873. ಶ್ರೀ ಕೃಷ್ಣ ಗಾರುಡಿ (೧೯೫೮)



ಶ್ರೀ ಕೃಷ್ಣ ಗಾರುಡಿ ಚಿತ್ರದ ಹಾಡುಗಳು 
  1. ಯದು ವೀರನಿಗೆ 
  2. ಬಾ ಹಾಡುವ ಸ್ಕತಿ  
  3. ಭಲೇ ಭಲೇ ಗಾರುಡೀ 
  4. ಜುಮ್ ಜುಮ್ ಜುಮ್ 
  5. ಆನಂದವಾ ಪರಮಾನಂದವ 
  6. ಪ್ರಮಾದಿ ದೇವತಾ 
  7. ಬೊಂಬೆಯಾಟವಯ್ಯಾ 
  8. ಈ ಮಾಯವೇನೋ 
  9. ಎಂಥ ಶಕ್ತಿವಂಥನಮ್ಮ 
  10. ಒಡಲಿನ ಹಸಿವಿ ನೋವಾ  
ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪೆಂಡ್ಯಾಲ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಜಕ್ಕಿ, ಘಂಟಸಾಲ, ರಾಣಿ 

ಗಂಡು : ಓ.. ಒಹೋ.. ಓಹೋಹೊಹೋ..
           ಹೇ.. ಭಲೇ ಭಲೇ ಗಾರುಡಿ ಬರುತಿಹ ನೋಡಿ
ಎಲ್ಲರು :  ಭಲೇ ಭಲೇ ಗಾರುಡಿ ಬರುತಿಹ ನೋಡಿ
ಗಂಡು :  ಕಲೆಗೂ ಕಲ್ಪನೆಗೂ ಸಿಲುಕದ ಗಾರುಡಿ
ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
            ಭಲೇ ಭಲೇ ಗಾರುಡಿ

ಗಂಡು : ಕನಸಲಿ ಕಾಣದ ನೆನಸಲಿ ನೋಡದಾ
            ಕನಸಲಿ ಕಾಣದ ನೆನಸಲಿ ನೋಡದಾ
           ಕಲಾಮಯ ನೋಟಗಳ ಕಾಣಲಿದೋ ಬನ್ನೀರಿ
ಎಲ್ಲರು :ಭಲೇ ಭಲೇ ಗಾರುಡಿ ಬರುತಿಹ ನೋಡಿ
           ಭಲೇ ಭಲೇ ಗಾರುಡಿ

ಗಂಡು : ಮನುಷ್ಯನ ಕೋತಿಯ ಶುನಕನ ನಾತಿಯ
           ಮನುಷ್ಯನ ಕೋತಿಯ ಶುನಕನ ನಾತಿಯ
           ಧರಾತಲಾ ಸ್ವರ್ಗವನು ಮಾಡುವ ಗುರುದೇವನು
ಹೆಣ್ಣು : ನಾಕವ ತೋರುವ ನರಕವ ತೋರುವ
          ನಾಕವ ತೋರುವ ನರಕವ ತೋರುವ
          ಮಹೇಂದ್ರನ ಕರೆತರುವ ಮೈಮರೆಸಿ ತೋರುವ 
ಎಲ್ಲರು :ಭಲೇ ಭಲೇ ಗಾರುಡಿ ಬರುತಿಹ ನೋಡಿ
           ಭಲೇ ಭಲೇ ಗಾರುಡಿ

ಗಂಡು  : ಪರಕಾಯ ಪ್ರವೇಶವೋ...  ಕಾಮರೂಪ ಧಾರಣವೋ 
             ಪರಕಾಯ ಪ್ರವೇಶವೋ...  ಕಾಮರೂಪ ಧಾರಣವೋ 
            ದೂರವಸ್ತು ದರ್ಶನವೋ ಕೋರಿದರೆ ಕಾಣ್ವಿರೀ 
           ಸಿಡಿಲಿನ ಆರ್ಭಟ ಪಿಡಿಗಿನ ಬೊರ್ಭಟ
           ಸಿಡಿಲಿನ ಆರ್ಭಟ ಪಿಡಿಗಿನ  ಬೊರ್ಭಟ
ಎಲ್ಲರು : ಝಟಾ ಪಟಾ ಝಂತಾಟಕ ತೋರುವನು ಈ ಭಟ 
            ಭಲೇ ಭಲೇ ಗಾರುಡಿ ಬರುತಿಹ ನೋಡಿ 
            ಭಲೇ ಭಲೇ ಗಾರುಡಿ

ಹೆಣ್ಣು :  ಮುರಳಿ ಗಾನವೋ ಮೋಹನ ರಾಸವೋ 
           ಮುರಳಿ ಗಾನವೋ ಮೋಹನ ರಾಸವೋ   
          ವಿಶ್ವ ರೂಪ ದರ್ಶನವೋ ಕೇಳಿದ ತೋರುವ.. 
ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ 
            ಭಲೇ ಭಲೇ ಗಾರುಡಿ
            ಕಲೆಗೂ ಕಲ್ಪನೆಗೂ ಸಿಲುಕದ ಗಾರುಡಿ
            ಭಲೇ ಭಲೇ ಗಾರುಡಿ ಬರುತಿಹ ನೋಡಿ
            ಭಲೇ ಭಲೇ ಗಾರುಡಿ
------------------------------------------------------------------------------------------------------------------------

ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ :ಪಿ.ಬಿ.ಶ್ರೀನಿವಾಸ 

ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆ  ಆಟವಯ್ಯಾ
ಅಂಬುಜನಾಭನ ಅಂತ್ಯವಿಲ್ಲದಾತನ
ತುಂಬು ಮಾಯಾವಯ್ಯಾ ಈ ಲೀಲೆಯ
ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆ  ಆಟವಯ್ಯಾ ಆ..ಆ...ಆ..ಆ..

ಜಗವ ಸುರಿಸಿ ಗತಿ ಸೂತ್ರವನಾಡಿಸಿ 
ನಗು ನಗುತಾ ಕುಣಿಸಿ ಮಾಯೆ ಬೀಸಿ 
ಜಗವ ಸುರಿಸಿ ಗತಿ ಸೂತ್ರವನಾಡಿಸಿ 
ನಗು ನಗುತಾ ಕುಣಿಸಿ ಮಾಯೆ ಬೀಸಿ 
ರಾಗದ ಭೋಗದ ಉರಿಯೊಳು ನಿಲ್ಲಸಿ 
ಬೊಂಬೆ ಆಡಿಸಿದ ನಲಿವ  
ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆ  ಆಟವಯ್ಯಾ   

ಕೃಷ್ಣಾ...
ನೀ ಸಾಕಿ ಸಲಹೆ ಸ್ವಾರ್ಥವೇನೋ
ನೀ ಕಾಡಿ ಕಣಲೇ ಆಂತರ್ಯವೇನೋ 
ನೀ ಸಾಕಿ ಸಲಹೆ ಸ್ವಾರ್ಥವೇನೋ
ನೀ ಕಾಡಿ ಕಣಲೇ ಆಂತರ್ಯವೇನೋ 
ತಿಳಿ ಹೇಳೆಯಾ ಒಳಮರ್ಮ ತೋರೆಯಾ... ಆ...ಆ..ಆ..ಆ. 
ತಿಳಿ ಹೇಳೆಯಾ ಒಳಮರ್ಮ ತೋರೆಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ 
ಬೊಂಬೆ  ಆಟವಯ್ಯಾ ಆಆಆಆ.... ಆಆಆಆ....ಆಆಆಆ....
ಬೊಂಬೆ  ಆಟವಯ್ಯಾ ಆಆಆಆ....ಆಆಆಆ....

ನಿನ್ನವರ ಸ್ಥಿತಿಗತಿ ನೆಲೆಯಿಲ್ಲದಾಗೆ
ನಿನಗೆ ಸಮ್ಮತವೇ ಈ ರೀತಿ ಮೌನ...
ನಿನಗೆ ಸಮ್ಮತವೇ ಈ ರೀತಿ ಮೌನ
ಕಿವಿಗೊಟ್ಟು ದಯವಿಟ್ಟು ಪೊರೆಯೋ ಮಹಾರಾಯ 
ಕಿವಿಗೊಟ್ಟು ದಯವಿಟ್ಟು ಪೊರೆಯೋ ಮಹಾರಾಯ 
ಅವತಾರ ಮೂರ್ತಿ ಇನ್ನೇಕ್ಕಯ್ಯಾ ಈ ಶಾಂತಿ 
ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ ಆ ದೇವನಾಡುವ 
ಬೊಂಬೆ  ಆಟವಯ್ಯಾ 

ಅಭಿಮಾನ ನೀಗಿಸಿ ಅರಿವನು ತೋರಿಸಿ 
ಅಂಧಂತೇ ಕಳೆವಂತ ಅಖಿಲಾಂಡ ನಾಯಕ 
ಅಭಿಮಾನ ನೀಗಿಸಿ ಅರಿವನು ತೋರಿಸಿ 
ಅಂಧಂತೇ ಕಳೆವಂತ ಅಖಿಲಾಂಡ ನಾಯಕ 
ವೀರಸವೊ ಸರಸವೊ ಸಾಕೋ ಸಾಕಯ್ಯಾ
ವೀರಸವೊ ಸರಸವೊ ಸಾಕೋ ಸಾಕಯ್ಯಾ
ಕರುಣಿಸೋ ಜಿಯಾ ಸುರನುತ ಚಿನ್ಮಯ 
ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ
ಆ ದೇವನಾಡುವ  ಬೊಂಬೆ  ಆಟ
ಆಹಾ..ಬೊಂಬೆ ಆಟ ಆಹಾ..ಬೊಂಬೆ ಆಟವಯ್ಯಾ ಆ..ಆ...ಆ..ಆ..
--------------------------------------------------------------------------------------------------------------------------

ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ :ಪಿ.ಸುಶೀಲಾ, ಜಾನಕೀ, ಜಿಕ್ಕಿ, ರಾಣಿ  

ಕೋರಸ್ :  ಯದುವೀರನಿಗೆ  ಯುಗಪುರುಷನಿಗೆ
                 ಮಧು ವೈರಿಗೇ ಆರುತಿ ಸಖಿ ಬೆಳಗೆ
                ಯದುವೀರನಿಗೆ ಯುಗಪುರುಷನಿಗೆ
                 ಮಧು ವೈರಿಗೇ ಆರುತಿ ಸಖಿ ಬೆಳಗೆ
                ಯದುವೀರನಿಗೆ ಯುಗಪುರುಷನಿಗೆ
ಹೆಣ್ಣು :  ನವಯುಗ ತಂದಿಹ ನಂದಕುಮಾರ
           ನಾಡಿನ ಘನತೆಯ ಸೂತ್ರಧರ
           ನವಯುಗ ತಂದಿಹ ನಂದಕುಮಾರ
           ನಾಡಿನ ಘನತೆಯ ಸೂತ್ರಧರ
ಕೋರಸ್: ಯದುವೀರನಿಗೆ  ಯುಗಪುರುಷನಿಗೆ                     

ಕೋರಸ್: ಆಆಆಅ ಆಆಆಅ
ಹೆಣ್ಣು: ದೀನರ ಭಾವ ದೇವರ ದೇವಾ
         ಮಾನವ ರೂಪವ ತಾಣಿಪು ಬಾ
         ಮಾನವ ರೂಪವ ತಾಣಿಪು ಬಾ
ಕೋರಸ್ : ಇವ್ ಹಾಲನ ಕೋಟಿಯ ವರದೈವ          
                ಯದುವೀರನಿಗೆ  ಯುಗಪುರುಷನಿಗೆ
                ಮಧು ವೈರಿಗೆ ಆರುತಿ ಸಖಿ ಬೆಳಗೆ
                ಯದುವೀರನಿಗೆ ಯುಗಪುರುಷನಿಗೆ

ಕೋರಸ್: ಆಆಆಅ ಆಆಆಅ
ಹೆಣ್ಣು : ಪ್ರೇರಕನಾಗಿ ಚಾರಕನಾಗಿ 
          ಮಾರಣ ಹೋಮವ ಗೈದಿರುವಾ 
          ಮಾರಣ ಹೋಮವ ಗೈದಿರುವಾ 
ಕೋರಸ್ : ಇವ ಮಾರನ್ ಪ್ರೇಮದ ಪರದೈವ       
                ಯದುವೀರನಿಗೆ  ಯುಗಪುರುಷನಿಗೆ
                ಮಧು ವೈರಿಗೆ ಆರುತಿ ಸಖಿ ಬೆಳಗೆ
                ಯದುವೀರನಿಗೆ ಯುಗಪುರುಷನಿಗೆ

ಹೆಣ್ಣು : ಸಜನರ ಪಾಂಡವ ಸಾರಥಿಯೆನಿಸಿ 
           ಕಾದಿಹ ಸುಜನರ ಆದರಿಸಿ  
          ಫಲನದೇ ಪಾಂಡವ ಸಾರಥಿಯೆನಿಸಿ 
          ಕಾದಿಹ ಸುಜನರ ಆದರಿಸಿ  
         ಬೋಧಿಸಿ ಗೀತ  ಕರ್ಮವನೀತ
         ಮೇದಿನಿ ಮೇಗಡೆ ನಿಂತಿರುವಾ
         ಮೇದಿನಿ ಮೇಗಡೆ ನಿಂತಿರುವಾ
ಕೋರಸ್ : ಇವ್ ಮಾಧವ ನೀಗುವ ಪರದೈವ
                ಯದುವೀರನಿಗೆ  ಯುಗಪುರುಷನಿಗೆ
                ಮಧು ವೈರಿಗೆ ಆರುತಿ ಸಖಿ ಬೆಳಗೆ
                ಯದುವೀರನಿಗೆ ಯುಗಪುರುಷನಿಗೆ
-------------------------------------------------------------------------------------------------------------------------
               
ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಜಾನಕೀ 

ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯದ  ರವಿ ಮೂಡಿದ ಚರಿತೆ
ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯದ  ರವಿ ಮೂಡಿದ ಚರಿತೆ

ಖಣಿ ಖಣಿಲೆನ್ನುತಾ ಖಡ್ಗವ ಬೀಸಿ
ಹಣಿದು ವೈರಿಗಳ ವಂಶವನಳಿಸಿ
ವೀರರವವರು ಬಿಸಿರಕುತದ ಧಾರೆ....
ವೀರರವವರು ಬಿಸಿರಕುತದ ಧಾರೆ
ಎರೆದ ಶಶಿದ ಭಾಗ್ಯವಿದಂತೆ
ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯದ  ರವಿ ಮೂಡಿದ ಚರಿತೆ

ನಮ್ಮಿ ನಾಡಿನ ಪರತಂತ್ರವನು 
ಭೇಧಿಸಿ ತಂದರು ನವಚೇತನವ 
ಭಾರತ ಜನನಿಯ ಜಯಭೇರಿಯದು 
ವರದದು ಚರಿತವ  ಗುಡುಗಾಡುವುದು... ಆಆಆ... 
ಈ ಮಹೋತ್ಸವದ ಮಧುರ ಸ್ಮರಣೆಯ  
ಈ ವೈಭೋಗದ ಅಮರ ಪದವಿಯ... ಆಆಆ... 
ಈ ಮಹೋತ್ಸವದ ಮಧುರ ಸ್ಮರಣೆಯ  
ಈ ವೈಭೋಗದ ಅಮರ ಪದವಿಯ... 
ತಂದವರ ಅಡಿಗೆ ನುಡಿ ವಂದನೆಯ
ತಂದವರ ಅಡಿಗೆ ನುಡಿ ವಂದನೆಯ
------------------------------------------------------------------------------------------------------------------------- 
   
ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಜಿಕ್ಕಿ(ಪಿಲ್ಲವಲು ಗಜಪತಿ ಕೃಷ್ಣವೇಣಿ)   

ಝುಮ್ ಝುಮ್ ಝುಮ್ ಝುಮ್ ಎನುತಾ
ಹಿಮ್ಮಿ ಕೇಲಿಕುತ ಕುಣಿವುದೇ ಥಕತಾ
ಝುಮ್ ಝುಮ್ ಝುಮ್ ಝುಮ್ ಎನುತಾ
ಹಿಮ್ಮಿ ಕೇಲಿಕುತ ಕುಣಿವುದೇ ಥಕತಾ

ಆಆಆ... ಆಆಆ... ಆಆಆ....
ಇದೇ ಜೀವನದ ಕಲೆ ಇದೇ ಜೇನಿರುವ ನಲೆ
ಇದೇ ಜೀವನದ ಕಲೆ ಇದೇ ಜೇನಿರುವ ನಲೆ
ತನು ಬಳುಕಿ ಮನ ತುಳುಕಿ 
ತನು ಬಳುಕಿ ಮನ ತುಳುಕಿ 
ಕುಣಿ ಕುಣಿ ಕುಣಿ ಕುಣಿ ಕುಣಿ  
ಝುಮ್ ಝುಮ್ ಝುಮ್ ಝುಮ್ ಎನುತಾ
ಹಿಮ್ಮಿ ಕೇಲಿಕುತ ಕುಣಿವುದೇ ಥಕತಾ

ಆಆಆ... ಆಆಆ... ಆಆಆ....
ಇದೇ ಯೌವ್ವನದ ಮುದ ನಗೆ ಎಲ್ಲಿರಲಿ ಸದಾ 
ಇದೇ ಯೌವ್ವನದ ಮುದ ನಗೆ ಎಲ್ಲಿರಲಿ ಸದಾ 
ದನುವಳಿಯೇ ಮನತಣಿಯೇ 
ಕುಣಿ ಕುಣಿ ಕುಣಿ ಕುಣಿ ಕುಣಿ  
ಝುಮ್ ಝುಮ್ ಝುಮ್ ಝುಮ್ ಎನುತಾ
ಹಿಮ್ಮಿ ಕೇಲಿಕುತ ಕುಣಿವುದೇ ಥಕತಾ

ಆಆಆ... ಆಆಆ... ಆಆಆ....
ರತಿ ರಂಭೆಯರ ಕರೆ ಜತೆಗೂಡುತಲಿ ಮೇರೇ 
ರತಿ ರಂಭೆಯರ ಕರೆ ಜತೆಗೂಡುತಲಿ ಮೇರೇ 
ಇದು ಮನಸು ನಯವರಿಸು 
ಇದು ಮನಸು ನಯವರಿಸು
ಕುಣಿ ಕುಣಿ ಕುಣಿ ಕುಣಿ ಕುಣಿ  
ಝುಮ್ ಝುಮ್ ಝುಮ್ ಝುಮ್ ಎನುತಾ
ಹಿಮ್ಮಿ ಕೇಲಿಕುತ ಕುಣಿವುದೇ ಥಕತಾ
ಝುಮ್ ಝುಮ್ ಝುಮ್ ಝುಮ್ ಎನುತಾ
ಹಿಮ್ಮಿ ಕೇಲಿಕುತ ಕುಣಿವುದೇ ಥಕತಾ 
--------------------------------------------------------------------------------------------------------------------------

ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ :ಜಿಕ್ಕಿ(ಪಿಲ್ಲವಲು ಗಜಪತಿ ಕೃಷ್ಣವೇಣಿ)   

ಆನಂದವಾ ಪರಮಾನಂದವಾ
ನಮ್ಮ ಜೀವಾ ವಿನೋದದಿ ಓಲಾಡುವಾ
ಆನಂದವಾ ಪರಮಾನಂದವಾ
ನಮ್ಮ ಜೀವಾ ವಿನೋದದಿ ಓಲಾಡುವಾ
ರಾಗ ಬೇಕೇ ಭೋಗ ಬೇಕೇ 
ಸಾಧ್ವೀ ಬಾರೆಯ್ಯ್ ಸಂದೇಹವೇಕೆ  
ರಾಗ ಬೇಕೇ ಭೋಗ ಬೇಕೇ 
ಸಾಧ್ವೀ ಬಾರೆಯ್ಯ್ ಸಂದೇಹವೇಕೆ 
ಆನಂದವಾ ಪರಮಾನಂದವಾ
ನಮ್ಮ ಜೀವಾ ವಿನೋದದಿ ಓಲಾಡುವಾ 

ನಿನಗೆ ಪ್ರೇಮ ನಿನಗೆ ಪ್ರಾಣ 
ನಿನಗೆ ಪ್ರೇಮ ನಿನಗೆ ಪ್ರಾಣ 
ನಿನಗೆ ವಿಲಾಸದ ಮಹೋತ್ತಣ 
ಬಾ ಜಾಣ ಬಾ ಸುಖದಿ ನಾವ್ ತೇಲುವಾ 
ಆನಂದವಾ ಪರಮಾನಂದವಾ
ನಮ್ಮ ಜೀವಾ ವಿನೋದದಿ ಓಲಾಡುವಾ 

ಕನಸು ನೀನೇ ನನಸು ನೀನೇ
ಕನಸು ನೀನೇ ನನಸು ನೀನೇ
ಮನದಿ ವಿರೋಚಿಪ  ಮನೋಜಲ
ನೀನಿನೇ ಬಾ... ಸುಖದಿ ನಾವ್ ತೇಲುವಾ
ಆನಂದವಾ ಪರಮಾನಂದವಾ
ನಮ್ಮ ಜೀವಾ ವಿನೋದದಿ ಓಲಾಡುವಾ 
ರಾಗ ಬೇಕೇ ಭೋಗ ಬೇಕೇ 
ಸಾಧ್ವೀ ಬಾರೆಯ್ಯ್ ಸಂದೇಹವೇಕೆ 
ಆನಂದವಾ ಪರಮಾನಂದವಾ
ನಮ್ಮ ಜೀವಾ ವಿನೋದದಿ ಓಲಾಡುವಾ 
ಆಆಆ... ಆಆಆ... ಆಆಆ.... 
-------------------------------------------------------------------------------------------------------------------------

ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ :ಘಂಟಸಾಲ 

ಪ್ರಮಾದಿ ದೇವತಾ  ಪುರುಷ ಪುರಾಣಹಃ
ತಮಸೈ ವಿಶ್ಲೇಶ್ಯ ಪರಂ ನಿಧಾನೌ...ಓಓಓ
ವೇತಾಸೀ ವೇದಂತ್ಯ ಪರಂತ್ಯಧಾಮ
ಸ್ವಯಾತತಂ ವಿಶ್ವಮನಂತ ರೂಪಾ... ಆಆಆ...

ವಾಯೋರಿಯಮೋಗ್ನಿರ್ವ ಋಣಸ್ಯ ಶಾಂಕಹಃ
ಪ್ರಜಾಪತಿತ್ವಂ ಪ್ರಪಿತಾಮಹಃ ಹಸ್ಯಾ..
ನಮೋ ನಮಸ್ತೇಸ್ತು  ಸಹಸ್ರ ಕೃತವಃ ....
ಪುನಸ್ಯ ಭೂಯೋಪೀ ನಮೋ ನಮಸ್ತೇ.....

ನಮ ಪುರಸ್ತಾಧದ ಫ್ರುಷ್ಠಥತಸ್ಸೇ...
ನಮೊತ್ಸುತೇ ಸರ್ವತಯತೇವ ಸರ್ವ
ಅನಂತ ವೀರ್ಯಾಮಿತವಿಕ್ರಮತತ್ವವೌ
ಸರ್ವಂ ಸಮಪಾನೌಶೀ  ತತೋತೀತರ್ವಹಃ
ಆಆಆಆಅ... ಆಆಆಅ... ಆಆಆ...
--------------------------------------------------------------------------------------------------------------------------
         
ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ :ಪಿ.ಸುಶೀಲಾ, 

ಈ ಮಾಯವೇನೋ ಈ ಜಾಲವೇನೋ
ಈ ಪಂಥದಾ ಅಂತ್ಯ ಪರಿಣಾಮವೇನೋ ಈ ಮಾಯವೇನೋ

ಗೆಲುವಾಯ್ತೋ ಸೋಲಾಯ್ತೋ ಏನಾಯ್ತು ಏನೆಂಬ
ಗೆಲುವಾಯ್ತೋ ಸೋಲಾಯ್ತೋ ಏನಾಯ್ತು ಏನೆಂಬ
ಮನಚಿಂತೆ ಈ ಜೀವ ಹೀಗಾಯ್ತು ದೇವಾ 
ಈ ಮಾಯವೇನೋ ಈ ಜಾಲವೇನೋ
ಈ ಪಂಥದಾ ಅಂತ್ಯ ಪರಿಣಾಮವೇನೋ ಈ ಮಾಯವೇನೋ..

ದಿನರಾತ್ರಿ ಈ ಭೀತಿ ಉರಿಯಲ್ಲಿ ಇರಿಸಿ 
ಮನನೊಂದು ಕಣ್ಣೀರ ತಂದಾಯ್ತು 
ಕೊನೆಯೆಂದು ಕಾಣೇ ದಯ ತೋರು ನಿನ್ನಾಣೆ 
ಈ ಮಾಯವೇನೋ ಈ ಜಾಲವೇನೋ
ಈ ಪಂಥದಾ ಅಂತ್ಯ ಪರಿಣಾಮವೇನೋ ಈ ಮಾಯವೇನೋ.. 

ಈ ಪಾಂಡು ಸಂತಾನ ನನಪ್ರಾಣವೆಂಬಂತ
ಈ ಪಾಂಡು ಸಂತಾನ ನನಪ್ರಾಣವೆಂಬಂತ
ನೀನ ಪ್ರೇಮ ಏನಾಯ್ತೋ ಕಾಪಾಡು ಕೃಷ್ಣ 

ಕೋರಸ್ : ಈ ಮಾಯವೇನೋ ಈ ಜಾಲವೇನೋ
               ಈ ಪಂಥದಾ ಅಂತ್ಯ ಪರಿಣಾಮವೇನೋ ಈ ಮಾಯವೇನೋ.. 
--------------------------------------------------------------------------------------------------------------------------

ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಸುಶೀಲಾ 


ಹೆಣ್ಣು : ಎಂಥ ಶಕ್ತಿವಂತನಮ್ಮ ಮುದ್ದು ಕೃಷ್ಣನು
         ಹಾಲಂಥ ಮೈಯಿಯಿರುವವನಮ್ಮ ಗೋವಿಂದನು
         ಆನಂದಮಯನು ಅವನಮ್ಮ ಗೋವಿಂದನು
ಕೊರಸ : ಎಂಥ ಶಕ್ತಿವಂತನಮ್ಮ ಮುದ್ದು ಕೃಷ್ಣನು
         ಹಾಲಂಥ ಮೈಯಿಯಿರುವವನಮ್ಮ ಗೋವಿಂದನು
         ಆನಂದಮಯನು ಅವನಮ್ಮ ಗೋವಿಂದನು

ಹೆಣ್ಣು : ವಿಷದ ಹಾಲು ಕೊಡಲು ಬಂದ ಪೂತನಿ ಪ್ರಾಣಾ...
ಕೋರಸ್ : ಪೂತನಿ ಪ್ರಾಣಾ...
ಹೆಣ್ಣು : ಆಆಆ... ವಿಷದ ಹಾಲು ಕೊಡಲು ಬಂದ ಪೂತನಿ ಪ್ರಾಣಾ...
          ಲೇಸಾಗಿ ಹೀರಿ ಗೋಣ ಮುರಿದನು ಜಾಣ 
ಕೊರಸ : ಎಂಥ ಶಕ್ತಿವಂತನಮ್ಮ ಮುದ್ದು ಕೃಷ್ಣನು
         ಹಾಲಂಥ ಮೈಯಿಯಿರುವವನಮ್ಮ ಗೋವಿಂದನು
         ಆನಂದಮಯನು ಅವನಮ್ಮ ಗೋವಿಂದನು

ಹೆಣ್ಣು : ಕಾಲಕೋಟ ವಿಷದ ಘೋರ ನಾಥನ ಮೇಲೆ
ಕೋರಸ್ : ನಾಥನ ಮೇಲೆ...
ಹೆಣ್ಣು : ಆಆಆ.. ಕಾಲಕೋಟ ವಿಷದ ಘೋರ ನಾಥನ ಮೇಲೆ
        ಕಾಲ ನಿಟ್ಟು ಕುಣಿದ ಕೃಷ್ಣ ತೋರಿದ ಲೀಲೆ 
ಕೊರಸ : ಎಂಥ ಶಕ್ತಿವಂತನಮ್ಮ ಮುದ್ದು ಕೃಷ್ಣನು
         ಆನಂದಮಯನು ಅವನಮ್ಮ ಗೋವಿಂದನು
         ಆನಂದಮಯನು ಅವನಮ್ಮ ಗೋವಿಂದನು 

ಹೆಣ್ಣು : ಯಾಗ ಕೆಡಿಸಿ ಕಲ್ಲು ಮಳೆಯ ಸುರಿಸ ಇಂದ್ರನು 
ಕೋರಸ್ : ಯಾಗ ಕೆಡಿಸಿ ಕಲ್ಲು ಮಳೆಯ ಸುರಿಸ ಇಂದ್ರನು
ಹೆಣ್ಣು : ಗೊರವಧನ ಗಿರಿಯ ಶಕ್ತಿ ಕೊಡೈಯ ಗೈದನೋ
ಕೊರಸ : ಎಂಥ ಶಕ್ತಿವಂತನಮ್ಮ ಮುದ್ದು ಕೃಷ್ಣನು
         ಆನಂದಮಯನು ಅವನಮ್ಮ ಗೋವಿಂದನು
         ಆನಂದಮಯನು ಅವನಮ್ಮ ಗೋವಿಂದನು 
ಹೆಣ್ಣು : ಆಆಆಆಅ....ಆ....ಆಆಆ.. 
ಕೊರಸ : ಎಂಥ ಶಕ್ತಿವಂತನಮ್ಮ ಮುದ್ದು ಕೃಷ್ಣನು
         ಆನಂದಮಯನು ಅವನಮ್ಮ ಗೋವಿಂದನು
         ಆನಂದಮಯನು ಅವನಮ್ಮ ಗೋವಿಂದನು 
         ಎಂಥ ಶಕ್ತಿವಂತನಮ್ಮ ಮುದ್ದು ಕೃಷ್ಣನು
         ಆನಂದಮಯನು ಅವನಮ್ಮ ಗೋವಿಂದನು
         ಆನಂದಮಯನು ಅವನಮ್ಮ ಗೋವಿಂದನು 
--------------------------------------------------------------------------------------------------------------------------

ಶ್ರೀ ಕೃಷ್ಣ ಗಾರುಡಿ (೧೯೫೮)
ಸಂಗೀತ : ಪಿ.ನಾಗೇಶ್ವರಾವ ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ :ಜಿಕ್ಕಿ(ಪಿಲ್ಲವಲು ಗಜಪತಿ ಕೃಷ್ಣವೇಣಿ)   

ಒಡಲಿನ ಹಸಿವಿನ ನೋವ ತಡೆಯದೆ ಬಳಲಿದೆ ಜೀವಾ
ಬಾಡಿತೆ ತಿಳಿಸಿ ಭಾವ ಕೂಳ ಬೇಕೇ ಹೇಳಲೇಕೆ ಹಾಳು ಶಂಕೆ
ಒಡಲಿನ ಹಸಿವಿನ ನೋವ ತಡೆಯದೆ ಬಳಲಿದೆ ಜೀವಾ
ಬಾಡಿತೆ ತಿಳಿಸಿ ಭಾವ

ನೀನಲೇಣಸಿ ದೀಪ ನಿಯ ನಿನಗೀವೆ ಪೋರಯ್ಯಗೀಯ
ನೀನಲೇಣಸಿ ದೀಪ ನಿಯ ನಿನಗೀವೆ ಪೋರಯ್ಯಗೀಯ
ಪ್ರಾಣ ಉಳಿಯಲಿ ಮೌನ ಅಳಿಯಲಿ ಜ್ಞಾನ ಬೆಳಗಲಿ ಬಾ ಜೀಯಾ... 
ಒಡಲಿನ ಹಸಿವಿನ ನೋವ ತಡೆಯದೆ ಬಳಲಿದೆ ಜೀವಾ
ಬಾಡಿತೆ ತಿಳಿಸಿ ಭಾವ

ಮುಜಗದೀ ನೀ ಹಮ್ಮಿರ ನಿನಗೇಕೆ ಹಾಹಾಕಾರ 
ವೈರಿ ಅಥವಾ ಹೀರಿ ಮೆರೆದ ವೀರ ತನವೂ ಈಗೇನಾಯ್ತು 
ಒಡಲಿನ ಹಸಿವಿನ ನೋವ ತಡೆಯದೆ ಬಳಲಿದೆ ಜೀವಾ
ಬಾಡಿತೆ ತಿಳಿಸಿ ಭಾವ

ಪಾಂಡು ಸುತನ ಆಟೋಪ ಮುಗಿದಾಯ್ತೆ ಅಯ್ಯೋ ಪಾಪ 
ಪಾಂಡು ಸುತನ ಆಟೋಪ ಮುಗಿದಾಯ್ತೆ ಅಯ್ಯೋ ಪಾಪ 
ಬಂಡಿ ಅನ್ನವ ಉಂಡು ತೇಗುವಾ ಗಂಡುಗಲಿಗೆ ಹೀಗೇಕಾಯ್ತು 
ಒಡಲಿನ ಹಸಿವಿನ ನೋವ ತಡೆಯದೆ ಬಳಲಿದೆ ಜೀವಾ
ಬಾಡಿತೆ ತಿಳಿಸಿ ಭಾವ ಕೂಳ ಬೇಕೇ ಹೇಳಲೇಕೆ ಹಾಳು ಶಂಕೆ
ಒಡಲಿನ ಹಸಿವಿನ ನೋವ
-----------------------------------------------------------------------------------------------------------------------

1 comment:

  1. lyrics ಸ್ವಲ್ಪ ತಪು ಇವೆ ಅನಿಸುತೆ

    ReplyDelete