ವಂಶ ಜ್ಯೋತಿ ಚಲನಚಿತ್ರದ ಹಾಡುಗಳು
- ಮನಸ್ಸುಗಳ ಮಮತೆಯಲಿ ಬೆಸೆಯುವುದು
- ಎಲ್ಲಿಯ ನಾನೂ ಎಲ್ಲಿಯ ನೀನೂ ಗೆಳೆಯಾ
- ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾ
- ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಹುಣುಸೂರುಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ, ಎಸ್.ಜಾನಕೀ
ಹೆಣ್ಣು : ಮನಸ್ಸುಗಳ ಮಮತೆಯಲಿ ಬೆಸೆಯುವುದು ಈ ಸ್ನೇಹವೂ ಈ ರೀತಿ ಈ ಪ್ರೀತಿ ಸುಖಕಾಧಾರವೂ
ನೇಮ ನೀತಿ ನಯ ವಿನಯ ನಮ್ಮದಾಗಲೀ ನಾವೆಲ್ಲಾ ಒಂದೆಂಬ ನಿಜ ಮೈ ತುಂಬಲೀ ..
ಹೆಣ್ಣು : ವಿರಸವನು ನೀಗುವುದೂ ಹುರುಷವನು ತುಂಬುವುದೂ ಅನುದಿನ ಸುಖಕೆ ಆಧಾರವೇನೂ
ಮಕ್ಕಳು : ಗೆಳೆತನವೂ
ಹೆಣ್ಣು : ದೀನನೂ ಅವನೂ ದಾನಿಯೂ ಇವನೂ ಎಂಬುವ ಬೇಧ ನೀಗುವುದೇನೂ
ಮಕ್ಕಳು : ಗೆಳೆತನ
ಹೆಣ್ಣು : ನಾವೆಲ್ಲಾ ಒಂದೆಂಬ ನಿಜ ಮೈ ತುಂಬಲೀ .. ನೇಮ ನೀತಿ ನಯ ವಿನಯ ನಮ್ಮದಾಗಲೀ
ಎಲ್ಲರು : ನಾವೆಲ್ಲಾ ಒಂದೆಂಬ ನಿಜ ಮೈ ತುಂಬಲೀ ..
ಹೆಣ್ಣು : ಗಳಿಸಲು ಯೋಗ್ಯವದು ಗೌರವದ ವಾಕ್ಯವದೂ ಜಗದೊಳಗೆಲ್ಲಾ ಸುಖದಾಧಾರವೇನೂ
ಮಕ್ಕಳು : ಗೆಳೆತನವೂ ..
ಹೆಣ್ಣು : ಎಲ್ಲರೂ ಒಂದೇ ಎಲ್ಲವೂ ಒಂದೇ ಎಂಬುವ ನೀತಿ ಹೇಳುವುದೇನೂ
ಮಕ್ಕಳು : ಗೆಳೆತನವೂ
ಹೆಣ್ಣು : ನಾವೆಲ್ಲಾ ಒಂದೆಂಬ ನಿಜ ಮೈ ತುಂಬಲೀ ..
ಎಲ್ಲರು : ನೇಮ ನೀತಿ ನಯ ವಿನಯ ನಮ್ಮದಾಗಲೀ ನಾವೆಲ್ಲಾ ಒಂದೆಂಬ ನಿಜ ಮೈ ತುಂಬಲೀ ..
ಹೆಣ್ಣು : ಬಿರುನುಡಿಗಳನೂ ನೀ ಎಲ್ಲರು : ಆಡದಿರೂ
ಹೆಣ್ಣು : ದುರುಳರ ಜೊತೆಯಲೀ ಮಕ್ಕಳು : ಸೇರದಿರೂ
ಹೆಣ್ಣು : ದೇಶದ ಹಿತವನು ಮಕ್ಕಳು : ಮರೆಯದಿರೂ
ಹೆಣ್ಣು : ಸಮತಾ ಭಾವ ತೊರೆಯದಿರೂ ಮಕ್ಕಳು : ಸಮತಾ ಭಾವ ತೊರೆಯದಿರೂ
ಎಲ್ಲರು : ಮನಸ್ಸುಗಳ ಮಮತೆಯಲಿ ಬೆಸೆಯುವುದು ಈ ಸ್ನೇಹವೂ ಈ ರೀತಿ ಈ ಪ್ರೀತಿ ಸುಖಕಾಧಾರವೂ
ನೇಮ ನೀತಿ ನಯ ವಿನಯ ನಮ್ಮದಾಗಲೀ ನಾವೆಲ್ಲಾ ಒಂದೆಂಬ ನಿಜ ಮೈ ತುಂಬಲೀ ..
-----------------------------------------------------------------------------------------------------------------
ವಂಶ ಜ್ಯೋತಿ (೧೯೭೮) - ಎಲ್ಲಿಯ ನಾನು ಎಲ್ಲಿಯ ನೀನು ಗೆಳೆಯಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ, ಎಸ್.ಪಿ.ಬಿ.
ಹೆಣ್ಣು : ಎಲ್ಲಿಯ ನಾನು ಎಲ್ಲಿಯ ನೀನು ಗೆಳೆಯಾ
ಬರೆದವ ಬರೆದ ನಮ್ಮನೂ ಬೆಸೆದ ಗೆಳೆಯಾ.. ಓಓಓ ಬೆರೆತವೂ ಬಾಳಲಿ ಇನಿಯಾ
ಗಂಡು : ಒಲವಿನ ಕಥೆಯಲಿ ಪಾತ್ರವವಹಿಸಿದೇ ಗೆಳತೀ
ಮನದಲಿ ನೆಲೆಸಿದೆ ನೆನಪನ್ನು ಮೀಟಿದೆ ಗೆಳತೀ... ಓಓಓ ಚೆಲುವಿಗೇ ನೀನೇ ಒಡತಿ
ಹೆಣ್ಣು : ಚಿಮ್ಮುವ ಚಿಲುಮೆ ಹೊಮ್ಮುವ ಒಲುಮೆ ಗೆಳೆಯಾ..
ಚಿಮ್ಮುವ ಚಿಲುಮೆ ಹೊಮ್ಮುವ ಒಲುಮೆ ಗೆಳೆಯಾ
ಆಗಿದೆ ಹೃದಯ ಆಸೆಯ ಮಿಲನ ಬಯಸಿದೆ ಅನುಭವ ಸುಧೆಯಾ . .
ಎಲ್ಲಿಯ ನಾನು ಎಲ್ಲಿಯ ನೀನು ಗೆಳೆಯಾ
ಬರೆದವ ಬರೆದ ನಮ್ಮನೂ ಬೆಸೆದ ಗೆಳೆಯಾ.. ಓಓಓ ಬೆರೆತವೂ ಬಾಳಲಿ ಇನಿಯಾ
ಹೆಣ್ಣು : ಆಆಆ... ಆಆಆ... ಲಲಲಲಲಾಲಾಲಾ.. ಆಹ್ಹಾಹ್ಹಹ್ಹಹ್ಹಾ
ಗಂಡು : ಯಾರದೋ ಹರಕೆ ತಂದಿದೇ ಮನಕೆ ಸುಖವಾ
ಯಾರದೋ ಹರಕೆ ತಂದಿದೇ ಮನಕೆ ಸುಖವಾ
ಮಿಡಿದವರಾರೋ ಸವಿಯುವರಾರೋ ಜೀವನ ವೀಣೆಯ ಸ್ವರವಾ...
ಒಲವಿನ ಕಥೆಯಲಿ ಪಾತ್ರವವಹಿಸಿದೇ ಗೆಳತೀ
ಮನದಲಿ ನೆಲೆಸಿದೆ ನೆನಪನ್ನು ಮೀಟಿದೆ ಗೆಳತೀ... ಓಓಓ ಚೆಲುವಿಗೇ ನೀನೇ ಒಡತಿ
-----------------------------------------------------------------------------------------------------------------
ಮನದಲಿ ನೆಲೆಸಿದೆ ನೆನಪನ್ನು ಮೀಟಿದೆ ಗೆಳತೀ... ಓಓಓ ಚೆಲುವಿಗೇ ನೀನೇ ಒಡತಿ
-----------------------------------------------------------------------------------------------------------------
ವಂಶ ಜ್ಯೋತಿ (೧೯೭೮) - ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : , ಆರ್.ಏನ್.ಜಯಗೋಪಾಲ, ಗಾಯನ : ಜಿ.ಕೆ.ವೆಂಕಟೇಶ,
ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾ
ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾ
ಅಮ್ಮಾ... ತಿಳಿದು ಬಾಳದೇ ಹೋದೆ ತಳವಿಲ್ಲದ ಹಡಗಾದೇ
ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾ
ಗಾಳಿಗೇ ಸಿಲುಕಿದ ಹಡಗಿನಂತಾದೆ ತೇಲಿದೆಯೋ ಮುಳುಗುವೆಯೋ ಬಲ್ಲವರಾರೂ
ತಂದೆಯಾ ತಂಗಿಯಾ ಹಿತವ ಕೋರುತಾ ನೀನೂ
ತಾಯಿಯಂತೇ ತಾಳ್ಮೆವಹಿಸಿ ದುಡಿದೇ ನೀನಮ್ಮಾ
ಏನಾಯ್ತು ನಿನ್ನಭಿಮಾನ ಕಣ್ಣೀರೇ ಬಹುಮಾನ ಅಮ್ಮಾ...
ಅಮ್ಮಾ... ತಿಳಿದು ಬಾಳದೇ ಹೋದೆ ತಳವಿಲ್ಲದ ಹಡಗಾದೇ
ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾ
ಹಾಲು ಕೊಡುವತನಕ ಹಸುವನು ಆದರಿಸುವರೂಹಾಲು ನಿಂತ ಮೇಲೆ ಕಟುಕರಿಗೇ ಮಾರುವುರೂ...
ಏನಿದೂ ಯಾರಿದೂ ಎನಿತು ಯೋಚಿಸದಾದೇ
ಎಲ್ಲ ಮಮತೆ ಇಲ್ಲೇ ಇರಿಸಿ ದುಡಿದೂ ಹಣ್ಣಾದೇ
ಮುಂದಾವ ಗುರಿ ಇದೆ ಎಂದೇ ಇನ್ಯಾರ ಹಿತ ಬೇಕೆಂದೇ
ಅಮ್ಮಾ... ತಿಳಿದು ಬಾಳದೇ ಹೋದೆ ತಳವಿಲ್ಲದ ಹಡಗಾದೇ
ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾ
ಅಮ್ಮಾ... ತಿಳಿದು ಬಾಳದೇ ಹೋದೆ ತಳವಿಲ್ಲದ ಹಡಗಾದೇ
ಯಾವುದೂ ಗತಿಯಮ್ಮಾ ನಿನಗ್ಯಾವುದೂ ನೆಲೆಯಮ್ಮಾಅಮ್ಮಾ... ತಿಳಿದು ಬಾಳದೇ ಹೋದೆ ತಳವಿಲ್ಲದ ಹಡಗಾದೇ
----------------------------------------------------------------------------------------------------------------
ವಂಶ ಜ್ಯೋತಿ (೧೯೭೮) - ಮೇಣದ ಬತ್ತಿ ಆರುವ ಮುನ್ನ ಚೆಲ್ಲಿದೆ ಬೆಳಕನ್ನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಕಾಂತಿಯ ನೀಡಿ ದಾರಿಯ ತೋರಿ ಮಿಡಿದಿದೆ ಕಂಬನಿಯ.. ಮಿಡಿದಿದೆ ಕಂಬನಿಯಾ..
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಚಂದ್ರನ ಕಂಡೂ ಅಲೆ ಕೈ ಚಾಚಿ ಅಡಗುವ ಕಡಲಂತೆ
ಆಸೆಯ ಅದುಮಿ ನೋವನೂ ಸಹಿಸಿ ಬಾಳಿದೇ ನೀನಮ್ಮಾ.. ನೀ ಕರುಣೆಯ ಸಿರಿಯಮ್ಮಾ
ನೀ ಕರುಣೆಯ ಸಿರಿಯಮ್ಮಾ
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಹಿಂಡಿ ಕಸವಾದಂತ ಕಬ್ಬಿನ ಚರವಾದೇ
ಜೀವನದಲ್ಲಿ ಕಂಬನಿ ಕಡಲ ಸೇರುವ ವಿಧಿ ಪಡೆದೇ ನೀ ಸೇವೆಗೇ ಮುಡಿಪಾದೇ
ನೀ ಸೇವೆಗೇ ಮುಡಿಪಾದೇ
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಬಿಸಿಲಲಿ ನಿಂತೂ ನೆರಳಾದಂತ ಹೆಮ್ಮರ ನೀನಾದೇ
ತಾಯಿಯ ಋಣವ ತೀರಿಸಲೆಂದೂ ತ್ಯಾಗೇಕೇ ಬಲಿಯಾದೇ ನೀ ತ್ಯಾಗದ ಹೆಸರಾದೇ ..
ನೀ ತ್ಯಾಗದ ಹೆಸರಾದೇ ..
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಕಾಂತಿಯ ನೀಡಿ ದಾರಿಯ ತೋರಿ ಮಿಡಿದಿದೆ ಕಂಬನಿಯ.. ಮಿಡಿದಿದೆ ಕಂಬನಿಯಾ..
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
ಕಾಂತಿಯ ನೀಡಿ ದಾರಿಯ ತೋರಿ ಮಿಡಿದಿದೆ ಕಂಬನಿಯ.. ಮಿಡಿದಿದೆ ಕಂಬನಿಯಾ..
ಮೇಣದ ಬತ್ತಿ ಆರುವ ಮುನ್ನಾ ಚೆಲ್ಲಿದೆ ಬೆಳಕನ್ನೂ
----------------------------------------------------------------------------------------------------------------
No comments:
Post a Comment