ವರದಕ್ಷಿಣೆ ಚಲನಚಿತ್ರದ ಹಾಡುಗಳು
- ಓ.. ಹುಡುಗೀ ... ಆ... ಬೆಡಗಿ ನೀ ಮಣಗಿ ಮಣಗಿ ಅಡಗಿ
- ಸಂಧ್ಯಾ ಸಮಯದೀ ಮಂದಸ ಮೀರತಿ
- ದೇವ ಕುಂಚದ ರಮ್ಯ ಕಲ್ಪನೇ ಸೃಷ್ಟಿಯ.. ಕಣಕಣ
- ಮಂದರಾಗಿಣಿ ಇಂದೂ ಕಾಂತಿ ನಿನ್ನ ಸ್ವರಗತಿ ಸಂಚಾರ
- ಹಿತ ಮಿತ ಗುರುತಿಸದೇ
ವರದಕ್ಷಿಣೆ (೧೯೮೦) - ಓ.. ಹುಡುಗೀ ... ಆ... ಬೆಡಗಿ ನೀ ಮಣಗಿ ಮಣಗಿ ಅಡಗಿ
ಸಂಗೀತ : ಎಲ್.ವೈದ್ಯನಾಥನ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ವಿದ್ಯಾರಾಣಿ, ಜಯಚಂದ್ರನ,
ಗಂಡು : ಓ.. ಹುಡುಗೀ ..
ಓ.. ಹುಡುಗೀ .. ಬಾ.. ಬೆಡಗೀ .. ನೀ ಮಣಗಿ ಮಣಗಿ ಅಣಗಿ..
ಓ.. ಹುಡುಗೀ .. ಬಾ.. ಬೆಡಗೀ .. ನೀ ಮಣಗಿ ಮಣಗಿ ಅಣಗಿ.. ಓ.. ಹುಡುಗೀ
ಗಂಡು : ಕಾಮನಬಿಲ್ಲೇ .. ಓಡದೇ ನಿಲ್ಲೇ ..
ಹೆಣ್ಣು : ಊಯ್ .. ಹೂಯ್ ಬಲ್ಲೇ .. ಇರು ಅಲ್ಲೇ..
ಮೀನಿನ ಸಂಗ ಆಡಿಕೋ ಮಂಗ
ಗಂಡು : ಅಹ್ಹಹ್ಹ.. ಹೀಗೇತಕೆ ರೇಗಾಡದ ಕೂಗಾಡುವೇಯೇ
ನರ ಜಾರಿತೇ ಬಾನ ಒಡೆಯಿತೇ ಕೀರವೇ ಅಳಿಯಿತೇ..
ಹೆಣ್ಣು : ಅಳಿವೂ ಉಳಿವೂ ಒಲವೂ ಛಲವೂ ಅರಿತಿಕೋ ನೀನೇ ..
ಗಂಡು : ಓ.. ಹುಡುಗೀ .. ಬಾ.. ಬೆಡಗೀ .. ನೀ ಮಣಗಿ ಮಣಗಿ ಅಣಗಿ.. ಓ.. ಹುಡುಗೀ ..
ಹೆಣ್ಣು : ಅಹಾಹ್ಹಹ್ಹ.. ಕೈಯಲ್ಲೀ ಮೀನೂ .. ಬಾಯಲೀ ಜೇನೂ .. (ಆಹಾ..) ಹೂಂ ..
ಗಂಡು : ಒಲಿದರೇ ನೀನೂ ಬೇಕಿನ್ನೇನೂ.. ಒಲಿದರೇ ನೀನೂ ಬೇಕಿನ್ನೇನೂ
ಹೆಣ್ಣು : ಅಡಿಗಿಳಿಯದೇ ನುಡಿ ಬೀರದೇ ಒಲವಿನ ಮಲರೂ
ಹೊಲಸಾಗದೇ ಹುಳಿಸಾಗಲೀ ಬಾಳಿನ ಚಿಗುರೂ ..
ಗಂಡು : ಮಲರೂ ಎಲರೂ
ಹೆಣ್ಣು : ಚಿಗುರೂ ಒಗರೂ ಚಿರವಾಗಿರಲೀ ..
ಗಂಡು : ಓ.. ಹುಡುಗೀ .. ಬಾ.. ಬೆಡಗೀ .. ನೀ ಮಣಗಿ ಮಣಗಿ ಅಣಗಿ..
ಗಂಡು : ಓ.. ಹುಡುಗೀ .. ಹೆಣ್ಣು : ನಾ ಬೆಡಗಿ
ಗಂಡು : ಓ.. ಹುಡುಗೀ .. ಹೆಣ್ಣು : ನಾ ಬೆಡಗಿ
---------------------------------------------------------------------------------------------------
ವರದಕ್ಷಿಣೆ (೧೯೮೦) - ಸಂಧ್ಯಾ ಸಮಯದೀ ಮಂದಸ ಮೀರತಿ
ಸಂಗೀತ : ಎಲ್.ವೈದ್ಯನಾಥನ, ಸಾಹಿತ್ಯ : ಕು.ರಾ.ಶಾಸ್ತ್ರಿ, ಗಾಯನ : ಜಯಚಂದ್ರನ,
ಆಆಆ... ಆಆಆಅ... ಆಆಆಆ... ಆಆಆಆ... ಆಆಆಆ... ಆಆಆಆ.... ಆಆಆಆ.. ಆಆಆಅ...
ಸಂಧ್ಯಾ ಸಮಯದೀ ... ಮಂದಸ ಮೀರದೀ ಭಾವದ ಅಲೇ ಅಲೇ ಏರುತಿದೇ ..
ಸಂಧ್ಯಾ ಸಮಯದೀ ... ಮಂದಸ ಮೀರದೀ ಭಾವದ ಅಲೇ ಅಲೇ ಏರುತಿದೇ ..
ಕಡಲ ತರಂಗದ ರಿಂಗಣ ಕುಣಿತ ಸಂಜೆಯ ಸೂರ್ಯನ ಬಿಂಬದ ಸೆಳೆತ ..
ಆಆಆ... ಆಆಆ.. ಆಆಆ... ಆಆಆ.. ಆಆಆ... ಆಆಆ..
ಬಳುಕುವ ತೆಂಗೂ.. ಬಾನಿನ ರಂಗೂ ..
ಬಳುಕುವ ತೆಂಗೂ.. ಬಾನಿನ ರಂಗೂ ಚೆಲುವಲೀ ಇಂದೂ ಬೆಳಗಿವೇ ಇಂದೂ..
ಇಂದೂ... ಮುಂದೂ
ಸಂಧ್ಯಾ ಸಮಯದೀ ... ಮಂದಸ ಮೀರದೀ ಭಾವದ ಅಲೇ ಅಲೇ ಏರುತಿದೇ ..
ಗಗನದೀ ತೇಲುವ ಖಗಗಳ ಸಾಲೂ .. ಹಾಡಿದೇ ಇರುಳಿದೂ ಇನಿಯನ ಪಾಲೂ ..
ರಾಗ ರಾಗಿಣಿಯ... ರಾಗರಾಗಿಣಿಯ...
ರಾಗ ರಾಗಿಣಿಯ ಮಿಲನವ ಬಯಸೀ...
ರಾಗ ರಾಗಿಣಿಯ ಮಿಲನವ ಬಯಸೀ ಚೆಲುನಿನ ಮೊಲ್ಲೇ .. ಅರಳಿದೇ ಇಲ್ಲೇ..
ಎಲ್ಲಾ ನೀನೇ ...
ಸಂಧ್ಯಾ ಸಮಯದೀ ...
---------------------------------------------------------------------------------------------------
ವರದಕ್ಷಿಣೆ (೧೯೮೦) - ದೇವ ಕುಂಚದ ರಮ್ಯ ಕಲ್ಪನೇ ಸೃಷ್ಟಿಯ.. ಕಣಕಣ
ಸಂಗೀತ : ಎಲ್.ವೈದ್ಯನಾಥನ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಜಾನಕೀ,
ಆಆಆ... ಆಆಆ.... ಆಆಆಅ.... ಆಆಆಅ... ಆಆಆ... ಆಆಆ.... ಆಆಆಅ.... ಆಆಆಅ...
ದೇವ ಕುಂಚದ ರಮ್ಯ ಕಲ್ಪನೇ ಸೃಷ್ಟಿಯ ಕಣಕಣ
ಚೆಲುವ ಕಾಣುವ ರಸಿಕ ಭಾವವೂ ಕುಣಿದಿದೆ ತನನನನ
ಆಆಆ... ಆಆಆ.... ಆಆಆಅ....ಆಆಆ... ಆಆಆ.... ಆಆಆಅ....
ಝರಿಯ ತಾನಕೇ ಅಲೆಯ ತಾಳಕೇ ಗಾಳಿ ಕೊಳಲನೂ ಊದಿದೇ
ಝರಿಯ ತಾನಕೇ ಅಲೆಯ ತಾಳಕೇ ಗಾಳಿ ಕೊಳಲನೂ ಊದಿದೇ
ಹೂವೂ ಪರಿಮಳ ಸೂಸಿ ಘಮ ಘಮ ಭೃಂಗ ಸಂಗವ ಬಯಸಿದೇ ..
ದೇವ ಕುಂಚದ ರಮ್ಯ ಕಲ್ಪನೇ ಸೃಷ್ಟಿಯ ಕಣಕಣ
ಮ.. ದನಿಸ ದನಿಪ ದನಿಸ ದನಿ ಮಪಸನಿದನಿ ಸನಿದಮ ಗಮಗಸ ದಾ
ಮಾಗಸ ದಾ ದಾ ಮಾಗಸ ದಾ
ಭೂಮಿ ಸೇರಲೂ ಬಾನೂ ಬಾಗಿದೇ ಮೇಘ ಮೇಲೆಯೇ ನಲಿದಿದೇ
ಭೂಮಿ ಸೇರಲೂ ಬಾನೂ ಬಾಗಿದೇ ಮೇಘ ಮೇಲೆಯೇ ನಲಿದಿದೇ
ಪ್ರೇಮಿ ಪ್ರೇಯಸೀ ಮಿಲನದಿಂದಲೇ ಬಾಳೂ ಕೂರಣ ಹೊಂದಿದೇ ..
ದೇವ ಕುಂಚದ ರಮ್ಯ ಕಲ್ಪನೇ ಸೃಷ್ಟಿಯ ಕಣಕಣ
ಚೆಲುವ ಕಾಣುವ ರಸಿಕ ಭಾವವೂ ಕುಣಿದಿದೆ ತನನನನ..... ಆಆಆಅ... ಆಆಆ
---------------------------------------------------------------------------------------------------
ವರದಕ್ಷಿಣೆ (೧೯೮೦) - ಮಂದರಾಗಿಣಿ ಇಂದೂ ಕಾಂತಿ ನಿನ್ನ ಸ್ವರಗತಿ ಸಂಚಾರ
ಸಂಗೀತ : ಎಲ್.ವೈದ್ಯನಾಥನ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ವಾಣಿಜಯರಾಂ,
ಆಆಆಅ... ಆಆಆ ಆಆಆಅ... ಆಆಆ ಆಆಆಅ... ಆಆಆ
ಮಂದರಾಗಿಣಿ ಇಂದೂ ಕಾಂತಿ ನಿನ್ನ ಸ್ವರಗತಿ ಸಂಚಾರ ಭಾವಗೀತೆಗೇ ಆಧಾರ
ಮಂದರಾಗಿಣಿ ಇಂದೂ ಕಾಂತಿ ನಿನ್ನ ಸ್ವರಗತಿ ಸಂಚಾರ ಭಾವಗೀತೆಗೆ ಆಧಾರ
ಹೊಮ್ಮಿ ಹರಿದ ಸ್ವರವಿನಾದ ಆಆಆ... ಆಆಆ... ತುಂಬಿ ಸನಿಹ ಲಯ ವಿನೋದ
ದಸ ದರಿ ದಸ ಮದಸರಿಸದ ದಸರಿಗರಿಸ ಸರಿಗಮರಿಪ
ಹೊಮ್ಮಿ ಹರಿದ ಸ್ವರವಿನಾದ ತುಂಬಿ ಸನಿಹ ಲಯ ವಿನೋದ
ರಮ್ಯ ಅತಿಶಯ... ಸೌಮ್ಯ ರಸಮಯ...
ಮಂದರಾಗಿಣಿ ಇಂದೂ ಕಾಂತಿ ನಿನ್ನ ಸ್ವರಗತಿ ಸಂಚಾರ ಭಾವಗೀತೆಗೇ ಆಧಾರ
ರಾಗ ಲಹರೀ... ಆಆಆ... ಆಆಆಆ... ಆಆಆ...
ರಾಗ ಲಹರೀ ಪ್ರಕೃತಿಯಾಗೇ.. ತಾಳ ಸರಣಿ ಪುರುಷನಾಗೇ
ರಾಗ ಲಹರೀ ಪ್ರಕೃತಿಯಾಗೇ.. ತಾಳ ಸರಣಿ ಪುರುಷನಾಗೇ
ರಾಗ ಲಹರೀ ಪ್ರಕೃತಿಯಾಗೇ.. ತಾಳ ಸರಣಿ ಪುರುಷನಾಗೇ
ಅಲ್ಲೇ ವಿಧಿಯ ಸೃಷ್ಟಿ ಸ್ಥಿತಿಲಯ...
ಅಲ್ಲೇ ವಿಧಿಯ ಸೃಷ್ಟಿ ಸ್ಥಿತಿಲಯ ...
ಮಂದರಾಗಿಣಿ.... ಆಆಆ... ಇಂದೂ ಕಾಂತಿ... ಆಆಆ
ನಿನ್ನ ಸ್ವರಗತಿ ಸಂಚಾರ ಭಾವಗೀತೆಗೇ ಆಧಾರ
ಭಾವಗೀತೆಗೇ ಆಧಾರ ...
-----------------------------------------------------------------------------------------------
ವರದಕ್ಷಿಣೆ (೧೯೮೦) - ಹಿತ ಮಿತ ಗುರುತಿಸದೇ
ಸಂಗೀತ : ಎಲ್.ವೈದ್ಯನಾಥನ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಜಾನಕೀ, ವಾಣಿಜಯರಾಂ, ಜಯಚಂದ್ರನ,
ಹೆಣ್ಣು : ಹಿತ ಮಿತ ಗುರುತಿಸದೇ ... ತನು ಮನ ಅರಳುತಿದೇ
ಹಿತ ಮಿತ ಗುರುತಿಸದೇ ... ತನು ಮನ ಅರಳುತಿದೇ .. ಹಿತ ಮಿತ
ಗಂಡು : ಆವ್ ಜನುಮದ ಕುಣಿಕೇ .. ಈ ಉಪಾಕಾರದ ಹೆಣಿಕೆ
ತೋರದೇ ಸಲ್ಲಿಸಲು ಪ್ರೀತಿಯ ಕಳವಳ ಕಲಕಿತೇ..
ಮತಿಯ.. ಕಳವಳ ಕಲಕಿದೇ .. ಮತಿಯ
ವಾಣಿ: ಜನುಮ ಜನುಮದ ಪೂಜಾ ಫಲವೂ ಕನಸು ಮನಸಿನ ಬಯಕೆಯ ಬಲವೋ..
ಜನುಮ ಜನುಮದ ಪೂಜಾ ಫಲವೂ ಕನಸು ಮನಸಿನ ಬಯಕೆಯ ಬಲವೋ..
ಕೆಣಕಿ ಅಣಗದಿಹ ಮಲೆತು ಅಲುಗುದಿಹ ಘೋರ ವೃತದ ಫಲವೋ
ಹರಕೆ ಗಮನಿಸಿದ ವರವ ಕರುಣಿಸಿದ ಆರೂ ಮೊಗನ ವರವೋ
ಹೆಣ್ಣು : ಹರಿಸಿದ ಭರಿಸಿದ ಅನುರಾಗ ಭಾವ ತಾಳಿ ತಣಿಯಲೂ ಎಳಸಿದೆ ಜೀವಾ..
ಹರಿಸಿದ ಭರಿಸಿದ ಅನುರಾಗ ಭಾವ ತಾಳಿ ತಣಿಯಲೂ ಎಳಸಿದೆ ಜೀವಾ..
ಹಿತ ಮಿತ ಗುರುತಿಸದೇ ... ತನು ಮನ ಅರಳುತಿದೇ .. ಹಿತ ಮಿತ
ಗಂಡು : ನೆರವಿಗೇ ಬಾಗೀ .. ಮಣಿಯುವೇ ಇಲ್ಲೀ .. ಒಲವಿಗೆ ತೂಗಿ ತಣಿಸುವೆನಲ್ಲೀ..
ವಾಣಿ : ಹೂವಿಂದ ಕಾಯಾಗಿ ಕಾಯಿಂದ ಹಣ್ಣಾಗಿ
ಹೂವಿಂದ ಕಾಯಾಗಿ ಕಾಯಿಂದ ಹಣ್ಣಾಗಿ ಅಧರ ಮಧುರ ಸುಖ ಒದಗಿಸಿ ಮೆರೆವೆ
ಎದೆಗೆ ಸುಧೆಯ ಸವಿ ಹಣಿಸುತ ದಣಿವೇ ..
ಅಧರ ಮಧುರ ಸುಖ ಒದಗಿಸಿ ಮೆರೆವೆ ಎದೆಗೆ ಸುಧೆಯ ಸವಿ ಹಣಿಸುತ ದಣಿವೇ ..
ಅಳಿಸಿ ಎಳೆಯತನ ಬೆಳೆಸಿ ಗೆಳೆಯತನ ಬಾಳ ಕಡಲಿಗೆ ಇಳಿವೇ...
ಇನಿಸೂ ಮುನಿಸೂಗಳ ಕಾವೂ ಪೊರೆತಗಳ ಆಳವೆಷ್ಟೂ ಅಳೆವೇ...
ಅಳೆವೇ... ಈ ಬಾಳಿನ ಆಳ ಅಳೆವೇ... ಈ ಬಾಳಿನ ಆಳ...
ಅಳೆವೇ... ನಾ ಅಳೆವೇ
--------------------------------------------------------------------------------------------------
ವರದಕ್ಷಿಣೆ (೧೯೮೦) - ಕಳೆದೈದೂ ವರುಷ ಬರಲೆನ್ನ ಪುರುಷ
ಸಂಗೀತ : ಎಲ್.ವೈದ್ಯನಾಥನ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ವಾಣಿಜಯರಾಂ, ವಿದ್ಯಾರಾಣಿ
.
ವಾಣಿ : ಕಳೆದೈದೂ ವರುಷ ಬರಲೆನ್ನ ಪುರುಷ
ಮಧುವಾಸ ಮನವಿಕಾಸ ಪ್ರತಿ ನಿಮಿಷ ಸಂತಸ
ಕಳೆದೈದೂ ವರುಷ ಬರಲೆನ್ನ ಪುರುಷ
ಮಧುವಾಸ ಮನವಿಕಾಸ ಪ್ರತಿ ನಿಮಿಷ ಸಂತಸ
ವಿದ್ಯಾ : ಆ... ಕರೆದು ಬಯಸಿದ ನಾನೂ
ಕನಸಿನ ಸುಖ ಹಣಿಸುವೆ ಸಖ ಎರುಗಿಸು ಮುರುಕ..
ಜೀವನ.. ಪಾವನ.. ಜೀವನ.. ಪಾವನ.. ಸರಿಯೇ .. ಇನಿಯ ಸನಿಯ
ತೇರಿದೆನೂ ಮನವ ಮೇರೆದೇನು ಚೆಲುವಾ..
ನಲಿದೇನು ದಣಿದು ನಾನೂ ರಸಭಾವ ವೈಭವ..
ವಾಣಿ : ನಾ.. ತೆಳೆದೇ ಪ್ರಣಯದ ಲಾ..ಲಾ
ಹರೆಯದ ಹಸಿ ವಿರಹದ ಬಿಸಿ ಅದುಮಿ ಅನುದಿನ
ಹಾಡುವೇ .. ಆಡುವೇ.. ಆಡುವೇ.. ಹಾಡುವೇ ..
ಗಳಿಸಿ.. ಎಣಿಸಿ .. ಗುಣಿಸಿ..
ಕಳೆದೈದೂ ವರುಷ ಬರಲೆನ್ನ ಪುರುಷ
ಮಧುವಾಸ ಮನವಿಕಾಸ ಪ್ರತಿ ನಿಮಿಷ ಸಂತಸ
ವಾಣಿ : ಈ..ಒಲವೂ ನಲಿವಿನ.. ಜಾಲ
ಹರೆಯದ ಕ್ಷಣ ಮುರಿಯುವ ಮನ ಅರಿವ ಹಂತನ
ಹೂವಿದೇ ... ನಾರಿದೇ .. ಹೂವಿದೇ ... ಹಾಡಿದೇ
ಅರಿತೂ.. ಮರೆತೂ.. ಬೆರೆತೂ..
ತೆರೆದೇನೂ ಮನವ ಮೆರೆದೆನೂ ಚೆಲುವಾ
ನಲಿದೇನು ದಣಿದು ನಾನೂ ರಸಭಾವ ವೈಭವ..
--------------------------------------------------------------------------------------------------
No comments:
Post a Comment