ಉಷಾ ಸ್ವಯಂವರ ಚಲನಚಿತ್ರದ ಹಾಡುಗಳು
- ಮುಗಿಯದ ಮೋಹ ತೀರದ ದಾಹ
- ನನಗಾಗಿ ನಿನ್ನ ಚೆಲುವು
- ಇದು ಹೂವಿನ ಹೃದಯ ಇನಿಯ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ
ಆಅಅ.. ಆಆ..ಆಆ..ಆಆಆ.. ಆಆ..ಆ.ಆಆ..ಆಆ..ಆಆ
ಮುಗಿಯದ ಮೋಹ ತೀರದ ದಾಹ ಇರುಳೆಲ್ಲಾ ನಿದ್ದೇ ಇಲ್ಲಾ...
ಮನದಲ್ಲಿ ಶಾಂತಿ ಇಲ್ಲಾ ಈ ನೋವ ತಾಳೇನಲ್ಲಾ.. ರಾಜಾ..ರಾಜಾ... ನನ್ನಾಸೆಯಾ ಪೂರೈಸೆಯಾ...
ಮುಗಿಯದ ಮೋಹ ತೀರದ ದಾಹ ಇರುಳೆಲ್ಲಾ ನಿದ್ದೇ ಇಲ್ಲಾ...
ಮನದಲ್ಲಿ ಶಾಂತಿ ಇಲ್ಲಾ ಈ ನೋವ ತಾಳೇನಲ್ಲಾ.. ರಾಜಾ..ರಾಜಾ... ನನ್ನಾಸೆಯಾ ಪೂರೈಸೆಯಾ...
ಮನವನು ಸೆಳೆದೆ ಮನದಲೀ ಬೆರೆತೇ..
ಮನವನು ಸೆಳೆದೆ ಮನದಲೀ ಬೆರೆತೇ ವನವನು ಕೆಣಕಿ ರಾಜಾ...
ಹೀಗೇಕೇ ದೂರಾಗಿ ನೀ ಓಡಿದೇ ಹ್ಹಾ..
ಹೀಗೇಕೇ ದೂರಾಗಿ ನೀ ಓಡಿದೇ
ಸುಖವನು ಕೊಡುವೇಯಾ ಒಲಿವೆಯಾ
ನನ್ನಾಸೇಯಾ ಪೂರೈಸೆಯಾ...
ಮುಗಿಯದ ಮೋಹ ತೀರದ ದಾಹ ಇರುಳೆಲ್ಲಾ ನಿದ್ದೇ ಇಲ್ಲಾ...
ಮನದಲ್ಲಿ ಶಾಂತಿ ಇಲ್ಲಾ ಈ ನೋವ ತಾಳೇನಲ್ಲಾ.. ರಾಜಾ..ರಾಜಾ... ನನ್ನಾಸೆಯಾ ಪೂರೈಸೆಯಾ...
ಓ.. ಅರಳಿದ ಸೊಗಸೂ ಕುಣಿಯುವ ಮನಸ್ಸೂ..
ಅರಳಿದ ಸೊಗಸೂ ಕುಣಿಯುವ ಮನಸ್ಸೂ..
ಬಯಸುವ ವಯಸ್ಸೂ..ರಾಜಾ....
ಮೈಯಲ್ಲಿ ಮಿಂಚೊಂದು ಓಡಾಡಿದೇ...
ನನ್ನ ಮೈಯಲ್ಲಿ ಮಿಂಚೊಂದು ಓಡಾಡಿದೇ
ವಿರಹವ ಸುಡುವೆಯಾ ಬರುವೆಯಾ
ನನ್ನಾಸೇಯಾ ಪೂರೈಸೆಯಾ...
ಮುಗಿಯದ ಮೋಹ ತೀರದ ದಾಹ ಇರುಳೆಲ್ಲಾ ನಿದ್ದೇ ಇಲ್ಲಾ...
ಮನದಲ್ಲಿ ಶಾಂತಿ ಇಲ್ಲಾ ಈ ನೋವ ತಾಳೇನಲ್ಲಾ.. ರಾಜಾ..ರಾಜಾ... ನನ್ನಾಸೆಯಾ ಪೂರೈಸೆಯಾ...
-----------------------------------------------------------------------
ಉಷಾ ಸ್ವಯಂವರ (೧೯೮೦) - ನನಗಾಗಿ ನಿನ್ನ ಚೆಲುವು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ
ಆ..ಆ.ಆ..ನಿಸಪದಮಗರಿ ಮಗಸರಿನಿದಪ ಪಗಮಾ..
ನನಗಾಗಿ ನಿನ್ನ ಚೆಲುವೂ..
ನನಗಾಗಿ ನಿನ್ನ ಚೆಲುವು ನನಗಾಗಿಯೇ ನಿನ್ನ ಒಲವೂ..
ನಿಜ ನುಡಿಯೇ ತಡವೇಕೆ ಹೇಳೇಯಾ..
ನನಗಾಗಿ ನಿನ್ನ ಚೆಲುವು ನನಗಾಗಿಯೇ ನಿನ್ನ ಒಲವೂ..
ನಿಜ ನುಡಿಯೇ ತಡವೇಕೆ ಹೇಳೇಯಾ..
ನಾ ನಿನ್ನ ನೋಡಿದಾಗ ಆ ನೋಟ ಕೂಡಿದಾಗ ಜಯ
ಈ ಜೀವ ಹಾರಿ ಹೋಗಿ ನಿನ್ನಲ್ಲಿ ಸೇರಿದಂತೆ..
ಅನುರಾಗ ಮೂಡಿದಂತೇ ಹೊಸ ಹಾಡು ಹಾಡಿದಂತೇ
ಆನಂದವೇನೋ.. ಉಲ್ಲಾಸವೇನೋ
ನನಗಾಗಿ ನಿನ್ನ ಚೆಲುವು ನನಗಾಗಿಯೇ ನಿನ್ನ ಒಲವೂ..
ನಿಜ ನುಡಿಯೇ ತಡವೇಕೆ ಹೇಳೇಯಾ..
ನನಗಾಗಿ ನಿನ್ನ ಚೆಲುವೂ...
ಬಂಗಾರದ ಆಸೆಯಿಲ್ಲಾ ಬೇರೇನೂ ಕೇಳಲಿಲ್ಲಾ..
ನೀ ನನ್ನ ಸೇರು ಸಾಕೂ ಇನ್ನೇನೂ ಆಸೆ ಇಲ್ಲಾ..
ನಿನ್ನನ್ನೂ ಕಂಡ ಕಣ್ಣು ಇನ್ನೇನೂ ನೋಡೋದಲ್ಲಾ..
ನಾ ಕಾಲವೆಲ್ಲಾ.. ಕಾದಿರುವೇ ನಲ್ಲೇ..
ನನಗಾಗಿ ನಿನ್ನ ಚೆಲುವೂ..ನನಗಾಗಿಯೇ ನಿನ್ನ ಒಲವೂ
ನಿಜ ನುಡಿಯೇ ತಡವೇಕೆ ಹೇಳೇಯಾ...
ನನಗಾಗಿ ನಿನ್ನ ಚೆಲುವು...
-----------------------------------------------------------------------
ಉಷಾ ಸ್ವಯಂವರ (೧೯೮೦) - ಇದು ಹೂವಿನ ಹೃದಯ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ
ಅಹ್ಹ್..ಆ..ಆ..
ಇದು ಹೂವಿನ ಹೃದಯ ಇನಿಯಾ ನೋಯದೇ ಕಾಡದೇ
ನಿಧಾನಿಸೂ ನಿಧಾನಿಸೂ ಹೀಗೆ ಕಾಡದಿರೂ ಕೊಲ್ಲದಿರೂ ಇದು
ಹೂವಿನ ಹೃದಯ ಇನಿಯಾ ನೋಯದೇ ಕಾಡದೇ
ನಿಧಾನಿಸೂ ನಿಧಾನಿಸೂ ಹೀಗೆ ಕಾಡದಿರೂ ಕೊಲ್ಲದಿರೂ
ರೋಷದಿಂದ ಕೊರಳ ಹಿಸುಕಿ ಹಾಡೆಂದರೇ..
ಹಾಡುವುದೇ..ನಲಿಯುವುದೇ..ಕೋಗಿಲೇಯೂ... ಆ..ಆಆ..
ರೋಷದಿಂದ ಕೊರಳ ಹಿಸುಕಿ ಹಾಡೆಂದರೇ..
ಹಾಡುವುದೇ..ನಲಿಯುವುದೇ..ಕೋಗಿಲೇಯೂ...
ಏತಕೇ ಈ ಬಗೆ ನಿಧಾನಿಸೂ..ವಿಚಾರಿಸೂ ಹೆಣ್ಣಾ...
ಕೊಲ್ಲದಿರೂ... ಕೊಲ್ಲದಿರೂ..ಇದು
ಹೂವಿನ ಹೃದಯ ಇನಿಯಾ ನೋಯದೇ ಕಾಡದೇ
ನಿಧಾನಿಸೂ ನಿಧಾನಿಸೂ ಹೀಗೆ ಕಾಡದಿರೂ ಕೊಲ್ಲದಿರೂ
ಬಿಸಿಲಿನಲ್ಲಿ ನಿಂತ ಲತೆಯೂ ನಾನಾದೆನೂ..
ಕೊರಗಿದೆನೂ.. ಬಳಲಿದೆನೂ ಸಡುಗಿದೆನೂ..ಆ..ಆಹ್ಹಾ..ಆ..
ಬಿಸಿಲಿನಲ್ಲಿ ನಿಂತ ಲತೆಯೂ ನಾನಾದೆನೂ..
ಕೊರಗಿದೆನೂ.. ಬಳಲಿದೆನೂ ಸಡುಗಿದೆನೂ...
ವೇದನೇ ತಾಳನೇ..ವಿನೋದವೂ..ವಿಷಾದವೋ
ಏನೋ ಕಾಣೆನೂ ನಾ ಕಾಣೆನೂ ನಾ... ಇದು
ಹೂವಿನ ಹೃದಯ ಇನಿಯಾ ನೋಯದೇ ಕಾಡದೇ
ನಿಧಾನಿಸೂ ನಿಧಾನಿಸೂ ಹೀಗೆ ಕಾಡದಿರೂ ಕೊಲ್ಲದಿರೂ
-------------------------------------------------------------------
No comments:
Post a Comment