ಮಣ್ಣಿನ ಮಗ ಚಿತ್ರದ ಹಾಡುಗಳು
ಸಾಹಿತ್ಯ - ಗೀತಪ್ರಿಯ ಧ್ವನಿ - ಪಿ. ಸುಶೀಲ ಸಂಗೀತ - ಜಿ. ಕೆ. ವೆಂಕಟೇಶ್
ನಿಲ್ಲಿಸಿ....
ಇದೇನ ಸಭ್ಯತೆ... ಇದೇನ ಸಂಸ್ಕೃತಿ....
ಇದೇನ ಸಭ್ಯತೆ ಇದೇನ ಸಂಸ್ಕೃತಿ
ಇದೇನ ಇಂದು ಸತ್ಯಕೆ ಇದೇನ ನಮ್ಮ ಜಾಗೃತಿ
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ
ಇದೇನ ಸಭ್ಯತೆ ಇದೇನ ಸಂಸ್ಕೃತಿ
ಎನಿತು ದೇಶ ಭಕ್ತರು ಹರಿಸಿ ತಮ್ಮ ನೆತ್ತರು
ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು
- ಭಗವಂತ ಕೈ ಕೊಟ್ಟ
- ಇದೇನು ಸಭ್ಯತೆ
- ಬರೆಯದ ಕೈಗಳು
- ಮೆಲ್ಲಗೆ ನಡೆಯೋಳೆ
- ಅಳುತಿಹುದು ಮಾನವ
ಸಾಹಿತ್ಯ - ಗೀತಪ್ರಿಯ ಧ್ವನಿ - ಪಿ. ಸುಶೀಲ ಸಂಗೀತ - ಜಿ. ಕೆ. ವೆಂಕಟೇಶ್
ನಿಲ್ಲಿಸಿ....
ಇದೇನ ಸಭ್ಯತೆ... ಇದೇನ ಸಂಸ್ಕೃತಿ....
ಇದೇನ ಸಭ್ಯತೆ ಇದೇನ ಸಂಸ್ಕೃತಿ
ಇದೇನ ಇಂದು ಸತ್ಯಕೆ ಇದೇನ ನಮ್ಮ ಜಾಗೃತಿ
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ
ಇದೇನ ಸಭ್ಯತೆ ಇದೇನ ಸಂಸ್ಕೃತಿ
ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು
ಎನಿತು ದೇಶ ಭಕ್ತರು ಹರಿಸಿ ತಮ್ಮ ನೆತ್ತರು
ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು
ಅಮರ ರಾಮರಾಜ್ಯದ ಕನಸು ಕಂಡೆವಂದು
ಬರಿಯ ಭೇದಭಾವವ ಕಾಣುತಿಹೆವು ಇಂದು
ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು
ಬರಿಯ ಭೇದಭಾವವ ಕಾಣುತಿಹೆವು ಇಂದು
ಕಾಣುತಿಹೆವು ಇಂದು
ಇದೇನ ಸಭ್ಯತೆ ಇದೇನ ಸಂಸ್ಕೃತಿ
ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು
ನಮಗೆ ಅನ್ನ ನೀಡಲು ದುಡಿಯುತಿಹರು ರೈತರು
ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು
ನಮಗೆ ಅನ್ನ ನೀಡಲು ದುಡಿಯುತಿಹರು ರೈತರು
ಅವರ ತ್ಯಾಗ ದುಡಿಮೆಯ ಪರಿವೆ ನಮಗೆ ಇಲ್ಲ
ಗಾಂಧಿ ನೆಹರು ಶಾಸ್ತ್ರಿಯನ್ನು ನಾವು ಮರೆತೆವಲ್ಲ
ಇದೇನ ಸಭ್ಯತೆ ಇದೇನ ಸಂಸ್ಕೃತಿ
ನಮಗೆ ಅನ್ನ ನೀಡಲು ದುಡಿಯುತಿಹರು ರೈತರು
ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು
ನಮಗೆ ಅನ್ನ ನೀಡಲು ದುಡಿಯುತಿಹರು ರೈತರು
ಅವರ ತ್ಯಾಗ ದುಡಿಮೆಯ ಪರಿವೆ ನಮಗೆ ಇಲ್ಲ
ಗಾಂಧಿ ನೆಹರು ಶಾಸ್ತ್ರಿಯನ್ನು ನಾವು ಮರೆತೆವಲ್ಲ
ನಾವು ಮರೆತೆವಲ್ಲ
ಇದೇನ ಸಭ್ಯತೆ ಇದೇನ ಸಂಸ್ಕೃತಿ
ಇದೇನ ಸಭ್ಯತೆ ಇದೇನ ಸಂಸ್ಕೃತಿ
ದೇಶದಾ ಸಮಸ್ಯೆಗಳು ಇರಲು ಕೋಟಿ ಕೋಟಿ
ಅದನು ಮರೆತು ಸಾಗಿದೆ ಫ್ಯಾಶನ್ನಿನ ಪೈಪೋಟಿ
ಹಲವರಿಗೆ ಕುಡಿಯಲು ಗಂಜಿಗೂ ಗತಿಯಿಲ್ಲಾ
ತಿಂದು ತೇಗಿ ಕೆಲವರು ಅನ್ನ ಎಸೆಯವರೆಲ್ಲಾ
ಮಾನ ಮುಚ್ಚಿಕೊಳ್ಳಲು ಕೆಲವರಿಗೆ ಬಟ್ಟೆ ಇಲ್ಲ
ಪೂರ್ತಿ ಮೈ ಮುಚ್ಚಲು ಕೆಲವರಿಗೆ ಮನಸಿಲ್ಲಾ
ಕೆಲವರಿಗೆ ಮನಸಿಲ್ಲಾ
ಇದೇನ ಸಭ್ಯತೆ ಇದೇನ ಸಂಸ್ಕೃತಿ
ಇದೇನ ಇಂದು ಸತ್ಯಕೆ ಇದೇನ ನಮ್ಮ ಜಾಗೃತಿ
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ
ಇದೇನ ಸಭ್ಯತೆ ಇದೇನ ಸಂಸ್ಕೃತಿ
------------------------------------------------------------------------------------------------------------------------
ಮಣ್ಣಿನ ಮಗ (1968) - ಭಗವಂತ ಕೈಕೊಟ್ಟ...
ಭಗವಂತ ಕೈಕೊಟ್ಟ...
ಭಗವಂತ ಕೈಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯಕ್ಕಂತ
ಭಗವಂತ ಕೈಕೊಟ್ಟ ದುಡಿಯೋಕ್ಕಂತ
ಅದನ್ಯಾಕೆ ಎತ್ತುವೆ ಹೊಡೆಯೋಕ್ಕಂತ
ಮನಸಂಗೆ ಮನ್ಸ ಹೆದರತಿದ್ದನಂತೆ... ಆವತ್ತೂ
ಮನಸನ್ನ ಮನಸ್ ಹೆದರಿಸ್ತಾನೇ.. ಇವತ್ತೂ
ಹೆದ್ರೋಸೊನು ಕಂಡ್ರೆ ಹೆದರತ್ತೀಯಾ
ಹೆದರೋರ ಕಂಡ್ರೆ ಹೆದರಿಸ್ತೀಯಾ
ಮುಂದೆ ಇದ್ರೆ ಹೊಗಳ್ತಿಯಾ ಹಿಂದೆ ಇದ್ರೆ ತೇಗಳ್ತಿಯಾ
ಒಂದೊಂದ ಕ್ಷಣ ಒಂದೊಂದ ಬಣ್ಣ ...ಆಆ..
ಒಂದೊಂದ ಕ್ಷಣ ಒಂದೊಂದ ಬಣ್ಣ ಓತಿಕ್ಯಾತನಂಗ ತೋರತಿಯಾ .
ಒಬ್ರು ಸೊತ್ತನ್ನ ನುಂಗ ಹಾಕಿ ...ಈ...ಈ..
ಒಬ್ರು ಸೊತ್ತನ್ನ ನುಂಗ ಹಾಕಿ ಬಾಯಿಗೆ ಬಂದಂಗೆ ಬೈತಿಯಾ
ಈಗ ನನ್ ಮಾತ್ ಒಸಿ ಕೇಳತಿಯಾ...
ಭಗವಂತ ಬಾಯಿ ಕೊಟ್ಟ ... ಯಾಕೇ....
ಭಗವಂತ ಬಾಯಿ ಕೊಟ್ಟ ನುಡಿಯೋಕಂತ
ಅದನ್ಯಾಕೆ ತೆರಿಯುವೆ ಬೈಯೋಕಂತ
ಭಗವಂತ ಬಾಯಿ ಕೊಟ್ಟ ನುಡಿಯೋಕಂತ
ಅದನ್ಯಾಕೆ ತೆರಿಯುವೆ ಬೈಯೋಕಂತ
ಮಾಭಾರತದ ಕಾಲದಾಗೇ ... ಒಬ್ಬ ಶಕುನಿ ಇದ್ನಂತೆ
ಈ ಕಾಲ್ದಗೂ ನಿನ್ನಂತ.... ಏಟೋ ಶಕುನಿಗಳು ಅವರಂತೆ
ರಾಮಾಯಣದ ರಾವಣನ ಕೊಲ್ಲಾಕ್ ಹುಟ್ಟಿದ ಶ್ರೀರಾಮ್
ಮಾಭಾರತದ ಕೀಚಕನ್ನ ತದ್ಕೋಕ ಹುಟ್ಟಿದ ಬಲಭೀಮಾ
ಒಬ್ಬ ರಾವಣಗ ಒಬ್ಬ ರಾಮ...ಆ...ಆ..
ಒಬ್ಬ ರಾವಣಗ ಒಬ್ಬ ರಾಮ ಒಬ್ಬ ಕೀಚಕಂಗ ಒಬ್ಬ ಭೀಮ
ನಿನ್ನಂತೋರಗೆ ನನ್ನಂತವಾ
ನಿನ್ನಂತೋರಗೆ ನನ್ನಂತವಾ ಭೂಮ್ಯಾಗಿರ್ತಾರಂತೆ
ಈ ಭೂಮ್ಯಾಗಿರ್ತಾರಂತೆ ಈ ಮಾತನು ಒಸಿ ಕೇಳ್ತಿಯಾ ...
ಅದನ್ಯಾಕೆ ಎತ್ತುವೆ ಹೊಡೆಯಕ್ಕಂತ
-------------------------------------------------------------------------------------------------------------------------
ಮಣ್ಣಿನ ಮಗ (1968) - ಬರೆಯದ ಕೈಗಳು ಬರೆಯುತಿರೆ
ಸಂಗೀತ - ವಿಜಯ ಭಾಸ್ಕರ ಸಾಹಿತ್ಯ - ಗೀತಪ್ರಿಯ ಧ್ವನಿ - ಎಸ.ಜಾನಕಿ
ಬರೆಯದ ಕೈಗಳು ಬರೆಯುತಿರೆ ಭಾರತದ ದೇಶದ ಭಾಗ್ಯವನೇ
ಸ್ವಾರ್ಥವ ತೊರೆದು ದುಡಿಯೋಣ ಮಣ್ಣಿನ ಮಾನವ ಕಾಯೋಣ
ಇಳಿಸೋಣ ಭೂಮಿಗೆ ಸ್ವರ್ಗವನೇ ...
ಬಡತನವೆಂಬ ಶತ್ರುವ ಅಳಿಸಲು ನೇಗಿಲೆ ನಮಗೆ ಆಯುಧವು..
ನೇಗಿಲೆ ನಮಗೆ ಆಯುಧವು
ನಮ್ಮ ಭವಿಷ್ಯವ ನಾವೇ ಬರೆಯಲು ನೇಗಿಲೆ ನಮ್ಮ ಲೇಖನಿಯು...
ನೇಗಿಲೆ ನಮ್ಮ ಲೇಖನಿಯು...
ಮಣ್ಣಿನ ಮಕ್ಕಳ ಸಾಧನೆ ಮೇಲೆ ನಿಂತಿದೆ ಎಲ್ಲರ ಜೀವನವು...
ನಿಂತಿದೆ ಎಲ್ಲರ ಜೀವನವು...
ಎಲ್ಲರ ಹಿತವ ಎಲ್ಲರು ಬಯಸಿ ದುಡಿದರೇ ಜೀವನ ಪಾವನವು...
ದುಡಿದರೇ ಜೀವನ ಪಾವನವು
ಆತ್ಮದ ಶಕ್ತಿಯ ಗಳಿಸೋಣ ಜೊತೆಯಲಿ ಸ್ಫೂರ್ತಿಯ ಬೆರೆಸೋಣ
ಜಾಗೃತಿ ಗೀತೆಯ ಹಾಡೋಣ
ದೇಶದ ಆಸ್ತಿಯಾ ಬೆಳೆಸೋಣ ಒಮ್ಮತದಿಂದ ಮಾಡುತಲಿ
ನವ ಭಾರತದ ನಿರ್ಮಾಣವನೇ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ನಿರ್ಬಲರಾದ ದೀನರಿಗೆ ನೀಡುವ ನಾವು ಸಹಾಯ...
ನೀಡುವ ನಾವು ಸಹಾಯ
ಒಗ್ಗಟ್ಟಿದ್ದರೆ ನಮ್ಮೊಳಗೇ ನಾಡಿಗೆ ಇಲ್ಲ ಅಪಾಯ...
ನಾಡಿಗೆ ಇಲ್ಲ ಅಪಾಯ
ಬೆವರನು ಬೆರೆಸಿ ಭೂಮಿಯಲಿ ನೆಡುವ ಭಕ್ತಿಯ ಬೀಜಗಳ
ನೆಡುವ ಭಕ್ತಿಯ ಬೀಜಗಳ
ಬೆವರಿನ ಹನಿಗಳ ಫಲವಾಗಿ ಪಡೆಯುವ ಅನ್ನದ ಮುತ್ತುಗಳ
ಪಡೆಯುವ ಅನ್ನದ ಮುತ್ತುಗಳ
ಹಸಿವಿನ ಹೆಸರನೆ ಅಳಿಸೋಣ ಎಲ್ಲರ ಉಸಿರನು ಉಳಿಸೋಣ
ಎಲ್ಲಿಯೂ ಹಸಿರನು ಕಾಣೋಣ ಮುಖದಲಿ ಹೊಸ ನಗೆ ಮೆರೆಸೋಣ
ಭಾರತ ಮಾತೆಗೆ ತೋಡಿಸೋಣ ಕನ್ನಡ ಚಿನ್ನದ ಮುಕಟವನೇ
ಜೈ ಜೈ ಭಾರತ ಮಾತೆ ಜೈ ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ ಜೈ ಜೈ ಜೈ ಭೂ ಮಾತೆ
-------------------------------------------------------------------------------------------------------------------------
ಮಣ್ಣಿನ ಮಗ (1968) - ಮೆಲ್ಲಗೆ ನಡೆಯೊಳೇ
ಗಲ್ಲದಿ ಲಜ್ಜೆಯ ತೋರೊಳೆ
ಗಲ್ಲದಿ ಲಜ್ಜೆಯ ತೋರೊಳೆ ... ಗೌರಮ್ಮ
ನಿನಗಾಗೋ ಗಂಡನ ಹೆಸರ ಹೇಳೇ
ಹೂವಂತ ಮೈಯೊಳೇ.. ಹಾವಂತ ಜಡೆಯೊಳೆ...
ಬಳುಕುವ ಸಣ್ಣನೇ ನಡುವೊಳೆ
ಹೂವಂತ ಮೈಯೊಳೇ.. ಹಾವಂತ ಜಡೆಯೊಳೆ
ಬಳುಕುವ ಸಣ್ಣನೇ ನಡುವೊಳೆ
ಗಲ್ಲದಿ ಲಜ್ಜೆಯ ತೋರೊಳೆ
ಗಲ್ಲದಿ ಲಜ್ಜೆಯ ತೋರೊಲೇ... ಗೌರಮ್ಮ
ನಿನಗಾಗೋ ಗಂಡನ ಹೆಸರೆಳೇ
ಮುಸು ಮುಸು ನಗುವೋಳೇ ಹುಸಿ ಕೋಪ ತೋರೊಳೇ
ಮನದಾಗೆ ಏನೇನೋ ಮೆಲ್ಲೋಳೆ
ಮುಸು ಮುಸು ನಗುವೋಳೇ ಹುಸಿ ಕೋಪ ತೋರೊಳೇ
ಮನದಾಗೆ ಏನೇನೋ ಮೆಲ್ಲೋಳೆ
ಜತೆಗಾರ ಬಂದಾಗ ನೀ ಮುಂದೆ ನಿಂತಾಗ
ನನ್ ಕಣ್ಣೇ ಕನ್ನಡಿ ಎನ್ನೋಳೆ...
ನನ್ ಕಣ್ಣೇ ಕನ್ನಡಿ ಎನ್ನೋಳೆ ಗೌರಮ್ಮ...
ಮಣ್ಣಿನ ಮಗ (1968) - ಮೆಲ್ಲಗೆ ನಡೆಯೊಳೇ
ಸಂಗೀತ - ವಿಜಯ ಭಾಸ್ಕರ ಸಾಹಿತ್ಯ - ಗೀತಪ್ರಿಯ ಧ್ವನಿ - ಪಿ.ಬಿ.ಶ್ರೀನಿವಾಸ
ಅಳುತಿಹುದು ಮಾನವತೆ ನಗುತಿಹುದು ದಾನವತೇ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ.... ಓ.. ಧರ್ಮ ದೇವತೆ
ಅಳುತಿಹುದು ಮಾನವತೆ ನಗುತಿಹುದು ದಾನವತೇ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
ಹುಲಿಗಳು ಮೆರೆಯುತಿರೆ ವೇಷದಲಿ ಗೋವಿನ
ಶತೃವು ಇರುವನು ರೂಪದಲಿ ಮಿತ್ರನ
ಹುಡುಕುವೆಯಾ ಅಮೃತವ ಹಲ್ಲಿನಲಿ ಹಾವಿನ
ತ್ಯಾಗಿಗಳಿಗೆ ಎಲ್ಲಿದೆ ಜಗದಿ ಮಾನ್ಯತೆ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
ಸ್ವಾರ್ಥ ರಹಿತ ಜನರಿಗೆ ಸ್ವಾರ್ಥಿಗಳ ಕಾಟವೇ
ಲೋಕವೆಲ್ಲಾ ತುಂಬಿರೇ ವಂಚಕರ ಆಟವೇ..
ನ್ಯಾಯವನ್ನು ನಂಬಿಹ ಜನಕೆ ನ್ಯಾಯ ಬೇಡವೇ
ಎಂದು ಜಗವ ಹೇಳುತಿರಲು ಇಂದು ನೀತಿ ದೇವತೆ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
ಒಂದು ಮನೆಯ ಉರುಳಿಸಿ ತಾನು ಮಹಡಿ ಕಟ್ಟುವ
ತಾನು ಮಾತ್ರ ಉಳಿಯಲು ಪರರ ತಲೆಯ ಮೆಟ್ಟುವಾ
ಪರರ ಸುಖವ ಅಳಿಸುತಾ ತನ್ನ ಸುಖವ ಬೆಳೆಸುವಾ
ವಂಚಕರ ಆಶ್ರಯದಿ ಬೆಳೆಯುತಿರೆ ಧೂರ್ತತೆ

ಭಗವಂತ ಕಾಲ ಕೊಟ್ಟಾ .. ಯಾಕೇ ...
ಭಗವಂತ ಕಾಲ ಕೊಟ್ಟಾ ನಡಿಯೊಕ್ಕಂತಾ
ಅದನ್ಯಾಕೆ ಎತ್ತುವೆ ಹೊಡೆಯಕ್ಕಂತಾ
ಭಗವಂತ ಕೈಕೊಟ್ಟ ದುಡಿಯೋಕ್ಕಂತಅದನ್ಯಾಕೆ ಎತ್ತುವೆ ಹೊಡೆಯಕ್ಕಂತ
-------------------------------------------------------------------------------------------------------------------------
ಮಣ್ಣಿನ ಮಗ (1968) - ಬರೆಯದ ಕೈಗಳು ಬರೆಯುತಿರೆ
ಸಂಗೀತ - ವಿಜಯ ಭಾಸ್ಕರ ಸಾಹಿತ್ಯ - ಗೀತಪ್ರಿಯ ಧ್ವನಿ - ಎಸ.ಜಾನಕಿ
ಸ್ವಾರ್ಥವ ತೊರೆದು ದುಡಿಯೋಣ ಮಣ್ಣಿನ ಮಾನವ ಕಾಯೋಣ
ಇಳಿಸೋಣ ಭೂಮಿಗೆ ಸ್ವರ್ಗವನೇ ...
ಬಡತನವೆಂಬ ಶತ್ರುವ ಅಳಿಸಲು ನೇಗಿಲೆ ನಮಗೆ ಆಯುಧವು..
ನೇಗಿಲೆ ನಮಗೆ ಆಯುಧವು
ನಮ್ಮ ಭವಿಷ್ಯವ ನಾವೇ ಬರೆಯಲು ನೇಗಿಲೆ ನಮ್ಮ ಲೇಖನಿಯು...
ನೇಗಿಲೆ ನಮ್ಮ ಲೇಖನಿಯು...
ಮಣ್ಣಿನ ಮಕ್ಕಳ ಸಾಧನೆ ಮೇಲೆ ನಿಂತಿದೆ ಎಲ್ಲರ ಜೀವನವು...
ನಿಂತಿದೆ ಎಲ್ಲರ ಜೀವನವು...
ಎಲ್ಲರ ಹಿತವ ಎಲ್ಲರು ಬಯಸಿ ದುಡಿದರೇ ಜೀವನ ಪಾವನವು...
ದುಡಿದರೇ ಜೀವನ ಪಾವನವು
ಆತ್ಮದ ಶಕ್ತಿಯ ಗಳಿಸೋಣ ಜೊತೆಯಲಿ ಸ್ಫೂರ್ತಿಯ ಬೆರೆಸೋಣ
ಜಾಗೃತಿ ಗೀತೆಯ ಹಾಡೋಣ
ದೇಶದ ಆಸ್ತಿಯಾ ಬೆಳೆಸೋಣ ಒಮ್ಮತದಿಂದ ಮಾಡುತಲಿ
ನವ ಭಾರತದ ನಿರ್ಮಾಣವನೇ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ ಜೈ ಜೈ ಭೂ ಮಾತೆ
ನಿರ್ಬಲರಾದ ದೀನರಿಗೆ ನೀಡುವ ನಾವು ಸಹಾಯ...
ನೀಡುವ ನಾವು ಸಹಾಯ
ಒಗ್ಗಟ್ಟಿದ್ದರೆ ನಮ್ಮೊಳಗೇ ನಾಡಿಗೆ ಇಲ್ಲ ಅಪಾಯ...
ನಾಡಿಗೆ ಇಲ್ಲ ಅಪಾಯ
ಬೆವರನು ಬೆರೆಸಿ ಭೂಮಿಯಲಿ ನೆಡುವ ಭಕ್ತಿಯ ಬೀಜಗಳ
ನೆಡುವ ಭಕ್ತಿಯ ಬೀಜಗಳ
ಬೆವರಿನ ಹನಿಗಳ ಫಲವಾಗಿ ಪಡೆಯುವ ಅನ್ನದ ಮುತ್ತುಗಳ
ಪಡೆಯುವ ಅನ್ನದ ಮುತ್ತುಗಳ
ಹಸಿವಿನ ಹೆಸರನೆ ಅಳಿಸೋಣ ಎಲ್ಲರ ಉಸಿರನು ಉಳಿಸೋಣ
ಎಲ್ಲಿಯೂ ಹಸಿರನು ಕಾಣೋಣ ಮುಖದಲಿ ಹೊಸ ನಗೆ ಮೆರೆಸೋಣ
ಭಾರತ ಮಾತೆಗೆ ತೋಡಿಸೋಣ ಕನ್ನಡ ಚಿನ್ನದ ಮುಕಟವನೇ
ಜೈ ಜೈ ಭಾರತ ಮಾತೆ ಜೈ ಜೈ ಜೈ ಜೈ ಭೂ ಮಾತೆ
ಜೈ ಜೈ ಭಾರತ ಮಾತೆ ಜೈ ಜೈ ಜೈ ಜೈ ಭೂ ಮಾತೆ
-------------------------------------------------------------------------------------------------------------------------
ಮಣ್ಣಿನ ಮಗ (1968) - ಮೆಲ್ಲಗೆ ನಡೆಯೊಳೇ
ಸಂಗೀತ - ವಿಜಯ ಭಾಸ್ಕರ ಸಾಹಿತ್ಯ - ಗೀತಪ್ರಿಯ ಧ್ವನಿ - ಪಿ.ಸುಶೀಲಾ
ಮೆಲ್ಲಗೆ ನಡೆಯೊಳೇ, ಮಲ್ಲಿಗೆ ಮುಡಿಯೊಳೆಗಲ್ಲದಿ ಲಜ್ಜೆಯ ತೋರೊಳೆ
ಗಲ್ಲದಿ ಲಜ್ಜೆಯ ತೋರೊಳೆ ... ಗೌರಮ್ಮ
ನಿನಗಾಗೋ ಗಂಡನ ಹೆಸರ ಹೇಳೇ
ಹೂವಂತ ಮೈಯೊಳೇ.. ಹಾವಂತ ಜಡೆಯೊಳೆ...
ಬಳುಕುವ ಸಣ್ಣನೇ ನಡುವೊಳೆ
ಹೂವಂತ ಮೈಯೊಳೇ.. ಹಾವಂತ ಜಡೆಯೊಳೆ
ಬಳುಕುವ ಸಣ್ಣನೇ ನಡುವೊಳೆ
ಈ ಬಿಂಕ ಬಿನ್ನಾಣ ಇನ್ನೇಕೆ ನನ್ ಚಿನ್ನ
ಕೆನ್ನೇಲಿ ಕೆಂಬಣ್ಣ ತುಂಬದೊಳೇ...
ಕೆನ್ನೇಲಿ ಕೆಂಬಣ್ಣ ತುಂಬದೊಳೇ... ಗೌರಮ್ಮಾ
ನಿನಗಾಗೋ ಗಂಡನ ಹೆಸರೆಳೇ
ಮೆಲ್ಲಗೆ ನಡೆಯೊಳೇ, ಮಲ್ಲಿಗೆ ಮುಡಿಯೊಳೆಗಲ್ಲದಿ ಲಜ್ಜೆಯ ತೋರೊಳೆ
ಗಲ್ಲದಿ ಲಜ್ಜೆಯ ತೋರೊಲೇ... ಗೌರಮ್ಮ
ನಿನಗಾಗೋ ಗಂಡನ ಹೆಸರೆಳೇ
ಮನದಾಗೆ ಏನೇನೋ ಮೆಲ್ಲೋಳೆ
ಮುಸು ಮುಸು ನಗುವೋಳೇ ಹುಸಿ ಕೋಪ ತೋರೊಳೇ
ಮನದಾಗೆ ಏನೇನೋ ಮೆಲ್ಲೋಳೆ
ಜತೆಗಾರ ಬಂದಾಗ ನೀ ಮುಂದೆ ನಿಂತಾಗ
ನನ್ ಕಣ್ಣೇ ಕನ್ನಡಿ ಎನ್ನೋಳೆ...
ನನ್ ಕಣ್ಣೇ ಕನ್ನಡಿ ಎನ್ನೋಳೆ ಗೌರಮ್ಮ...
ನಿನಗಾಗೋ ಗಂಡನ ಹೆಸರೆಳೇ
-------------------------------------------------------------------------------------------------------------------------ಮಣ್ಣಿನ ಮಗ (1968) - ಮೆಲ್ಲಗೆ ನಡೆಯೊಳೇ
ಸಂಗೀತ - ವಿಜಯ ಭಾಸ್ಕರ ಸಾಹಿತ್ಯ - ಗೀತಪ್ರಿಯ ಧ್ವನಿ - ಪಿ.ಬಿ.ಶ್ರೀನಿವಾಸ
ಅಳುತಿಹುದು ಮಾನವತೆ ನಗುತಿಹುದು ದಾನವತೇ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ.... ಓ.. ಧರ್ಮ ದೇವತೆ
ಅಳುತಿಹುದು ಮಾನವತೆ ನಗುತಿಹುದು ದಾನವತೇ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
ಅಳುತಿಹುದು ಮಾನವತೆ ನಗುತಿಹುದು ದಾನವತೇ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
ಹುಲಿಗಳು ಮೆರೆಯುತಿರೆ ವೇಷದಲಿ ಗೋವಿನ
ಶತೃವು ಇರುವನು ರೂಪದಲಿ ಮಿತ್ರನ
ಹುಡುಕುವೆಯಾ ಅಮೃತವ ಹಲ್ಲಿನಲಿ ಹಾವಿನ
ತ್ಯಾಗಿಗಳಿಗೆ ಎಲ್ಲಿದೆ ಜಗದಿ ಮಾನ್ಯತೆ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
ಲೋಕವೆಲ್ಲಾ ತುಂಬಿರೇ ವಂಚಕರ ಆಟವೇ..
ನ್ಯಾಯವನ್ನು ನಂಬಿಹ ಜನಕೆ ನ್ಯಾಯ ಬೇಡವೇ
ಎಂದು ಜಗವ ಹೇಳುತಿರಲು ಇಂದು ನೀತಿ ದೇವತೆ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
ಒಂದು ಮನೆಯ ಉರುಳಿಸಿ ತಾನು ಮಹಡಿ ಕಟ್ಟುವ
ತಾನು ಮಾತ್ರ ಉಳಿಯಲು ಪರರ ತಲೆಯ ಮೆಟ್ಟುವಾ
ಪರರ ಸುಖವ ಅಳಿಸುತಾ ತನ್ನ ಸುಖವ ಬೆಳೆಸುವಾ
ವಂಚಕರ ಆಶ್ರಯದಿ ಬೆಳೆಯುತಿರೆ ಧೂರ್ತತೆ
ಸೋತೆಯಾ ಅಧರ್ಮಕೆ ಧರ್ಮ ದೇವತೆ
ಓ.. ಧರ್ಮ ದೇವತೆ
------------------------------------------------------------------------------------------------------------------------
This was very useful. Thanks again.
ReplyDeleteಧನ್ಯವಾದಗಳು ಒಂದೋಳ್ಳೆ ಕೆಲಸ......
ReplyDeleteಒಳ್ಳೆಯ ಸಾಹಿತ್ಯವನ್ನು ಒದಗಿಸುತ್ತಿದ್ದೀರಿ ಧನ್ಯವಾದಗಳು
ReplyDelete