ಏಳು ಸುತ್ತಿನ ಕೋಟೆ ಚಿತ್ರದ ಹಾಡುಗಳು
- ಏನೊ ಮಾಡಲು ಹೋಗೀ. ಏನು ಮಾಡಿದೆ ನೀನೂ..
- ಈ ಸೃಷ್ಟಿ ಎಂಥಾ ಚೆಲುವಿನಾಲಯ ಸೌಂದರ್ಯದ ಈ ನೆಲೆ ದೇವಾಲಯ
- ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ
- ಅಂತರಂಗದ ಹೂ ಬನಕೆ... ಒಲುಮೆ ಗಾಳಿ ಬೀಸಿ ಹರುಷ ತೂಗಿ ತೊನೆದು...
ಸಂಗೀತ: ಅಶ್ವಥ್-ವೈಧಿ, ಸಾಹಿತ್ಯ : ರುದ್ರಮೂರ್ತಿಶಾಸ್ತ್ರಿ ಗಾಯನ: ಎಸ್.ಪಿ.ಬಿ
ಗಂಡು : ಏನೊ ಮಾಡಲು ಹೋಗೀ.. ಏನು ಮಾಡಿದೆ ನೀನೂ..
ಏನೊ ಮಾಡಲು ಹೋಗೀ. ಏನು ಮಾಡಿದೆ ನೀನೂ..
ನೀತಿ ಹೇಳುವ ನೀನೆ ನೀತಿಯನು ಮುರಿದೆ.. ಬಾಯಿದ್ದರೂ ನೀ ಮೂಕನಾದೆ..
ಬಾಯಿದ್ದರೂ ನೀ ಮೂಕನಾದೆ..
ಬಾಯಿದ್ದರೂ ನೀ ಮೂಕನಾದೆ..
ಏನೊ ಮಾಡಲು ಹೋಗೀ.. ಏನು ಮಾಡಿದೆ ನೀನೂ..
ಗಂಡು : ಮುಳ್ಳಲ್ಲಿ ನಡೆವುದಕೆ ಎಚ್ಚರಿಕೆ ಬೇಕೂ.. ಎಚ್ಚರಿಕೆ ಬೇಕೂ..
ಜಗದೆಲ್ಲಾ ಕತ್ತಲೆಗೆ ನೀನಲ್ಲಾ ಬೆಳಕೂ.. ನೀನಲ್ಲಾ ಬೆಳಕೂ..
ಒಂದು ರೋಗದ ರೆಂಬೆ, ಕಡೆಗೂ ಗೆಲ್ಲುವೆನೆಂದೆ
ಒಂದು ರೋಗದ ರೆಂಬೆ, ಕಡೆಗೂ ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದಾ ನರಳುತಿದೆ ಬದುಕೂ..
ಕೋರಸ್ : ಏನೊ ಮಾಡಲು ಹೋಗಿ.. ಏನು ಮಾಡಿದೆ ನೀನು..
ಗಂಡು : ವಿಷದ ಬಳ್ಳಿಯಾ ಜೊತೆಗೆ, ಹೂಗಿಡವಾ ಕಡಿದೇ..
ಒಂದು ಕೋಪಕೆ ಎರಡು ಪಾಪಗಳಾ ಬೆಳೆದೆ..
ಎಲ್ಲಾ ಬದಲಿಸಬಲ್ಲ ವಿಧಿಯೂ ನೀನೇನಲ್ಲ..
ಎಲ್ಲಾ ಬದಲಿಸಬಲ್ಲ ವಿಧಿಯೂ ನೀನೇನಲ್ಲ
ಇದ್ದಂತೆ.. ಜಗವಿಹುದು, ನೀನು ಬದಲಾದೆ..
ಕೋರಸ್ : ಏನೊ ಮಾಡಲು ಹೋಗಿ.. ಏನು ಮಾಡಿದೆ ನೀನು..
ಗಂಡು : ಹೆತ್ತೊಡಲು ತುಡಿಯುತಿದೆ, ತಳಮಳಿಸಿ ನೊಂದೂ.. ತಳಮಳಿಸಿ ನೊಂದೂ..
ಅಕ್ಕರೆಯಾ ಸೋದರಿಗೆ, ಕಣ್ಣೀರ ಬಿಂದೂ.. ಕಣ್ಣೀರ ಬಿಂದೂ..
ನಿನ್ನಿಂದಾ ಸುಖವಿಲ್ಲ, ನಿನ್ನೊಳಗೂ ಸುಖವಿಲ್ಲ
ನಿನ್ನಿಂದಾ ಸುಖವಿಲ್ಲ, ನಿನ್ನೊಳಗೂ ಸುಖವಿಲ್ಲ
ಕೋರಸ್ : ಏಳು ಸುತ್ತಿನ ಕೋಟೆ.. ಸೆರೆಯಾದೆ ಇಂದು..
ಏಳು ಸುತ್ತಿನ ಕೋಟೆಯಲೀ.. ಸೆರೆಯಾದೆ..
ಏಳು ಸುತ್ತಿನ ಕೋಟೆ (1988) - ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸಾಹಿತ್ಯ: ಲಕ್ಷ್ಮಿನಾರಾಯಣ ಭಟ್, ಸಿದ್ದಲಿಂಗಯ್ಯ ಸಂಗೀತ: ಎಲ್.ವೈಧ್ಯನಾಥನ್ ಗಾಯನ : ಎಸ್.ಪಿ.ಬಿ. ವಾಣಿ ಜಯರಾಮ್
ಹೆಣ್ಣು : ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ
ಹೆಣ್ಣು : ಝಳ ಝಳ ಝಳ ಹರಿವ ನೀರ ಧಾರೆ ಫಳ ಫಳ ಫಳ ಹೊಳೆವ ಕೋಟಿ ತಾರೆ
ಝಳ ಝಳ ಝಳ ಹರಿವ ನೀರ ಧಾರೆ ಫಳ ಫಳ ಫಳ ಹೊಳೆವ ಕೋಟಿ ತಾರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ ತೇಲುತ್ತಿದೆ ಬೆಳ್ಳಕ್ಕಿಯ ಮಾಲೆ
ಈ ಸೃಷ್ಟಿ ಎಂಥಾ ಚೆಲುವಿನಾಲಯ ಸೌಂದರ್ಯದ ಈ ನೆಲೆ ದೇವಾಲಯ
ಝಳ ಝಳ ಝಳ ಹರಿವ ನೀರ ಧಾರೆ ಫಳ ಫಳ ಫಳ ಹೊಳೆವ ಕೋಟಿ ತಾರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ
ಸಂಜೆ ಮುಗಿಲ ಸಾಲು, ಸಾವಿರ ಝರಿ ಸೀರೆ ತೇಲುತ್ತಿದೆ ಬೆಳ್ಳಕ್ಕಿಯ ಮಾಲೆ
ಈ ಸೃಷ್ಟಿ ಎಂಥಾ ಚೆಲುವಿನಾಲಯ ಸೌಂದರ್ಯದ ಈ ನೆಲೆ ದೇವಾಲಯ
ಗಂಡು : ನಮ್ಮ ದಲಿತ ಕವಿ ಸಿದ್ದಲಿಂಗಯ್ಯನವರು ಏನ್ ಹೇಳಿದ್ದಾರೆ ಗೊತ್ತಾ ..
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ ಚಿಮ್ಮುತ ಹರಿಯುತಿದೆ
ಹೂಗಿಡ ಬಳ್ಳಿಗೆ ಬೆಂಕಿಯು ತಾಗಿ ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ ಚಿಮ್ಮುತ ಹರಿಯುತಿದೆ
ಹಕ್ಕಿಯ ಕೊರಳಿಗೆ ಹಗ್ಗವು ಬಿಗಿದು ಕಂಬನಿ ಸುರಿಯುತಿದೆ
ಹಸಿವಿನ ತಾಪ ತಾಳದೆ ಲೋಕ ನಿಟ್ಟುಸಿರಾಡುತಿದೆ.. ಆಆಆ...

ಹೆಣ್ಣು : ಶಿಖರದಿಂದ ಭೂಮಿಗಿಳಿವ ಬಿಸಿಲು ಬಿಸಿಲ ಕಾಸಿ ತಲೆದೂಗುವ ಹಸಿರು
ಶಿಖರದಿಂದ ಭೂಮಿಗಿಳಿವ ಬಿಸಿಲು ಬಿಸಿಲ ಕಾಸಿ ತಲೆದೂಗುವ ಹಸಿರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು
ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು ನಿಜದಲಿ ಅದು ಭಗವಂತನ ಉಸಿರು
ಈ ಸೃಷ್ಟಿ ಎಂಥಾ ಚೆಲುವಿನಾಲಯ ಸೌಂದರ್ಯದ ಈ ನೆಲೆ ದೇವಾಲಯ
ಗಂಡು : ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ದುಡಿಯುವ ಕೈಗೆ ಕೆಲಸವೆ ಇಲ್ಲ ಆಸೆಯು ಬರಡಾಗಿ
ಬಾಳಿಗೆ ಬರವಸೆ ಬೆಳಕೆ ಇಲ್ಲ ಜೀವನ ಕುರುಡಾಗಿ
ಬಿಸಿಲಿನ ಬೇಗೆಗೆ ಬಾಡಿದೆ ಜಗವು ಬೂದಿಯು ತಾನಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ
ಬಡವರ ಪಾಲಿಗೆ ದೇವರೆ ಇಲ್ಲ ಧನಿಕರ ವಶವಾಗಿ
----------------------------------------------------------------------------------------------------------------------
ಏಳು ಸುತ್ತಿನ ಕೋಟೆ (1988) - ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ
ಸಾಹಿತ್ಯ: ವಿ.ಮನೋಹರ ಸಂಗೀತ: ಎಲ್.ವೈಧ್ಯನಾಥನ್ ಗಾಯನ : ಎಸ್.ಪಿ.ಬಿ. ರತ್ನಮಾಲ ಪ್ರಕಾಶ
ಹೆಣ್ಣು : ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ.... ಇದು ರಮ್ಯ ಚೈತ್ರ ಕಾಲ....
ಗಂಡು : ಸುಂದರ ನುಡಿಯಿದು ಗೆಳತೀ ಸಂಗಾತಿ ಆಗುವಾ
ಶೃಂಗಾರ ಕಾವ್ಯ ರಮ್ಯಾ... ಶೃಂಗಾರ ಕಾವ್ಯ ರಮ್ಯಾ...
ಗಂಡು : ಮಂಜಿನೆಡೆಯಲಿ ಮುಂಜಾನೆ ಬಣ್ಣ ಹೃದಯದೊಳಗೆ ಸಂತೋಷ ತಾಣ
ಹೆಣ್ಣು : ಮಂಜಿನೆನಡೆಯಲಿ ಮುಂಜಾನೆ ಬಣ್ಣ ಹೃದಯದೊಳಗೆ ಸಂತೋಷ ತಾಣ
ಬಿರಿದ ಹೂವು ನಗುವ ತಾಣ... ಬಿರಿದ ಹೂವು ನಗುವ ತಾಣ...
ಮಿನುಗು ರಂಗು ಭೂಮಿ ಬಾಣ....ಗಂಡು : ಸುಂದರ ನುಡಿಯಿದು ಗೆಳತೀ ಸಂಗಾತಿ ಆಗುವಾ
ಶೃಂಗಾರ ಕಾವ್ಯ ರಮ್ಯಾ... ಶೃಂಗಾರ ಕಾವ್ಯ ರಮ್ಯಾ...
ಚಿಂತೆ ಇರುವಾ ಮನದಲ್ಲಿ ಮೌನ ದೂರ ಸರಿಸಿ ಮರೆಯಾಗಿಸೋಣ
ನಲಿವು ನೋವು ಬರಲಿ ಏನೋ... ನಲಿವು ನೋವು ಬರಲಿ ಏನೋ...
ಬಾಳು ನಮ್ಮ ಮಧುರಗಾನ ...
ಶೃಂಗಾರ ಕಾವ್ಯ ರಮ್ಯಾ... ಶೃಂಗಾರ ಕಾವ್ಯ ರಮ್ಯಾ...ಇಬ್ಬರು : ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ.... ಇದು ರಮ್ಯ ಚೈತ್ರ ಕಾಲ....
ಗಂಡು : ಕಂಗಳ ಬೆಳಕು ಬೆಳದಿಂಗಳಾಗಿ ತಿಂಗಳ ಬೆಳಕು ಅನುರಾಗವಾಗಿ
ಹೆಣ್ಣು : ಕಂಗಳ ಬೆಳಕು ಬೆಳದಿಂಗಳಾಗಿ ತಿಂಗಳ ಬೆಳಕು ಅನುರಾಗವಾಗಿ
ಕುಸುಮ ರಾಶಿ ಹರುಷವಾಗಿ.. ಕುಸುಮ ರಾಶಿ ಹರುಷವಾಗಿ
ನಲಿಯುವಾಗ ಮಿಡಿದ ರಾಗ...
ಇಬ್ಬರು : ಇದು ರಮ್ಯ ಚೈತ್ರ ಕಾಲ.... ಇದು ರಮ್ಯ ಚೈತ್ರ ಕಾಲ....ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ
ಇದು ರಮ್ಯ ಚೈತ್ರ ಕಾಲ.... ಇದು ರಮ್ಯ ಚೈತ್ರ ಕಾಲ....
--------------------------------------------------------------------------------------------------------------------------
ಏಳು ಸುತ್ತಿನ ಕೋಟೆ (1988)
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಲ್.ವೈಧ್ಯನಾಥನ್ ಗಾಯನ : ಎಸ್.ಪಿ.ಬಿ.
ಅಂತರಂಗದ ಹೂ ಬನಕೆ... ಒಲುಮೆ ಗಾಳಿ ಬೀಸಿ ಹರುಷ ತೂಗಿ ತೊನೆದು...
ಮಧುರ ಭಾವ ಮೂಡಿತು ಅರಿವಿನ ಈಟಿಯು ಹಗಲಿರುಳು ನಾಟುತ
ಪ್ರೀತಿಯ ಹೃದಯ ಗಾಯವಾಯಿತು... ಗಾಯವಾಯಿತು...
ಅಂತರಂಗದ ಹೂ ಬನಕೆ...
ಪ್ರೀತಿ ಬಿಟ್ಟು ಬಿಡದೇ, ಭೀತಿ ಕಾಡಿ ಕಾಡಿ ಅಗ್ನಿ ಕುಂಡವಾಯಿತು ಒಡಲಾಳವೂ ....
ಅಂತರಂಗದ ಹೂ ಬನಕೆ...
ಮುತ್ತಿ ನಿಂತ ಭಯವ ಮೆಟ್ಟಿ ತುಳಿದು ನಡೆದು ಸುಗುಮ ಹಾದಿ ಸಾಗದಾಗಿ ತೊಳಲಾಟವು... ತೊಳಲಾಟವು...
ಅಂತರಂಗದ ಹೂ ಬನಕೆ...
ವಾಸ್ತವ ಜಗವ.. ಮರೆಯುತ ಸಾಗಿ... ಜೊತೆಗಾತಿ ಸನಿಹ ... ಮಿಡುಕಾಟವೂ... ಮಿಡುಕಾಟವೂ...
ಅಂತರಂಗದ ಹೂ ಬನಕೆ...ಒಲುಮೆ ಗಾಳಿ ಬೀಸಿ ಹರುಷ ತೂಗಿ ತೊನೆದು...
ಮಧುರ ಭಾವ ಮೂಡಿತು
--------------------------------------------------------------------------------------------------------------------------
No comments:
Post a Comment