1297. ವಿಜಯ ಕಂಕಣ (೧೯೯೪)

ವಿಜಯ ಕಂಕಣ ಚಲನಚಿತ್ರದ ಹಾಡುಗಳು

  1. ಅರಳಿದ ಮಲ್ಲಿಗೆ ಹೊರಟಿದೆ ಎಲ್ಲಿಗೆ 
  2. ವಿಜಯೋತ್ಸವ.. ಓ.. ಇದು ವಿಜಯೋತ್ಸಅ
  3. ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ 
  4. ಮುತ್ತು ಕೊಡು ಬಾರೋ ಗೆಳೆಯಾ
  5. ನೋವನೇ ಕೊಟ್ಟು ನೋವನೇ ಪಡೆದು
  6. ವಿಜಯಕಂಕಣ ಇದು ವಿಜಯಕಂಕಣ
ವಿಜಯ ಕಂಕಣ (೧೯೯೪) - ಅರಳಿದ ಮಲ್ಲಿಗೆ ಹೊರಟಿದೆ 
ಸಂಗೀತ : ಸಾಹಿತ್ಯ:  ಅಮರ ಪ್ರಿಯ, ಗಾಯನ: ಎಸ್.ಪಿ.ಬಿ, ಮಂಜುಳಾ ಗುರುರಾಜ್

ಕೋರಸ್ : ರೂತ್ತೂರು... ರೂರೂ..ರೂರೂ..ರುಮ್ಮಾ..
ಗಂಡು: ಓ..ರುಮ್ಮಾ..
ಕೋರಸ್: ಅರಳಿದ ಮಲ್ಲಿಗೆ ಹೊರಟಿದೆ ಎಲ್ಲಿಗೆ
                ಮೊಗದಾಗ ನಾಚಿಕೆ ತುಂಬ್ಯಾವ ಹೂನಗೆ
                ರೂತ್ತೂರು... ರೂರೂ..ರೂರೂ..ರುಮ್ಮಾ

ಗಂಡು: ಕುಣಿಯುತ ಬಾರೇ ನಲಿಯುತ ಬಾರೆ ಬಾ ಬಾರೆ
            ಬಾರೆ ನನ್ನ ಮುದ್ದು ಸಿಂಗಾರಿ
ಹೆಣ್ಣು: ಹಾಡುತ ಬಾರಾ ಓಡುತ ಬಾ ರಾ ಬಾ ಬಾರೋ
           ಬಾರೋ ನನ್ನ ಎದೆಯ ಸಿಂಗಾರ
ಕೋರಸ್: ಓ.. ಅರಳಿ ನಿಂತ ಹೂವು ತಾಳಲಾರೇ ನೋವು
                ಮರಳು ಮಾಡಿದೆ ನೀಡದೆಯೇ ಕಾವು
ಗಂಡು: ಎದೆಯಾಳದಲಿ ಸಿಲುಕಿದೆಯಾ ಮುದ ನೀಡಿ ನನ್ನ ತಣಿಸುವೆಯಾ
ಹೆಣ್ಣು: ಉಕ್ಕಿ ಹರಿವ ನೀರಿನಲ್ಲಿ ನನ್ನ ನೆನಸು ಬಾರಾ
ಗಂಡು: ರೂತ್ತೂರು... ರೂರೂ..ರೂರೂ..ರುಮ್ಮಾ..

ಗಂಡು: ಮದವು ತುಂಬಿ ಹದಕೆ ಬಂದ ಹರೆಯದ ಹೆಣ್ಣು ನೀನಿಗ
ಹೆಣ್ಣು: ಮದಿಸಿದಾನೆಯಾಗಿ ಮತ್ತನು ಕಳೇಯೋ
ಗಂಡು: ರಸವು ಹರಿಯಲಿ ನಿಶೆಯು ಕಳೆಯಲಿ
            ನಸುಗೆಂಪಿನಲಿ ಉಷೆಯು ಮೂಡಲಿ
ಹೆಣ್ಣು: ಸೊಕ್ಕಿ ನೆಗೆವ ಹೋರಿಯಾಗಿ ನನ್ನ ಮಣಿಸು ಬಾರಾ
ಗಂಡು : ರೂತ್ತೂರು... ರೂರೂ..ರೂರೂ..ರುಮ್ಮಾ..
             ಅರಳಿದ ಮಲ್ಲಿಗೆ ಹೊರಟಿದೆ ಎಲ್ಲಿಗೆ
              ಮೊಗದಾಗ ನಾಚಿಕೆ ತುಂಬ್ಯಾವ ಹೂನಗೆ
              ರೂತ್ತೂರು... ರೂರೂ..ರೂರೂ..ರುಮ್ಮಾ
--------------------------------------------------------------------

ವಿಜಯ ಕಂಕಣ (೧೯೯೪) -ವಿಜಯೋತ್ಸವ.. ಓ.. ಇದು ವಿಜಯೋತ್ಸವ
ಸಂಗೀತ : ಅಮರ ಪ್ರಿಯ, ಸಾಹಿತ್ಯ:  ಶಂಕರಸಿಂಗ ಸುಗ್ನಳ್ಳಿ ಗಾಯನ: ಎಸ್.ಪಿ.ಬಿ, ಚಿತ್ರಾ

ಹೆಣ್ಣು: ವಿಜಯೋತ್ಸವಾ....
ಗಂಡು: ಓ... ಇದು ವಿಜಯೋತ್ಸವ,... ಒ... ಇದು ವಿಜಯೋತ್ಸವ
ಕೋರಸ್: ಶಾಂತಿಯ ಮಹಾ ಮಂತ್ರ ಪಡೆದೆವು ನಾಡಿಗೆ ಸ್ವಾತಂತ್ರ್ಯ
                ಶಾಂತಿಯ ಮಹಾ ಮಂತ್ರ ಪಡೆದೆವು ನಾಡಿಗೆ ಸ್ವಾತಂತ್ರ್ಯ

ಗಂಡು: ದಲಿತರ ನೆತ್ತರ ಔತಣ ಅವರಿಗೆ ಅಮೃತದ ಪಾನದ ಹಾಗಾಯ್ತು
ಹೆಣ್ಣು: ಸೊಕ್ಕಿನ ಪುರುಷಗೇ ಅಬಲೆಯ ಮಾನವು ಆರೇ ಕಾಸಿಗೇ ಅದು ಮಾರಾಯ್ತೆ...
            ಶಾಂತಿಯ ಮಹಾ ಮಂತ್ರ ಪಡೆದೆವು ನಾಡಿಗೆ ಸ್ವಾತಂತ್ರ್ಯ

ಗಂಡು: ಕನ್ನಡ ಮಾತೆಯ ಉದರದಿ ಜನಿಸಿದ ಮಕ್ಕಳು ಮಾತೆಯ ಮರೆತಾಯ್ತು
ಹೆಣ್ಣು: ಮಾತೃಭಾಷೆಯ ರುಚಿಸದ ಅವರಿಗೆ ತಾಯಿಯ ಹಾಲು ವಿಷವಾಯ್ತು
          ಶಾಂತಿಯ ಮಹಾ ಮಂತ್ರ ಪಡೆದೆವು ನಾಡಿಗೆ ಸ್ವಾತಂತ್ರ್ಯ

ಗಂಡು: ಸ್ವತಂತ್ರ ಭಾರತ ಜನಿಸಿದ ಈ ನಾಡು ಕುತಂತ್ರ ಜನರಿಗೆ ಜನ್ಮ ನೀಡಿತೇ...
            ಅ ಆ ಕಲಿಯದ ದುಡ್ಡೆ ಗೌಡ ಮಂತ್ರಿ ಪದವಿಯ ನೀಡಾಯ್ತು..
             ಶಾಂತಿಯ ಮಹಾ ಮಂತ್ರ ಪಡೆದೆವು ನಾಡಿಗೆ ಸ್ವಾತಂತ್ರ್ಯ

ಗಂಡು: ಸತ್ಯ ಶಾಂತಿ ಅಹಿಂಸೆಯ ಮಂತ್ರದಿ ಸ್ವಾತಂತ್ರ್ಯವನು ನೀಡಿದರು
ಹೆಣ್ಣು: ಸತ್ಯದ ನೆರಳಲಿ ಹಿಂಸೆಯವೆಸಗಿ ಶಾಂತಿದೂತರ ಕೊಲೆಯಾಯ್ತೆ..
       ಶಾಂತಿಯ ಮಹಾ ಮಂತ್ರ ಪಡೆದೆವು ನಾಡಿಗೆ ಸ್ವಾತಂತ್ರ್ಯ
---------------------------------------------------------------------

ವಿಜಯ ಕಂಕಣ (೧೯೯೪) -ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
ಸಂಗೀತ : ಸಾಹಿತ್ಯ:  ಅಮರ ಪ್ರಿಯ, ಗಾಯನ: ಎಸ್.ಪಿ.ಬಿ, ಮಂಜುಳಾ  ಗುರುರಾಜ್

ಗಂಡು: ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
            ನೀ ಹಾಡು ಬಾ ಪ್ರಿಯೆ ಮೋಹನ ರಾಗ
ಹೆಣ್ಣು: ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
            ನೀ ಹಾಡು ಬಾ ಪ್ರಿಯ ಮೋಹನ ರಾಗ

ಗಂಡು: ನೀ ಹಾಡು ಬಾ ಪ್ರಿಯೆ ಚೆಲುವು ಅರಳಿದಾಗ
            ಸರಿಗಮದ ಸಪ್ತ ಸ್ವರವೇ.. ನೀನಾದೆ ಬಾಳಿಗೆ
ಕೋರಸ್: ಸಸ ಮಪ ಮಗಸರಿ ಪನಿಸದ ಪನಿಸದ
ಗಂಡು: ಸರಿಗಮದ ಸಪ್ತ ಸ್ವರವೇ.. ನೀನಾದೆ ಬಾಳಿಗೆ
            ಧರಣಿಯ ಮೇಲೊಂದು ಒಲವಿನ ದೀವಿಗೆ..
ಹೆಣ್ಣು: ಹರಿದು ಬರಲಿ ಪ್ರಣಯ ನಾದ ಕರಗಿ ಹೋಗಲಿ
           ಹೂ ಮಕರಂದ ಸುರಿಯಲಿ ಪ್ರೇಮ ಚೆಲುವಿನ
            ಧಾಮ ಮರೆಸುತ ಬಾರಾ ಜೀವ ಸಂಗ್ರಾಮ
ಗಂಡು: ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
            ನೀ ಹಾಡು ಬಾ ಪ್ರಿಯೆ ಮೋಹನ ರಾಗ

ಹೆಣ್ಣು: ಹೊಸದಾಗಿ ಹೂವು ಅರಳಿ ಕೋಗಿಲೆಯ ಕರೆಯಿತು
           ಹಸಿರಾದ ಬನವಾ ಕಂಡು ಹರುಷದಿ ಹಾಡಿತು
ಗಂಡು:  ಚಿಗುರು ಚಿಗುರಲಿ ನಾದ ಹೊಮ್ಮಲಿ
             ಸುಮದ ಸುಳಿಯಲಿ ಭೃಮರ ಮೀಯಲಿ
             ಕುಣಿಯಿತು ಮನವು ತಣಿಯಿತು ತನುವು
             ಮನದ ಮಡುವಲಿ ಅರಳಿತು ಹೂವು
ಹೆಣ್ಣು: ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
            ನೀ ಹಾಡು ಬಾ ಪ್ರಿಯ ಮೋಹನ ರಾಗ
ಗಂಡು: ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
            ನೀ ಹಾಡು ಬಾ ಪ್ರಿಯೆ ಮೋಹನ ರಾಗ
--------------------------------------------------------------------

ವಿಜಯ ಕಂಕಣ (೧೯೯೪) - ಮುತ್ತು ಕೊಡು ಬಾರೋ ಗೆಳೆಯಾ
ಸಂಗೀತ :  ಅಮರ ಪ್ರಿಯ, ಸಾಹಿತ್ಯ: ಗುರುರಾಜ ಕೆಂಧೂಳಿ  ಗಾಯನ: ಚಂದ್ರಿಕಾ ಗುರುರಾಜ್

ಮುತ್ತು ಕೊಡು ಬಾರೋ ಗೆಳೆಯ ಸುತ್ತ ಮುತ್ತ ಯಾರು ಇಲ್ಲ ಸನಿಹ
ಮುತ್ತು ಕೊಡು ಬಾರೋ ಗೆಳೆಯ ಸುತ್ತ ಮುತ್ತ ಯಾರು ಇಲ್ಲ ಸನಿಹ
ಸುತ್ತಿ ಬಂದೆ ನಿನ್ನ ಆಸರೆಯ ಚಿತ್ತ ನಿನ್ನ ಮೇಲೆ ಚಂಚಲೆಯ
ಮುತ್ತು ಕೊಡು ಬಾರೋ ಗೆಳೆಯ ಸುತ್ತ ಮುತ್ತ ಯಾರು ಇಲ್ಲ ಸನಿಹ

ನಿನ್ನ ಸುಂದರ ರೂಪಕೆ ಪ್ರಿಯ ಇದೋ ಸೋತಿದೆ ಹೆಣ್ಣಿನ ಹೃದಯ
ಕಾಮನ ಬಲೆಯಲಿ ಪ್ರಿಯ ದಾಹವ ತೀರಿಸು ಇನಿಯ
ಮುತ್ತು ಕೊಡು ಬಾರೋ ಗೆಳೆಯ ಸುತ್ತ ಮುತ್ತ ಯಾರು ಇಲ್ಲ ಸನಿಹ

ಹೇ.... ನನ್ನಾ ನಿನ್ನಾ ಪ್ರಣಯ ಸುರಿವುದು ಜೇನಿನ ಮಳೆಯ
ತುಂಬಿದೆ ಹೆಣ್ಣಿನ ಹರೆಯ ಮುತ್ತು ಕೊಡು ಬಾರೋ ನನ್ನ ಗೆಳೆಯ
ಮುತ್ತು ಕೊಡು ಬಾರೋ ಗೆಳೆಯ ಸುತ್ತ ಮುತ್ತ ಯಾರು ಇಲ್ಲ ಸನಿಹ
ಸುತ್ತಿ ಬಂದೆ ನಿನ್ನ ಆಸರೆಯ ಚಿತ್ತ ನಿನ್ನ ಮೇಲೆ ಚಂಚಲೆಯ
ಮುತ್ತು ಕೊಡು ಬಾರೋ ಗೆಳೆಯ ಸುತ್ತ ಮುತ್ತ ಯಾರು ಇಲ್ಲ ಸನಿಹ
--------------------------------------------------------------------

ವಿಜಯ ಕಂಕಣ (೧೯೯೪) - ನೋವನೇ ಕೊಟ್ಟು ನೋವನೇ ಪಡೆದ
ಸಂಗೀತ : ಸಾಹಿತ್ಯ:  ಅಮರ ಪ್ರಿಯ, ಗಾಯನ: ಎಸ್.ಪಿ.ಬಿ,

ನೋವನೇ ಕೊಟ್ಟು ನೋವನೇ ಪಡೆದು ನೀ ದೂರ ಹೋದೆಯಾ ಓ.. ಗೆಳತಿ

ಜನುಮಾ ಜನುಮಾದಾಗ ಮರಿದಂಥ ಪ್ರಿತಿ ಕೊಟ್ಟೆ
ಕನಸು ಮನಸಿನಾಗ ಎದೆಯಾಗ ತುಂಬಿಬಿಟ್ಟೆ
ದಿನ ಕಳೆದು ದಿನ ಬಂತು ಓಓಓ....
ದಿನ ಕಳೆದು ದಿನ ಬಂತು ಮರಿದಾಂಗ ನಿನ್ನ ಪ್ರಿತಿ
ಅನುಗಾಲ ನಿನ್ನಾ ಬಿಟ್ಟು ಬಾಳಲ್ಹಾಂಗ ಓ..ಗೆಳತಿ...
ನೋವನೇ ಕೊಟ್ಟು ನೋವನೇ ಪಡೆದು ನೀ ದೂರ ಹೋದೆಯಾ ಓ.. ಗೆಳತಿ

ದೂರದ ಊರು ತೊರೆದು ನೀ ಬರುವಿ ಹ್ಯಾಂಗ್
ಕಾರಿರುಳು ಕಟ್ಟಡವಿ ದಾಟುವಿ ಹ್ಯಾಂಗ.. ಧೀರಳು ನೀನಾಗಿ...ಆಆಆ...
ಧೀರಳು ನೀನಾಗಿ ಹೆಜ್ಜೆ ಇಡು ಮುಂದೀಗ
ನೀರೆ ನಾನಿನ್ನ ಬಿಟ್ಟು ಬೇರೇನೂ ಬಯಸಲ್ಹಾಂಗ
ನೋವನೇ ಕೊಟ್ಟು ನೋವನೇ ಪಡೆದು ನೀ ದೂರ ಹೋದೆಯಾ ಓ.. ಗೆಳತಿ
--------------------------------------------------------------------

ವಿಜಯ ಕಂಕಣ (೧೯೯೪) - ವಿಜಯಕಂಕಣ ಇದುವೇ  ವಿಜಯಕಂಕಣ
ಸಂಗೀತ : ಸಾಹಿತ್ಯ:  ಅಮರ ಪ್ರಿಯ, ಸಾಹಿತ್ಯ: ಮಹೇಶ ಮನ್ನಾಪುರ ಗಾಯನ : ಎಸ್.ಪಿ.ಬಿ, 

ವಿಜಯಕಂಕಣ... ವಿಜಯಕಂಕಣ ಇದುವೇ ವಿಜಯಕಂಕಣ
ವಿಜಯಕಂಕಣ ಇದುವೇ ವಿಜಯಕಂಕಣ
ದುರುಳರನ್ನು ಸೆದೆ ಬಡಿದು ಸನ್ಮಾರ್ಗದೆ ಮುನ್ನಡೆದು
ಶಾಂತಿಯ ಮಮತೆ ಸಾರುವ....
ವಿಜಯಕಂಕಣ ಇದುವೇ ವಿಜಯಕಂಕಣ

ಅನ್ಯಾಯ ಹೊಸಕಿ ಹಾಕಿ ಅಸಮತೆಯ ಕತ್ತು ಹಿಸುಕಿ
ಅನ್ಯಾಯ ಹೊಸಕಿ ಹಾಕಿ ಅಸಮತೆಯ ಕತ್ತು ಹಿಸುಕಿ
ಅಧರ್ಮವನು ಕೊನೆಗೊಳಿಸುವಾ....
ವಿಜಯಕಂಕಣ ಇದುವೇ ವಿಜಯಕಂಕಣ

ದೀನ ಜನರ ಧ್ವನಿಯಾಗಿ ದುರ್ಜನರಿಗೆ ಸಿಡಿಲಾಗಿ..
ವಿಜಯ ಕಿರಣ ಸೂಸುವ...
ವಿಜಯಕಂಕಣ ಇದುವೇ ವಿಜಯಕಂಕಣ
ದುರುಳರನ್ನು ಸೆದೆ ಬಡಿದು ಸನ್ಮಾರ್ಗದೆ ಮುನ್ನಡೆದು
ಶಾಂತಿಯ ಮಮತೆ ಸಾರುವ....
ವಿಜಯಕಂಕಣ ಇದುವೇ ವಿಜಯಕಂಕಣ
--------------------------------------------------------------------

No comments:

Post a Comment