247. ಭಕ್ತ ಕುಂಬಾರ (1974)

ಭಕ್ತ ಕುಂಬಾರ ಚಿತ್ರದ ಹಾಡುಗಳು 
  1. ಹರಿ ನಾಮವೇ ಚಂದ 
  2. ನಾನು ನೀನು ನೆಂಟರಯ್ಯಾ 
  3. ವಿಠಲ ವಿಠಲ ಪಾಂಡುರಂಗ ವಿಠಲ 
  4. ಮಾನವ ದೇಹವು ಮೂಳೆ ಮಾಂಸದ ತಡಿಕೆ 
  5. ಜೋಡಿ ಬೇಡೋ ಕಾಲವಮ್ಮಾ 
  6. ಕಂಡೇ ಹರಿಯ ಕಂಡೇ 
  7. ಗುರು ಬ್ರಹ್ಮ 
  8. ವಿಠಲ ಪಾಂಡುರಂಗ 
ಭಕ್ತ ಕುಂಬಾರ (1974) - ಹರಿ ನಾಮವೆ ಚಂದ
ಸಂಗೀತ: ಜಿ ಕೆ ವೆಂಕಟೇಶ್ ಗಾಯನ: ಪಿ ಬಿ ಎಸ್ ಸಾಹಿತ್ಯ : ಹೂಣುಸೂರು ಕೃಷ್ಣಮೂರ್ತಿ

ಹರಿ ನಾಮವೆ ಚಂದ ಹರಿ ನಾಮವೆ ಚಂದ
ಅದ ನಂಬಿಕೊ ಕಂದ ಅದ ನಂಬಿಕೊ ಕಂದ
ಹರಿ ನಾಮವೆ  ಹರಿ ನಾಮವೆ

ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು || ೨
ಮುಂದಿನ ಬದುಕು ಬಂದುದವೆನಿಸೊ ಗುರಿ ಸಾಧಿಸೊ ಕಂದ
ಹರಿ ನಾಮವೆ ಚಂದ ಅದ ನಂಬಿಕೊ ಕಂದ
ಹರಿ ನಾಮವೆ  ಹರಿ ನಾಮವೆ

ಮಣ್ಣಿನ ಹಾಗೆ ಮಾಗಿಸೆ ಮನವ ಚಿನ್ಮಯನೆಂಬೊ ನಾಮದ ಜಲವ
ಚಿನ್ಮಯನೆಂಬೊ ನಾಮದ ಜಲವ ಸೇರಿಸಿ ಬೆರೆಸಿ
ಮುಕುತಿಯ ಗಳಿಸಿ ಸುಖಿಯಾಗೊ ನೀ ಕಂದ
ಹರಿ ನಾಮವೆ ಹರಿ ನಾಮವೆ
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು ತಲೆ ಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು ಭಗವಂತ ನಿನ್ನ ಪೊರೆವ
ಧನ್ಯನಾಗು ಜಗಮಾನ್ಯನಾಗು ತನ್ನ ಸೌಭಾಗ್ಯ ಕೊಡುವ
ಪರತ್ಪರ ಹರಿ ವಿಠಲ  ಪರತ್ಪರ ವರ ವಿಠಲ
ವಿಠಲಾ ವಿಠಲಾ ವಿಠಲಾ ವಿಠಲಾ  ಪಾಂಡುರಂಗ  ಜೈ ಹರಿ ವಿಠಲಾ ಪಂಡುರಂಗ
ವಿಠಲಾ ವಿಠಲಾ  ಪಾಂಡುರಂಗ  ಜೈ ಹರಿ ವಿಠಲ ಪಂಡುರಂಗ
ವಿಠಲಾ ವಿಠಲಾ  ಜೈ ಜೈ ವಿಠಲಾ
------------------------------------------------------------------------------------------------------------------------

ಭಕ್ತ ಕುಂಬಾರ (1974) - ವಿಠಲ ವಿಠಲ ಪಾಂಡುರಂಗ ವಿಠಲ

ಸಂಗೀತ ನಿರ್ದೇಶನ: ಜಿ.ಕೆ. ವೆಂಕಟೇಶ್   ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ  ಗಾಯನ: ಎಸ್.ಪಿ.ಬಿ. 

ವಿಠಲಾ ವಿಠಲಾ.... ಪಾಂಡುರಂಗ ವಿಠಲಾ... ಜೈ ಪಾಂಡುರಂಗ ವಿಠಲಾ
ವಿಠಲಾ ವಿಠಲಾ.... ಪಾಂಡುರಂಗ ವಿಠಲಾ... ಜೈ ಪಾಂಡುರಂಗ ವಿಠಲಾ
ಎಲ್ಲಾ ಮರೆತು, ವಿಠಲ ಎನಲು ಅನುಕ್ಷಣ ಆನಂದವೇ
ವಿಠಲಾ ವಿಠಲಾ.... ಪಾಂಡುರಂಗ ವಿಠಲಾ... ಜೈ ಪಾಂಡುರಂಗ ವಿಠಲಾ

ಅಂಬುಜನಾಭನು ನಂಬಿದ ಜನರಿಗೆ
ಅಂಬುಜನಾಭನು ನಂಬಿದ ಜನರಿಗೆ
ಕಷ್ಟವ ಕಳೆಯುವ, ಇಷ್ಟವ
ನಿರುತವೂ ಪಾಲಿಸೋ ಕರುಣಾ ಪೂರ್ಣನು
ನಿರುತವೂ ಪಾಲಿಸೋ ಕರುಣಾ ಪೂರ್ಣನು |
ಪಂಡರಾಪುರವಾಸನು
ವಿಠಲಾ ವಿಠಲಾ.... ಪಾಂಡುರಂಗ ವಿಠಲಾ... ಜೈ ಪಾಂಡುರಂಗ ವಿಠಲಾ
ಎಲ್ಲಾ ಮರೆತು, ವಿಠಲಾ ಎನಲು ಅನುಕ್ಷಣ ಆನಂದವೇ
ವಿಠಲಾ ವಿಠಲಾ.... ಪಾಂಡುರಂಗ ವಿಠಲಾ... ಜೈ ಪಾಂಡುರಂಗ ವಿಠಲಾ...

ಗಗನದಿ ನೀಲಿಯು ತುಂಬಿರುವಂತೆ
ಗಗನದಿ ನೀಲಿಯು ತುಂಬಿರುವಂತೆ
ಹೂವಲಿ ಪರಿಮಳ ಬೆರೆತಿರುವಂತೆ
ಭಕುತರ ಮನದಿ ಮನೆ ಮಾಡಿರುವೆ
ಭಕುತರ ಮನದಿ ಮನೆ ಮಾಡಿರುವೆ
ಧನ್ಯರ ನೀ ಮಾಡುವೆ
ವಿಠಲಾ ವಿಠಲಾ....ಪಾಂಡುರಂಗ ವಿಠಲಾ... ಜೈ ಪಾಂಡುರಂಗ ವಿಠಲಾ
ಎಲ್ಲಾ ಮರೆತು, ವಿಠಲಾ ಎನಲು ಅನುಕ್ಷಣ ಆನಂದವೇ
ವಿಠಲಾ ವಿಠಲಾ.... ಪಾಂಡುರಂಗ ವಿಠಲಾ...ಜೈ ಪಾಂಡುರಂಗ ವಿಠಲಾ
ಪಾಂಡುರಂಗ ವಿಠಲಾ...ಜೈ ಪಾಂಡುರಂಗ ವಿಠಲಾ..
-----------------------------------------------------------------------------------------------------------------------

ಭಕ್ತ ಕುಂಬಾರ (೧೯೭೪) - ಮಾನವ ದೇಹವು ಮೂಳೆ ಮಾಂಸದ ತಡಿಕೇ
ರಚನೆ: ಹುಣಸೂರು ಕೃಷ್ಣಮೂರ್ತಿ  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕ: ಪಿ. ಬಿ. ಶ್ರೀನಿವಾಸ್

ಪರತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮ ಒಂದುಳಿದು ನನಗೇನು ತಿಳಿದಿಲ್ಲಾ... ನನಗೇನು ತಿಳಿದಿಲ್ಲಾ
ಮಾನವ ದೇಹವು ಮೂಳೆ ಮಾಂಸದ ತಡಿಕೇ
ಮಾನವ ಮೂಳೆ ಮಾಂಸದ ತಡಿಕೇ
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ...
ಮಾನವ ಮೂಳೆ ಮಾಂಸದ ತಡಿಕೇ

ನವ ಮಾಸಗಳು ಹೊಲಸಲಿ ಕಳೆದು, ಅ ಆ ...
ನವ ರಂಧ್ರಗಳಾ ಕಳೆದೂ ಬೆಳೆದೂ
ಬಂದಿದೆ ಭುವಿಗೇ ಈ ನರ ಗೊಂಬೇ
ನಂಬಲು ಏನಿದೇ ಸೌಭಾಗ್ಯವೆಂದೇ
ಮಾನವ ಮೂಳೆ ಮಾಂಸದ ತಡಿಕೇ
ದೇಹವೂ ಮೂಳೆ ಮಾಂಸದ ತಡಿಕೇ

ಉಸಿರಾಡುವ ತನಕ, ನಾನು ನನದೆಂಬ ಮಮಕಾರ
ನಿಂತ ಮರುಗಳಿಗೆ, ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತೂ, ಮೆಲ್ಲಗೆ ಕೊಳೆತೂ
ಮುಗಿಯುವ ದೇಹಕೇ ವ್ಯಾಮೋಹವೇಕೇ
ಮಾನವ ಮೂಳೆ ಮಾಂಸದ ತಡಿಕೇ
ದೇಹವೂ ಮೂಳೆ ಮಾಂಸದ ತಡಿಕೇ

ಬರುವಾಗ ಬೆತ್ತಲೇ, ಹೋಗುವಾಗ ಬೆತ್ತಲೇ
ಬಂದು ಹೋಗುವ ನಡುವೇ, ಬರೀ ಕತ್ತಲೇ
ಭಕ್ತಿಯ ಬೆಳಕೂ, ಬಾಳಿಗೆ ಬೇಕೂ
ಮುಕ್ತಿಗೆ ವಿಠ್ಠಲನ ಕೊಂಡಾಡ ಬೇಕೂ
ಮಾನವ ಮೂಳೆ ಮಾಂಸದ ತಡಿಕೇ
ದೇಹವು ಮೂಳೆ ಮಾಂಸದ ತಡಿಕೇ
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ
ಮಾನವ ಮೂಳೆ ಮಾಂಸದ ತಡಿಕೇ
ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ    ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ
ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ  
ಪಾಂಡುರಂಗ ವಿಠ್ಠಲ  ಪಾಂಡುರಂಗ ವಿಠ್ಠಲ
ಜೈ ಪುಂಡಲೀಕ ವರದೇ ಹರೀ ವಿಠ್ಠಲೇ
----------------------------------------------------------------------------------------------------------------------

ಭಕ್ತ ಕುಂಬಾರ (೧೯೭೪) - ನಾನು ನೀನು ನೆಂಟರಯ್ಯಾ  ನಮಗೆ ಬೇಧ.. .... ಇಲ್ಲವಯ್ಯಾ
ರಚನೆ: ಹುಣಸೂರು ಕೃಷ್ಣಮೂರ್ತಿ  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕ: ಪಿ. ಬಿ. ಶ್ರೀನಿವಾಸ್

ವಿಠಲಾ ಪಾಂಡುರಂಗಾ ವಿಠಲಾ  ನಾನು ನೀನು ನೆಂಟರಯ್ಯಾ
ನಾನು ನೀನು ನೆಂಟರಯ್ಯಾ  ನಮಗೆ ಬೇಧ.. .... ಇಲ್ಲವಯ್ಯಾ
ನಾನು ನೀನು ನೆಂಟರಯ್ಯಾ  ನಮಗೆ ಬೇಧ.. .... ಇಲ್ಲವಯ್ಯಾ
ವಿಠಲಾ  ವಿಠಲಾ  ವಿಠಲಾ

ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದಾ ಕುಂಬಾರ ನಾನ್...ಉ
ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದಾ ಕುಂಬಾರ ನಾನು
ಜೀವಿಗಳೆಂಬೋ ಬೊಂಬೆಯಾ ಮಾಡೋ 
ಬ್ರಹ್ಮನ  ತಂದೆ ಕುಂಬಾರ ನೀನು 
ಬ್ರಹ್ಮನ  ತಂದೆ ಕುಂಬಾರ ನೀನು
ವಿಠಲಾ....  ಪಾಂಡುರಂಗಾ ವಿಠಲಾ
ವಿಠಲಾ....ವಿಠಲಾ....ವಿಠಲಾ....
ನಾನು ನೀನು ನೆಂಟರಯ್ಯಾ  ನಮಗೆ ಬೇಧ ಇಲ್ಲವಯ್ಯಾ

ಯಾಗವನೊಲ್ಲೇ...  ಯೋಗವನೊಲ್ಲೇ...  ರಾಗದೇ ಮೂಳುಗೋ ವ್ಯಭೋಗ ಒಲ್ಲೇ
ಯಾಗವನೊಲ್ಲೇ...  ಯೋಗವನೊಲ್ಲೇ...  ರಾಗದೇ ಮೂಳುಗೋ ವ್ಯಭೋಗ ಒಲ್ಲೇ
ಮಾಧವ ನಿನ್ನ ನಾಮಾಮೃತದ ಸಾಧನೆ ಒಂದೇ ಸಾಕಾಯ್ಯ  ತಂದೆ 
ಸಾಧನೆ ಒಂದೇ ಸಾಕಯ್ಯ  ತಂದೆ 
ಪುಂಡರೀಕ ವರದ ಜಯ ಪಾಂಡುರಂಗ 
ಪಾಂಡುರಂಗ ವಿಠ್ಠಲ ಜಯ ಪಾಂಡುರಂಗ
ವಿಠಲ..  ಪಾಂಡುರಂಗ ವಿಠ್ಠಲ
ಜೈ ಜೈ ವಿಠ್ಠಲ ಪುಂಡರೀಕ ವರದ ಜೈ ಜೈ ವಿಠ್ಠಲ

-----------------------------------------------------------------------------------------------------------------------

ಭಕ್ತ ಕುಂಬಾರ (೧೯೭೪) - ಕಂಡೆ ಹರಿಯ ಕಂಡೇ  ಕಂಡೆ ಹರಿಯ ಕಂಡೇ
ರಚನೆ: ಹುಣಸೂರು ಕೃಷ್ಣಮೂರ್ತಿ  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕ: ಪಿ. ಬಿ. ಶ್ರೀನಿವಾಸ್

ಕಂಡೆ ಹರಿಯ ಕಂಡೇ  ಕಂಡೆ ಹರಿಯ ಕಂಡೇ
ದೇವಾದಿ ದೇವಾ  ಧನುಜಾದಿ ವಂದ್ಯಾ
ಧರಣೀಶನ ದಿವ್ಯ ಚರಣ ಕಮಲ ಯುಗವ
ಕಂಡೆ ಹರಿಯ ಕಂಡೇ 

ಪಾವನವಾಯಿತು ಕುಲಕೋಟಿಗಳು
ಪುಟಿದು ಹೋದವು ಪರಿತಾಪಗಳೂ
ಪುಟಿದು ಹೋದವು ಪರಿತಾಪಗಳೂ
ಬೇರೇನೂ ಬೇಕಿಲ್ಲಾ ಸಾಕು ಇದುವೇ ಅನಂತ ಭಾಗ್ಯ 
ಕಂಡೆ ಹರಿಯ ಕಂಡೇ

ಈ  ಜೀವ ಜೋತೆಯಲ್ಲಿ ಪರಮಾತ್ಮ ಕಲೆತು
ಈ  ಜೀವ ಜೋತೆಯಲ್ಲಿ ಪರಮಾತ್ಮ ಕಲೆತು
ಒಳಗೂ ಹೊರಗೂ ಬೆಳಗುವ ಹಾಗೇ
ಸಖಿಯರ ಒಡನೆ ಕುಣಿಯುವ ಹರಿಯ
ಚರಣ ಕಿಂಕಿಣೀ ನಾದದ ಇಂಪೂ
ರಾಗ ಭಾವಗಳು ಬೆಸದಿಹ ಸೋಂಪು
ಮಂದಹಾಸದಲಿ ನಿಂದ ಲಾಸ್ಯದಲಿ
ಕುಣಿದು ಕುಣಿಸೋ ಕಲಾಪವನ್ನೇ
ಕಂಡೆ ಹರಿಯ ಕಂಡೇ

ಅಸಮಾನ ಕಲೆಗಾರ ಇವ ನಮ್ಮ ವಿಠ್ಠಲ
ರಸವಂತ ಗುಣವಂತ ಶೃಂಗಾರ ಲೋಲ
ಯೋಗಿಯೋ ಭೋಗಿಯೋ ಬಲ್ಲವರಿಲ್ಲಾ
ರಸಿಕ ರಂಗನ ಅನಂಗಪಿತನಾ
ಹಾವ ಭಾವಗಳೊಳಗಿನ ಮರ್ಮ
ತಿಳಿದು ನಾನಿಂದು ತಳೆದೆ ಆನಂದ
ಪ್ರಾಣವ ಬೆರೆತ ವಿಹಾರವನ್ನೇ
ಕಂಡೆ ಹರಿಯ ಕಂಡೇ
ದೇವಾದಿ ದೇವಾ  ಧನುಜಾದಿ ವಂದ್ಯಾ
ಧರಣೀಶನ ದಿವ್ಯ ಚರಣ ಕಮಲ ಯುಗವ
ಕಂಡೆ ಹರಿಯ ಕಂಡೇ 

--------------------------------------------------------------------------------------------------------------------------

ಭಕ್ತ ಕುಂಬಾರ (೧೯೭೪) - ಎಲ್ಲಿ ಮರೆಯಾದೇ.. ಪಾಂಡುರಂಗಾ.. ಆಆಆ  ಏಕೇ ದೂರಾದೇ..
ರಚನೆ: ಹುಣಸೂರು ಕೃಷ್ಣಮೂರ್ತಿ  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕ: ಪಿ. ಬಿ. ಶ್ರೀನಿವಾಸ್

ರಂಗಾ... ವಿಠ್ಠಲಾ... ರಂಗಾ... ಪಾಂಡುರಂಗಾ..
ಎಲ್ಲಿ ಮರೆಯಾದೇ.. ಪಾಂಡುರಂಗಾ.. ಆಆಆ  ಏಕೇ ದೂರಾದೇ..
ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ..
ರಂಗಾ ಏಕೇ ದೂರಾದೇ.... ಎಲ್ಲಿ ಮರೆಯಾದೇ..

ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೇ ನಿಂತೇ
ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೇ ನಿಂತೇ
ಮಾಧವ ನಿನ್ನಾ ಮಾಯಾಜಾಲ...
ಮಾಧವ ನಿನ್ನಾ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ .... ವಿಠಲ.. ರಂಗ..
ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ..
ವಿಠ್ಠಲಾ... ರಂಗಾ...  ವಿಠ್ಠಲಾ... ರಂಗಾ...

ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರೂ ನೀವೂ
ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರೂ ನೀವೂ
ಬಲ್ಲೀರಿ ಅವನ ಅಂತರಂಗ 
ಬಲ್ಲೀರಿ ಅವನ ಅಂತರಂಗ ಎಲ್ಲಿಹ ಹೇಳಿ ಪಾಂಡುರಂಗ... ವಿಠ್ಠಲಾ... ರಂಗಾ...
ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ..
ವಿಠ್ಠಲಾ... ರಂಗಾ...  ವಿಠ್ಠಲಾ... ರಂಗಾ...

ಎತ್ತೆತ್ತಲಿಗ ಕಗ್ಗತ್ತಲಾಯ್ತು ಗೋತ್ತಾಗದಾಯ್ತೆ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ಮುತ್ತಂಥ ನಿನ್ನ ಕೈತುತ್ತ ತಿನ್ನೋ ಹೊತ್ತಾಯ್ತೋ ಬಾರೋ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ಬತ್ತಿರೋ ಬದುಕೇತ್ತಿ ನೀ ಬೆಳಕ ಹತ್ತಿಸೀ ಕಾಯೋ ವಿಠ್ಠಲ 
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ 
ಹೆತ್ತವಳಂತೆ ನೀನೆತ್ತಿಕೊಂಡು ನನ್ನತ್ತ ನೋಡೋ ವಿಠ್ಠಲ 
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ 
ನೀ ಎನ್ನ ನೀ ಎನ್ನಮನ ನೀ ಪ್ರಾಣ ವಿಠ್ಠಲ 
ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ 
ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ 
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ     ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ 
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ     ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ 
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ     ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ 
 ರಂಗಾ...  ವಿಠ್ಠಲಾ... ರಂಗಾ...
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ  
-------------------------------------------------------------------------------------------------------------------------

ಭಕ್ತ ಕುಂಬಾರ (೧೯೭೪) -ಜೋಡಿ ಬೇಡೋ ಕಾಲವಮ್ಮಾ ತುಂಬಿ ಬಂದಾ ಪ್ರಾಯವಮ್ಮಾ
ರಚನೆ: ಹುಣಸೂರು ಕೃಷ್ಣಮೂರ್ತಿ  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕ: ಎಸ್. ಜಾನಕೀ 

ಆಆಆ... ಜೋಡಿ ಬೇಡೋ ಕಾಲವಮ್ಮಾ ತುಂಬಿ ಬಂದಾ ಪ್ರಾಯವಮ್ಮಾ
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ಜೋಡಿ ಬೇಡೋ ಕಾಲವಮ್ಮಾ ತುಂಬಿ ಬಂದಾ ಪ್ರಾಯವಮ್ಮಾ
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ತಾನ ತಂದಾನೋ ತಾನ ತಾನತಂದಾನೋ 
ತಾನ ತಂದಾನೋ ತಾನ ತಾನತಂದಾನೋ

ಚಂದ್ರಕಾಂತಿ ಬೆಂಕಿಯಂತೆ ತಡೆಯಲಾರದ ಬೇಗೆಯಂತೆ
ಚಂದ್ರಕಾಂತಿ ಬೆಂಕಿಯಂತೆ ತಡೆಯಲಾರದ ಬೇಗೆಯಂತೆ
ಒಂಟಿ ಬದುಕು ಬೇಡವಂತೆ ನೆಂಟ ಬರಬೇಕಂತೇ ಬೇಕಂತೇ....  
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ಜೋಡಿ ಬೇಡೋ ಕಾಲವಮ್ಮಾ ತುಂಬಿ ಬಂದಾ ಪ್ರಾಯವಮ್ಮಾ 
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ತಾನ ತಂದಾನೋ ತಾನ ತಾನತಂದಾನೋ 
ತಾನ ತಂದಾನೋ ತಾನ ತಾನತಂದಾನೋ

ತಾಳ ಬೇಕು ಬಾಳ ಬೇಕು ತಂಪು ಗಾಳಿ ಸೋಂಪು ಬೇಕು
ತಾಳ ಬೇಕು ಬಾಳ ಬೇಕು ತಂಪು ಗಾಳಿ ಸೋಂಪು ಬೇಕು
ಕೂಡಲೀಗ ದುಂಬಿ ಬೇಕು ಮೈಯಿ ಮನಸಲಿ ಬೇಕು ತಣೀಬೇಕು 
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ಜೋಡಿ ಬೇಡೋ ಕಾಲವಮ್ಮಾ ತುಂಬಿ ಬಂದಾ ಪ್ರಾಯವಮ್ಮಾ 
ಹೆಣ್ಣು ಗಂಡ  ಗಂಡು ಹೆಣ್ಣ ಹುಡುಕಿ ಕೂಡೋ ಸಮಯಾವಮ್ಮಾ...
ತಾನ ತಂದಾನೋ ತಾನ ತಾನತಂದಾನೋ 
ತಾನ ತಂದಾನೋ ತಾನ ತಾನತಂದಾನೋ
--------------------------------------------------------------------------------------------------------------------------

ಭಕ್ತ ಕುಂಬಾರ (೧೯೭೪) - ಇದೆಯೇ ಕೊನೆಯ ಪಯಣ ಈ ಬಾಳಿಗೆ
ರಚನೆ: ಹುಣಸೂರು ಕೃಷ್ಣಮೂರ್ತಿ  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕ: ಪಿ. ಬಿ. ಶ್ರೀನಿವಾಸ್ ಮತ್ತು ಡಾ|| ರಾಜ 

ಪಿ.ಬಿ.ಎಸ್. : ಇದೆಯೇ ಕೊನೆಯ ಪಯಣ ಈ ಬಾಳಿಗೆ
                  ಇದೇ ಮಂಗಳ ಉಸಿರಳಿದ ಬೊಂಬೆಗೆ ಇದೇ ಇದೇ
                 ಜನಿಸಿ ಬಂದವರೆಲ್ಲಾ ಅಳಿಯಲೇ ಬೇಕು
                 ಮಸಣದಲಿ ಮಲಗಿ ಮುಗಿಯಲೇಬೇಕು
                 ಜಯಸಿ ಉಳಿದವರಂತೂ ಯಾರಯ್ಯಾರು ಇಲ್ಲ
                ಜನನ ಮರಣ ಚಕ್ರ ನಿಲ್ಲುವುದು ಇಲ್ಲಾ

ಡಾ|| ರಾಜ : ಯಾವ ಜನ್ಮದ ಪಾಪವೋ ಇದಕೇನೋ ಕಾರಣವೋ
                  ತಿಳಿಯದಾಯ್ತಾ ಕಟಕಟ ಇದರ ಮರ್ಮ
                  ಮನಸಿನಲಿ ನೀ ನೆಲೆಸಿ ಭಕ್ತಿಯೊಳ್ ಮೈ ಮರೆಸಿ
                  ಮರಣವನು ತಂದಿತ್ತೇ ಮಗುವಿಗಂದು
                  ಶಿಶು ಹತ್ಯೆಗೈದಿರುವಾ ತಾಪವನ್ನೆದೆಯೊಳಗೆ
                  ಶೂಲದಂತೆ ಇರಿಯುತಿದೆ ಸರತೇಜಾಕ್ಷಾ
                  ನೀ ಪ್ರೇರಣ ಇದಕೇ ನೀನೇ ಕಾರಣ ಇದಕೆ
                  ನೀನೇ ತಾರಕನೆಂದು ನಂಬಿ ಕುಳಿತೆ ವಿಠಲಾ

                   ಇಟ್ಟಂಗೆ ಇರುವೆನು ವಿಠಲಾ ಅಯ್ಯ ವಿಠಲಾ
                   ನೀ ಕೊಟಷ್ಟು ತಿಂದು ನೀ ಕರೆದಾಗ ಬರುವೇನು
                   ಇಟ್ಟಂಗೆ ಇರುವೆನು ವಿಠಲಾ ಅಯ್ಯ ವಿಠಲಾ
--------------------------------------------------------------------------------------------------------------------------

ಭಕ್ತ ಕುಂಬಾರ (೧೯೭೪) - ಶೋತೃ
ರಚನೆ: ಹುಣಸೂರು ಕೃಷ್ಣಮೂರ್ತಿ ಸಂಗೀತ ಮತ್ತು ಗಾಯನ : ಜಿ.ಕೆ.ವೆಂಕಟೇಶ

ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ
ಗುರು ಸಾಕ್ಷಾತ ಪರ ಬ್ರಹ್ಮ ತಸ್ಮೈ ಶ್ರೀ ಗುರವೇನಮಃ
--------------------------------------------------------------------------------------------------------------------------

1 comment:

  1. ಜೀವನವಿರುವ ವರೆಗೂ ಅಳಿಯದ ಹಾಡುಗಳು, ಅಂತ ಅದ್ಭುತ ಸಾಹಿತಿಗಳು ಮತ್ತೆ ಹುಟ್ಟಿ ಬರಲಿ.

    ReplyDelete