319. ಬಭ್ರುವಾಹನ(1977)



ಬಭ್ರುವಾಹನ ಚಿತ್ರದ ಹಾಡುಗಳು 
  1. ಈ ಸಮಯ ಆನಂದಮಯ ನೂತನ 
  2. ನಿನ್ನ ಕಣ್ಣ ನೋಟದಲ್ಲೇ 
  3. ಆರಾಧಿಸವೇ ಮದನಾರಿ 
  4. ಬರಿಸಿಡಿಲು ಬಡಿದಂತೇ 
  5. ಯಾರು ತಿಳಿಯುವುರು ನಿನ್ನ 
ಬಭ್ರುವಾಹನ(1977) - ಈ ಸಮಯ ಆನಂದಮಯ
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಡಾ| ರಾಜಕುಮಾರ್ ಮತ್ತು ಎಸ್. ಜಾನಕಿ

ಹೆಣ್ಣು: ಈ ಸಮಯ ಆನಂದಮಯ
         ನೂತನ ಬಾಳಿನ ಶುಭೋದಯ
         ಈ ಸಮಯ ಆನಂದಮಯ
ಗಂಡು:  ಚಿತ್ರ,  ಬರೀ ಆನಂದ ಮಾತ್ರ ಅಲ್ಲ,
          ಈ ಸಮಯ ಶೃಂಗಾರಮಯ - ೨
          ಒಲವಿನ ಬಾಳಿನ ನವೋದಯ
ಇಬ್ಬರು: ಈ ಸಮಯ ಆನಂದಮಯ

ಹೆಣ್ಣು:  ಹೊಂಬಿಸಿಲು ಹೊಸ ಚೈತನ್ಯ ತರಲು - ೨
          ಹೂದುಂಬಿ ಒಂದಾಗಿ ನಲಿದಾಡುತಿರಲು - ೨
ಗಂಡು: ನಿನ್ನಾಸೆ ಅತಿಯಾಗಿ ಬಳಿಸಾರಿ ಬರಲು - ೨
           ನಾ ಪಡೆದೆ ನಿನ್ನಿಂದ ಸವಿಜೇನ ಹೊನಲು
ಇಬ್ಬರು: ಈ ಸಮಯ ಶೃಂಗಾರಮಯ
          ನೂತನ ಬಾಳಿನ ಶುಭೋದಯ
          ಈ ಸಮಯ ಆನಂದಮಯ
ಗಂಡು: ಬೆಳ್ಳಿಯ ತೆರೆಯ ಹರಡಿದೆ ಹಿಮವು - ೨
           ಮುತ್ತಿನ ಮಣಿಗಳ ಹೊತ್ತಿದೆ ಸುಮವು - ೨
ಹೆಣ್ಣು:  ಚಳಿಯಲಿ ಸೋತಿದೆ ನನ್ನೀ ತನುವು - ೨
          ತೋಳಿನ ಆಸರೆ ಬಯಸಿದೆ ಜೀವವು
ಇಬ್ಬರು:  ಈ ಸಮಯ ಆನಂದಮಯ
            ನೂತನ ಬಾಳಿನ ಶುಭೋದಯ
            ಈ ಸಮಯ ಆನಂದಮಯ
ಹೆಣ್ಣು: ನಿನ್ನೀ ಒಲವಿಗೆ ಅರಳಲು ಒಡಲು - ೨
ಗಂಡು: ನಾಳಿನ ಭಾಗ್ಯಕೆ ಕಾದಿದೆ ಮಡಿಲು - ೨
ಹೆಣ್ಣು: ಬೆರೆತಾ ಜೀವಕೆ ಹರಕೆಯ ತರಲು - ೨
ಗಂಡು: ಮಳೆಯನು ಸುರಿಸಿದೆ ಕಬ್ಬನೆ ಮುಗಿಲು
ಇಬ್ಬರು: ಈ ಸಮಯ ಆನಂದಮಯ/ಶೃಂಗಾರಮಯ
            ನೂತನ ಬಾಳಿನ ಶುಭೋದಯ
            ಈ ಸಮಯ ಆನಂದಮಯ
---------------------------------------------------------------------------------------------------------------------


ಬಭ್ರುವಾಹನ (1977) - ನಿನ್ನ ಕಣ್ಣ ನೋಟದಲ್ಲೆ

ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ  ಸಂಗೀತ: ಟಿ.ಜಿ.ಲಿಂಗಪ್ಪ   ಗಾಯನ: ಪಿ.ಬಿ.ಶ್ರೀನಿವಾಸ್


ನಿನ್ನ ಕಣ್ಣ ನೋಟದಲ್ಲೆ ನೂರು ಆಸೆ ಕಂಡೆನು
ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತು ಹೋದೆನು

ನಿನ್ನ ನಡುವ ಕಂಡು ತಾನೆ ಬಳ್ಳಿ ಬಳುಕಿತು
ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು
ನಿನ್ನ ನಾಟ್ಯ ಕಂಡ ನವಿಲು ಕುಣಿಯದಾಯಿತು
ಚೆಲುವಿನರಸಿ ನನ್ನ ಮನವು ಇಂದು ನಿನ್ನದಾಯಿತು

ಸೋಲನೆಂದು ಕಾಣದಂಥ ವೀರ ಪಾರ್ಥನು
ನಿನ್ನ ಕಣ್ಣ ಬಾಣದಿಂದ ಸೋತುಹೋದನು
ಚೆಲುವೆ ನಿನ್ನ ಸ್ನೇಹದಲ್ಲಿ ಕರಗಿ ಹೋದೆನು
ತೋಳಿನಲ್ಲಿ ಬಳಸಿದಾಗ ನಾನೆ ನೀನಾದೆನು
------------------------------------------------------------------------------------------------------------------

ಬಭ್ರುವಾಹನ (1977) - ಯಾರು ತಿಳಿಯರು
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಡಾ| ರಾಜ ಮತ್ತು ಪಿ.ಬಿ.ಶ್ರೀ

ಸಂಭಾಷಣೆ:
ಬಬ್ರುವಾಹನ: ಏನು ಪಾರ್ಥಾ, ಅಹ್ಹಹ..   ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. 
                   ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, 
                  ನಿನ್ನ ಪುಣ್ಯವೆಲ್ಲಾ ಹುರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. 
                  ಹುಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. 
                  ಶಿವನನ್ನು ಗೆದ್ದ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವಾ 
                  ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರವ ನನ್ನಿಂದಲೇ ಮಣ್ಣಾಗಲಿ.
ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. 
               ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣರಂಗದಲ್ಲಿ ವೀರವಿಹಾರ ಮಾಡಿದ 
                ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ.

ಬಭ್ರುವಾಹನ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ.... 
                    ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
                    ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
                    ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
                    ಜಯವ ತಂದಿತ್ತ ಆ ಯದುನಂದನ
                    ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ
ಅರ್ಜುನ:  ಅಸಹಾಯ ಶೂರ ನಾ ಅಕ್ಷೀಣ ಬಲನೋ
              ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
              ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ...  ಉಗ್ರಪ್ರತಾಪೀ
ಬಭ್ರುವಾಹನ: ಓ ಹೊ ಒ ಹೋ ಉಗ್ರಪ್ರತಾಪಿ ಆ!
                   ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
                   ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
                   ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
                   ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ ಖಂಡಿಸಿದೇ ಉಳಿಸುವೆ
                   ಹೋಗೊ ಹೋಗೆಲೋ ಶಿಖಂಡಿ
ಅರ್ಜುನ:  ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
               ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
               ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಬಭ್ರುವಾಹನ: ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
                    ಹೂಡು ಬಾಣಗಳ ಮಾಡುವೆ ಮಾನಭಂಗ
ಅರ್ಜುನ:  ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಭ್ರುವಾಹನ: ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ
ಅರ್ಜುನ:  ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಬಭ್ರುವಾಹನ:  ಅಂತಕನಿಗೆ ಅಂತಕನು ಈ ಬಭ್ರುವಾಹನ
------------------------------------------------------------------------------------------------------------------------

ಬಬ್ರುವಾಹನ (೧೯೭೭)
ರಚನೆ: ಚಿ. ಉದಯಶಂಕರ್   ಸಂಗೀತ: ಟಿ. ಜಿ. ಲಿಂಗಪ್ಪ   ಗಾಯಕ: ಡಾ. ರಾಜಕುಮಾರ್


ಗ : ಬರಸಿಡಿಲು ಬಡಿದಂತೆ ಕಡುನುಡಿಗಳಿಂದೆನ್ನ ಒಡಲ ಬಿರಿದನು
     ಅಯ್ಯೋ ತಡೆಯದಾದೆ, ಅಮ್ಮಾ....
     ಪರಮ ಪಾವನೆ ನೀನು ಪಾಪಾತ್ಮಳೆಂತೆನಗೆ ಜನ್ಮವಿತ್ತೆಯಂತೆ
ಚಿತ್ರಾಂಗದೆ:  ಕುಮಾರಾ
ಗ : ಅಮ್ಮಾ, ಜಾರತನದಲಿ ನೀ ಜನ್ಮವಿತ್ತೆಯಂತೆ
ಚಿತ್ರಾಂಗದೆ : ಹರಿ ಹರೀ
ಗ : ಅದಕೇಳಿ ಕ್ರೋಧಾಗ್ನಿ ಇಂದೆನ್ನ ಅಂಗಾಂಗ ಉರಿದೆದ್ದು
      ರೋಷಣದಿಂ ಶಪಥಗೈದೆ, ಶಪಥಗೈದೇ..... 
      ನುಡಿದಂತೆ ನೆಡೆದು ಪಾರ್ಥನ ಗರ್ವವಂ ತೊಡೆದು
      ಸತ್ಯವೇನೆಂಬುದನು ತೊರೆದಿರೇನು
      ಬೆಚ್ಚೆದೆ ಎನ್ನೆದೆಯ ಕಿಚ್ಚನು ತೋರಿ
      ರೊಚ್ಚಿ... ನಿಂದವನ ಕೊಚ್ಚದೆ ಬಿಡೆನಮ್ಮಾ
      ಸಚ್ಚರಿತೆ ನಿನ್ನ ಶೀಲವೇ ಹೆಚ್ಚೆಂದು ಮೆಚ್ಚಿ
      ಜಗವೆಲ್ಲ ಕೊಂಡಾಡುವುದು ಸತ್ಯಾ...  ಸತ್ಯಾ....  ಸತ್ಯಾ.... 
---------------------------------------------------------------------------------------------------------------------

ಬಬ್ರುವಾಹನ (೧೯೭೭)
ರಚನೆ: ಚಿ. ಉದಯಶಂಕರ್   ಸಂಗೀತ: ಟಿ. ಜಿ. ಲಿಂಗಪ್ಪ   ಗಾಯಕ: ಡಾ. ರಾಜಕುಮಾರ್


ಆರಾಧಿಸುವೆ ಮದನಾರಿ
ಆರಾಧಿಸುವೆ ಮದನಾರಿ
ಆದರಿಸು ನೀ ದಯ ತೋರಿ
ಆರಾಧಿಸುವೆ ಮದನಾರಿ
ಅಂತರಂಗದಲ್ಲಿ ನೆಲೆಸಿರುವೆ.. ಆಆಆ
ಅಂತರಂಗದಲ್ಲಿ ನೆಲೆಸಿರುವೆ
ಆಂತರ್ಯ ತಿಳಿಯದೇ ಏಕಿರುವೇ....  
ಆಂತರ್ಯ ತಿಳಿಯದೇ ಏಕಿರುವೇ....
ಸಂತತ ನಿನ್ನ ಸಹವಾಸ ನೀಡಿ
ಸಂತತ ನಿನ್ನ ಸಹವಾಸ ನೀಡಿ
ಸಂತೋಷದಿಂದೆನ್ನ ನಲಿಸೆಂದು ಕೋರುವೆ 
ಆರಾಧಿಸುವೆ ಮದನಾರಿ 

ಮೈದೋರಿ ಮುಂದೆ ಸಹಕರಿಸು
ಮೈದೋರಿ ಮುಂದೆ ಸಹಕರಿಸು
ಆಮಾರನೂರವನೇ ಪರಿಹರಿಸು 
ಮೈದೋರಿ ಮುಂದೆ ಸಹಕರಿಸು
ಆಮಾರನೂರವನೇ ಪರಿಹರಿಸು 
ಪ್ರೇಮಾಮೃತವನು...  
ಪ್ರೇಮಾಮೃತವನು... ನೀನುಣಿಸು 
ಪ್ರೇಮಾಮೃತವನು... ನೀನುಣಿಸು
ತನ್ಮಯಗೊಳಿಸು ಮೈ ಮರೆಸು
ತನ್ಮಯಗೊಳಿಸು ಮೈ ಮರೆಸು
ಚಿನ್ಮಯ ಭಾವ ತುಂಬುತ ಜೀವಾ
ಚಿನ್ಮಯ ಭಾವ ತುಂಬುತ ಜೀವಾ
ಆನಂದ ಆನಂದ ಆನಂದವಾಗಲಿ
ಆರಾಧಿಸುವೆ ಮದನಾರಿ 
ಸ ನಿ ದ ಪ ಮ ಆರಾಧಿಸುವೆ ಮದನಾರಿ
ಪ ದ ನಿ ಸ ಸ ಮ ಪ ದ ನಿ ನಿ 
ಸ ನಿ ದ ಪ ಮ ಆರಾಧಿಸುವೆ ಮದನಾರಿ
ಸ ಸ ಸ ಸ ಸ ಗ ರೀ ಸ ಗ ರೀ ಸ ನಿ ದ
ನಿನಿ ರಿರಿ ಸಸ ನಿನಿ ದಪ ದ ನಿ ಸ
ರಿರಿರಿ ಗ ರಿರಿರಿ ಗ ರಿರಿ
ಗ ಮ ಗಗ ಗಾ ಮ ಗಗ
ಮ ಪ ದಪ ದನಿದನಿ ಸ ಸ ಸ
ದನಿರಿರಿ ದನಿಗಗ ರೀ ಗಗರಿ
ಗಗರಿ ಗಗರಿ ಸನದನಿ
ರಿರಿ ಸ ರಿರಿ ಸ ರಿರಿ ಸ ರಿರಿ ಸ
ನೀ ದಪ ದನಿ ಗರಿಸ
ಗರಿಸನಿದರಿಸ
ಗರಿಸನಿದರಿಸ ನಿದಪ
ಸನಿದ ಪಮರಿಸನಿ 
ರಿಸನಿದಪಸನಿ
ರಿಸನಿದಪಸನಿ ದಪಮ
ನಿದಪ ಮಗ ಸನಿದ
ಸನಿದ ಪಮ ನಿದ
ಸನಿದ ಪಮ ನಿದಪಮಪ
ಸಾಗರಿಗಾಮ ಆರಾಧಿಸುವೆ ಮದನಾರಿ

ತತಃ ಧೀಮ್ ಥಕಿಟ
ತಕಥ ಧೀಮ್ ಥಕಿಟ
ತಾ ತಃ ಧೀಮ್ ಥಕಿಟ
ತಾಕಾ ಧಿಮಿ ಥ
ತಕಥಾರಿ ಥಕಜನು ತಕಥಾರಿ ಥಕಧಿಮಿ
ತಕಥಾರಿ ಥಕಜನು ತಾಗಿದ್ತಂಗಿಡತ
ಥಕಿಟ ಧಿಕಿಟ ಧಿಮಿ ತಾಖಜಾನುತ
ಥಕಿಟ ಧಿಕಿಟ ಜನು ತಾಗಿಡದ್ತಂಗಿಡತ
ಥ ತಂಗಿಡದಂ ತಾಗದಿತ್ ತಂಗಿಡದಂ
ತರಿಗಿಡತೋಮ್ ತರಿಗಿಡತೋಮ್
ಥಕ್ ಧಿಮಿ ಥಕಜನು    ಥಕ್ ಧಿಮಿ ಥಕಜನು
ಥಕ್ ಧಿಮಿ ಥಕಜನು    ಥಕ್ ಧಿಮಿ ಥಕಜನು
ಥಕ್ ಧಿಮಿ ಥಕಜನು    ಥಕ್ ಧಿಮಿ ಥಕಜನು
ತ ದಿ ಗಿ ನ ಥೋಮ್
ತ ದಿ ಗಿ ನ ಥೋಮ್   ತ ದಿ ಗಿ ನ ಥೋಮ್
ತ ದಿ ಗಿ ನ ಥೋಮ್ 
ತ ದಿ ಗಿ ನ ಥೋಮ್   ತ ದಿ ಗಿ ನ ಥೋಮ್ 
ತ ದಿ ಗಿ ನ ಥೋಮ್ 

ತ  ದಿ  ಗಿ  ನ  ಥೋಮ್ 
ತದಿಗಿನಥೋಮ್    ತದಿಗಿನಥೋಮ್ 
ತದಿಗಿನಥೋಮ್    ತದಿಗಿನಥೋಮ್ 
ಆರಾಧಿಸುವೆ ಮದನಾರಿ
ಆದರಿಸು ನೀ ದಯ ತೋರಿ
ಆರಾಧಿಸುವೆ ಮದನಾರಿ


--------------------------------------------------------------------------------------------------------------------------


1 comment: