375. ಇಮ್ಮಡಿ ಪುಲಿಕೇಶಿ (1967)




ಇಮ್ಮಡಿ ಪುಲಕೇಶಿ ಚಿತ್ರದ ಹಾಡುಗಳು 
ಗಾಯನ : ಪಿ.ಬಿ.ಶ್ರೀನಿವಾಸ, ಮೋತಿ, ಎಸ್.ಜಾನಕೀ, ರಮಣ  
  1. ಚೆಲುವಿನ ಒಡೆತನ ಬೇಡುವೆಯಾ 
  2. ತಾನಿರಲು ಮನೆ ಕೇಳಿ 
  3. ಕನ್ನಡದ ಕುಲತಿಲಕ ಪರಮೇಶ್ವರ 
  4. ಅತ್ತಿಗೆ ನಾಳೆ ಹೊತ್ತಿಗೆ 
  5. ಕದ್ದು ನೋಡುವ ಹೆಣ್ಣೇ 

ಇಮ್ಮಡಿ ಪುಲಿಕೇಶಿ (1967) - ಕನ್ನಡದ ಕುಲತಿಲಕ ಪರಮೇಶ್ವರ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ: ಎಸ್.ಜಾನಕಿ

ಕನ್ನಡದ ಕುಲತಿಲಕ ಪರಮೇಶ್ವರ
ಕನ್ನಡದ ಕುಲತಿಲಕ ಪರಮೇಶ್ವರ
ಕಣ್ಮಣಿಯ ಚಾಲುಕ್ಯ ಮಕುಟೇಶ್ವರ
ಕನ್ನಡದ ಕುಲತಿಲಕ ಪರಮೇಶ್ವರ

ನೀನೊಬ್ಬನೆ ಎಮ್ಮ ಏಕೈಕ ವೀರ ಆ....
ನೀನೊಬ್ಬನೆ ಎಮ್ಮ ಏಕೈಕ ವೀರ
ಈ ನಾಡ ಪುಣ್ಯದ ಪುಲಕೇಶಿ ರಾಜೇಂದ್ರ
ಕರುನಾಡ ಪುಣ್ಯದ ಪುಲಕೇಶಿ ರಾಜೇಂದ್ರ
ಸತ್ಯಾಶ್ರಯ, ಸಾಹಿತ್ಯಾಶ್ರಯ
ಸತ್ಯಾಶ್ರಯ, ಸಾಹಿತ್ಯಾಶ್ರಯ
ಸರ್ವ ಧರ್ಮಾಶ್ರಯ ಸಕಲ ಭುವನಾಶ್ರಯ
ವಿಜಯವದು ನಿನಗೊಲಿದು ಬರುತಿರಲೆ
ತಳಮಳದ ಶಿಲೆಯೊಲಿದು ಸ್ಥಿರವಿರಲಿ
ಕನ್ನಡದ ಕುಲತಿಲಕ ಪರಮೇಶ್ವರ

ದಕ್ಷಿಣ ದಿಗ್ವಿಜಯ ಪ್ರದಕ್ಷಿಣ ಆ..
ದಕ್ಷಿಣ ದಿಗ್ವಿಜಯ ಪ್ರದಕ್ಷಿಣ
ದಕ್ಷಿಣಪಥೇಶ್ವರ ವಿಶೇಷಣ
ದಕ್ಷಿಣ ದಿಗ್ವಿಜಯ ಪ್ರದಕ್ಷಿಣ
ದಕ್ಷಿಣಪಥೇಶ್ವರ ವಿಶೇಷಣ
ಪೃಥ್ವಿವಲ್ಲಭ ಪರಮ ಭಟ್ಟಾರಕ
ಪೃಥ್ವಿವಲ್ಲಭ ಪರಮ ಭಟ್ಟಾರಕ
ಸಕಲ ಸನ್ಮಂಗಳರೇ....ಗುಣಾಢ್ಯ
ಕನ್ನಡದ ಕುಲತಿಲಕ ಪರಮೇಶ್ವರ
ಕಣ್ಮಣಿಯ ಚಾಲುಕ್ಯ ಮಕುಟೇಶ್ವರ
ಕನ್ನಡದ ಕುಲತಿಲಕ ಪರಮೇಶ್ವರ

ಕಲ್ಲಿನಲಿ ಕಾವ್ಯಗಳ ಓದಲಿಕ್ಕೆ
ಕಲಿಗಳಿಗೆ ಕಲಿಯಾಗಿ ನೀನೆ ನಿಂತೇ
ಕಲ್ಲಿನಲಿ ಕಾವ್ಯಗಳ ಓದಲಿಕ್ಕೆ
ಕಲಿಗಳಿಗೆ ಕಲಿಯಾಗಿ ನೀನೆ ನಿಂತೇ
ಖಡ್ಗ ಹಿಡಿದರೂ ಶಾಂತಿದೂತನಾದೆ
ಖಡ್ಗ ಹಿಡಿದರೂ ಶಾಂತಿದೂತನಾದೆ
ವಾತ್ಸಲ್ಯ ಪ್ರೇಮಗಳ ಮನೆ ದೇವರಾದೆ
ಕನ್ನಡದ ಕುಲತಿಲಕ ಪರಮೇಶ್ವರ
ಕಣ್ಮಣಿಯ ಚಾಲುಕ್ಯ ಮಕುಟೇಶ್ವರ
ಕನ್ನಡದ ಕುಲತಿಲಕ ಪರಮೇಶ್ವರ
ಕಣ್ಮಣಿಯ ಚಾಲುಕ್ಯ ಮಕುಟೇಶ್ವರ
ಕನ್ನಡದ ಕುಲತಿಲಕ ಪರಮೇಶ್ವರ..
--------------------------------------------------------------------------------------------------------------------------

ಇಮ್ಮಡಿ ಪುಲಿಕೇಶಿ (1967) -ತಾನಿರಲು ಮರೆಕೇಳಿ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ: ಎಸ್.ಜಾನಕಿ


ತಾನಿರಲು ಮನೇ ಕೇಳಿ ಬಂದವರ್ರ್ಯಾರೆ
ತಾನಿರಲು ಮನೇ ಕೇಳಿ ಬಂದವರ್ರ್ಯಾರೆ
ತನುವಿ ನೆಲೆಬಳ್ಳಿಯನು ಬಾಗಿಸಿದನ್ಯಾರೇ
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿ ನೆಲೆಬಳ್ಳಿಯನು ಬಾಗಿಸಿದನ್ಯಾರೇ
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ 

ಒಲ್ಲೆಂದರೂ ಬಿಡದೆ ಒಳಗೆ ನಿಂದವನ್ಯಾರೇ 
ಒಲ್ಲೆಂದರೂ ಬಿಡದೆ ಒಳಗೆ ನಿಂದವನ್ಯಾರೇ 
ನಲ್ಲೆ ಹೊಂಗೆನ್ನೆಯಲಿ ಹೂವ ಬಿಡಿಸಿದವನ್ಯಾರೇ 
ನಲ್ಲೆ ಹೊಂಗೆನ್ನೆಯಲಿ ಹೂವ ಬಿಡಿಸಿದವನ್ಯಾರೇ 
ಎಲ್ಲ ಸೌಗಂಧವನ್ನು ಹೊತ್ತು ಹೋದವನ್ಯಾರೇ 
ಎಲ್ಲ ಸೌಗಂಧವನ್ನು ಹೊತ್ತು ಹೋದವನ್ಯಾರೇ 
ಸಲ್ಲದಿಹ ಸ್ವಾತಂತ್ರ ಅವರಿಗೆ ಕೊಟ್ಟವರ್ರ್ಯಾರೆ.... ಆಆಆ...  
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ 

ತಂಗಾಳಿ ನಿಟ್ಟುಸಿರ ಬಿಡುತಿರುವುದಲ್ಲೇ 
ತಂಗಾಳಿ ನಿಟ್ಟುಸಿರ ಬಿಡುತಿರುವುದಲ್ಲೇ
ನಕ್ಷತ್ರ ಕಣ್ಣೀರ ಸುರಿಸುತಿದೆಯಲ್ಲೇ 
ನಕ್ಷತ್ರ ಕಣ್ಣೀರ ಸುರಿಸುತಿದೆಯಲ್ಲೇ
ಮೂಲೋಕ ಸೌಂದರ್ಯ ಮೌನವಾಗಿದೆಯಲ್ಲೇ 
ಮೂಲೋಕ ಸೌಂದರ್ಯ ಮೌನವಾಗಿದೆಯಲ್ಲೇ 
ಶೃಂಗಾರ ಸಾಹಿತ್ಯ ವ್ಯರ್ಥವಾಗಿದೆಯಲ್ಲೇ... ಆಆಆ...  
ತಾನಿರಲು ಮನೆ ಕೇಳಿ ಬಂದವರ್ರ್ಯಾರೆ
ತನುವಿ ನೆಲೆಬಳ್ಳಿಯನು ಬಾಗಿಸಿದವನ್ಯಾರೇ 
ತಾನಿರಲು ಮನೇ ಕೇಳಿ ಬಂದವನ್ಯಾರೇ..... 
-----------------------------------------------------------------------------------------------------------------------

ಇಮ್ಮಡಿ ಪುಲಿಕೇಶಿ (1967)
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ: ಎಸ್.ಜಾನಕಿ


ಅತ್ತಿಗೆ..  ನಾಳೆ ಹೊತ್ತಿಗೆ...  ಮುತ್ತಂಥ ಮಾತೊಂದ ಮೈತುಂಬಾ ಹೊತ್ತು ಬಾರಮ್ಮಾ
ಅತ್ತಿಗೆ ನಾಳೆ ಹೊತ್ತಿಗೆ ಮುತ್ತಂಥ ಮಾತೊಂದ ಮೈತುಂಬಾ ಹೊತ್ತು ಬಾರಮ್ಮಾ 
ಈತ ಮಾಹಾ ಮಲ್ಲ ಯಾರು ಎದುರಿಲ್ಲಾ ನಿನಗಂತು ಬೇರೆ ದಾರಿ ಇನ್ನಿಲ್ಲಾ 
ಅತ್ತಿಗೆ ನಾಳೆ ಹೊತ್ತಿಗೆ ಮುತ್ತಂಥ ಮಾತೊಂದ ಮೈತುಂಬಾ ಹೊತ್ತು ಬಾರಮ್ಮಾ 
ಈತ ಮಾಹಾ ಮಲ್ಲ ಯಾರು ಎದುರಿಲ್ಲಾ ನಿನಗಂತು ಬೇರೆ ದಾರಿ ಇನ್ನಿಲ್ಲಾ 

ಅಕ್ಕಯ್ಯ ನಮ್ಮ ಭಾವಯ್ಯಾ ತನ್ನ ಒಲವೆಂಬ ಬಲೆಬೀಸಿ ಕಜ್ಜಿ ಮೈಯ್ ಕೈಯ್ 
ಅಕ್ಕಯ್ಯ ನಮ್ಮ ಭಾವಯ್ಯಾ ತನ್ನ ಒಲವೆಂಬ ಬಲೆಬೀಸಿ ಕಜ್ಜಿ ಮೈಯ್ ಕೈಯ್ 
ಹೀತವಾಗಿ ಮೀತವಾಗಿ ಹದಗೈವ ಹಮ್ಮಿರ 
ಅತ್ತಿಗೆ ನಾಳೆ ಹೊತ್ತಿಗೆ ಮುತ್ತಂಥ ಮಾತೊಂದ ಮೈತುಂಬಾ ಹೊತ್ತು ಬಾರಮ್ಮಾ 

ಲಾವಣ್ಯ ನವತಾರುಣ್ಯ ತನ್ನ ಕೌಶಲ್ಯ ಮೆರೆದಾಗ ಅಲ್ಲೇ ಕೈವಲ್ಯ 
ಲಾವಣ್ಯ ನವತಾರುಣ್ಯ ತನ್ನ ಕೌಶಲ್ಯ ಮೆರೆದಾಗ ಅಲ್ಲೇ ಕೈವಲ್ಯ 
ನಲ್ಲ ಬಂದಾಗ ಗಲ್ಲ ಹಿಡಿದಾಗ ಸಖಿ ನಿನ್ನ ತುಟಿ ಕೆನ್ನೆ ಸಿಹಿಯಾದ ಹಣ್ಣಂತೆ 
ಅತ್ತಿಗೆ ನಾಳೆ ಹೊತ್ತಿಗೆ ಮುತ್ತಂಥ ಮಾತೊಂದ ಮೈತುಂಬಾ ಹೊತ್ತು ಬಾರಮ್ಮಾ 
ಈತ ಮಾಹಾ ಮಲ್ಲ ಯಾರು ಎದುರಿಲ್ಲಾ ನಿನಗಂತು ಬೇರೆ ದಾರಿ ಇನ್ನಿಲ್ಲಾ 
ನಿನಗಂತು ಬೇರೆ ದಾರಿ ಇನ್ನಿಲ್ಲಾ 
------------------------------------------------------------------------------------------------------------------------

ಇಮ್ಮಡಿ ಪುಲಿಕೇಶಿ (1967)
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ: ಎಸ್.ಜಾನಕಿ

ಚೆಲುವಿನ ಒಡೆತನ ಬೇಡುವೇಯಾ... ಬೇಡುವೇಯಾ.
ಚೆಲುವಿನ ಒಡೆತನ ಬೇಡುವೇಯಾ
ಒಲವಿನ ಔತಣ ಬೇಡನ್ನುವೆಯಾ
ಚೆಲುವಿನ ಒಡೆತನ ಬೇಡುವೇಯಾ
ಒಲವಿನ ಔತಣ ಬೇಡನ್ನುವೆಯಾ
ಚೆಲುವಿನ ಒಡೆತನ ಬೇಡುವೇಯಾ
ಅಂತರಂಗವ ಮಾಡಿದೆ ಅರ್ಪಣ
ಅಂತರಂಗವ ಮಾಡಿದೆ ಅರ್ಪಣ
ಸ್ವಂತವಿನೇಕೆ ಇನ್ನೇನಿಲ್ಲ ರಮಣ
ಸ್ವಂತವಿನೇಕೆ ಇನ್ನೇನಿಲ್ಲ ರಮಣ
ದೇಹದ ಕಣಕಣ ಪ್ರಣಯದಂಕಣ
ದೇಹದ ಕಣಕಣ ಪ್ರಣಯದಂಕಣ
ಆಗಲಿ ನಿನಗೆ ಆನಂದದೌತಣ
ಚೆಲುವಿನ ಒಡೆತನ ಬೇಡುವೇಯಾ
ಒಲವಿನ ಔತಣ ಬೇಡನ್ನುವೆಯಾ
ಚೆಲುವಿನ ಒಡೆತನ ಬೇಡುವೇಯಾ

ಕಂಗಳ ಮೌನದ ರಾಗಾ..ಲಾಪ
ಕಂಗಳ ಮೌನದ ರಾಗಾ..ಲಾಪ
ಕಿಂಕಿಣಿ ಶಂಕೃತಿ ಸರಸ ಸಲ್ಲಾಪ.... ಆಆಆ...
ಕಂಗಳ ಮೌನದ ರಾಗಾ..ಲಾಪ
ಕಿಂಕಿಣಿ ಶಂಕೃತಿ ಸರಸ ಸಲ್ಲಾಪ....
ಸಗರಿ ರಿಗಮಪ ರಿಗಮಪ ದನಿ ದಸ
ಮನಿದಸ ನಿದಸ ನಿದಪ ಮಪ
ಮಪದಮ ಮನಿದಸಮ ರಿಗ ರಿಗಪಮಗ
ಮಪದಸಮ ಪದನಿಸ ಪಮಪ
ಕಿಂಕಿಣಿ ಶಂಕೃತಿ ಸರಸ ಸಲ್ಲಾಪ....
ಕಂಕಣ ಕಲಕಲ ಪ್ರೇಮಾಲಾಪ
ಕಂಕಣ ಕಲಕಲ ಪ್ರೇಮಾಲಾಪ
ಎಲ್ಲೇಲ್ಲೂ ನಿನ್ನದೇ ಪ್ರತಿರೂಪ
ಚೆಲುವಿನ ಒಡೆತನ ಬೇಡುವೇಯಾ
ಒಲವಿನ ಔತಣ ಬೇಡನ್ನುವೆಯಾ
ಚೆಲುವಿನ ಒಡೆತನ ಬೇಡುವೇಯಾ
-----------------------------------------------------------------------------------------------------------------------

ಇಮ್ಮಡಿ ಪುಲಿಕೇಶಿ (1967) -ತಾನಿರಲು ಮರೆಕೇಳಿ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ: ಮೋತಿ, ಎಸ್.ಜಾನಕಿ

ಗಂಡು : ಕದ್ದು ನೋಡುವೇ ಹೆಣ್ಣೇ ಎದ್ದು ಬಾರೇ ಇಲ್ಲಿ
            ಮುಖಮೊಗ ನಿನ್ನದೇ ನೋಡೇ ಬಾರೆ ಇಲ್ಲಿ
           ಕದ್ದು ನೋಡುವೇ ಹೆಣ್ಣೇ ಎದ್ದು ಬಾರೇ ಇಲ್ಲಿ
ಹೆಣ್ಣು : ಕಳ್ಳ ನಿನ್ನ ಕೂಡೇ ನಾ ಬರಲಾರೇನು
          ಕಳ್ಳ ನಿನ್ನ ಕೂಡೇ ನಾ ಬರಲಾರೇನು
          ಒಳ್ಳೆ ಶೀಲ ಗುಣರತ್ನದ ಒಡವೆಯಿರಲು
           ಕಳ್ಳ ನಿನ್ನ ಕೂಡೇ ನಾ ಬರಲಾರೇನು
           ಒಳ್ಳೆ ಶೀಲ ಗುಣರತ್ನದ ಒಡವೆಯಿರಲು
ಗಂಡು : ಕುಡಿನೋಟ ಇರಿಯುತಿರೇ ಸೆರೆಯಾದೇನು
           ಕುಡಿನೋಟ ಇರಿಯುತಿರೇ ಸೆರೆಯಾದೇನು
          ನವ ಯೌವ್ವನ ಯಥ ನಾ ಮಾಡೇನೂ
          ಕದ್ದು ನೋಡುವೇ ಹೆಣ್ಣೇ ಎದ್ದು ಬಾರೇ ಇಲ್ಲಿ
         ಮುಖಮೊಗ ನಿನ್ನದೇ ನೋಡೇ ಬಾರೆ ಇಲ್ಲಿ
         ಕದ್ದು ನೋಡುವೇ ಹೆಣ್ಣೇ ಎದ್ದು ಬಾರೇ ಇಲ್ಲಿ

ಹೆಣ್ಣು :ಕಣ್ಣಲ್ಲಿ ನೀನಿರುವೇ ನಿನ್ನಲ್ಲಿ ನಾನಿರುವೇ
         ಕಣ್ಣಲ್ಲಿ ನೀನಿರುವೇ ನಿನ್ನಲ್ಲಿ ನಾನಿರುವೇ
        ಹೆಣ್ಣು ಕಣ್ಣ ಕೊಟ್ಟ ಮೇಲೆ ತನ್ನದಾಗೆ ಏನಿದೇ
        ಹೆಣ್ಣು ಕಣ್ಣ ಕೊಟ್ಟ ಮೇಲೆ ತನ್ನದಾಗೆ ಏನಿದೇ
        ನಿನ್ನ ಒಲವು ನಾನೆಂಬ ಹೆಮ್ಮೆಯೊಂದನು ಬಿಟ್ಟು
        ನಿನ್ನ ಒಲವು ನಾನೆಂಬ ಹೆಮ್ಮೆಯೊಂದನು ಬಿಟ್ಟು
        ಇನ್ನೇನು ಉಳಿದಿಲ್ಲ ಎನ್ನ ಒಳಗುಟ್ಟು 

ಗಂಡು : ಕುಂಕುನಗೆಯ ಬಿಂಕಗಾತಿ ಇನ್ನೂ ಕಣ್ಣು ಕೆಂಪೇಕೇ...
           ಕುಂಕುನಗೆಯ ಬಿಂಕಗಾತಿ ಇನ್ನೂ ಕಣ್ಣು ಕೆಂಪೇಕೇ
           ಹೂವಿನಂಥ ನಿನ್ನ ಮೊಗವೇ ಮುಳ್ಳು ಚುಚ್ಚ ನೋವೇಕೆ
           ಸೆರಗಿನಿಂದ ನಿನ್ನ ಎದೆಯ ಮುಚ್ಚಿಕೊಂಡರೇನೇ
           ಅಂತರಂಗದಾಸೆ ಬಯಲು ಆಯಿತ್ತಿನ್ನೇನೇ
ಇಬ್ಬರು : ಅಂತರಂಗದಾಸೆ ಬಯಲು ಆಯಿತ್ತಿನ್ನೇನೇ
ಗಂಡು : ಕದ್ದು ನೋಡುವೇ ಹೆಣ್ಣೇ ಎದ್ದು ಬಾರೇ ಇಲ್ಲಿ
           ಮುಖಮೊಗ ನಿನ್ನದೇ ನೋಡೇ ಬಾರೆ ಇಲ್ಲಿ
           ಕದ್ದು ನೋಡುವೇ ಹೆಣ್ಣೇ ಎದ್ದು ಬಾರೇ ಇಲ್ಲಿ
--------------------------------------------------------------------------------------------------------------------------

No comments:

Post a Comment