964. ಸತಿ ಶಕ್ತಿ (೧೯೬೩)

ಸತಿ ಶಕ್ತಿ  ಚಿತ್ರದ ಹಾಡುಗಳು
  1. ಆಡಿ ಪಾಡಿ ಒಡನಾಡಿ ಓಲಾಡಿ 
  2. ಹುಯ್ಯೋ ಹುಯ್ಯೋ ಮಳೆರಾಯ 
  3. ಜಾರಿ ಬಿದ್ದೀಯೆ ಓ.. ಜಾಣ 
  4. ಅಚ್ಚಮಲ್ಲಿಗೆ ಹೂವು ಮೆಚ್ಚಿಕೊ ಮಲ್ಲಯ್ಯ 
  5. ಶ್ರೀ ಮಾತೆ ಪಾಪಂಬೆ 
  6. ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
  7. ಮಾತೆಗೆ ಮಿಗಿಲಾದ ದೇವರಿಲ್ಲ 
  8. ಬಾ ತಾಯೇ ಬಾ 
  9. ಚಂದಮಾಮ ದಾಯಿ 
  10. ಮಂದಾರ ನಂದನ 
  11. ಜಯ ವಿಜಯೀಭವ 
  12. ಯಾರು ನೀನೆಲೆ ನಾರಿ 
ಸತಿ ಶಕ್ತಿ  (೧೯೬೩) - ಆಡಿ ಪಾಡಿ ಒಡನಾಡಿ ಓಲಾಡಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಘಂಟಸಾಲ, ಪಿ.ಲೀಲಾ

ಆಡಿ ಪಾಡಿ ಒಡನಾಡಿ ಓಲಾಡಿ
ಆನಂದ ತಾಂಡವ ಆಡಬಲ್ಲ
ಅನುರಾಗ ಪರಿಪೂರ್ಣ ಜಗದಾದಿ ಜೋಡಿ

ಸ್ವರ ರಾಗ ತಾಳ ಲಯಬದ್ಧ ರಾಗಿ
ಮನಸ್ಫೂರ್ತಿಯಿಂದ ಒಡನಾಡಿ
ಸಾರಂಗ ಭೃಂಗಮುದ್ರಾ ಮುಖಾಂಗ
ಅಭಿನಯ ತರಂಗದೊಲಾಡಿ
ಈ ರಾಗ ರಂಗ ಲೀಲಾ ಪ್ರಸಂಗ
ಶಿವಶಕ್ತಿ ಸಂಗಮದ ಹೊನ್ನುಡಿ
ಭಾರತಾರ್ಯ ಬರೆವ ವರನಾಟ್ಯ ಶಾಸ್ತ್ರ
ರಸಲಾಸ್ಯ ಕಾವ್ಯಕೆ ಮುನ್ನುಡಿ
ಆಡಿ ಪಾಡಿ ಒಡನಾಡಿ ಓಲಾಡಿ
ಆನಂದ ತಾಂಡವ ಆಡಬಲ್ಲ
ಅನುರಾಗ ಪರಿಪೂರ್ಣ ಜಗದಾದಿ ಜೋಡಿ

ಮಹಾಪ್ರೇಕ್ಷಕರ ಮನಾಂದಕರ
ಮಹಾಜಾಗೃತಿಯ ಜಾಣ್ಣುಡಿ
ಕಲಾರಾಧಕರ ಕಲಾಕೋವಿದರ
ಕಲೋಪಾಸಕರ ಕನ್ನಡಿ ಮರೆಯದ ಮಾರ್ನುಡಿ
ಘನತರ ಗಾರುಡಿ ವಿವಿಧ ವಿನ್ಯಾಸದ ರಸ ಮೋಡಿ
ಹೃದಯನಯನ ತೆರೆದೋಲಾಡಿ ಒಡನಾಡಿ ಜೊತೆಗೂಡಿ
ಆಡಿ ಪಾಡಿ ಒಡನಾಡಿ ಓಲಾಡಿ
ಆನಂದ ತಾಂಡವ ಆಡಬಲ್ಲ
ಅನುರಾಗ ಪರಿಪೂರ್ಣ ಜಗದಾದಿ ಜೋಡಿ
--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಹುಯ್ಯೋ ಹುಯ್ಯೋ ಮಳೆರಾಯ...
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಪಿ.ಲೀಲಾ

ಹೆಣ್ಣು : ಹುಯ್ಯೋ ಹುಯ್ಯೋ ಮಳೆರಾಯ...
ಕೊರಸ್ : ಹುಯ್ಯೋ  ಹುಯ್ಯೋ ಮಳೆರಾಯ...
              ಮಳೆರಾಯ...  ನಮ್ಮಿ ಬಾಳೇ ಬೇಸಾಯ
              ಬೇಸಾಯ್ ಹುಯ್ಯೋ  ಹುಯ್ಯೋ ಮಳೆರಾಯ...  ಮಳೆರಾಯ...

ಹೆಣ್ಣು : ಮೈ ಬಗ್ಗಿ ದುಡಿದರೇ ಆದಾಯ ಸೋಮಾರಿ ಆದರೇ ಹೀನಾಯ
          ಮೈ ಬಗ್ಗಿ ದುಡಿದರೇ ಆದಾಯ ಸೋಮಾರಿ ಆದರೇ ಹೀನಾಯ
          ನುಡಿದಂತೆ ನಡೆದರೇ ಸಂದಾಯ  
          ನುಡಿದಂತೆ ನಡೆದರೇ ಸಂದಾಯ ಹೊಲಗದ್ದೆ ಬೆಳೆದರೇ ಕಂದಾಯ
ಕೊರಸ್ : ಹುಯ್ಯೋ  ಹುಯ್ಯೋ ಮಳೆರಾಯ...  ಮಳೆರಾಯ

ಹೆಣ್ಣು : ರೈತರಾಸೆ ಧ್ವಜಪತಾಕೆ ಸಿಡಿದು ನಡೆಯುವಾ
          ಕಾಡುಮೇಡು ಉತ್ತು ಬಿತ್ತಿ ಕ್ಷಾಮ ನೀಗುವಾ
          ರೈತರಾಸೆ ಧ್ವಜಪತಾಕೆ ಸಿಡಿದು ನಡೆಯುವಾ
          ಕಾಡುಮೇಡು ಉತ್ತು ಬಿತ್ತಿ ಕ್ಷಾಮ ನೀಗುವಾ
          ಜೀವನಾಡಿ ಪಂಕ್ತಿ ಮಾಡಿ ಒಲಿದು ಪಾಡುವಾ
          ಜೀವನಾಡಿ ಪಂಕ್ತಿ ಮಾಡಿ ಒಲಿದು ಪಾಡುವಾ
         ತುಂಗಭದ್ರೆ ನಾಡಿನಲ್ಲಿ ನಾಟ್ಯ ಮಾಡುವಾ
ಕೊರಸ್ : ನಾಟ್ಯ ಮಾಡುವಾ ... ಹುಯ್ಯೋ  ಹುಯ್ಯೋ ಮಳೆರಾಯ...  ಮಳೆರಾಯ

ಹೆಣ್ಣು : ಕನ್ನಡಾಂಬೆ ಮನೆಯ ಜನರ ಸಾಕುವಂತಥೇ (ಸಾಕುವಂತಥೇ )
          ಫಿರಭಿಮಾನ  ನಿದ್ರೆಯಿಂದ ಏಳಿ ಜಾಗ್ರತೇ (ಏಳಿ ಜಾಗ್ರತೇ)
          ಸ್ವಾಭಿಮಾನ ಸ್ವಾರ್ಥವಲ್ಲ ಮನದಾವಾಯಿತೇ  ...ಆಆಆ....
          ಸ್ವಾಭಿಮಾನ ಸ್ವಾರ್ಥವಲ್ಲ ಮನದಾವಾಯಿತೇ 
          ತಾಯಿ ಮಕ್ಕಳಾಗಿ ಬಾಳಿ ಜ್ಯೋತಿ ಜಾಗ್ರತೇ
ಕೊರಸ್ : ಜ್ಯೋತಿ ಜಾಗ್ರತೇ .. ಹುಯ್ಯೋ  ಹುಯ್ಯೋ ಮಳೆರಾಯ...  ಮಳೆರಾಯ
              ಮಳೆರಾಯ...  ನಮ್ಮಿ ಬಾಳೇ ಬೇಸಾಯ
              ಬೇಸಾಯ್ ಹುಯ್ಯೋ  ಹುಯ್ಯೋ ಮಳೆರಾಯ...  ಮಳೆರಾಯ...         
              ಮಳೆರಾಯ... ಮಳೆರಾಯ...
--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಜಾರಿ ಬಿದ್ದಿಯೇ ಓ ಜಾಣ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ :  ಎಸ್.ಜಾನಕೀ 

ಜಾರಿ ಬಿದ್ದಿಯೇ ಓ ಜಾಣ ಜಾರಿ ಬಿದ್ದಿಯೇ ಓ ಜಾಣ
ಜಾರೋ ದಾರಿ ಜೋಪಾನ ತಾಳಿ ಬಾಳೋ ಸಂಧಾನ
ತಾಳಿ ಬಾಳಿ ಬಾಳೋ ಸಂಧಾನ ಕಲಿಯೋ ತಿಳಿಯೋ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ

ಮರಳು ರಾಶಿಯ ಮೇಲೆ ನೆರಳು ಬೆಳಕಿನ ನಡುವೆ
ಕಟ್ಟಿರುವ ಗಾಳಿ ಗೋಪುರದಾ..... ಗಾಜಿನ ಅರಮನೆಯ ಒಳಗೆ
ತುಂಬಿರುವ ಐಸಿರಿಗೆ ಬೆರಗಾಗಿ
ಜಾರಿ ಬಿದ್ದಿಯೇ ಓ ಜಾಣ....ಆಆಆಆ  ಜಾರಿ ಬಿದ್ದಿಯೇ ಓ ಜಾಣ

ದೈವಿಕಮಾಗಿರುವ  ಪುರುಷ ಪೌರಷದಿಂದಾ...
ಬಿಸಿಲ್ಗುದುರೆಯನೇರಿ ಕಾಮನ ಬಿಲ್ಲು ಹಿಡಿದು
ಆಕಾಶ ದೇಶದೆಡೆ  ಆರ್ಭಟಿಸಿ ಗಾಳಿಹಿಡೇ
ಸಾರ್ಥಕವೇ ಸಾಹಸವೇ ಸಾಧನೆಯೇ ಜೋಕೇ.. ಜೋಕೇ
ಜಾರಿ ಬಿದ್ದಿಯೇ ಓ ಜಾಣ.... ಆಆಆ...  ಜಾರಿ ಬಿದ್ದಿಯೇ ಓ ಜಾಣ
ಜಾರೋ ದಾರಿ ಜೋಪಾನ ತಾಳಿ ಬಾಳಿ ಬಾಳೋ ಸಂಧಾನ
ತಾಳಿ ಬಾಳಿ ಬಾಳೋ ಸಂಧಾನ ಕಲಿಯೋ ತಿಳಿಯೋ ಓ ಜಾಣ
ಜಾರಿ ಬಿದ್ದಿಯೇ ಓ ಜಾಣ
--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಅಚ್ಚ ಮಲ್ಲಿಗೆ ಹೂವು 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ :  ಪಿ.ಲೀಲಾ

ಅಚ್ಚ ಮಲ್ಲಿಗೆ ಹೂವು ಮೆಚ್ಚಿಕೊ ಮಲ್ಲಯ್ಯ
ಮೆಚ್ಚುವೆಯೋ ಇಲ್ಲವೋ ನೀ ಮಾನಸಾರ ಪೇಳಯ್ಯಾ
ಅಚ್ಚ ಮಲ್ಲಿಗೆ ಹೂವು ಮೆಚ್ಚಿಕೊ ಮಲ್ಲಯ್ಯ
ಮೆಚ್ಚುವೆಯೋ ಇಲ್ಲವೋ ನೀ ಮಾನಸಾರ ಪೇಳಯ್ಯಾ 
ಮೆಚ್ಚುವೆಯೋ ಇಲ್ಲವೋ ನೀ ಮಾನಸಾರ ಪೇಳಯ್ಯಾ 
ಅಚ್ಚ ಮಲ್ಲಿಗೆ ಹೂವು.... 

ಮುಚ್ಚಿ ಮಾರಲಾರೆನಯ್ಯಾ ಹೆಚ್ಚು ಬೆಲೆಯ ಕೇಳೇನಯ್ಯಾ
ಮುಚ್ಚಿ ಮಾರಲಾರೆನಯ್ಯಾ ಹೆಚ್ಚು ಬೆಲೆಯ ಕೇಳೇನಯ್ಯಾ
ಪಚ್ಚೆ ಪೈರಿನ ಆಣೆಯಯ್ಯಾ...
ಪಚ್ಚೆ ಪೈರಿನ ಆಣೆಯಯ್ಯಾ ನೆಚ್ಚಿ ನಂಬಬಾಡದಯ್ಯ
ಅಚ್ಚ ಮಲ್ಲಿಗೆ ಹೂವು ಮೆಚ್ಚಿಕೊ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು.... 

ತುಂಗಭದ್ರೇ ನಾಡಿನಲ್ಲೇ ನಾಡರೈತನ ಜೊತೆಯಲ್ಲೇ 
ತುಂಗಭದ್ರೇ ನಾಡಿನಲ್ಲೇ ನಾಡರೈತನ ಜೊತೆಯಲ್ಲೇ 
ಹಳ್ಳಿಯೂರು ಬಳ್ಳಿಯಲ್ಲೇ.....  
ಹಳ್ಳಿಯೂರು ಬಳ್ಳಿಯಲ್ಲೇ ಹುಟ್ಟಿ ಬೆಳೆದಾ ಹೂವಿದಯ್ಯಾ.. .....  
ಅಚ್ಚ ಮಲ್ಲಿಗೆ ಹೂವು ಮೆಚ್ಚಿಕೊ ಮಲ್ಲಯ್ಯ
ಅಚ್ಚ ಮಲ್ಲಿಗೆ ಹೂವು.... 
--------------------------------------------------------------------------------------------------------------------------

ಸತಿ ಶಕ್ತಿ (೧೯೬೩) - ಶ್ರೀ ಮಾತೇ ಪಂಪಾಂಬೇ...
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಪಿ.ಲೀಲಾ

ಶ್ರೀ ಮಾತೇ ಪಂಪಾಂಬೇ.... ಶ್ರೀ ಲಲಿತೇ ಜಗದಾಂಬೆ...
ಬೆಳಗಾಯಿತು ಏಳಮ್ಮಾ ಶರಣು ಶರಣನೆಂಬೇ... ಆಆಆ....ಆಆಆ...
ಶರಣಂಬೆ ಶ್ರೀಲಲಿತೇ... ಶರಣಂಬೆ ಶ್ರೀಲಲಿತೇ...
ಮಾತೇ ಶರಣಂಬೆ ಶ್ರೀಲಲಿತೇ...
ಈರೇಳು ದೊರೆಯಾಳು ವಾಗ್ದೇವಿ ಧಾತೇ
ಈರೇಳು ದೊರೆಯಾಳು ವಾಗ್ದೇವಿ ಧಾತೇ
ಶರಣಂಬೆ ಶ್ರೀಲಲಿತೇ...
ಈರೇಳು ದೊರೆಯಾಳು ವಾಗ್ದೇವಿ ಧಾತೇ
ಶರಣಂಬೆ ಶ್ರೀಲಲಿತೇ...

ಸತಿ ಶಕ್ತಿ ಧಾತೇ ತುಳಸಿ ಮಾತೇ... ಆಆಆ...ಆಆಆ...
ಸತಿ ಶಕ್ತಿ ಧಾತೇ ತುಳಸಿ ಮಾತೇ..
ಸತಿ ಶಕ್ತಿ ಧಾತೇ ತುಳಸಿ ಮಾತೇ..
ಆರೋಗ್ಯ ಧಾತೇ ಶಿವೋ ಮಾತೇ
ಆರೋಗ್ಯ ಧಾತೇ ಶಿವೋ ಮಾತೇ
ಶರಣಂಬೆ ಶ್ರೀಲಲಿತೇ...

ಕನ್ನಡ ಒಡೆಯರ ಕುಲದೇವತೆ
ಅನ್ಯರ ನಾ ಬೇಡಿ ಸಾಕಾಯಿತೇ
ಅಣ್ಣಪ್ಪ ಗುರುವಿನ ಮನೆದೇವತೆ
ಅಣ್ಣಪ್ಪ ಗುರುವಿನ ಮನೆದೇವತೆ
ನೀನೇ ಕಾಯೆ ಶ್ರೀ ಮಾತೇ
ನೀನೇ ಕಾಯೆ ಶ್ರೀ ಮಾತೇ
ಶರಣಂಬೆ ಶ್ರೀಲಲಿತೇ...
ಈರೇಳು ದೊರೆಯಾಳು ವಾಗ್ದೇವಿ ಧಾತೇ
ಶರಣಂಬೆ ಶ್ರೀಲಲಿತೇ...
--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ :  ಪಿ.ಲೀಲಾ

ಹೂಂ ಹೂಂ ಹೂಂ ಆಆಆ ಆಆಆ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪಂಪಾವತಿ ಪ್ರೇಮ ಹೃದಯ ನಳಿನಾಕ್ಷ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 

ನವಚೈತ್ರ ಪೌರ್ಣಿಮಾ ರಮಿಣಿಯ ರಾತ್ರಿಯಲಿ... ಆಆಆ  
ನವಚೈತ್ರ ಪೌರ್ಣಿಮಾ ರಮಿಣಿಯ ರಾತ್ರಿಯಲಿ
ತುಂಗಾಭದ್ರಾ ತಟದ ಹೇಮಕೂಟಾದ್ರಿಯಲಿ 
ತುಂಗಾಭದ್ರಾ ತಟದ ಹೇಮಕೂಟಾದ್ರಿಯಲಿ 
ಅಂಬುಜಾನನೇ ಉಮೆಯ ಅನುರಾಗ ಮಂಚದಲಿ 
ಗಂಭೀರ ಭಾವನೆಯ, ಶೃಂಗಾರ ನಿದ್ರೆಯಲಿ  
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 

ವೇದಾದಿ ಮಾತೆಯ ವಾತ್ಸಲ್ಯ ಶರಧಿಯಲಿ.... ಆಆಆ  
ವೇದಾದಿ ಮಾತೆಯ ವಾತ್ಸಲ್ಯ ಶರಧಿಯಲಿ 
ವೇದವೇದಾಂತದ  ನಾದಾಂತ ರಂಗದಲಿ 
ವೇದವೇದಾಂತದ ನಾದಾಂತ ರಂಗದಲಿ 
ಉನ್ನತೋನ್ನತ ಭವ್ಯ ಕೈಲಾಸ ನಗರಿಯಲಿ 
ಅಣ್ಣಪ್ಪ ಗುರು  ವರನ ಏಕಾಂತ ಧ್ಯಾನದಲಿ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ 
ಪಂಪಾವತಿ ಪ್ರೇಮ ಹೃದಯ ನಳಿನಾಕ್ಷ 
ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ ..
 ಹೂಂ ಆಆಆಅ ಆಆಆ 
--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಮಾತೆಗೆ ಮಿಗಿಲಾದ ದೇವರಿಲ್ಲ 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎ.ಪಿ.ಕೋಮಲ   

ಮಾತೃದೇವೋಭವ  (ಮಾತೃದೇವೋಭವ) ಆ ಆಆಅ ಆಆಆಅ ಆಆಆಅ 
ಮಾತೆಗೇ ಮಿಗಿಲಾದ ದೇವರಿಲ್ಲ ಭೀತಿಗೇ ಹಿರಿದಾದ ಭೂತವಿಲ್ಲ 
ಮಾತೆಗೇ ಮಿಗಿಲಾದ ದೇವರಿಲ್ಲ ಭೀತಿಗೇ ಹಿರಿದಾದ ಭೂತವಿಲ್ಲ 
ಮಾತೆಗೇ ಮಿಗಿಲಾದ ದೇವರಿಲ್ಲ 
(ಮಾತೃದೇವೋಭವ) (ಮಾತೃದೇವೋಭವ)  

ನೂರೆಂಟು ಸೋವಯ್ಯ ಬೆಂಬಲ ಬೇಕಿಲ್ಲ 
ನೂರೆಂಟು ಸೋವಯ್ಯ ಬೆಂಬಲ ಬೇಕಿಲ್ಲ ನೂರಾರು ದೇವರ ತಂಬಲ ಬಿಡಿವೆಲ್ಲಾ 
ನೂರಾರು ದೇವರ ತಂಬಲ ಬಿಡಿವೆಲ್ಲಾ 
ಮಾತೆಗೇ ಮಿಗಿಲಾದ ದೇವರಿಲ್ಲ ಭೀತಿಗೇ ಹಿರಿದಾದ ಭೂತವಿಲ್ಲ 
ಮಾತೆಗೇ ಮಿಗಿಲಾದ ದೇವರಿಲ್ಲ 
(ಮಾತೃದೇವೋಭವ) (ಮಾತೃದೇವೋಭವ)  

ಹೆಣ್ಣಾದರೂ ಮಾತೇ ಮಾಯೇಯಲ್ಲಾ... ಆಆಆ.. ಆಆಆ 
ಕಣ್ಣಾಗಿ ಕಾಯುವ ಪ್ರೀತಿವಾತ್ಸಲ್ಯ  
ಹೆಣ್ಣಾದರೂ ಮಾತೇ ಮಾಯೇಯಲ್ಲ ಕಣ್ಣಾಗಿ ಕಾಯುವ ಪ್ರೀತಿವಾತ್ಸಲ್ಯ  
ಇನ್ನಾವ ಕೈವಲ್ಯ ನಂಬಿ ಫಲವಿಲ್ಲ 
ಇನ್ನಾವ ಕೈವಲ್ಯ ನಂಬಿ ಫಲವಿಲ್ಲ ಅಣ್ಣಪ್ಪ ಗುರುಸಾಕ್ಷಿ ಮಾತಯೇ ತಾನೆಲ್ಲ 
ಮಾತೆಗೇ ಮಿಗಿಲಾದ ದೇವರಿಲ್ಲ ಭೀತಿಗೇ ಹಿರಿದಾದ ಭೂತವಿಲ್ಲ 
ಮಾತೆಗೇ ಮಿಗಿಲಾದ ದೇವರಿಲ್ಲ 
(ಮಾತೃದೇವೋಭವ) (ಮಾತೃದೇವೋಭವ)  
-------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಬಾ ತಾಯೇ ಬಾ 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಪಿ. ಲೀಲಾ 

ಶರಣಾಂಗತದಿನೋರ್ತ ಪರಿತ್ರಾಣಾಪಾರಾಯಣಿ... 
ಸವ್ವಾಜಾರ್ತಿ ಹರೇ ದೇವಿ ... ನಾರಾಯಣಿ ನಮೋಸ್ತೋತೇ... ಆಆಆಅ   ಆಆಆಅ    
ಬಾ ತಾಯೇ ಬಾ ಭಾಗೇಶ್ವರೀ..  ಬಾರಮ್ಮ ಬಾ ಭುವನೇಶ್ವರೀ .. 
ಕರ್ನಾಟಕ ಸಾಮ್ರಾಜ್ಯ ರಾಜರಾಜೇಶ್ವರೀ      
ಕರ್ನಾಟಕ ಸಾಮ್ರಾಜ್ಯ ರಾಜರಾಜೇಶ್ವರೀ ಕರುಣಾಕರಿ ತಾಯೇ ಸಮಾಸಾವೇಶ್ವರಿ  
ಕರುಣಾಕರಿ ತಾಯೇ ಸಮಾಸಾವೇಶ್ವರಿ  
ಬಾ ತಾಯೇ ಬಾ ಭಾಗೇಶ್ವರೀ..  ಬಾರಮ್ಮ ಬಾ ಭುವನೇಶ್ವರೀ .. 

ಕಾಯದ ದಯಾಮಯ ನಿಯೇಚ ಕೋಟಿಯ ತೀರ್ಥತ ಪ್ರಾನಿವೇತೇ ಶ್ರೀಲಲಿತೇ 
ನ್ಯಾಯ ನ್ಯಾಯದ ನಿರ್ಭಯ ನಿರ್ಮಯ ನಿನನ್ನಿಂದಾಗಲೀ ಶ್ರೀಮಾತೇ .. 
ಹರಿಹರ ಬ್ರಹ್ಮ ಸುರಾಸುರಾಗಲಿ ಯಾರಿಗೂ ಬೆದರಳು ಭೂ ಜಾತೇ.... 
ಭಾರತ ಭೂಷಕೆ ಮಾರಿಯ ನಾರಿಯ ನಿಶ್ಚಿತವಾಗಲಿ ಸತ್ ಚರಿತೇ .. 
ಆಗುವುದೆಲ್ಲ ಆಗೇ ಹೋಗಲಿ ಆಹ್ವಾನಿಸವೇ ಬಾ ಮಾತೆ 
ಸಾಂಬಾರ ಮತ್ಸರ ನಾದನು ನುಂಗಲೂ ನಾಲಿಗೆ ನೀಡಿದೆ ಬಾ ಲಲಿತೇ .. 
ದಾನವ ದಳ್ಳುರಿ ದಾಳಿಗೆ ಧಾವಿಸಿ ಧರೆಗಿಳಿದಾಗಿದೆ ಬಾ ಮಾತೇ ... 
ಮಾನವ ಧರ್ಮದ ನಂಬಿಕೆ ಕಟ್ಟಳೆ ಮೀರುವ ಮೊದಲೇ ಬಾ ಲಲಿತೇ .. 
ಅಚ್ಚಯ ನೇತ್ರದಿ ಈರ್ಷೆ ಭ್ರತಳೇ ಈಗಲೇ ಈಕ್ಷಿಸು ಶ್ರೀ ಮಾತೇ .. 
ಕಷ್ಟಿಸು ಶಿಕ್ಷಿಸು ಸತ್ಯದ ಪರಿಕ್ಷಿಸು ಸಾಕ್ಷಿಯೂ ನೀನೇ   ಶ್ರೀ ಲಲಿತೇ .. 
ಶ್ರೀ ಲಲಿತೇ .. ಶ್ರೀ ಲಲಿತೇ .. ಶ್ರೀ ಲಲಿತೇ .. 
--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಚಂದಮಾಮ ದಾಯಿ 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕೀ 

ಆ ಆಹಾ ಆಹಾ ಆ ಆಹಾ ಆಹಾ ಆಆಆಅ ಆಆಆ ಹೂಂಹೂಂಹೂಂಹೂಂಹೂಂ
ಚಂದಮಾಮ ದಾಯೀ... ಚಂದರಾಜ ಹಾರೀ 
ಚಂದಮಾಮ ದಾಯೀ... ಗಂಧ ರಾಜ ಹಾರೀ 
ಅಂದಚಂದ ಮಿಂದ ಆಟ ಮಂದನಾರುತ ಸುಖ ಗಾಳೀ .. 
ಚಂದಮಾಮ ದಾಯೀ... ಗಂಧ ರಾಜ ಹಾರೀ 

ಜೀವನ ಹೂವಿನ ದುವ್ವಾಲೀ... ಹೂಂಹೂಂಹೂಂಹೂಂಹೂಂಹೂಂ ಓಓಓಓಓಓಓ 
ಜೀವನ ಹೂವಿನ ದುವ್ವಾಲೀ. ಯೌವ್ವನ ಜೇನಿನ ನದಿಯಾಲೀ... 
ಚತುರಿತ ಕೋರಿ ಸಂಧಿಸೋ ವೇಳೆ 
ಚತುರಿತ ಕೋರಿ ಸಂಧಿಸೋ ವೇಳೆ ಆಆಆಆ ಆಆಆಆ ಸುಖದಾ... ಹೂಂಹೂಂಹೂಂ .. 
ಚಂದಮಾಮ ದಾಯೀ... ಗಂಧ ರಾಜ ಹಾರೀ 
--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಮಂದಾರ ನಂದನ 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕೀ , ಪಿ.ಬಿ.ಎಸ್   

--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಜಯ ವಿಜಯೀಭವ 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕೀ, ಬೋಲೋರ್ ಭೋಜರಾವ್  

--------------------------------------------------------------------------------------------------------------------------

ಸತಿ ಶಕ್ತಿ  (೧೯೬೩) - ಯಾರು ನೀನೆಲೆ ನಾರಿ 
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎ.ಪಿ.ಕೋಮಲ, ಪಿ.ಲೀಲಾ    

--------------------------------------------------------------------------------------------------------------------------

1 comment:

  1. ಸತಿ ಶಕ್ತಿ ಚಿತ್ರದ ಇನ್ನೂ ಕೆಲವು ಹಾಡುಗಳು ಮುದ್ರಿತ ವಾಗಿಲ್ಲ .

    ReplyDelete