ವಿಪ್ಲವ ವನಿತೆ ಚಲನಚಿತ್ರದ ಹಾಡುಗಳು
- ಇದು ನಮ್ಮ ಹೊನ್ನಾಡು
- ಬಿಡು ಸಿಡುಕು ದುಡುಕು ಕೆಣಕು ನೋಟವ
- ಅಮ್ಮಯ್ಯ ಈ ಗಂಡನ್ನೂ ನೋಡು
- ಯೌವ್ವನ ಬಂದಾಗ
- ಇದೇ ಇದೇ ವಂಚಕರ ಲೋಕವಿದೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಕೋರಸ್ : ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ ..
ಹೆಣ್ಣು : ಇದು ನಮ್ಮ ಹೊನ್ನಾಡು.. ಹೊನ್ನಾಡು.. ಆಹ್ಹಾಹಾ..
ಇದು ನಮ್ಮ ತಾಯಿನಾಡೂ .. ತಾಯಿನಾಡೂ .. ಆಹ್ಹಾಹಾ ..
ಈ ಪುಣ್ಯಭೂಮಿಗತಿ ಏನಾಯ್ತು ನೋಡು ಕಣ್ತೆರೆದು ನೋಡು
ಕೋರಸ್ : ಕಣ್ತೆರೆದು ನೋಡು
ಹೆಣ್ಣು : ಇದು ನಮ್ಮ ಹೊನ್ನಾಡು.. (ಹೊನ್ನಾಡು).. ಆಹ್ಹಾಹಾ..
ಇದು ನಮ್ಮ ತಾಯಿನಾಡೂ .. (ತಾಯಿನಾಡೂ) .. ಆಹ್ಹಾಹಾ ..
ಹೆಣ್ಣು : ಇದು ದೇಶಭಕ್ತರ ಹೆಗ್ಗರುತೂ
ಕೋರಸ್ : ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ ..
ಹೆಣ್ಣು : ಅಭಿ ನಡೆಯದೂ ಇವರಿಲ್ಲದ ಹೊರತೂ
ಕೋರಸ್ : ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ ..
ಎಲ್ಲರು : ಇದು ದೇಶಭಕ್ತರ ಹೆಗ್ಗರುತೂ ಅಭಿ ನಡೆಯದೂ ಇವರಿಲ್ಲದ ಹೊರತೂ
ಹೆಣ್ಣು : ಜೀವ ಹೋಗದೂ ಇವರಿಗೇ ಲಂಚ ಮರೆತೂ ..
ಹೆಣ್ಣುಗಳೆಂದರೇ ಇವರಿಗೇ ಮತ್ತೂ
ಕೋರಸ್ : ಹುಷಾ ಮತ್ತೂ .. ಹುಷಾ ಮತ್ತೂ ..
ಹೆಣ್ಣು : ಇದು ನಮ್ಮ ಹೊನ್ನಾಡು.. (ಹೊನ್ನಾಡು).. ಆಹ್ಹಾಹಾ..
ಆಆಆ... ಇದು ನಮ್ಮ ತಾಯಿನಾಡೂ .. (ತಾಯಿನಾಡೂ) ..
ಆಆಆ... ಇದು ನಮ್ಮ ತಾಯಿನಾಡೂ .. (ತಾಯಿನಾಡೂ) ..
ಹೆಣ್ಣು : ತುತ್ತೂ ಕೂಳಿಗೆ ತುತ್ತುಗಳೆದುರಿಸಿ ತತ್ತರಿಸಿದೇ ಈ ದೀನರ ವರ್ಗ
ಕೋರಸ್ : ಆಆಆಅ... ಆಆಆಅ... ಆಆಆಅ... ಆಆಆಅ... ಆಆಆಅ... ಆಆಆಅ...
ಹೆಣ್ಣು : ಆಆಆ... ತುತ್ತೂ ಕೂಳಿಗೆ ತುತ್ತುಗಳೆದುರಿಸಿ ತತ್ತರಿಸಿದೇ ಈ ದೀನರ ವರ್ಗ
ಹೊತ್ತು ಹೊತ್ತಿಗೇ ಸುಖದ ಸುಪ್ಪತ್ತಿಗೇ ಕಾಣುವ ಶ್ರೀಮಂತ ಸ್ವರ್ಗಾ..
ಕೋರಸ್ : ಈ ಶ್ರೀಮಂತ ಸ್ವರ್ಗಾ..
ಹೆಣ್ಣು : ಈ ರಕ್ತ ಶೋಷಕರ ರಾಕ್ಷಸ ಕಾಟದಿ ನರಳಿದೇ ಮಧ್ಯಮ ವರ್ಗ
ಕೋರಸ್ : ಮಧ್ಯಮ ವರ್ಗ
ಹೆಣ್ಣು : ಸಮಯ ಸಾಧಕರ ನೀಚ ಜಾಲದಲಿ ಕಾಣದೇ ಮುಂದಿನ ಮಾರ್ಗ
ಕೋರಸ್ : ಕಾಣದೇ ಮುಂದಿನ ಮಾರ್ಗ
ಹೆಣ್ಣು : ಇದು ನಮ್ಮ ಹೊನ್ನಾಡು.. (ಹೊನ್ನಾಡು).. ಆಹ್ಹಾಹಾ..ಆಆಆ... ಇದು ನಮ್ಮ ತಾಯಿನಾಡೂ .. (ತಾಯಿನಾಡೂ) ..
ಹೆಣ್ಣು : ಕಪ್ಪು ಹಣದವರ ತಪ್ಪು ನೀತಿಯಲಿ ದವಸಧಾನ್ಯಗಳೇ ಮಾಯಾ.. (ಮಾಯಾ)
ನಿತ್ಯ ಮಾಡುವವರ ಚಿತ್ರಾಭೀ ವಂಚನೇ ಬಂದಿದೆ ಎಲ್ಲಹ ಅಪಾಯ (ಅಪಾಯ)
ಕೆಲಸವಿಲ್ಲದ ವಿದ್ಯಾವಂತರೂ ದೇಶದ ಸ್ನೇಹಕೇ ಗಾಯ (ಗಾಯ)
ಈ ಸಮಸೈಗಳ ಆಗ್ನಿಪರೀಕ್ಷೇಯ ಗೆಲ್ಲುವುದೇ ದಿಗ್ವಿಜಯ (ದಿಗ್ವಿಜಯ)
ಇದು ನಮ್ಮ ಹೊನ್ನಾಡು.. (ಹೊನ್ನಾಡು).. ಆಹ್ಹಾಹಾ..ಆಆಆ... ಇದು ನಮ್ಮ ತಾಯಿನಾಡೂ .. (ತಾಯಿನಾಡೂ) ..
ಎಲ್ಲರು : ಈ ಪುಣ್ಯಭೂಮಿಗತಿ ಏನಾಯ್ತು ನೋಡು ಕಣ್ತೆರೆದು ನೋಡು
ಹೆಣ್ಣು : ಕಣ್ತೆರೆದು ನೋಡು
ಹೆಣ್ಣು : ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ ..
ಹೆಣ್ಣು : ಕಣ್ತೆರೆದು ನೋಡು
ಹೆಣ್ಣು : ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ .. ಲಲಲ್ಲಲಲಲ್ಲಾ ..
---------------------------------------------------------------------------------------------------------------------
ವಿಪ್ಲವ ವನಿತೆ (೧೯೭೫) - ಬಿಡು ಸಿಡುಕು ದುಡುಕು ಕೆಣಕು ನೋಟವ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ
ಬಿಡು ಸಿಡುಕು ದುಡುಕು ಕೆಣಕು ನೋಟವ ಕೊಡು ಒಲಿದ ಮನದ ಭಯದಕೇ ಹವಾ
ಕೋಪವೂ ಏಕೇ ಕಾಣಿಕೆ ಬೇಕೇ
ಕೋಪವೂ ಏಕೇ ಕಾಣಿಕೆ ಬೇಕೇ ಹರೆಯ ಬೀರೂ ಸಲಿಗೆ ತೋರು ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
ಬಿಡು ಸಿಡುಕು ದುಡುಕು ಕೆಣಕು ನೋಟವ ಕೊಡು ಒಲಿದ ಮನದ ಭಯದಕೇ ಹವಾ
ಕಣ್ಣಲ್ಲೇ ನಿನ್ನ ಆಸೆಯಾ ನಾ ಕಂಡೇ ಈಗ ಬಲ್ಲೆಯಾ
ಕಣ್ಣಲ್ಲೇ ನಿನ್ನ ಆಸೆಯಾ ನಾ ಕಂಡೇ ಈಗ ಬಲ್ಲೆಯಾ
ಹೆಣ್ಣು ನಾನೂ .. ಸೋತೆ ಇನ್ನೂ ..
ಹೆಣ್ಣು ನಾನೂ .. ಸೋತೆ ಇನ್ನೂ .. ಕಾಡುವುದಿಲ್ಲಾ ಬೇಡುವೆನಲ್ಲಾ..
ಕಾಡುವುದಿಲ್ಲಾ ಬೇಡುವೆನಲ್ಲಾ.. ನಿನ್ನಾ ಹಾದಿ ಹೂವೂ ನಾನೂ ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
ಬಿಡು ಸಿಡುಕು ದುಡುಕು ಕೆಣಕು ನೋಟವ ಕೊಡು ಒಲಿದ ಮನದ ಭಯದಕೇ ಹವಾ
ಲಾ.. ಲಾ.. ಲಲ್ಲಲಲ್ಲ .. ಲಾ.. ಲಾ.. ಲಾ.. ಲಾ.. ಲಾ.. ಲಾ..
ಈ ಅಂದ ಚೆಂದ ಯೌವ್ವನ ಆನಂದದಿಂದ ಜೀವನ
ಈ ಅಂದ ಚೆಂದ ಯೌವ್ವನ ಆನಂದದಿಂದ ಜೀವನ
ತಾಳೇ ನಾನೂ .. ಒಲ್ಲೇ ಏನೋ..
ತಾಳೇ ನಾನೂ .. ಒಲ್ಲೇ ಏನೋ.. ನಿನ್ನದೆಯೆಲ್ಲಾ.. ನನ್ನದು ಇಲ್ಲಾ
ನಿನ್ನದೆಯೆಲ್ಲಾ.. ನನ್ನದು ಇಲ್ಲಾ ಬೇರೆ ಭಾವ ಬೇಡವಲ್ಲಾ ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
ಬಿಡು ಸಿಡುಕು ದುಡುಕು ಕೆಣಕು ನೋಟವ ಕೊಡು ಒಲಿದ ಮನದ ಭಯದಕೇ ಹವಾ
ಕೋಪವೂ ಏಕೇ ಕಾಣಿಕೆ ಬೇಕೇ
ಕೋಪವೂ ಏಕೇ ಕಾಣಿಕೆ ಬೇಕೇ ಹರೆಯ ಬೀರೂ ಸಲಿಗೆ ತೋರು ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
ಬಿಡು ಸಿಡುಕು ದುಡುಕು ಕೆಣಕು ನೋಟವ ಕೊಡು ಒಲಿದ ಮನದ ಭಯದಕೇ ಹವಾ
ಲಾ.. ಲಾ.. ಲಲ್ಲಲಲ್ಲ .. ಲಾ.. ಲಾ.. ಲಾ.. ಲಾ.. ಲಾ.. ಲಾ..
--------------------------------------------------------------------------------------------------------------------
ವಿಪ್ಲವ ವನಿತೆ (೧೯೭೫) - ಅಮ್ಮಯ್ಯ ಈ ಗಂಡನ್ನೂ ನೋಡು
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಹೆಣ್ಣು : ಅಮ್ಮಯ್ಯ ಗಂಡನ್ನೂ ನೋಡು.. ಈ ಗಂಡನ್ನೂ ನೋಡು..
ಅಮ್ಮಯ್ಯ ಈ ಗಂಡನ್ನೂ ನೋಡು.. ಈ ಗಂಡನ್ನೂ ನೋಡು..
ನೋಡೋ ನೋಟ ಸರಿಯಾಗಿಲ್ಲಾ .. ಮನಸನಲ್ಲೇನೋ ದೇವರೇ ಬಲ್ಲ
ಮುಂದೇನೋ ಕಾಣೆನಲ್ಲ ನೀನೇ ಬೇಗ ನೋಡಿ ಹೇಳೂ
ಅಮ್ಮಯ್ಯ ಈ ಗಂಡನ್ನೂ ನೋಡು.. ಈ ಗಂಡನ್ನೂ ನೋಡು..
ಕಣ್ಣ ಕಂಡ ಬಾಳನಂತೆ ಕಣ್ಣಿನಲ್ಲಿ ನುಂಗುವಂತೇ ನಮ್ಮ ನೋಡಿ ಏನೂ ಅಂತಾನೇ ....
ಗಂಡು : ಅಬ್ಬಬ್ಬಾ ಹೆಣ್ಣನ್ನೂ ನೋಡು ಈ ಹೆಣ್ಣನ್ನೂ ನೋಡು
ಅಬ್ಬಬ್ಬಾ ಹೆಣ್ಣನ್ನೂ ನೋಡು ಈ ಹೆಣ್ಣನ್ನೂ ನೋಡು
ನೋಡೋ ನೋಟ ಚೆನ್ನಾಗಿಲ್ಲಾ ಮನದಲ್ಲೇನೋ ದೇವರೇ ಬಲ್ಲಾ..
ಹೀಗೇಕೋ ಕಾಣೇ ನಲ್ಲಾ ಕೋಪ ಬೇರೆ ಹೋಗೋ ನೋಡೋ
ಅಬ್ಬಬ್ಬಾ ಹೆಣ್ಣನ್ನೂ ನೋಡು ಈ ಹೆಣ್ಣನ್ನೂ ನೋಡು
ಹೆಂಡದಂತೆ ಕಣ್ಣು ಮಾಡಿ ಮೋಸದಿಂದ ನನ್ನ ನೋಡಿ ನುಂಗುವಂತೇ ಲೂಟಿ ಮಾಡಲೇ..
ಹೆಣ್ಣು : ಮಿಂಚಿನ ಬಳ್ಳಿ ಹಿಡಿಯೋರು ಹೇಳೋ ಯಾರುಂಟು ಮೇಘದ ಮೇಲೆ ಜಾರೋರು ಇಲ್ಲಿ ಯಾರುಂಟು
ಮಿಂಚಿನ ಬಳ್ಳಿ ಹಿಡಿಯೋರು ಹೇಳೋ ಯಾರುಂಟು ಮೇಘದ ಮೇಲೆ ಜಾರೋರು ಇಲ್ಲಿ ಯಾರುಂಟು
ಮೀನಿನ ಹೆಜ್ಜೆ ಕಂಡೋರಿಲ್ಲ ಹೆಣ್ಣಿನ ಕನಸ ಅರಿತೋರಿಲ್ಲಾ
ಎಲ್ಲೋ ಕಾಣೆ ಆಸೇ ಕೂಡಿ ಬಲ್ಲೆನೆಲ್ಲೋ ಮೂಡರ ಕಳ್ಳ
ಅಮ್ಮಯ್ಯ ಈ ಗಂಡನ್ನೂ ನೋಡು.. ಈ ಗಂಡನ್ನೂ ನೋಡು..
ಕಣ್ಣ ಕಂಡ ಬಾಳನಂತೆ ಕಣ್ಣಿನಲ್ಲಿ ನುಂಗುವಂತೇ ನಮ್ಮ ನೋಡಿ ಏನೂ ಅಂತಾನೇ ....ಅಹ್ಹಹ್ಹಹ್ಹಹ್ಹಹ್ಹ
ಗಂಡು : ಓದು ಬರಹ ನಿಂಗೇನೋ ಧೈರ್ಯ ಕೊಡದಮ್ಮಾ ಗಂಡಿನ ನೆಚ್ಚುಕೊಳ್ಳೋಕೆ ಎಲ್ಲೂ ನಿಗದಮ್ಮಾ
ಓದು ಬರಹ ನಿಂಗೇನೋ ಧೈರ್ಯ ಕೊಡದಮ್ಮಾ ಗಂಡಿನ ನೆಚ್ಚುಕೊಳ್ಳೋಕೆ ಎಲ್ಲೂ ನಿಗದಮ್ಮಾ
ಆಸರೇ ಇರದೇ ಬಳ್ಳಿ ಇರದೂ ಒಂಟಿ ಬಾಳೂ ನೆಮ್ಮದಿ ತರದು
ನೂರು ಮಾತು ಏಕೆ ಹೇಳೂ ಇನ್ನೂ ನಿನ್ನ ಸರಿ ಬಾಳೂ
ಅಬ್ಬಬ್ಬಾ ಹೆಣ್ಣನ್ನೂ ನೋಡು ಈ ಹೆಣ್ಣನ್ನೂ ನೋಡುನೋಡೋ ನೋಟ ಚೆನ್ನಾಗಿಲ್ಲಾ ಮನದಲ್ಲೇನೋ ದೇವರೇ ಬಲ್ಲಾ..
ಹೀಗೇಕೋ ಕಾಣೇ ನಲ್ಲಾ ಕೋಪ ಬೇರೆ ಹೋಗೋ ನೋಡೋ
ಅಬ್ಬಬ್ಬಾ ಹೆಣ್ಣನ್ನೂ ನೋಡು ಈ ಹೆಣ್ಣನ್ನೂ ನೋಡು
ಹೆಂಡದಂತೆ ಕಣ್ಣು ಮಾಡಿ ಮೋಸದಿಂದ ನನ್ನ ನೋಡಿ ನುಂಗುವಂತೇ ಲೂಟಿ ಮಾಡಲೇ..
ಹೆಣ್ಣು : ಕಾಲೇಜಲ್ಲಿ ಈ ಪಾಠ ಯಾರೂ ಹೇಳೊಲ್ಲಾ.. ಹೆಣ್ಣನ ಗೆಲ್ಲೋ ರೀತಿನ ಯಾರೂ ಕಲಿಸೊಲ್ಲಾ ..
ಕಾಲೇಜಲ್ಲಿ ಈ ಪಾಠ ಯಾರೂ ಹೇಳೊಲ್ಲಾ.. ಹೆಣ್ಣನ ಗೆಲ್ಲೋ ರೀತಿನ ಯಾರೂ ಕಲಿಸೊಲ್ಲಾ ..
ಕಣ್ಣಲಿ ಸರಸ ಆಡಲು ಬಲ್ಲ ರಸಿಕನೂ ಎಲ್ಲ ಗೆಲ್ಲಬಲ್ಲ
ನೂರು ಮಾತು ಆಡೋ ಇಂಥ ಗಂಡಿನ ಬೆಳೆ ಬೇಯೋದಿಲ್ಲಾ..
ಅಮ್ಮಯ್ಯ ಗಂಡನ್ನೂ ನೋಡು.. ಈ ಗಂಡನ್ನೂ ನೋಡು..ಹೆಣ್ಣು : ಕಾಲೇಜಲ್ಲಿ ಈ ಪಾಠ ಯಾರೂ ಹೇಳೊಲ್ಲಾ.. ಹೆಣ್ಣನ ಗೆಲ್ಲೋ ರೀತಿನ ಯಾರೂ ಕಲಿಸೊಲ್ಲಾ ..
ಕಾಲೇಜಲ್ಲಿ ಈ ಪಾಠ ಯಾರೂ ಹೇಳೊಲ್ಲಾ.. ಹೆಣ್ಣನ ಗೆಲ್ಲೋ ರೀತಿನ ಯಾರೂ ಕಲಿಸೊಲ್ಲಾ ..
ಕಣ್ಣಲಿ ಸರಸ ಆಡಲು ಬಲ್ಲ ರಸಿಕನೂ ಎಲ್ಲ ಗೆಲ್ಲಬಲ್ಲ
ನೂರು ಮಾತು ಆಡೋ ಇಂಥ ಗಂಡಿನ ಬೆಳೆ ಬೇಯೋದಿಲ್ಲಾ..
ನೋಡೋ ನೋಟ ಸರಿಯಾಗಿಲ್ಲಾ .. ಮನಸನಲ್ಲೇನೋ ದೇವರೇ ಬಲ್ಲ
ಮುಂದೇನೋ ಕಾಣೆನಲ್ಲ ನೀನೇ ಬೇಗ ನೋಡಿ ಹೇಳೂ
ಅಮ್ಮಯ್ಯ ಗಂಡನ್ನೂ ನೋಡು.. ಈ ಗಂಡನ್ನೂ ನೋಡು..
ಕಣ್ಣ ಕಂಡ ಬಾಳನಂತೆ ಕಣ್ಣಿನಲ್ಲಿ ನುಂಗುವಂತೇ ನಮ್ಮ ನೋಡಿ ಏನೂ ಅಂತಾನೇ ....
ಆಆಆಆ... ಹೇಹೇಹೇಹೇಹೇಹೇಹೇ
---------------------------------------------------------------------------------------------------------------------
ವಿಪ್ಲವ ವನಿತೆ (೧೯೭೫) - ಯೌವ್ವನ ಬಂದಾಗ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಲ್.ಆರ್.ಈಶ್ವರಿ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ...
---------------------------------------------------------------------------------------------------------------------
ವಿಪ್ಲವ ವನಿತೆ (೧೯೭೫) - ಇದೇ ಇದೇ ವಂಚಕರ ಲೋಕವಿದೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ
ಇದೇ ಇದೇ ವಂಚಕರ ಲೋಕವಿದೇ ನ್ಯಾಯಕ್ಕೆ ನೆಲೆಯಿಲ್ಲದೇ ಸತ್ಯ ಧರ್ಮ ಮರೆಯಾಗಿದೆ
ಇದೇ ಇದೇ ವಂಚಕರ ಲೋಕವಿದೇ ನ್ಯಾಯಕ್ಕೆ ನೆಲೆಯಿಲ್ಲದೇ ಸತ್ಯ ಧರ್ಮ ಮರೆಯಾಗಿದೆ
ಹಣದ ಮೋಹವದೂ ಬಲೆ ಬೀಸಿದೆ ಗುಣವು ಮಾನವಗೇ ಬಲಿಯಾಗಿದೆ
ಈ ಮನದ ರಣರಂಗ ಇಂದಾಗಿದೇ ಬಡವರ ಕಣ್ಣಿರಿಗೇ ಕೊನೆಯಲ್ಲಿದೇ ....
ಇಲ್ಲಾ... ಇಲ್ಲಾ.. ಇಟ್ಸ್ ಹಾರ್ಟ್ ಬ್ಲೆಸ್ ವರ್ಲ್ಡ್ ಅಹ್ಹಹ್ಹಹ್ಹ... ವಾಟ್ ಏ ಪಿಟ್ಟೀ .... ಅಹ್ಹಹ್ಹಹ್ಹ.....
ಎಲ್ಲೆಲ್ಲಿಯೂ ಅನ್ಯಾಯವೇ ತಲೆ ಎತ್ತಿ ಮೆರೆದಾಡಿದೇ ......
ಇದೇ ಇದೇ ವಂಚಕರ ಲೋಕವಿದೇ ನ್ಯಾಯಕ್ಕೆ ನೆಲೆಯಿಲ್ಲದೇ ಸತ್ಯ ಧರ್ಮ ಮರೆಯಾಗಿದೆ
ಪದವಿಗೆ ಕಾದಾಟ ನಡೆಸುವುರುಂಟೇ.... ಎಂದೆಂದೂ ಕಚ್ಚಾಡೋ ನಾಯಿಗಳಂತೇ
ದ್ವೇಷ ಧರಿಸಿ ರಕ್ತ ಹೀರೊ ನರಿಗಳ ಸಂತೇ... ಇವರಿಂದ ಬಿಡುಗಡೆಯೂ ಎಂದಂತೇ...
ಎಂದೂ ... ಎಂದೂ .... ನೇವರ್ ಅಹ್ಹಹ್ಹಹ್ಹ... ದೇರ್ ಫಾರ್ ಎವರ್ ... ಅಹ್ಹಹ್ಹಹ್ಹಹಹ.....
ಎಲ್ಲೆಲ್ಲಿಯೂ ಅನ್ಯಾಯವೇ ತಲೆ ಎತ್ತಿ ಮೆರೆದಾಡಿದೇ ......
ಇದೇ ಇದೇ ವಂಚಕರ ಲೋಕವಿದೇ ನ್ಯಾಯಕ್ಕೆ ನೆಲೆಯಿಲ್ಲದೇ ಸತ್ಯ ಧರ್ಮ ಮರೆಯಾಗಿದೆ
ಹಸಿವನು ತೀರಿಸುವ ಹಂಬಲದಲ್ಲಿ ಸೂತ್ರದ ಬೊಂಬೆಗಳೂ ಇರುವರೂ ಇಲ್ಲಿ...
ಕಾಮಾಂಧ ಪಶುವಂತೆ ನಡೆವರ ಕೈಯಲ್ಲಿ ಶೀಲದ ಮಾರಾಟ ನಡೆದಿದೇ ಇಲ್ಲಿ
ಹೇ... ಗಾಡ್ ವಾಟ್ ಯೂ ಷೇಮ್.. ವಾಟ್ ಯೂ ಷೇಮ್.. ಅಹ್ಹಹ್ಹಹ್ಹ ...
ಹೀತ ಕಾಣದೇ ಕೈಲಾಗದೇ ಆ ದೈವ ಕಲ್ಲಾಗಿದೇ ...
ಇದೇ ಇದೇ ವಂಚಕರ ಲೋಕವಿದೇ ನ್ಯಾಯಕ್ಕೆ ನೆಲೆಯಿಲ್ಲದೇ ಸತ್ಯ ಧರ್ಮ ಮರೆಯಾಗಿದೆ
ಧರ್ಮ ಸತ್ಯ ಮರೆಯಾಗಿದೆ.... ಮರೆಯಾಗಿದೆ... ಅಹ್ಹಹ್ಹಹ್ಹ ... ಮರೆಯಾಗಿದೆ
---------------------------------------------------------------------------------------------------------------------
No comments:
Post a Comment