217. ಗೆಜ್ಜೆ ಪೂಜೆ - (1970)


ಗೆಜ್ಜೆ ಪೂಜೆ ಚಿತ್ರದ ಹಾಡುಗಳು 
  1. ಗಗನವೋ ಎಲ್ಲೋ ಭೂಮಿಯೂ ಎಲ್ಲೋ 
  2. ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ 
  3. ಮಗುವೇ ನಿನ್ನ ಹೂನಗೆ 
  4. ಪಂಚಮವೇದ ಪ್ರೇಮದ ನಾದ 
  5. ಪಂಚಮವೇದ ಪ್ರೇಮದ ನಾದ (ಪಿ.ಬಿ.ಎಸ್)
  6. ಒಂದು ದಿನ ರಾತ್ರಿಯಲೀ 
ಗೆಜ್ಜೆ ಪೂಜೆ - (1970)
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಆರ್. ಎನ್ . ಜಯಗೋಪಾಲ್ , ಗಾಯನ : ಎಸ್.ಜಾನಕಿ 


ಆಹಾ.. ಆ... ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ
ಎನಗೆ ನೀ ನೀಡಿದ ವಚನವ ಕೇಳಿ ತೇಲಿ ತೇಲಿ ಹೋದೆನಾ
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ

ನೂತನ ಜಗದಾ ಬಾಗಿಲು ತೆರೆಯಿತು
ಮನವನು ಕವಿದಾ ತೆರೆಯು ಸರಿಯಿತು
ನೂತನ ಜಗದಾ ಬಾಗಿಲು ತೆರೆಯಿತು
ಮನವನು ಕವಿದಾ ತೆರೆಯು ಸರಿಯಿತು
ಕಂಗಳು ಒಲವಿನ ಕಥೆಯ ಬರೆಯಿತು
ಕಾಲ್ಗಳು ಹರುಷದಿ ಕುಣಿ ಕುಣಿದಾಡಿತು...
ಆ...ಆ..ಆ..ಆಆ.....ಆ....ಆ....ಆ....ಆ.....
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ
ಎನಗೆ ನೀ ನೀಡಿದ ವಚನವ ಕೇಳಿ ತೇಲಿ ತೇಲಿ ಹೋದೆನಾ
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ

ಪ್ರೇಮವಸಂತದ ರಾಗವು ಮಿಡಿಯಿತು
ಆಶಾಗಾನದ ಪಲ್ಲವಿ ಹಾಡಿತು
ಪ್ರೇಮವಸಂತದ ರಾಗವು ಮಿಡಿಯಿತು
ಆಶಾಗಾನದ ಪಲ್ಲವಿ ಹಾಡಿತು
ನವಜೀವನದ ಜ್ಯೋತಿಯು ಬೆಳಗಿತು
ಉಲ್ಲಾಸದಿ ಮನ ನಲಿ ನಲಿದಾಡಿತು
ಆ...ಆ..ಆ..ಆಆ.....ಆ....ಆ....ಆ....ಆ.....
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ
ಎನಗೆ ನೀ ನೀಡಿದ ವಚನವ ಕೇಳಿ ತೇಲಿ ತೇಲಿ ಹೋದೆನಾ
ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದು ಅರಿಯೆ ನಾ
-----------------------------------------------------------------------------------------------------------------------

ಗೆಜ್ಜೆಪೂಜೆ (1970) - ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಜಾನಕಿ

(ಅಹ್ಹಹ್ಹಾ ಅಹ್ಹಹ್ಹಾ ಗೆಜ್ಜೆ ಪೂಜೇ ಯಾವಾಗಾ.. ಗೆಜ್ಜೆ ಪೂಜೇ ಯಾವಾಗಾ..
ಗೆಜ್ಜೆ ಪೂಜೇ ಯಾವಾಗಾ.. )
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ
ಗೆಜ್ಜೆಪೂಜೆಯ ಉರುಳಿಗೇ ಕೊರಳನೆಂದೂ ನೀಡೆನೂ (ಹ್ಹಾಂ )
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ
ಗೆಜ್ಜೆಪೂಜೆಯ ಉರುಳಿಗೇ ಕೊರಳನೆಂದೂ ನೀಡೆನೂ

ಒಂದೇ ಕ್ಷಣದಲಿ ಪ್ರಾಣ ಹೀರಲಿ ತಾಳಿ ಎನ್ನುವಾ ದೈವಕೇ
ಕೊರಳನಿಂದೇ ಕೊಡುವೆನೂ....
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ
ಗೆಜ್ಜೆಪೂಜೆಯ ಉರುಳಿಗೇ ಕೊರಳನೆಂದೂ ನೀಡೆನೂ

ಹೊನ್ನಿಗೆ ಹೆಣ್ಣನು ಕೊಳ್ಳುವ ಅಸುರರೇ ಎಲ್ಲೆಡೆ ತುಂಬಿಹರೂ
ಹೊನ್ನಿಗೆ ಹೆಣ್ಣನು ಕೊಳ್ಳುವ ಅಸುರರೇ ಎಲ್ಲೆಡೆ ತುಂಬಿಹರೂ
ಸ್ವಾರ್ಥ ಸಮಾಜದ ಮುಸುಕಲಿ ನಿಂತೂ ಭೀತಿಯ ತಂದಿಹರೂ....
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ
ಗೆಜ್ಜೆಪೂಜೆಯ ಉರುಳಿಗೇ ಕೊರಳನೆಂದೂ ನೀಡೆನೂ

ಸೂಳೆಯರಾಗೇ ಬಂದವರಲ್ಲಾ ಜಗಕೀ ಹೆಣ್ಣುಗಳೂ
ಸೂಳೆಯರಾಗೇ ಬಂದವರಲ್ಲಾ ಜಗಕೀ ಹೆಣ್ಣುಗಳೂ
ಕಾಮಾಂಧರೂ ಕಾಲಡಿಯಲ್ಲೀ ಹೊಸಕಿದ ಮಸಣದಾ ಹೂವುಗಳೂ..
ಮಸಣದಾ ಹೂವುಗಳೂ..ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ ) ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ ) ಆ......ಆ.....ಆ.....(ಅಹ್ಹಹ್ಹಹ್ಹಾ )
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ
ಗೆಜ್ಜೆಪೂಜೆಯ ಉರುಳಿಗೇ ಕೊರಳನೆಂದೂ ನೀಡೆನೂ
-------------------------------------------------------------------------------------------------------------------

ಗೆಜ್ಜೆಪೂಜೆ (1970) - ಮಗುವೆ ನಿನ್ನ ಹೂ ನಗೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯಕಿ: ಎಸ್ ಜಾನಕಿ

ಮಗುವೇ ನಿನ್ನ ಹೂ ನಗೆ ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ ಮಗುವೇ....
ಮಗುವೇ ನಿನ್ನ ಹೂ ನಗೆ ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ ಮಗುವೇ....

ಗಂಗೆಯಂತೆ ಬಂದೆ ನೀನು ನನ್ನ ಪಾಪ ತೊಳೆಯುವೆ
ನಾನು ಪಡೆದ ಶಾಪ ನಿನ್ನ ಕಾಡದಂತೆ ತಡೆಯುವೆ
ನಿನ್ನ ಬಾಳ ನಂದನದಲಿ ನಾಳೆ ಎಲ್ಲ ನಗುವೇ
ಮಗುವೇ ನಿನ್ನ ಹೂ ನಗೆ ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ ಮಗುವೇ....

ಬೆಂದ ಮನದ ತಾಪ ನಿನಗೆ ತಾಕದಂತೆ ಕಾಯುವೆ
ಕಣ್ಣ ಎದೆಯಲಿರಿಸಿ ನಿನ್ನ ಎಡವದಂತೆ ಕಾಣುವೆ
ನಾಲ್ವರಂತೆ ನಾಣ್ಯವಾದ ನಾರಿ ನೀನು ಎನಿಸುವೆ
ಮಗುವೇ ನಿನ್ನ ಹೂ ನಗೆ ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ ಮಗುವೇ....ನಿನ್ನ ಹೂ ನಗೆ
--------------------------------------------------------------------------------------------------------------------

ಗೆಜ್ಜೆಪೂಜೆ (1970) - ಪಂಚಮವೇದ ಪ್ರೇಮದನಾದ
ಸಾಹಿತ್ಯ: ವಿಜಯನಾರಸಿಂಹ  ಸಂಗೀತ: ವಿಜಯಭಾಸ್ಕರ್  ಗಾಯನ : ಪಿ.ಬಿ. ಶ್ರಿನಿವಾಸ್


ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ
ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ
ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ
ರಾಧಾಮಾಧವ ವೇಣುವಿಹಾರ ಗೀತೆಯೆ ಪ್ರೀತಿಯ ಜೀವನಸಾರ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯ ತಾರೆ ಭವ್ಯ ರಸಿಕತೆ ಬಾಳಿಗಾಸರೆ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
--------------------------------------------------------------------------------------------------------------------------

ಗೆಜ್ಜೆಪೂಜೆ (1970) - ಪಂಚಮವೇದ ಪ್ರೇಮದನಾದ
ಸಾಹಿತ್ಯ: ವಿಜಯನಾರಸಿಂಹ  ಸಂಗೀತ: ವಿಜಯಭಾಸ್ಕರ್  ಗಾಯನ : ಎಸ್.ಜಾನಕೀ 

ಪಂಚಮವೇದ ಪ್ರೇಮದನಾದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ
ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ
ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ
ರಾಧಾಮಾಧವ ವೇಣ ವಿಹಾರ ಗೀತೆಯೆ ಪ್ರೀತಿಯ ಜೀವನಸಾರ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯ ತಾರೆ ಭವ್ಯ ರಸಿಕತೆ ಬಾಳಿಗಾಸರೆ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾ... ನಂದ
--------------------------------------------------------------------------------------------------------------------------

ಗೆಜ್ಜೆಪೂಜೆ (1970) - ಒಂದು ದಿನ ರಾತ್ರಿಯಲಿ 
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ವಿಜಯನಾರಸಿಂಹ   ಗಾಯನ : ಬಿ.ಕೆ.ಸುಮಿತ್ರಾ 

ಒಂದು ದಿನ ರಾತ್ರಿಯಲಿ ಕಂಡೆ ಕನಸೊಂದು 
ಬಣ್ಣ ಬಣ್ಣದ ಬೆಳಕಲಿ ಕಂಡೆ ದಿವ್ಯ ಸ್ವರೂಪವೊಂದು 
ಒಂದು ದಿನ ರಾತ್ರಿಯಲಿ ಕಂಡೆ ಕನಸೊಂದು 
ಬಣ್ಣ ಬಣ್ಣದ ಬೆಳಕಲಿ ಕಂಡೆ ದಿವ್ಯ ಸ್ವರೂಪವೊಂದು 

ಒಂದು ಕೈಯಲ್ಲಿ ಮಾಣಿಕ್ಯ ವೀಣೆ ಒಂದು ಕೈಯಲ್ಲಿ ಪುಸ್ತಕ 
ಒಂದು ಕೈಯಲ್ಲಿ ಮಾಣಿಕ್ಯ ವೀಣೆ ಒಂದು ಕೈಯಲ್ಲಿ ಪುಸ್ತಕ 
ಚೆಲುವಿನ ಹಣೆಯಲಿ ಕುಂಕುಮ ತಿಲಕ 
ಕೊರಳಲಿ ಹೂವುಗಳ ಮಾಲಿಕಾ 
ಒಂದು ದಿನ ರಾತ್ರಿಯಲಿ ಕಂಡೆ ಕನಸೊಂದು 
ಕಂಡೆ ಕನಸೊಂದು 

ಹಾಲು ಹುಣ್ಣಿಮೆ ಹೋಲುವ ಮೊಗುವೂ 
ನೈದಿಲೆ ಹೂವನು ಹೋಲುವ ಕಣ್ಣು 
ಹಾಲು ಹುಣ್ಣಿಮೆ ಹೋಲುವ ಮೊಗುವೂ 
ನೈದಿಲೆ ಹೂವನು ಹೋಲುವ ಕಣ್ಣು 
ಕಮಲ ಕರಗದಲಿ ರತ್ನದ ಕಂಕಣ 
ನಗುವೇ ಅವಳ ಆಭರಣ 
ಒಂದು ದಿನ ರಾತ್ರಿಯಲಿ ಕಂಡೆ ಕನಸೊಂದು 
ಕಂಡೆ ಕನಸೊಂದು 

ಬಳಿಯಲಿ ಹೋಗಿ ನಮಿಸುತ ತಾಯೇ ನೀನ್ಯಾರೆಂದೂ ಹೇಳಿದೇ 
ಬಳಿಯಲಿ ಹೋಗಿ ನಮಿಸುತ ತಾಯೇ ನೀನ್ಯಾರೆಂದೂ ಕೇಳಿದೇ 
ಮುದ್ದಿಸಿ ಎನ್ನ ಪ್ರೇಮದಲೀ ನುಡಿದಳೂ ನಾನೇ ಶಾರದೇ 
ಶಾರದೇ ಶಾರದೇ ಶಾರದೇ .... 
ಒಂದು ದಿನ ರಾತ್ರಿಯಲಿ ಕಂಡೆ ಕನಸೊಂದು 
ಬಣ್ಣ ಬಣ್ಣದ ಬೆಳಕಲಿ ಕಂಡೆ ದಿವ್ಯ ಸ್ವರೂಪವೊಂದು 
--------------------------------------------------------------------------------------------------------------------------

1 comment: