303. ಮುಳ್ಳಿನ ಗುಲಾಬಿ (1982)

ಮುಳ್ಳಿನ ಗುಲಾಬಿ ಚಿತ್ರದ ಹಾಡುಗಳು 
  1. ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
  2. ಈ ಗುಲಾಬಿ ಹೂವೂ ನಿನಗಾಗಿ (ಎಸ್.ಜಾನಕೀ) 
  3. ಮುಳ್ಳೇ ಇಲ್ಲದ ಗುಲಾಬಿ ಹೂವುಗಳೂ ನಾವೆಲ್ಲಾ 
  4. ಯಾರು ಯಾರಿಗೇ ಮದುವೇ 
  5. ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು 
ಮುಳ್ಳಿನ ಗುಲಾಬಿ (1982) - ಈ ಗುಲಾಬಿಯು ನಿನಗಾಗಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಆಆಆಅ.... ಆಆಆಆ... ಆಆಆಅ.. ಆಆಆ...
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗೇ  ಕೇಳೇ ಓ ರತೀ
ನಿನಗಾಗೇ ಕೇಳೇ ಓ ರತೀ

ನನ್ನೀ ಕಣ್ಣಲಿ ಕಾತರವೇನೋ ನಿನ್ನನು ಕಾಣುವ ಆತುರವೇನು... ಆಆಆಅ...
ನನ್ನೀ ಕಣ್ಣಲಿ ಕಾತರವೇನೋ ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು ಜೀವದ ಜೀವವು ಪ್ರಿಯತಮೆ ನೀನು
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗೇ  ಕೇಳೇ ಓ ರತೀ...  ಆಆಆ...
ನಿನಗಾಗೇ ಕೇಳೇ ಓ ರತೀ

ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು ... ಆಆಆ... 
ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ
ಕಾಣದೆ ಹೋದರೆ ಅರೆಕ್ಷಣ ನಿನ್ನ ಮರುಕ್ಷಣ ಪ್ರಿಯತಮೆ ನನ್ನ ಸಾವು
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ಆಆಆ... ನಿನಗಾಗೇ  ಕೇಳೇ ಓ ರತೀ... ಆಆಆ
ನಿನಗಾಗೇ ಕೇಳೇ ಓ ರತೀ
--------------------------------------------------------------------------------------------------------------------------

ಮುಳ್ಳಿನ ಗುಲಾಬಿ (1982) - ಈ ಗುಲಾಬಿಯು ನಿನಗಾಗಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಜಾನಕೀ 

ಆಆಆ... ಆಆಆ...
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ...  ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನನ್ನೀ ಕಣ್ಣಲಿ ಕಾತರವೇನೋ ನಿನ್ನನು ಕಾಣುವ ಆತುರವೇನು... ಆಆಆಅ...
ನನ್ನೀ ಕಣ್ಣಲಿ ಕಾತರವೇನೋ ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು ಜೀವದ ಜೀವವು ಪ್ರಿಯತಮೆ ನೀನು
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು... ಆಆಆಆ...
ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ
ಕಾಣದೆ ಹೋದರೆ ಅರೆಕ್ಷಣ ನಿನ್ನ ಮರುಕ್ಷಣ ಪ್ರಿಯತಮೆ ನನ್ನ ಸಾವು
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ... ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ
--------------------------------------------------------------------------------------------------------------------------

ಮುಳ್ಳಿನ ಗುಲಾಬಿ (1982) - ಮುಳ್ಳೇ ಇಲ್ಲದ ಗುಲಾಬಿ ಹೂವುಗಳೂ ನಾವೆಲ್ಲಾ 
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ, ಎಸ್.ಜಾನಕೀ, ರಮೇಶ, ಸುಲೋಚನಾ 

ಮಗು : ಮುಳ್ಳೇ ಇಲ್ಲದ ಗುಲಾಬಿ ಹೂವುಗಳು ನಾವೆಲ್ಲಾ ಪ್ರೇಮದ ಪರಿಮಳ ತುಂಬಿದೆ ನಮ್ಮ ಒಡಲೆಲ್ಲಾ
ಗಂಡು : ಮುಳ್ಳೇ ಇಲ್ಲದ ಗುಲಾಬಿ ಹೂವುಗಳು ನಾವೆಲ್ಲಾ ಪ್ರೇಮದ ಪರಿಮಳ ತುಂಬಿದೆ ನಮ್ಮ ಒಡಲೆಲ್ಲಾ
ಹೆಣ್ಣು : ಜೇನಂತೇ ಮನಸೆಲ್ಲಾ ಮುತ್ತಂತೇ ಮಾತೆಲ್ಲಾ
          ಮುಳ್ಳೇ ಇಲ್ಲದ ಗುಲಾಬಿ ಹೂವುಗಳು ನಾವೆಲ್ಲಾ
ಗಂಡು : ಪ್ರೇಮದ ಪರಿಮಳ ತುಂಬಿದೆ ನಮ್ಮ ಒಡಲೆಲ್ಲಾ

ಗಂಡು : ಪ್ರೀತಿಯೆಂಬ ತಂಗಾಳಿಯೇ ಉಸಿರಾಗಿ
ಹೆಣ್ಣು : ಸ್ನೇಹ ತಂದ ಸಂತೋಷವೇ ಬೆಳಕಾಗಿ
ಗಂಡು : ಆಆಆ.... ಪ್ರೀತಿಯೆಂಬ ತಂಗಾಳಿಯೇ ಉಸಿರಾಗಿ
ಹೆಣ್ಣು : ಓಓಓ ... ಸ್ನೇಹ ತಂದ ಸಂತೋಷವೇ ಬೆಳಕಾಗಿ
ಗಂಡು : ಸಡಗರದಿ ನಲಿದಿರುವ ಹರುಷದಲಿ ನಗುತಿರುವಾ
ಹೆಣ್ಣು : ಈ ಮನೆಯ ಸಂಭ್ರಮದ ನಂದನವನವ ,ಮಾಡಿರುವಾ
ಗಂಡು : ಮುಳ್ಳೇ ಇಲ್ಲದ ಗುಲಾಬಿ ಹೂವುಗಳು ನಾವೆಲ್ಲಾ
ಹೆಣ್ಣು : ಪ್ರೇಮದ ಪರಿಮಳ ತುಂಬಿದೆ ನಮ್ಮ ಒಡಲೆಲ್ಲಾ

ಹೆಣ್ಣು : ಕೋಪವೆಂಬ ಬಿರುಗಾಳಿಯೂ ಸರಿದಂತೇ
ಗಂಡು : ದ್ವೇಷವೆಂಬ ಉರಿಬೆಂಕಿಯೂ ಸುಡದಂತೇ
ಹೆಣ್ಣು : ಓಓಓ .. ಕೋಪವೆಂಬ ಬಿರುಗಾಳಿಯೂ ಸರಿದಂತೇ
ಗಂಡು : ದ್ವೇಷವೆಂಬ ಉರಿಬೆಂಕಿಯೂ ಸುಡದಂತೇ
ಹೆಣ್ಣು : ಸಹನೆಯನು ಕಲಿತಿರುವಾ ನೆಮ್ಮದಿಯ ಹೊಂದಿರುವಾ
ಗಂಡು : ಸ್ವರ್ಗವನೇ ನಾಚಿಸುವ ಸುಖವನು ಬಾಳಲಿ ಹೊಂದಿರುವಾ
ಎಲ್ಲರು :  ಮುಳ್ಳೇ ಇಲ್ಲದ ಗುಲಾಬಿ ಹೂವುಗಳು ನಾವೆಲ್ಲಾ ಪ್ರೇಮದ ಪರಿಮಳ ತುಂಬಿದೆ ನಮ್ಮ ಒಡಲೆಲ್ಲಾ
ಮಗು : ಜೇನಂತೇ ಮನಸೆಲ್ಲಾ ಮುತ್ತಂತೇ ಮಾತೆಲ್ಲಾ
ಎಲ್ಲರು :  ಮುಳ್ಳೇ ಇಲ್ಲದ ಗುಲಾಬಿ ಹೂವುಗಳು ನಾವೆಲ್ಲಾ ಪ್ರೇಮದ ಪರಿಮಳ ತುಂಬಿದೆ ನಮ್ಮ ಒಡಲೆಲ್ಲಾ 
--------------------------------------------------------------------------------------------------------------------------

ಮುಳ್ಳಿನ ಗುಲಾಬಿ (1982) - ಯಾರು ಯಾರಿಗೇ ಮದುವೇ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ರಮೇಶ, ಸುಲೋಚನಾ 

ಹೆಣ್ಣು : ಮದುವೇ ಮದುವೇ ಯಾರು ಯಾರಿಗೆ ಮದುವೇ ವಿಧಿರಾಯನೇ ಏತಕೇ ನಗುವೇ
         ಎದೆಯನ್ನೂ ಏಕೇ ಸುಡುವೇ ಈ ವೇದನೇ ನಾ ತಾಳೇನೇ ಏ ನಿನದು ನನ್ನಲ್ಲಿ ಛಲವೇ
         ಯಾರಿಗೆ ಮದುವೇ ವಿಧಿರಾಯನೇ ಏತಕೇ ನಗುವೇ
         ಎದೆಯನ್ನೂ ಏಕೇ ಸುಡುವೇ ಈ ವೇದನೇ ನಾ ತಾಳೇನೇ ಏ ನಿನದು ನನ್ನಲ್ಲಿ ಛಲವೇ
         ಯಾರು ಯಾರಿಗೆ ಮದುವೇ

ಹೆಣ್ಣು : ಮೃದುವಾದ ಮನವ ಹೂವಾಗಿಸೀ  ಹೂವಾದ ಮನವ ಮುಳ್ಳಾಗಿಸೀ
          ಮೃದುವಾದ ಮನವ ಹೂವಾಗಿಸೀ  ಹೂವಾದ ಮನವ ಮುಳ್ಳಾಗಿಸೀ
          ಸೇಡಿನ ಉರಿಯಲಿ ಬೇಯಸಿ ಎದೆಯ ಕಲ್ಲನು ಮಾಡಿ ಹೆಣ್ಣಿನ ಹೃದಯ ಮದುವೇ ಎನ್ನುವೆಯಾ
         ಯಾರು ಯಾರಿಗೆ ಮದುವೇ ವಿಧಿರಾಯನೇ ಏತಕೇ ನಗುವೇ
         ಎದೆಯನ್ನೂ ಏತಕೇ ಸುಡುವೇ ಈ ವೇದನೇ ನಾ ತಾಳೇನೇ ಏ ನಿನದು ನನ್ನಲ್ಲಿ ಛಲವೇ
         ಯಾರು ಯಾರಿಗೆ ಮದುವೇ

ಗಂಡು : ನೂರೆಂಟು ಆಸೆಯ ನೀ ತೋರಿಸಿ ನನ್ನ ಸಂತೋಷದಲ್ಲಿ ತೇಲಾಡಿಸೀ
           ನೂರೆಂಟು ಆಸೆಯ ನೀ ತೋರಿಸಿ ನನ್ನ ಸಂತೋಷದಲ್ಲಿ ತೇಲಾಡಿಸೀ
           ಹೃದಯದಿ ಬರೆದ ಒಲವಿನ ಕಥೆಯ ಮುಳ್ಳಲಿ ಗೀಚುತಾ ತುಂಬುತಾ ವ್ಯಥೆಯಾ ಮದುವೇ ಎನುವೆಯಾ...
         ಯಾರು ಯಾರಿಗೆ ಮದುವೇ ವಿಧಿರಾಯನೇ ಏತಕೇ ನಗುವೇ
         ಎದೆಯನ್ನೂ ಏಕೇ ಸುಡುವೇ ಈ ವೇದನೇ ನಾ ತಾಳೇನೇ ಏ ನಿನದು ನನ್ನಲ್ಲಿ ಛಲವೇ
         ಯಾರು ಯಾರಿಗೆ ಮದುವೇ
--------------------------------------------------------------------------------------------------------------------------

ಮುಳ್ಳಿನ ಗುಲಾಬಿ (1982) - ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕೀ  

ಗಂಡು : ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು ಶಶಿಯಲ್ಲಿ ಬೆಳದಿಂಗಳೂ
ಹೆಣ್ಣು : ಒಂದಾದ ಹಾಗೇ ನೀ ಸೇರಿ ಹೋದೇ ಒಲವಿಂದ ನೀ ಇರುವೇ
          ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು ಶಶಿಯಲ್ಲಿ ಬೆಳದಿಂಗಳೂ
ಗಂಡು: ಒಂದಾದ ಹಾಗೇ ನೀ ಸೇರಿ ಹೋದೇ ಒಲವಿಂದ ನೀ ನನ್ನೋಳೂ

ಗಂಡು : ಓ.. ಹೆಣ್ಣೇ .. ನೀನೆಂಥ ಸೊಗಸೂ ನಿನ್ನ ಸವಿಯಾದ
             ಮಾತೇನೂ ಸೊಗಸೂ ನಡೇವಾಗ ನಿಂತಾಗ     
             ಹೂವಂತೇ ನಗುವಾಗ ಉಯ್ಯಾಲೆಯಂತಾಯ್ತೆ 
              ಮನಸೂ 
ಹೆಣ್ಣು : ನಾ ನಿನ್ನ ಕಂಡಾಗ ಅನುರಾಗ ಬೆಸೆದಾಗ ನಿಜವಾಯ್ತು ನಾ ಕಂಡ ಕನಸು 
ಗಂಡು : ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು ಶಶಿಯಲ್ಲಿ ಬೆಳದಿಂಗಳೂ
ಹೆಣ್ಣು : ಒಂದಾದ ಹಾಗೇ ನೀ ಸೇರಿ ಹೋದೇ ಒಲವಿಂದ ನೀ ಇರುವೇ (ಆಆಆ)

ಹೆಣ್ಣು : ಓ.. ನಲ್ಲ ನೀ ಎಂಥ ಚೆನ್ನ ಈ ಚೆಲುವಾದ ಮೊಗವೇನು ಚೆನ್ನ 
         ಈ.. ಕಣ್ಣಲ್ಲೇ ಸಂದೇಶ ನುಡಿಯುತ್ತ ಸಂತೋಷ ಕಂಡಾಗ ನಾ ಮರೆಯುವೇ ನನ್ನಾ 
ಗಂಡು : ನೀ ನನ್ನ ಉಸಿರಾಗಿ ಬಾಳಲ್ಲಿ ಬೆಳಕಾಗಿ ಆನಂದ ನಾ ಕಂಡೇ ನಿನ್ನ 
ಹೆಣ್ಣು : ಬಾನಲ್ಲಿ ರವಿಯು ಭುವಿಯಲ್ಲಿ ಗಿರಿಯು ಶಶಿಯಲ್ಲಿ ಬೆಳದಿಂಗಳೂ 
ಗಂಡು: ಒಂದಾದ ಹಾಗೇ ನೀ ಸೇರಿ ಹೋದೇ ಒಲವಿಂದ ನೀ ನನ್ನೋಳೂ (ಆಆಆ) ಓಓಓಓ 
-----------------------------------------------------------

1 comment:

  1. ಉಯ್ಯಾಲೆಯಂತಾಯ್ತೆ ಮನಸೂ

    ReplyDelete