400. ಸಂತ ಶಿಶುನಾಳ ಷರೀಫ್ (1990)




ಸಂತ ಶಿಶುನಾಳ ಷರೀಫ್ ಚಲನಚಿತ್ರದ ಹಾಡುಗಳು
  1. ಕೋಡಗನ ಕೋಳಿ ನುಂಗಿತ್ತಾ
  2. ಸೋರುತಿಹುದು ಮನೆಯ ಮಾಳಿಗಿ 
  3. ತರವಲ್ಲ ತಗಿ ನಿನ್ನ ತಂಬೂರೀ
  4. ಸವಾಲೊಂದು ನಿನ್ನ ಮ್ಯಾಲ
  5. ಹಾಕಿದ ಜನಿವಾರವ ಸದ್ಗುರುನಾಥ
  6. ಎಲ್ಲರಂಥವನಲ್ಲ ನನ್ನ ಗಂಡ
  7. ಮೋಹದ ಹೆಂಡತಿ ತೀರಿದ ಬಳಿಕ
  8. ಗುಡಿಯ ನೋಡಿರಣ್ಣಾ
  9. ಆಳಬೇಡ ತಂಗಿ ಅಳಬೇಡ
  10. ಬಿದ್ದಿಯಬ್ಬೇ ಮುದುಕಿ
  11. ನಾ ನಾ ಎಂಬುದು ನಾನಲ್ಲ
  12. ಸ್ನೇಹ ಮಾಡಬೇಕಿಂತವಳ 
  13. ಕೂ ಕೂ ಎನುತಿದೆ ಬೆಳವಾ
  14. ದುಃಖ ಮೇ ಪಡ ಮನ್ 
  15. ಹಮ್ ತೋ ದೇಖಾ 
  16. ನಡಿಯೋ ದೇವರ ಚಾಕರಿಗೇ 
ಸಂತ ಶಿಶುನಾಳ ಷರೀಫ್ (1990) - ಕೋಡಗನ ಕೋಳಿ ನುಂಗಿತ್ತಾ
ಸಂಗೀತ: ಸಿ.ಅಶ್ವಥ್, ಸಾಹಿತ್ಯ: ಶಿಶುನಾಳ ಷರೀಫ್  ಗಾಯನ: ಸಿ.ಅಶ್ವಥ್

ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ..
ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ..

ಆಡು ಆನೆಯ ನುಂಗಿ  ಗೋಡೆ ಸುಣ್ಣಾವ ನುಂಗಿ
ಆಡು ಆನೆಯ ನುಂಗಿ  ಗೋಡೆ ಸುಣ್ಣಾವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ..

ಒಳ್ಳು ಒನಕೆಯ ನುಂಗಿ ಕಲ್ಲು ಗೂಟಾವ ನುಂಗಿ
ಒಳ್ಳು ಒನಕೆಯ ನುಂಗಿ  ಕಲ್ಲು ಗೂಟಾವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ..
ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ..

ಹಗ್ಗ ಮಗ್ಗಾವ ನುಂಗಿ  ಮಗ್ಗಾವ ಲಾಳಿ ನುಂಗಿ
ಹಗ್ಗ ಮಗ್ಗಾವ ನುಂಗಿ ಮಗ್ಗಾವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ ಮಣಿಯು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ..
ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ..

ಗುಡ್ಡ ಗವಿಯನ್ನು ನುಂಗಿ  ಗವಿಯು ಇರುವೆಯಾ ನುಂಗಿ
ಗುಡ್ಡ ಗವಿಯನ್ನು ನುಂಗಿ ಗವಿಯು ಇರುವೆಯಾ ನುಂಗಿ
ಗೋವಿಂದಾ ಗುರುವಿನ ಪಾದ ನನ್ನನೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ..
ಗೋವಿಂದಾ ಗುರುವಿನ ಪಾದ ನನ್ನನೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ..
ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ..
---------------------------------------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಸೋರುತಿಹುದು ಮನೆಯ ಮಾಳಿಗಿ
ಸಾಹಿತ್ಯ: ಶಿಶುನಾಳ ಷರೀಫ್ ಸಂಗೀತ: ಸಿ.ಅಶ್ವಥ್ ಗಾಯನ: ಸಿ.ಅಶ್ವಥ್


ಏ... ರೇ ರೇ ರೆ ರೆ ರಾ.... ಏ...ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ  ದಾರುಗಟ್ಟಿ ಮಾಳ್ಪರಿಲ್ಲಾ
ಸೋರುತಿಹುದು ಮನೆಯ ಮಾಳಿಗಿ  ದಾರುಗಟ್ಟಿ ಮಾಳ್ಪರಿಲ್ಲಾ 
ಕಾಳಕತ್ತಲೆ ಒಳಗೆ ನಾನ್ ನೆಲಕೇರಿ ಮೆಟ್ಟಲಾರೆ
ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಮುರುಕು ತೊಲೆಯು ಹುಳುಕು ಜಂತಿ  ಕೊರೆದು ಸರಿದು ಕೀಲ ಕಡಲಿ
ಮುರುಕು ತೊಲೆಯು ಹುಳುಕು ಜಂತಿ  ಕೊರೆದು ಸರಿದು ಕೀಲ ಕಡಲಿ
ಹರಕು ಚಪ್ಪರ ಕೇರು ಗಿಂಡಿ ಮೇಲಕ್ಕೇ..ರಿ ಮೆಟ್ಟಲಾರೆ
ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಕಾಂತೆ ಕೇಳೆ ಕರುಣದಿಂದ ಬಂತು ಕಾಣೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ ಬಂತು ಕಾಣೆ ಹುಬ್ಬಿ ಮಳೆಯು
ಎಂತ ಶಿಶುನಾಳದೀಶತಾನು ರೆ ರೇ... ಏ... ರೇ....ಏ... ಹೇ............
ಎಂತ ಶಿಶುನಾಳದೀಶತಾನು  ನಿಂತು ಪೊರೆವನು ಎಂದು ನಂಬಿದೆ
ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
---- --------------------------------------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ತರವಲ್ಲ ತಗಿ ನಿನ್ನ
ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಸಿ.ಅಶ್ವಥ್ ಸಂಗೀತ: ಸಿ.ಅಶ್ವಥ್

ರೆರೆರೆರೆರೇ.........ರೆರೆರಾರಾರಾ........ರೆರೆ ರೆರೆ ರೇ...............
ತರವಲ್ಲ ತಗಿ ನಿನ್ನ ತಂಬೂರೀ ಸ್ವರ   ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಗಿ ನಿನ್ನ ತಂಬೂರೀ ಸ್ವರ   ಬರದೇ ಬಾರಿಸದಿರು ತಂಬೂರೀ..
ಸರಸ ಸಂಗೀತದ ಕುರುಹುಗಳರಿಯದೆ
ಬರಿದೆ ಬಾರಿಸದಿರೂ ತಂಬೂರೀ..
ತರವಲ್ಲ ತಗಿ ನಿನ್ನ ತಂಬೂರೀ ಸ್ವರ  ಬರದೇ ಬಾರಿಸದಿರು ತಂಬೂರೀ..

ಮದ್ದಾಲಿ ದನಿಯೊಳು ತಂಬೂರೀ ಅದಾ ತಿದ್ದಿ ನುಡಿಸಾಬೇಕು ತಂಬೂರೀ..
ಮದ್ದಾಲಿ ದನಿಯೊಳು ತಂಬೂರೀ ಅದಾ ತಿದ್ದಿ ನುಡಿಸಾಬೇಕು ತಂಬೂರೀ..
ಸಿದ್ಧಸಾಧಕರಾ ವಿದ್ಯೆಗೆ ಒದಗುವಾ
ಸಿದ್ಧಸಾಧಕರಾ ವಿದ್ಯೆಗೆ ಒದಗುವಾ ಬುದ್ಧಿವಂತಗೆ ದತ್ತಾ ತಂಬೂರೀ..
ತರವಲ್ಲ ತಗಿ ನಿನ್ನ ತಂಬೂರೀ ಸ್ವರ ಬರದೇ ಬಾರಿಸದಿರು ತಂಬೂರೀ..
ಹಸನಾದ ಮ್ಯಾಳಕೆ ತಂಬೂರೀ ಇದು ಕುಶಲರಿಗೊಪ್ಪುವಾ ತಂಬೂರೀ..
ಹಸನಾದ ಮ್ಯಾಳಕೆ ತಂಬೂರೀ ಇದು ಕುಶಲರಿಗೊಪ್ಪುವಾ ತಂಬೂರೀ..
ಶಿಶುನಾಳದೀಶನಾ ಓದು ಪುರಾಣದಿ ರೆರೆರೇ.................ಏ......................
ಶಿಶುನಾಳದೀಶನಾ ಓದು ಪುರಾಣದಿ ಹಸನಾಗಿ ಬಾರಿಸೊ ತಂಬೂರೀ..
ತರವಲ್ಲ ತಗಿ ನಿನ್ನ ತಂಬೂರೀ ಸ್ವರ ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಗಿ ನಿನ್ನ ತಂಬೂರೀ ಸ್ವರ ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಗಿ ನಿನ್ನ ತಂಬೂರೀ ಸ್ವರ ಬರದೇ ಬಾರಿಸದಿರು ತಂಬೂರೀ..

- --------------------------------------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಸವಾಲೊಂದು ನಿನ್ನ ಮ್ಯಾಲ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಯಶವಂತ ಹಳಿಬಂಡಿ 

ಸವಾಲೊಂದು ನಿನ್ನ ಮ್ಯಾಲ ಶಾಹಿರಕೆ
ಸವಾಲೊಂದು ನಿನ್ನಮ್ಯಾಲ
ಸವಾಲೊಂದು ನಿನ್ನಮ್ಯಾಲ || ಶಾಹಿರಕೆ ||
ಸವಾಲೊಂದು ನಿನ್ನ ಮ್ಯಾಲ ಶಾಹಿರಕೆ

ಬಯಲು ಅಲಾವಿಗೆ ನವಿಲು ಕುಣಿದು ನಿಂತು
ತೈಲವಿಲ್ಲದ ಜ್ಯೋತಿ ಬೆಳಕುಮದಿನದಿ
ಸವಾಲೊಂದು ನಿನ್ನಮ್ಯಾಲ ಶಾಹಿರಕೆ

ಬಂಡಿಗಾಡಿಯ ಬುಡಕ ಬೆಂಕಿಯ ಹಚ್ಚಿತ್ತು 
ಪುಂಡಯ ಜೀದನ ಕುಂಡಿಯ ಉರದಿತ್ತು
ಸವಾಲೊಂದು ನಿನ್ನಮ್ಯಾಲ ಶಾಹಿರಕೆ

ತಾಗುತ್ತಿನೊಳಗೊಂದು ತಗಡಿನ್ಹಸ್ತವಕಂಡು
ಮೆಹಬೂಬ್ ಶಿಶುನಾಳಧೀಶಗ ನಗೆ ಬಂದು
ಸವಾಲೊಂದು ನಿನ್ನಮ್ಯಾಲ ಶಾಹಿರಕೆ
-----------------------------------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಹಾಕಿದ ಜನಿವಾರವ ಸದ್ಗುರುನಾಥ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಬಿ.ಆರ್.ಛಾಯ,ಶಿವಮೊಗ್ಗ ಸುಬ್ಬಣ್ಣ 

ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ
ಹಾಕಿದ ಜನಿವಾರವ ನೂಕಿದ ಭವಭಾರ
ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು

ಸಂಧ್ಯಾವಂದನೆ ಕಲಿಸಿ ಆನಂದದಿ ಬಿಂದು ವರ್ಗವ ನಿಲಿಸಿ
ನಂದಿಸಿ ಮನಸನು ಆತ್ಮ ಜಲದಲಿ 
ಎಂದೆಂದಿಗೂ ಯಮದುಂದುಗವಳಿಯೆಂದು

ಕಂಡ ಕಂಡವರೊಡನೆ ಅಲೆದಿ
ಧರ್ಮಲಂದ ರಜತೆ ಯಾಕೆ ಬೆರದಿ?
ಪುಂಡ ನಿತನ ನೂಕು ಎಂದು ನಿಂದಿಸೆ
ಗುರುಗಂಡೆಂದರೀತನೆ ನೀವಲ್ಲಛೀ ಎಂದು ||

ಶಿಶುನಾಳಧೀಶ ಗುರು ತನ್ನೊಡಲೊಳು
ವಶವಾದ ಸೂತ್ರವನು
ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ
ಉಸುರಿದ ಮಂತ್ರವ ಹೊಸಬನ ಮೂಡುತ ||
-------------------------------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಎಲ್ಲರಂಥವನಲ್ಲ ನನ್ನ ಗಂಡ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಸಿ.ಅಶ್ವಥ್ 

ಎಲ್ಲರಂಥವನಲ್ಲ ನನ್ನ ಗಂಡ ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ ಎಲ್ಲರಂಥವನಲ್ಲ ಕೇಳೆ
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲೂ ಹೋಗದ ಹಾಂಗ ಮಾಡಿಟ್ಟಾ ಕಾಲ್ಮುರಿದು ಬಿಟ್ಟಾ
ಎಲ್ಲರಂಥವನಲ್ಲ ನನ್ನ ಗಂಡ

ತುಂಟ ಸವತಿಯ ಸೊಂಟಮುರಿ ಹೊಡೆದಾ
ಒಣ ಪಂಟಮಾತಿನ ಗಂಟುಗಳ್ಳರ ಮನೆಗೆ ಬರಗೊಡದಾ
ಕುಂಟಕುರುಡಾರೆಂಟು ಮಂದಿ ಗಂಟುಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ ತಕ್ಕವನೇ ಸಿಕ್ಕಾ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ

ಅತ್ತೆಮಾವರ ಮನೆಯ ಬಿಡಿಸಿದನೇ 
ಮತ್ತಲ್ಲಿ ಮೂವರ  ಮಕ್ಕಳೈವರ ಮಮತೆ ಕೆಡಿಸಿದನೇ 
ಎತ್ತ ಹೋಗದೆ ಚಿತ್ತವಗಲದೆ ಗೊತ್ತಿನಲ್ಲಿ ಇಟ್ಟು ನನ್ನನು 
ಮುತ್ತಿನಾ ಮೂಗುತಿಯ ಕೊಟ್ಟಾನೇ ಅವನೇನು ದಿಟ್ಟನೆ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ

ಕಾಂತೆ ಕೇಳೆ ಕರುಣ ಗುಣದಿಂದ ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಕೆ ಒಯ್ದು 
ಭ್ರಾಂತಿ ಭವ ದುರಿತವನು ಹರಿಸಿದನೇ ಶಿಶುನಾಳ ಧೀಶ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ
-----------------------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಮೋಹದ ಹೆಂಡತಿ ತೀರಿದ ಬಳಿಕ
ಸಂಗೀತ: ಸಿ.ಅಶ್ವಥ್
 ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಸಿ.ಅಶ್ವಥ್ 

ಮೋಹದ ಹೆಂಡತಿ ತೀರಿದ ಬಳಿಕ
ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ 
ಸಾವು ನೋವಿಗೆ ಸಾರುವ ಬೀಗನ ಮಾತಿನ ಹಂಗೂ ಏನಗ್ಯಾಕೋ?
ಮಾತಿನ ಹಂಗೂ ಏನಗ್ಯಾಕೋ?

ಕಂಡಾವನದಿ ಸೋಕಿ ತನ್ನ ಮೈಯೊಳು ತಾಕಿ
ಕಂಡಾವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವುದು ಭಯವ್ಯಾಕೋ?
ಮಂಡಲ್ಲನಾಡಿಗೆ ಪಿಂಡದ ಗೂಡಿಗೆ
ಮಂಡಲ್ಲನಾಡಿಗೆ ಪಿಂಡದ ಗೂಡಿಗೆ ಚಂಡಿತನದಿ ಚರಿಸ್ಯಾಡುವುದ್ಯಾಕೋ?
ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಸಾವು ನೋವಿಗೆ ಸಾರುವ ಬೀಗನ ಮಾತಿನ ಹಂಗೂ ಏನಗ್ಯಾಕೋ?
ಮಾತಿನ ಹಂಗೂ ಏನಗ್ಯಾಕೋ?

ತಂದೆ ಗೋವಿಂದ ಗುರುವಿನ ಸೇವಕ
ತಂದೆ ಗೋವಿಂದ ಗುರುವಿನ ಸೇವಕ ಕುಂದುಗೋಳಕೆ ಬಂದು ನಿಂತನ್ಯಾಕೋ?
ಬಂದೂರ ಶಿಶುನಾಳಾಧೀಶನ ದಯದಿಂದ
ಬಂದೂರ ಶಿಶುನಾಳಾಧೀಶನ ದಯದಿಂದ ಇಂದಿಗೆ ವಿಷಯದ ವ್ಯಸನಗಳ್ಯಾಕೋ?
ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಸಾವು ನೋವಿಗೆ ಸಾರುವ ಬೀಗನ ಮಾತಿನ ಹಂಗೂ ಏನಗ್ಯಾಕೋ?
ಮಾತಿನ ಹಂಗೂ ಏನಗ್ಯಾಕೋ?
-------------------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಗುಡಿಯ ನೋಡಿರಣ್ಣಾ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಸಿ.ಅಶ್ವಥ್ 

ಗುಡಿಯ ನೋಡಿರಣ್ಣಾ | ದೇಹದ | ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಿದು | ಪೊಡವಿಗೆ ಒಡೆಯನು ||
ಅಡಗಿಕೊಂಡು | ಕಡು | ಬೆಡಗಿನೊಳಿರುತಿಹ ಗುಡಿಯ ನೋಡಿರಣ್ಣಾ ||

ಮೂರು ಮೂಲೆಯ ಕಲ್ಲು | ಅದರೊಳು | ಜಾರುತಿರುವ ಕಲ್ಲು ||
ಧೀರ ನಿರ್ಗುಣನು | ಸಾರ ಸಗುಣದಲಿ ||
ತೋರಿ ಅಡಗಿ ತಾ | ಬ್ಯಾರ್ಯಾಗಿರುತಿಹ ಗುಡಿಯ ನೋಡಿರಣ್ಣಾ ||


ಆರು ಮೂರು ಕಟ್ಟಿ | ಮೇಲಕೆ | ಏರಿದವನು ಗಟ್ಟಿ ||
ಭೇರಿ ಕಾಳಿ ಶಂಖ | ಬಾರಿಸು ನಾದದಿ ||
ಮೀರಿದಾನಂದ | ತೋರಿ ಹೊಳೆಯುತಿಹ ಗುಡಿಯ ನೋಡಿರಣ್ಣಾ ||


ಸಾಗುತಿಹವು ದಿವಸ | ಬಹುದಿನ | ಹೋಗಿ ಮಾಡಿವಾಸ ||
ಯೋಗಿರಾಜ ಶಿಶುನಾಳಧೀಶ | ತಾನಾಗಿ ಪರಾತ್ಪರ ಬ್ರಹ್ಮರೂಪನಿಹ ||
|| ಗುಡಿಯ ನೋಡಿರಣ್ಣಾ ||
------------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಆಳಬೇಡ ತಂಗಿ ಅಳಬೇಡ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಶಿವಮೊಬ್ಬ ಸುಬ್ಬಣ್ಣ 

ಆಳಬೇಡ ತಂಗಿ ಅಳಬೇಡ
ಆಳಬೇಡ ತಂಗಿ ಅಳಬೇಡ ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ
ಆಳಬೇಡ ತಂಗಿ ಅಳಬೇಡ.. ಆಳಬೇಡ ತಂಗಿ ಅಳಬೇಡ

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ ದುಡಕೀಲೆ ಮುಂದಕ್ಕೆ ನೂಕಿದರವ್ವಾ
ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ದುಡಕೀಲೆ ಮುಂದಕ್ಕೆ ನೂಕಿದರವ್ವಾ
ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ
ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ
ಆಳಬೇಡ ತಂಗಿ ಅಳಬೇಡ.. ಆಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ
ಆಳಬೇಡ ತಂಗಿ ಅಳಬೇಡ.. ಆಳಬೇಡ ತಂಗಿ ಅಳಬೇಡ

ರಂಗೀಲಿ ಉಟ್ಟೀದಿ ರೇಶ್ಮಿ ಧಡಿ ಸೀರಿ ಮತ್ತ
ಹಂಗನೂಲಿನ ಪರವಿ ಮರತವ್ವ ನಾರಿ
ರಂಗೀಲಿ ಉಟ್ಟೀದಿ ರೇಶ್ಮಿ ಧಡಿ ಸೀರಿ
ಹಂಗನೂಲಿನ ಪರವಿ ಮರತವ್ವ ನಾರಿ
ಮಂಗಳ ಮೂರುತಿ ಶಿಶುವಾಳಧೀಶನ
ಮಂಗಳ ಮೂರುತಿ ಶಿಶುವಾಳಧೀಶನ
ಆಂಗಳಕ ನೀ ಹೊರತು ಆದೆವ್ವ ಗೌರಿ
ಆಳಬೇಡ ತಂಗಿ ಅಳಬೇಡ ಆಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ
ಆಳಬೇಡ ತಂಗಿ ಅಳಬೇಡ. ಆಳಬೇಡ ತಂಗಿ ಅಳಬೇಡ
---------------------------------------------------------------

ಸಂತ ಶಿಶುನಾಳ ಷರೀಫ್ (1990) - ಬಿದ್ದಿಯಬ್ಬೇ ಮುದುಕಿ
ಸಂಗೀತ: ಸಿ.ಅಶ್ವಥ್,  ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಶಿವಮೊಗ್ಗ ಸುಬ್ಬಣ್ಣ 

ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.
ನೀ ದಿನ ಹೋದಾಕಿ ಇರು ಭಾಳ ಜೋಕಿ
ನೀ ದಿನ ಹೋದಾಕಿ ಇರು ಭಾಳ ಜೋಕಿ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ

ಸದ್ಯಕಿದು ಹುಲುಗೂರ ಸಂತಿ ಗದ್ದಲದೊಳಗ್ಯಾಕ ನಿಂತಿ?
ಸದ್ಯಕಿದು ಹುಲುಗೂರ ಸಂತಿ ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ ಎದ್ದು ಹ್ಯಾಂಗ ಹಿಂದಕ ಬರತಿ?
ಬಿದ್ದು ಇಲ್ಲಿ ಒದ್ದಾಡಿದರ ಎದ್ದು ಹ್ಯಾಂಗ ಹಿಂದಕ ಬರತಿ?
ಬುದ್ದಿಗೇಡಿ ಮುದುಕಿ ನೀನು ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.

ಬುಟ್ಟಿಯಲ್ಲಿ ಪತ್ತಲ ಇಟ್ಟಿ ಅದನು ಉಟ್ಟ ಹೊತ್ತೊಳು ಜೋಕಿ
ಕೆಟ್ಟಗಂಟಿ ಚೌಡೇರು ಬಂದು ಉಟ್ಟದ್ದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.

ಶಿಶುನಾಳಾಧೀಶನ ಮುಂದೆ ಕೊಸರಿ ಕೊಸರಿ ಹೋಗಬ್ಯಾಡ,
ಶಿಶುನಾಳಾಧೀಶನ ಮುಂದೆ ಕೊಸರಿ ಕೊಸರಿ ಹೋಗಬ್ಯಾಡ
ಹಸನವಿಲ್ಲ ಹರಯ ಸಂದ ಪಿಸುರು ಪಿಚ್ಚುಗಣ್ಣಿನ ಮುದುಕಿ
ಹಸನವಿಲ್ಲ ಹರಯ ಸಂದ ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.
ನೀ ದಿನ ಹೋದಾಕಿ ಇರು ಭಾಳ ಜೋಕಿ
ನೀ ದಿನ ಹೋದಾಕಿ ಇರು ಭಾಳ ಜೋಕಿ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ-


---------------------------------------------------------

ಸಂತ ಶಿಶುನಾಳ ಷರೀಫ್ (1990) - ನಾ ನಾ ಎಂಬುದು ನಾನಲ್ಲ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಸಿ.ಅಶ್ವಥ್ 

ನಾ ನಾ ಎಂಬುದು ನಾನಲ್ಲ
ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ 
ನಾರಾಯಣ ಪರಬ್ರಹ್ಮ ಸದಾಶಿವ ನೀ ಎಣಿಸುವ ಗುಣ ನಾನಲ್ಲ
ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ

ನರದೇಹವಿದು ನಾನಲ್ಲ ಜರ ಮರಣಾದಿಯು ನಾನಲ್ಲ ... 
ನರದೇಹವಿದು ನಾನಲ್ಲ ಜರ ಮರಣಾದಿಯು ನಾನಲ್ಲ ... 
ವರ ವೈಭವ ಸಂಸಾರದ ಸವಿ ಸುಖ ಮರನಾಯಕ ನಾನಲ್ಲ
ಮಾತ ಪಿತ ಸುತ ನಾನಲ್ಲ ಗುರುನಾಥನಾದವ ನಾನಲ್ಲ ... 
ಮಾತ ಪಿತ ಸುತ ನಾನಲ್ಲ ಗುರುನಾಥನಾದವ ನಾನಲ್ಲ ... 
ಜಾತಿ ಗೋತ್ರಗಳು ನಾನಲ್ಲ ಬಹು ಪ್ರೀತಿಯ ಸತಿ ಸುತ ನಾನಲ್ಲ
ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ

ನಾನಾ ರೂಪವು ನಾನಲ್ಲ ನಾ ಶಿಷುನಾಳಧೀಶನ ಬಿಡಲಿಲ್ಲ ...
ನಾನಾ ರೂಪವು ನಾನಲ್ಲ ನಾ ಶಿಷುನಾಳಧೀಶನ ಬಿಡಲಿಲ್ಲ ...
ನಾ ಅಳಿಯದೆ ನಾ ತಿಳಿಯಲಾರದು
ನಾ ಅಳಿಯದೆ ನಾ ತಿಳಿಯಲಾರದು ನೀ ಎಣಿಸುವ ಗುಣ ನಾನಲ್ಲ
ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ ನೀ ಎಣಿಸುವ ಗುಣ ನಾನಲ್
----------------------------------------------------

ಸಂತ ಶಿಶುನಾಳ ಷರೀಫ್ (1990) - ಸ್ನೇಹ ಮಾಡಬೇಕಿಂತವಳ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಸಿ.ಅಶ್ವಥ್

ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ
ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!

ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.

ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!
----------------------------------------------------------------------------------

ಸಂತ ಶಿಶುನಾಳ ಷರೀಫ್ (1990) - ಸ್ನೇಹ ಮಾಡಬೇಕಿಂತವಳ
ಸಂಗೀತ: ಸಿ.ಅಶ್ವಥ್ ಸಾಹಿತ್ಯ: ಶಿಶುನಾಳ ಷರೀಫ್ ಗಾಯನ: ಸಿ.ಅಶ್ವಥ್

ಕೂ ಕೂ ಎನುತಿದೆ ಬೆಳವಾ
ಕೂ ಕೂ ಎನುತಿದೆ ಬೆಳವಾ-ಬಂದು
ಹೊಕ್ಕಿತು ಭವವೆಂಬ ದುಖಃದ ಹಳುವ
ಪುರುಷನ ಬುಟ್ಟೀಲಿ ಇಟ್ಟು- ಬಹು
ಹರುಷದಿ ಹಳ್ಳದೂಳ್ ತೇಲಾಕ ಬಿಟ್ಟು

ಮನವೆಂಬ ಗೂಡಿನೊಳಿಟ್ಟು- ತನ್ನ
ತನುವೆಂಬ ಮರ್ಅದೊಳು ಹಾರಾಕ ಬಿಟ್ಟು

ಆನಂದದೊಳು ತಾನಿರಲು- ಸ್ವಾ
ನಂದಿ ರೆಖ್ಖೆಯ ಕೆದರುತಲಿರಲು,

ಜ್ನಾನದ ಬೆಳಕಿನೊಳಿಹುದು- ದೇವ
ಶಿಶುನಾಳಾಧೀಶ ಗೋವಿಂದನ ವರವು

----------------------------------------------------------------------------------------------------------




1 comment:

  1. ನಿಮ್ಮ ಚಲನಚಿತ್ರ ಗೀತೆಗಳ ಸಾಹಿತ್ಯ ಒಂದೇಡೆ ದೊರಕುವಂತೆ ಮಾಡಿದ ಅನಂತ ಕಾರ್ಯಕ್ಕೆ ನನ್ನ ಅನಂತ ಧನ್ಯವಾದಗಳು ತಮಗೆ.

    ReplyDelete