1315. ವಿಷ್ಣು ವಿಜಯ (೧೯೯೩)


ವಿಷ್ಣು ವಿಜಯ ಚಲನಚಿತ್ರದ ಹಾಡುಗಳು
  1. ಸಾವಿರ ಜನುಮದ ಪ್ರೀತಿಯ ಬಂಧನ
  2. ಎಂಥ ಸಂತೋಷ ಎಂಥ ಉಲ್ಲಾಸ
  3. ನನ್ನನ್ನೂ ನೀ ಸೇರು ಬಾ
  4. ರಾಜಾ ನನ್ನ ರಾಜ 
  5. ಕಣ್ಣಲ್ಲಿ ಧೀಮ್ ಧೀಮ್ ಧೀಮ್
ವಿಷ್ಣು ವಿಜಯ (೧೯೯೩) - ಸಾವಿರ ಜನುಮದ ಪ್ರೀತಿಯ
ಸಂಗೀತ: ಜತೀನ್ ಲಲಿತ, ಸಾಹಿತ್ಯ: ಗೀತಪ್ರಿಯ, ಗಾಯನ: ಎಸ್.ಪಿ. ಬಿ, ಮಂಜುಳಾ ಗುರುರಾಜ್

ಗಂಡು: ಸಾವಿರ ಜನುಮದ ಪ್ರೀತಿಯ ಬಂಧನ
            ನನ್ನಯ ನಿನ್ನಯ ಸಂಬಂಧ ಪ್ರೇಮವು ತುಂಬಿದ ನಿನ್ನಾ
            ಹೃದಯದ ಮಲ್ಲಿಗೆ ಹರಡಿದೆ ಸೌಗಂಧ
ಹೆಣ್ಣು: ಹೃದಯದ ಮಂದಿರ ನಿನ್ನದಾಗಿದೆ
           ದೀಪ ಹಚ್ಚಿದೆ ನಿನಗಾಗಿ ಪ್ರೇಮ ಪೂಜೆಗೇ
           ಪ್ರಾಣ ಮೀಸಲು ಕಾದು ನಿಂತೇನು ವಧುವಾಗಿ
ಗಂಡು: ಸಾವಿರ ಜನುಮದ ಪ್ರೀತಿಯ ಬಂಧನ
            ನನ್ನಯ ನಿನ್ನಯ ಸಂಬಂಧ ಪ್ರೇಮವು ತುಂಬಿದ ನಿನ್ನಾ
            ಹೃದಯದ ಮಲ್ಲಿಗೆ ಹರಡಿದೆ ಸೌಗಂಧ

ಗಂಡು: ಬಯಸಲು ನೀ ತಾರೆಗಳ ಸಿಂಧೂರವನೆ ಹಣೆಗಿಡುವೆ
            ಜೀವನದಿ ಸುಖವನ್ನೇ ನಿನ್ನ ಹೆಸರಿಗೆ ಬರೆದಿಡುವೇ....
            ಲಲಲಲಾ.. ಲಲಲಲಾ... ಲಲಲಲಾ
            ಬಯಸಲು ನೀ ತಾರೆಗಳ ಸಿಂಧೂರವನೆ ಹಣೆಗಿಡುವೆ
            ಜೀವನದಿ ಸುಖವನ್ನೇ ನಿನ್ನ ಹೆಸರಿಗೆ ಬರೆದಿಡುವೇ
ಹೆಣ್ಣು: ಈ ಬಾಳ ಸಿಂಧೂರ ನೀನೆ ಆಗಿರುವಾಗ
           ಮೈಮನಕೆ ಸಂತೋಷ ತಂದಿತು ಶುಭಯೋಗ
ಗಂಡು: ಸಾವಿರ ಜನುಮದ ಪ್ರೀತಿಯ ಬಂಧನ
            ನನ್ನಯ ನಿನ್ನಯ ಸಂಬಂಧ ಪ್ರೇಮವು ತುಂಬಿದ ನಿನ್ನಾ
            ಹೃದಯದ ಮಲ್ಲಿಗೆ ಹರಡಿದೆ ಸೌಗಂಧ

ಹೆಣ್ಣು: ನಿನ್ನೋಲುಮೆ ನೆರಳಲ್ಲಿ ಸಾಗುವ ಆಸೆ  ಬಾಳೆಲ್ಲ 
        ನೀ ಜೋತೆಗೆ ಇರುವಾಗ ಲೋಕದ ಚಿಂತೆ ನನಗಿಲ್ಲ ಎಯ್
ಗಂಡು: ನಮ್ಮ ಪ್ರೀತಿ ಆನಂದ ಇಲ್ಲವೇ ಇಲ್ಲ ಎಲ್ಲೆ
           ಆ ಪ್ರೇಮ ದಿಗಂತ ಸೇರುವ ಬಾ ನಲ್ಲೇ
            ಸಾವಿರ ಜನುಮದ ಪ್ರೀತಿಯ ಬಂಧನ
            ನನ್ನಯ ನಿನ್ನಯ ಸಂಬಂಧ ಪ್ರೇಮವು ತುಂಬಿದ ನಿನ್ನಾ
            ಹೃದಯದ ಮಲ್ಲಿಗೆ ಹರಡಿದೆ ಸೌಗಂಧ

ಗಂಡು: ಹೃದಯ ಮಂದಿರ ನಿನ್ನದಾಗಿದೆ ಮಧುರವಾಗಿದೆ
            ಅನುರಾಗ ಮನಸ್ಸು ಮಾಗಿದೆ ಕನಸ್ಸು ಕೂಗಿದೆ
            ಎದೆಯ ಭಾವನೆ ಮಿಡಿದಾಗ
ಇಬ್ಬರು: ಸಾವಿರ ಜನುಮದ ಪ್ರೀತಿಯ ಬಂಧನ
            ನನ್ನಯ ನಿನ್ನಯ ಸಂಬಂಧ ಪ್ರೇಮವು ತುಂಬಿದ ನಿನ್ನಾ
            ಹೃದಯದ ಮಲ್ಲಿಗೆ ಹರಡಿದೆ ಸೌಗಂಧ
---------------------------------------------------------------------

ವಿಷ್ಣು ವಿಜಯ (೧೯೯೩) - ಎಂಥ ಸಂತೋಷ ಎಂಥ ಉಲ್ಲಾಸ
ಸಂಗೀತ: ಜತೀನ್ ಲಲಿತ, ಸಾಹಿತ್ಯ: ಗೀತಪ್ರಿಯ, ಗಾಯನ: ಎಸ್.ಪಿ. ಬಿ, ಮಂಜುಳಾ ಗುರುರಾಜ್

ಹೆಣ್ಣು:  ಲಾ ಲಾ ಲಾ ಲಾ.. ಲಾಲಾಲಾಲಾಲಾಲಾ
            ಎಂಥಾ ಸಂತೋಷ ಎಂಥ ಉಲ್ಲಾಸ ಚೆಲುವ
            ನಿನ್ನನ್ನು ಕಂಡಾಗ
            ಎಂಥಾ ಸಂತೋಷ ಎಂಥ ಉಲ್ಲಾಸ ಚೆಲುವ
            ನಿನ್ನನ್ನು ಕಂಡಾಗ
            ಸುಮ್ಮನೇ ಏಕೇ ಓಡುವೇ ಆಗಸವೇಕೆ ನೋಡುವೆ
            ನನ್ನೆದೇ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಸಿಂಹದಂತೆ
ಗಂಡು: ಎಂಥಾ ಸಂತೋಷ ಎಂಥ ಹೆಣ್ಲೆ ನಿನ್ನನ್ನು ಕಂಡಾಗ
            ಎಂಥಾ ಸಂತೋಷ ಎಂಥ ಹೆಣ್ಲೆ ನಿನ್ನನ್ನು ಕಂಡಾಗ
          ಸುಮ್ಮನೇ ಏಕೇ ಓಡುವೇ ಓಯ್ ಆಗಸವೇಕೆ ನೋಡುವೆ
            ನನ್ನೆದೇ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಹಂಸದಂತೆ
ಹೆಣ್ಣು: ಎಂಥಾ ಸಂತೋಷ ಎಂಥ ಉಲ್ಲಾಸ ಚೆಲುವ
            ನಿನ್ನನ್ನು ಕಂಡಾಗ

ಗಂಡು: ಆಹ್ ಕಣ್ಣು ಕಣ್ಣು ‌ಸೇರಲು ನೂರು ವೀಣೆ ಮೀಟಿದಂತೆ
           ನಾದ ಇಂಪಾಗಿ ಹೊಮ್ಮುತಿರೆ ನಲ್ಲೇ ಕೇಳದೇ..
           ಮೈಗೇ ಮೈಯಿ ಸೋಕಲು ಆಸೆ ನೂರು ಚಿಮ್ಮಿ ದಾಗ
           ಮಿಂಚು ನನ್ನಲ್ಲಿ ಓಡುತಿದೆ ಹೇಗೇ ತಾಳಲೇ
           ಮನದ ಹಕ್ಕಿ ಹಾರುತ ಬೇರೆ ಏನೋ ಬೇಕು ಎಂಬ
           ಆತುರ ಚಿನ್ನ ತಾಳಲಾರೇ...
ಹೆಣ್ಣು: ಎಂಥಾ ಸಂತೋಷ ಎಂಥ ಉಲ್ಲಾಸ ಚೆಲುವ
            ನಿನ್ನನ್ನು ಕಂಡಾಗ

ಗಂಡು: ಹೇ..ಹೇ..ಏಯ್.. ಚಿನ್ನ ರನ್ನ ಎನ್ನೆನೂ ಬೇರೆ
            ಎನು ಹೇಳಲಾರೆ ಇಲ್ಲೇ ತುಟಿಗೊಂದು ಮುತ್ತು
            ಕೊಡು ನನ್ನಾ ಪ್ರೇಯಸೀ.. ಹೂಂ..ಆಹ..
            ಮತ್ತೆ ಒಂದು ಕೇಳೆನೂ ನಂಬು ನೀನು ನನ್ನನೀಗ
            ತನುವ ತೊಳಿಂದ ಬಳಸಿ ಬಿಡು ಸಾಕು ಊರ್ವಶಿ
            ಹೂವ ಮೆತ್ತೆ ಹಾಸುವೆ ಒಲವ ಗೀತೆ ಹಾಡುವೇ
            ಹಗಲು ರಾತ್ರಿ ಒಂದೆ ಎಂದು ಹೇಳುವಾ ಹಾಗೆ
            ಮಾಡಿ ಬಿಡುವೆ
ಹೆಣ್ಣು:  ಎಂಥಾ ಸಂತೋಷ ಎಂಥ ಉಲ್ಲಾಸ ಚೆಲುವ
            ನಿನ್ನನ್ನು ಕಂಡಾಗ
            ಎಂಥಾ ಸಂತೋಷ ಎಂಥ ಉಲ್ಲಾಸ ಚೆಲುವ
            ನಿನ್ನನ್ನು ಕಂಡಾಗ
            ಸುಮ್ಮನೇ ಏಕೇ ಓಡುವೇ ಆಗಸವೇಕೆ ನೋಡುವೆ
            ನನ್ನೆದೇ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಸಿಂಹದಂತೆ
ಗಂಡು: ಎಂಥಾ ಸಂತೋಷ ಎಂಥ ಹೆಣ್ಲೆ ನಿನ್ನನ್ನು ಕಂಡಾಗ
            ಎಂಥಾ ಸಂತೋಷ ಎಂಥ ಹೆಣ್ಲೆ ನಿನ್ನನ್ನು ಕಂಡಾಗ
          ಸುಮ್ಮನೇ ಏಕೇ ಓಡುವೇ ಓಯ್ ಆಗಸವೇಕೆ ನೋಡುವೆ
            ನನ್ನೆದೇ ತಾಳ ಕೇಳಿ ಒಮ್ಮೆ ಹೆಜ್ಜೆಯ ಹಾಕು ಹಂಸದಂತೆ
ಹೆಣ್ಣು: ಎಂಥಾ ಸಂತೋಷ ಎಂಥ ಉಲ್ಲಾಸ ಚೆಲುವ
            ನಿನ್ನನ್ನು ಕಂಡಾಗ
---------------------------------------------------------------------

ವಿಷ್ಣು ವಿಜಯ (೧೯೯೩) -  ನನ್ನನ್ನೂ ನೀ ಸೇರು ಬಾ
ಸಂಗೀತ: ಜತೀನ್ ಲಲಿತ, ಸಾಹಿತ್ಯ: ಗೀತಪ್ರಿಯ, ಗಾಯನ: ಎಸ್.ಪಿ. ಬಿ, ಚಿತ್ರ

ಹೆಣ್ಣು: ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
          ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
          ಪ್ರೇಮದ ಸರಸ ಸೇರಲಿ ಕಾಣದ ಹರುಷ ಬಾಳಲ್ಲಿ ತಂದು
ಗಂಡು: ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
           ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
          ಪ್ರೇಮದ ಸರಸ ಸೇರಲಿ ಕಾಣದ ಹರುಷ ಬಾಳಲ್ಲಿ ತಂದು
ಹೆಣ್ಣು: ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ

ಹೆಣ್ಣು: ಓಹೋ..ನಲ್ಲಾ ಹೂವಲ್ಲೇ ಶ್ರೀಗಂಧ
           ಒಂದಾದ ಹಾಗೆನುವೆನೂ ನಿನ್ನಲ್ಲಿ ನಾನಾಗಿ
           ನನ್ನನ್ನೇ ನಾ ಮರೆವೆನೂ ಹೂ..ಹೂ
           ನಲ್ಲಾ ಹೂವಲ್ಲೇ ಶ್ರೀಗಂಧಒಂದಾದ ಹಾಗೆನುವೆನೂ
           ನಿನ್ನಲ್ಲಿ ನಾನಾಗಿ ನನ್ನನ್ನೇ ನಾ ಮರೆವೆನೂ
ಗಂಡು: ನನ್ನ ಬಂಗಾರ ಇನ್ನೂ ಕಾಯಲಾರೇ..
            ನನ್ನ ಬಂಗಾರ ಇನ್ನೂ ಕಾಯಲಾರೇ
            ನನ್ನನ್ನೂ ನೀ ಸೇರು ಬಾರೇ
ಇಬ್ಬರು: ಪ್ರೇಮದ ಸರಸ ಸೇರಲಿ
             ಕಾಣದ ಹರುಷ ಬಾಳಲ್ಲಿ ತಂದು
ಗಂಡು:  ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ

ಗಂಡು: ಆಹ ಆಹ ಅಅಹ ಆಹ ಆಹ ಆಹ ಓಹೋ ಓಹೋ
            ನನ್ನಾಣೆ ನಾನೆಂದು ನಿನ್ನಿಂದ ದೂರಾಗೇನೂ
          ಕನಸಲ್ಲೂ ಕಹಿಯಾಗಿ ನಾನೆಂದು ಮಾತಾಡೆನೂ ಹೂಹೂ
ಹೆಣ್ಣು: ಬೇರೆ ಮಾತನ್ನು ಏಕೆ ಬಾರೋ ನಲ್ಲಾ..
           ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
          ಪ್ರೇಮದ ಸರಸ ಸೇರಲಿ ಕಾಣದ ಹರುಷ ಬಾಳಲ್ಲಿ ತಂದು
ಗಂಡು: ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
           ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
          ಪ್ರೇಮದ ಸರಸ ಸೇರಲಿ ಕಾಣದ ಹರುಷ ಬಾಳಲ್ಲಿ ತಂದು
ಹೆಣ್ಣು: ನನ್ನನ್ನೂ ನೀ ಸೇರು ಬಾ ನನ್ನಾಸೇ ಪೂರೈಸು ಬಾ
ಹೆಣ್ಣು: ಓ ನಲ್ಲಾ...           ಗಂಡು: ಓ..ನಲ್ಲೇ...
---------------------------------------------------------------------

ವಿಷ್ಣು ವಿಜಯ (೧೯೯೩) -  ರಾಜಾ ನನ್ನ ರಾಜ
ಸಂಗೀತ: ಜತೀನ್ ಲಲಿತ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಚಿತ್ರಾ

ರಾಜಾ ನನ್ನ ರಾಜ ರಾಜ‌ ರಾಜ ರಾಜ ರಾಜ ರಾಜ‌
ರಾಣಿ ನಾನೇ ನಿನ್ನ ರೋಜಾ ರೋಜಾ ನನ್ನ ನಿನ್ನ ನಂಟು
ಬಲು ಹಿಂದಿನಿಂದ ಉಂಟು ರಾಜ
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೊ ಬೇಗ ಅಪ್ಪುಗೆಯಲ್ಲೇ
ಸ್ವರ್ಗ ನೀ ತೋರು ಈಗ...
ರಾಜಾ ನನ್ನ ರಾಜ ರಾಜ‌ ರಾಜ ರಾಜ ರಾಜ ರಾಜ‌
ರಾಣಿ ನಾನೇ ನಿನ್ನ ರೋಜಾ ರೋಜಾ

ದಿನವು ನಾವು ಇಲ್ಲಿ ಸೇರುತಿರೇ ಕಣ್ಣು ಕಣ್ಣುಗಳು ಕೂಡುತಿರೆ
ಮನದ ಆಸೆ ಮನದಾಳದಲಿ ಉಳಿದು ನಿದ್ದೆಯನು ದೋಚುತಿವೆ
ದಿನವು ನಾವು ಇಲ್ಲಿ ಸೇರುತಿರೇ ಕಣ್ಣು ಕಣ್ಣುಗಳು ಕೂಡುತಿರೆ
ಮನದ ಆಸೆ ಮನದಾಳದಲಿ ಉಳಿದು ನಿದ್ದೆಯನು ದೋಚುತಿವೆ
ಲೋಕದಲ್ಲಿ ನಮ್ಮ ಬಾಳು ನಾಲ್ಕೆ ದಿನವಂತೆ ರಾಜ
ಉಕ್ಕಿ ಬರೋ ಪ್ರಾಯವನ್ನು ನೀನು ವ್ಯರ್ಥ ಮಾಡದಂತೆ..
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೊ ಬೇಗ ಅಪ್ಪುಗೆಯಲ್ಲೇ
ಸ್ವರ್ಗ ನೀ ತೋರು ಈಗ...
ರಾಜಾ ನನ್ನ ರಾಜ ರಾಜ‌ ರಾಜ ರಾಜ ರಾಜ ರಾಜ‌
ರಾಣಿ ನಾನೇ ನಿನ್ನ ರೋಜಾ ರೋಜಾ

ಕೂಡಿ ಬಂದ ಹೊಸ ಬಯಕೆಗಳು ನಿನ್ನ ಸೇರು ಎಂದೆನ್ನುತಿದೆ
ಮಿಂಚು ಇಂದು ನನ್ನ ಮೈಯೋಳಗೆ ಸೇರಿ
ಕಾಡಿ ನನ್ನ ಕೊಲ್ಲತಿದೆ ಓಹೊ..
ಕೂಡಿ ಬಂದ ಹೊಸ ಬಯಕೆಗಳು ನಿನ್ನ ಸೇರು ಎಂದೆನ್ನುತಿದೆ
ಮಿಂಚು ಇಂದು ನನ್ನ ಮೈಯೋಳಗೆ ಸೇರಿ
ಕಾಡಿ ನನ್ನ ಕೊಲ್ಲತಿದೆ..ವಿರಹದ ಬೆಂಕಿಯಲ್ಲಿ ಬೇಯುತ್ತಿಹೆ ನಾನು
ರಾಜ ಮುತ್ತಿನ ಮಳೆಯ ಸುರಿಸಿ ತಂಪ ನೀಡಲೆಂದು ನೀನು
ಪ್ರೇಮದ ಆರಂಭಕೆ ಹೇಳು ಒಂದು ಒಳ್ಳೆ ವಾರ
ಭಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿವಾರ
ಬಾರೋ ರಸಿಕ ನನ್ನ ಅಪ್ಪಿಕೊ ಬೇಗ ಅಪ್ಪುಗೆಯಲ್ಲೇ
ಸ್ವರ್ಗ ನೀ ತೋರು ಈಗ...
ರಾಜಾ ನನ್ನ ರಾಜ ರಾಜ‌ ರಾಜ ರಾಜ ರಾಜ ರಾಜ‌
ರಾಣಿ ನಾನೇ ನಿನ್ನ ರೋಜಾ ರೋಜಾ
---------------------------------------------------------------------

ವಿಷ್ಣು ವಿಜಯ (೧೯೯೩) - ಕಣ್ಣಲ್ಲಿ ಧೀಮ್ ಧೀಮ್ ಧೀಮ್
ಸಂಗೀತ: ಜತೀನ್ ಲಲಿತ, ಸಾಹಿತ್ಯ: ಗೀತಪ್ರಿಯ, ಗಾಯನ: ಎಸ್.ಪಿ. ಬಿ, ಕೋರಸ್

ಗಂಡು: ಕಣ್ಣಲ್ಲಿ ಧೀಮ್ ಧೀಮ್ ಧೀಮ್   ಕೋರಸ್: ಅಹ ಆಹ
ಗಂಡು: ಮೈಯಲ್ಲಿ ಜುಂ ಜುಂ ಜುಂ          ಕೋರಸ್: ಅಹ ಅಹ
ಗಂಡು: ಏಕೆ ವಿಷಾದ ಬೇಕೆ ವಿನೋದ ಮರೆವೆ
           ನನ್ನಾಣೆ ಚಿಂತೆ ನೋವ
           ಏಕೆ ವಿಷಾದ ಬೇಕೆ ವಿನೋದ ಮರೆವೆ
           ನನ್ನಾಣೆ ಚಿಂತೆ ನೋವ
ಕೋರಸ್: ಗುಂಡನ್ನು ನೀ ಹಾಕಿ ಹಾಡು ಆಗ ಲೋಕವ ನೋಡು
ಗಂಡು: ಕಣ್ಣಲ್ಲಿ ಧೀಮ್ ಧೀಮ್ ಧೀಮ್   ಕೋರಸ್: ಅಹ ಆಹ
ಗಂಡು: ಮೈಯಲ್ಲಿ ಜುಂ ಜುಂ ಜುಂ          ಕೋರಸ್: ಅಹ ಅಹ

ಗಂಡು: ನಾವು ಕುಡಿವುದು ರಮ್ಮು ಬ್ರಾಂದಿ
           ಬೇರೆ ಎನು ಕುಡಿಯೊಲ್ಲ ಎಲ್ಲಾರ ನಗೆ ನುಂಗಿ
           ಮೀಸೆಯ ನಾವು ತಿರುವಲ್ಲ
            ನಾವು ಕುಡಿವುದು ರಮ್ಮು ಬ್ರಾಂದಿ
            ಬೇರೆ ಎನು ಕುಡಿಯೊಲ್ಲ ಎಲ್ಲಾರ ನಗೆ ನುಂಗಿ
            ಮೀಸೆಯ ನಾವು ತಿರುವಲ್ಲ
ಗಂಡು: ಕಣ್ಣಲ್ಲಿ ಧೀಮ್ ಧೀಮ್ ಧೀಮ್   ಕೋರಸ್: ಅಹ ಆಹ
ಗಂಡು: ಮೈಯಲ್ಲಿ ಜುಂ ಜುಂ ಜುಂ          ಕೋರಸ್: ಅಹ ಅಹ

ಗಂಡು: ಯಾರ ಬಾಳನು ಕೆಡಿಸೋದಿಲ್ಲ ಯಾರ ಹಾಳು ಮಾಡಲ್ಲ
           ಮತ್ತಲಿ ಆನಂದ ಉಂಟು ಸುಳ್ಳನು ನಾವು ಆಡೋಲ್ಲ...
           ಯಾರ ಬಾಳನು ಕೆಡಿಸೋದಿಲ್ಲ ಯಾರ ಹಾಳು ಮಾಡಲ್ಲ
           ಮತ್ತಲಿ ಆನಂದ ಉಂಟು ಸುಳ್ಳನು ನಾವು ಆಡೋಲ್ಲ...
ಗಂಡು: ಕಣ್ಣಲ್ಲಿ ಧೀಮ್ ಧೀಮ್ ಧೀಮ್   ಕೋರಸ್: ಅಹ ಆಹ
ಗಂಡು: ಮೈಯಲ್ಲಿ ಜುಂ ಜುಂ ಜುಂ          ಕೋರಸ್: ಅಹ ಅಹ
ಗಂಡು: ಏಕೆ ವಿಷಾದ ಬೇಕೆ ವಿನೋದ ಮರೆವೆ
           ನನ್ನಾಣೆ ಚಿಂತೆ ನೋವ
           ಏಕೆ ವಿಷಾದ ಬೇಕೆ ವಿನೋದ ಮರೆವೆ
           ನನ್ನಾಣೆ ಚಿಂತೆ ನೋವ
ಕೋರಸ್: ಗುಂಡನ್ನು ನೀ ಹಾಕಿ ಹಾಡು ಆಗ ಲೋಕವ ನೋಡು
ಗಂಡು: ಕಣ್ಣಲ್ಲಿ ಧೀಮ್ ಧೀಮ್ ಧೀಮ್   ಕೋರಸ್: ಅಹ ಆಹ
ಗಂಡು: ಮೈಯಲ್ಲಿ ಜುಂ ಜುಂ ಜುಂ          ಕೋರಸ್: ಅಹ ಅಹ
---------------------------------------------------------------------

No comments:

Post a Comment