248. ಭಕ್ತ ಪ್ರಹ್ಲಾದ (1983)


ಭಕ್ತ ಪ್ರಲ್ಹಾದ ಚಿತ್ರದ ಹಾಡುಗಳು 
  1. ಪ್ರಿಯದಿಂ ಬಂದು 
  2. ನಾ ಹೇಗೆ ಬಣ್ಣಿಸಲೀ 
  3. ಕಮಲ ನಯನ 
  4. ಹರಿ ಹರಿ ಎನ್ನುತ ನೀ ಹಾಡು 
  5. ಹೇ... ಸರಸಿ ಜೋಡಭವ 
  6. ಸಿಗಿವೆಂ ಕ್ಷಣದಲಿ 
  7. ಲಾಲಿ ಸುಕುಮಾರ 
  8. ಎಲ್ ಎಲವೋ 
  9. ಗೋವಿಂದ ಗೋವಿಂದ 
  10. ನಮೋ ನಮೋ ನರಸಿಂಹ 
  11. ನಾರಾಯಣ ಹರಿ ನಾರಾಯಣ
ಭಕ್ತ ಪ್ರಹ್ಲಾದ (1983) - ಹರಿ ಹರಿ ಎನ್ನುತ ನೀ ಹಾಡು
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಪಿ.ಬಿ

ಶ್ರೀಹರಿ ಶ್ರೀಹರಿಹರಿಯುವ ನದಿಯು ಹರುಷದಲಿ ತನ್ನ ಶೃತಿಯನು ಸೇರಿಸಿ ಹಾಡುತಿರೆ
ಬೀಸುವ ಗಾಳಿಯು ಜೊತೆಯಾಗಿ ಧನಿಯನು ಕೂಡಿಸಿ ಹಾಡುತಿರೆ
ಪ್ರಕೃತಿಯೆ ನಿನ್ನೊಡನೊ೦ದಾಗಿ ಆ ಶ್ರೀಪತಿ ಧ್ಯಾನವ ಮಾಡುತಿರೆ
ಪ್ರಕೃತಿಯೆ ನಿನ್ನೊಡನೊ೦ದಾಗಿ ಆ ಶ್ರೀಪತಿ ಧ್ಯಾನವ ಮಾಡುತಿರೆ
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀನೋಡು
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀನೋಡು
ಬಣ್ಣಿಸಲಾಗದ ಆನ೦ದ ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ ನೀ ಕಾಣುವೆ ಆಗ ಓ ಕ೦ದ
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀನೋಡು

ಪ್ರೇಮದಿ ಕರೆದರೆ ಬಾ ಎ೦ದು ಎಲ್ಲಿದ್ದರೂ ಅವನು ಆಲಿಸುವ
ಅಮ್ಮನ ಕೂಗಿಗೆ ಓಗೊಡುವ ಹಸುಕ೦ದನ ಹಾಗೆ ಬಳಿಬರುವ
ನಿಜ ಭಕ್ತಿಗೆ ಅವನು ಸೋಲುವುದು ತನ್ನ ಭಕ್ತರನೇ ಕಾಪಾಡುವುದು
ಭಕ್ತಿಗೆ ಅವನು ಸೋಲುವುದು ತನ್ನ ಭಕ್ತರನೇ ಕಾಪಾಡುವುದು
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀನೋಡು
ಬಣ್ಣಿಸಲಾಗದ ಆನ೦ದ ನೀ ಕಾಣುವೆ ಆಗ ಓ ಕ೦ದ
ಬಣ್ಣಿಸಲಾಗದ ಆನ೦ದ ನೀ ಕಾಣುವೆ ಆಗ ಓ ಕ೦ದ
ಹರಿ ಹರಿ ಎನ್ನುತ ನೀ ಹಾಡು
ಹರಿನಾಮದ ಮಹಿಮೆಯ ನೀನೋಡು
ಹರಿನಾಮದ ಮಹಿಮೆಯ ನೀನೋಡು
-------------------------------------------------------------------------------------------------------------------------

ಭಕ್ತ ಪ್ರಹ್ಲಾದ (1983) - ಕಮಲ ನಯನ ಕಮಲ ವದನ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಪಿ.ಜಯಚಂದ್ರನ


ಕಮಲ ನಯನ ಕಮಲ ವದನ ಕಮಲಾ ನಯನ ಕಮಲ ವದನ
ಕಮಲಾರಮಣ ನಾರಾಯಣ    ಕಮಲಾರಮಣ ನಾರಾಯಣ
ಕಮಲ ನಯನ ಕಮಲ ವದನ

ಲೋಕದ ನಾಟಕಕೆ ನೀ ಸೂತ್ರಧಾರಿ
ನಿನ ಗುಣಗಾನ ಮಾಡುವ ನಾ ಪಾತ್ರಧಾರಿ
ನಾ ಬರಿಯ ವೀಣೆ ವೈಣಿಕನು ನೀನು
ನೀ ನುಡಿಸಿದ೦ತೆ ಹಾಡುವೆನು ನಾನು... ನಾನು

ಮುನಿಗಳ ಮನದಲಿ ಮನೆಮಾಡಿ  ನಿಜ ಭಕುತರ ಹೃದಯದಿ ನಲಿದಾಡಿ
ಮುನಿಗಳ ಮನದಲಿ ಮನೆಮಾಡಿ  ನಿಜ ಭಕುತರ ಹೃದಯದಿ ನಲಿದಾಡಿ
ಕರೆದರೆ ಬರುವ ಅಭಯವ ಕೊಡುವ ಕರೆದರೆ ಬರುವ ಅಭಯವ ಕೊಡುವ
ಶ್ರೀವತ್ಸನೆ ಕರುಣಾಳು ತ೦ದೆ
ಕಮಲ ನಯನ ಕಮಲ ವದನ  ಕಮಲಾ ನಯನ ಕಮಲ ವದನ
ದುಷ್ಟರನು ಶಿಷ್ಟರನು ತ೦ದವನು ನೀನೇ
ಅಳಿಸುವುದು ನಗಿಸುವುದು ಎಲ್ಲವೂ ನೀನೇ
ಭಕ್ತಿ ಕೊಡುವುದು ನೀನೇ ಮುಕ್ತಿ ಕೊಡುವುದು ನೀನೇ
ನಿನ್ನ ಮಹಿಮೆಯ ಶಕ್ತಿ ಬಲ್ಲವನು ನೀನೆ... ನೀನೇ
ಗರ್ವದಿ ಮದಿಸಿದ ದಾನವರು  ಮದವೇರುತ ಮೆರೆಯುತ ಗರ್ಜಿಸಲು
ಗರ್ವದಿ ಮದಿಸಿದ ದಾನವರು  ಮದವೇರುತ ಮೆರೆಯುತ ಗರ್ಜಿಸಲು
ದುರುಳರ ಅಳಿಸಿ ಜಯವನು ಗಳಿಸಿ  ದುರುಳರ ಅಳಿಸಿ ಜಯವನು ಗಳಿಸಿ
ಕಾಪಾಡುವ ಕರುಣಾಳು ನೀನೇ
ಕಮಲ ನಯನ ಕಮಲ ವದನ  ಕಮಲಾ ನಯನ ಕಮಲ ವದನ
ಕಮಲಾರಮಣ ನಾರಾಯಣ ಕಮಲಾರಮಣ ನಾರಾಯಣ
ಕಮಲ ನಯನ ಕಮಲ ವದನ
------------------------------------------------------------------------------------------------------------------------

ಭಕ್ತ ಪ್ರಹಲಾದ (1983) - ಪ್ರಿಯದಿಂ ಬಂದು ಚತುರ್ಮುಖಂ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ||ರಾಜಕುಮಾರ


ಪ್ರಿಯದಿಂ ಬಂದು ಚತುರ್ಮುಖಂ
ಪರಸುಗುಮ್ಮ ಮಕ್ಕಳಪ್ಯಂ ಮನಾಶ್ರಯ್ಸಿರ್ಕುಂ.....
ಪ್ರಿಯದಿಂ ಬಂದು ಚತುರ್ಮುಖಂ
ಪರಸುಗುಮ್ಮ ಮಕ್ಕಳಪ್ಯಂ ಮನಾಶ್ರಯ್ಸಿರ್ಕುಂ
ಘಳದೈತ್ಯ ದಾನಾವಗಣಂ ಪ್ರಖ್ಯಾತವೆಮ್ಮನ್ವಯಂ....
ಮಯಮಿಂ ನಿರ್ಮಿತಮಪ್ಪ ಈ ಶೋಣಿತಪುರಕ್ಕಾಣು ರಾಜನಾಗಿರ್ದೊಡುಂ
ಬಯಸಿರ್ಪೇ ........
ದುಜಸಂಧಿ ಬಂದಿತ ಜಯಶ್ರೀಗೋತ್ರಮಂ ಚೈತ್ರಮಂ.......ಆ
-----------------------------------------------------------------------------------------------------------------------

ಭಕ್ತ ಪ್ರಹ್ಲಾದ (1983) - ಸಿಗಿವೇಂ ಕ್ಷಣದಲಿ ನಿನ್ನ ನಾ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ||ರಾಜಕುಮಾರ


ಏ ಹರಿ.....
ಸಿಗಿವೇಂ ಕ್ಷಣದಲಿ ನಿನ್ನ ನಾ ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾ  ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೇಂ ಕ್ಷಣದಲಿ ನಿನ್ನ ನಾ ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾ

ಆ ಹಾಲ ಕಡಲ ಕ್ಷಣದಿ ಕುಡಿಯುತ ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಆ ಹಾಲ ಕಡಲ ಕ್ಷಣದಿ ಕುಡಿಯುತ ಆ ಶೇಷನೊಡಲ ಸಿಗಿದು ಬಿಸುಡುತ
ಆ ಚಕ್ರ ಕಡಿದು ಮುರಿದು ಎಸೆಯುತ ಆ ನಿನ್ನ ಗದೆ ಪುಡಿ ಪುಡಿ ಮಾಡಿ
ಶಿವನು ಹೆದರುತಿರೆ ಬ್ರಹ್ಮ ಬೆವರುತಿರೆ ಸುರರು ನಡುಗುತಿರೆ
ನರರು ಅಳುತಲಿರೆ ಕಣ್ಣಲಿ, ರೋಷದ, ಬೆಂಕಿಯ, ಚೆಲ್ಲಿ ಪಡಾ ಪಡಾ.....
ನಾನೀಗ ಸಿಗಿವೇಂ ಕ್ಷಣದಲಿ ನಿನ್ನ ನಾ ಎಲ್ಲಿ ಹೋದರೇನು ನಿನ್ನ ಉಳಿಸೆನು
ಸಿಗಿವೇಂ ಕ್ಷಣದಲಿ ನಿನ್ನ ನಾ
ಆಕಾಶ ಹೆದರಿ ಹೆದರಿ ನಡುಗಿರೆ ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ ದೇವೇಂದ್ರನೆದೆಯನು ಸೀಳಿ
ಆಕಾಶ ಹೆದರಿ ಹೆದರಿ ನಡುಗಿರೆ ಕಾರ್ಮೋಡ ಭಯದಿ ಬೆದರಿ ಚದುರಿರೆ
ಈ ಭೂಮಿ ಅಳುತ ಶರಣು ಎನುತಿರೆ ದೇವೇಂದ್ರನೆದೆಯನು ಸೀಳಿ
ಸ್ವರ್ಗ ನರಕಗಳ ಎಲ್ಲ ಲೋಕಗಳ ನನ್ನ ಕಾಲಡಿಯಲಿಟ್ಟು ಆಳುತಿರೆ
ಎದುರಿಸಿ ನಿಲ್ಲುವ ವೀರರು ಯಾರು ಬಿಡು ಬಿಡು...... 
ನಾನೀಗ ಸಿಗಿವೇಂ ಕ್ಷಣದಲಿ ನಿನ್ನ ನಾ ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ ಅದೋನ್ಮತ್ತ ದುರುಳ ದುಷ್ಟ ಧೂರ್ತನೆ
ಸಿಗಿವೇಂ ಕ್ಷಣದಲಿ ನಿನ್ನ ನಾ
----------------------------------------------------------------------------------------------------------------------

ಭಕ್ತ ಪ್ರಹಲಾದ (1983) - ಎಲೆ ಎಲೆವೋ ಕಡು ಮುರ್ಖ ನುಡಿಯದಿರು
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ||ರಾಜಕುಮಾರ


ರಾಜ : ಎಲೆ ಎಲೆವೋ ಕಡು ಮುರ್ಖ ನುಡಿಯದಿರು ಮತ್ತೊಮ್ಮೆ
           ಸೀಳುವೆನು ಹರಿಯೆನುವ ನಾಲಿಗೆಯ ನಾ.......ಕಡುವೈರಿ ನಮಗವನು.....
            ಕಡುವೈರಿ ನಮಗವನು ಮೃಡನಾಣೆ ಹೇಳುವೆನು
            ಬಡಿದು..  ಕೊಲ್ಲುವೆ..  ಎಲ್ಲಿ? ತೋರು ಅವನಾ....ಆಆಆ
ಲೋಹಿತ : ಆಕಾಶವೇ ವದನ ಸೂರ್ಯ ಚಂದ್ರರೇ ನಯನ..
                ಗ್ರಹ ತಾರೆಗಳೆ ಅವನ ಆಭರಣವೂ
                ಸಿಡಿಲು ಗುಡುಗೇ ನಗುವು ಬ್ರಂಹಾಂಡವೇ ತನುವು
                 ಪಾತಾಳದಲ್ಲಿಹುದು ಹರಿ ಚರಣವು..
ರಾಜ : ಆಹಹ ಪಾತಳದಲ್ಲಿ ಹರಿ ಚರಣ....
          ವಿಶ್ವವನೆ ಆಳುತಿಹ ಈ ದಾನವೇಶ್ವರನೆದುರು
          ವಿಶ್ವರೂಪಿಯು ಹರಿಯು ಎನ್ನುವೆಯ ಮೂಢಾ..ಆಆಆಆ
          ದಿಟ್ಟತನವಿದ್ದರೆ ಎದುರಿಸಲಿ ನನ್ನನ್ನು ಮೆಟ್ಟಿ ತುಳಿಯುವೆ ಅವನ ಶಿರವನಾ....
ಲೋಹಿತ : ಭಕ್ತಿ ನಂಬಿಹೆ ನಾನು ಶಕ್ತಿ ನಂಬಿಹೆ ನೀನು
                ಪ್ರೇಮದಲಿ ನಾ ಕರೆವೆ ದ್ವೇಷದಲಿ ನೀ ಕರೆವೆ
                ಇಬ್ಬರಲು ಆ ಹರಿಯೆ ತುಂಬಿರುವನು  ಕೂಗಿದರೆ ನನ್ನಾಣೆ ಬಾರದಿಹನು.....
ರಾಜ : ಆಹಹಹ ಹಾ.. ಗೆಜ್ಜೆ ಸಪ್ಪಳ ಕೇಳಿ ನಡುಗಿ ಓಡಿದಾ ಹೇಡಿ ಬಾ..  ಎಂದು ಕೂಗಿದರೆ ಬರುವನೇನೊ.....
           ಗೆಜ್ಜೆ ಕಟ್ಟಿ ಕುಣಿವ ಮೋಹಿನಿಯು ಆ ಹರಿಯು ಗಂಡೆದೆಯ ಗುಂಡಿಗೆಯು ಅವನಿಗುಂಟೇನೊ?         
           ಗಂಡೆದೆಯ ಗುಂಡಿಗೆಯು ಅವನಿಗುಂಟೇನೊ?  ಅವನಿಗುಂಟೇನೊ?
ಲೋಹಿತ : ಹರಿನಿಂದೆ ತರವಲ್ಲಾ.. ಹರಿವೈರ ಸರಿಯಲ್ಲ  ಹರಿಗಿಂತ ಅಧಿಕರು ಇನ್ನ್ಯಾರು ಇಲ್ಲ
                ಹರಿಯ ಬಿಟ್ಟರೇ ನಮಗೆ ಮುಕ್ತಿ ಇಲ್ಲ  ಮುಕ್ತಿ ಇಲ್ಲ  ಮುಕ್ತಿ ಇಲ್ಲ ( ಸಾಕು )
-------------------------------------------------------------------------------------------------------------------------

ಭಕ್ತ ಪ್ರಹಲಾದ (1983) - ಲಾಲಿ ಲಾಲಿ ಸುಕುಮಾರ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ||ರಾಜಕುಮಾರ, ವಾಣಿಜಯರಾಂ


ಹೆಣ್ಣು :  ಆ.... ಆ ಆ ಆ ಆ ಆ  ಓ ಓ ಓ ಒ ಒ ಒ ಒ ಓ ಓ ಓ
         ಉಂ ಉಂ ಊಂ ಉಂ ಊಂ ಊಂ ಊಂ
         ಉಂ ಉಂ ಊಂ ಉಂ ಊಂ ಊಂ ಊಂ
         ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
         ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
         ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ
         ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೇ ಆಧಾರ
         ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ

         ಹತ್ತು ಜನುಮಗಳ ಪುಣ್ಯದ ಫಲವೋ ಮುತ್ತಂತೆ ಬಂದೆ..
         ಹತ್ತು ಜನುಮಗಳ ಪುಣ್ಯದ ಫಲವೋ ಮುತ್ತಂತೆ ಬಂದೆ
         ಹೆತ್ತ ತಾಯಿಗೆ ಎಂದೂ ಕಾಣದ ಆನಂದ ತಂದೆ
         ಹೆತ್ತ ತಾಯಿಗೆ ಎಂದೂ ಕಾಣದ ಆನಂದ ತಂದೆ
         ಆನಂದ ತಂದೆ ಆನಂದ ತಂದೆ
        ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
        ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ

ಗಂಡು : ಮೂರು ಲೋಕವು ನಿನ್ನ ಪಾದಗಳ ಕೆಳಗೆ
            ಬಿದ್ದಿರೇ.. ಎ ಎ ಎ ಏ ಎ ಎ ಎ ಏ ಎ ಎ ಏ ಏ
           ಆ ಆ ಆ ಆ ಆ ಆ ಆ ಆ ಆ
          ಯಕ್ಷ ರಾಕ್ಷಸ ಕಿನ್ನರರೆಲ್ಲಾ ಗಡಗಡ ನಡುಗಿರೇ...
          ಇಂದ್ರ, ಅಗ್ನಿ, ವಾಯು, ವರುಣ ನಿನ್ನ ಸೇವೆಯ ಮಾಡಿರೇ...
          ದರ್ಪದಿಂದ ದಾನವ ರಾಜ್ಯವ ಕಂದಾ ನೀನಾಳು
          ಕಂದಾ ನೀನಾಳು
ಹೆಣ್ಣು : ಹರನ ಕರುಣೆ ಎಂದು ನಿನ್ನ ರಕ್ಷಿಸಲಿ ಮಗುವೇ..
          ಹರನ ಕರುಣೆ ಎಂದು ನಿನ್ನ ರಕ್ಷಿಸಲಿ ಮಗುವೇ..
ಗಂಡು : ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ
            ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ
            ಮರೆಯದಿರು ಶಿಶುವೇ
ಹೆಣ್ಣು :   ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ
            ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ

ಗಂಡು : ಚೆಲುವೆ ನೀನು ನನ್ನ ಬಾಳಿಗೆ ಸೌಭಾಗ್ಯ ತಂದೆ
            ಚೆಲುವೆ ನೀನು ನನ್ನ ಬಾಳಿಗೆ  ಸೌಭಾಗ್ಯ ತಂದೆ
            ಮಡದಿ ನಿನ್ನ ಕೈಯ ಹಿಡಿದು ಸಂತೋಷ ಕಂಡೆ
ಹೆಣ್ಣು :  ನಿಮ್ಮ ಪ್ರೇಮದ ನುಡಿಗೆ ಸ್ವಾಮಿ ಎಂದೋ ನಾ ಸೋತೆ
           ನಿಮ್ಮ ಪ್ರೀತಿಯ ಕಾಣಿಕೆ ಕಂಡು ಇಂದು ಬೆರಗಾದೆ
            ಇಂದು ಬೆರಗಾದೆ
ಗಂಡು : ಬಾರೇ ಬಾರೇ ಸುಕುಮಾರಿ ಬಾರೇ ನನ್ನ ಬಂಗಾರಿ
            ಬಾರೇ ಬಾರೇ ಸುಕುಮಾರಿ ಬಾರೇ ನನ್ನ ಬಂಗಾರಿ
            ಆ.... ಆ ಆ ಆ ಆ ಆ  ಓ ಓ ಓ ಒ ಒ ಒ ಒ ಓ ಓ ಓ
           ಉಂ ಉಂ ಊಂ ಉಂ ಊಂ ಊಂ ಊಂ
          ಉಂ ಉಂ ಊಂ ಉಂ ಊಂ ಊಂ ಊಂ
--------------------------------------------------------------------------------------------------------------------------

ಭಕ್ತ ಪ್ರಹಲಾದ (1983) - ಗೋವಿಂದ ಗೋವಿಂದ ನಾರಾಯಣ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಮಾ ||ಲೋಹಿತ್ 


ಗೋವಿಂದ ಗೋವಿಂದ ನಾರಾಯಣ
ಗೋವಿಂದ ಗೋವಿಂದ ನಾರಾಯಣ 
ಹರಿ ಗೋವಿಂದ ಗೋವಿಂದ ನಾರಾಯಣ 
ಹರಿ ಗೋವಿಂದ ಗೋವಿಂದ ನಾರಾಯಣ 
ಹರಿ ಗೋವಿಂದ ಗೋವಿಂದ ನಾರಾಯಣ 
ಗೋವಿಂದ ಗೋವಿಂದ ನಾರಾಯಣ 
ಹರಿ ಗೋವಿಂದ ಗೋವಿಂದ ನಾರಾಯಣ
ಹರಿ ಗೋವಿಂದ ಗೋವಿಂದ ನಾರಾಯಣ

ಭಕ್ತಿಗೆ ಸೋಪಾನ ಹರಿ ನಾಮವು
ಭಕ್ತಿಗೆ ಸೋಪಾನ ಹರಿ ನಾಮವು
ನಿಜ ಮುಕ್ತಿಗೆ ಸಾಧನೆ ಹರಿ ನಾಮವು
ಭಕ್ತಿಗೆ ಸೋಪಾನ ಹರಿ ನಾಮವು
ನಿಜ ಮುಕ್ತಿಗೆ ಸಾಧನೆ ಹರಿ ನಾಮವು
ಆನಂದ ಕೊಡುವಂಥ ಶುಭ ನಾಮವು
ಆನಂದ ಕೊಡುವಂಥ ಶುಭ ನಾಮವು
ಹರಿ ಎಂದಾಗ ನಿಂತಲ್ಲೇ ಕೈವಲ್ಯವೂ
ಹರಿ ಎಂದಾಗ ನಿಂತಲ್ಲೇ ಕೈವಲ್ಯವೂ
ಗೋವಿಂದ ಗೋವಿಂದ ನಾರಾಯಣ
ಹರಿ ಗೋವಿಂದ ಗೋವಿಂದ ನಾರಾಯಣ
ಗೋವಿಂದ ಗೋವಿಂದ ನಾರಾಯಣ
ಹರಿ ಗೋವಿಂದ ಗೋವಿಂದ ನಾರಾಯಣ ಹರಿ ಗೋವಿಂದ ಗೋವಿಂದ ನಾರಾಯಣ
ಹರಿ ಗೋವಿಂದ ಗೋವಿಂದ ನಾರಾಯಣ ಹರಿ ಗೋವಿಂದ ಗೋವಿಂದ ನಾರಾಯಣ
ಹರಿ ಗೋವಿಂದ ಗೋವಿಂದ ನಾರಾಯಣ ಹರಿ ಗೋವಿಂದ ಗೋವಿಂದ ನಾರಾಯಣ
ಹರಿ ಗೋವಿಂದ ಗೋವಿಂದ ನಾರಾಯಣ ಹರಿ ಗೋವಿಂದ ಗೋವಿಂದ ನಾರಾಯಣ (ನಿಲ್ಲಿಸಿರೋ..)
ಹರಿ ಗೋವಿಂದ ಗೋವಿಂದ ನಾರಾಯಣ
--------------------------------------------------------------------------------------------------------------------------

ಭಕ್ತ ಪ್ರಹಲಾದ (1983) - ನಾ ಹೇಗೆ ಬಣ್ಣಿಸಲಿ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಜಾನಕೀ 

ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ ದಾನವೇಂದ್ರ... ನಾ ಹೇಗೆ ಬಣ್ಣಿಸಲಿ
ನಿನ್ನ ಲಕ್ಷಣವ, ನಿನ್ನ ಸಾಹಸವ..  ನಿನ್ನ ಲಕ್ಷಣವ, ನಿನ್ನ ಸಾಹಸವ 
ನಿನ್ನ ಲಕ್ಷಣವ, ನಿನ್ನ ಸಾಹಸವ ಶಿವನೇ ಕಂಡು ಬೆರಗಾಗಿ ನಿಂತಿರಲು 
ನಾ ಹೇಗೆ ಬಣ್ಣಿಸಲಿ 
  
ಕಶ್ಯಪ ಬ್ರಹ್ಮನ ಸುಕುಮಾರ... ಆಆಆ... ಆಆಆ...  ಆಆಆಆಆಆ...
ಕಶ್ಯಪ ಬ್ರಹ್ಮನ ಸುಕುಮಾರ ಸಾಗರದಂತೇ ಗಂಭೀರ 
ಸಾಗರದಂತೇ ಗಂಭೀರ ಸುಗುಣ ಸಾರ... ಸದ್ವಿಚಾರ...  
ಸುಗುಣ ಸಾರ ಸದ್ವಿಚಾರ ರಣ ವಿಹಾರ ವೀರ ಶೂರ ಮಾರ   
ನಾ ಹೇಗೆ ಬಣ್ಣಿಸಲಿ 

ಸಾವಿರ ಹೆಡೆಗಳ ಶೇಷನಿಗೂ ಆಆಆ... ಆಆಆ...  ಆಆಆಆಆಆ...
ಸಾವಿರ ಹೆಡೆಗಳ ಶೇಷನಿಗೂ ನಾಲಿಗೆ ಸಾಲದು ಕೊಂಡಾಡಲು 
ಸಾವಿರ ಹೆಡೆಗಳ ಶೇಷನಿಗೂ ನಾಲಿಗೆ ಸಾಲದು ಕೊಂಡಾಡಲು 
ನಿನಗೆ ಸಾಟಿ ಯಾರು ಇಲ್ಲಾ...  ನಿನಗೆ ಸಾಟಿ ಯಾರು ಇಲ್ಲಾ...  
ಎದುರು ನಿಂತು ಗೆಲ್ಲುವರಿಲ್ಲಾ... ಎದುರು ನಿಂತು ಗೆಲ್ಲುವರಿಲ್ಲಾ 
ಕೀರ್ತಿ ಲಕ್ಷ್ಮಿ...  ವಿಜಯ ಲಕ್ಷ್ಮಿ...   
ಕೀರ್ತಿ ಲಕ್ಷ್ಮಿ...  ವಿಜಯ ಲಕ್ಷ್ಮಿ... ದಿನವೂ ನಿನ್ನ ಗುಣಗಾನ ಮಾಡುತೀರೆ 
ನಾ ಹೇಗೆ ಬಣ್ಣಿಸಲಿ 
ಸಾಸ ನಿಸ ದನಿರಪದಮಪರ ಮಪಾ ದಪಮಗ ದಮಗ ಗಮಪ ನಿದಪ ಸಾನಿ
ಪಸನಿಸ ನಿದಾಗನಿ   ಗನಿಪದಮಪ ಪಪನಿಸ ನಿಸದನಿ  ದನಿದ ಪ ಸನಿ 
ನಾ ಹೇಗೆ ಬಣ್ಣಿಸಲಿ ದಾನವೇಂದ್ರ...
ನಾ ಹೇಗೆ ಬಣ್ಣಿಸಲಿ ದಾನವೇಂದ್ರ... ನಾ ಹೇಗೆ ಬಣ್ಣಿಸಲಿ
-------------------------------------------------------------------------------------------------------------------------

ಭಕ್ತ ಪ್ರಹಲಾದ (1983) - ಗೋವಿಂದ ಗೋವಿಂದ ನಾರಾಯಣ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ ||ರಾಜ  

ಹೇ ಸರಸಿಜೋದ್ಭವ್ ಸರಸಿಜಾಸನ ಸರಸತಿಯ ಪ್ರಿಯಕರನೇ  ಬ್ರಹ್ಮನೇ...   
ಸ್ಮರಣೆ ಮಾತ್ರದಿ ಬಂದು ಸಲಹುವ  ಹಂಸ ವಾಹನನೇ....  
ಪರಮ ಕರುಣಾಮೂರ್ತಿ ನಿನ್ನೀ ಚರಣಕಮಲದಿ ಶಿರವ ಇಡುತಲಿ....  
ಪರಮ ಕರುಣಾಮೂರ್ತಿ ನಿನ್ನೀ ಚರಣಕಮಲದಿ ಶಿರವ ಇಡುತಲಿ 
ವರವನೊಂದನು  ಬೇಡುವೇನು....  ವರವನೊಂದನು ಬೇಡುವೇನು
ಕೃಪೆ ಮಾಡಿ ಹರಸೆನ್ನಾ...ಆಆಆ...  ಕೃಪೆ ಮಾಡಿ ಹರಸೆನ್ನಾ... ಆಆಆ...
ಓ.... ಬೃಹ್ಮದೇವಾ...  ಓ.... ಬೃಹ್ಮದೇವಾ...
-------------------------------------------------------------------------------------------------------------------------

ಭಕ್ತ ಪ್ರಹ್ಲಾದ (1983) - ನಮೋ ನಮೋ ನರಸಿಂಹ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಲೋಹಿತ್, ಕೋರಸ್ 


ಗಂಡು : ಶ್ರೀ ವತ್ಸ ಶ್ರೀಪತಿಯೇ ಭಕ್ತವತ್ಸಲ ಹರಿಯೇ ನಾರಾಯಣ ವಿಷ್ಣು ಶೇಷಶಯನಾ
           ನಿನ್ನ ಮಹಿಮೆಯ ಪಾಡಿ ಕೊಂಡಾಡುವ ಶಕ್ತಿ ಬಾಲಕನಿಗೇ ಎಲ್ಲುಂಟು ನೀಲವರ್ಣ
           ಘೋರ ರೂಪವಾ ಕೊನೆ ಮಾಡಿ ಆ ನಿನ್ನ ದಿವ್ಯ ಮಂಗಳ ರೂಪ ತೋರಿ ಹರಸ ಎನ್ನಾ... ಹರಸ ಎನ್ನಾ
           ನಮೋ ನಮೋ ನರಸಿಂಹ                ಕೋರಸ್ : ನಮೋ ನಮೋ ನರಸಿಂಹ
ಗಂಡು : ಕರುಣೇ ತೋರೋ ನರಸಿಂಹ          ಕೋರಸ್ : ಕರುಣೇ ತೋರೋ ನರಸಿಂಹ
ಗಂಡು : ಅಭಯ ನೀಡೋ ನರಸಿಂಹ            ಕೋರಸ್ : ಅಭಯ ನೀಡೋ ನರಸಿಂಹ 
ಗಂಡು : ಶಾಂತನಾಗೋ ನರಸಿಂಹ             ಕೋರಸ್ : ಶಾಂತನಾಗೋ ನರಸಿಂಹ
ಎಲ್ಲರು : ನಮೋ ನಮೋ ನರಸಿಂಹ ಕರುಣೇ ತೋರೋ ನರಸಿಂಹ  ನಮೋ ನಮೋ ನರಸಿಂಹ

ಗಂಡು : ನಿನ್ನಾ ಎದುರಿಸಿ ನಿಲ್ಲುವರೂ ಉಂಟೇ ನಿನ್ನ ಮಹಿಮೆಯ ಅರಿತವರುಂಟೇ
ಕೋರಸ್ : ನಿನ್ನಾ ಎದುರಿಸಿ ನಿಲ್ಲುವರೂ ಉಂಟೇ ನಿನ್ನ ಮಹಿಮೆಯ ಅರಿತವರುಂಟೇ
ಗಂಡು : ನಿನ್ನಾ ರೋಷವಾ ಭೀಕರ ರೂಪವ
ಕೋರಸ್ : ನಿನ್ನಾ ರೋಷವಾ ಭೀಕರ ರೂಪವ
ಗಂಡು : ನೋಡುವ ಸಾಹಸ ನನ್ನಲೂ ಉಂಟೇ
ಕೋರಸ್ : ನೋಡುವ ಸಾಹಸ ನಮ್ಮಲಿ ಉಂಟೇ
ಎಲ್ಲರು : ನಮೋ ನಮೋ ನರಸಿಂಹ ಕರುಣೇ ತೋರೋ ನರಸಿಂಹ  ನಮೋ ನಮೋ ನರಸಿಂಹ
            ನಮೋ ನಮೋ ನರಸಿಂಹ
-------------------------------------------------------------------------------------------------------------------------

ಭಕ್ತ ಪ್ರಹ್ಲಾದ (1983) - ನಾರಾಯಣ ಹರಿ ನಾರಾಯಣ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಲೋಹಿತ್, ಕೋರಸ್ 


ಶ್ರೀ ಹರಿ.. ಶ್ರೀ ಹರಿ... ಶ್ರೀ ಹರಿ..
ಹರಿ ಹರಿ ಎಂದರೇ ಹಸಿವೇ ಇಲ್ಲಾ (ಆಆಆಅಆಆಆಅ)
ಶ್ರೀಪತಿ ಎಂದರೇ ಚಿಂತೆಯೂ ಇಲ್ಲಾ (ಆಆಆಅಆಆಆಅ)
ಮಾಧವನೆಂದರೇ ವೇದನೇ ಇಲ್ಲಾ (ಆಆಆಅಆಆಆಅ)
ನಂಬಿದ ಜೀವಿಗೇ ಭಯವೇ ಇಲ್ಲಾ (ಆಆಆಅಆಆಆಅ)
ನಾರಾಯಣ ಹರಿ ನಾರಾಯಣ (ನಾರಾಯಣ ಹರಿ ನಾರಾಯಣ )
ನಾರಾಯಣ ಹರಿ ನಾರಾಯಣ (ನಾರಾಯಣ ಹರಿ ನಾರಾಯಣ )
ನಾರಾಯಣ ಹರಿ ನಾರಾಯಣ (ನಾರಾಯಣ ಹರಿ ನಾರಾಯಣ )

ನಿನ್ನಾ ಭಕುತರು ಕೆಡುವುದುಂಟೇ ಬೆಂಕಿಯ ಜ್ವಾಲೇ ಸುಡುವುದುಂಟೇ
ನಿನ್ನಾ ಭಕುತರು ಕೆಡುವುದುಂಟೇ ಬೆಂಕಿಯ ಜ್ವಾಲೇ ಸುಡುವುದುಂಟೇ
ಹರಿ ಹರಿ ಎನ್ನುವಾ ಜೀವಿಯ ವರೆಗೇ
ಹರಿ ಹರಿ ಎನ್ನುವಾ ಜೀವಿಯ ವರೆಗೇ
ಯಮನ ಪಾಶ ಬರುವುದುಂಟೇ..
ಯಮನ ಪಾಶ ಬರುವುದುಂಟೇ..
ನಾರಾಯಣ ಹರಿ ನಾರಾಯಣ ನಾರಾಯಣ ಹರಿ ನಾರಾಯಣ
ನಾರಾಯಣ ಹರಿ ನಾರಾಯಣ ನಾರಾಯಣ ಹರಿ ನಾರಾಯಣ

ನಾರಾಯಣ ಹರಿ ನಾರಾಯಣ ನಾರಾಯಣ ಹರಿ ನಾರಾಯಣ
ಪಾವನ ಚರಣ ಪನ್ನಗ ಶಯನ
ಪಾವನ ಚರಣ ಪನ್ನಗ ಶಯನ ಕಮಲಾರಮಣ ನಾರಾಯಣ.. ಆಆಆ 
ಕಮಲಾರಮಣ ನಾರಾಯಣ
ನಾರಾಯಣ ಹರಿ ನಾರಾಯಣ

ಎಲ್ಲವೂ ನೀನೇ ಎಲ್ಲಡೇ ನೀನೇ 
ಎಲ್ಲವೂ ನೀನೇ ಎಲ್ಲಡೇ ನೀನೇ ನೀನಿಲ್ಲದಿರುವಾ ತಾಣವ ಕಾಣೇ
ನೀನಿಲ್ಲದಿರುವಾ ತಾಣವ ಕಾಣೇ ಆದಿಯೂ ನೀನೇ ಅಂತ್ಯವೂ ನೀನೇ
ಆದಿಯೂ ನೀನೇ ಅಂತ್ಯವೂ ನೀನೇ ಆರ್ತರ ಪೊರೆವಾ ಅನಂತ ನೀನೇ 
ಆರ್ತರ ಪೊರೆವಾ ಅನಂತ ನೀನೇ 
ನಾರಾಯಣ ಹರಿ ನಾರಾಯಣ ನಾರಾಯಣ ಹರಿ ನಾರಾಯಣ
ನಾರಾಯಣ ಹರಿ ನಾರಾಯಣ

ಆನೆಯ ಕೂಗಲೂ ಬಂದವ ನೀನೂ ಬಾಲಕ ನಾನೀ ಮರೆಯುವೇ ಏನೂ
ಆನೆಯ ಕೂಗಲೂ ಬಂದವ ನೀನೂ ಬಾಲಕ ನಾನೀ ಮರೆಯುವೇ ಏನೂ
ಸಾವಿಗೇ ಅಂಜುವನೆನೂ
ಸಾವಿಗೇ ಅಂಜುವನೆನೂ ಕರೆದುಕೋ ಹರಿಯೇ ನನ್ನ ನೀನೂ
ನಾರಾಯಣ ಹರಿ ನಾರಾಯಣ ನಾರಾಯಣ ಹರಿ ನಾರಾಯಣ
ನಾರಾಯಣ ಹರಿ ನಾರಾಯಣ

ಹಾವನೂ ಹಿಡಿದು ಹಾಸಿಗೆಯಂದೇ ಗರುಡನು ಕರೆದೂ ವಾಹನವಂತೇ
ಹಾವನೂ ಹಿಡಿದು ಹಾಸಿಗೆಯಂದೇ ಗರುಡನು ಕರೆದೂ ವಾಹನವಂತೇ
ನಿನ್ನಾ ಲೀಲೆಯಾ ಅರಿತವರಿಲ್ಲಾ
ನಿನ್ನಾ ಲೀಲೆಯಾ ಅರಿತವರಿಲ್ಲಾ ನಂಬಿದ ಜನರಿಗೇ ಭಯವೇ ಇಲ್ಲಾ
ನಾರಾಯಣ ಹರಿ ನಾರಾಯಣ ನಾರಾಯಣ ಹರಿ ನಾರಾಯಣ
ನಾರಾಯಣ ಹರಿ ನಾರಾಯಣ ನಾರಾಯಣ ಹರಿ ನಾರಾಯಣ
-------------------------------------------------------------------------------------------------------------------------

2 comments: