329. ಮಂತ್ರಾಲಯ ಮಹಾತ್ಮೆ (1966)



ಮಂತ್ರಾಲಯ ಮಹಾತ್ಮೆ ಚಿತ್ರದ ಹಾಡುಗಳು 
  1. ತುಂಗಾತೀರ ವಿರಾಜಂ 
  2. ಕಾವ್ಯರತಿ ಮಂದಿರದ ಪ್ರತಿಭಾನ್ವಿತ 
  3. ಆಭರಣದ ಅಲಂಕಾರವೇನು ಇಲ್ಲದೇ 
  4. ಕಲಿಯರೊಂದು ಪಾಠವನ್ನು ಕನ್ನಡ ತಾಯೇ ಮಕ್ಕಳೇ 
  5. ನೀನು ಬರಲಿಲ್ಲಾ ನಿನ್ನ ನೆಲೆಯ ಹೇಳಲಿಲ್ಲಾ 
  6. ರಸಿಕ ಸಾಲದೇ ರಸದ ಔತಣ 
  7. ಇಂದು ಎನಗೆ ಗೋವಿಂದ  
ಮಂತ್ರಾಲಯ ಮಹಾತ್ಮೆ (1966) - ತುಂಗಾತೀರಂ ವಿರಾಜಂ ಭಜಮನ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ:ರಾಜಗುರು ರಾಜಾಚಾರ್ಯರು ಹಾಡಿದವರು: ಪಿ.ಬಿ.ಶ್ರೀನಿವಾಸ್

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ
ರಾಘವೇಂದ್ರ ಗುರುರಾಜಂ ಭಜಮನ

ತುಂಗಾತೀರಂ ವಿರಾಜಂ ಭಜಮನ
ಮಂಗಳಕರ ಮಂತ್ರಾಲಯ ವಾಸಂ
ಶೃಂಗಾರಾನನ  ರಾಜಿತ ಹಾಸಂ
ರಾಘವೇಂದ್ರ ಗುರುರಾಜಂ ಭಜಮನ
ಕರಧೃತ ದಂಡ ಕಮಂಡಲ ಮಾಲಂ 

ಸುರಚಿರ ಚೇತಂ ಧೃತಮಣಿ  ಮಾಲಂ
ನಿರುಪಮ ಸುಂದರಾಕಾರ ಸುಶೀಲಂ
ವರಕಮಲೇಶಾರ್ಪಿತ ನಿಜ ಸಕಲಂ

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯೀನೇ
ಶ್ರೀ ಮಧ್ವೆಂಕಟನಾಥಾಯ ಶ್ರೀನಿವಾಸಾಯ ಮಂಗಳಂ

ಗೂಟನಾಮಾವನಿಟ್ಟು ಆಟ್ಟಿರುವೆ ಶ್ರೀ ಹರಿಯೇ
ದಾಸಕೂಟದ ಜನರ ಸಂತೈಸೆ ನೀನರಿಯೇ
ದಾನಿಯ ಕೈಗೇಕೆ ಬರಿಜೋಳಿಗೆಯ ನೀಡಿದೇ
ಧನಿಕನ ಮನೆಗೇಕೆ ಸತಿಯನ್ನೇ ಕಳುಹಿದೆ
ಮಾನವಂತರು ನಿನ್ನ ಭಕ್ತರೆಂದರಿಯದಾ
ದನಕಾಯುವ ಗೊಲ್ಲ ನೀನೇ ಗತಿಯೆಂದು ನಂಬಿದೆ
ಶ್ರವಣ ಕೀರ್ತನ ಸ್ಮರಣೆಯೇ ತಾಯ ಹಾಲು ನಿನಗೆ
ಸೇವ್ಯಾರ್ಚನಾ ವಂದನವಂದನೆಯೇ ನವನೀತ ನಿನಗೆ
ದಾಸ್ಯ ಸಖ್ಯ ನಿವೇದನೆಯೇ ಮೃಷ್ಟಾನ್ನ ಕಣ್ಮನಿಗೇ
ವ್ಯಾಸ ಋಷಿ ಪುಂಗವನ ಅವತಾರಿ ಚಲುವಂಗೆ

ಧ್ಯಾನಮೇವ ಕೃತೇ ಶ್ರೇಷ್ಠಮ್ ತ್ರೇತಾಯಾಂ ಯಜ್ಞಮೇವಾಚಾ
ದ್ವಾಪರೇಚಾರ್ಹನಂ ತಿಷ್ಯೆ ದಾನಂಚ ಹರಿಕೀರ್ತನಂ
ಸರ್ವಂಚ ಶಸ್ತಮ್  ಸರ್ವತ್ರ ಧ್ಯಾನಂ ನೈವ ಕಲೌಯುಗೇ
ನರಾಣಂ  ಮುಗ್ದ ಚಿತ್ತತ್ವಾತ ಕಲಿಸ್ಥಾನಂ ವಿಶಾಂಪತೇ
------------------------------------------------------------------------------------------------------------------------

ಮಂತ್ರಾಲಯ ಮಹಾತ್ಮೆ (1966) - ಕಾವ್ಯರತಿಮಂದಿರದ ಪ್ರತಿಭಾನ್ವಿತ.. 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಜಿ.ವಿ.ಅಯ್ಯರ್  ಹಾಡಿದವರು: ಪಿ.ಲೀಲಾ, ವೀರಮಣಿ

ಹೆಣ್ಣು : ಕಾವ್ಯರತಿಮಂದಿರದ ಪ್ರತಿಭಾನ್ವಿತ.. 
          ಕಾವ್ಯರತಿಮಂದಿರದ ಪ್ರತಿಭಾನ್ವಿತ.. 
          ದಿವ್ಯ ನಾಟ್ಯಕೆ ಎಣೆಯೇ ನಿಮ್ಮಯ ಪಾಂಡಿತ್ಯ 
          ನವ್ಯ ನವ ಲಯ ತಾನ ಸ್ವರಗಳ ಸಮ್ಮಿಲನ
          ಭವ್ಯ ಮೇಳ ಕರ್ತೃವಿದು ಆವ ರಾಗದಲಿ ಜನ್ಯ 
          ಕಾವ್ಯರತಿಮಂದಿರದ ಪ್ರತಿಭಾನ್ವಿತ.. 
ಗಂಡು : ಗಾಂಧಾರ ದೇಶದಲಿ ಚಲಿಸಲಾರದ ಇವಳು..
           ಕೈಶಿಕ ನಿಷಾದದಲಿ ಕೆಳಗಿಳಿದು ಬರುವಳು
           ವಾಚಸ್ಪತಿಯ ಮಗಳು ಆಆಆಆ ... 
           ವಾಚಸ್ಪತಿಯ ಮಗಳು ಸರಸ್ವತಿ ಎಂಬಿವಳು..
           ವಾಚಸ್ಪತಿಯ ಮಗಳು ಸರಸ್ವತಿ ಎಂಬಿವಳು..
           ವರದ ಹಸ್ತದೆ ಎನ್ನ ಹರಸೆ ಬಂದಿರುವಳು 
           ಸಾರಿಮರಿ ಸರಿಸನಿದಪಮಪನಿದಸರಿ ಸನಿದ 
           ದನಿದಪಮ ರಿಮಪದ ಸರಿಮರಿಸನಿ ದಸರಿಸನಿದ 
           ಮಮಮಮಮಮ ದದದದದದ ದಸರಿ ಸನಿದ ಪದನಿ ದಪಮ 
           ರಿರಿರಿರಿರಿರಿ ಮಮಮಮ ಸರಿ ಸನಿದಪದನಿ ಸನಿದಪಮ ರಿಮದ ಪದಪಮ ರಿರಿಮ 

ಹೆಣ್ಣು :ಆ... ಆ... ಆವ ರಾಗದೆ ರಿಷಭ ಪಂಚಮ ವರ್ಜ್ಯವು.. 
         ಆವ ರಾಗದೇವತೆಯ ಕಾರುಣ್ಯದ ಶಿಶುವೋ... 
         ಆವ ರಾಗದೆ ರಿಷಭ ಪಂಚಮ ವರ್ಜ್ಯವು.. 
         ಆವ ರಾಗದೇವತೆಯ ಕಾರುಣ್ಯದ ಶಿಶುವೋ... 
ಗಂಡು : ಋಷಭ ಪರಮೇಶ್ವರರ ಮರೆತು ಉಯ್ಯಾಲೆಯಲಿ.. ... 
           ಋಷಭ ಪರಮೇಶ್ವರರ ಮರೆತು ಉಯ್ಯಾಲೆಯಲಿ.. ... 
          ನಟಭೈರವಿಯ ಕಂದ ಹಿಂದೋಳವಿಹುದಿಲ್ಲಿ .... 
          ತಾಂ ತಕಿಟ ಝಣು ತರಿ ತಕ ಝಣು ತಾಂ ತಕ ಝಣು ತಾಂ 
         ತಕಿಟ ತಾಂ ತಕ ತಾಂ ತತಾಂ ತತ್ತರಿ ತಕ ಝಝಣ ತಕ ಝಝಣು 
         ತರಿಗಿಡತಾಂ ತರಿಗಿಡತಾಂ ತರಿಗಿಡತಾಂ ಮಪ್ಪರಿಸ್ಸ ಸರಿಮರಿ ಸರಿಸನಿದ 
        ಈ ಅಖಾಡದಲಿ ಮಿಡಿಯುವ ಸ್ವರಕೆ ಪದನಿದ ಸನಿ ನಿಸನಿಪ ನಿನಿಪಮ 
        ಕಾವ್ಯ ನಾಟ್ಯದಲಿ ಇರುವುದೆ ನಡಿಗೆ ರಿಮರಿಸ ಸರಿಮ ಮಪನಿದ
ಹೆಣ್ಣು : ಕಾವ್ಯರತಿಮಂದಿರದ ಪ್ರತಿಭಾನ್ವಿತ.. 
          ದಿವ್ಯ ನಾಟ್ಯಕೆ ಎಣೆಯೇ ನಿಮ್ಮಯ ಪಾಂಡಿತ್ಯ 
          ನವ್ಯ ನವ ಲಯ ತಾನ ಸ್ವರಗಳ ಸಮ್ಮಿಲನ
          ಭವ್ಯ ಮೇಳ ಕರ್ತೃವಿದು ಆವ ರಾಗದಲಿ ಜನ್ಯ 
          ಕಾವ್ಯರತಿಮಂದಿರದ ಪ್ರತಿಭಾನ್ವಿತ.. 
----------------------------------------------------------------------------------------------------------------

ಮಂತ್ರಾಲಯ ಮಹಾತ್ಮೆ (1966) - ಆಭರಣದ ಅಲಂಕಾರವೇನು 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ:ಜಿ.ವಿ.ಅಯ್ಯರ ಹಾಡಿದವರು: ಎಸ್.ಜಾನಕೀ, ಎಲ್.ಆರ್.ಈಶ್ವರೀ  

ಆಭರಣದ ಅಲಂಕಾರವೇನು ಇಲ್ಲದೇ ಇಂದು
ಯಾವುದೋ ಒಂದು ಹೊಸ ಕಳೆಯು ಎಲ್ಲಿಂದ ಬಂತು
ಆಭರಣದ ಅಲಂಕಾರವೇನು ಇಲ್ಲದೇ ಇಂದು
ಯಾವುದೋ ಒಂದು ಹೊಸ ಕಳೆಯು ಎಲ್ಲಿಂದ ಬಂತು
ಹುಂ ಹುಂ ಹುಂ ಆಆಆಅ..... 
ಹೇಳಲಾಗದ ಸೊಬಗಿನ ಆಭರಣ ಒಂದನು 
ಜೇನಿನ ಹೊಳೆಯಲ್ಲಿ ನಾ ಮುಳುಗಿ ತಂದೆನು 
ಆಭರಣದ ಅಲಂಕಾರವೇನು ಇಲ್ಲದೇ ಇಂದು
ಯಾವುದೋ ಒಂದು ಹೊಸ ಕಳೆಯು ಎಲ್ಲಿಂದ ಬಂತು

ಇನಿಯನ ಕೊರಳನ್ನು ಮುಡಿಯ ಹೂ ಬಳಸಿತೇ 
ಇನಿಯನ ಕೊರಳನ್ನು ಮುಡಿಯ ಹೂ ಬಳಸಿತೇ 
ಬಳಸಿದ ಅಲೆಗಳಲಿ ಮೂಡಿದ ಹೂವು ಕದಲಿತು 
ಹಣೆಯ ಕುಂಕುಮವನ್ನು ಕಿರುಬೆವರು ಕಲಸಿತೇ 
ಹಣೆಯ ಕುಂಕುಮವನ್ನು ಕಿರುಬೆವರು ಕಲಸಿತೇ 
ಸವಿನೋವ ಸುಳಿಯಲ್ಲಿ ಹಣೆಬೆವರೇ ನಿಂದಿತು 
ಹಣೆಬೆವರೇ ನಿಂದಿತು
ಆಭರಣದ ಅಲಂಕಾರವೇನು ಇಲ್ಲದೇ ಇಂದು
ಯಾವುದೋ ಒಂದು ಹೊಸ ಕಳೆಯು ಎಲ್ಲಿಂದ ಬಂತು

ಹರೆಯದ ಎದೆ ಮಾತನ್ನು ಇನಿಯನ ಎದೆ ಆಲಿಸಿತೇ
ಹರೆಯದ ಎದೆ ಮಾತನ್ನು ಇನಿಯನ ಎದೆ ಆಲಿಸಿತೇ
ಎನ್ನ ಹಿಂದಕೆ ತಳ್ಳಿ ಎದೆ ಮಾತನಾಡಿತು 
ನಿನ್ನ ಕುಂಕುಮ ತಿಲಕ ಅವನೆದೆಯಲಿ ಉಳಿಯತೇ  
ನಿನ್ನ ಕುಂಕುಮ ತಿಲಕ ಅವನೆದೆಯಲಿ ಉಳಿಯತೇ  
ತನ್ನ ಕುರುಹಾಗಿರಲೂ ಕುಂಕುಮವ ಒತ್ತಿತು.... ಕುಂಕುಮವ ಒತ್ತಿತು 
ಆಭರಣದ ಅಲಂಕಾರವೇನು ಇಲ್ಲದೇ ಇಂದು
ಯಾವುದೋ ಒಂದು ಹೊಸ ಕಳೆಯು ಎಲ್ಲಿಂದ ಬಂತು
ಹೇಳಲಾಗದ ಸೊಬಗಿನ ಆಭರಣ ಒಂದನು 
ಜೇನಿನ ಹೊಳೆಯಲ್ಲಿ ನಾ ಮುಳುಗಿ ತಂದೆನು 
ಆಭರಣದ ಅಲಂಕಾರವೇನು ಇಲ್ಲದೇ ಇಂದು
ಯಾವುದೋ ಒಂದು ಹೊಸ ಕಳೆಯು ಎಲ್ಲಿಂದ ಬಂತು
 -------------------------------------------------------------------------------------------------------------------------

ಮಂತ್ರಾಲಯ ಮಹಾತ್ಮೆ (1966) - ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳೆ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಜಿ.ವಿ.ಅಯ್ಯರ ಹಾಡಿದವರು: ಪಿ.ಬಿ.ಶ್ರೀನಿವಾಸ್

ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳೆ
ಕಲ್ಲ ಕಡೆದು ಮೂರ್ತಿ ಮಾಡೊ ಎನ್ನ ಪುಟ್ಟ ಶಿಲ್ಪಿಗಳೆ
ಕಲಿಯಿರೊಂದು ಪಾಠವನ್ನು

ವಿದ್ಯೆಯಲ್ಲೆ ವಿನಯವಿದೆ, ವಿನಯದಲ್ಲೆ ಕೀರ್ತಿ ಇದೆ
ವಿದ್ಯೆಯಲ್ಲೆ ವಿನಯವಿದೆ, ವಿನಯದಲ್ಲೆ ಕೀರ್ತಿ ಇದೆ
ನಿಮ್ಮ ಕೈಯ ಮುಷ್ಠಿಯೊಳಗೆ ತಾಯ ಬಯಕೆ ಬಹಳವಿದೆ
ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳೆ

ವಿಜಯನಗರದಲ್ಲಿ ವಿದ್ಯಾರಣ್ಯರೆಂಬ ಒಬ್ಬರು
ಮಣ್ಣ ತಾಯ ಕಣ್ಣ ನೀರ ತೊಡೆಯೆ ತಾನೆ ನಿಂದರು
ವಿಜಯನಗರದಲ್ಲಿ ವಿದ್ಯಾರಣ್ಯರೆಂಬ ಒಬ್ಬರು
ಮಣ್ಣ ತಾಯ ಕಣ್ಣ ನೀರ ತೊಡೆಯೆ ತಾನೆ ನಿಂದರು
ಎಳೆಯತನದೆ ಎಲ್ಲ ವಿದ್ಯೆ ಕಲಿತು ಯೋಗಿಯಾದರು
ಎಳೆಯತನದೆ ಎಲ್ಲ ವಿದ್ಯೆ ಕಲಿತು ಯೋಗಿಯಾದರು
ಕನ್ನಡ ತಾಯ್ ಮಾಡಿಲ ತುಂಬ ಹೊನ್ನ ಮಳೆಯ ಸುರಿಸಿದರು
ಕನ್ನಡ ತಾಯ್ ಮಾಡಿಲ ತುಂಬ ಹೊನ್ನ ಮಳೆಯ ಸುರಿಸಿದರು
ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳೆ

ಇಮ್ಮಡಿ ಪುಲಕೇಶಿಯಂತೆ ನೀವು ವೀರರಾಗಬೇಕು
ವ್ಯಾಸರಾಯರಂತೆ ನೀವು ಪದವಿ ಮೋಹ ಬಿಡಬೇಕು
ಇಮ್ಮಡಿ ಪುಲಕೇಶಿಯಂತೆ ನೀವು ವೀರರಾಗಬೇಕು
ವ್ಯಾಸರಾಯರಂತೆ ನೀವು ಪದವಿ ಮೋಹ ಬಿಡಬೇಕು
ತ್ಯಾಗ ಬುದ್ಧಿಯಿಂದ ನೀವು ತಾಯ ಸೇವೆ ಮಾಡಬೇಕು
ತ್ಯಾಗ ಬುದ್ಧಿಯಿಂದ ನೀವು ತಾಯ ಸೇವೆ ಮಾಡಬೇಕು
ಕಲಿತು ಕಲಿಗಳಾಗಬೇಕು ನಾಳೆ ನಾಡನಾಳಬೇಕು
ಕಲಿತು ಕಲಿಗಳಾಗಬೇಕು ನಾಳೆ ನಾಡನಾಳಬೇಕು
ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳೆ
ಕಲ್ಲ ಕಡೆದು ಮೂರ್ತಿ ಮಾಡೊ ಎನ್ನ ಪುಟ್ಟ ಶಿಲ್ಪಿಗಳೆ
ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳೆ
------------------------------------------------------------------------------------------------------------------------

ಮಂತ್ರಾಲಯ ಮಹಾತ್ಮೆ (1966) - ಮುಕುಂದಾ... ಮುಕುಂದಾ...
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಜಿ.ವಿ.ಅಯ್ಯರ ಹಾಡಿದವರು: ಪಿ.ಬಿ.ಶ್ರೀನಿವಾಸ್

ಮುಕುಂದಾ... ಮುಕುಂದಾ...
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ
ಜಾಣನಾಗಲಿಲ್ಲ ನೀ ಬಳಿ ಇರುವ ಸಮಯವೆಲ್ಲಾ  
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ
ನಿನ್ನಯ ದಿನ ಬಂದು ನೀನೇ ನಾಳೆ ಬರುವೇನೆಂದೇ
ನಿನ್ನಯ ನಗು ಮೊಗದ ಮುಂದೆ ಮೂಕನಾದೆ ಹೋದೇ
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ

ಮುಕುಂದಾ... ಮುಕುಂದಾ... ಮುಕುಂದಾ... ಮುಕುಂದಾ...
ಬಾಳಿನೊಂದು ಕನಸು ನೀನಾಗಿ ಬಂದೆ ಏಕೇ 
ಈ ಬಾಳಿಗೆ ಕನಸಾಗಿ ನೀ ಮಾಡಿ ಹೋದೆ ಏಕೇ 
ನೋವಿನೂರಿಗೆ ಅಂಜಿ ನೀ ಓಡಿ ಹೋಗಬೇಕೇ 
ನೋವಿನೊಳಗೆ ನಾವ್ ಎನ್ನೊಳಿಟ್ಟೆ ಏಕೇ 
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ 

ರಕ್ತ ಗಾಯವಿಲ್ಲಾ ಆದರೂ ನೋವೂ ಮೀರೀತಲ್ಲಾ 
ಬೆಂಕಿ ಬೇಗೆ ಅಲ್ಲ ಏನೋ ಬೇಯುಸುತಿದೆಯಲ್ಲಾ 
ದಾಹ ನೀರ ಅದ ಅಲ್ಲಾ ಯಾಕೋ ಬಾಯಾರಿಕೆ ಬಿಡಲಿಲ್ಲಾ 
ದೇಹ ಹಸಿವು ಇಂಗುವಂತದಲ್ಲಾ ನೀ ಬಂದು ಇಂಗಿಸಬೇಕಲ್ಲಾ 
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ
ಜಾಣನಾಗಲಿಲ್ಲ ನೀ ಬಳಿ ಇರುವ ಸಮಯವೆಲ್ಲಾ  
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ 
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ
ನೀನು ಬಾರಲಿಲ್ಲಾ.. ನಿನ್ನ ನೆನೆಯ ಹೇಳಲಿಲ್ಲ 
-------------------------------------------------------------------------------------------------------------------------

ಮಂತ್ರಾಲಯ ಮಹಾತ್ಮೆ (1966) - ರಸಿಕ ಸಾಲದೇ ಗತದಾ ಔತಣ
ಸಂಗೀತ: ರಾಜನ್-ನಾಗೇಂದ್ರ 
ಸಾಹಿತ್ಯ:ಜಿ.ವಿ.ಅಯ್ಯರ ಹಾಡಿದವರು: ಎಸ್.ಜಾನಕೀ,

ಲಲ್ಲ ಲಲ್ಲಲಾ ಓಓಓಓಓ.ಲಲ್ಲ ಲಲ್ಲ ಲಲ್ಲ ಲಾ...
ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ್ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೇ
ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ್ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೇ
ರಸಿಕ ಸಾಲದೇ...  

ಆಆಆ... ಪ್ರೇಮದ ಬಳ್ಳಿ ವಾಲಿದೇ ಮುಂದೆ
ಯೌವ್ವನದಾ  ಚೆಲುವೆಲ್ಲ ಚೆಲ್ಲ ಮಾಡದೇ
ಪ್ರೇಮದ ಬಳ್ಳಿ ವಾಲಿದೇ ಮುಂದೆ
ಯೌವ್ವನದಾ  ಚೆಲುವೆಲ್ಲ ಚೆಲ್ಲ ಮಾಡದೇ
ಸರಸಕೆ ಸಮಯ ತಿಳಿಸುವೆ ನಾನೀ 
ಆನಂದವೇ ನೀಡು ಆಗ ನೀನು ಹೇಳುವೇ 
ರಸಿಕ ಸಾಲದೇ ರಸದಾ ಔತಣ
ಬಿಡು ಎನ್ನ ಸೆರಗ್ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೇ
ರಸಿಕ ಸಾಲದೇ ...
ತೀರದ ಬಯಕೆ ತೀರಿಸಲಾರನೇ
ಯಾರಿಗೂ ಕಾಣದೇ ಓಡಿ ಬಂದು ಕೂಗೇನೇ
ತೀರದ ಬಯಕೆ ತೀರಿಸಲಾರನೇ
ಯಾರಿಗೂ ಕಾಣದೇ ಓಡಿ ಬಂದು ಕೂಗೇನೇ
ಹರೆಯದ ಸ್ಥಳದ ಬೆಳದಿಂಗಳೇ ನೀ 
ಹೂವಿನ ಉಯ್ಯಾಲೆಯಲಿ ನಿನ್ನ ತೂಗಿ ಹಾಡಲೇ 
ರಸಿಕ ಸಾಲದೇ ರಸದಾ ಔತಣ
ಬಿಡು ಎನ್ನ ಸೆರಗ್ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೇ
ರಸಿಕ ಸಾಲದೇ ರಸದಾ ಔತಣ ರಸಿಕಾ.... 
-------------------------------------------------------------------------------------------------------------------------

ಮಂತ್ರಾಲಯ ಮಹಾತ್ಮೆ (1966) ಇಂದು ಎನಗೆ ಗೋವಿಂದ
ಸಂಗೀತ : ರಾಜನ್-ನಾಗೇಂದ್ರ 
ಸಾಹಿತ್ಯ : ಶ್ರೀ ರಾಘವೇಂದ್ರಸ್ವಾಮಿಗಳು ಗಾಯನ : ಪಿ.ಬಿ.ಶ್ರೀನಿವಾಸ್

ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ
ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ
ಸುಂದರ ವದನನೇ ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ....
ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ

ನೊಂದೇನಯ್ಯ..  ಭವಬಂಧನದೊಳು ಸಿಲುಕಿ
ನೊಂದೇನಯ್ಯ..  ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದ್ರಪ್ಪಾ ..ಜನಕನೇ...
ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ

ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...ಸೇರಿದೆ ಕುಜನರಾ
ಆರುಕಾಯುವರಿಲ್ಲ ಸಾರಿದೆ ನಿನಗಯ್ಯ
ಆರುಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ...
ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ
--------------------------------------------------------------------------------------------------------------------

1 comment:

  1. ಶ್ರೀಯುತ ಸಂದೀಪ ಕುಲಕರ್ಣಿಯವರೆ,

    ಮಂತ್ರಾಲಯ ಮಹಾತ್ಮೆ ೧೯೬೬ ಚಿತ್ರದ ’ಕಾವ್ಯರತಿ ಮಂದಿರದ ಪ್ರತಿಭಾನ್ವಿತ’ ಗೀತೆಯ ಸಾಹಿತ್ಯ ತಪ್ಪುಗಳಿಂದ ಕೂಡಿದೆ. ಸ್ವಲ್ಪ ಸಂಗೀತ ಬಲ್ಲವರು ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ. ದಯವಿಟ್ಟು ಅದನ್ನು ಕೆಳಗೆ ತೋರಿಸಿರುವಂತೆ ಸರಿಪಡಿಸಿ. ನಿಮ್ಮ ಅವಗಾಹನೆಗಾಗಿ ಗೀತೆಯ ಅರ್ಥವನ್ನು ಇಂಗ್ಲೀಷ್ ನಲ್ಲಿ ಕೊಟ್ಟಿರುತ್ತೇನೆ. ದಯವಿಟ್ಟು ಸರಿಪಡಿಸಿ ಪ್ರಕಟಿಸಿ.


    ಚಿತ್ರ: ಮಂತ್ರಾಲಯ ಮಹಾತ್ಮೆ ೧೯೬೬
    ಗಾಯನ: ವೀರಮಣಿ/ಪಿ ಲೀಲ
    ಸಂಗೀತ: ರಾಜನ್-ನಾಗೇಂದ್ರ
    ಸಾಹಿತ್ಯ: ಜಿ ವಿ ಅಯ್ಯರ್

    ಕಾವ್ಯರತಿಮಂದಿರದ ಪ್ರತಿಭಾನ್ವಿತ..
    ದಿವ್ಯ ನಾಟ್ಯಕೆ ಎಣೆಯೇ ನಿಮ್ಮಯ ಪಾಂಡಿತ್ಯ
    ನವ್ಯ ನವ ಲಯ ತಾನ ಸ್ವರಗಳ ಸಮ್ಮಿಲನ
    ಭವ್ಯ ಮೇಳಕರ್ತೃವಿದು ಆವ ರಾಗದಲಿ ಜನ್ಯ /ಕಾವ್ಯ/

    ಗಾಂಧಾರ ದೇಶದಲಿ ಚಲಿಸಲಾರದ ಇವಳು..
    ಕೈಶಿಕ ನಿಷಾದದಲಿ ಕೆಳಗಿಳಿದು ಬರುವಳು
    ವಾಚಸ್ಪತಿಯ ಮಗಳು ಆ...
    ಸರಸ್ವತಿ ಎಂಬಿವಳು..
    ವರದ ಹಸ್ತದೆ ಎನ್ನ ಹರಸೆ ಬಂದಿರುವಳು
    ಸಾರಿಮರಿ ಸರಿಸನಿದಪಮಪನಿದಸರಿ ಸನಿದ ದನಿದಪಮ ರಿಮಪದ
    ಸರಿಮರಿಸನಿ ದಸರಿಸನಿದ ಮಮಮಮಮಮ ದದದದದದ
    ದಸರಿ ಸನಿದ ಪದನಿ ದಪಮ ರಿರಿರಿರಿರಿರಿ ಮಮಮಮ
    ಸರಿ ಸನಿದಪದನಿ ಸನಿದಪಮ ರಿಮದ ಪದಪಮ ರಿರಿಮ
    ಆ... ಆ...
    ಆವ ರಾಗದೆ ರಿಷಭ ಪಂಚಮ ವರ್ಜ್ಯವು..
    ಆವ ರಾಗದೇವತೆಯ ಕಾರುಣ್ಯದ ಶಿಶುವೊ..
    ಋಷಭ ಪರಮೇಶ್ವರರ ಮರೆತು ಉಯ್ಯಾಲೆಯಲಿ..
    ನಟಭೈರವಿಯ ಕಂದ ಹಿಂದೋಳವಿಹುದಿಲ್ಲಿ
    ತಾಂ ತಕಿಟ ಝಣು ತರಿ ತಕ ಝಣು ತಾಂ
    ತಕ ಝಣು ತಾಂ ತಕಿಟ ತಾಂ ತಕ ತಾಂ ತತಾಂ
    ತತ್ತರಿ ತಕ ಝಝಣ ತಕ ಝಝಣು
    ತರಿಗಿಡತಾಂ ತರಿಗಿಡತಾಂ ತರಿಗಿಡತಾಂ

    ಮಪ್ಪರಿಸ್ಸ ಸರಿಮರಿ ಸರಿಸನಿದ
    ಈ ಅಖಾಡದಲಿ ಮಿಡಿಯುವ ಸ್ವರಕೆ
    ಪದ್ದನಿದ್ದ ಸನಿ ನಿಸನಿಪ ನಿನಿಪಮ
    ಕಾವ್ಯ ನಾಟ್ಯದಲಿ ಇರುವುದೆ ನಡಿಗೆ
    ರಿಮರಿಸ ಸರಿಮ
    ಮಪನಿದ ನಿಸರಿಸ ಮರಿಸ ರಿಸನಿ ಸನಿದ
    ನಿರಿಸ ದನಿಪ ಮಪಮರಿ




    Meaning of the song:

    Genius (pratibhAnvita) of poetical architecture (kAvyaratimaMdirada)
    will your (nimma) knowledge (pAMDitya) is equal (eNeyE)
    to finest (divya) classical dance (nATyake)
    New (navya) mixture (sammilana) of nine (nava) types
    rythm (laya) harmony (tAna) notations (svaragaLa)
    this magnificent (bhavya) musical-notation (mELakatRuvidu)
    born (janya) of which (Ava) raaga (rAgadali)

    She is named 'saraswathi' (sarasvati eMbivaLu)
    daughter of 'vachaspathi' (vAcaspatiya magaLu)
    who can not step (calisalArada ivaLu) in to 'gandhara' province (gAMdhAra dEshadali)
    and came down (keLagiLidu baruvaLu) through kaishika nishada (kaishika niShAdadali)
    (in raaga 'saraswathi' ga (gandhara) is avoided)
    (sa ri ma pa da sa - sa ni da pa ma ri sa)
    and she has come (baMdiruvaLu) to bless (harase) me (enna)
    with grace (varada) hand (hastade)

    In which (Ava) raaga (rAgade) 'rishabha' and 'panchama' are avoided/deleted (varjyavu)
    sympathetic (kAruNyada) baby (shishuvo) of which (Ava) tune-god (rAgadEvateya)
    'Lord Parameshvara' and bull (rishabha) forget (maretu) on swing (uyyAlayali)
    here is 'hindola' infant (kaMda) of 'natabhairavi'
    (in raaga 'hindola' ri and pa are avoided)
    (sa ga ma da ni sa - sa ni da ma ga sa)


    for the vibrating (miDiyuva) notations (svarke) in this arena/ring (I AkhADadali)

    is there be (iruvude) equivalent steps (naDige) in poetic (kAvya) dance (nATyadali)

    View the song here:
    http://youtu.be/dsPYVSqp8jU
    Rajkumar, Radhika, and H R Shashtri and others on the screen:

    ReplyDelete