ಈ ಚಿತ್ರದ ಹಾಡುಗಳ ಸಾಹಿತ್ಯವನ್ನು ಒದಗಿಸಿದವರು ಶ್ರೀಯುತ.ಶಿವರಾಮರವರು. ಅವರಿಗೆ ತುಂಬಾ ಧನ್ಯವಾದಗಳು
ಶ್ರೀ ರಾಘವೇಂದ್ರ ವೈಭವ ಚಲನಚಿತ್ರದ ಹಾಡುಗಳು - ಮನಸಿಗೆ ನೆಮ್ಮದಿ ಬೇಕೇ
- ಜ್ಯೋತಿ ಬೆಳಗಿದೆ ಗುರು ಜ್ಯೋತಿ ಬೆಳಗಿದೆ
- ಬಾಡಿಹೋಯಿತೇಕೆ ಮೊಗವು
- ನನ್ನ ಹೃದಯ ವೀಣೆ
- ಇಂದು ಎನಗೆ ಗೋವಿಂದ
- ಕರುಣೆಯ ಬೆಳಕು
- ಪದ್ಮಾವತಿಯ ಕಲ್ಯಾಣ
- ಶ್ರೀ ಪೂರ್ಣಭೋಧ ಗುರುತೀರ್ಥ
ಶ್ರೀ ರಾಘವೇಂದ್ರ ವೈಭವ (೧೯೮೧) - ಮನಸಿಗೆ ನೆಮ್ಮದಿ ಬೇಕೇ
ಸಂಗೀತ : ಚಿಟ್ಟಿಬಾಬು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಬಿ.ಶ್ರೀನಿವಾಸ್
ಮನಸಿಗೆ ನೆಮ್ಮದಿ ಬೇಕೇ....
ಮನಸಿಗೆ ನೆಮ್ಮದಿ ಬೇಕೇ... ಮಂತ್ರಾಲಯಕೆ ಬನ್ನಿರೀ ಸಾಕು
ಎಲ್ಲ ಕ್ಷೇತ್ರಗಳ ಪುಣ್ಯವು ಬೇಕೇ..
ಎಲ್ಲ ಕ್ಷೇತ್ರಗಳ ಪುಣ್ಯವು ಬೇಕೇ... ಮಂತ್ರಾಲಯವ ನೋಡಿರೀ ಸಾಕು
ಮಂತ್ರಾಲಯವ ನೋಡಿರೀ ಸಾಕು..
ತುಂಗೆಯ ತೀರ್ಥದಿ ಮಿಂದು ಭಕುತಿಯ ಹೂಗಳ ತಂದು
ತುಂಗೆಯ ತೀರ್ಥದಿ ಮಿಂದು ಭಕುತಿಯ ಹೂಗಳ ತಂದು
ಗುರುರಾಯರ ಸೇವಿಸಲೆಂದು ಮಂತ್ರಾಲಯಕೆ ಬನ್ನಿರಿ ಸಾಕು
ಮಂತ್ರಾಲಯಕೆ ಬನ್ನಿರಿ ಸಾಕು
ಈ ಗುರುರಾಯರು ಯಾರಪ್ಪಾ.. ಅವರೇನು ಮಾಡಿದರಪ್ಪ ಅಂದ್ರೇ ..
ಹೂಂ... ರಾಘವೇಂದ್ರರ ಪುಣ್ಯಕಥೆ ಗುರು ಯೋಗೇಂದ್ರರ ಭಕ್ತಿ ಕಥೆ
ಹೇಳುವೇ ಕೇಳಿ ನೀವೆಲ್ಲಾ.. ಆಆಆ ಆಆಆ ಆಆಆ ಆಆಆ
ಹೇಳುವೇ ಕೇಳಿ ನೀವೆಲ್ಲಾ ಪುಣ್ಯವ ಪಡೆಯುವ ನಾವೆಲ್ಲಾ.. ಆಆಆ.. ಹೂಂ
ಹಿರಣ್ಯಗೆ ಕಂಭದೇ ಹರಿಯನು ತೋರಿದ
ಹಿರಣ್ಯಗೆ ಕಂಭದೇ ಹರಿಯನು ತೋರಿದ ಪ್ರಹ್ಲಾದರೇ ಇವರಂತೇ..
ಶ್ರೀಕೃಷ್ಣದೇವನ ಕುಹುಯೋಗ ನೀಗಿದ ಶ್ರೀ ವ್ಯಾಸತೀರ್ಥರು ಇವರಂತೇ ..
ಭಕ್ತ ಜನರೇ... ಶ್ರೀ ವ್ಯಾಸರಾಯರ ಕೃಪೆಯಿಂದ ಜೀವದಾನ ಪಡೆದು....
-------------------------------------------------------------------------------------
ಶ್ರೀ ರಾಘವೇಂದ್ರ ವೈಭವ (೧೯೮೧) - ಜ್ಯೋತಿ ಬೆಳಗಿದೆ ಗುರು ಜ್ಯೋತಿ ಬೆಳಗಿದೆ
ಸಂಗೀತ : ಚಿಟ್ಟಿಬಾಬು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಬಿ.ಶ್ರೀನಿವಾಸ್
ಜ್ಯೋತಿ ಬೆಳಗಿದೆ ಗುರು ಜ್ಯೋತಿ ಬೆಳಗಿದೆ
ಶಕ್ತಿ ಬೆಳೆದಿದೆ ದಿವ್ಯ ಶಕ್ತಿ ಬೆಳೆ ದಿದೆ
ಮಾನವರ ಚಿಂತೆಗಳ ಹರಿಸಲೆಂದು
ನೊಂದವರ ಕಂಬನಿಯ ಒರೆಸಲೆಂದು
ಭಕ್ತರ ಇಷ್ಟಾರ್ಥವ ಫಲಿಸಲೆಂದು
ಮುಕ್ತಿಯ ಮಾರ್ಗವ ತೋರಲೆಂದು
ಜ್ಯೋತಿ ಬೆಳಗಿದೆ... ಗುರು ಜ್ಯೋತಿ ಬೆಳಗಿದೆ
-------------------------------------------------------------------------------------------
ಶ್ರೀ ರಾಘವೇಂದ್ರ ವೈಭವ (೧೯೮೧) - ಬಾಡಿಹೋಯಿತೇಕೆ ಮೊಗವು
ಸಂಗೀತ : ಚಿಟ್ಟಿಬಾಬು, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ
,
-------------------------------------------------------------------------------------------
ಶ್ರೀ ರಾಘವೇಂದ್ರ ವೈಭವ (೧೯೮೧) - ನನ್ನ ಹೃದಯ ವೀಣೆ
ಸಂಗೀತ : ಚಿಟ್ಟಿಬಾಬು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಂ.ಬಾಲಮುರಳಿಕೃಷ್ಣ,
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ಆಸೆ ತಂತಿ ತಾನ ನೀನೇ ನಾದವಾಹಿನಿ
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
(ಆಆಆ ಆಆಆ ಆಆಆ ಆಆಆ ಆಆಆ ಆಆಆ )
ನನ್ನ ಬಾಳ ಚೈತ್ರದಲ್ಲಿ ನೀನೇ ಕೋಗಿಲೆ
ನಿನ್ನ ಗಾನ ಗಂಗೆಯಲ್ಲಿ ಮಿಂದೆ ಈಗಲೇ
ನಿನ್ನ ನಗೆಯ ಹೊನಲಿನಲ್ಲಿ ಸಪ್ತಸ್ವರವಿದೇ
ನಿನ್ನ ನಗೆಯ ಹೊನಲಿನಲ್ಲಿ ಸಪ್ತಸ್ವರವಿದೇ
ಅದರ ಪಲುಕಿನಲ್ಲಿ ನನ್ನ ಜೀವದುಸಿರಿದೆ
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
(ಆಆಆ ಆಆಆ ಆಆಆ )ಆಆಆ ಆಆಆ ಆಆಆ
(ಆಆಆ ಆಆಆ ಆಆಆ )ಆಆಆ ಆಆಆ ಆಆಆ
(ಆಆಆ ಆಆಆ ಆಆಆ )ಆಆಆ ಆಆಆ ಆಆಆ
(ಆಆಆ ) ಆಆಆ ( ಆಆಆ ) ಆಆಆ (ಆಆಆ) ಆಆಆ
ಭಾಗ್ಯ ತಾರೆಯಾಗಿ ಬಂದ ಭಾಗೇಶ್ವರೀ
ಭಾವದಲೆಯ ಧಾರೇ ನೀನೇ ರಾಜೇಶ್ವರೀ
ಆ... ಕಂಗಳಲ್ಲಿ ಕಥೆಯ ಬರೆವ ಮೋಹನ ಕಲ್ಯಾಣೀ
ನನ್ನ ಮನದ ಮಂದಿರದೆ ನೆಲೆಸಿಹ ಕಲೆವಾಣಿ
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ಆಸೆ ತಂತಿ ತಾನ ನೀನೇ ನಾದವಾಹಿನಿ
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ..
------------------------------------------------------------------------------------------
ಶ್ರೀ ರಾಘವೇಂದ್ರ ವೈಭವ (೧೯೮೧) - ಇಂದು ಎನಗೆ ಗೋವಿಂದ
ಸಂಗೀತ : ಚಿಟ್ಟಿಬಾಬು, ಸಾಹಿತ್ಯ : ಶ್ರೀರಾಘವೇಂದ್ರ ಸ್ವಾಮಿ, ಗಾಯನ : ಎಂ.ಬಾಲಮುರಳಿಕೃಷ್ಣ
ತೋರೋ ಮುಕುಂದ
ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದ
ತೋರೋ ಮುಕುಂದ
ಇಂದು ಎನಗೆ ಗೋವಿಂದ
ಸುಂದರ ವದನನೇ ನಂದ ಗೋಪನ ಕಂದ
ಸುಂದರ ವದನನೇ ನಂದ ಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ....
ಇಂದು ಎನಗೆ ಗೋವಿಂದ
ಮಂದರೋದ್ಧಾರ ಆನಂದ ಇಂದಿರಾ ರಮಣ....
ಇಂದು ಎನಗೆ ಗೋವಿಂದ
ನೊಂದೇನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದರ್ಪ..ಜನಕನೇ....
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದರ್ಪ..ಜನಕನೇ....
ಇಂದು ಎನಗೆ ಗೋವಿಂದ
ಮೂಢತನದಿ ಬಲು ಹೇಡಿ ಜೀವಿ ನಾನಾಗಿ
ಧೃಡ ಭಕುತಿಯನು ಮಾಡಲಿಲ್ಲವೋ ಹರಿಯೇ
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿ ಕೊಂಬೆನೊ ನಿನ್ನ
ಗಾಡಿಕಾರ ಕೃಷ್ಣ ಕೃಷ್ಣ.. ಕೃಷ್ಣ....
ಧಾರುಣಿಯೊಳು ಬಲುಭಾರ ಜೀವ ನಾನಾಗಿ
ದಾರಿ ತಪ್ಪಿ ನಡೆದೆ...ಸೇರಿದೆ ಕುಜನರಾ
ಆರು ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರ ವೇಣುಗೋಪಾಲ.... ಪಾರುಗಾಣಿಸೋ ಹರಿಯೇ..
-------------------------------------------------------------------------------------------
ಶ್ರೀ ರಾಘವೇಂದ್ರ ವೈಭವ (೧೯೮೧) - ಕರುಣೆಯ ಬೆಳಕು
ಸಂಗೀತ : ಚಿಟ್ಟಿಬಾಬು, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಬಿ.ಶ್ರೀನಿವಾಸ್, ಕೋರಸ್
ಕರುಣೆಯ ಬೆಳಕು ಹೊರಟಿತು ಮನಸಿನ ಕತ್ತಲೆ ನೀಗಿತು
ಚರಣವು ಸೋಕಿದ ಮಣ್ಣಲೆಲ್ಲಾ ಹರುಷವು ಚಿಮ್ಮಿ ಹರಿಯಿತು
ರಾಘವೇಂದ್ರಾಯ ನಮೋ ನಮೋ ಗುರುರಾಜ ಯತೀಂದ್ರ ನಮೋ ನಮೋ
ಧರ್ಮ ಸಂಸ್ಥಾಪನೆಗಾಗಿ ದಿಗ್ವಿಜಯ ಯಾತ್ರೇ ಹೊರಟಿರೆ ಯೋಗಿ
ಭುಗಿಲು ಭುಗಿಲು ಎನೆ ರವಿ ಸುಡುವ ಬೆಂಗಾಡಲಿ
ಪ್ರಸವ ನೋವು ಕಾಡಲು ಮಹಿಳೆಯ ನಡುದಾರೀಲಿ
ರಕ್ಷ ರಕ್ಷ ರಕ್ಷ ರಕ್ಷ ಯೋಗಿ ಪಾಹಿಮಾಂ ರಕ್ಷ ರಕ್ಷ ರಾಘವೇಂದ್ರ ಯತೀ ತ್ರಾಹಿಮಾಂ
ಅದೋ.... ಅದೋ... ಅದೋ... ಅದೋ... ಯೋಗಿಯ ಮಹಿಮೆ
ನೆರಳ ನೀಡಿ ಗಂಗೆ ತಂದ ಯತಿಗಳ ಕರುಣೆ
ಸವಣೂರ ನವಾಬನ ಬಾಲಕನ ಸಾವು ಕರೆಯಿತು ಹಾವಾಗಿ
ಸುರಯೋಗಿಯ ಪಾದಕೆ ಶರಣಾದ ಧರಿಣಿಪತಿ ಕಂಬನಿ ಹೊಳೆಯಾಗಿ
ಭೂಮಾತೆಯ ಒಡಲಿಗೆ ಒಪ್ಪಿಸಿದಾ ಆ ಬಾಲನ ದೇಹವ ಹೊರ ತಗೆಸಿ
ಪ್ರಾಣವ ತುಂಬಿದ ರವಿತೇಜ ನಿಜ ಶರಣರ ಕಾಯುವ ಸುರಭೂಜ
ರಾಘವೇಂದ್ರಾಯ ನಮೋ ನಮೋ ಗುರುರಾಜ ಯತೀಂದ್ರ ನಮೋ ನಮೋ
-------------------------------------------------------------------------------------------
ಶ್ರೀ ರಾಘವೇಂದ್ರ ವೈಭವ (೧೯೮೧) - ಪದ್ಮವಾತಿಯ ಕಲ್ಯಾಣ
ಸಂಗೀತ: ಚಿಟ್ಟಿಬಾಬು, ಸಾಹಿತ್ಯ:ಆರ್.ಏನ್.ಜಯಗೋಪಾಲ್, ಗಾಯನ: ಲೋಕಾನಾಥಶರ್ಮಾ, ಅರುಣ, ಕೋರಸ್
ಕೋರಸ್ : ಎಂದೂ ಮರೆಯದ ಕಲ್ಯಾಣ ಜಗದಾನಂದದ ಕಲ್ಯಾಣ
ಶ್ರೀನಿವಾಸರಿಗೂ ಪದ್ಮಾವತಿಗೂ ಲೋಕ ಕಲ್ಯಾಣದ ಕಲ್ಯಾಣ
ಕಣ್ಣಾ ಮುಚ್ಚೇ ಕಾಡೇ ಗೂಡೆ ಉದ್ದಿನ ಮೂಟೆ ಉರುಳೆ ಹೋಯ್ತು
ನಮ್ಮ ಹಕ್ಕಿ ಬಿಟ್ಟೇನೋ ಬಿಟ್ಟೆ ನಿಮ್ಮ ಹಕ್ಕಿ ಹಿಡ್ಕೊಳ್ರೋ ಹಿಡ್ಕೊಳ್ಳಿ
ನಾರದ : ನಾರಾಯಣ... ನಾರಾಯಣ... ಬಾಡಿ ಹೋಯಿತೇಕೆ
ಮೋಗವು ಚಿಂತೆ ಕವಿಯಿತೇ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಿತೇ.....
ಶ್ರೀನಿವಾಸ : ಆಕಾಶದ ಬಣ್ಣದ ಕಣ್ಣವಳು ಆಕಾಶ ರಾಜನ ಮಗಳವಳು
ಬೆಳೆದಳು ಅವಳು ಸಿರಿತನದಲ್ಲಿ ಮುಳುಗಿದೆ ನಾನು ಬಡತನದಲ್ಲಿ
ನಾರದ : ಸಾಕೂ ಸಾಕೂ ಬಲ್ಲೆ ನಾಟಕ ಕಪಟ ನಾಟಕ ಸೂತ್ರಧಾರಿ
ಸಾಕೂ ಸಾಕೂ ಬಲ್ಲೆ ನಾಟಕ ಕಪಟ ನಾಟಕ ಸೂತ್ರಧಾರಿ ಬುದ್ದಿ ಹೇಳೋ ಕೆಲಸವನ್ನು
ನನಗೆ ಕೊಟ್ಟೇಯಾ ಮುರಾರಿ ಕಣಿಯ ಹೇಳೋ ಕೊರವಂಜಿ
ವೇಷ ಧರಿಸಿಕೋ ನಿನ್ನ ಮನದ ಅಪರಂಜಿ ಸನಿಹ ಅರಸಿಕೋ... ಮುರಾರಿ....
ಕೊರವಂಜಿ : ಹೂಂ.... ಕಣಿ ಹೇಳುವೆ ನಾನು ಕಣಿ ಹೇಳುವೆ ಮುದ್ದಿನಾ ಗಿಣಿ ನಿನಗೆ ಕಣಿ ಹೇಳುವೆ
ಗಣಪತಿಯಾ ನಾ ನೆನೆದು ಹರಿಹರರ ಅಡಿ ನೆನೆದು
ನುಡಿವೇನಮ್ಮಾ ಕಣಿ ನುಡಿವೇನಮ್ಮಾ ದುರ್ಗಮ್ಮಾ ಕಾಳಮ್ಮಾ
ಸರಸಮ್ಮಾ ಲಕ್ಷಮ್ಮಾ ನಾಲಿಗೆಯಲಿ ಕುಳಿತು ನುಡಿಯಿರಮ್ಮಾ...
ಹೆಣ್ಣೇ ನಿನ್ ಮನಸಾಗೇ ಹಮ್ಮಿರನಿದ್ದಾನೆ
ಕಣ್ಣಲ್ಲೇ ಮನೆಮಾಡಿ ತಳಮಳವ ತಂದಾನೆ
ಮನಸ್ಸನ್ನ ದೋಚಿರುವ ಪ್ರಿಯತಮನ ಪಾಡೇನು
ಬಲ್ಲೇ ಏನಮ್ಮಾ ಗಿಣಿಯೇ ಬಲ್ಲೇ ಏನಮ್ಮಾ
ಬಲ್ಲೇ ಏನಮ್ಮಾ ಗಿಣಿಯೇ ಬಲ್ಲೇ ಏನಮ್ಮಾ
ಹಸಿವನ್ನು ನೀಗ್ಯಾನೇ ಊಟ್ಯಾರ ಬಿಟ್ಟಾನೇ
ಹಗಲಿರುಳು ನಿನ್ನನೇ ಮನದಲ್ಲೇ ನೆನೆದ್ಯಾನೇ
ಅವನಂಗೆ ನಿಂಗೂನೂ ಐತಾ ಅಲ್ವೋ.. ನಿಜ ಹೇಳೋ ಬಂಗಾರಿ ಹೌದೋ ಅಲ್ಲವೋ
ಕಾಲ ಬರುತೈತೇ... ಒಳ್ಳೇ ಕಾಲ ಬರುತೈತೇ ನಿಮ್ಮಿಬ್ಬರಾ ಆಸೇ ತಿರತೈತೇ
ಯಾರೇನೇ ಹೇಳಲೀ ಯಾರ ಅಡ್ಡ ಬರಲೀ ನಿಮಿಬ್ಬರ ಲಗ್ನ ಕೂಡಿ ಬರುತೈತೇ
ಪದ್ಮಾವತೀ : ನಡೆಯದು ನಡೆಯದು ಈ ಮದುವೆ ಬಡವನ ಜೊತೆ ಇವಳಾ ಮದುವೆ
ಊಟಕೆ ಇಲ್ಲದ ತಿರುಕನಿಗೆ ಮಗಳನು ಹೇಗೆ ನಾ ಕೋಡುವೇ
ಕೊರವಂಜಿ : ನನ್ನ ಮಗಳಿವಳೆಂದು ಹೇಳಿಕೊಳ್ಳಬೇಡ
ನೇಗಿಲಲಿ ದೊರೆತವಳು ಇವಳಂತೆ ನೋಡ
ಯಾವ ಪುಣ್ಯದ ಫಲವೋ ಯಾವ ಯಾಗದ
ಬಲವೋ ಬಾಳ ಕುಣಿದೊಂದು ಈ ಮೆನೆಯ ಸೇರೋಳೇ
ಶ್ರೀನಿವಾಸನು ಅವನು ಬೇರೆ ಯಾರಲ್ಲ ಆ ವಿಷ್ಣು ಅವತರಿಸಿ ಬಂದಿರುವನಲ್ಲಾ
ಇಬ್ಬರಾ ಮದುವೆಯನು ನೀನು ಮಾಡಮ್ಮಾ ಪುಣ್ಯದ ಫಲವೆಲ್ಲ ನೀ ಪಡೆಯಮ್ಮಾ
ದ್ವನಿ : ವಿನತಾತ್ಮಜನ ಮೇಲೆ ವೆಂಕಟೇಶ್ವರನು ಮದುಮಗನ ರೂಪದಲ್ಲಿ ಬರುತಿರುವ ವೇಳೆ
ಗರುಡ ಗಂಧರ್ವ ಕಿಂಪುರುಷ ಗಣಗಳೆಲ್ಲರ ಜೊತೆಗೆ...
ಅಪ್ಸರೆಯರು ನಾಟ್ಯ ವಿನ್ಯಾಸದಲ್ಲಿ ಮೆರೆಯೇ.....
ಮದುಮಗಳ ರೂಪದಲ್ಲಿ ಮಾಲಕ್ಷ್ಮಿ ಕುಳಿತಿರಲು... ಮಂತ್ರಘೋಷದ ನಡುವೆ ಮದುವೆ ನೋಡಮ್ಮಾ... ಆಆಆ
-----------------------------------------------------------------------------------------
ಶ್ರೀ ರಾಘವೇಂದ್ರ ವೈಭವ (೧೯೮೧) - ಶ್ರೀ ಪೂರ್ಣಭೋಧ ಗುರುತೀರ್ಥ
ಸಂಗೀತ: ಚಿಟ್ಟಿಬಾಬು, ಸಾಹಿತ್ಯ: ಶ್ರೀ ಅಪ್ಪಣ್ಣಾಚಾರ್ಯ, ಗಾಯನ: ಮಾಧವಪೆದ್ದಿ ಸತ್ಯಂ
ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾ
ಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |
ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾ
ದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ
ಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |
ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾ
ದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ”
----------------------------------------------------------------------------------------
1551. ಹಾಡುಗಳನ್ನು ಟೈಪ್ ಮಾಡುವಾಗ ಸಣ್ಣ ಪುಟ್ಟ ತಪ್ಪುಗಳು, spelling mistake ಗಳು ಸಾಕಷ್ಟು ಆಗಿವೆ. ಪದ್ಮಾವತಿಯ ಕಲ್ಯಾಣ ( ಎಂದೂ ಮರೆಯದ ಕಲ್ಯಾಣ...) ಮತ್ತು ಕರುಣೆಯ ಬೆಳಕು ಹೊರಟಿಟಿತೂ.... ಗೀತೆಗಳನ್ನು ಬರೆದವರು ರಾಘವೇಂದ್ರ ಸ್ವಾಮಿಗಳು ಅಲ್ಲ. R N jayagopal ರವರು.
ReplyDelete