ಉಸಿರೇ ಚಲನ ಚಿತ್ರದ ಹಾಡುಗಳು
- ಚಂದ್ರಿ ನೀನ್ ಚೆಂದಾ ಚೆಂದಾ ಹೆಸರೇ ಚೆಂದಗು ಚೆಂದಾ
- ಚಿಲಿಪಿಲಿಯೆನ್ನೋ ಚಿಲಿಪಿಲಿಗಳ ಗರಿಗೆದರಿಸಿ ಎದೆಯಲಿ
- ಮನುಜನು ಅಲೆದಾ ಮರುಭೂಮಿ ಪ್ರೇಮಾ ಎನ್ನೋ ಭೂಮಿ
- ಮುತ್ತು ಹೇಳೋ ಮಾತಿದು ಮನ್ಸು ಕೊಟ್ಟು ಕೇಳೋ ಜಾಣ
- ಪ್ರೀತಿಸುವೆ ಪ್ರೀತಿಸುವಾ ಬಾ ಪ್ರೀತಿಯ ಜೀವವಿದು
- ಜನಪದ ಅನ್ನೋದು ನಮಗೂ ಜೀವ
ಸಂಗೀತ : ಇಳಯರಾಜ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕೆ.ಜೆ.ಏಸುದಾಸ್, ಕೋರಸ್
ಕೋರಸ್ : ಬಾರಮ್ಮಾ ಮಹಾಲಕ್ಷ್ಮಿ ತಾಯೇ ಈ ಮನೆಯ ಸಿರಿ ಬಂಗಾರ ನಿಧಿಯೇ
ಕಮಲ ಮುಖಿ ನೋಡಿದರೇ ಹಾಲಿನ ದೇವತೆ ಇಳಿದು ಬಂದಂತೇ
ಜೊತೆ ಸೇರಿ ಹಾಡುತಿದೆ ಸಂತೋಷ ... ಒಹೋ.. ಓಹೋಹೋ ಹೊಯ್
ಆಆಆ... ಆಆಆ... ಆಆಆ ...
ಗಂಡು : ಚಂದ್ರಿ ನಿನ್ ಚೆಂದ ಚೆಂದಾ ಹೆಸರೇ ಚೆಂದಗು ಚೆಂದಾ ಹೊಯ್
ಚಂದ್ರಿ ನಿನ್ ಚೆಂದ ಚೆಂದಾ ಹೆಸರೇ ಚೆಂದಗು ಚೆಂದಾ ಹೊಯ್
ಚಂದ್ರಿ ನಿನ್ ಚೆಂದ ಚೆಂದಾ ದಸರಾ ಬೊಂಬೆಗೂ ಚೆಂದಾ ಹೊಯ್
ಆ ಬ್ರಹ್ಮನೇ ಮೆಚ್ಚಿದನು ಈ ಸುಂದರಿ ಸೃಷ್ಠಿಯನು
ರವಿವರ್ಮನೇ ಮೆಚ್ಚಿದನು ಇಂಥ ಜೀವನ ಚೈತ್ರವನು ನಗುವ ಚೆಲುವ ಹುಣ್ಣಿಮೆಯೇ...
ಚಂದ್ರೀ ... ಓಓಓಓಓಓಓ ... ಸುಂದ್ರಿ....... ಓಓಓಓಓ
ಚಂದ್ರಿ ನಿನ್ ಚೆಂದ ಚೆಂದಾ ಹೆಸರೇ ಚೆಂದಗು ಚೆಂದಾ ಹೊಯ್
ಚಂದ್ರಿ ನಿನ್ ಚೆಂದ ಚೆಂದಾ ದಸರಾ ಬೊಂಬೆಗೂ ಚೆಂದಾ ಹೊಯ್
ಗಂಡು : ಚಲಿಸೋ ತಣಿಸೋ ಮೋಡಗಳಲಿ ಈ ಬಣ್ಣದ ನವಿಲಿನ ಪ್ರತಿ ಹೆಜ್ಜೆಯ ಗುರುತಿದೆ
ಅರಳೋ ಚಿಗುರೋ ಎಲೆಗಳಲಿ ಈ ಗಾನದ ಕೋಗಿಲೆಯ ಹೊಸ ಲಜ್ಜೆಯ ಗುರುತಿದೆ
ಗಾಳಿಗೆ ಕಣ್ಣು ಕಟ್ಟಿ ಮಾತಾಡೋ ಗಿಣಿ ಇವಳೂ ಮಿಂಚಿಗೆ ಬೆನ್ನು ತಟ್ಟಿ ಕುಣಿಯೋ ಜಿಂಕೆ ಇವಳೂ
ಬಾನಾ ಚಕ್ಕುಲಿ ಚಂದ್ರನ ಚೊಚ್ಚಲ ವರವಿದು ನಮ್ಮಾ ಹೆಣ್ಣಿಗೆ ಹೆಣ್ತನ ಹುಟ್ಟಿದ ದಿನವಿದೂ
ಚಂದ್ರೀ ... ಓಓಓಓಓಓಓ ... ಸುಂದ್ರಿ....... ಓಓಓಓಓ
ಚಂದ್ರಿ ನಿನ್ ಚೆಂದ ಚೆಂದಾ ಹೆಸರೇ ಚೆಂದಗು ಚೆಂದಾ ಹೊಯ್
ಚಂದ್ರಿ ನಿನ್ ಚೆಂದ ಚೆಂದಾ ದಸರಾ ಬೊಂಬೆಗೂ ಚೆಂದಾ ಹೊಯ್
ಗಂಡು : ನಗುವೇ ನಮ್ಮಿ ಮಾಳಿಗೆಯಲ್ಲಿ ನಮ್ಮ ಕಾಲ್ಗಳು ಇಟ್ಟಕಡೆ ಕೋಟಿ ಹಾಲುಗನಸು ಇದೆ
ಮಗುವಾ ಮನಸೇ ನಮ್ಮೆದೆಯಲಿ ಇಲ್ಲಿ ಕೈಗಳೂ ಇಟ್ಟ ಕಡೆ ದಿನ ಒಲವ ಹಬ್ಬವಿದೆ
ಋಣವು ಇದ್ದಾ ಕಡೆ ದೇವರು ಮನುಜನಂಗೆ ಗುಣವು ಗೆದ್ದಾ ಕಡೆ ಮನುಜ ದೇವರಂಗೆ
ಪ್ರೀತಿ ಅನ್ನವನಿರಿದ ಧಣಿಯ ಮನೆಯಲಿ ಉಸಿರೂ .. ಉಸಿರೂ ಇರುವವರೆಗೂ ದಣಿಯಲಿ
ಚಂದ್ರೀ ... ಓಓಓಓಓಓಓ ... ಸುಂದ್ರಿ....... ಓಓಓಓಓ
ಚಂದ್ರಿ ನಿನ್ ಚೆಂದ ಚೆಂದಾ ಹೆಸರೇ ಚೆಂದಗು ಚೆಂದಾ ಹೊಯ್
ಚಂದ್ರಿ ನಿನ್ ಚೆಂದ ಚೆಂದಾ ದಸರಾ ಬೊಂಬೆಗೂ ಚೆಂದಾ ಹೊಯ್
ಆ ಬ್ರಹ್ಮನೇ ಮೆಚ್ಚಿದನು ಈ ಸುಂದರಿ ಸೃಷ್ಠಿಯನು
ರವಿವರ್ಮನೇ ಮೆಚ್ಚಿದನು ಇಂಥ ಜೀವನ ಚೈತ್ರವನು ನಗುವ ಚೆಲುವ ಹುಣ್ಣಿಮೆಯೇ...
ಚಂದ್ರೀ ... ಓಓಓಓಓಓಓ ... ಸುಂದ್ರಿ....... ಓಓಓಓಓ
ಚಂದ್ರಿ ನಿನ್ ಚೆಂದ ಚೆಂದಾ ಹೆಸರೇ ಚೆಂದಗು ಚೆಂದಾ ಹೊಯ್
ಚಂದ್ರಿ ನಿನ್ ಚೆಂದ ಚೆಂದಾ ದಸರಾ ಬೊಂಬೆಗೂ ಚೆಂದಾ ಹೊಯ್
-------------------------------------------------------------------------------------------------------------------------
ಉಸಿರೇ ( ೨೦೦೧) - ಮನುಜನು ಅಲೆದಾ ಮರುಭೂಮಿ ಪ್ರೇಮಾ ಎನ್ನೋ ಭೂಮಿ
ಸಂಗೀತ : ಇಳಯರಾಜ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮನು
ಮನುಜನು ಅಲೆದಾ ಮರಭೂಮಿ ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ ಪ್ರೇಮಾನೇ ಮರಭೂಮಿ
ಅಲೆಅಲೆದೂ ಹುಡುಕಿದರೂ ದಾರಿ ಎಂಬುದೆಲ್ಲಿ
ನನ್ನೆದೆಯಾ ದಾಹವಿದು ಎಲ್ಲಿ ನೀರು ಎಲ್ಲಿ
ಪ್ರೇಮರಾಜ್ಯ ನ್ಯಾಯವಿದೇನಾ ಪ್ರೇಮಿಗಳೇ ಹೇಳಿ
ಒಲವೇ... ಒಲವೇ... ನೀ ದೂರಾ ಹೋದೆ
ನಿನ್ನ ಘೋರ ಬೆಂಕಿ ನನ್ನಾ ಬೇಯಿಸದೇಕೆ
ಬೆಂಕಿಯಲ್ಲೂ ನೀರು ಇದೆ ಅನ್ನೋದು ಬಲ್ಲೋರ ಮಾತು
ನೀರೇ ಇಲ್ಲಿ ಬೆಂಕಿಯಾಗಿ ಸುಡೋದೇ ಸತ್ಯ ಅಂತಾಯ್ತು
ಮುಳ್ಳಲ್ಲಿಯೂ ಹೂವು ತರೋ ಪ್ರೀತಿಗೆ ಸಾಕ್ಷಿನೇ ಭೂಮಿ
ಹೂವೇ ಇಲ್ಲಿ ಮುಳ್ಳಾದರೇ ಯಾರಲ್ಲಿ ಕೇಳೋದು ಸ್ವಾಮಿ
ಹಿಮಾಲಯದ ಎದೆಯಾ ಹುಡುಕಿದರೇ ಪ್ರೀತಿ ಮುಗಿಲ ದಾಟಿ ಏನೋ ಹೇಳುತಿದೆ
ಮುಗಿಲಿನಿಂದ ಬಾಗಿ ನೋಡಿದರೇ ಭೂಮಿ ಪ್ರೀತಿ ಎನ್ನೋ ಭೂಕಂಪ ಮಾಡುತಿದೆ
ಓ.. ಒಲವೇ... ಒಲವೇ.. ನೀ ಭ್ರಮೇಯಾ ಲೋಕ ಈ ಭೂಮಿ ಮೇಲೆ ಬಿಸಿಲ ಸುಡುವೇ ಪ್ರೇಮಾ
ಮನುಜನು ಅಲೆದಾ ಮರಭೂಮಿ ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ ಪ್ರೇಮಾನೇ ಮರಭೂಮಿ
ಭಾವ ಬಿಟ್ಟು ಗೀತೆ ಇಲ್ಲ ನಾ ಒಂಟಿ ಗೀತೆಯು ಈಗ
ಶಿಲೆಗಳು ಜೀವಾ ಬಂದು ಓಡಾಡೋ ಕಥೆಯು ಅಂದು
ಜೀವ ಇದ್ದು ಶಿಲೆ ತರ ಆಗ ಹೊದೇ ನಾ ಯಾಕೆ ಇಂದು
ಭೂಗೋಳದ ಆಚೆ ಹಾರಿದರೂ ಪ್ರೀತಿ ಕಡಲ ಆಳಕ್ಕಿಳಿದು ಕೂರಿಸಿದೆ
ಕಡಲ ಅಳೆದು ನೋಡಿದರೇ ಅಲ್ಲೂ.. ಪ್ರೀತಿ ಚಂದಮಾರುತವಾಡುತಿದೆ
ಓ.. ಒಲವೇ ಒಲವೇ ನೀ ಕೊಲ್ಲುವ ನರಕ ಈ ಭೂಮಿ ಮೇಲೆ ಗಗನ ಕುಸುಮ ಪ್ರೇಮ
ಮನುಜನು ಅಲೆದಾ ಮರಭೂಮಿ ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ ಪ್ರೇಮಾನೇ ಮರಭೂಮಿ
ಅಲೆಅಲೆದೂ ಹುಡುಕಿದರೂ ದಾರಿ ಎಂಬುದೆಲ್ಲಿ
ನನ್ನೆದೆಯಾ ದಾಹವಿದು ಎಲ್ಲಿ ನೀರು ಎಲ್ಲಿ
ಪ್ರೇಮರಾಜ್ಯ ನ್ಯಾಯವಿದೇನಾ ಪ್ರೇಮಿಗಳೇ ಹೇಳಿ
ಒಲವೇ... ಒಲವೇ... ನೀ ದೂರಾ ಹೋದೆ
ನಿನ್ನ ಘೋರ ಬೆಂಕಿ ನನ್ನಾ ಬೇಯಿಸದೇಕೆ
ಮನುಜನು ಅಲೆದಾ ಮರಭೂಮಿ ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ ಪ್ರೇಮಾನೇ ಮರಭೂಮಿ
-------------------------------------------------------------------------------------------------------------------------
ಉಸಿರೇ ( ೨೦೦೧) - ಚಿಲಿಪಿಲಿಯೆನ್ನೋ ಚಿಲಿಪಿಲಿಗಳ ಗರಿಗೆದರಿಸಿ ಎದೆಯಲಿ
ಸಂಗೀತ : ಇಳಯರಾಜ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಚಿತ್ರಾ
ಚಿಲಿಪಿಲಿಯೆನ್ನೋ ಚಿಲಿಪಿಲಿಗಳೇ ಗರಿಗೆದರಿಸಿ ಎದೆಯಲಿ ಪಿಳಿ ಪಿಳಿಯೆನ್ನೋ ಪಿಳಿಪಿಳಿಗಳೇ
ಎದೆ ಅರಳಿಸಿ ಒಲವಲಿ ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ ಇಲ್ಲಿ ಬದುಕು ಇರುವ ವರೆಗೂ ಬದುಕು
ಎಳೆ ಮನಸಲಿ ಎಳೆ ಎಳೆ ಇದೆ
ಚಿಲಿಪಿಲಿಯೆನ್ನೋ ಚಿಲಿಪಿಲಿಗಳೇ ಗರಿಗೆದರಿಸಿ ಎದೆಯಲಿ ಪಿಳಿ ಪಿಳಿಯೆನ್ನೋ ಪಿಳಿಪಿಳಿಗಳೇ
ಓಹೋಹೋ ... ಓಹೋಹೋ
ಜುಳು ಜುಳು ಜುಳು ಹರಿಯುವ ಝರಿ ಝರಿಗಳ ಎದೆ ತಣಿಸುವೆ
ಕಿಲಕಿಲ ನಗೋ ಹಸಿ ಪೈರಿಗೆ ಹಸಿರಿನ ನಗೆ ಇರಿಸುವೆ
ಬೆಳದಿಂಗಳನ್ನು ಬೆಳಗಿನ ತಂಕ ಜೊತೆಗಿರಲಿಂದು ತಿಳಿಸುವೆ
ಹಿಮ ಹನಿಗಳ ಓಲಗದಲಿ ಗಗನಕೆ ಬಣ್ಣ ಬಳಿಯುವೆ
ಉರಿಯೋ ಸೂರ್ಯನಾ ಮುಡಿಗೆ ಕೊಡೆಯ ಹಿಡಿದು ಬರುವೇ
ಮಿನುಗುತಾರೆಯ ಕರೆದು ಜಡೆಯ ಹೆಣೆದು ಬಿಡುವೇ
ಜೊತೆ ಇರಲೂ ನೀ ದಿನ ಕುಣಿಸಿ ಬಿಡುವೆ ಜಗವ ನಾ
ಜನುಮ ಜನುಮ ಬೆರೆತು ಇರಲು ತಾಯ್ ಮಡಿಲಲಿ ಜನಿಸಿರುವೆನು
ಚಿಲಿಪಿಲಿಯೆನ್ನೋ ಚಿಲಿಪಿಲಿಗಳೇ ಗರಿಗೆದರಿಸಿ ಎದೆಯಲಿ ಪಿಳಿ ಪಿಳಿಯೆನ್ನೋ ಪಿಳಿಪಿಳಿಗಳೇ
ಓಹೋಹೋ ... ಓಹೋಹೋ
ನೆನಪುಗಳ ಕನಸುಗಳಲಿ ತಿರು ತಿರುಗುವ ಚೆಲುವಿದೆ
ಅಪರೂಪಗಳ ಅನುಬಂಧದಲಿ ನನ್ನ ಮನಸಿನ ಕಥೆ ಇದೆ
ಪ್ರತಿ ನಡೆಯಲಿ ಪ್ರತಿ ನುಡಿಯಲಿ ಸ್ವರ ಲಯ ಜೊತೆ ಜೊತೆ ಇದೆ
ಮುಗಿಲ ಎಲ್ಲೇ ಗಡಿ ದಾಟಿ ಉದಯ ಚುಂಬಿಸಿರುವೇ
ಸ್ವರ್ಗ ಸೀಮೆ ಗಡಿ ದಾಟಿ ಯೌವ್ವನ ಬಿಂಬಿಸಿರುವೇ
ಜನುಮ ಇರುವುದೊಂದೇ ಬದುಕು ಇರುವುದೊಂದೇ
ಒಲವು ಇರುವುದೆಂದು ಒಂದೇ ನನ್ನ ಹೆಸರಲಿ ನಿನ್ನ ಉಸಿರಲಿ
ಚಿಲಿಪಿಲಿಯೆನ್ನೋ ಚಿಲಿಪಿಲಿಗಳೇ ಗರಿಗೆದರಿಸಿ ಎದೆಯಲಿ ಪಿಳಿ ಪಿಳಿಯೆನ್ನೋ ಪಿಳಿಪಿಳಿಗಳೇ
ಎದೆ ಅರಳಿಸಿ ಒಲವಲಿ ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ ಇಲ್ಲಿ ಬದುಕು ಇರುವ ವರೆಗೂ ಬದುಕು
ಎಳೆ ಮನಸಲಿ ಎಳೆ ಎಳೆ ಇದೆ
ಚಿಲಿಪಿಲಿಯೆನ್ನೋ ಚಿಲಿಪಿಲಿಗಳೇ ಗರಿಗೆದರಿಸಿ ಎದೆಯಲಿ ಪಿಳಿ ಪಿಳಿಯೆನ್ನೋ ಪಿಳಿಪಿಳಿಗಳೇ
-------------------------------------------------------------------------------------------------------------------------
ಉಸಿರೇ ( ೨೦೦೧) - ಮುತ್ತು ಹೇಳೋ ಮಾತಿದು ಮನ್ಸು ಕೊಟ್ಟು ಕೇಳೋ ಜಾಣ
ಸಂಗೀತ : ಇಳಯರಾಜ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ, ಕೋರಸ್
ಗಂಡು : ಮುತ್ತು ಹೇಳೋ ಮಾತಿದು ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ರಾಮ ರಾಜ್ಯವೇ ನಡೆಯಲಿ ರಾವಣನ ರಾಜ್ಯವೇ ನಡೆಯಲಿ
ನನ್ನತನ ನನ್ನಲ್ಲಂಟೂ ನಂಗೇನು ಬೇಕಿಲ್ಲ
ಮುತ್ತು ಹೇಳೋ ಮಾತಿದು ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ಕೋರಸ್ : ಸುವ್ವಿ ಸುವ್ವಮ್ಮ ಸುವ್ವಮ್ಮ ಲಾಲಿ ಕೋಲು ಕೋಲೆನ್ನ ಕೋಲೆನ್ನ ಕೋಲೆ
ಗಂಡು : ಹಾರಾಡೋ ಹಕ್ಕಿಗಳು ದುಡಿಯಾಂಗಿಲ್ಲಾ ಸೇರ್ಸಾಂಗಿಲ್ಲ ಹಂಗಾರು ಸಂತೋಷಕ್ಕೇನ ಕಮ್ಮಿ
ಕಾಡಲಲ್ಲಿ ಹೂಗಳಿವೆ ಕಾಯೋದಿಕ್ಕೆ ಯಾರ ಹೋದರೂ ಬಣ್ಣ ಪರಿಮಳ ಏನ್ ಕಮ್ಮಿ
ಬೇಕು ಬೇಕು ಅನ್ನೋನೇ ಬಡವರಿಗೂ ಬಡವ
ಸಾಕೂ ಸಾಕೂ ಅನ್ನೋನೇ ಸಾವಿರದ ಸಾವಕಾರ
ನೆನ್ನೆಯಾ ಕಂತೆಯಾ ಹೊಯ್ ನಾಳೆಯ ಚಿಂತೆಯಾ
ಯಾಕಯ್ಯಾ.. ಯಾಕಯ್ಯಾ.. ಇಂದೀಗ ನೋಡಯ್ಯ ನೋಡಯ್ಯ ಮನಸ್ಸಿದ್ದರೇ ಮಾರ್ಗ ಉಂಟು
ಮುತ್ತು ಹೇಳೋ ಮಾತಿದು ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ಗಂಡು : ತಿರುಗೋ ಭೂಮಿ ತಿರುಗುತ್ತಿದೇ ಕ್ಷಣವೂ ಕೂಡ ನಿಲ್ಲೋದಿಲ್ಲ ಹಂಗಾದ್ರೂ ವಿಶ್ರಾಂತಿ ಅದಕಿಲ್ಲ
ದುಡಿದಂಗೆಲ್ಲಾ ಫಲವು ಇದೆ ನಿನ್ನಾ ಪಾಲು ನಿನಗೇ ಇದೆ ಸಾಕಷ್ಟು ಸಿಕ್ಕರೂ ಬೇಕಾ ಎಲ್ಲ
ಬರುವಾಗ ಬರಿಗೈಲಿ ಹೋಗೋದು ಬರಿಗೈಲಿ ಇರುವಾಗ ಬೇಡದಿರೋ ಅತಿಯಾಸೇ ಯಾಕಿಲ್ಲಿ
ಬಿತ್ತೋದೆ ಬೆಳೆಯುವೆ ಹೇ... ಬೆಳೆದಿದ್ದೆ ತಿನ್ನುವೇ... ತಿನ್ನವೇ ... ತಿನ್ನುವೇ ...
ಲೋಕಾನ ಪ್ರಿತಿಸೂ ಗೆಲ್ಲುವೆ ಚಿಪ್ಪಿಲ್ಲದಾ ಮುತ್ತು ಇದು ಮುತ್ತು ಮಾತು ಮರೆಯಬೇಡ
ಮುತ್ತು ಹೇಳೋ ಮಾತಿದು ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ರಾಮ ರಾಜ್ಯವೇ ನಡೆಯಲಿ ರಾವಣನ ರಾಜ್ಯವೇ ನಡೆಯಲಿ
ನನ್ನತನ ನನ್ನಲ್ಲಂಟೂ ನಂಗೇನು ಬೇಕಿಲ್ಲ
ಮುತ್ತು ಹೇಳೋ ಮಾತಿದು ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ಕೋರಸ್ : ಮುತ್ತು ಮಾತೆಲ್ಲ ತಪ್ಪೋದಿಲ್ಲ ಸೇರೋ ಬಾರೋ
-------------------------------------------------------------------------------------------------------------------------
ಉಸಿರೇ ( ೨೦೦೧) - ಪ್ರೀತಿಸುವೆ ಪ್ರೀತಿಸುವಾ ಬಾ ಪ್ರೀತಿಯ ಜೀವವಿದು
ಸಂಗೀತ : ಇಳಯರಾಜ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕೆ.ಜೆ.ಏಸುದಾಸ್, ಭಾವತಾರಿಣಿ
ಹೆಣ್ಣು : ಪ್ರೀತಿಸುವೆ ಪ್ರೀತಿಸುವಾ ಬಾ ಪ್ರೀತಿಯ ಜೀವವಿದು
ಓ.. ಹೃದಯ ಹೃದಯಕೆ ಬಾ ಜೀವದ ಪ್ರೀತಿ ಇದು
ಗಂಡು : ನಿಂದೂ ಕನಸೂ .. ಹೆಣ್ಣು : ನೀನೇ ಕನಸೂ ..
ಗಂಡು : ಕನಸೆಂದು ಬರಿ ಕನಸು ಹೆಣ್ಣು : ಮಾತಾಡು ಬಾ ಉಸಿರೇ
ಗಂಡು : ಉಸಿರಲ್ಲೇ ಉಸಿರಾಡೋ ಪ್ರೀತಿ ಕಥೆ ಬೇರೆ
ಗಂಡು : ಊರ ಕಾಯೋ ರಾಣಿ ನೀನು ಸೇವಕ ನಾನಿಲ್ಲಿ
ಹೆಣ್ಣು : ಮನಸು ಕಾಯೋ ಮುತ್ತು ನೀನು ನೆರಳು ನಾನಿಲ್ಲಿ
ಗಂಡು : ಕಡಲಾಳದಾ ಮುತ್ತು ಇದು ಬಾನಾ ಸೇರಲಾಗದು
ಹೆಣ್ಣು : ಮಾತು ಕೊಡು ಗಂಡು : ಮರೆತು ಬಿಡು
ಹೆಣ್ಣು : ಜೀವ ನೀನೇ ನನ್ನಾಣೆ ಜನುಮಗಳ ನಂಟು ಇದು ಬ್ರಹ್ಮನ ಗಂಟು ಇದು
ಗಂಡು : ಬ್ರಹ್ಮನಿಗೆ ಚಿಂತೆ ಇಲ್ಲ ನಿನಗೆ ಏಕೆ ಅದು
ಹೆಣ್ಣು : ಜಾತಿ ಗೀತಿ ಅನ್ನೋ ಮಾತು ಪ್ರೀತಿಗೆ ಶಾಪ
ಗಂಡು : ಬಡವನ ಪಾಲಿಗೆ ಅದುವೇ ದೀಪ
ಹೆಣ್ಣು : ಆಕಾಶದಾ ಆ ಚಂದ್ರನ ಬಿಂಬಕೆ ನೀ ಗುರುತು
ಗಂಡು : ಆಸೆ ಬಿಡು ಹೆಣ್ಣು : ಮನಸು ಕೊಡು
ಗಂಡು : ಮನಸಿಲ್ಲ ಮಾತಿಲ್ಲ
ಹೆಣ್ಣು : ಪ್ರೀತಿಸುವೆ ... ಪ್ರೀತಿಸುವೆ ಬಾ ಪ್ರೀತಿಯ ಮೇಲಾಣೆ
ಗಂಡು : ಮರೆಯುವುದು ಪ್ರೀತಿಸುವ ಕಲೆಯು ಗೊತ್ತೇನೇ
ಹೆಣ್ಣು : ಮರೆತೋನು ಮರೆಯೋಲ್ಲ ಗಂಡು : ಮಾತಾಡದು ಉಸಿರೇ
ಹೆಣ್ಣು : ಪ್ರೀತಿಸುವೆ ... ಪ್ರೀತಿಸು ಬಾ ಪ್ರೀತಿಯ ಜೀವವಿದು
ಗಂಡು : ಮರೆಯುವುದು ಪ್ರೀತಿಸುವ ಕಲೆಯು ಗೊತ್ತೇನೇ ..
-------------------------------------------------------------------------------------------------------------------------
ಉಸಿರೇ ( ೨೦೦೧) - ಜನಪದ ಅನ್ನೋದು ನಮಗೂ ಜೀವ
ಸಂಗೀತ : ಇಳಯರಾಜ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ, ಚಿತ್ರಾ, ಕೋರಸ್
ಗಂಡು : ಕೆಸರು ಗದ್ದೆಯ ಕೆದಕಿದಾಗ ನೀರು ಉಕ್ಕಿತು.. ಉಕ್ಕಿತು.. ಉಕ್ಕಿತು
ಕೋರಸ್ : ಆಹ್ ನೀರು ಉಕ್ಕಿತು ಉಕ್ಕಿತು.. ಆಮೇಲೆ
ಗಂಡು : ಉಕ್ಕಿದ ನೀರ ಒಳಗಿನಿಂದ ಸೀಗಡಿ ಮೀನು ಎಗರಿತು
ಕೋರಸ್ : ಆಹ್ ಮೀನು ಎಗರಿತು ಸೀಗಡಿ ಮೀನು ಎಗರಿತು ಆಮೇಲೇ ..
ಗಂಡು : ಸೀಗಡಿ ಮೀನು ಚಿಂತಾಮಣಿಯ ರವಿಕೆಯೊಳಗೆ ಬಿದ್ದಿತು
ಕೋರಸ್ : ಆಹ್ ಬಿದ್ದಿತು ಬಿದ್ದಿತು ಬಿದ್ದಿತು ಆಹ್ ಬಿದ್ದಿತು ಬಿದ್ದಿತು ಬಿದ್ದಿತು ಆಮೇಲೆ
ಗಂಡು : ಕೊಂಡಿ ಇಲ್ಲದೇ ... ಗಾಳವಿಲ್ಲದೇ ..
ಕೊಂಡಿ ಇಲ್ಲದೇ ... ಗಾಳವಿಲ್ಲದೇ ಜಾಣ ನಕ್ಕ ಈ ರವಿಕೆ ಕೋರಸ್ : ರವಿಕೆಗೆ
ಗಂಡು : ತಂದಾನ ತಂದಾನ ಹೊಯ್ನ್ ಹೊಯ್ಯ್ ತಂದಾ
ಹೆಣ್ಣು : ತಾನನನ್ನಾ ತನ್ನನ್ನಾನ್ನಾ ನಾ ನಾ ತಾನನನ್ನಾ ತನ್ನನ್ನಾನ್ನಾ ನಾ ನಾ
ನಾನಾ ನನ್ನನಾ .. ನಾನಾ ನನ್ನನಾ ..
ಜನಪದ ಅನ್ನೋದು ನಮ್ಮಾ ಜೀವಾ ಪದ ಹೇಳೋದು ನನ್ನೆದೇ ಒಲವಾ
ಮಾತಿಗೆ ಮನಸನ್ನಾ ನೀಡೋದು ಒಗಟು ಬರೆಯುವೆ ನಿಜವಾದ ಹಾಡು
ಬಾಷೇಗೆ ಹೃದಯಾನ ಬರೆಯೋದು ಒಗಟು ಬರೆಯುವೆ ನಿಜವಾದ ಹಾಡು
ಕೋರಸ್ : ಗೀಗೀಯ ಗೀಗೀಯ ಗಾಗೀಯ ಗರಿ ಗಾಗಿಯ ಗಾಗಿಯ ಗಾಗಿಯ
ಗಂಡು : ನನನ ನಾನನ್ನನಾ ... ನನನ ನಾನನ್ನನಾ ...
ಜನಪದ ಅನ್ನೋದು ನಮಗೂ ಜೀವ ಪದ ಪದ ಬಿಡಿಸಿದರೆ ಮಲ್ಲೆ ಹೂವ
ಗಂಡು : ಮನಸಿನ ಮಾತನ್ನ ಹಾಡೋದೇ ಒಗಟು ಹಾಡಲು ಶುರುಮಾಡು ಹಾಡು
ಹೃದಯದ ಬಾಷೇನ ಬಿಡಿಸೋದೇ ಒಗಟು ಬಿಡಿಸಲು ಶುರುಮಾಡು ಹಾಡು
ಅಂಗೈಲಿ ಜೇನುಂಟು ಸವಿ ಸವಿ ಸವಿಯುಂಟು ಸವಿದರೆ ತಪ್ಪೇನು ಜಾಣ
ಕೋರಸ್ : ಧಿನಕಿಟ ಧಿನಕಿಟ ಧೀಮ್ ಧೀಮ್ .. ಧಿನಕಿಟ ಧಿನಕಿಟ ಧೀಮ್ ಧೀಮ್
ಗಂಡು : ಹುಣ್ಣಿಮೆ ಕಂಡಾಗ ಉಕ್ಕೋ ಉಕ್ಕೋ ಅಲೆಗಳ ಹಿಡಿಯೋಕೆ ಸಾಧ್ಯನಾ ಮೈನಾ
ಕೋರಸ್ : ಧಿನಕಿಟ ಧಿನಕಿಟ ಧೀಮ್ ಧೀಮ್ .. ಧಿನಕಿಟ ಧಿನಕಿಟ ಧೀಮ್ ಧೀಮ್
ಹೆಣ್ಣು : ಹಾಯಾಗಿದೆ ಬಾನಲ್ಲಿ ನೋಡೇರಡು ಮುದ್ದು ಮರಿ
ಗಂಡು : ಹಣೆಬರಹ ಇಲ್ದೇನೆ ನಡೆಯುತ್ತ ಸುಮ್ನೆ ಮರಿ
ಹೆಣ್ಣು : ನಂಬುತಾರೆ ಬರೆದಂಗೆ ಅಡೆತಡೆ ಯಾಕೋ ದೊರೆ
ಗಂಡು : ಜನಪದ ಅನ್ನೋದು ನಮಗೂ ಜೀವ ಪದ ಪದ ಬಿಡಿಸಿದರೇ ಮಲ್ಲೆ ಹೂವೇ
ಹೆಣ್ಣು : ಮಾತಿನ ಮನಸನ್ನ ನೀಡೋದು ಒಗಟು ಹಾಡುವೆ ನಿಜವಾದ ಹಾಡು
ಗಂಡು : ಹೃದಯದ ಬಾಷೇನ ಬಿಡಿಸೋದೇ ಒಗಟು ಬಿಡಿಸಲು ಶುರುಮಾಡು ಹಾಡು
ಕೋರಸ್ : ಒಹೋ...
ಗಂಡು : ಬೀಸೋ ಗಾಳಿಯನ್ನ ಕಟ್ಟಿ ಹಾಕೋ ಹುಚ್ಚು ಯಾಕೆ ಚಿನ್ನಾರಿ ಚಿನ್ನಾರಿ ಮೈನಾ
ಕೋರಸ್ : ಧಿನಕಿಟ ಧಿನಕಿಟ ಧೀಮ್ ಧೀಮ್ .. ಧಿನಕಿಟ ಧಿನಕಿಟ ಧೀಮ್ ಧೀಮ್
ಹೆಣ್ಣು : ನನ್ನಲ್ಲೂ ನಿನ್ನಲ್ಲೂ ಓಡಾಡುವ ಗಾಳಿಯೊಂದೇ ಹಠಮಾರಿ ಹಠಮಾರಿ ಜಾಣ
ಕೋರಸ್ : ಧಿನಕಿಟ ಧಿನಕಿಟ ಧೀಮ್ ಧೀಮ್ .. ಧಿನಕಿಟ ಧಿನಕಿಟ ಧೀಮ್ ಧೀಮ್
ಗಂಡು : ಆಗೋದನ್ನೇ ಆಗೋಕೆ ನೇನಿಬೇಕು ಹೆಣ್ಣೇ ಹೆಣ್ಣೇ
ಹೆಣ್ಣು : ಆಗೋದಿಲ್ಲ ಅನ್ನೋರ್ಗೆ ಬದುಕಿಲ್ಲ ನನ್ನಾ ಕಣ್ಣೆ
ಗಂಡು : ನಿನ್ ದಾರಿ ನಂದಲ್ಲ ನನ್ನ ದಾರಿ ನಿಂಗಾಗಲ್ಲ ರಾಣಿ ರಾಣಿ
ಹೆಣ್ಣು : ಜನಪದ ಅನ್ನೋದು ನಮ್ಮಾ ಜೀವ ಪದ ಪದ ಹೇಳುವುದು ನನ್ನೆದೆ ಒಲವು
ಗಂಡು : ಮನಸಿನ ಮಾತನ್ನ ಹಾಡೋದೇ ಒಗಟು ಹಾಡಲು ಶುರುಮಾಡು ಹಾಡು
ಹೆಣ್ಣು : ಬಾಷೆಗೆ ಹೃದಯಾನ ಬರೆಯೋದು ಒಗಟು ಬರೆಯುವೆ ನಿಜವಾದ ಹಾಡು
ಕೋರಸ್ : ಗೀಗೀಯ ಗೀಗೀಯ ಗಾಗಿಯ ಗರಿ ಗಾಗಿಯ ಗಾಗಿಯ ಗೀಗೀಯ
ಗಂಡು : ನನ್ ನನಾ ನನ್ನನ್ನಾನಾ
ಹೆಣ್ಣು : ಜನಪದ ಅನ್ನೋದು ನಮ್ಮಾ ಜೀವ ಪದ ಪದ ಹೇಳುವುದು ನನ್ನೆದೆ ಒಲವು
ಗಂಡು : ಮನಸಿನ ಮಾತನ್ನ ಹಾಡೋದೇ ಒಗಟು ಹಾಡಲು ಶುರುಮಾಡು ಹಾಡು
-------------------------------------------------------------------------------------------------------------------------
No comments:
Post a Comment