ಗಜೇಂದ್ರ ಚಲನಚಿತ್ರದ ಹಾಡುಗಳು
- ಅಕ್ಕಿ ಇಲ್ಲ ಬೇಳೆ ಇಲ್ಲ ಎಣ್ಣೆ ಇಲ್ಲ ಬೆಣ್ಣೆ ಇಲ್ಲ ನೀ ಏನೇ ಬೇಕೆಂದರೂ
- ಅಮ್ಮ ಅಮ್ಮಾಮ್ಮಾ
- ರವಿ ಬಾನಿನಿಂದ ಜಾರಬೇಕು
- ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
- ಪಾರ್ಟನರ್ ಹಲೋ ಪಾರ್ಟನರ್
ಗಜೇಂದ್ರ (1984) - ರಾಮ ಕೃಷ್ಣ ಗಾಂಧಿ ಬುದ್ಧ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಗಂಡು : ರಾಮ ಕೃಷ್ಣ ಗಾಂಧಿ ಬುದ್ಧ ಹುಟ್ಟಿದಂತ ದೇಶವೆಂದು ಸಂತೋಷದಿ ಹೇಳುವೆ
ಬಾಯಲ್ಲಿ ರಾಮನಾಮ ನಂಬಿದಾಗ ಪಂಗನಾಮ ಹಾಕುತ್ತ ನೀ ಬಾಳುವೆ
ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿ...
ಅಕ್ಕಿ ಇಲ್ಲ ಬೇಳೆ ಇಲ್ಲ ಎಣ್ಣೆ ಇಲ್ಲ ಬೆಣ್ಣೆ ಇಲ್ಲ ನೀ ಏನೇ ಬೇಕೆಂದರೂ
ಸಿಕ್ಕೋದಿಲ್ಲ ಅಂತಾರಲ್ಲ ಜನರ ಕಷ್ಟ ಕೇಳೋರಿಲ್ಲ ಸ್ವಾತಂತ್ರ್ಯ ಬಂದಾದರು
ಕಾರಣ ಬಲ್ಲೆಯ ಹೇಳಲೇ ನಾನು
ಕೋರಸ್ : ಲಾಲಾಲಲಲಲಲ.. ಲಾಲಾಲಲಲಲಲ.. ಲಾಲಾಲಲಲಲಲ..
ಗಂಡು : ಹಣವನ್ನು ಹುಟ್ಟಿಹಾಕಿ ಹಣವನ್ನು ಬೆಳೆಸೋರ ಗುಂಪೊಂದು ನಮ್ಮಲ್ಲಿದೆ
ಬೆಳೆದಿದ್ದ ದೋಚಿಕೊಂಡು ಬೆಲೆ ಏರೋ ಹಾಗೆ ಮಾಡೊ ಚಂಡಾಲ ಬುದ್ದಿ ಇದೆ
ಹಸಿದವರಲ್ಲಿ ಕನಿಕರವಿಲ್ಲ
ಕೋರಸ್ : ಹಸಿದವರಲ್ಲಿ ಕನಿಕರವಿಲ್ಲ
ಗಂಡು : ಮಾನವ ಹೃದಯ ಅವರಲಿ ಇಲ್ಲ
ಇವರನ್ನು ಮುಗಿಸೋ ತನಕ ಈ ಅನ್ನದ ಕೂಗು ನಿಲ್ಲದು
ಕೋರಸ್ : ಈ ಅನ್ನದ ಕೂಗು ನಿಲ್ಲದು
ಗಂಡು : ಅಕ್ಕಿ ಇಲ್ಲ (ಅಕ್ಕಿ ಇಲ್ಲ) ಬೇಳೆ ಇಲ್ಲ (ಬೇಳೆ ಇಲ್ಲ )

ಗಂಡು : ಆಳೋರು ಯಾರೆ ಇರಲಿ ಹೇಳೋರು ಯಾರೆ ಬರಲಿ ಈ ಕಷ್ಟ ಕೊನೆಯಾಗದು
ಹಸಿದೋರ ಹೊಟ್ಟೆ ಬೆಂಕಿ ಉರಿಯಾಗಿ ನುಗ್ಗೊ ತನಕ ಕಣ್ಣೀರ ಹನಿ ಇಂಗದು
ಸ್ವಾರ್ಥಿಗಳನ್ನು ದ್ರೋಹಿಗಳನ್ನು
ಕೋರಸ್ : ಸ್ವಾರ್ಥಿಗಳನ್ನು ದ್ರೋಹಿಗಳನ್ನು
ಗಂಡು : ಬಡವರ ಹಿಂಡಿ ದೋಚೋರನ್ನ ಗುಂಡಿಟ್ಟು ಕೊಲ್ಲೊ ತನಕ ಈ ದೇಶ ಉದ್ದಾರವಾಗದು
ಕೋರಸ್ : ಈ ದೇಶ ಉದ್ದಾರವಾಗದು

ಗಂಡು : ಅಕ್ಕಿ ಇಲ್ಲ (ಅಕ್ಕಿ ಇಲ್ಲ) ಬೇಳೆ ಇಲ್ಲ (ಬೇಳೆ ಇಲ್ಲ ) ಎಣ್ಣೆ ಇಲ್ಲ ಬೆಣ್ಣೆ ಇಲ್ಲ ನೀ ಏನೇ ಬೇಕೆಂದರೂ
ಸಿಕ್ಕೋದಿಲ್ಲ (ಸಿಕ್ಕೋದಿಲ್ಲ) ಅಂತಾರಲ್ಲ (ಅಂತಾರಲ್ಲ) ಜನರ ಕಷ್ಟ ಕೇಳೋರಿಲ್ಲಸ್ವಾತಂತ್ರ್ಯ ಬಂದಾದರು ಕಾರಣ ಬಲ್ಲೆಯ ಹೇಳಲೇ ನಾನು
--------------------------------------------------------------------------------------------------------------------------
ಗಜೇಂದ್ರ (1984) - ಅಮ್ಮ ಅಮ್ಮಮಾ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು : ಅಮ್ಮ.. ಅಮ್ಮಮ್ಮ.. ಹೋಯ್ ಮೇಯ್ಯೆಲ್ಲಾ ನೋವಾಗಿದೇ
ಆ ನೋವೂ ತಂದ ಕಾವೂ ತನುವೆಲ್ಲಾ ಬಿಸಿಯೇರಿದೇ
ಕಣ್ಣ ತುಂಬಾ ನಿನ್ನ ಬಿಂಬ ನೀನೇ ತುಂಬಿ ಎದೆಯ ತುಂಬಾ ಅಮ್ಮಮ್ಮ ನಾ ನೊಂದೆನೂ..
ಅಮ್ಮ.. ಅಮ್ಮಮ್ಮ.. ಹೋಯ್ ಮೇಯ್ಯೆಲ್ಲಾ ನೋವಾಗಿದೇ
ಆ ನೋವೂ ತಂದ ಕಾವೂ ತನುವೆಲ್ಲಾ ಬಿಸಿಯೇರಿದೇ
ಕಣ್ಣ ತುಂಬಾ ನಿನ್ನ ಬಿಂಬ ನೀನೇ ತುಂಬಿ ಎದೆಯ ತುಂಬಾ ಅಮ್ಮಮ್ಮ ನಾ ನೊಂದೆನೂ..
ಹೆಣ್ಣು : ಊರಿಗೇ ಉಪಕಾರಿ ಜಾಣ ನೀನೂ ನನಗೊಂದು ಉಪಕಾರ ಮಾಡಬಾರದೇನೂ
ಗಂಡು : ಅಹ್ಹಹ್ಹಹ್ಹ... ಏನ್ ಮಾಡಬೇಕೂ
ಹೆಣ್ಣು : ಊರಿಗೇ ಉಪಕಾರಿ ಜಾಣ ನೀನೂ ನನಗೊಂದು ಉಪಕಾರ ಮಾಡಬಾರದೇನೂ
ಹೀತವಾದ.. ಮಾತಿಂದ.. ಬಳಿ ಬಂದು.. ಒಲವಿಂದ..
ಗಂಡು : ಅರೆರೆರೆರೇ.. ಆಮೇಲೇ ..
ಹೆಣ್ಣು : ನೀನೇ ಬಲ್ಲೇ ನನ್ನ ಆಮೇಲೇ ..
ಗಂಡು : ಬಾರೇ .. (ಆ) ಇಲ್ಲೀ ಬಾರೇ.. (ಆ) ಸಂಕೋಚ ನೀನಗಿಲ್ಲವೇ.... ಹೇಹೇಹೇ
ಹೇಳೇ (ಓ) ಮುದ್ದು ಹೆಣ್ಣೇ (ಆ ) ನಾ ಹೆದರೋ ಗಂಡಲ್ಲವೇ.... ಹೇಹೇಹೇ
ನಿನ್ನ ಆಟ ಬಲ್ಲೇ ನಾನೂ ನನ್ನ ರೀತಿ ಬಲ್ಲೇ ಏನೇ ನಾ ಇನ್ನೂ ಬಿಡಲಾರೇನೋ.. ಆಆಆ.. ಓಓಓ ..
ಗಂಡು : ಕಾವಿಯ ಹಾಕಿಲ್ಲ ನೋಡೂ ನನ್ನ ಒಳಗೊಂದು ಹೊರಗೊಂದು ನಾನಲ್ಲ ಚಿನ್ನಾ..
ಹೆಣ್ಣು : ಅಷ್ಟೇನಾ.. ಇನ್ನೂ ಇದೇಯಾ ..
ಗಂಡು : ಕಾವಿಯ ಹಾಕಿಲ್ಲ ನೋಡೂ ನನ್ನ ಒಳಗೊಂದು ಹೊರಗೊಂದು ನಾನಲ್ಲ ಚಿನ್ನಾ..
ಬರಿಮಾತೂ.. ಇನ್ನೇಕೇ.. ಬಾ ಇಲ್ಲೀ... ತಡವೇಕೇ..
ಹೆಣ್ಣು : ಹೂಂ .. ಆಮೇಲೇ ..
ಗಂಡು : ಕೆನ್ನೆಗೊಂದೂ ಮುತ್ತೂ (ಅಯ್ಯಯ್ಯೋ) ಲೇಲೇಲೇಲೇ
ಬಾರೇ .. (ಆ) ಇಲ್ಲೀ ಬಾರೇ.. (ಆ) ಸಂಕೋಚ ನೀನಗಿಲ್ಲವೇ.... ಹೇಹೇಹೇ
ಹೇಳೇ (ಓ) ಮುದ್ದು ಹೆಣ್ಣೇ (ಆ ) ನಾ ಹೆದರೋ ಗಂಡಲ್ಲವೇ.... ಹೇಹೇಹೇ
ಹೆಣ್ಣು : ಕಣ್ಣ ತುಂಬಾ (ಹ್ಹ) ನಿನ್ನ ಬಿಂಬ (ಹ್ಹ) ನೀನೇ ತುಂಬಿ (ಹೇ) ಎದೆಯ ತುಂಬಾ ಅಮ್ಮಮ್ಮ ನಾ ನೊಂದೆನೂ..ಗಂಡು : ಹೋಯ್ ಲಲಲಲ್ಲಲ್ಲಾ .. (ಲಲಲಲ್ಲಲ್ಲಾ ..) ಲಲಲ್ಲೂಲ್ಲೂಲ್ಲೂ (ಲಲಲ್ಲೂಲ್ಲೂಲ್ಲೂ)
ರರರರರರ.. (ರರರರರರ..)
------------------------------------------------------------------------------------------------------------------
ಗಜೇಂದ್ರ (1984) - ರವಿ ಬಾನಿನಿಂದ ಜಾರಬೇಕು
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು : ರವಿ ಬಾನಿನಿಂದ ಜಾರಬೇಕೂ ಗಿಳಿರಾಮ ಶಶಿ ಬೆಳಕನ್ನೂ ಚೆಲ್ಲಬೇಕು ಗಿಳಿರಾಮ
ಹೊಸ ಮಂಚದಿ ನಾ ಮಲಗುವೇ ಹೊಸ ಕನಸನೂ ನಾ ಕಾಣುವೇ ಹಾಯಾಗಿ ಗಿಳಿರಾಮ
ಗಂಡು : ನಾ ಬಳಿಯಲ್ಲಿ ಇರುವಾಗ ಗಿಳಿರಾಮ ಹೊಸ ಕನಸಾಸೇ ನಿನಗೇಕೇ ಗಿಳಿರಾಮ
ಹೂ ಮಂಚವೇ ನೋಡಿಲ್ಲಿದೆ ತಂಗಾಳಿಯೂ ಹಾಯಾಗಿದೇ ನೀ ಹೇಳೂ ಗಿಳಿರಾಮ
ಗಂಡು : ನಿನ್ನೆಗಿಂತ ಇಂದೂ ನೀನೂ ಹೆಣ್ಣು : ಸೊಗಸಾಗಿ ಕಾಣುವೇನೇನೋ
ಗಂಡು : ಎಂದಿಂಗಿಂತ ಮಾತೂ ಇಂದೂ ಹೆಣ್ಣು : ಹಿತವಾಗಿ ತೋರುವುದೇನೋ
ಗಂಡು : ನಿನ್ನೆಗಿಂತ ಇಂದೂ ನೀನೂ ಹೆಣ್ಣು : ಸೊಗಸಾಗಿ ಕಾಣುವೇನೇನೋ
ಗಂಡು : ಎಂದಿಂಗಿಂತ ಮಾತೂ ಇಂದೂ ಹೆಣ್ಣು : ಹಿತವಾಗಿ ತೋರುವುದೇನೋ
ಗಂಡು : ಮಾತಲ್ಲಿ ಯಾರೂ ನಿನ್ನ ಗೆಲ್ಲೋರು ಇಲ್ಲವೇ ಇಲ್ಲ
ಮಾತಲ್ಲಿ ಯಾರೂ ನಿನ್ನ ಗೆಲ್ಲೋರು ಇಲ್ಲವೇ ಇಲ್ಲ
ಹೆಣ್ಣು : ಪ್ರೀತೀಲಿ ಯಾರೂ ನನ್ನ ಎದುರಲ್ಲಿ ನಿಲ್ಲುವರಿಲ್ಲ
ಗಂಡು : ನಾ ಬಳಿಯಲ್ಲಿ ಇರುವಾಗ ಗಿಳಿರಾಮ ಹೊಸ ಕನಸಾಸೇ ನಿನಗೇಕೇ ಗಿಳಿರಾಮ
ಹೆಣ್ಣು : ತಂಪು ಗಾಳಿ ಮೈಯ್ಯಿ ಸೋಕಿ ಗಂಡು : ಚಳಿಯಿಂದ ನಡುಗಿದೆಯೇನೋ
ಹೆಣ್ಣು : ನಿನ್ನ ತೋಳ ಬಂಧಿಯಾಗಿ ಗಂಡು : ಸುಖವನ್ನೂ ಹೊಂದುವೆಯೇನೋ
ಹೆಣ್ಣು : ತಂಪು ಗಾಳಿ ಮೈಯ್ಯಿ ಸೋಕಿ ಗಂಡು : ಚಳಿಯಿಂದ ನಡುಗಿದೆಯೇನೋ
ಹೆಣ್ಣು : ನಿನ್ನ ತೋಳ ಬಂಧಿಯಾಗಿ ಗಂಡು : ಸುಖವನ್ನೂ ಹೊಂದುವೆಯೇನೋ
ಹೆಣ್ಣು : ನೀನೆಲ್ಲಾ ಬಲ್ಲೆನ್ನೆಲ್ಲಾ ನಾನೇನೂ ಹೇಳುವದಿಲ್ಲಾ..
ನೀನೆಲ್ಲಾ ಬಲ್ಲೆನ್ನೆಲ್ಲಾ ನಾನೇನೂ ಹೇಳುವದಿಲ್ಲಾ..
ಹೆಣ್ಣು : ರವಿ ಬಾನಿನಿಂದ ಜಾರಬೇಕೂ ಗಿಳಿರಾಮ ಶಶಿ ಬೆಳಕನ್ನೂ ಚೆಲ್ಲಬೇಕು ಗಿಳಿರಾಮ
ಗಂಡು : ಹೂ ಮಂಚವೇ ನೋಡಿಲ್ಲಿದೆ ತಂಗಾಳಿಯೂ ಹಾಯಾಗಿದೇ ನೀ ಹೇಳೋ ಗಿಳಿರಾಮ
ಹೆಣ್ಣು : ಹಾಯಾಗಿ ಗಿಳಿರಾಮ
ಗಂಡು : ನೀ ಹೇಳೋ ಗಿಳಿರಾಮ ಹೆಣ್ಣು : ಹಾಯಾಗಿ ಗಿಳಿರಾಮ
ಗಂಡು : ಹೂಂಹೂಂಹೂಂಹೂಂ ಹೆಣ್ಣು : ಹೂಂಹೂಂಹೂಂಹೂಂ
ಗಂಡು : ಹೂಂಹೂಂಹೂಂಹೂಂ ಹೆಣ್ಣು : ಹೂಂಹೂಂಹೂಂಹೂಂ
------------------------------------------------------------------------------------------------------------------
ಗಜೇಂದ್ರ (1984) - ಅಂತಸ್ತು ಎಲ್ಲಿದೇ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ,
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ,
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ ಹ್ಹಾ.. ಜನರಿಗೇ ನೆಮ್ಮದೀ ಸುಖವೂ ಶಾಂತಿ ಎಲ್ಲಿದೇ .. ಎಲ್ಲಿದೇ ..
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಹತ್ತು ಅಂತಸ್ತು ಇರುವ ಕಟ್ಟಡವೇ ಉರುಳಿ ಬಿದ್ದೀತೂ ಕ್ಷಣದಲ್ಲಿ
ಹತ್ತು ಜನಗಳ ಸ್ವಾರ್ಥಕ್ಕಾಗಿ ನೂರಾರು ಸತ್ತರೂ ಬಲಿಯಾಗಿ
ಹತ್ತು ಅಂತಸ್ತು ಇರುವ ಕಟ್ಟಡವೇ ಉರುಳಿ ಬಿದ್ದೀತೂ ಕ್ಷಣದಲ್ಲಿ
ಹತ್ತು ಜನಗಳ ಸ್ವಾರ್ಥಕ್ಕಾಗಿ ನೂರಾರು ಸತ್ತರೂ ಬಲಿಯಾಗಿ
ರಾಕ್ಷಸರಾರೋ.. ದೇವತೆಯಾರೋ...
ರಾಕ್ಷಸರಾರೋ.. ದೇವತೆಯಾರೋ... ತಿಳಿವ ಕಾಲವೂ ಹಿಂದಿತ್ತೂ ..
ಎಲ್ಲ ರಕ್ಕಸರೇ ತುಂಬಿರುವಾಗ ಜನತೆಗೇ ದಿನವೂ ಆಪತ್ತೂ ..
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ ಹ್ಹಾ.. ಜನರಿಗೇ ನೆಮ್ಮದೀ ಸುಖವೂ ಶಾಂತಿ ಎಲ್ಲಿದೇ .. ಎಲ್ಲಿದೇ ..
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಇರುವೆಯೂ ಕೂಡ ಹೆದರುವುದೀಗ ತಿನ್ನಲೂ ಸಿಹಿಯನೂ ಕಂಡಾಗ
ಸಿಹಿಯೋ.. ಕಹಿಯೋ.. ವಿಷದ ಬೆರೆಕೆಯೋ ಎನ್ನುತ ಬೆಚ್ಚುತ್ತ ಭಯದಲ್ಲಿ
ಇರುವೆಯೂ ಕೂಡ ಹೆದರುವುದೀಗ ತಿನ್ನಲೂ ಸಿಹಿಯನೂ ಕಂಡಾಗ
ಸಿಹಿಯೋ.. ಕಹಿಯೋ.. ವಿಷದ ಬೆರೆಕೆಯೋ ಎನ್ನುತ ಬೆಚ್ಚುತ್ತ ಭಯದಲ್ಲಿ
ನಾಯಿಯೂ ಕೂಡಾ ರೊಟ್ಟಿಯ ಎಸೆದರೇ..
ನಾಯಿಯೂ ಕೂಡಾ ರೊಟ್ಟಿಯ ಎಸೆದರೇ ಮುಂದಕೆ ಬಾರದೂ ಆಸೆಯಲೀ ..
ಜನಗಳ ವಂಚನೇ ಕಣ್ಣಲೀ ಕಂಡೂ ಕೊರಗುತಲಿರುವುದೂ ಚಿಂತೆಯಲೀ ..
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ ಹ್ಹಾ.. ಜನರಿಗೇ ನೆಮ್ಮದೀ ಸುಖವೂ ಶಾಂತಿ ಎಲ್ಲಿದೇ .. ಎಲ್ಲಿದೇ ..
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಪಾಪದ ಭೀತಿಯೂ ಯಾರಲೂ ಇಲ್ಲ ಕಲ್ಲಾಗಿಹುದು ಮನಸೆಲ್ಲಾ
ಕಾಯಿಗೇ ಕೂಡ ಧೈರ್ಯದಿಂದ ಈ ದುಷ್ಟರ ಎದುರಿಸಿ ನಿಲ್ಲಲ್ಲ..
ಪಾಪದ ಭೀತಿಯೂ ಯಾರಲೂ ಇಲ್ಲ ಕಲ್ಲಾಗಿಹುದು ಮನಸೆಲ್ಲಾ
ಕಾಯಿಗೇ ಕೂಡ ಧೈರ್ಯದಿಂದ ಈ ದುಷ್ಟರ ಎದುರಿಸಿ ನಿಲ್ಲಲ್ಲ..
ಬಡವರ ಎದೆಯಲೀ .. ಹುಟ್ಟಿದ ಜ್ವಾಲೇ ..
ಬಡವರ ಎದೆಯಲೀ .. ಹುಟ್ಟಿದ ಜ್ವಾಲೇ .. ಆಗ್ನಿ ಪರ್ವತವೇ ಆಗುವುದೂ
ವಂಚಕರನ್ನೂ ಬೂದಿ ಮಾಡಿ ಹೊಸ ಹರುಷಕೇ ನಾಂದಿ ಆಗುವುದೂ
ಹೊಸ ವರುಷಕೇ ಜೀವ ತುಂಬೂವುದೂ ..
ಹೊಸ ವರುಷಕೇ ಜೀವ ತುಂಬೂವುದೂ ..
-----------------------------------------------------------------------------------------------------------------
ಗಜೇಂದ್ರ (1984) - ಪಾರ್ಟನರ್ ಹಲೋ ಪಾರ್ಟನರ್
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ರಮೇಶ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ರಮೇಶ
ರಮೇಶ : ಪಾರ್ಟನರ್ ಹಲೋ ಪಾರ್ಟನರ್...
ಪಾರ್ಟನರ್ ಹಲೋ ಪಾರ್ಟನರ್ ರಾಜ್ಯವೆಲ್ಲಾ ನಮ್ಮದಾಯಿತೂ ಸುಲಿಗೆ ಸುಲಭವಾಯಿತು ಹೌದೂ ..
ಹೊಸ ಮಂತ್ರೀ ಬರುತ್ತಾನೇ .. ಹೀಹ್ಹೀಹ್ಹಿ ನಿನ್ನ ಮಾತೇ ಕೇಳತಾನೇ... ಹ್ಹಾಂ ...
ಹೊಸ ಮಂತ್ರೀ ಬರುತ್ತಾನೇ ..ನಿನ್ನ ಮಾತೇ ಕೇಳತಾನೇ... ಹ್ಹಾಂ ..
ನನ್ನ ನಿನ್ನ ಇನ್ನೂ ಮುಂದೇ ಹೇಳೋರೂ ಕೇಳೋರು ಯಾರೂ ಇಲ್ಲವೋ
ಎಸ್ಪಿ : ಪಾರ್ಟನರ್ ಹಲೋ ಪಾರ್ಟನರ್
ಎಲ್ಲರು : ರಾಜ್ಯವೆಲ್ಲಾ ನಮ್ಮದಾಯಿತೂ ಸುಲಿಗೆ ಸುಲಭವಾಯಿತು
ಎಸ್ಪಿ : ಕಪ್ಪು ಹಣವನೆಲ್ಲಾ ಬಿಳುಪಾಗಿ ಮಾಡುವೇ ರಾಶಿ ರಾಶಿ ಚಿನ್ನ ಮನೆಯಲ್ಲಿ ತುಂಬುವೇ .. ಹೇಹೇಹೇ ..
ಬ್ಲ್ಯಾಕ್ ಕಪ್ಪು ಹಣವನೆಲ್ಲಾ ವೈಟಾಗಿ ಮಾಡುವೇ ಹ್ಹೀಹ್ಹೀಹ್ಹೀ.. ರಾಶಿ ರಾಶಿ ಚಿನ್ನ ಮನೆಯಲ್ಲಿ ತುಂಬುವೇ ..
ಒಂದು ಎರಡೂ ಮನೆಯ ಕೊಂಡರೇನೂ ಲಾಭ.. ಥೂ...
ಒಂದು ಎರಡೂ ಮನೆಯ ಕೊಂಡರೇನೂ ಲಾಭ ಬೀದಿ ಪೂರಾ ಕೊಳ್ಳುವೇ ನನ್ನ ಹೆಸರೇ ಇಡುವೇ
ಫಾರಿನ್ ಫ್ಯಾಕ್ಟರಿ ಕೊಳ್ಳುವೇ ರಾಜನಂತೇ ನಾನೂ ಮೆರೆವೇ ಸುಖವನ್ನೆಲ್ಲಾ ಸುರಿದುಕೊಳ್ಳುವೇ
ರಮೇಶ : ಬ್ರ್ಯಾಂಡಿಯಲ್ಲಿ ನನ್ನ ಸ್ನಾನ ವಿಸ್ಕಿಯಲ್ಲಿ ಇನ್ನೂ ಧ್ಯಾನ..
ಪಾರ್ಟನರ್... ಪಾರ್ಟನರ್.. ಪಾರ್ಟನರ್... ಅಹ್ಹಹ್ಹಹ್ಹ..
ರಾಜ್ಯವೆಲ್ಲಾ ನಮ್ಮದಾಯಿತೂ ಸುಲಿಗೆ ಸುಲಭವಾಯಿತು
ಎಸ್ಪಿ : ಫ್ರಾನ್ಸನಲ್ಲಿ ನಾನೂ ದಿನ ಸ್ನಾನ ಮಾಡುವೇ ಇಟಲಿಯಲ್ಲಿ ಹೋಗಿ ಬಿಸಿ ಇಡ್ಲಿ ತಿನ್ನುವೇ..
ಫ್ರಾನ್ಸನಲ್ಲಿ ನಾನೂ ದಿನ ಬಾತ್ ಮಾಡುವೇ ಇಟಲಿಯಲ್ಲಿ ಹೋಗಿ ಬ್ರೇಕಫಾಸ್ಟ್ ಇಟುವೇ
ಲಂಡನ್ ನಲ್ಲಿ ನೋಟ ಜರ್ಮನನಲ್ಲಿ ಊಟ
ಲಂಡನ್ ನಲ್ಲಿ ನೋಟ ಜರ್ಮನನಲ್ಲಿ ಊಟ ಎಂಥಾ ಭಾಗ್ಯ ನಂದೂ ಎಂಥ ಸುಖವೂ ನಂದೂ
ಸ್ವೀಸ್ಸಿನ ಬ್ಯಾಂಕೇ ಕೊಳ್ಳುವೇ.. ಹೇಹೇಹೇ .. ಚಿನ್ನವನ್ನೇ ಹಾಸಿಕೊಳ್ಳುವೇ
ಚಿನ್ನವನ್ನೇ ಹೊದ್ದುಕೊಳ್ಳುವೇ ..
ರಮೇಶ : ಬ್ರ್ಯಾಂಡಿಯಲ್ಲಿ ನನ್ನ ಸ್ನಾನ ವಿಸ್ಕಿಯಲ್ಲಿ ಇನ್ನೂ ಧ್ಯಾನ..
ಪಾರ್ಟನರ್... ಓಯ್.. ಪಾರ್ಟನರ್..
ಎಲ್ಲರು : ರಾಜ್ಯವೆಲ್ಲಾ ನಮ್ಮದಾಯಿತೂ ಸುಲಿಗೆ ಸುಲಭವಾಯಿತು
ಎಸ್ಪಿ : ಊಟಿಯನ್ನೂ ತಂದೂ ಮನೆ ಹಿಂದೇ ಇಡುವೆನೂ.. ಹೌದೂ ..
ಗಂಗಾ ನದಿಯ ನನ್ನ ಮನೇ ಮುಂದೇ ಬಿಡುವೇನೂ .. ಹೇಹೇಹೇ ..
ಊಟಿಯನ್ನೂ ತಂದೂ ಮನೆ ಹಿಂದೇ ಇಡುವೆನೂ..
ಗಂಗಾ ನದಿಯ ನನ್ನ ಮನೇ ಮುಂದೇ ಬಿಡುವೇನೂ ..
ಮಾತಿನಲ್ಲೇ ಮನೆಯ ಕಟ್ಟಬೇಡ ಗೆಳೆಯಾ..
ಮಾತಿನಲ್ಲೇ ಮನೆಯ ಕಟ್ಟಬೇಡ ಗೆಳೆಯಾ..
ಕೈಯಗೇ ಬೇಡಿ ಬಂದೂ ಅಯ್ಯೋ ಅಮ್ಮಾ ಎಂದೂ ಕಂಬಿಯ ನೀನೂ ಎಣಿಸುವೆ
ನಿನ್ನ ಕಾಲ ಮುಗಿದು ಹೋಯಿತು ನಾಳೆಯಿಂದ ನೀನೂ .. ಸೋ...ತೂ
-------------------------------------------------------------------------------------------------------------------------
No comments:
Post a Comment