1804. ಅಮರ ಪ್ರೇಮ (೧೯೯೨)



ಅಮರ ಪ್ರೇಮ ಚಲನಚಿತ್ರದ ಹಾಡುಗಳು 
  1. ನಮ್ಮೂರ ತೇರಿನಲ್ಲಿ 
  2. ರಂಭಾ ಬಾ 
  3. ಪ್ರೇಮ ಹೃದಯಗಳು 
  4. ಬೀರವ್ವಾ ಮಾರವ್ವಾ 
  5. ನಗುತಿರು ಸುಖವಾಗಿ 
ಅಮರ ಪ್ರೇಮ (೧೯೯೨) - ನಮ್ಮೂರ ತೇರಿನಲ್ಲಿ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಕುಮಾರ ಬಂಗಾರಪ್ಪ 

-------------------------------------------------------------------------------------------------------

ಅಮರ ಪ್ರೇಮ (೧೯೯೨) - ರಂಭಾ ಬಾ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ 

-------------------------------------------------------------------------------------------------------

ಅಮರ ಪ್ರೇಮ (೧೯೯೨) - ಪ್ರೇಮ ಹೃದಯಗಳು 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಸಂಗೀತಕಟ್ಟಿ 

ಗಂಡು : ಪ್ರೇಮಾ.... ಹೃದಯಗಳು ಬೆರೆತಾಗ ಕನಸುಗಳು ಕಲೆತಾಗ  
            ಮಿಡಿದಂತ ರಾಗ ಅಮರ ಪ್ರೇಮಾ....ಓ...ಓಹೋ 
            ಶೃತಿ ಕೆಡದ ಪ್ರೇಮ ನಮ್ಮದು ... ಓ... ಒಹೋ ಎಂದೆಂದೂ ನಗುವಾ ಹೂವಿದು... 
ಹೆಣ್ಣು : ಅಮರ... ಮನಸುಗಳು ಅರಿತಾಗ ನೆನಪುಗಳು ನಗುವಾಗ  
          ಬರೆದಂಥ ಕಾವ್ಯ... ಅಮರ ಪ್ರೇಮ... ಓ... ಓಹೋ   
          ಶೃತಿ ಕೆಡದ ಪ್ರೇಮ ನಮ್ಮದು... ಆ ಆ ಆ..ಓ.. ಎಂದೆಂದೂ ನಗುವಾ ಹೂವಿದು... 

ಗಂಡು : ನೀ ಬಂದೇ  ಎದೆಯೊಳಗೆ ನೀ ನಿಂದೇ ಅನುರಾಗ ತಂದೆ 
ಹೆಣ್ಣು : ಬಾಳಲ್ಲಿ ಬೆಳಕಿನಲಿ ನೀ ಬಂದೆ ಬೆಳದಿಂಗಳಂತೇ ... 
ಗಂಡು : ಉಸಿರಲ್ಲಿ ಉಸಿರಾದೇ ...    ಹೆಣ್ಣು : ಬದುಕಲ್ಲಿ ಹಸಿರಾದೆ 
ಗಂಡು : ಕಣ್ತುಂಬಾ ನಿಂದೇ ... ಆಆಆ... ಆಆಆ ... ಓಓಓಓ ... ಓಓಓಓ 
ಹೆಣ್ಣು : ಓಓಓಓಓ... ನೀ ನನ್ನ ಎದೆಯಾ.. ವೀಣೆಯೂ 

ಗಂಡು : ಈ ಪ್ರೇಮಾ.. ಮಂದಿರದೇ ನೀ ಬಂದೆ ನಿಜ ದೇವಿಯಂತೇ 
ಹೆಣ್ಣು : ದೈವಿಕ... ಸಂಗಮಕೆ ಎಂದೆಂದೂ ಇದೇ ಸಾಕ್ಷಿಯಂತೇ ... 
ಗಂಡು : ಪರಿಚಿಸಲೇ ಹೂವಲ್ಲಿ...       ಹೆಣ್ಣು : ನಿಜ ದಾಸಿ ನಾನೀಲ್ಲಿ 
ಗಂಡು : ಸಂಗಾತಿ ನೀನೇ ...           
ಹೆಣ್ಣು : ಓ.... ಓಆ.. ಓ..ಓಓಓಓಓ ರವಿ ಶಶಿಯ ಹಾಗೇ ನಿತ್ಯವೂ 
          ಆ... ಓಓಓಓಓ... ಈ ನಮ್ಮ ಪ್ರೇಮ ಸತ್ಯವೂ ...     
ಗಂಡು : ಪ್ರೇಮಾ....                      ಹೆಣ್ಣು : ಅಮರ.... 
ಗಂಡು : ಹೃದಯಗಳು ಬೆರೆತಾಗ      ಹೆಣ್ಣು : ಹೃದಯಗಳು ಬೆರೆತಾಗ 
ಗಂಡು : ಕನಸುಗಳು ಕಲೆತಾಗ        ಹೆಣ್ಣು : ಕನಸುಗಳು ಕಲೆತಾಗ
ಗಂಡು : ಮಿಡಿದಂತ ರಾಗ... ಅಮರ ಪ್ರೇಮ.. 
ಇಬ್ಬರು : ಓ... ಓಓಓ  ಶೃತಿಗೆಡದ ಪ್ರೇಮ ನಮ್ಮದೂ 
             ಓಓಓಓಓ ಎಂದೆಂದೂ ನಗುವ ಹೂವಿದೂ ... 
-------------------------------------------------------------------------------------------------------

ಅಮರ ಪ್ರೇಮ (೧೯೯೨) - ಬೀರವ್ವಾ ಮಾರವ್ವಾ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮಂಜುಳಾ ಗುರುರಾಜ, ಎಸ್.ಪಿ.ಬಿ 

ಹೆಣ್ಣು : ಓ... ಆಆಆ... ಆಆಆ... ಓಓಓಓಓ .... 
ಕೋರಸ್ :  ಊಹಾ  ಯೋ.. ಯೋ.. ಯೋ.. ಯೋ..  ಊಹಾ ಊಹಾ ಊಹಾ ಊಹಾ 
ಹೆಣ್ಣು : ಬೀರವ್ವ ಮಾರವ್ವ ಕಲ್ಲವ್ವ ಕಾಳವ್ವ ಎಲ್ಲವ್ವಾ ನೀ ಎಲ್ಲವ್ವಾ... ಊಹಾ ... 
          ಕೇರಿಗೆ ನಮ್ಮವ್ವ ಸಂತೋಷ ನೀಡವ್ವ ಎಲ್ಲವ್ವಾ... ನೀ ನೀಡವ್ವ.. 
          ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. ಬೆಳ್ಳಿ ಬಟ್ಟಲಿನಾಗೇ ಮುತ್ತನು ತಂದೈತೇ 
          ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. ಬೆಳ್ಳಿ ಬಟ್ಟಲಿನಾಗೇ ಮುತ್ತನು ತಂದೈತೇ 
          ಅದು ಆ ತಾಯ್ ಮೈಯ್ಯ ಮ್ಯಾಗೇ ಚಿನ್ನದ ಒಡ್ಯಾಣ ಆಗೈತೆ.. ದಿವಾನಾಗೈತೇ... 
          ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. ಬೆಳ್ಳಿ ಬಟ್ಟಿಲನಾಗೇ ಮುತ್ತನು ತಂದೈತೇ 
ಕೋರಸ್ : ಬೀರವ್ವ...  ನೀ...  ಎಲ್ಲವ್ವಾ... ಬೀರವ್ವ ನೀ ಎಲ್ಲವ್ವಾ...ಊಹಾ 

ಕೋರಸ್ :  ಓ ಓ ಓ ಓ ಓ..... ಓ ಓ ಓ ಓ ಓ .. 
ಹೆಣ್ಣು :  ಓ ಓಓಓ  ನಮ್ಮವ್ವ ನಕ್ಕಾಗ ಹಾಲ್ಜೇನು ಹರಿದಂಗೆ ಆನಂದ ಆಗೈತೇ ... 
           ಎಲ್ಲೆಲ್ಲೂ ಹಸಿರಾಗಿ ತೆನೆಯೆಲ್ಲ ಮೈಯ್ಯ ತೂಗಿ ನಾಟ್ಯವ ಮಾಡೈತೆ 
ಕೋರಸ್ :  ಆಆಆಆ ಆಆಆಆ ಆಆಆಆ   
ಗಂಡು : ಓ ಓಓಓ ಪ್ರೀತಿಲಿ ನೋಟದಾಗ ನನ್ನದೇ ಒಳಗೆಲ್ಲಾ ಝಲ್ ಝಲ್ ಅಂದೈತೇ   
            ಆ ಗೆಜ್ಜೆ ನಾಜೂಕು ಹೆಜ್ಜೆಯನಿಟ್ಟಾಗ ಘಲ್ ಘಲ್ ಅಂತೈತೇ 
ಹೆಣ್ಣು : ಏನ್ ಕಳೆ ತಾಯೀ ಹೂವ ಮಳೆ ಪ್ರೀತಿ 
ಗಂಡು : ಮಿಂಚು ಭಲೇ ನೋಟ ಜೇನ ಹೊಳೆ ಮಾತು 
ಹೆಣ್ಣು : ಕರುಣೆ ಹರಿಸು ವರವ ಸುರಿಸು ನೀ...  ಅವ್ವಾ.... 
           ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. (ಓಓಓ) ಬೆಳ್ಳಿ ಬಟ್ಟಲಿನಾಗೇ ಮುತ್ತನು ತಂದೈತೇ ಊಹಾ 
ಕೋರಸ್ : ಯೋ ಯೋ ಯೋ ಯೋ ಯೋ ಯೋ ಓಓಓಓಓಓಓ ಯೋ ಯೋ ಯೋ ಯೋ ಯೋ 

ಹೆಣ್ಣು : ಓ.. ಓಓಓ ಬೆಟ್ಟದ ಬುಡದಾಗ ನೀ ಕೇಳು ಹಾಲಕ್ಕಿ ಶಕುನವ ನುಡಿದೈತೇ 
          ಆ ಶಿವ ಪಾರ್ವತಿ ಜೋಡಿಯ ಹಾಗೆ ನೀವೂನೂ ಅಂದೈತೇ... 
ಕೋರಸ್ :  ಆ ಆ ಆ ಅ ಆ ಆ ಆ ಅ 
ಗಂಡು : ಓ... ಓಓಓ ಶಿವನಿಗೆ ಗಂಗೆಯು ಜೊತೆಯಾಗಿ ತಾನುಂಟು ಪುರಾಣ ಹೇಳತೈತೇ 
            ನಂಗೆಂದೂ ನೀನೊಬ್ಬಳೇ ಸಂಗಾತಿ ಹಾಗಂತ ಈ ಮನ್ಸು ಹೇಳ್ಯತೀ 
ಹೆಣ್ಣು : ದ್ಯಾವರಂತೇ ನೀನು ದಾಸಿಯಂತೆ ನಾನೂ 
ಗಂಡು : ತಾಯಿ ಮ್ಯಾಗೆ ಆಣೆ ನಿನ್ನ ಸಮ ಕಾಣೆ 
ಹೆಣ್ಣು : ಆ ತಾಯಿ ಈ ನಮ್ಮ ಜೋಡೀನಾ ಹರಸಲಿ... ಅವ್ವಾ... 
          ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. (ಓಓಓ) ಬೆಳ್ಳಿ ಬಟ್ಟಲಿನಾಗೇ ಮುತ್ತನು ತಂದೈತೇ 
          ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. (ಓಓಓ) ಬೆಳ್ಳಿ ಬಟ್ಟಲಿನಾಗೇ ಮುತ್ತನು ತಂದೈತೇ 
          ಅದು ಆ ತಾಯ್ ಮೈಯ್ಯ ಮ್ಯಾಗೇ ಚಿನ್ನದ ಒಡ್ಯಾಣ ಆಗೈತೆ.. ದಿವಾನಾಗೈತೇ... 
          ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. ಬೆಳ್ಳಿ ಬಟ್ಟಲಿನಾಗೇ ಮುತ್ತನು ತಂದೈತೇ 
          ಬಾನ ತೆರೆ ಮ್ಯಾಗೆ ಚುಕ್ಕಿ ನಕೈತೇ.. ಬೆಳ್ಳಿ ಬಟ್ಟಲಿನಾಗೇ ಮುತ್ತನು ತಂದೈತೇ 
ಗಂಡು : ಓಓಓಓಓ  ಓಓಓಓಓ  ಓಓಓಓಓ  
------------------------------------------------------------------------------------------------------

ಅಮರ ಪ್ರೇಮ (೧೯೯೨) - ನಗುತಿರು ಸುಖವಾಗಿ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಸಂಗೀತ ಕಟ್ಟಿ 

ನಗುತಿರು ಸುಖವಾಗಿ ನಲಿವಿನ ಹೊಳೆಯಾಗಿ 
ನಗುತಿರು ಸುಖವಾಗಿ ನಲಿವಿನ ಹೊಳೆಯಾಗಿ 
ನೂರೊಂದು ವರುಷ ನೀ ಚೆಲ್ಲಿ ಹರುಷ ನೀ ಬಾಳು ಎಂದೂ 
ನಗುತಿರು ಸುಖವಾಗಿ ಎಲ್ಲೇ ಇರು ಹಾಯಾಗಿ 
ನನ್ನ ಆಯುವೆಲ್ಲಾ ನಿನಗಾಗಿ ನಲ್ಲ ಆ ದೇವ ಕೊಡಲಿ 
ನಗುತಿರು ಸುಖವಾಗಿ ನಲಿವಿನ ಹೊಳೆಯಾಗಿ 
(ಹ್ಯಾಪಿ ಬರ್ತ್ ಡೇ ಟೂ ಯೂ ಹ್ಯಾಪಿ ಬರ್ತ್ ಡೇ ಟೂ ಯೂ 
ಹ್ಯಾಪಿ ಬರ್ತ್ ಡೇ ಟೂ ಯೂ ಹ್ಯಾಪಿ ಬರ್ತ್ ಡೇ ಟೂ ಯೂ) 
ಶುಭಾಶಯ... ನಿನಗೆ ಶುಭಾಶಯ... ಎನ್ನೆದೆಮನದನ್ನ ನಿನಗೆ ಶುಭಾಶಯ  

ಎದೆಯ ಬನದಲಿ ಒಲವ ಚೈತ್ರವು ಬರುವುದುಂಟೇಯೇ ಬಾಳಿನಲಿ 
ಎದೆಯ ಬನದಲಿ ಒಲವ ಚೈತ್ರವು ಬರುವುದುಂಟೇಯೇ ಬಾಳಿನಲಿ 
ಸುಖದ ಹುಣ್ಣಿಮೆ ನಗಲಿ ನಿತ್ಯವೂ ನಿನ್ನ ಬದುಕಿನ ಬಾಳಿನಲೇ 
ನಿಮ್ಮ ನೆನಪಲ್ಲೇ ನಮ್ಮ ಜೀವ.. ಉಳಿವಿದೇ 
ನಿನ್ನಾ ಮನವಿಂದು ಇರುಳಿಂದ ಹೊರ ಬಾಳಿ ಬರಲಿ ... 
ನಗುತಿರು ಸುಖವಾಗಿ ನಲಿವಿನ ಹೊಳೆಯಾಗಿ 
(ಲಲಾ ಲಲಾ ಲಲಾ ಲಲಾ ಲಲಾ ಲಲಾ ಲ ಲಲಾ ಲಲಲಾ) 

ಮಗುವ ಮನಸಿಗೆ ತಿಳಿಸ ಬಯಸಿದೆ ಎದೆಯ ತನ್ನಯ ಮಾತೊಂದು 
ಮಗುವ ಮನಸಿಗೆ ತಿಳಿಸ ಬಯಸಿದೆ ಎದೆಯ ತನ್ನಯ ಮಾತೊಂದು 
ಹೃದಯ ದೈವಕೆ ಕಳಿಸ ಬಯಸಿದೆ ಪ್ರೇಮ ಪೂಜೆಯ ಹೂವೊಂದು 
ಮಾತು ಬರದಾಗೇ ತುಟಿ ಮೌನ ಹಾಡಿದೆ 
ನಿನ್ನ ಮನದಲ್ಲೇ ನನಗಾಗಿ ಕಿರು ಜಾಗವಿರಲೀ 
ನಗುತಿರು ಸುಖವಾಗಿ ನಲಿವಿನ ಹೊಳೆಯಾಗಿ 
ನೂರೊಂದು ವರುಷ ನೀ ಚೆಲ್ಲಿ ಹರುಷ ನೀ ಬಾಳು ಎಂದೂ 
ನಗುತಿರು ಸುಖವಾಗಿ ನಲಿವಿನ ಹೊಳೆಯಾಗಿ 
ನೂರೊಂದು ವರುಷ ನೀ ಚೆಲ್ಲಿ ಹರುಷ ನೀ ಬಾಳು ಎಂದೂ 
ನಗುತಿರು ಸುಖವಾಗಿ ನಲಿವಿನ ಹೊಳೆಯಾಗಿ 
-------------------------------------------------------------------------------------------------------

1 comment:

  1. ಪ್ರೇಮ ಮನಸುಗಳು ಕಲೆತಾಗ ಸಾಹಿತ್ಯ ಬೇಕು

    ReplyDelete