ವೀರಾಧಿವೀರ ಚಲನಚಿತ್ರದ ಹಾಡುಗಳು
- ಪ್ರೇಮದ ವಿಜಯ ಕಂಡೆ
- ಬಿಟ್ಟೋರುಂಟೇ ಇಂಥಾ ಗಂಡನು ಅಮ್ಮಯ್ಯ
- ಬಾಳಿನಲಿ ಇಂಥ ಜಾಣನ ಕಂಡಿಲ್ಲ
- ಬಂಧುಗಳೇ ನನ್ನವರೇ ... ಆಆಆ...
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಪ್ರೇಮದ ವಿಜಯ ಕಂಡೇ ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ
ಒಲವ ಬಯಸಿ ಬಯಸಿ ಬಂದೆ ನಲ್ಲೆ....
ಹೆಣ್ಣು : ಆಯ್ ಲವ್ ಯೂ ....
ಪ್ರೇಮದ ವಿಜಯ ಕಂಡೆ ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ ನಲ್ಲಾ ...
ಗಂಡು : ಆಯ್ ಲವ್ ಯೂ ..
ಗಂಡು : ಈ ಬಾಳಿನಲ್ಲಿ ನೀ ಹಾಡಿರುವ ಈ ಪ್ರೇಮಗೀತೆ
ನಾ ಕೇಳುತಲಿ ಮೈ ಮರೆಯುತಲಿ ಆನಂದ ಕಂಡೆ
ಹೆಣ್ಣು : ಯಾರನು ಕಾಣೆನು ನಿನ್ನಂತೆ ನೀನಾಡಿದ ನುಡಿಗಳು ಮುತ್ತಂತೆ
ಮರೆತೇ ಇನಿಯ ನಿನ್ನ ಚಿಂತೇ
ಗಂಡು : ಪ್ರೇಮದ ವಿಜಯ ಕಂಡೇ ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ
ಒಲವ ಬಯಸಿ ಬಯಸಿ ಬಂದೆ ನಲ್ಲೆ....
ಹೆಣ್ಣು : ಆಯ್ ಲವ್ ಯೂ ....
ಹೆಣ್ಣು : ಈ ಕಣ್ಣಿನಲಿ ಈ ಹೃದಯದಲಿ ನೀ ತುಂಬಿ ನಿಂತೇ
ಈ ತನುವಿನಲಿ ನನ್ನುಸಿರಿನಲಿ ನೀ ಸೇರಿ ಹೋದೆ
ಗಂಡು : ಮೋಹದ ಬಲೆಯಲಿ ನೀನಾದೆ ಈ ಮೋಹಿನಿ ಬದುಕಲಿ ಒಂದಾದೆ
ನನ್ನ ಜೀವ ನೀನಾದೆ
ಹೆಣ್ಣು : ಆಯ್ ಲವ್ ಯೂ ....
ಪ್ರೇಮದ ವಿಜಯ ಕಂಡೆ ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ ನಲ್ಲಾ ...
ಗಂಡು : ಆಯ್ ಲವ್ ಯೂ ..
--------------------------------------------------------------------------------------------------------------------------
ವೀರಾಧಿವೀರ (೧೯೮೫) - ಬಿಟ್ಟೋರುಂಟೇ ಇಂಥಾ ಗಂಡನು ಅಮ್ಮಯ್ಯ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಕೋರಸ್
ಗಂಡು : ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಕೋರಸ್ : ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಗಂಡು : ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ಕೋರಸ್ : ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಗಂಡು : ಕಣ್ಣಿಗಿಂತ ಮೂಗು ಚೆನ್ನ ಮೂಗಿಗಿಂತ ಬಾಯಿ ಚೆನ್ನ
ಮೊರೆಗಿಂತ ಹೊಟ್ಟೆ ಚೆನ್ನ ಹೊಟ್ಟೆಗಿಂತ ಬಟ್ಟೆ ಚೆನ್ನ
ಅರೇ .. ಹೇಹೇಹೇಹೇಹೇ .. ಎಲ್ಲಾ ಚೆನ್ನ ಇವನಾ ಗುಣವೂ
ಪುಟ್ಟವಿಟ್ಟ ಚಿನ್ನ .. ಪುಟವಿಟ್ಟ.. ಚಿನ್ನ
ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಕೋರಸ್ : ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಗಂಡು : ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ಕೋರಸ್ : ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಕೋರಸ್ : ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಗಂಡು : ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ಕೋರಸ್ : ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಗಂಡು : ಸುಳ್ಳನು ಹೇಳೋದು ಗೊತ್ತಿಲ್ಲ ಮೋಸವನ್ನು ಮಾಡೋದು ಅರಿತಿಲ್ಲ
ನನ್ನಾಣೆ ಮನೆಹಾಳ ಇವನಲ್ಲ ಹೇಹೇಹೇಹೇಹೇ.. ಇವನ ಬಿಟ್ಟರೇ ..
ನೀನು ಉದ್ದಾರವಾಗಲ್ಲ .. ಉದ್ದಾರವಾಗಲ್ಲ
ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಕೋರಸ್ : ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಗಂಡು : ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ಕೋರಸ್ : ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಕೋರಸ್ : ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಗಂಡು : ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ಕೋರಸ್ : ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಗಂಡು : ನಿನ್ನಂದ ನೋಡೋನು ಬಂದಿಲ್ಲ ನಿನ್ನಾಸ್ತೀನೆ ಏನು ಕಂಡಿಲ್ಲ
ಕಾಲಿಂದ ಒದ್ದರು ನೀ ಹೋಗಲ್ಲ ಅರೇ .. ಹೇಹೇಹೇಹೇ .. ಪ್ರೀತಿ ಮಾತಾಡು ಸಾಕು
ಬೇರೇನೂ ಬೇಕಿಲ್ಲ .. ಬೇರೇನೂ ಬೇಕಿಲ್ಲ ..
ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಕೋರಸ್ : ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಗಂಡು : ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ಕೋರಸ್ : ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಕೋರಸ್ : ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಗಂಡು : ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ಕೋರಸ್ : ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
-------------------------------------------------------------------------------------------------------------------------
ವೀರಾಧಿವೀರ (೧೯೮೫) - ಬಾಳಿನಲಿ ಇಂಥ ಜಾಣನ ಕಂಡಿಲ್ಲ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಕೋರಸ್
ಬಾಳಿನಲಿ ಇಂಥ ಜಾಣನ ಕಂಡಿಲ್ಲ ಊರಿಗೊಬ್ಬ ಇದ್ದರೇ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ ಯಾಕಿಲ್ಲ ನಿಂತನೋ ಕಾಣೆ ಇವನಂಥ ಗಂಡನಾ ಕಾಣೆ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನಾ
ಊರೇ ಹಾಡಿದೆ ಇಂದು ನಿನ್ನ ಕೊಂಡಾಡಿ ಊರೇ ಹೋಗಲಿದೆ ನೋಡು ಕುಣಿದಾಡಿ

ನಮಗೆ ಜಯವ ಇಂದು ತಂದ ದುರುಳರ ಕಾಟ ನೀವಾರಿಸಿ
ಹಳ್ಳಿಯ ನುಂಗಲು ಬಂದಾ ಭೂತ ಭಯದಿಂದ ಓಡಿ ಹೋಯಿತು ನಿನ್ನ ದಯೆಯಿಂದಾ ಬಾ
ಬಾಳಿನಲಿ ಇಂಥ ಜಾಣನ ಕಂಡಿಲ್ಲ ಊರಿಗೊಬ್ಬ ಇದ್ದರೇ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ ಯಾಕಿಲ್ಲ ನಿಂತನೋ ಕಾಣೆ ಇವನಂಥ ಗಂಡನಾ ಕಾಣೆ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನಾ
ನಿನ್ನಾ ಕೀರುತಿ ಮುಟ್ಟಿತು ಇಂದು ಆಕಾಶ ನೋಡು ಎಲ್ಲೆಡೆ ಸಂತೋಷ
ನಮ್ಮ ಬದುಕು ಬಂಗಾರವಾಯ್ತು ಈ ದಿನ ನಿನ್ನ ಉಪಾಯದಿಂದ
ನನ್ನ ಮನಸು ಗೆದ್ದು ನೀನು ದೊರೆಯಾದೆ ಇರುಳು ತುಂಬಿದ ಹಳ್ಳಿಗೆ ಬೆಳಕಾದೆ
ಬಾಳಿನಲಿ ಇಂಥ ಜಾಣನ ಕಂಡಿಲ್ಲ ಊರಿಗೊಬ್ಬ ಇದ್ದರೇ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ ಯಾಕಿಲ್ಲ ನಿಂತನೋ ಕಾಣೆ ಇವನಂಥ ಗಂಡನಾ ಕಾಣೆ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನಾ
-------------------------------------------------------------------------------------------------------------------------
ವೀರಾಧಿವೀರ (೧೯೮೫) - ಬಂಧುಗಳೇ ನನ್ನವರೇ ... ಆಆಆ...
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಬಂಧುಗಳೇ ನನ್ನವರೇ... ಆಆಆ..
ಎಲ್ಲಿಗೆ ಪಯಣ ಏನಿದು ಈ ಮೌನ ಹುಟ್ಟಿದ ಮಣ್ಣನು ಬಿಟ್ಟೋಡಿದರೇ ನೆಮ್ಮದಿ ಕಾಣುವುದೇ
ಹೆದರಿದ ಕಣ್ಣಿಗೆ ಬೆದರಿದ ಮನಸಿಗೆ ಶಾಂತಿಯ ದೊರಕುವುದೇ..
ನಿಲ್ಲಿರಿ ಒಂದಾಗಿ ಸುಖ ಕಾದಿದೆ ನಿಮಗಾಗಿ
ಒಂದೇ ಬಾರಿ ಸಾಯುವುದೆಂದು ವೀರನ ಬದುಕಲ್ಲಿ
ಅನುದಿನ ಸಾಯುವ ಅನುದಿನ ಬದುಕುವೆ ಹೇಡಿಯ ಬಾಳಲ್ಲಿ
ವೈರಿಯ ಎದುರಿಸಲು ಛಲಬೇಕು ಮನಸಿನೊಳು
ಎಲ್ಲಿಗೆ ಪಯಣ ಏನಿದು ಈ ಮೌನ ಹುಟ್ಟಿದ ಮಣ್ಣನು ಬಿಟ್ಟೋಡಿದರೇ ನೆಮ್ಮದಿ ಕಾಣುವುದೇ
ಹೆದರಿದ ಕಣ್ಣಿಗೆ ಬೆದರಿದ ಮನಸಿಗೆ ಶಾಂತಿಯ ದೊರಕುವುದೇ..
ನಿಲ್ಲಿರಿ ಒಂದಾಗಿ ಸುಖ ಕಾದಿದೆ ನಿಮಗಾಗಿ
ಪ್ರಾಣಕೆ ಪ್ರಾಣ ಕೊಡುವೆನು ಬನ್ನಿ ನನಗಾಗಿ
ದುಷ್ಟರ ಕೂಟ ಅಳಿಸುವ ಕ್ಷಣದಿ ಎಲ್ಲಾ ಜೊತೆಯಾಗಿ
ಜಯವು ನಮದಿನ್ನೂ ಜಯಜಯವು ನಮದಿನ್ನೂ
ಎಲ್ಲಿಗೆ ಪಯಣ ಏನಿದು ಈ ಮೌನ ಹುಟ್ಟಿದ ಮಣ್ಣನು ಬಿಟ್ಟೋಡಿದರೇ ನೆಮ್ಮದಿ ಕಾಣುವುದೇ
ಹೆದರಿದ ಕಣ್ಣಿಗೆ ಬೆದರಿದ ಮನಸಿಗೆ ಶಾಂತಿಯ ದೊರಕುವುದೇ..
ನಿಲ್ಲಿರಿ ಒಂದಾಗಿ ಸುಖ ಕಾದಿದೆ ನಿಮಗಾಗಿ
-------------------------------------------------------------------------------------------------------------------------
No comments:
Post a Comment