347. ಮಹಾಸತಿ ಅನಸೂಯ (1965)



ಮಹಾಸತಿ ಅನುಸೂಯ ಚಿತ್ರದ ಹಾಡುಗಳು 
  1. ನಾರಾಯಣಂ ಭಜಿರೇ 
  2. ಮದನ ಮನದನ್ನ ಮನಮೋಹನ 
  3. ಆ ದೇವ ಈ ದೇವ
  4. ಶ್ರೀಧರ ಕೇಶವ ನಾರಾಯಣ 
  5. ಕಮಲವ ಮುದ್ದಿಸಿ ತನುವನು ಅರಳಿಸಿ 
  6. ಸಮಾನರಾರಿಹರು 
  7. ಆದಿ ದೇವ ಆದಿ ಮೂಲ 
  8. ಓ ಸತಿ ಮಹಾಸತಿ 
  9. ತ್ರಿಮೂರ್ತಿ ರೂಪ ದತ್ತಾತ್ರೇಯ ತ್ರಿಗುಣ ತೀರ್ಥ 
ಮಹಾಸತಿ ಅನಸೂಯ (1965)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್

ಶ್ರೀಧರ ಕೇಶವ ನಾರಾಯಣ ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ

ಈ ಜಗವೊಂದು ನಾಟಕ ಮಂದಿರ  ಜನರೆಲ್ಲ ಸೂತ್ರ ಬೊಂಬೆಗಳಯ್ಯ
ನೀನಾಡಿಸಿದಂತೆ ಆಡುವರಯ್ಯ
ನೀನಾಡಿಸಿದಂತೆ ಆಡುವರಯ್ಯ ಲೀಲಾಮಯನು ನೀನೆ ದೇವ
ಶ್ರೀಧರ ಕೇಶವ ನಾರಾಯಣ  ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ

ಕಮಲ ರಮಣ ಪನ್ನಗ ಶಯನ  ದುರಿತ ನಿವಾರಣ ಭವ ಭಯ ಹರಣ
ಕಮಲ ರಮಣ ಪನ್ನಗ ಶಯನ
ದೀನ ಜನ ಮಂದಾರ ದಾನವ ಸಂಹಾರ
ದೀನ ಜನ ಮಂದಾರ ದಾನವ ಸಂಹಾರ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
ಲೋಕ ಲೋಕದಿ ಪೂಜಿತನಯ್ಯ  ಭಕ್ತರ ಭಕ್ತನು ನೀನಯ್ಯ
ಶ್ರೀಧರ ಕೇಶವ ನಾರಾಯಣ  ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ

ಸುರನರ ಸೇವಿತ ಲೋಕೈಕನಾಥ  ಮುನಿ ಜನ ವಂದಿತ ಮಂಗಳದಾತ
ಶ್ರೀಕಾಂತ ರಾಜಿತ  ಕರುಣಾಕರನೆ ಕಾರುಣ್ಯ ಶೀಲನೆ
ಕಾಮಿತದಾಯಕ ಗರುಡ ಗಮನ  ಎಲ್ಲರಿಗೂ ನೀನೆ ಆಧಾರವಯ್ಯ
ಆಪದ್ಬಾಂಧವ ನೀನಯ್ಯ
ಶ್ರೀಧರ ಕೇಶವ ನಾರಾಯಣ ಶ್ರೀಕರ ಶುಭಕರ ನಾರಾಯಣ
ಶ್ರೀಧರ ಕೇಶವ ನಾರಾಯಣ
-----------------------------------------------------------------------------------------------------------------------

ಮಹಾಸತಿ ಅನಸೂಯ (1965)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ್


ಆದೌ ಬ್ರಹ್ಮ ಹರಿರ್ಮಧ್ಯೆ ಅಂತ್ಯೋ ದೇವ ಸದಾಶಿವಹಃ
ಮೂರ್ತಿ ತ್ರಯತ್ವ ರೂಪಾಯ ದತ್ತಾತ್ರೇಯ ನಮೋಸ್ತುತೆ
ಕರ್ಪೂರ ಕಾಂತಿ ದೇಹಾಯ ಬ್ರಹ್ಮ ಮೂರ್ತಿ ದರಾಯಚ
ವೇದ ಶಾಸ್ತ್ರ ಪರಿಜ್ಞಾಯ  ದತ್ತಾತ್ರೇಯ ನಮೋಸ್ತುತೆ  ದತ್ತ ದೇವ ನಮೋಸ್ತುತೆ

ತ್ರಿಮೂರ್ತಿ ರೂಪ ದತ್ತಾತ್ರೇಯ    ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  ಆಶ್ರಿತ ರಕ್ಷಕ ದತ್ತಾತ್ರೇಯ
ತ್ರಿಮೂರ್ತಿ ರೂಪ ದತ್ತಾತ್ರೇಯ  ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  ಆಶ್ರಿತ ರಕ್ಷಕ ದತ್ತಾತ್ರೇಯ
ತ್ರಿಮೂರ್ತಿ ರೂಪ

ಆದಿ ದೇವನ ಅಂಶನೆ  ಆದಿ ಬ್ರಹ್ಮನ ರೂಪನೆ
ಆದಿ ದೇವನ ಅಂಶನೆ  ಆದಿ ಬ್ರಹ್ಮನ ರೂಪನೆ
ಆದಿ ಮೂಲನ ಅತ್ರಿ ಮುನೀಂದ್ರನ
ಅತಿಶಯ ಪ್ರೀತಿಯ ಅವತಾರನೆ
ತ್ರಿಮೂರ್ತಿ ರೂಪ ದತ್ತಾತ್ರೇಯ  ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  ಆಶ್ರಿತ ರಕ್ಷಕ ದತ್ತಾತ್ರೇಯ
ತ್ರಿಮೂರ್ತಿ ರೂಪ

ಸತಿಯ ಪುಣ್ಯದ ಮೂರ್ತಿಯೆ ಸರ್ವ ವೇದಗಳ ಕೀರ್ತಿಯೆ
ಸತಿಯ ಪುಣ್ಯದ ಮೂರ್ತಿಯೆ ಸರ್ವ ವೇದಗಳ ಕೀರ್ತಿಯೆ
ದಿಗಂಬರ ನಾಥ ಔದುಂಬರ ವಾಸ
ದಿಗಂಬರ ನಾಥ ಔದುಂಬರ ವಾಸ  ಜ್ಞಾನದಾತ ಗುರು ದೇವನೆ
ತ್ರಿಮೂರ್ತಿ ರೂಪ ದತ್ತಾತ್ರೇಯ  ತ್ರಿಗುಣಾತೀತ ದತ್ತಾತ್ರೇಯ
ಅನಸೂಯ ತನಯ ದತ್ತಾತ್ರೇಯ  ಆಶ್ರಿತ ರಕ್ಷಕ ದತ್ತಾತ್ರೇಯ
ತ್ರಿಮೂರ್ತಿ ರೂಪ
-----------------------------------------------------------------------------------------------------------------------

ಮಹಾಸತಿ ಅನಸೂಯ (1965)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ಎಸ್.ಹನುಮಂತ ರಾವ್  ಹಾಡಿದವರು: ಎಲ್.ಆರ್.ಈಶ್ವರಿ, ಪಿ.ಬಿ.ಶ್ರೀನಿವಾಸ್


ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ

ಬಾಳ ಬೆಳಕು ಬೆಳಗಲೆಂದು, ಸೃಷ್ಟಿಸೊಬಗ ನೋಡಲೆಂದು
ಬಾಳ ಬೆಳಕು ಬೆಳಗಲೆಂದು, ಸೃಷ್ಟಿಸೊಬಗ ನೋಡಲೆಂದು
ತಾಯಿ ಮಡಿಲ ತುಂಬಿಬಂದ, ದೇವದೇವರೆ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ

ಬುವಿಯ ಸ್ವರ್ಗ ಮಾಡಲೆಂದು, ಇಳೆಗೆ ಇಳಿದು ಬಂದು ಇಂದು
ಬುವಿಯ ಸ್ವರ್ಗ ಮಾಡಲೆಂದು, ಇಳೆಗೆ ಇಳಿದು ಬಂದು ಇಂದು
ನನ್ನ ಧನ್ಯಳಾಗಿ ಮಾಡಿದ, ಲೋಕಪಾಲರೆ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ

ವನಮಾಲಿ ಕೇಶವನೆ, ಘನಶೂಲಿ ಸದಾಶಿವನೆ
ವನಮಾಲಿ ಕೇಶವನೆ, ಘನಶೂಲಿ ಸದಾಶಿವನೆ
ಕಮಲಾಸನ ವಾಗೀಶನೆ, ತ್ರಿಮೂರ್ತಿಗಳೆ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
-------------------------------------------------------------------------------------------------------------------------

ಮಹಾಸತಿ ಅನಸೂಯ (1965)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಎಸ್.ಜಾನಕೀ, ಲತಾ, ಸುಮಿತ್ರಾ 

ಸಮಾನರಾರಿಹರು
ಸರಿ ಸಮಾನರಾರಿಹರು ಎನ್ನ ಸಮಾನರಾರಿಹರು
ಸಮಸ್ತ ಜಗದಲಿ ಯುಗಯುಗಗಳಲಿ
ಸಮಾನರಾರಿಹರು ಎನ್ನ ಸಮಾನರಾರಿಹರು

ಲೋಕದ ಶಕ್ತಿಗೆ ಕಾರಣ ನಾನೇ
ಲೋಕದ ಶಕ್ತಿಗೆ ಕಾರಣ ನಾನೇ
ಲೋಕದ ಶೌರ್ಯಕೆ ಮೂಲವು ನಾನೇ
ನಾನಿಲ್ಲದ ಜಗದಲಿ ಸಾಹಸವಿಲ್ಲಾ
ಎನ್ನಯ ಮಹಿಮೆಗೆ ಎನೇ ಎಲ್ಲಿಹುದು
ಸಮಾನರಾರಿಹರು ಎನ್ನ ಸಮಾನರಾರಿಹರು

ಲೋಕದ ವಿದ್ಯೆಗೆ ಕಾರಣ ನಾನೇ 
ಲೋಕದ ವಿದ್ಯೆಗೆ ಕಾರಣ ನಾನೇ
ಲೋಕಕೆ ಜ್ಞಾನವ ನೀಡುವೇ ನಾನೇ
ನಾನಿಲ್ಲದ ಜಗದಲಿ ಸಂಪ್ರತಿ ಇಲ್ಲಾ
ಎನ್ನಯ ಮಹಿಮೆಗೆ ಎನೆ ಎಲ್ಲಿಹುದು
ಸಮಾನರಾರಿಹರು ಎನ್ನ ಸಮಾನರಾರಿಹರು

ಲೋಕದ ಧಾತೆಗೆ ಕಾರಣ ನಾನೇ
ಲೋಕದ ಧಾತೆಗೆ ಕಾರಣ ನಾನೇ
ಲೋಕಕೆ ಐಸಿರಿ ನೀಡುವೇ ನಾನೇ 
ನಾನಿಲ್ಲದ ಜಗಪನೇ ಸುಖವಿಲ್ಲಾ
ಎನ್ನಯ ಮಹಿಮೆಯ ಏಣೆ ಎಲ್ಲಿಹುದು
ಸಮಾನರಾರಿಹರು ಸರಿ ಸಮಾನರಾರಿಹರು
ನಮ್ಮ ಸಮಾನರಾರಿಹರು
ಸಮಸ್ತ ಜಗದಲಿ ಯುಗಯುಗಗಳಲಿ
ಸಮಾನರಾರಿಹರು ನಮ್ಮ ಸಮಾನರಾರಿಹರು
-------------------------------------------------------------------------------------------------------------------------

ಮಹಾಸತಿ ಅನಸೂಯ (1965)
ಸಂಗೀತ: ಎಸ್.ಹನುಮಂತರಾವ್ ಸಾಹಿತ್ಯ: ಚಿ.ಉದಯಶಂಕರ್   ಹಾಡಿದವರು: ಪಿ.ಬಿ.ಶ್ರೀನಿವಾಸ್

ಶಾಂಪಾತರಂ ಬುಜಗ ಶಯನಂ ಪಧ್ಮನಾಭಮ್ ಸುರೇಶಂ
ವಿಶ್ವಾಕಾರಂ ಜಗನ ಸದೃಶಂ ಮೇಘವರ್ಣಮ್ ಶುಭಾಂಗಂ
ಲಕ್ಷ್ಮೀತಾಂ  ಕಮಲ ನಯನಂ ಯೋಗಿ ಹೃಧ್ಯಾನದಂ
ಒಂದೇ ವಿಷ್ಣುಮ್ ಭವಭಯ ಹರಂ ಸರ್ವಲೋಕೈಕನಾದಮ್ ಆಆಆ...
ನಾರಾಯಣಂ ಭಜರೇ ಮುರಹರಂ.. ನಾರಾಯಣಂ ಭಜರೇ ಮುರಹರಂ
ನಾರದ ಗಾನವೀ ಲೋಲ ವಿನೋದಮ್ ನಾರಾಯಣಂ ಭಜರೇ

ಶಂಖಚಕ್ರಧರ ಶ್ರೀ ಗೋವಿಂದಂ
ಶಂಖಚಕ್ರಧರ ಶ್ರೀ ಗೋವಿಂದಂ ಪಂಕಜನಾಭಮ್
ಪರಮಾನಂದಂ ನಾರಾಯಣಂ ಭಜರೇ 

ಆದಿ ಮಧ್ಯಲಯ ಗ್ರಹಿತನು ನೀನೇ 
ಆದಿ ಮಧ್ಯಲಯ ಗ್ರಹಿತನು ನೀನೇ 
ಆದಿ ಅಂತ್ಯವೆಲ್ಲಾ ನಿನ್ನಯ ಲೀಲೆ 
ಅಗಣಿತ ಮಹಿಮನು ನೀನೇ ದೇವಾ....  
ಅಗಣಿತ ಮಹಿಮನು ನೀನೇ ದೇವಾ 
ಜ್ಯೋತಿಸ್ವರೂಪ ಮಾಧವ 
ನಾರಾಯಣಂ ಭಜರೇ ಮುರಹರಂ..
ನಾರದ ಗಾನವೀ ಲೋಲ ವಿನೋದಮ್
ನಾರಾಯಣಂ ಶ್ರೀಮನ್ನಾರಾಯಣಂ ಭಜರೇ 
-------------------------------------------------------------------------------------------------------------------------

ಮಹಾಸತಿ ಅನಸೂಯ (1965)
ಸಂಗೀತ: ಎಸ್.ಹನುಮಂತರಾವ್ ಸಾಹಿತ್ಯ: ಚಿ.ಉದಯಶಂಕರ್   ಹಾಡಿದವರು: ಎಸ್.ಜಾನಕೀ 

ಪದದ ನಿದಮಗಸ ಗರಿಗಮ ಸಮರಿರಿನಿಸಸ
ಸಗಮನಿದಮಮ ಸಮಗಪದ  ದನಿದ ಸನಿನಿದ
ಮದನ ಮನದನ್ನ ಮನಮೋಹನ

ಮದನ ಮನದನ್ನ ಮನಮೋಹನ
ಬಾ ಬಾರೋ ಮುಖ ತೋರೋ 
ಬಾ ಎನ್ನ ಬಳಿ ತಾರೋ ಎನ್ನಾಸೆ ನೀ
ಸಲಹೇ ನಾ ಕಾದಿಹೆನು
ಮದನ ಮನದನ್ನ ಮನಮೋಹನ

ಕಣ್ಣಲ್ಲಿ ಕಾತುರವೋ ಮನದಲ್ಲಿ ಆತುರವೋ
ಚಂದ್ರಿಕೆಯ ಕಾವಿಂದ ನಾ ಬೇಯುತಿಹೆನು
ಕಣ್ಣಲ್ಲಿ ಕಾತುರವೋ ಮನದಲ್ಲಿ ಆತುರವೋ
ಚಂದ್ರಿಕೆಯ ಕಾವಿಂದ ನಾ ಬೇಯುತಿಹೆನು
ನಿನ್ನ ಜಾಲ ನಿಲಿಸು ಎನ್ನ ತಾಪ ಹರಿಸು 
ನಿನ್ನ ಜಾಲ ನಿಲಿಸು ಎನ್ನ ತಾಪ ಹರಿಸು 
ಚಿತ್ತವನು ಕಲಕಿರುವ ಚೆಲುವಾಂತನೇ 
ಮದನ ಮನದನ್ನ ಮನಮೋಹನ 

ಕೋಗಿಲೆಯು ಕೂಗುತಿದೆ ನಲಿಯುತಲಿ 
ಮಧುಮಾಸ ಬಂದಿಹುದು ಬಳುಕುತಲಿ 
ಕೋಗಿಲೆಯು ಕೂಗುತಿದೆ ನಲಿಯುತಲಿ 
ಮಧುಮಾಸ ಬಂದಿಹುದು ಬಳುಕುತಲಿ 
ವಿರಹದ ನೋವಿಂದ ಉಳಿಸೆನ್ನ ಚಂದ್ರಮ 
ಪ್ರಣಯದ ಮಕರಂದ ಸವಿಯೋಣ ಬಾರಾ 
ವಿರಹದ ನೋವಿಂದ ಉಳಿಸೆನ್ನ ಚಂದ್ರಮ 
ಪ್ರಣಯದ ಮಕರಂದ ಸವಿಯೋಣ ಬಾರಾ 
ಎನ್ನೊಡನೆ ಸರಸ ಮಧುರಾ ಸುಧಾರಸ   
ಎನ್ನೊಡನೆ ಸರಸ ಮಧುರಾ ಸುಧಾರಸ 
ತಾಮಸರಾಧಾನಿಸು ಸುಕುಮಾರನೇ 
ಮದನ ಮನದನ್ನ ಮನಮೋಹನ
ಬಾ ಬಾರೋ ಮುಖ ತೋರೋ 
ಬಾ ಎನ್ನ ಬಳಿ ತಾರೋ ಎನ್ನಾಸೆ ನೀ
ಸಲಹೇ ನಾ ಕಾದಿಹೆನು
ಮದನ ಮನದನ್ನ ಮನಮೋಹನ 
------------------------------------------------------------------------------------------------------------------------- 

ಮಹಾಸತಿ ಅನಸೂಯ (1965)
ಸಂಗೀತ: ಎಸ್.ಹನುಮಂತರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ


ಆಆಆ... ಕಮಲವ ಮುದ್ದಿಸಿ ತನುವನು ಅರಳಿಸಿ
ಕಮಲವ ಮುದ್ದಿಸಿ ತನುವನು ಅರಳಿಸಿ
ತರುಣಿಯು ಬಾಳಿಗೆ ಸವಿಯನು ನೀಡಿದೆ
ಕಮಲವ ಮುದ್ದಿಸಿ

ಒಲವನು ನೀ ತೋರಿದೆ ವಿರಹವ ನೀ ನೀಗಿದೆ
ಒಲವನು ನೀ ತೋರಿದೆ ವಿರಹವ ನೀ ನೀಗಿದೆ
ಮನಗಳು ಒಂದಾಗಿವೆ ನಿನ್ನ ಪೆರೆಯಲು ತನುವಿದು ಸಾಕಾಗಿದೆ ಹೂಂ 
ಮನಗಳು ಒಂದಾಗಿವೆ ನಿನ್ನ ಪೆರೆಯಲು ತನುವಿದು ಸಾಕಾಗಿದೆ 
ಕಮಲವ ಮುದ್ದಿಸಿ 

ಋತು ವಸಂತ ನೀನಾದರೇ ಕೋಗಿಲೆ ನಾನಾಗುವೇ 
ಪ್ರಣಯ ಗಾನ ನೀನಾದರೇ ನಾಟ್ಯ ರಾಣಿ  
ಋತು ವಸಂತ ನೀನಾದರೇ ಕೋಗಿಲೆ ನಾನಾಗುವೇ 
ಪ್ರಣಯ ಗಾನ ನೀನಾದರೇ ನಾಟ್ಯ ರಾಣಿಯಾಗುವೇ 
ಹೃದಯದ ಈ ವೀಣೆಯ ಮೌನವ ನೀ ನೀಗಿದೆ 
ಹೃದಯದ ಈ ವೀಣೆಯ ಮೌನವ ನೀ ನೀಗಿದೆ 
ಪ್ರಣಯದ ಸವಿಗಾನವ ಬಲು ಹರುಷದಿ ನುಡಿಸುತ ನೀ ಹಾಡಿದೇ.. ಹಾಂ...  
ಪ್ರಣಯದ ಸವಿಗಾನವ ಬಲು ಹರುಷದಿ ನುಡಿಸುತ ನೀ ಹಾಡಿದೇ
ಕಮಲವ ಮುದ್ದಿಸಿ ತನುವನು ಅರಳಿಸಿ
ತರುಣಿಯು ಬಾಳಿಗೆ ಸವಿಯನು ನೀಡಿದೆ
ಕಮಲವ ಮುದ್ದಿಸಿ 
-------------------------------------------------------------------------------------------------------------------------

ಮಹಾಸತಿ ಅನಸೂಯ (1965)
ಸಂಗೀತ: ಎಸ್.ಹನುಮಂತರಾವ್ ಸಾಹಿತ್ಯ: ಚಿ.ಉದಯಶಂಕರ್   ಹಾಡಿದವರು: ಮಾಧವಪೆದ್ದಿ ಸತ್ಯಂ 

ಓ... ಸತಿ ಮಹಾಸತಿ... ಓ... ಸತಿ ಮಹಾಸತಿ  
ಕಟ್ಟಿಕೊಂಡ ಗಂಡನನ್ನು ದೈವ ಎಂದೂ ಕೊಂಡೆ ನೀನು
ಅವನ ಪಾದಗಳನು ನೀನು ಪೂಜಿಸಿದೆ
ಗಂಡನ ಸೇವೆ ದೇವರ ಸೇವೆ ಗಂಡನ ಸೇವೆ ಈಶನ ಸೇವೆ
ಎಂಬೋ ತತ್ವವನ್ನೇ ನೀನು ಪಾಲಿಸಿದೆ
ಓ... ಸತಿ ಮಹಾಸತಿ... ಓಹೋ ... ಸತಿ ಮಹಾಸತಿ  

ಕಷ್ಟಗಳೇ ನಿನ ಬಾಳಿನ ಉಸಿರು ಕಡು ದುಃಖವೇ ನಿನ ಒಡನಾಡಿ
ಸಂಕಟ ಬದುಕು ತುಂಬಿಹುದು  ನಿನ ಸಹನೆಗೆ ಎಲೆ ಇಲ್ಲದಾಗಿಹುದು

ಓ...ಓ...ಓ... ಕಲ್ಲು ಮುಳ್ಳು ಹಾದಿಯಮ್ಮಾ ಅಡವಿ ಮೃಗಗಳ ಕಾಟವಮ್ಮಾ
ನಡೆದು ನಡೆದು ನಿನ್ನ ಕಾಲು ಸೋತಿಹುದು ನಡೆ ನಡೆ ಮುನ್ನಡೆ ದೃತಿಗೆಡದೆ ನೀ
ನಿನ್ನ ಪಯಣಕೆ ಕೊನೆಯೊಂದುಂಟು ನಿನ್ನ ಮನದ ತತ್ವವನ್ನು ಬೀಡಬೇಡಮ್ಮಾ
ಓ... ಸತಿ ಮಹಾಸತಿ... ಓಹೋ ... ಸತಿ ಮಹಾಸತಿ  

ನಾರಾಯಣನು ಭೂಮಿ ಹೊತ್ತನು ವಾಪರ ಶಿವನು ಗಂಗೆಯ ಹೊತ್ತನು 
ನೀ ಎನ ಪತಿಯ ತಲನೆಲಹೊತ್ತು ಅಲೆಯುತಿಹೆ 
ನಿನ್ನ ಪತಿಯ ಕ್ಷೇಮವೊಂದೇ ನಿನ್ನಾ ಜೀವನದೊಂದೇ ಗುರಿಯು 
ಎಂದಏನುತಾ  ನೀನು ಧನ್ಯಳಾಗುತಿಹೆ  
ಓ... ಸತಿ ಮಹಾಸತಿ... ಓ... ಸತಿ ಮಹಾಸತಿ  
-------------------------------------------------------------------------------------------------------------------------

ಮಹಾಸತಿ ಅನಸೂಯ (1965)
ಸಂಗೀತ: ಎಸ್.ಹನುಮಂತರಾವ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಲ್.ಆರ್.ಈಶ್ವರಿ


ಆ ದೇವಾ ಈ ದೇವಾ ಮಾದೇವಾ ಎನಬೇಡಾ
ಕುಲನಾರಿಗೆ ಪತಿಯೇ ಪರದೈವವು
ಈ ನಿಜವ ನೀ ತಿಳಿದು  ಬಾಳಬೇಕಮ್ಮಾ
ಪತಿಸೇವೆ ಮಾಡಿ  ನೀ ಧನ್ಯಳಾಗಮ್ಮಾ... ನೀ ಧನ್ಯಳಾಗಮ್ಮಾ
ಆಆ.. ಪತಿಯೇ ದೈವವು ಸತಿಯರ ಸೌಭಾಗ್ಯವೂ
ಭಕ್ತಿ ಮುಕ್ತಿ ದೊರಕಿಸಿ ಕೊಡುವ ಕಾಮಧೇನವು 
ಪತಿಯೇ ದೈವವು ಸತಿಯರ ಸೌಭಾಗ್ಯವೂ
ಭಕ್ತಿ ಮುಕ್ತಿ ದೊರಕಿಸಿ ಕೊಡುವ ಕಾಮಧೇನವು   

ಪತಿಯೇ ಸತಿಗೆ ದೈವವು ಸತಿಗೆ ಪತಿಯೇ ದೈವವು
ಪತಿಯೇ ದೈವವು ಸತಿಯರ ಸೌಭಾಗ್ಯವೂ
ಭಕ್ತಿ ಮುಕ್ತಿಯ ದೊರಕಿಸಿ ಕೊಡುವ ಕಾಮಧೇನವು   

ಓಂ ಶಿವ ಓಂಶಿವ ಪರಾತ್ಮಾರಾಶಿವ ಓಂಕಾರಾತ್ಮಕ ದಯಶರಣಂ
ಭವಾನಿ ಶಂಕರ ಭಾವನಿ ಶಂಕರ ಉಮಾಮಹೇಶ್ವರಾ ತವ ಶರಣಂ
ಓಂ ಶಿವ ಓಂಶಿವ ಪರಾತ್ಮಾರಾಶಿವ ಓಂಕಾರಾತ್ಮಕ ದಯಶರಣಂ
ಭವಾನಿ ಶಂಕರ ಭಾವನಿ ಶಂಕರ ಉಮಾಮಹೇಶ್ವರಾ ತವ ಶರಣಂ

ಪತಿ ಪಾದೋದಕವೇ ಸತಿಗೆ ಸರ್ವಶಕ್ತಿ ಚೂಡಾಮಣಿ 
ಪತಿ ಪಾದೋದಕವೇ ಸತಿಗೆ ಸರ್ವಶಕ್ತಿ ಚೂಡಾಮಣಿ 
ಪತಿ ಭಕ್ತಿ ಕುಲನಾರಿಗೆ ವರ ಕೊಡುವ ಚಿಂತಾಮಣಿ 
ವರ ಕೊಡುವ ಚಿಂತಾಮಣಿ
ಪತಿಯೇ ದೈವವು ಸತಿಯರ ಸೌಭಾಗ್ಯವೂ
ಭಕ್ತಿ ಮುಕ್ತಿಯ ದೊರಕಿಸಿ ಕೊಡುವ ಕಾಮಧೇನವು      


ಹರಹರ ಶಿವಶಿವ ಶಂಭೋಶಂಕರ ಮಂಗಳಕರ ದೇವಾ 
ನೀನು ದೇವಮಹಾದೇವಾ  ಶರಣು ಸಾಂಬಸದಾಶಿವ 
ಹರಹರ ಶಿವಶಿವ ಶಂಭೋಶಂಕರ ಮಂಗಳಕರ ದೇವಾ 
ನೀನು ದೇವಮಹಾದೇವಾ  ಶರಣು ಸಾಂಬಸದಾಶಿವ 

ಆಆಆ... ಪತಿಯೇ ಹರಿಬೃಹ್ಮಸ್ವರೂಪರು 
ಪತಿ ಸೇವೆಯೇ ಸುಖ ಸಾಧನವೂ 
ಪತಿಯೇ ಹರಿಬೃಹ್ಮಸ್ವರೂಪರು 
ಪತಿ ಸೇವೆಯೇ ಸುಖ ಸಾಧನವೂ 
ಪತಿದೇವನ ಶ್ರೀಪಾದಕಮಲಗಳೆ ಸ್ತ್ರೀಯರ ಕಾಯುವ ದೈವವೂ  
ಕಾಯುವ ದೈವವೂ
ಪತಿಯೇ ದೈವವು ಸತಿಯರ ಸೌಭಾಗ್ಯವೂ
ಭಕ್ತಿ ಮುಕ್ತಿಯ ದೊರಕಿಸಿ ಕೊಡುವ ಕಾಮಧೇನವು      
ಪತಿಯೇ ದೈವವು ಸತಿಯರ ಸೌಭಾಗ್ಯವೂ
ಭಕ್ತಿ ಮುಕ್ತಿಯ ದೊರಕಿಸಿ ಕೊಡುವ ಕಾಮಧೇನವು      
--------------------------------------------------------------------------------------------------------------------------





1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete