿ ಜಯರಾಂ

ಅಹಾ......ಅಹಾ......
ಭಾವವೆಂಬಾ ಹೂವು ಅರಳಿ ಗಾನವೆಂಬಾ ಗಂಧ ಚೆಲ್ಲಿ
ರಾಗವೆಂಬಾ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬಾ ಹೂವು ಅರಳಿ ಗಾನವೆಂಬಾ ಗಂಧ ಚೆಲ್ಲಿ

ಸಗಮದ ಗಾಮಾದ  ಸಮದನಿ ಸಾದನಿ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ ಗಾನವೆ ತುಂಬಿದೆ ಈ ಜಗವೆಲ್ಲಾ.......
ಭಾವವೆಂಬಾ ಹೂವು ಅರಳಿ ಗಾನವೆಂಬಾ ಗಂಧ ಚೆಲ್ಲಿ

ದಾಸರು ಹರಿಯಾ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯಾ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನಾ ನೆನೆಯುತ ಬೇಡಿ ಶಿವನಾ ಕಂಡರು ವಚನವ ಹಾಡಿ.........
ಭಾವವೆಂಬಾ ಹೂವು ಅರಳಿ ಗಾನವೆಂಬಾ ಗಂಧ ಚೆಲ್ಲಿ

ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ ತಣಿಯಿತು ಕೃಷ್ಣನ ಮುರಳಿಯಲಿ.........
ಭಾವವೆಂಬಾ ಹೂವು ಅರಳಿ ಗಾನವೆಂಬಾ ಗಂಧ ಚೆಲ್ಲಿ
ರಾಗವೆಂಬಾ ಜೇನ ಹೊನಲು ತುಂಬಿ ಹರಿಯಲಿ ಜಗವಾ ಕುಣಿಸಿ ತಣಿಸಲಿ
--------------------------------------------------------------------------------------------------------------------------

ಉಪಾಸನೆ (1974) - ಬಾವಯ್ಯ ಬಾವಯ್ಯ ಇಲ್ಲೇ ನಿಂತೆ ಏಕಯ್ಯ.....
ಸಂಗೀತ : ವಿಜಯಭಾಸ್ಕರ್   ಗಾಯನ : ಎಲ್. ಆರ್. ಅಂಜಲಿ

ಭಾವಯ್ಯ ಭಾವಯ್ಯ ಇಲ್ಲೇ ನಿಂತೆ ಏಕಯ್ಯ
ಅಕ್ಕ ನಿನ್ನ ಕೋಣೆ ಆಚೆ ದೂಡಿದಳೇನಯ್ಯ
ಅಕ್ಕ ನಿನ್ನ ಕೋಣೆ ಆಚೆ ದೂಡಿದಳೇನಯ್ಯ
ಅಕ್ಕಯ್ಯ ಅಕ್ಕಯ್ಯ ಏನೆ ಇದು ಅನ್ಯಾಯ
ಬಂಗಾರದಂಥ ಗಂಡ ಕಣೆ ಬಾಗಿಲು ತೆಗ್ಯೇ ಅಕ್ಕಯ್ಯ
ಬಂಗಾರದಂಥ ಗಂಡ ಕಣೆ ಬಾಗಿಲು ತೆಗ್ಯೇ ಅಕ್ಕಯ್ಯ

ಮೈಸೂರುಮಲ್ಲಿಗೆ ಹೂದಂಡೆ ನಿನಗೆ ಮುಡಿಸುವ ಕಾತುರ ಕಣ್ಣಿನಲಿ
ಮೈಸೂರುಮಲ್ಲಿಗೆ ಹೂದಂಡೆ ನಿನಗೆ ಮುಡಿಸುವ ಕಾತುರ ಕಣ್ಣಿನಲಿ
ಚಿಗುರೆಲೆ ತಾಂಬೂಲ ನಿನ್ನ ಜೊತೆಯಲ್ಲಿ ಮೆಲ್ಲುವ ಆತುರ ಮನಸಿನಲಿ.........
ಭಾವಯ್ಯ ಭಾವಯ್ಯ ಇಲ್ಲೇ ನಿಂತೆ ಏಕಯ್ಯ
ಅಕ್ಕ ನಿನ್ನ ಕೋಣೆ ಆಚೆ ದೂಡಿದಳೇನಯ್ಯ
ಅಕ್ಕ ನಿನ್ನ ಕೋಣೆ ಆಚೆ ದೂಡಿದಳೇನಯ್ಯ

(ಬಾರೆ ಇಲ್ಲಿ...ಏನೆ ಅದು ತಮಾಷೆ ನೀನೇ ಏನೇ ಬೀಗ ಹಾಕಿರೋದು..
ಏ.. ನಾನಲ್ಲಮ್ಮ..ಸ್ವಲ್ಪ ಇರು)

ಹುಣ್ಣಿಮೆ ಚಂದಿರ ಕಾಣಲು ಕಾದಿಹ ನಿಮ್ಮಾ ಸರಸವಾ ತವಕದಲಿ
ಹುಣ್ಣಿಮೆ ಚಂದಿರ ಕಾಣಲು ಕಾದಿಹ ನಿಮ್ಮಾ ಸರಸವಾ ತವಕದಲಿ
ಮೆತ್ತನೆ ಮಂಚವು ಒಲವಿನ ಪಿಸುಮಾತಾ
ಮೆತ್ತನೆ ಮಂಚವು ಒಲವಿನ ಪಿಸುಮಾತಾ ಆಲಿಸ ಕಾದಿಹೆ ಮೌನದಲಿ.........
ಅಕ್ಕಯ್ಯ ಅಕ್ಕಯ್ಯ ಏನೆ ಇದು ಅನ್ಯಾಯ
ಬಂಗಾರದಂಥ ಗಂಡ ಕಣೆ ಬಾಗಿಲು ತೆಗ್ಯೇ ಅಕ್ಕಯ್ಯ
ಬಂಗಾರದಂಥ ಗಂಡ ಕಣೆ ಬಾಗಿಲು ತೆಗ್ಯೇ ಅಕ್ಕಯ್ಯ

(ಏ.. ಲಕ್ಷ್ಮಿ  ಬಾರೇ ಯಾವಾತರ್ ತಮಾಷೆ ತೇಗಿಯೇ ಬಾಗಿಲನ್  
ಏನೇ.. ಏನಾಯ್ತು ) 
ಬೆಳ್ಳಿ ತಂಬಿಗೆಯ ಕೇಸರಿ ಹಾಲೋ  ಜೋಗುಳ ಹಾಡುವ ಆ ತಂಗಾಳಿ
ಬೆಳ್ಳಿ ತಂಬಿಗೆಯ ಕೇಸರಿ ಹಾಲೋ ಜೋಗುಳ ಹಾಡುವ ಆ ತಂಗಾಳಿ
ಸುಗಂಧ ಬೀರುವ ಧೂಮದ ಸುರುಳಿ ಸೇವೆಗೆ ಕಾದಿದೆ ನಲಿವಿನಲಿ.........
ಭಾವಯ್ಯ ಭಾವಯ್ಯ ಇಲ್ಲೇ ನಿಂತೆ ಏಕಯ್ಯ
ಅಕ್ಕಯ್ಯ ಅಕ್ಕಯ್ಯ ಏನೆ ಇದು ಅನ್ಯಾಯ
ಭಾವಯ್ಯ ಭಾವಯ್ಯ ಅಕ್ಕಯ್ಯ ಅಕ್ಕಯ್ಯ
ಭಾವಯ್ಯ ಭಾವಯ್ಯ ಅಕ್ಕಯ್ಯ ಅಕ್ಕಯ್ಯ
-----------------------------------------------------------------------------------------------------------------------

ಉಪಾಸನೆ (1974) ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ
ಸಾಹಿತ್ಯ : ಪುರಂದರದಾಸರು ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್. ಜಾನಕಿ

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಾ ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಾ ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ

ಚಾಡಿಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು ನಾಲಿಗೆ..ಆಆಆ...
ಚಾಡಿಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು ನಾಲಿಗೆ
ರೂಢಿಗೊಡೆಯ ಶ್ರೀರಾಮನನಾಮವ ಪಾಡುತಲಿರು ಕಂಡ್ಯ ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ

ಹರಿಯಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ...ಆಆಆ..
ಹರಿಯಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠ್ಠಲರಾಯನ
ವರದ ಪುರಂದರ ವಿಠ್ಠಲರಾಯನ ಚರಣಕಮಲನೆನೆ ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಾ ನಾಲಿಗೆ
-------------------------------------------------------------------------------------------------------------------------

ಉಪಾಸನೆ (1974) 
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ವಾಣಿಜಯರಾಂ 

ಭಾವಯ್ಯ ಭಾವಯ್ಯ ಇಲ್ಲೇ ನಿಂತಿರೇ ಏಕಯ್ಯಾ
ಭಾವಯ್ಯ ಭಾವಯ್ಯ ಇಲ್ಲೇ ನಿಂತಿರೇ ಏಕಯ್ಯಾ
ತಂಗ್ಯವ್ವ ಕೋಣೆ ಆಚೆ ನಿಮ್ಮ ದೂಡಿದಳೆನಯ್ಯ 
ತಂಗ್ಯವ್ವ ತಂಗ್ಯವ್ವ ಬಂಗಾರದಂತ ಗಂಡ ಕಣೇ 
ಬಾಗಿಲು ತೆಗೆಯೇ ತಂಗ್ಯವ್ವ 
ಭಾವಯ್ಯ ಭಾವಯ್ಯ ಇಲ್ಲೇ ನಿಂತಿರೇ ಏಕಯ್ಯಾ

ಹುಣ್ಣಿಮೆ ಚಂದಿರ ಕಾಣಲು ಕಾದಿಹ ನಿಮ್ಮ ಸರಸವ ತವಕದಲಿ ಆಆಆ...
ಹುಣ್ಣಿಮೆ ಚಂದಿರ ಕಾಣಲು ಕಾದಿಹ ನಿಮ್ಮ ಸರಸವ ತವಕದಲಿ
ಮೆತ್ತನೆ ಮಂಚವೂ ಒಲವಿನ ಪಿಸುಮಾತಾ
ಮೆತ್ತನೆ ಮಂಚವೂ ಒಲವಿನ ಪಿಸುಮಾತಾ ಆಲಿಸೆ ಕಾದಿದೆ ಮೌನದಲಿ
ಭಾವಯ್ಯ ಭಾವಯ್ಯ ಇಲ್ಲೇ ನಿಂತಿರೇ ಏಕಯ್ಯಾ

ಬೆಳ್ಳಿ ತಂಬಿಗೆಯ ಕೇಸರಿ ಹಾಲು ಜೋಗುಳ ಹಾಡುವಾ ತಂಗಾಳಿ 
ಬೆಳ್ಳಿ ತಂಬಿಗೆಯ ಕೇಸರಿ ಹಾಲು ಜೋಗುಳ ಹಾಡುವಾ ತಂಗಾಳಿ 
ಸುಗಂಧ ಬೀರುವಾ ಭೂಮದ ಸುರಳಿ ಸೇವೆಗೆ ಕಾದಿದೆ ನಲಿವಿನಲಿ 
ಭಾವಯ್ಯ ಭಾವಯ್ಯ ಇಲ್ಲೇ ನಿಂತಿರೇ ಏಕಯ್ಯಾ 
ತಂಗ್ಯವ್ವ ಕೋಣೆ ಆಚೆ ನಿಮ್ಮ ದೂಡಿದಳೆನಯ್ಯ 
ತಂಗ್ಯವ್ವ ತಂಗ್ಯವ್ವ ಬಂಗಾರದಂತ ಗಂಡ ಕಣೇ 
--------------------------------------------------------------------------------------------------------------------------

ಉಪಾಸನೆ (1974) ಭಾರತ ಭೂಶಿರ ಮಂದಿರ ಸುಂದರಿ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್. ಜಾನಕಿ

ಭಾರತ ಭೂಶಿರ ಮಂದಿರ ಸುಂದರಿ
ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ....
ಭಾರತ ಭೂಶಿರ ಮಂದಿರ ಸುಂದರಿ

ಸಾಮಗಾನ ಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಮಗಾನ ಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ......
ಭಾರತ ಭೂಶಿರ ಮಂದಿರ ಸುಂದರಿ  ಕನ್ಯಾಕುಮಾರಿ....

ಶಿವತಾಂಡವದಾ ಢಮರುನಿನಾದ....
ಶಿವತಾಂಡವದಾ ಢಮರುನಿನಾದ
ನಾದ ಬ್ರಹ್ಮನ ಓಂಕಾರನಾದ...ಆ.....ಆ......ಆ....
ಶಿವತಾಂಡವದಾ ಢಮರುನಿನಾದ
ನಾದ ಬ್ರಹ್ಮನ ಓಂಕಾರನಾದ
ನಾದಕೆ ಲೀನಾ ಆಗಮವೇದ ನಾದ...ವೇದ ...ಶಿವೇ....
ನಾದ ವೇದ ಶಿವೆ ನಿನ್ನವಿನೋದ.......
ಭಾರತ ಭೂಶಿರ ಮಂದಿರ ಸುಂದರಿ  ಕನ್ಯಾಕುಮಾರಿ....

ಸಂಗೀತಸುಧೆಯಾ ಚೈತನ್ಯಧಾರೆ ಕಣ ಕಣ ನೀನೇ ಕರುಣಾ ಪೂರೆ
ಸಂಗೀತಸುಧೆಯಾ ಚೈತನ್ಯಧಾರೆ ಕಣ ಕಣ ನೀನೇ ಕರುಣಾ ಪೂರೆ
ನವ ಭಾವ ನವ ಜೀವ ನೀ ತುಂಬಿ ಬಾರೇ...
ನವ ಭಾವ ನವ ಜೀವ ನೀ ತುಂಬಿ ಬಾರೇ
ನವರಸವಾಹಿನಿ ನೀ ದಯೆ ತೋರೆ.......
ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ....
ಭಾರತ ಭೂಶಿರ ಮಂದಿರ ಸುಂದರಿ
--------------------------------------------------------------------------------------------------------------------------

No comments:

Post a Comment