1584. ಉತ್ತರ ಧೃವುದಿಂ ದಕ್ಷಿಣ ಧೃವುಕೂ (2000)




ಉತ್ತರ ಧೃವುದಿಂ ದಕ್ಷಿಣ ಧೃವುಕೂ ಚಲನಚಿತ್ರದ ಹಾಡುಗಳು 
  1. ನಮ್ಮ ಮನೆ ಇದು ನಮ್ಮ ಮನೆ 
  2. ಉತ್ತರ ಧ್ರುವದಿಂ ದಕ್ಷಿಣ 
  3. ಪಪ್ಪಾ ಓ ಪಪ್ಪಾ 
  4. ಬಣ್ಣದ ನವಿಲೇ 
  5. ಅಣ್ಣಯ್ಯ ನೀವೂ 
ಉತ್ತರ ಧೃವುದಿಂ ದಕ್ಷಿಣ ಧೃವುಕೂ (2000) - ನಮ್ಮ ಮನೆ ಇದು ನಮ್ಮ ಮನೆ 
ಸಂಗೀತ : ವಿಜಯಾನಂದ, ಸಾಹಿತ್ಯ : ಅಬ್ಬಾಸ ಅಬ್ಬಲಗೇರೆ ಗಾಯನ: ಯುವರಾಜ, ಅರ್ಚನಾ ಉಡುಪ  

ಹೆಣ್ಣು : ಯೋಗೀ .. (ಹೂಂ ) ಎಷ್ಟೊಂದು ಪ್ರಶಾಂತವಾಗಿದೆ ನಿಮ್ಮ ಊರು (ಹೂಂ ಹೂಂ )
          ಈ ಜನ ಈ ಗಾಳಿ ಈ ನೆಲ ಈ ನೀರು .. ಅದ್ಭುತ 
         ನಾ ಇಲ್ಲಿ ಬಾಳೋದಕ್ಕೆ ತುಂಬಾ ಪುಣ್ಯ ಮಾಡಿದ್ದೇ 
         ನಡೀರಿ ಹೋಗೋಣ (ಎಲ್ಲಿಗೇ ) ಮನೆಗೇ ... (ಯಾರ ಮನೆಗೆ) ನಮ್ಮ ಮನೆಗೇ .. 
ಗಂಡು : ನನ್ನ ಮನೆ ಹಂಗಿನ ಅರಮನೆಯೆಲ್ಲಾ 
           ನನ್ನ ಮನೆ ಹಂಗಿನ ಅರಮನೆಯೆಲ್ಲಾ 
          ಹೊಂಗೆಯ ಮರದಡಿಯ ಹುಲ್ಲು ಗುಡಿಸಲೇ ನನ್ನ ಗೆಳತೀ 
          ನನ್ನ ಮನೆ ಹಂಗಿನ ಅರಮನೆಯೆಲ್ಲಾ 
         ಹೊಂಗೆಯ ಮರದಡಿಯ ಹುಲ್ಲು ಗುಡಿಸಲೇ ನನ್ನ ಗೆಳತೀ 
        ನನ್ನ ಮನೆ ಇದು ನನ್ನ ಮನೆ 
ಹೆಣ್ಣು : ನಾನು ನೀವು ಜೊತೇಲಿದ್ದರೇ ಈ ಮನೆನೇ ನಮ್ಮ ಅರಮನೆ 

ಗಂಡು : ಹಾಲ ಬೆಳಕ ಹಾದಿ ನಮ್ಮೂರಿಗೇ ಬರಲಿಲ್ಲ ಕಲ್ಲು ಮುಳ್ಳು ಧೂಳು ಈ ಸುತ್ತ ಮುತ್ತಲೆಲ್ಲಾ.. 
            ಆರಿಸಿ ಸಾರಿಸಿ ಬರುವುದಾದರೇ ಬಾ.... ಬಾ... ಬಾ ಬಾ.. .. 
           ನನ್ನ ಮನೆ ಇದು ನನ್ನ ಮನೆ 
ಹೆಣ್ಣು :  ಕೈ ಹಿಡಿದು ನಡೆಸೋಕೆ ನೀವಿರುವಾಗ ನೀವ್ ಇಡೋ ಹೆಜ್ಜೆಗೆ ನನ್ನ ಹೆಜ್ಜೆ ಹಾಕ್ತಿನೀ 

ಗಂಡು : ನನ್ನೆದೆಯ ಹೊಲದ ಮ್ಯಾಲೇ ಕರಿ ಗರಿಕೆ ಚಿಗುರಲಿಲ್ಲ 
            ಈ ಜನರ ಮನಗಳರಲಿ ಹೂದೋಟವಾಗಲಿಲ್ಲ 
           ಕುಗ್ಗದೇ ತಗ್ಗದೆ ಬರುವುದಾದರೇ .. ಬಾ.. ಬಾ...  ಬಾ ಬಾ   
           ನನ್ನ ಮನೆ ಇದು ನನ್ನ ಮನೆ 
ಹೆಣ್ಣು : ಈ ನೀರಾಸೆ ಯಾಕೇ ನಮ್ ಪ್ರೀತಿ ಎಲ್ಲವನ್ನೂ ಗೆಲ್ಲುತ್ತೇ 
          
ಗಂಡು : ಹಾಲು ಮನದ ಜನಕೆ ಹಾಲಾಹಲವ ನೀಡ್ರವರಿಲ್ಲಿ 
           ಅಳುವಂಥ ಜನರೂ ... ನಮ್ಮ ಗೋಳು ಕೇಳಲಿಲ್ಲೀ 
           ಈ ಜನರ ಜೊತೆಗೆ ನೀ ಬಾಳುವುದಾದರೇ ಬಾ... ಬಾ.. ಬಾ ಬಾ 
           ನನ್ನ ಮನೆ ಇದು ನನ್ನ ಮನೆ 
ಹೆಣ್ಣು : ಹ್ಹೂಂ ಹ್ಹೂ.. ಎಲ್ಲದಕ್ಕೂ ತಯಾರಾಗೇ ತಾನೇ ನಾನು ನಿಮ್ಮ ಹತ್ರ ಬಂದಿರೋದು 

ಗಂಡು : ನೀನ್ ಹೊಲವದ್ಯಾವ್ ತೀಡಿ ನನ್ನೆದೆಗೇ ಜೀವ ನೀಡು 
            ಬರಿ ಹಾಳೆ ಬದುಕಿನಲ್ಲಿ ಹೊಸ ಪ್ರೇಮ ಗೀತೆ ಹಾಡು 
            ಪ್ರೀತಿಯ ಜ್ಯೋತಿಯ ತರವುದಾದರೇ ಬಾ... ಬಾ...  ಬಾ   
           ನನ್ನ ಮನೆ ಹಂಗಿನ ಅರಮನೆಯೆಲ್ಲಾ 
ಹೆಣ್ಣು : ನಿನ್ನ ಈ ಮನೆ ನನ್ನ ಅರಮನೆ  ನಲ್ಲಾ.. 
ಗಂಡು : ಹೊಂಗೆಯ ಮರದಡಿಯ ಹುಲ್ಲು ಗುಡಿಸಲೇ ನನ್ನ ಗೆಳತೀ 
ಹೆಣ್ಣು : ಶ್ರೀಗಂಧದ ನಾಡ ತಂಪಿನ ನೆಲೆ ಇದು ನನ್ನ ಗೆಳೆಯಾ 
ಇಬ್ಬರು : ನಮ್ಮ ಮನೆ ಇದು ನಮ್ಮ ಮನೆ 
            ನಮ್ಮ ಮನೆ ಇದು ನಮ್ಮ ಮನೆ 
----------------------------------------------------------------------------------------------------

ಉತ್ತರ ಧೃವುದಿಂ ದಕ್ಷಿಣ ಧೃವುಕೂ (2000) - ಉತ್ತರ ಧೃವುದಿಂ ದಕ್ಷಿಣ ಧೃವುಕೂ 
ಸಂಗೀತ : ವಿಜಯಾನಂದ, ಸಾಹಿತ್ಯ : ಅಬ್ಬಾಸ ಅಬ್ಬಲಗೇರೆ ಗಾಯನ: ರಾಜೇಶ ಕೃಷ್ಣನ್, ಅರ್ಚನಾ ಉಡುಪ

ಹೆಣ್ಣು : ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಆಲಿಂಗನಾ...  
ಗಂಡು : ದಕ್ಷಿಣ ಧ್ರುವದಿಂ ಉತ್ತರ ಧ್ರುವಕೂ ಆಕರ್ಷಣಾ....  
ಹೆಣ್ಣು : ಹುಚ್ಚೆದ್ದ ಕುದುರೆಯ ಸಾಗಿ ಏಕೀ ಮನ 
ಗಂಡು : ಅಲ್ಲೋಲ ಕಲ್ಲೋಲವೇ ಈ ಯೌವ್ವನ... 
ಹೆಣ್ಣು : ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಆಲಿಂಗನಾ...  
 
ಹೆಣ್ಣು : ದರ್ಪಣದ ನಿನ್ನ...  ಬಿಂಬ ಸಮ್ಮೋಹನ... ಆ ನಿನ್ನ ಕೆನ್ನೆಯ ಸ್ಪರ್ಶ ರೋಮಾಂಚನ.. ಆಆಆ 
ಗಂಡು : ರತಿ ರೂಪೀ ಮನ್ಮಥ ಲೀಲಾ ಪ್ರಣಯೋತ್ಸವ.. ಹೂಬಾಣ ಪುಳುಕಿತಗೋಳಿಸೋ ಮಿಲನೋತ್ಸವ.. ಆಆಆ 
ಹೆಣ್ಣು : ಈ ಹೃದಯ ಚೋರ ಧುಮುಕಿ ಸೆರೆಯಾದೆನು 
ಗಂಡು : ಈ ಹುಚ್ಚು ಪ್ರಣಯಕ್ಕೆ... ಬೆರಗಾದೇನಾ... ಆಆಆ      
ಹೆಣ್ಣು : ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಆಲಿಂಗನಾ...  
ಗಂಡು : ದಕ್ಷಿಣ ಧ್ರುವದಿಂ ಉತ್ತರ ಧ್ರುವಕೂ ಆಕರ್ಷಣಾ....  

ಹೆಣ್ಣು : ಹೂಮಂಚ ಕೂಡಿದೆ ನನ್ನ ಬಾರೋ ಸುಕುಮಾರ... ಬಿಕ್ಕಳಿಸಿ ಅಳುತಿದೆ ನನ್ನ ಅನು ತರ್ಪಣ....  
ಗಂಡು : ಮುಂಗಾರು ಮಿಂಚೂ ಸಿಡಿಲೂ ಮೈ ತುಂಬಿದೇ... ಕಾರ್ಮೋಡ ಮಳೆ ಹನಿ ಸುರಿಸೀ ನೆಲ ತೀಡಿದೆ 
ಹೆಣ್ಣು : ಈ ಚೋರ ನನ್ನ ಸೆರಗು ಕಳುವಾಗಿದೇ.. 
ಗಂಡು : ಸೆರಗೇಕೆ ಮನ ಮೈ ಹೊದಿಕೆ ನಿನ್ನ ಸುತ್ತಿವೇ... 
----------------------------------------------------------------------------------------------------

ಉತ್ತರ ಧೃವುದಿಂ ದಕ್ಷಿಣ ಧೃವುಕೂ (2000)  - ಪಪ್ಪಾ ಓ ಪಪ್ಪಾ 
ಸಂಗೀತ : ವಿಜಯಾನಂದ, ಸಾಹಿತ್ಯ : ಅಬ್ಬಾಸ ಅಬ್ಬಲಗೇರೆ ಗಾಯನ: ಶಂಕರ ಶಾನಭಾಗ, ಅರ್ಚನಾ ಉಡುಪ

ಗಂಡು : ಆಆಆ.. ಆಆಆ ... ರೇನಾ .. ಆಆಆ ತರ ಆಆಆ ನಾ ಏಏಏ ನನೋ ಓಓಓಓಓ ತೊಂ 
ಕೋರಸ್ : ಮೇರೇ ಸಜನಾ ಪ್ಯಾರೇ ಪ್ಯಾರೇ ಸಜನಾ ಓ..  ಪ್ಯಾರೇ ಸಜನಾ ನಿಮಗೆ ನಮ್ಮ ನಮನಾ ... 
               ಇವನೆಂದೂ ನಂಬು ಪ್ರತಿ ದಿನ ಜೀವನ 
               ಇವನೆಂದೂ ನಂಬು ಪ್ರತಿ ದಿನ ಜೀವನ 
               ಮೇರೇ ಸಜನಾ ಪ್ಯಾರೇ ಪ್ಯಾರೇ ಸಜನಾ ಓ..  ಪ್ಯಾರೇ ಸಜನಾ ನಿಮಗೆ ನಮ್ಮ ನಮನಾ ... 
               ಹೇ..ಹೇ  ಓಓಓಓಓ   ಹೇ..ಹೇ  ಓಓಓಓಓ 
ಹೆಣ್ಣು : ಪಪ್ಪಾ ಓ ಪಪ್ಪಾ ನನಗೇಕೇ ಕೋಪ ಶುಭಾಶಯವೂ ನಿನಗೇ .. 
          ಅಮ್ಮಾ ನನ್ನಮ್ಮಾ ನನ ಮುದ್ದು ಅಮ್ಮಾ ಶುಭಾಶಯವೂ ನಿಮಗೇ ..   
          ನಿಮ್ಮ ಬಾಳೇ ಬಂಗಾರದಾಗಿರಲೆಂದು ನೂರು ನೂರಾರು ವರ್ಷ ಮರಳಿ ಬರಲೆಂದೂ 
          ನಿಮ್ಮ ಬಾಳು ಬಂಗಾರವಾಗಿರಲೆಂದು ನೂರು ನೂರಾರು ವರ್ಷ ಮರಳಿ ಬರಲೆಂದೂ 
ಕೋರಸ್ :  ಹೇ..ಹೇ  ಓಓಓಓಓ   ಹೇ..ಹೇ  ಓಓಓಓಓ 
  
ಕೋರಸ್: ತನನ ತರನನನ ನೆನೆನೆನೆನೇ ತೆರೆ ನೆನೆ 
ಹೆಣ್ಣು : ಎದೆ ಹಾಲ ನೀಡಿ ಜೋಗಳುವ ಹಾಡಿ ಕಂದನ ಕೈಹಿಡಿದು ನಡೆಸಿದ್ದೀರಿ 
          ಕಿರು ಗೆಜ್ಜೆ ಕಟ್ಟಿ ಥಕಥೈ ಕುಣಿಸಿ ಕೆನೆಮೊಸರು ಅನ್ನ ತುತ್ತಿಟ್ಟು ಉಣಿಸಿ 
          ಚೆಂದಾವನ ತೋರಿ ನಲಿಸಿದ್ದೀರಿ ಅರಿಗಿಣಿಗೇ ನುಡಿಮುತ್ತ ಕಲಿಸಿದ್ದೀರಿ..  
ಕೋರಸ್ :  ಹೇ..ಹೇ  ಓಓಓಓಓ   ಹೇ..ಹೇ  ಓಓಓಓಓ 
ಹೆಣ್ಣು : ಪಪ್ಪಾ ಓ ಪಪ್ಪಾ ನನಗೇಕೇ ಕೋಪ ಶುಭಾಶಯವೂ ನಿನಗೇ .. 
          ಅಮ್ಮಾ ನನ್ನಮ್ಮಾ ನನ ಮುದ್ದು ಅಮ್ಮಾ ಶುಭಾಶಯವೂ ನಿಮಗೇ ..   

ಕೋರಸ್ : ಹೂಂಹೂಂಹೂಂ ತನ್ನನ್ನನಾ ತನನನನಾ ನಾನಾ  ಹೂಂಹೂಂಹೂಂ 
ಗಂಡು : ನೀ ನಮ್ಮ ಮನೆಯ ಬೆಳದಿಂಗಳಮ್ಮಾ ಸಂತಸವ ಹರಿಸೋ ಜಲಧಾರೆಯಮ್ಮಾ 
            ನಮ್ಮೆಲ್ಲಾ ಭಾಗ್ಯದ ನಿಧಿಯಾಗಿ ಬಂದ ಎರಡೂ ವಂಶದ ಕೀರ್ತಿ ಕನಸವಾಗಮ್ಮಾ 
            ಮನ ಕಂದ ನೀನಿತ್ಯ ನಗುತಿರಬೇಕು ತವರೂರ ಸಿರಿದೇವಿ ನೀನಾಗಬೇಕು 
ಕೋರಸ್ :  ಹೇ..ಹೇ  ಓಓಓಓಓ   ಹೇ..ಹೇ  ಓಓಓಓಓ 
ಹೆಣ್ಣು : ಪಪ್ಪಾ ಓ ಪಪ್ಪಾ ಅಮ್ಮಾ ನನ್ನಮ್ಮಾ ಶುಭಾಶಯವೂ ನಿನಗೇ .. 
          ನಿಮ್ಮ ಬಾಳು ಬಂಗಾರವಾಗಿರಲೆಂದು ನೂರು ನೂರಾರು ವರ್ಷ ಮರಳಿ ಬರಲೆಂದೂ 
ಕೋರಸ್ :  ಹೇ..ಹೇ  ಓಓಓಓಓ   ಹೇ..ಹೇ  ಓಓಓಓಓ 
ಗಂಡು : ಮೇರೇ ಸಜನಾ ಪ್ಯಾರೇ ಪ್ಯಾರೇ ಸಜನಾ ಓ..  
ಹೆಣ್ಣು : ಪ್ಯಾರೇ ಸಜನಾ ನಿಮಗೆ ನಮ್ಮ ನಮನಾ ... 
ಕೋರಸ್ : ಇರಲೆಂದೂ ನಂಬು ಪ್ರತಿ ದಿನ ಜೀವನ   ಇರಲೆಂದೂ ನಂಬು ಪ್ರತಿ ದಿನ ಜೀವನ                     
ಗಂಡು : ಮೇರೇ ಸಜನಾ ಪ್ಯಾರೇ ಪ್ಯಾರೇ ಸಜನಾ ಓ..  
ಹೆಣ್ಣು : ಪ್ಯಾರೇ ಸಜನಾ ನಿಮಗೆ ನಮ್ಮ ನಮನಾ ... 
ಕೋರಸ್ : ಮೇರೇ ಸಜನಾ ಪ್ಯಾರೇ ಪ್ಯಾರೇ ಸಜನಾ ಓ..  ಪ್ಯಾರೇ ಸಜನಾ ನಿಮಗೆ ನಮ್ಮ ನಮನಾ ... 
---------------------------------------------------------------------------------------------------

ಉತ್ತರ ಧೃವುದಿಂ ದಕ್ಷಿಣ ಧೃವುಕೂ (2000) -  ಬಣ್ಣದ ನವಿಲೇ 
ಸಂಗೀತ : ಹಂಸಲೇಖ, ಸಾಹಿತ್ಯ : ಅಬ್ಬಾಸ ಅಬ್ಬಲಗೇರೆ ಗಾಯನ: ಶಂಕರ ಶಾನಭಾಗ, ಯುವರಾಜ, ಅರ್ಚನಾ ಉಡುಪ

ಹೆಣ್ಣು : ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ 
ಕೋರಸ್ : ಯಾವೂರ ನವಿಲೇ ಇದು ನಮ್ಮೂರ ನವಿಲೇ 
ಗಂಡು : ಓ..ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ 
ಕೋರಸ್ : ಯಾವೂರ ನವಿಲೇ ಇದು ನಮ್ಮೂರ ನವಿಲೇ 
ಹೆಣ್ಣು : ಉತ್ತರ ಸೀಮೆ ಕಿನ್ನರ ಕನ್ಯೇ  ನಮ್ಮೂರ ತೋಟದ ರಸಪುರಿ ಕೆನ್ನೇ 
ಕೋರಸ್ : ಉತ್ತರ ಸೀಮೆ ಕಿನ್ನರ ಕನ್ಯೇ  ನಮ್ಮೂರ ತೋಟದ ರಸಪುರಿ ಕೆನ್ನೇ 
                ಬಾಳೆಯ ತೋಡು ಬೆಣ್ಣೆಯ ಬೆರಳು ಜಲಪಾತದಂತೆ ಇಳಿಬಿಟ್ಟ ಹೆರಳು 
ಹೆಣ್ಣು : ಬಣ್ಣದ ನವಿಲೇ ನೂರು ಕಣ್ಣಿನ ನವಿಲೇ 
ಕೋರಸ್ : ಯಾವೂರ ನವಿಲೇ ಇದು ನಮ್ಮೂರ ನವಿಲೇ 

ಕೋರಸ್ : ಕಲ್ಯಾಣ ಓಯ್ ಇಂದೇ ಕಲ್ಯಾಣ 
               ಓಓಓಓಓಓಓ ಕಲ್ಯಾಣ ಓಯ್ ಇಂದೇ ಕಲ್ಯಾಣ
ಗಂಡು : ಸ್ವರ್ಗವೇ ಕಂಡಿರದಂಥ ನಮ್ಮ ಕಣ್ಣೆದುರೇ ನಡೆವಂಥ 
            ಕಡುಬಡವ ಸಿರಿವಂತ ಈ ಅಂತರವೇ ಇರದಂಥ 
            ಜಾತಿಮತಗಳ ದೂರವಿಟ್ಟೂ ಪ್ರೀತಿಯ ಬೆಸೆವಂಥ  
ಕೋರಸ್ : ಜಾತಿಮತಗಳ ದೂರವಿಟ್ಟೂ ಪ್ರೀತಿಯ ಬೆಸೆವಂಥ  
ಕೋರಸ್ : ಕಲ್ಯಾಣ ಓಯ್ ಇಂದೇ ಕಲ್ಯಾಣ 
               ಓಓಓಓಓಓಓ ಕಲ್ಯಾಣ ಓಯ್ ಇಂದೇ ಕಲ್ಯಾಣ
               ಹೋಯ್ ... ಹೋಯ್ ... 

ಕೋರಸ್ : ಎಂಥ ನಾಡಮ್ಮಾ ಇದು ಎಂಥ ಊರಮ್ಮಾ 
                ಚೆಂದದ ಊರಮ್ಮಾ ಇದು ಅಂದದ ಊರಮ್ಮಾ 
ಗಂಡು : ಸಿರಿಗಂಧ ಸೂಸುವಂಥ ತಂಗಾಳಿ ಬೀಸುವಂಥ ಬೇಲೂರ ಬಾಲೆಯರು ಕೈಯ್ಯ ಬೀಸಿ ಕರೆವಂಥ 
            ಇನ್ಯಾಕ ಕೀರಿಯೂ ಇಲ್ಲೀ   ಚೆನ್ನಾಗಿರಿಯೂ ಇಲ್ಲೀ ಶ್ರವಣಬೆಳಗೊಳದೀ ನಿಂತ ಬಾಹುಬಲಿಯ ನೋಡಿಲ್ಲೀ .. 
ಕೋರಸ್ : ಕನ್ನಡ ನಾಡಮ್ಮಾ ಇದು ಕಲೆಗಳ ಬೀಡಮ್ಮಾ ಕನ್ನಡ ಬೆಳಗಮ್ಮಾ ಜೈ ಎಂದರ ಕೂಡಮ್ಮಾ 

ಕೋರಸ್ : ನಮ್ಮ ಬೀಗರ ನೀವೂ ನಿಮ್ಮ ಬೀಗರೂ ನಾವೂ ಬನ್ನೀ ನಮ್ಮ ಜೋತೆ ಊಟಕ್ಕೇ..  
               ನಮ್ಮ ನೆಂಟರೂ ನೀವೂ ನಿಮ್ಮ ನೆಂಟರೂ ನಾವೂ ಬನ್ನೀ ನಮ್ಮ ಜೋತೆ ಊಟಕ್ಕೇ.. 
 ಗಂಡು : ಆಹಾ.. ರಾಗಿ ಮುದ್ದೇ ಜೊತೆ ಅವರೇ ಕಾಳಿನ ಸಾರೂ ಉಂಡಾದರೂ ರುಚಿ ನೋಡಿರಿ 
             ಬೆಲ್ಲಾದ ಒಬ್ಬಟ್ಟು ಅಕ್ಕಿಯ ಶ್ಯಾವಿಗೇ ಕಾಯೀ ಹಾಲು ಊಟ ಮಾಡಿರೀ 
             ನಿಮ್ಮ ಮಾತು ಚಂದ ನಿಮ್ಮ ಊಟ ಚಂದ ನಿಮ್ಮ ಪ್ರೀತಿಯ ನಡೆ ನುಡಿ ಚಂದ 
             ನಮ್ಮ ಹುಡುಗಿಯ ಗೆದ್ದ ನಿಮ್ಮ ಹುಡುಗ ಚೆಂದಾ ಮುದ್ದು ಮಯೂರಿ ನಿಮ್ಮ ಮನೆಗಂದಾ.. 
ಕೋರಸ್ : ಮುದ್ದು ಮಯೂರಿ ನಿಮ್ಮ ಮನೆಗಂದಾ.. 
               ಹೋಯ್ ... ಹೋಯ್ ... ಹೋಯ್ ... ಹೋಯ್ ... ಹೋಯ್ ... ಹೋಯ್ ... ಹೋಯ್ ... ಹೋಯ್ ... 
              ತನನನ ನನನನಾ ತಾನ ತನನನ ನನನನಾ ತನನನ ನನನನಾ ತಾನ ತನನನ ನನನನಾ
              ಲಲಲಲಲಾ ಲಾಲಾಲಲಲಲಲಾ ಲಲಲಲಲಾ ಲಾಲಾಲಲಲಲಲಾ 
---------------------------------------------------------------------------------------------------

ಉತ್ತರ ಧೃವುದಿಂ ದಕ್ಷಿಣ ಧೃವುಕೂ (2000) - ಅಣ್ಣಯ್ಯ ನೀವೂ 
ಸಂಗೀತ : ವಿಜಯಾನಂದ, ಸಾಹಿತ್ಯ : ಅಬ್ಬಾಸ ಅಬ್ಬಲಗೇರೆ ಗಾಯನ: ಯುವರಾಜ, 

ಕೋರಸ್ : ಮಂಗಳ ಮಹಿಮಾ ಮಕ್ಕಳ ಕಾಯೋ ಮಾತಾಯೀ ಪೂಜೆಗೇ.... 
                ತಾಯ್ ಎಲ್ಲೋ ಅನ್ನೋ ನೀನೂ ಅನ್ನ ಬೇಡಿರೀ...   
ಗಂಡು : ರೇರೇ..ರೇ.. ಏಏಏಏಏಏಏ .ರೇರೇ..ರೇ.. ಏಏಏಏಏಏಏ 
            ಅಣ್ಣಯ್ಯಾ ನೀವು ಬನ್ನೀ ಓ ತಾಯಿಯ ಸೇವೆ ಮಾಡೋಣ ಬನ್ನೀ .. 
            ಅಕ್ಕಯ್ಯಾ ನೀವು ಬನ್ನೀ ಓ ದೇವಿಗೇ ಪೂಜೆ ಮಾಡೋಣ ಬನ್ನೀ ..      
            ಅಣ್ಣಯ್ಯಾ ನೀವು ಬನ್ನೀ 

ಕೋರಸ್ : ತಂದಾನ  ತಂದಾನ  ತಂದನಾನ  ತಂದಾನ  ತಂದಾನ  ತಂದಾನ ತಾನಿ  ತಂದಾನ 
ಗಂಡು : ಹೂವೂ ಹಣ್ಣು ಕಾಯಿ ಇಟ್ಟೂ ಕೈಯ್ಯಿ ಮುಗಿದು ಕೇಳೋಣ 
            ಹೊಸ ಬೆಳೆಗೆ ಹೊದುಸನ್ನು ನೀಡೆಂದೂ ಬೇಡೋಣ 
ಕೋರಸ್ : ಓ ಓಓಓಓ ಓ ಓಓಓಓ 
ಗಂಡು : ಓ ಮಾದ ಕೆಂಪಾ ಬುಟ್ಟಾ ಬನ್ನೀರೆಲ್ಲಾ ದುಡಿಯೋಣ... ಆಆಆ 
ಕೋರಸ್ : ಹೋಯ್  ಹೋಯ್  ಹೋಯ್  ಹೋಯ್  ಹೋಯ್  
ಗಂಡು : ಓ ಮಾದ ಕೆಂಪಾ ಬುಟ್ಟಾ ಬನ್ನೀರೆಲ್ಲಾ ದುಡಿಯೋಣ 
           ಮಾ ತಾಯೀ ಸೇವೆ ಮಾಡಿ ಮುತ್ತು ರತ್ನ ಬೆಳೆಯೋಣ 
ಗಂಡು : ಅಣ್ಣಯ್ಯಾ..              ಕೋರಸ್ : ಹೋಯ್  ಹೋಯ್ 
ಗಂಡು : ಅಕ್ಕಯ್ಯಾ              ಕೋರಸ್ : ಹೋಯ್  ಹೋಯ್ 
ಗಂಡು : ಅಣ್ಣಯ್ಯಾ ನೀವು ಬನ್ನೀ ಓ ತಾಯಿಯ ಸೇವೆ ಮಾಡೋಣ ಬನ್ನೀ .. 
           ಅಕ್ಕಯ್ಯಾ ನೀವು ಬನ್ನೀ 

ಗಂಡು : ಉತ್ತೂ ಬಿತ್ತಿದ ನೆಲವೂ ಹಸಿರಾಗೈತ್ತಲ್ಲಾ ನಮ್ಮಾ ಭೂ ತಾಯಿ ಮಡಿಲು ತುಳುಕಾಡೈತಲ್ಲಾ .... 
ಕೋರಸ್ : ಓ ಓಓಓಓ ಓ ಓಓಓಓ 
ಗಂಡು : ಈ ತೆಂಗೂ ಬಾಳೇ ಅಡಿಕೆ ಗೋನೆಯಾ ತೂಗ್ಯಾವಲ್ಲಾ...... ಆಆಆಆ 
ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ ಹೋಯ್  
ಗಂಡು : ಈ ತೆಂಗೂ ಬಾಳೇ ಅಡಿಕೆ ಗೋನೆಯಾ ತೂಗ್ಯಾವಲ್ಲ 
            ಬತ್ತ ರಾಗಿ ಧಾನ್ಯದ ರಾಶೀ ಕಣವ ತುಂಬ್ಯವಲ್ಲಾ 
ಗಂಡು : ಅಣ್ಣಯ್ಯಾ ನೀವು ಬನ್ನೀ ಓ ತಾಯಿಯ ಸೇವೆ ಮಾಡೋಣ ಬನ್ನೀ .. 
           ಅಕ್ಕಯ್ಯಾ ನೀವು ಬನ್ನೀ 
ಕೋರಸ್ : ಮಂಗಳ ಮಹಿಮಾ ಮಕ್ಕಳ ಕಾಯೋ ಮಾತಾಯೀ ಪೂಜೆಗೇ.... 
                ತಾಯ್ ಎಲ್ಲಾ ಅನ್ನ ನೀಡೋ ಅನ್ನದಾತೆಗೆ  ಸಿರಿಯಲ್ಲೀ...   
                ಆಆಆ ಆಆಆ 
ಗಂಡು : ಕೊಂದನಲ್ಲವ್ವಾ..  ಕೊಂದನಲ್ಲವ್ವಾ ನಮ್ಮ ರೈತನಾ... 
            ಕೊಂದನಲ್ಲವ್ವಾ ನಮ್ಮ ರೈತನಾ...   ಕತ್ತೂ ಹಿಸುಕೀ ಕೊಂದಾನಲ್ಲಿ  
            ಕರುಳು ಕಿತ್ತೂ ತಿಂದಾನಲ್ಲಿ ಕೊಂದರಲ್ಲವ್ವಾ ನಮ್ಮ ರೈತನಾ 
ಕೋರಸ್ : ಆಆಆಅ... ಆಆಆಅ.. 
ಗಂಡು : ಹುಲ್ಲು ಹಟ್ಟಿಗೆ ಬಸಿರು ಹೊಟ್ಟೆಗೇ ಹಸಿರು ಹೊಲಕೆ ಕೊಳ್ಳಿ ಇಟ್ಟೂ 
            ಸತ್ತ ಮ್ಯಾಲೇ ಸುಡುವ ಮೊದಲೇ ಜೀವಸಹಿತ ನಮ್ಮ ಸುಟ್ಟೂ 
            ಕೊಂದರಲ್ಲವ್ವಾ ನಮ್ಮ ರೈತನಾ ... ಕೊಂದರಲ್ಲವ್ವಾ ನಮ್ಮ ರೈತನಾ             
ಕೋರಸ್ : ಆಆಆಅ... ಆಆಆಅ.. ಆಆಆಅ... ಆಆಆಅ.. 
----------------------------------------------------------------------------------------------------

No comments:

Post a Comment