24. ವಸಂತಗೀತ (೧೯೮೦)



ವಸಂತ ಗೀತಾ ಚಿತ್ರದ ಹಾಡುಗಳು 
  1. ಕಣ್ಣಲ್ಲೇ ಏನೋ ಮಿಂಚೊಂದು ಕಂಡಿತಲ್ಲಾ 
  2. ಆಟವೇನು ನೋಟವೇನು ನನಗೆ ಹೇಳಿದ ಮಾತೇನು 
  3. ಹಾಯಾದ ಈ ಸಂಜೆ 
  4. ನೀನಾಡೋ ಮಾತೆಲ್ಲಾ ಚಂದಾ 
ವಸಂತ ಗೀತ (1980)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್

ಗಂಡು : ಆಆಆ....  ಹೆಣ್ಣು : ಆಆಆ...
ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು
           ಮನದಲೇನಿದೆ ಅದನು ಹೇಳದೆ ಏತಕೇ ಕಾಡಿದೆ
ಹೆಣ್ಣು : ನನ್ನ ಆಸೆ ಕಣ್ಣ ಭಾಷೆ  ತಿಳಿಯಲಾರದ ಒಗಟೇನು
           ಏಕೆ ಸುಮ್ಮನೆ ಸುಳ್ಳು ಹೇಳುವೆ  ನಿನ್ನ ನಾ ಬಲ್ಲೆನು (ಆಆ )

ಗಂಡು : ಮೆರೆದಾಡಿದೆ ರೋಷದಿ ಅಂದು ಮನಸಾಯಿತೆ ನನ್ನಲಿ ಇಂದು
            ಮೆರೆದಾಡಿದೆ ರೋಷದಿ ಅಂದು ಮನಸಾಯಿತೆ ನನ್ನಲಿ ಇಂದು
           ಏತಕೆ ಈ ಬಗೆ, ಏತಕೆ ಈ ಬಗೆ
ಹೆಣ್ಣು : ನಿನ್ನ ರೀತಿ ತಿಳಿದಿನೀಗ  ನಿನ್ನ ಪ್ರೀತಿ ಅರಿತಿನೀಗ
          ನನ್ನನು ಮನ್ನಿಸು ನಲ್ಲನೆ ಪ್ರೀತಿಸು
ಗಂಡು : ಆಆಆ....  ಹೆಣ್ಣು : ಲಲಾಲಾಲ್... ..
ಗಂಡು : ಲಲಾರಾಲಾಲ್... .. ...  ಹೆಣ್ಣು : ಲಲಾಲಾಲ್... ..
ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು
ಹೆಣ್ಣು : ಏಕೆ ಸುಮ್ಮನೆ ಸುಳ್ಳು ಹೇಳುವೆ  ನಿನ್ನ ನಾ ಬಲ್ಲೆನು (ಅಹ್ಹಹ್ಹ) 

ಹೆಣ್ಣು : ನೀನಿಲ್ಲದ ಸಿರಿಯನು ತೊರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ
          ನೀನಿಲ್ಲದ ಸಿರಿಯನು ತೊರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ
          ಸಂತಸ ಹೊಂದುವೆ, ಸಂತಸ ಹೊಂದುವೆ
ಗಂಡು : ಸವಿಯಾದ ಮಾತನಾಡಿ ಒಲವಿಂದ ನನ್ನ ಕೂಡಿ
            ಮನವನು ಸೇರಿದೆ ಹಿತವನು ನೀಡಿದೆ
ಹೆಣ್ಣು : ಆಆಆ....  ಗಂಡು  : ಲಲಾಲಾಲ್... ..
ಹೆಣ್ಣು  : ಲಲಾರಾಲಾಲ್... .. ...  ಗಂಡು : ಆಹಾಹ..  ಲಲಾಲಾಲ್... ..
ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು
ಹೆಣ್ಣು :  ಏಕೆ ಸುಮ್ಮನೆ ಸುಳ್ಳು ಹೇಳುವೆ  ನಿನ್ನ ನಾ ಬಲ್ಲೆನು
ಇಬ್ಬರು : ಆಆಆ....  ಲಲಾಲಾಲ್... ..ಲಲಾಲಾಲ್... .. 
-----------------------------------------------------------------------------------------------------------------------

ವಸಂತ ಗೀತ (1980)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಡಾ.ರಾಜ್‌ಕುಮಾರ್


ನೀನಾಡೋ ಮಾತೆಲ್ಲ ಚೆಂದ ನಿನ್ನಿಂದ ಈ ಬಾಳೆ ಅಂದ
ನೀನಾಡೋ ಮಾತೆಲ್ಲ ಚೆಂದ ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ಮನ ಆಸೆಯ ಕಡಲಾಗಿದೆ  ತನು ಹೂವಿನ ಒಡಲಾಗಿದೆ
ಹೇ... ನೀನಾಡೋ ಮಾತೆಲ್ಲ ಚೆಂದ ನಿನ್ನಿಂದ ಈ ಬಾಳೆ ಅಂದ

ಕಂದ ನೀನಂದು ಕಾಣದಾದಾಗ ಬಾಳೆ ಇರುಳಾಯಿತು
ನನ್ನ ಈ ಜೀವ ತಾಳದೇ ನೋವ  ಸಾಕು ಸಾಕಾಯಿತು
ಆಹಾ..ಆಹಾಹಾ ಹೇ ಹೇ..
ನೀನು ನನ್ನಿಂದ ದೂರವಾದಾಗ  ಕಂದ ನಾ ಉಳಿಯೆನು
ಹೂವ ಕಂಪಂತೆ ಗಾಳಿ ತಂಪಂತೆ ರಾಗ ದಿಂಬಂತೆ ಸಂಜೆಗೆಂಪಂತೆ
ನನ್ನಲ್ಲಿಯೆ ಒಂದಾಗಿರು ಈ ದೇಹಕೆ ಉಸಿರಾಗಿರು
ಹೇ, ನೀನಾಡೋ ಮಾತೆಲ್ಲ ಚೆಂದ  ನಿನ್ನಿಂದ ಈ ಬಾಳೆ ಅಂದ

ಇಂಥ ಮುದ್ದಾದ ಹೆಣ್ಣು ಮಗುವನ್ನು ಎಂದೂ ನಾ ಕಾಣೆನು
ನಿನ್ನ ಈ ವೇಷ ಮೊದಲು ಕಂಡಾಗ  ನಾನೆ ಬೆರಗಾದೆನು
ಓಹೋಹೋ.. ಆಹಾಹಾ...
ದಾಡಿ ಬಿಳುಪಾಗಿ ಬೆನ್ನು ಬಿಲ್ಲಾಗಿ ನಾನು ಮುದಿಯಾದೆನು
ಬೇರೆ ಮಾಡೋರು ಯಾರು ಇನ್ನಿಲ್ಲ  ವೇಷ ನಮದೆಂದು ಯಾರು  ಹೇಳೋಲ್ಲ
ನಿಮ್ಮಮ್ಮನೆ ಎದುರಾದರೂ  ನಮ್ಮಿಬ್ಬರ ಗುರುತಾಗದು
ಹೇ, ನೀನಾಡೋ ಮಾತೆಲ್ಲ ಚೆಂದ  ನಿನ್ನಿಂದ ಈ ಬಾಳೆ ಅಂದ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ
ಮನದಾಸೆಯ ಕಡಲಾಗಿದೆ  ತನು ಹೂವಿನ ಒಡಲಾಗಿದೆ
ನೀನಾಡೋ ಮಾತೆಲ್ಲ ಚೆಂದ  ನಿನ್ನಿಂದ ಈ ಬಾಳೆ ಅಂದ
------------------------------------------------------------------------------------------------------------------------

ವಸಂತಗೀತ (೧೯೮೦)
ರಚನೆ: ಚಿ. ಉದಯಶಂಕರ  ಸಂಗೀತ: ಎಂ. ರಂಗರಾವ  ಗಾಯಕ: ಡಾ. ರಾಜಕುಮಾರ್

ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ
ಕೋಪವೋ, ತಾಪವೋ .... 
ಕೋಪವೋ, ತಾಪವೋ  ನಡುಗಿದೆ ತುಟಿ ಏತಕೇ....
ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ

ಒಳ್ಳೆ ವಯಸು ಒಳ್ಳೆ ಸೊಗಸು ಏಕೆ ಹೀಗಾಯಿತು ಮನಸು
ಕಣ್ಣು ಚೆನ್ನ ಬಣ್ಣ ಚೆನ್ನ ನಾ ಕಾಣೆ ಹೀಗೇಕೆ ಮುನಿಸು
ಒಳ್ಳೆ ವಯಸು ಒಳ್ಳೆ ಸೊಗಸು ಏಕೆ ಹೀಗಾಯಿತು ಮನಸು
ಕಣ್ಣು ಚೆನ್ನ ಬಣ್ಣ ಚೆನ್ನ ನಾ ಕಾಣೆ ಹೀಗೇಕೆ ಮುನಿಸು
ಈ ರೋಷವೋ ಆ ವೇಷವೋ ಈ ದ್ವೇಷವೋ 
ಆಕ್ರೋಶವೋ ... ಚೆಲುವೆಯೆ ನಿನಗೇತಕೇ
ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತ್ತಲ್ಲ
ನಿನ್ನಾಸೆ ಏನೋ ನಾನೆಂದು ಕಾಣೆನಲ್ಲ

ಚೆಲುವೆ ಮೊಗದಿ ಗೆಲುವ ಕಂಡೆ ಎಲ್ಲಿ ಏನಾಯಿತೊ ಕಾಣೆ
ಚೆಲುವ ಹಿಂದೆ ಛಲವ ಕಂಡೆ ಅಮ್ಮಮ್ಮ ನೀನೆಂತ ಜಾಣೆ
ಚೆಲುವೆ ಮೊಗದಿ ಗೆಲುವ ಕಂಡೆ ಎಲ್ಲಿ ಏನಾಯಿತೊ ಕಾಣೆ
ಚೆಲುವ ಹಿಂದೆ ಛಲವ ಕಂಡೆ ಅಮ್ಮಮ್ಮ ನೀನೆಂತ ಜಾಣೆ 
ನಿನ್ನಾಸೆಯ ನಾ ಬಲ್ಲೆನು ಇನ್ನಾರನು ನಾ ಬಲ್ಲೆನು ..... 
ಸರಸಕೆ ಬರಲಾರೆಯ ಹೇಳೂ....ಬರಲಾರೆಯ .
ನಿನ್ನಂಥ  ನೂರು ಹೆಣ್ಣನ್ನು ನಾನು ಬಲ್ಲೇ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ

ಬಳಿಗೆ ಬರುವ ಮನವ ಗೆಲುವ ಆಸೆ ನನ್ನಲ್ಲಿ ಬಂತೇ
ಸರಸದಿಂದ ನಿನ್ನ ಬೆರೆವೆ ಬಾ ಹೇಳು ಇನ್ನೇಕೆ ಚಿಂತೆ
ಬಳಿಗೆ ಬರುವ ಮನವ ಗೆಲುವ ಆಸೆ ನನ್ನಲ್ಲಿ ಬಂತೇ
ಸರಸದಿಂದ ನಿನ್ನ ಬೆರೆವೆ ಬಾ ಹೇಳು ಇನ್ನೇಕೆ ಚಿಂತೆ
ನಿನಗಾಗಿಯೆ ನಾನಿಲ್ಲವೆ ನನ್ನಸೆಯು ನಿನಗಿಲ್ಲವೆ
ನಿಜವನು ನುಡಿ ಸುಂದರಿ...
ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೇ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೆ
-----------------------------------------------------------------------------------------------------------------------

ವಸಂತ ಗೀತ (೧೯೮೦)
ರಚನೆ: ಚಿ. ಉದಯಶಂಕರ  ಸಂಗೀತ: ಎಂ. ರಂಗರಾವ  ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ

ಹೆ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು
ಗಂ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು
ಹೆ: ಹಾಯಾದ    ಗಂ: ಈ ಸಂಜೆ

 ಹೆ: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ಗಂ: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
 ಹೆ: ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು
ಗಂ: ನಯನವ ಸೆಳೆಯುವ ಹರುಷ ತುಂಬಿದ ಈ ನಗುವು
ಹೆ: ಎಂಥ  ಮುದ್ದಾಗಿದೇ    ಗಂ: ಏನು ಸೊಗಸಾಗಿದೇ
ಹೆ: ಎಂಥ  ಮುದ್ದಾಗಿದೇ    ಗಂ: ಏನು ಸೊಗಸಾಗಿದೇ
ಹೆ: ಮಗುವಿನ ಹರುಷಕೆ ಇನಿಯನ ಸರಸಕೆ
ಗಂ: ಮನಸಿನ ಕುಣಿತಕೆ ಹೃದಯದ ಮಿಡಿತಕೆ  ಜುಮ್ಮ್ ಎಂದಿತು
ಹೆ: ಅಹ್  ಅಹ್ ಅಹ್ ಅಹ್
ಗಂ: ಹಾಯಾದ ಈ ಸಂಜೆ      ಹೆ: ಆನಂದ ತುಂಬಿರಲು
ಗಂ: ಬಾಳೆ ಸಂಗೀತ ಸುಧೆಯಾಯಿತು
ಹೆ: ಹಾಯಾದ         ಗಂ: ಈ ಸಂಜೆ

 ಹೆ: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಗಂ: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
 ಹೆ: ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ
ಗಂ: ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ
ಹೆ: ಏನೋ ಸಂತೋಷವೂ     ಗಂ: ಏನೋ ಉಲ್ಲಸವೂ
ಹೆ: ಏನೋ ಸಂತೋಷವೂ   (ಒಹೋ.. ಅಹ್ಹಹ್ಹ) ಏನೋ ಉಲ್ಲಸವೂ
ಗಂ: ಯುಗ ಯುಗ ಉರುಳಲಿ ಹೊಸ ಯುಗ ಉದಿಸಲಿ
ಹೆ: ಈ ಅನುಬಂಧವು ಹೀಗೆಯೆ ಸಾಗಲಿ... ಎಂಬಾಸೆಯು
ಗಂ: ಅಹ್....   ಅಹ್....ಅಹ್....ಅಹ್....
ಜೊ: ಹಾಯಾದ ಈ ಸಂಜೆ ಆನಂದ ತುಂಬಿರಲು ಬಾಳೆ ಸಂಗೀತ ಸುಧೆಯಾಯಿತು
       ಹಾಯಾದ ಈ ಸಂಜೆ ಅಹ್....   ಅಹ್....ಅಹ್....ಅಹ್....
----------------------------------------------------------------------------------------------------------------------

No comments:

Post a Comment