963. ದಶಾವತಾರ (೧೯೬೦)

ದಶಾವತಾರ ಚಿತ್ರದ  ಹಾಡುಗಳು 
  1. ಶೃಂಗಾರ ಮೋಹಿನಿ ನಿಂದಿಹೆನು
  2. ಒಂದೇ ಬಳ್ಳಿಯ ಹೂವು  ಇದು ಮುಂದೆ ದೇವಿಯ ಪಾದ
  3. ವೈದೇಹಿ ಏನಾದಳೂ 
  4. ಕೇಶವ ಮಾಧವ ಗೋವಿಂದ
  5. ಆನಂದ ಮಹದಾನಂದ 
  6. ಎಲ್ಲಿಹ ತನುಜಾತ ಮಾಧವನೆಲ್ಲಿಹ 
  7. ಜಗದಲಿ ಸ್ತ್ರೀಯರ ಮನವ 
  8. ರಘುಪತಿ ರಾಘವ ರಾಜರಾಮನ 
  9. ನಂದಾನ ನಂದನ ಆನಂದ ಕಂದನ 
  10. ಬಾರೇ ರಾಧಿಕೆ ಕೋಪ ಏತಕೆ 
  11. ಕಲಿಯುಗದೇ ಉದ್ದಾರ ಗುಣ 
ಹಾಡಿದವರು : ಪಿ.ಬಿ.ಶ್ರೀ, ಪಿ.ನಾಗೇಶ್ವರಾವ್, ರಾಧಾ ಜಯಲಕ್ಷ್ಮಿ, ಎಸ್.ಜಾನಕೀ, ಏ.ಪಿ.ಕೋಮಲ್, ರಾಜೇಶ್ವರಿ, ರಾಜಕುಮಾರ

ದಶಾವತಾರ (೧೯೬೦) - ಶೃಂಗಾರ ಮೋಹಿನಿ ನಿಂದಿಹೆನು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ  ಗಾಯನ : ಪಿ.ಲೀಲಾ

ಆಆಆಆ
ಶೃಂಗಾರ ಮೋಹಿನಿ ನಿಂದಿಹೆನು
ಶೃಂಗಾರ ಮೋಹಿನಿ ನಿಂದಿಹೆನು ನಿಮ್ಮೆದುರೇ
ಬಂಗಾರ ಕಲಶವಿದೆ ಅಮೃತಧಾರೆ
ಶೃಂಗಾರ ಮೋಹಿನಿ ನಿಂದಿಹೆನು ನಿಮ್ಮೆದುರೇ
ಬಂಗಾರ ಕಲಶವಿದೆ ಅಮೃತಧಾರೆ

ಮೂದವೀವ ದೇವ ಸುಧೆಯಿರಲು ಅದತಂದ ನಾನಿರಲು
ಮೂದವೀವ ದೇವ ಸುಧೆಯಿರಲು ಅದತಂದ ನಾನಿರಲು
ಸೌಂದರ್ಯ ಮಾಧುರ್ಯ ಸೇರಿ ಬರಲು
ಸೌಂದರ್ಯ ಮಾಧುರ್ಯ ಸೇರಿ ಬರಲು ಮೋಹಕ
ಶೃಂಗಾರ ಮೋಹಿನಿ ನಿಂದಿಹೆನು ನಿಮ್ಮೆದುರೇ
ಬಂಗಾರ ಕಲಶವಿದೆ ಜೀವಧಾರೆ 

ಕಾಮಿನಿಯ ಕಣ್ಣೋಟ ಪ್ರೇಮಮಯ ರಸದೂಟ 
ಸುಮ ಹೃದಯದಿ ಮುಗುದೆ ಚೆಲುವಿನ  ನೋಡನಾಟ 
ಕಲಹಂಸಿ ಒಲಿದಿಂದು ಮೆಲ್ಲನೆ ಬಾ ಎಂದು 
ಕಲಹಂಸಿ ಒಲಿದಿಂದು ಮೆಲ್ಲನೆ ಬಾ ಎಂದು 
ಭೃಮರ ನರ್ತನವಾಡೆ ನೀ ಕರೆಯ ಬಂದಿಹೆನು 
ಸಮವಾಗಿ ನಾ ಹಂಚುವೇ ಸುಧೆಯನ್ನೇ 
ಎಲ್ಲರಿಗೂ ನಲ್ಮೆಯನೇ ಕೋರುವೆ ನಾನೇ 
ಸಮವಾಗಿ ನಾ ಹಂಚುವೇ ಸುಧೆಯನ್ನೇ 
ಎಲ್ಲರಿಗೂ ನಲ್ಮೆಯನೇ ಕೋರುವೆ ನಾನೇ 
ಕಾದುವುದಿನ್ನೇಕೆ ದಾನವರೇ 
ಕಾದುವುದಿನ್ನೇಕೆ ದಾನವರೇ ತ್ರಿದಶರು ನೀವೂ ಸೋದರರೇ 
ತ್ರಿದಶರು ನೀವೂ ಸೋದರರೇ ..ಅಲ್ಲವೇ 
ಶೃಂಗಾರ ಮೋಹಿನಿ ನಿಂದಿಹೆನು ನಿಮ್ಮೆದುರೇ
ಬಂಗಾರ ಕಲಶವಿದೆ ಅಮೃತಧಾರೆ 
ಶೃಂಗಾರ ಮೋಹಿನಿ
 -------------------------------------------------------------------------------------------------------------------------

ದಶಾವತಾರ (೧೯೬೦) - ಒಂದೇ ಬಳ್ಳಿಯ ಹೂವು,
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ  ಗಾಯನ : ಪಿ.ಲೀಲಾ, ಪಿ.ನಾಗೇಶ್ವರಾವ್,

ಒಂದೇ ಬಳ್ಳಿಯ ಹೂವು,
ಒಂದೇ ಬಳ್ಳಿಯ ಹೂವು  ಇದು ಮುಂದೆ ದೇವಿಯ ಪಾದ
ನೊಂದು ಬೇಡುವಾ ಹೃದಯಾ...   ಬೇರೆ ಬೇರೆ
ಒಂದೇ ಬಳ್ಳಿಯ ಹೂವು  ಇದು ಒಂದೇ ದೇವಿಯ ಪಾದ
ನೊಂದು ಬೇಡುವಾ ಹೃದಯಾ...   ಬೇರೆ ಬೇರೆ
ಒಂದೇ ಬಳ್ಳಿಯ ಹೂವು,ಒಂದೇ ಬಳ್ಳಿಯ ಹೂವು,

ಸತ್ಯದೇವತೆಯು  ಎನ್ನ ಪಕ್ಕದಲೇ ಕುಳಿತಿಹಳು
ಮಂಗಳದ ಮುಂಬೆಳಕ ಕಾದಿಹಳು...  ಅವಳು
ಸತ್ಯದೇವತೆಯು  ಎನ್ನ ಪಕ್ಕದಲೇ ಕುಳಿತಿಹಳು
ಮಂಗಳದ ಮುಂಬೆಳಕ ಕಾದಿಹಳು
ಪಾಲಿಸೆನ್ನಲೇ ಪತಿಯ ಪಾತಕವು ಸಮನಿಸದೇ
ಪಾಲಿಸೆನ್ನಲೇ ಪತಿಯ ಪಾತಕವು ಸಮನಿಸದೇ
ಬೇಡದಿರಲೇ....  ಸತಿಯಾ ಧರ್ಮವ ಬಿಡಲೇ
ಒಂದೇ ಬಳ್ಳಿಯ ಹೂವು,ಒಂದೇ ಬಳ್ಳಿಯ ಹೂವು,

ಯಾರ ಪಾರ್ಥನೆಗೊಲಿವೆ ಯಾರ ಮಂಗಳ ತರುವೇ
ಯಾರ ಪಾರ್ಥನೆಗೊಲಿವೆ ಯಾರ ಮಂಗಳ ತರುವೇ
ಪುಣ್ಯ ಪಾಪವ ಇಂದೇಕೆ,  ಅಳೆಯುವೇ...
ಒಂದು ಕಣ್ಣನು ಮೆರೆಸಿ ಒಂದು ಕಣ್ಣನು ಅಳಿಸಿ
ಕಣ್ಣು ಕುಕ್ಕುವ ಈ ಆಟ ಬೇಡತಾಯೇ
ಜಯಗೌರಿ ಜಯಕಾಳಿ ಜಯಶಂಕರಿ
ಒಂದೇ ಬಳ್ಳಿಯ ಹೂವು  ಇದು ಒಂದೇ ದೇವಿಯ ಪಾದ
ನೊಂದು ಬೇಡುವಾ ಹೃದಯಾ...   ಬೇರೆ ಬೇರೆ
ಒಂದೇ ಬಳ್ಳಿಯ ಹೂವು,ಒಂದೇ ಬಳ್ಳಿಯ ಹೂವು,
--------------------------------------------------------------------------------------------------------------------------

ದಶಾವತಾರ (೧೯೬೦) - ವೈದೇಹಿ ಏನಾದಳೂ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಪಿ.ಬಿ.ಶ್ರೀನಿವಾಸ

ಗೋದಾವರಿ ದೇವಿ ಮೌನವಾಂತಿಹೀ ಏಕೇ ವೈದೇಹಿ ಏನಾದಳೂ 
ವೈದೇಹಿ ಏನಾದಳೂ 

ಪ್ರೀತಿ ಅಮೃತವನೆರೆದೂ ಜೀವ ಜ್ಯೋತಿಯ ಬೆಳಗಿ 
ನೀತಿ ನೇಹದ ದಾರಿ ತೋರಿದವಳೂ....  ವೈದೇಹಿ ಏನಾದಳೂ 
ವೈದೇಹಿ ಏನಾದಳೂ 

ಮಾಮರದ ಮರೆಯಲ್ಲಿ ಕುಳಿತಿರುವ ಕೋಗಿಲೆಯೇ ನಿನ್ನ ದನಿ ಜತೆಯಲ್ಲೇ 
ತನ್ನ ದನಿ ಸೇರಿಸುತ ಪ್ರೇಮಗಾನದ ಸುಧೆಯ ಹರಿಸಿದವಳೂ...  ವೈದೇಹಿ ಏನಾದಳೂ 
ವೈದೇಹಿ ಏನಾದಳೂ 

ಮಲ್ಲೆ ಮಲ್ಲಿಗೆ ಜಾಜಿ ಸಂಪಿಗೆಯ ಹೂವುಗಳೇ ...  
ಮಲ್ಲೆ ಮಲ್ಲಿಗೆ ಜಾಜಿ ಸಂಪಿಗೆಯ ಹೂವುಗಳೇ ಎಲ್ಲ ನಗು ಮೊಗವೆಲ್ಲಾ 
ತನ್ನೊಡನೇ ನಗಲೆಂದು ಶಿರದಲ್ಲಿ ಧರಿಸಿದವಳೂ....... ವೈದೇಹಿ ಏನಾದಳೂ 
ವೈದೇಹಿ ಏನಾದಳೂ 

ಮಸಣ ಮೌನದೇ ಸುಳಿವ ವಿತಿನವಾಸಿಗಳೇ... ನೀವೂ ಧರಣಿಜಾತೆಯ ಕಾಣೀರಾ... 
ಧರಣಿಜಾತೆಯ ಕಾಣೀರಾ... 
ನೇಸರ ನೀ ನೀನೇಕೆ  ಮೊರೆ ಮರೆ ಮಾಡುತಿಹೆ 
ಸೀತೆಯ ಇರುವನೂ ತೊರೆಯಾ...  
ಸೀತೆಯ ಇರುವನೂ ತೊರೆಯಾ   ವೈದೇಹಿ ಏನಾದಳೂ 
ವೈದೇಹಿ ಏನಾದಳೂ 
--------------------------------------------------------------------------------------------------------------------------

ದಶಾವತಾರ (೧೯೬೦) - ಕೇಶವ ಮಾಧವ ಗೋವಿಂದ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಪಿ.ಬಿ.ಶ್ರೀನಿವಾಸ 

ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತ
ಧರ್ಮ ಸಂಸ್ಥಾಪನಾರ್ಥಾಯ  ಸಂಭವಾಮಿ ಯುಗೇ ಯುಗೇ
ಕೇಶವ ಮಾಧವ ಗೋವಿಂದ
ಕೇಶವ ಮಾಧವ ಗೋವಿಂದ ದೋಷರಹಿತ ನರವೇಷವ ಧರಿಸಿದ
ಕೇಶವ ಮಾಧವ ಗೋವಿಂದ ದೋಷರಹಿತ ನರವೇಷವ ಧರಿಸಿದ
ಕೇಶವ ಮಾಧವ ಗೋವಿಂದ 

ಖಳನು ವೇದವನು ಒಯ್ಯೇ ಒಲೆವ ಕಾಯನಾದ 
ಖಳನು ವೇದವನು ಒಯ್ಯೇ  ಒಲೆವ ಕಾಯನಾದ 
ಘಳಿಲನೇ ಕೂರ್ಮಾತಾನಾಗಿ ಗಿರಿಯ ಪೋತ್ತ 
ಘಳಿಲನೇ ಕೂರ್ಮಾತಾನಾಗಿ ಗಿರಿಯ ಪೋತ್ತ 
ಇಳೆಯಕದಸುರನಾ ಕೋರೆದಾಡಿಲಿ ಕೊಂದಾ 
ಇಳೆಯಕದಸುರನಾ ಕೋರೆದಾಡಿಲಿ ಕೊಂದಾ 
ಛಲದಿ ಕಂಬದಿ ಬಂದು ಅಸುರನಾ ಸೀಳಿದಾ 
ಕೇಶವ ಮಾಧವ ಗೋವಿಂದ ದೋಷರಹಿತ ನರವೇಷವ ಧರಿಸಿದ
ಕೇಶವ ಮಾಧವ ಗೋವಿಂದ 

ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ  
ಛಲದಿ ಕ್ಷತ್ರಿಯರ ಕುಲವ ಸಂಹರಿಸಿದಾ 
ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ  
ಛಲದಿ ಕ್ಷತ್ರಿಯರ ಕುಲವ ಸಂಹರಿಸಿದಾ 
ಲಲನೆಯ ಲುಯ್ಯೇ ತಾ ಕಲೆ ಹಸನ ಕೊಂದಾ 
ನೆಲಕ ಹೊಸಿಕಿ ಕಂಸನಾ ಬಲವನಳಿದ 
ಕುಂದುತ ನದಿ ಪೋಗಿ ಪುರವನು ರುಚಿ ಬಂದಾ 
ಕುಂದುತ ನದಿ ಪೋಗಿ ಪುರವನು ರುಚಿ ಬಂದಾ 
ನಂದರ ಸೇದೆಯಲು ತುರಗವನೇರಿದಾ 
ಕೇಶವ ಮಾಧವ ಗೋವಿಂದ ಪುರಂದರ ವಿಠ್ಠಲಾ ಗೋಪಾಲಾ
ಕೇಶವ ಮಾಧವ ಗೋವಿಂದ 
--------------------------------------------------------------------------------------------------------------------------

ದಶಾವತಾರ (೧೯೬೦) - ಆನಂದ ಮಹಾದಾನಂದ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ,  ಗಾಯನ : ಪಿ.ಲೀಲಾ

ಆನಂದ ಮಹಾದಾನಂದ
ಆನಂದ ಮಹಾದಾನಂದ ವೇದ ಶಿಶುಗಳ ಸಾಗರದಿಂದ
ವೇದ ಶಿಶುಗಳ ಸಾಗರದಿಂದ ತಂದು ಲೋಕ ಸಭೆಗೆ ನೀಡಿದ
ಆನಂದ ಮಹಾದಾನಂದ ವೇದ ಶಿಶುಗಳ ಸಾಗರದಿಂದ
ತಂದು ಲೋಕ ಸಭೆಗೆ ನೀಡಿದ
ಆನಂದ ಮಹಾದಾನಂದ 

ಕಿನ್ನರಿ ಹಾಡಲೀ ಮೋಹ ಮಯೂರಿಯಾಡಲಿ ಆಆಆ.... 
ಕಿನ್ನರಿ ಹಾಡಲೀ ಮೋಹ ಮಯೂರಿಯಾಡಲಿ 
ಹೊನ್ನ ಹಾಸಿಗೇ ಹರವಿರಲೀ ಹರನ ಶರಣಿ ಭುವನ ಮೋಹಿನಿ 
ಹರಣಿ ಶರಣಿ ನಾಟ್ಯವಾಡಲಿ ಇಂದೂ ದೇವ ಸಭೆಗೆ  ಕಾರಣ 
ಆನಂದ ಮಹಾದಾನಂದ ವೇದ ಶಿಶುಗಳ ಸಾಗರದಿಂದ 
ತಂದು ಲೋಕ ಸಭೆಗೆ ನೀಡಿದ
ಆನಂದ ಮಹಾದಾನಂದ 

ನಾನೇ ನಲವಿಂದೇ ನಿಮಗೆಂದೇ ನರ್ತಿಸಿ ನಿಂದೇ 
ನಾನೇ ನಲವಿಂದೇ ನಿಮಗೆಂದೇ ನರ್ತಿಸಿ ನಿಂದೇ 
ಸುರೇಶ್ವರನ ಮಹಾ ವಿಧವಾ ಕಂಡು ಮೊರೆವೇನೆ ನಾದ ಸುಧೇ 
ಸುರೇಶ್ವರನ ಮಹಾ ವಿಧವಾ ಕಂಡು ಮೊರೆವೇನೆ ನಾದ ಸುಧೇ 
ಇದೇ ಸುದಿನ ಹರಿಯುದಯದ ವೀರ ಮಧುವನ ಇದು ಸುಧಕರ ಮುಖ ಕಾದಿದೇ 
ಪ್ರೇಮ ರಾಜ್ಯದಲಿ ಸತ್ಯಸಾಕ್ಷಿಲಿ ವೇದಮಾಲಿಕೆಯ ವಿಜಯ ತಂದಿದೇ
ಆನಂದಾ.... ಆಆಆ... ಆಆಆ... ಆನಂದ ಮಹಾದಾನಂದ ಮಹಾದಾನಂದ
--------------------------------------------------------------------------------------------------------------------------

ದಶಾವತಾರ (೧೯೬೦) - ಎಲ್ಲಿಹ ತನುಜಾತ ಮಾಧವನೆಲ್ಲಿಹ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ :ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ :ಡಾ।। ರಾಜಕುಮಾರ, ರಾಜೇಶ್ವರೀ  

ಹಿರಣ್ಯಕಶ್ಯಪು : ಎಲ್ಲಿಹ ತನುಜಾತ ಮಾಧವ ಎಲ್ಲಿಹ ತನುಜಾತ 
                           ಎಲ್ಲಿಹ ತನುಜಾತ ಮಾಧವ ಎಲ್ಲಿಹ ತನುಜಾತ 
ಪ್ರಹ್ಲಾದ : ಎಲ್ಲೆಲ್ಲೂ ಇರುವ ದಾತ ಮಾಧವ ಇಲ್ಲೇ ಇರುವ ದಾತ 
                   ಎಲ್ಲೆಲ್ಲೂ ಇರುವ ದಾತ ಮಾಧವ ಇಲ್ಲೇ ಇರುವ ದಾತ 
ಹಿರಣ್ಯಕಶ್ಯಪು : ಬಿಚ್ಚುವೆನೂ ಜಾತ ಮಾಧವ ಬಿಚ್ಚುವೆನೂ ಜಾತ 
ಪ್ರಹ್ಲಾದ :  ತ್ರಿಭುವ ರಕ್ಷಿಪನವ ಧಾತ ತ್ರಿಭುವ ರಕ್ಷಿಪನವ ಧಾತ 
ಹಿರಣ್ಯಕಶ್ಯಪು : ಹುಚ್ಚ ಹುಡುಗ ಏಕೋ ಮೆಚ್ಚುಗೆ ಹಂತಕ ಹರಿಯನ್ನೂ 
ಪ್ರಹ್ಲಾದ :  ಅಚ್ಯುತ ಅವನನ್ನೂ ನಂಬದೇ ಲೋಕವು ಇಹುದೇನು 
ಹಿರಣ್ಯಕಶ್ಯಪು : ಅಹ್ಹಹ್ಹ.. ಸ್ಮರಣೆ ಗಂಗೆ ಹರಿಯು ಮರೆಯಲಿ ಅವಿತು ಕುಳಿತನೇನೂ 
ಪ್ರಹ್ಲಾದ :  ಶರಣ ಜನರ ಫೊರೆಯೇ ಕರೆದೊಡೆ ಓಡಿ ಬರುವ ಅವನೂ 
--------------------------------------------------------------------------------------------------------------------------

ದಶಾವತಾರ (೧೯೬೦) - ಜಗದಲಿ ಸ್ತ್ರೀಯರ ಮನವ 
ಸಂಗೀತ :ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಏ.ಪಿ.ಕೋಮಲ್, 

--------------------------------------------------------------------------------------------------------------------------

ದಶಾವತಾರ (೧೯೬೦) - ರಘುಪತಿ ರಾಘವ ರಾಜರಾಮನ 
ಸಂಗೀತ :ಜಿ.ಕೆ.ವೆಂಕಟೇಶ, 
ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಎಸ್.ಜಾನಕೀ 

ರಘುಪತಿ ರಾಘವ ರಾಜರಾಮನ ನಗು ಮೊಗ ನೋಡಲು ಕಾದಿಹೆರಾ.. 
ನಗು ಮೊಗ ನೋಡಲು ಕಾದಿಹೆರಾ.. 
ರಘುಪತಿ ರಾಘವ ರಾಜರಾಮನ ನಗು ಮೊಗ ನೋಡಲು ಕಾದಿಹೆರಾ.. 
ನಗು ಮೊಗ ನೋಡಲು ಕಾದಿಹೆರಾ.. 
ನಗು ಮೊಗ ನೋಡಲು ಕಾದಿಹೆರಾ.. 

ನಿಮ್ಮಯ ಪುಣ್ಯದೇ ಎನ್ನನು ಬಳಸಿ ರಾಮನ ಪಾದದ ಬಳಿ ನಿಲಿಸಿ... 
ನಿಮ್ಮಯ ಪುಣ್ಯದೇ ಎನ್ನನು ಬಳಸಿ ರಾಮನ ಪಾದದ ಬಳಿ ನಿಲಿಸಿ... 
ಪಾಹಿ ಪರಿಪಾಹಿ.. ಪಾಹಿ ಪರಿಪಾಹಿ.. 
ಹೂವಿನ ಜೊತೆಗೆ ನಾರನೂ ಸೇರಿಸಿ.. 
ಹೂವಿನ ಜೊತೆಗೆ ನಾರನೂ ಸೇರಿಸಿ ಜೀವನ ಸ್ವಾರ್ಥಕ ಎಂದೆನಿಸಿ... 
ರಘುಪತಿ ರಾಘವ ರಾಜರಾಮನ ನಗು ಮೊಗ ನೋಡಲು ಕಾದಿಹೆರಾ.. 
ನಗು ಮೊಗ ನೋಡಲು ಕಾದಿಹೆರಾ.. 
ನಗು ಮೊಗ ನೋಡಲು ಕಾದಿಹೆರಾ.. 

ಅರಿವಿನ ಎಳೆಯ ಹರೆಯದ ವೇಳೆಗೆ ದೇಹವು ಜರಿಯ ತಾಳುತಿದೆ 
ಅರಿವಿನ ಎಳೆಯ ಹರೆಯದ ವೇಳೆಗೆ ದೇಹವು ಜರಿಯ ತಾಳುತಿದೆ 
ರಾಮ.. ರಘುರಾಮ ರಾಮ.. ರಘುರಾಮ 
ಸಾಯುವ ವರೆಗೂ ತಪವ ಮಾಡಿದರೂ .. 
ಸಾಯುವ ವರೆಗೂ ತಪವ ಮಾಡಿದರೂ .. 
ಪೂರ್ವದ ಪುಣ್ಯವು ಸಾಲದಿದೆ.. 
ರಘುಪತಿ ರಾಘವ ರಾಜರಾಮನ ನಗು ಮೊಗ ನೋಡಲು ಕಾದಿಹೆರಾ.. 
ನಗು ಮೊಗ ನೋಡಲು ಕಾದಿಹೆರಾ.. 
ನಗು ಮೊಗ ನೋಡಲು ಕಾದಿಹೆರಾ.. 
ರಾಮ.. ರಘುರಾಮ ರಾಮ.. ರಘುರಾಮ 
ರಾಮ.. ರಘುರಾಮ 
-------------------------------------------------------------------------------------------------------------------------

ದಶಾವತಾರ (೧೯೬೦) - ನಂದಾನ ನಂದನ ಆನಂದ ಕಂದನ 
ಸಂಗೀತ :ಜಿ.ಕೆ.ವೆಂಕಟೇಶ, 
ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಎಸ್.ಜಾನಕೀ 

--------------------------------------------------------------------------------------------------------------------------

ದಶಾವತಾರ (೧೯೬೦) - ಬಾರೇ ರಾಧಿಕೆ ಕೋಪ ಏತಕೆ 
ಸಂಗೀತ :ಜಿ.ಕೆ.ವೆಂಕಟೇಶ, 
ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ :  ರಾಜೇಶ್ವರಿ,

--------------------------------------------------------------------------------------------------------------------------

ದಶಾವತಾರ (೧೯೬೦) - ಕಲಿಯುಗದೇ ಉದ್ದಾರ ಗುಣ 
ಸಂಗೀತ :ಜಿ.ಕೆ.ವೆಂಕಟೇಶ, 
ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ರಾಧಾ ಜಯಲಕ್ಷ್ಮಿ

--------------------------------------------------------------------------------------------------------------------------

1 comment:

  1. ರಘುಪತಿ ರಾಘವ ರಾಜಾರಾಮ ಹಾಡಿನ ಸಾಹಿತ್ಯ ದಯವಿಟ್ಟು ತಿಳಿಸಿ/ಹಾಕಿ.

    ReplyDelete