1275. ವೈಶಾಖದ ದಿನಗಳು (೧೯೯೩)

ವೈಶಾಖದ ದಿನಗಳು ಚಲನಚಿತ್ರದ ಹಾಡುಗಳು 
  1. ಹಾಡೆಂದು ನೀ ಹಾಡುವೇ .. 
  2. ಮನದಲಿ ಏನೋ ಹೊಸ ಭಾವ 
  3. ಪ್ರೇಮಿಸುವಾ ಆರಾಧಿಸುವಾ 
  4. ನಲಿದಾಡು ಕುಣಿದಾಡು ಮನವೇ 
  5. ಸ್ನೇಹದಿಂದಾ ನೋಡದೇ ಮೌನವೇತಕೆ 
ವೈಶಾಖದ ದಿನಗಳು (೧೯೯೩) - ಹಾಡೆಂದು ನೀ ಹಾಡುವೇ ..
ಸಂಗೀತ : ಇಂದು ವಿಶ್ವನಾಥ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಮನು, ಬಿ.ಆರ್.ಛಾಯ

ಹೆಣ್ಣು : ಹಾಡೆಂದು ನೀ ಹಾಡುವೆ ಸಂಕೋಚ ನನಗಾಗಿದೆ
ಗಂಡು : ನಿನ್ನ ಕಣ್ಣ ಮಾತೆ ಹೊಸ ಭಾವಗೀತೆ ತಾ ಹಾಡಿವೇ .. ತಾ ಹಾಡಿವೇ ..

ಗಂಡು : ತಂಗಾಳಿ ತಂಪಾಗಿ ಮೈಸೋಕಿದಾಗ ಒಡನಾಡಿ ಒಡನಾಟ ಮಧುರಾ
ಹೆಣ್ಣು : ಅನುಮಾನ ಅಭಿಮಾನ ಬಿಗುಮಾನವಿರದೇ ಜೊತೆಯಾದ ಅನುರಾಗ ಮಧುರಾ..
          ಹಾಡೆಂದು ನೀ ಹಾಡುವೆ ಸಂಕೋಚ ನನಗಾಗಿದೆ
ಗಂಡು : ನಿನ್ನ ಕಣ್ಣ ಮಾತೆ ಹೊಸ ಭಾವಗೀತೆ ತಾ ಹಾಡಿವೇ .. ತಾ ಹಾಡಿವೇ ..

ಹೆಣ್ಣು : ಸವಿಯಾದ ಕನಸಂತೇ ನೀ ತೇಲಿ ಬರುವೆ ಗೆಲುವಾದ ಚೆಲುವಾಗಿ ನಗುವೇ..
ಗಂಡು : ಮಧುಮಾಸ ಹೂ ಚಿಗುರೂ ಸಿಂಗಾರ ತಳೆದು ಬಂದಂತೆ ಉಲ್ಲಾಸ ತರುವೇ ..
ಹೆಣ್ಣು : ಹಾಡೆಂದು ನೀ ಹಾಡುವೆ ಸಂಕೋಚ ನನಗಾಗಿದೆ
ಗಂಡು : ನಿನ್ನ ಕಣ್ಣ ಮಾತೆ ಹೊಸ ಭಾವಗೀತೆ ತಾ ಹಾಡಿವೇ .. ತಾ ಹಾಡಿವೇ ..
-----------------------------------------------------------------------------------------------------

ವೈಶಾಖದ ದಿನಗಳು (೧೯೯೩) - ಮನದಲಿ ಏನೋ ಹೊಸ ಭಾವ
ಸಂಗೀತ : ಇಂದು ವಿಶ್ವನಾಥ, ಸಾಹಿತ್ಯ : ರುಧ್ರಮೂರ್ತಿ ಗಾಯನ : ಮನು, ವಾಣಿಜಯರಾಂ

ಗಂಡು : ಮನದಲ್ಲಿ ಏನೋ ಹೊಸ ಭಾವ ಮಿಡಿಸಿದೆ ನೀನು ಪ್ರೀತಿಯಲೀ .. ಆಹಾ
            ಹಸಿರಲು ನೀನೇ ಉಸಿರಲೂ ನೀನೇ ಜೀವದಲಿ ಆಹಾ...

ಗಂಡು : ಹೃದಯ ಬಂಧನ ಬಯಸುವೇ ಚುಂಬನ ಒಡಲಲಿ ಸಾವಿರ
            ಆಕಾಂಕ್ಷೆಯು ನೀಡಲು ಮೋಹ ನೀಗಲು ದಾಹ ಕಾಡಿದೆ ಈ ಜೀವವೂ ..
            ಮನದಲ್ಲಿ ಏನೋ ಹೊಸ ಭಾವ ಮಿಡಿಸಿದೆ ನೀನು ಪ್ರೀತಿಯಲೀ .. ಆಹಾ
            ಹಸಿರಲು ನೀನೇ ಉಸಿರಲೂ ನೀನೇ ಜೀವದಲಿ ಆಹಾ...

ಹೆಣ್ಣು : ಅನುದಿನ ನೀನಿರೇ ಜೊತೆ ಜೊತೆ ಸಾಗಿರೇ ಇಳಿಯದೇ ಭೂಮಿಗೇ ಆ ಸ್ವರ್ಗವೂ
           ಪ್ರೀತಿಯ ಮೇರು ಒಲವಿನ ತೇರು ಪ್ರೇಮಿಗೆ ರಸ ತಾಣವೂ
ಗಂಡು : ಮನದಲ್ಲಿ ಏನೋ ಹೊಸ ಭಾವ ಮಿಡಿಸಿದೆ ನೀನು ಪ್ರೀತಿಯಲೀ .. ಆಹಾ
            ಹಸಿರಲು ನೀನೇ ಉಸಿರಲೂ ನೀನೇ ಜೀವದಲಿ ಆಹಾ...
------------------------------------------------------------------------------------------------------

ವೈಶಾಖದ ದಿನಗಳು (೧೯೯೩) - ಪ್ರೇಮಿಸುವಾ ಆರಾಧಿಸುವಾ
ಸಂಗೀತ : ಇಂದು ವಿಶ್ವನಾಥ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ವಿಷ್ಣು, ಬಿ.ಆರ್.ಛಾಯ

ಹೆಣ್ಣು : ಲಾಲಲಾ.. ಲಾಲಲಾಲಾ.. ಲಾಲಲಾಲಾ.. ಲಲಾ..
ಗಂಡು : ಪ್ರೇಮಿಸುವಾ ಆರಾಧಿಸುವಾ ಪ್ರೇಮವೇ ದೇವರು ಜಗದೊಳಗೇ
ಹೆಣ್ಣು : ಹಗಲಿರಳು ಎಲ್ಲಾ ಮರೆತು ಆನಂದ ರಾಗ ಮನದೊಳಗೇ
ಗಂಡು : ಪ್ರೇಮಿಸುವಾ ಆರಾಧಿಸುವಾ ಪ್ರೇಮವೇ ದೇವರು ಜಗದೊಳಗೇ
ಹೆಣ್ಣು : ಹಗಲಿರಳು ಎಲ್ಲಾ ಮರೆತು ಆನಂದ ರಾಗ ಮನದೊಳಗೇ
          ಮೂಡಿದೆ ಪ್ರೀತಿ ಮೋಡಿಗೆ ಈ ಮನ ಗೀತೆ ಹಾಡಿದೇ
          ಮೂಡಿದೆ ಪ್ರೀತಿ ಮೋಡಿಗೆ ಈ ಮನ ಗೀತೆ ಹಾಡಿದೇ
ಗಂಡು : ಸಾವಿರ ಭಾವಾ ಸಾಗರದಂತೆ ಮೈಮನ ಮೋಹಿಸಿದೇ ..
            ಪ್ರೇಮಿಸುವಾ ಆರಾಧಿಸುವಾ ಪ್ರೇಮವೇ ದೇವರು ಜಗದೊಳಗೇ
ಹೆಣ್ಣು : ಹಗಲಿರಳು ಎಲ್ಲಾ ಮರೆತು ಆನಂದ ರಾಗ ಮನದೊಳಗೇ

ಹೆಣ್ಣು : ಸುಮ್ಮನೆ ಮುನಿಸೋ ಅಳಿಸೋ ಉಪಾಯ ಸೋತೆಯದೇಕೋ ಸೋಲೇನೋ         
ಗಂಡು : ಆ ಸುಂದರ ಭಾವ ಝುಮ್ಮೆನಿಸೋ ಮುಖ ಆ ಬೆಡಗಿ ನೀನು ಬೆಳಗಿಸೋ ಮುಖ
ಹೆಣ್ಣು : ಸುಂದರ ಮೋಹಕ ಮಂದಿರವೇ ಮುಖ ನಂದನದಂತೇ ನಗುವಾಗ
ಗಂಡು : ಎದೆಯಾಸೆಯದೇನೋ ನಾ ತಿಳಿಯೇ..
            ಎದೆಯಾಸೆಯದೇನೋ ನಾ ತಿಳಿಯೇ..
ಹೆಣ್ಣು : ಲಾಲಲಾ.. ಲಾಲಲಾಲಾ.. ಲಾಲಲಾಲಾ.. ಲಲಾ..
ಗಂಡು : ಪ್ರೇಮಿಸುವಾ ಆರಾಧಿಸುವಾ ಪ್ರೇಮವೇ ದೇವರು ಜಗದೊಳಗೇ
ಹೆಣ್ಣು : ಹಗಲಿರಳು ಎಲ್ಲಾ ಮರೆತು ಆನಂದ ರಾಗ ಮನದೊಳಗೇ

ಗಂಡು : ಬಾರಿ ಬಾರಿ ನೋಡು ನೂರಾರು ಬಾರಿ ನೋಡು ನೂರು ಮಿಂಚುಗೊಂಚಲೇ 
            ಈ ನಮ್ಮ ಸುಂದರಿ ತಾರೆಯೋ .. ಓ ತಾರೆಯೋ.. ಓ ತಾರೆಯೋ 
            ಬಾರಿ ಬಾರಿ ನೋಡು ನೂರಾರು ಬಾರಿ ನೋಡು ನೂರು ಮಿಂಚುಗೊಂಚಲೇ 
            ಈ ನಮ್ಮ ಸುಂದರಿ ತಾರೆಯೋ .. ಓ ತಾರೆಯೋ.. ಓ ತಾರೆಯೋ 
            ಹೂಂ.. ಸಿಂಗಾರೀ ನಿನ್ನಾ ಮನದೇ ನೂರಾರಿವೆ ಬರಿ ವಿಷಾದ 
            ಸಾಗರದ ಅಲೆಯ ನೀನಾದ ಅದು ನಗುವಿನೋದ ಓಓ .. ಬರಿ ನಗುವಿನೋದ .. 
            ಸಾಗರದ ಅಲೆಯ ನೀನಾದ ಅದು ನಗುವಿನೋದ ಓಓ .. ಬರಿ ನಗುವಿನೋದ .. 
            ಮಾತಾಡಿದೇ ಸಂತೋಷ..  ಮಾತಾಡಿದೇ ಸಂತೋಷ..  
ಹೆಣ್ಣು : ತೇಲಾಡಿದೇ ಸಂಗೀತಾ.. 
ಗಂಡು : ಜೊತೆ ಸೇರಿ ಸಾಗುವಾ ಜೊತೆ ಕೂಡಿ ಹಾಡುವಾ 
            ಮಾತಾಡಿದೇ ಸಂತೋಷ..  ಮಾತಾಡಿದೇ ಸಂತೋಷ..  
ಹೆಣ್ಣು : ತೇಲಾಡಿದೇ ಸಂಗೀತಾ.. 
ಗಂಡು : ಜೊತೆ ಸೇರಿ ಸಾಗುವಾ ಜೊತೆ ಕೂಡಿ ಹಾಡುವಾ 
ಹೆಣ್ಣು : ಲಾಲಲಾ.. ಲಾಲಲಾಲಾ.. ಲಾಲಲಾಲಾ.. ಲಲಾ..
ಗಂಡು : ಪ್ರೇಮಿಸುವಾ ಆರಾಧಿಸುವಾ ಪ್ರೇಮವೇ ದೇವರು ಜಗದೊಳಗೇ
ಹೆಣ್ಣು : ಹಗಲಿರಳು ಎಲ್ಲಾ ಮರೆತು ಆನಂದ ರಾಗ ಮನದೊಳಗೇ
------------------------------------------------------------------------------------------------------

ವೈಶಾಖದ ದಿನಗಳು (೧೯೯೩) - ನಲಿದಾಡು ಕುಣಿದಾಡು ಮನವೇ
ಸಂಗೀತ : ಇಂದು ವಿಶ್ವನಾಥ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ವಾಣಿಜಯರಾಂ

ನಲಿದಾಡು ಕುಣಿದಾಡು ಮನವೇ ..
ಹೊಸ ಜೀವ ಬಂದಿದೆ ಇಂದೂ ಹೊಸ ಭಾವ ಸೇರಿದೆ ಇಂದೂ
ನಲಿದಾಡು ಕುಣಿದಾಡು ಮನವೇ ..
ಹೊಸ ಜೀವ ಬಂದಿದೆ ಇಂದೂ ಹೊಸ ಭಾವ ಸೇರಿದೆ ಇಂದೂ
ನಲಿದಾಡು ಕುಣಿದಾಡು ಮನವೇ ..

ತಾಯಿ ನೀನೇ ಆ...ತಂದೆ ನೀನೇ ಸನಿರೇ ನಿರಿಮಾಪರಿ ಪಾಮಾ ಮಾರಿ ರಿರಿಸಾ 
ಜೀವ ನೀನೇ ನೀ ನೀಡಿದ ಮಧು ಆ ವಾತ್ಸಲ್ಯವೇ ಅದು ತಾ... 
ನಲಿದಾಡು ಕುಣಿದಾಡು ಮನವೇ ..
ಹೊಸ ಜೀವ ಬಂದಿದೆ ಇಂದೂ ಹೊಸ ಭಾವ ಸೇರಿದೆ ಇಂದೂ
ನಲಿದಾಡು ಕುಣಿದಾಡು ಮನವೇ ..

ಕರುಣಾಮಯಿ ಆಆಆಆ... ಸಹನಾಮಯಿ... 
ಹೂವಾಯಿತು ಕ್ಷಣ ... ಆಆಆ... 
ನಲಿದಾಡು ಕುಣಿದಾಡು ಮನವೇ ..
ಹೊಸ ಜೀವ ಬಂದಿದೆ ಇಂದೂ ಹೊಸ ಭಾವ ಸೇರಿದೆ ಇಂದೂ
ನಲಿದಾಡು ಕುಣಿದಾಡು ಮನವೇ ..
------------------------------------------------------------------------------------------------------

ವೈಶಾಖದ ದಿನಗಳು (೧೯೯೩) - ಸ್ನೇಹದಿಂದಾ ನೋಡದೇ ಮೌನವೇತಕೆ
ಸಂಗೀತ : ಇಂದು ವಿಶ್ವನಾಥ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ ಗಾಯನ : ಮನು,

ಸ್ನೇಹದಿಂದ ನೋಡದೇ ಮೌನವೇತಕೆ ಆ ಮಾತು ಬಾರದೇ
ಹೂವಿನಂಥ ಚೆಂದ ಮುಖವೂ ಭೀತಿ ಕವಿದು ಬಾಡಿತೇ ..

ಹೂವು ಮುಳ್ಳು ಲೋಕದಲ್ಲಿ ಜೋಡಿಯಾಗೇ ಇರುವುದೂ
ನೋವು ನಲಿವು ಬಾಳಿನಲ್ಲಿ ಕೂಡಿಕೊಂಡೇ ಬರುವುದೂ ..
ಸಾವಿರಾರು ಸೂಜಿನೋವು ಜೀವದೊಳಗೆ ಮಿಡುಕಲಿ
ತಾಳ್ಮೆಯಿಂದ ಸಹಿಸಿ ಗೆಲುವಾ..
ನಗೆಯು ಮಾತ್ರ ಮಿನುಗಲಿ ಮೊದಲು ಸುಖದಾ ಸಂಭ್ರಮಾ
ಮರಳಿ ನೋವಾ ತಲ್ಲಣ ಹೀಗೆ ತಾನೇ ಜೀವನ
ಸ್ನೇಹದಿಂದ ನೋಡದೇ ಮೌನವೇತಕೆ ಆ ಮಾತು ಬಾರದೇ
ಹೂವಿನಂಥ ಚೆಂದ ಮುಖವೂ ಭೀತಿ ಕವಿದು ಬಾಡಿತೇ ..

ಕಳೆವ ಲೆಕ್ಕ ಎಲ್ಲ ಬದುಕು ವಯಸು ಜಾರಿ ಸರಿವುದು
ಇರುವ ಮೂರೇ ದಿನಗಳಲ್ಲಿ ಹರುಷವೊಂದೇ ಗೆಲುವುದೂ ..
ಕಳೆವ ಲೆಕ್ಕ ಎಲ್ಲ ಬದುಕು ವಯಸು ಜಾರಿ ಸರಿವುದು
ಇರುವ ಮೂರೇ ದಿನಗಳಲ್ಲಿ ಹರುಷವೊಂದೇ ಗೆಲುವುದೂ ..
ದುಃಖ ಮರೆತು ನಕ್ಕು ನಲಿಸು ವ್ಯರ್ಥ ಮಾಡದೆ ಕಾಲವಾ
ದುಃಖ ಮರೆತು ನಕ್ಕು ನಲಿಸು ವ್ಯರ್ಥ ಮಾಡದೆ ಕಾಲವಾ
ನೀನು ನಾನು ನಾಳೆ ಎಲ್ಲೋ ಹಂಚಿಕೊಳ್ಳುವ ಸ್ನೇಹವ
ಏಕೆ ಇಂಥ ಬೇಸರ ಯಾವ ಚಿಂತೆ ಕಾತರ ಬಾಳು ಗಾಳಿಗೋಪುರ
ಸ್ನೇಹದಿಂದ ನೋಡದೇ ಮೌನವೇತಕೆ ಆ ಮಾತು ಬಾರದೇ
ಹೂವಿನಂಥ ಚೆಂದ ಮುಖವೂ ಭೀತಿ ಕವಿದು ಬಾಡಿತೇ ..
-----------------------------------------------------------------------------------------------------

No comments:

Post a Comment