1184. ಉಷ ( ೧೯೮೬)

ಉಷ ಚಲನಚಿತ್ರದ ಹಾಡುಗಳು 
  1. ಕಹಿ ಕಹಿ ಕಹಿಯಲ್ಲಿ ಬಂದಿಲ್ಲಿ 
  2. ನಿನ್ನಂಥ ಶ್ರೀಮತಿ ಕೈ ಹಿಡಿದಾಗ 
  3. ಮಾತೆಲ್ಲ ಮುತ್ತಿನಂತೇ ಇಂಪಾದ ಹಾಡಿನಂತೆ 
  4. ಸಾವಿರ ತಾರೆಗಳು ಆಕಾಶದಿ 
ಉಷ ( ೧೯೮೬) - ಕಹಿ ಕಹಿ ಕಹಿಯಲ್ಲಿ ಬಂದಿಲ್ಲಿ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಅನಿತಾಸುರೇಶ

ಕಹಿ ಕಹಿ ಕಹಿಯಲ್ಲಿ ಬಂದಿಲ್ಲಿ ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ ಹಗಲೇ ಬರಲಿ ಇರುಳೆ ಬರಲಿ ನಗುವಲಿ ತೇಲಾಡುವಾ
ಕಹಿ ಕಹಿ ಕಹಿಯಲ್ಲಿ ಬಂದಿಲ್ಲಿ ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ ಹಗಲೇ ಬರಲಿ ಇರುಳೆ ಬರಲಿ ನಗುವಲಿ ತೇಲಾಡುವಾ

ಹಣ್ಣು ನೋಡಿ ಬೇಡ ಎಂದು ದೂರ ಹೋಗುವುದುಂಟೇನು
ಹೊನ್ನು ನೋಡಿ ಅಯ್ಯೋ ಎಂದು ಓಡಿ ಹೋಗುವರುಂಟೇನೂ
ಇಂಥ ಅಂದ ಇಂಥ ಚೆಂದ ಚೆಲುವ ನಿನಗೆ ದಿನವೂ ಸಿಗದು
ಕಣ್ಣು ಕಣ್ಣು ಕೂಡಿದಾಗ ಏನೋ ಮಿಂಚು ಮೈಯ್ಯಲ್ಲಿ
ಮೈಯ್ಯ ಮೈಯ್ಯಿ ಸೋಕಿದಾಗ ಏನೋ ನೋವು ನಿನ್ನಲ್ಲಿ
ದಾಹ ದಾಹ ತಾಳಲಾರೆ ದಿನವೂ ತರುವೆ ಮತ್ತೆ ಕೂಡಿವೆ ಇಂಥ ಆನಂದ ತರುವೇ ..
ಕಹಿ ಕಹಿ ಕಹಿಯಲ್ಲಿ ಬಂದಿಲ್ಲಿ ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ ಹಗಲೇ ಬರಲಿ ಇರುಳೆ ಬರಲಿ ನಗುವಲಿ ತೇಲಾಡುವಾ

ಯಾಕೆ ಬಂದೆ ಭೂಮಿಗೆಂದೂ ಯಾರು ಕೊಳೋದಿಲ್ಲ
ಅಯ್ಯೋ ಎಂದು ಕೂಗೋವಾಗ ಯಾರು ನೋಡೋದಿಲ್ಲವೋ
ನಿನಗೆ ನೀನೇ ಯಾರು ಇಲ್ಲ ನಿಜವಾ ತಿಳಿಯೋ ತಿಳಿಯೋ
ಪ್ರೇಮ ಪ್ರೀತಿ ಗೆಳೆಯ ಗೆಳತೀ ಯಾರು ಇಲ್ಲ ಕೆಟ್ಟರೇ
ಬಂಧು ಬಳಗ ಅಕ್ಕಪಕ್ಕ ಎಲ್ಲ ಬರಿಯ ತೊಂದರೆ
ಎಲ್ಲ ಕಳದು ಕುಡಿದು ಕಳದು ಮನದ ದುಗುಡ ಮರೆಯೋ ಮರೆಯೋ ಸುಖದ ಆನಂದ ಸವಿಯೋ
ಕಹಿ ಕಹಿ ಕಹಿಯಲ್ಲಿ ಬಂದಿಲ್ಲಿ ಚಿಂತೆ ಮರೆತು ಹರುಷ ಪಡೆದು ಹಾಡುವ
ಜೋಡಿ ಹಕ್ಕಿ ಹಾಗೆ ಕುಣಿದು ಆಡುವಾ ಹಗಲೇ ಬರಲಿ ಇರುಳೆ ಬರಲಿ ನಗುವಲಿ ತೇಲಾಡುವಾ
-------------------------------------------------------------------------------------------------------------------------

ಉಷ ( ೧೯೮೬) - ನಿನ್ನಂಥ ಶ್ರೀಮತಿ ಕೈ ಹಿಡಿದಾಗ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಕೆ.ಜೆ.ಏಸುದಾಸ್, ಎಸ್.ಜಾನಕೀ

ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ ನಿನ್ನಂಥ ಗುಣವತಿ ಜೊತೆಯಾದಾಗ ದಿನವೂ ಆನಂದವೇ ... ಆಆಆ
            ಎಂದೂ ಹೀಗೆ ನಾವೂ .. ಸೇರಿ ಹಾಡುವಾಗ ಬದುಕು ಸ್ವರ್ಗವೇ ..
ಹೆಣ್ಣು : ನಿನ್ನಂಥ ಭೂಪತಿ ಕೈಹಿಡಿದಾಗ ನಿನ್ನಂಥ ಶ್ರೀಪತಿ ಜೊತೆಯಾದಾಗ ದಿನವೂ ಆನಂದವೇ ... ಆಆಆ.
          ಎಂದೂ ಹೀಗೆ ನಾವೂ .. ಸೇರಿ ಹಾಡುವಾಗ ಬದುಕು ಸ್ವರ್ಗವೇ ..

ಗಂಡು : ಆಡುವ ನುಡಿಯು ಜೇನಿನ ಸಿಹಿಯು ನಡೆಯುವ ಹಾದಿ ಹೂವಿನ ಹಾದಿಯೂ
ಹೆಣ್ಣು : ಅನುದಿನ ಆಗ ಸುಖಸಾಗರವೇನು ಮನದಲಿ ಎಂದು ಸುಂದರ ಕಲ್ಪನೆ
ಇಬ್ಬರು : ಅನುಗಾಲ ಅನುರಾಗ ಶುಭಯೋಗ
ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ ನಿನ್ನಂಥ ಗುಣವತಿ ಜೊತೆಯಾದಾಗ ದಿನವೂ ಆನಂದವೇ ... ಆಆಆ
            ಎಂದೂ ಹೀಗೆ ನಾವೂ .. ಸೇರಿ ಹಾಡುವಾಗ ಬದುಕು ಸ್ವರ್ಗವೇ ..

ಹೆಣ್ಣು : ನೋಟದಿ ಪ್ರೇಮ ಆಟದಿ ಪ್ರೇಮ ಜೀವನವಾದ ಪ್ರೇಮದ ಸಂಗಮ
ಗಂಡು : ಮಾಸಗಳೆಲ್ಲ ಕುಸುಮ ಪುಟ್ಟ ಮಧುಮಾಸವೇ
           ರಾತ್ರಿಗಳೆಲ್ಲಾ ಮೊದಲನೇ ರಾತ್ರಿಯೇ
ಹೆಣ್ಣು : ದಿನವೆಲ್ಲ ಸಂತೋಷ ಸಂಗೀತ
          ನಿನ್ನಂಥ ಭೂಪತಿ ಕೈಹಿಡಿದಾಗ ನಿನ್ನಂಥ ಶ್ರೀಪತಿ ಜೊತೆಯಾದಾಗ ದಿನವೂ ಆನಂದವೇ ... ಆಆಆ.
          ಎಂದೂ ಹೀಗೆ ನಾವೂ .. ಸೇರಿ ಹಾಡುವಾಗ ಬದುಕು ಸ್ವರ್ಗವೇ ..
ಗಂಡು : ನಿನ್ನಂಥ ಶ್ರೀಮತಿ ಕೈ ಹಿಡಿದಾಗ ನಿನ್ನಂಥ ಗುಣವತಿ ಜೊತೆಯಾದಾಗ ದಿನವೂ ಆನಂದವೇ ... ಆಆಆ
            ಎಂದೂ ಹೀಗೆ ನಾವೂ .. ಸೇರಿ ಹಾಡುವಾಗ ಬದುಕು ಸ್ವರ್ಗವೇ ..
-------------------------------------------------------------------------------------------------------------------------

ಉಷ ( ೧೯೮೬) - ಮಾತೆಲ್ಲ ಮುತ್ತಿನಂತೇ ಇಂಪಾದ ಹಾಡಿನಂತೆ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಮ

ಹೆಣ್ಣು : ಮಾತೆಲ್ಲ ಮುತ್ತಿನಂತೇ               ಗಂಡು : ಇಂಪಾದ ಹಾಡಿನಂತೇ
ಹೆಣ್ಣು : ಒಲವು ಬಂದಾಗ ಸೇರಿ ನಡೆವಾಗ
ಗಂಡು : ಹೇ.. ಒಲವು ಬಂದಾಗ ಸೇರಿ ನಡೆವಾಗ

ಗಂಡು : ನನ್ನಲ್ಲೂ ಇಲ್ಲ ನಿನ್ನಲ್ಲು ಇಲ್ಲ ನಮ್ಮಲ್ಲೂ ಇಲ್ಲ ಅದು ಏನೂ
ಹೆಣ್ಣು : ರೋಷವು ದ್ವೇಷವು ಸರಿ ತಾನೇ ನನ್ನ ನಲ್ಲ
          ನನ್ನಲ್ಲೂ ಉಂಟು ನಿನ್ನಲ್ಲು ಉಂಟು ನಮ್ಮಲ್ಲೂ ಉಂಟು ಅದು ಏನೂ
ಗಂಡು : ಪ್ರೀತಿಯು ಪ್ರೇಮವೂ ಹ್ಹಾಂ .. ಸರಿ ತಾನೇ ನನ್ನ ನಲ್ಲೇ
ಹೆಣ್ಣು : ಮಾತಿನಲ್ಲಿ ಬಲು ಜಾಣ ನನ್ನವರು ಆದಕೆ ನಾನು ಸೋತೇನೂ
          ಮಾತೆಲ್ಲ ಮುತ್ತಿನಂತೇ ಇಂಪಾದ ಹಾಡಿನಂತೇ
          ಒಲವು ಬಂದಾಗ ಸೇರಿ ನಡೆವಾಗ
          ಹೇ.. ಒಲವು ಬಂದಾಗ ಸೇರಿ ನಡೆವಾಗ

ಹೆಣ್ಣು : ಮನಸಲ್ಲಿ ಬಂದ ಮನಸಲ್ಲಿ ನಿಂದ ಮತ್ತೊಂದು ಕಂಡ ಅವನಾರು
ಗಂಡು : ಎದುರಲೇ..  ಆಆಆ..           ನಿಂತಿಹ ನಾ ತಾನೇ ಹೇಳೇ ಗೆಳತೀ
           ಕನಸಲಿ ಇಲ್ಲ ಮನಸಲಿ ಇಲ್ಲ ಎದುರಲೇ ಎಲ್ಲ ಅವಳಾರೂ
ಹೆಣ್ಣು : ಪ್ರಣಯದ ಪಯಣದ ಸಂಗಾತಿ ತಾನೇ ಗೆಳೆಯ
ಗಂಡು : ಅನುದಿನವು ಜೊತೆಯಿರಲು ಹೀಗೆ ನೀನು ಪ್ರೇಯಸಿ
ಹೆಣ್ಣು : ಮಾತೆಲ್ಲ ಮುತ್ತಿನಂತೇ               ಗಂಡು : ಇಂಪಾದ ಹಾಡಿನಂತೇ
ಹೆಣ್ಣು : ಒಲವು ಬಂದಾಗ ಸೇರಿ ನಡೆವಾಗ
ಗಂಡು : ಹೇ.. ಒಲವು ಬಂದಾಗ ಸೇರಿ ನಡೆವಾಗ
-------------------------------------------------------------------------------------------------------------------------

ಉಷ ( ೧೯೮೬) - ಸಾವಿರ ತಾರೆಗಳು ಆಕಾಶದಿ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ವಾಣಿಜಯರಾಂ

ಸಾವಿರ ತಾರೆಗಳು ಆಕಾಶದಿ ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ
ಸಾವಿರ ತಾರೆಗಳು ಆಕಾಶದಿ ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ

ಬಯಸದ ಸೌಭಾಗ್ಯ ಬದುಕಲಿ ಬಂದಾಯ್ತು ದೊರಕದ ಮಾಣಿಕ್ಯ ಈ ದಿನ ದೊರೆತಾಯ್ತು
ಏನು ಸಂತೋಷ ಏನು ಉಲ್ಲಾಸ ಬದುಕು ಬಂಗಾರವಾಯ್ತು
ಕಿವಿಯಲಿ ಇಂಪಾದ ಬಳೆಗಳ ಸವಿನಾದ ಅನುದಿನ ಹಿತವಾದ ನುಡಿಗಳ ಸಂಗೀತ
ಇನ್ನು ದಿನವೆಲ್ಲ ಮಾತೃ ವಾತ್ಸಲ್ಯ ಪಡೆವ ಹೊಸ ಕಾಲ ಬಂತು
ಅರಳಿದ ಹೂ ಮನಸಿಗೆ ಈಗ ಹೀತವಾಯ್ತು
ಸಾವಿರ ತಾರೆಗಳು ಆಕಾಶದಿ ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ

ಹಿರಿಯರು ಮನಸಾರ ಹರಸುತಲಿರುವಾಗ ನಗುತಲಿ ಈ ಜೋಡಿ ಜೊತೆಯಲಿ ನಿಂತಾಗ
ಇಟ ಈಶ್ವರನೋ ಈಕೆ ಪಾರ್ವತಿಯೋ ಎಂಬ ಸಂದೇಹ ಬಂತು
ಹೀಗೆಯೇ ಕಣ್ತುಂಬ ನೋಡುತಲಿರುವಾಸೇ ಹೀಗೆಯೇ ಬಾಳೆಲ್ಲ ಹಾಡುತಲಿರುವಾಸೆ
ಇಂಥ ಆನಂದ ನಮ್ಮ ಅನುಬಂಧ ಇರಲಿ ಎಂದೆಂದೂ ಹೀಗೆ
ಅರಳಿದ ಈ ಕಣ್ಣಿಗೆ ಈಗ ತಂಪಾಯ್ತು
ಸಾವಿರ ತಾರೆಗಳು ಆಕಾಶದಿ ಸಾವಿರ ದೀಪಗಳು ಈ ಗುಡಿಯಲಿ
ಬೆಳಕನು ತುಂಬುತಿದೆ ಹೊಸ ಬಾಳಿಗೆ ಶುಭವಾಗಲೆನ್ನುತಿದೆ ಹೊಸ ಜೋಡಿಗೆ
ಈ ದಿನದ ಸಡಗರವು ಇರಲಿ ಎಂದೆಂದಿಗೂ
------------------------------------------------------------------------------------------------------------------------- 

No comments:

Post a Comment